ರೈತರ ಜಮೀನು ಕಬಳಿಸಲು ಅಧಿಕಾರಿಗಳಿಂದಲೇ ಸಂಚು?: ಪಹಣಿ ಪತ್ರದಲ್ಲಿ ರಾತ್ರೋ ರಾತ್ರಿ ಇಳಿಕೆ ಕಂಡ ಜಾಗದ ವಿಸ್ತೀರ್ಣ! – Kannada News | Land Record Scam Alleged in Mundgod: 25 Farmers Find Land Area Reduced Overnight in RTC; Petition Uttara Kannada DC

ದಾಂಡೇಲಿ, ಆಗಸ್ಟ್​​ 05: ಇಷ್ಟು ವರ್ಷಗಳ ಕಾಲ ಕುಟುಂಬಕ್ಕೆ ಆಧಾರವಾಗಿದ್ದ ಜಮೀನಿನ ಪಹಣಿ ಪತ್ರದಲ್ಲಿ ರಾತ್ರೋರಾತ್ರಿ ವಿಸ್ತೀರ್ಣ ಕಡಿಮೆ ಆಗಿ ನಮೂದಾಗಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಕೇಳಿಬಂದಿದೆ. ಕಳೆದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ದಾಖಲೆ ಕಂಡು ಅನ್ನದಾತರಿಗೆ ತೀವ್ರ ಆಘಾತವಾಗಿದ್ದು, ಕಾಲುವೆ ಪಕ್ಕದ ಜಮೀನು ಅತಿಕ್ರಮಣ ಮಾಡಲು ನೀರಾವರಿ ಇಲಾಖೆಯ ಅಧಿಕಾರಿಗಳೇ ಈ ರೀತಿ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.

ಜಮೀನಿನ ಮಾಲೀಕತ್ವದ ಬಗ್ಗೆ ಆತಂಕ

ಸ್ಥಳೀಯರು ಹೇಳುವ ಪ್ರಕಾರ, ಒಂದೇ ರಾತ್ರಿಯಲ್ಲಿ ಕಾಲುವೆ ಪಕ್ಕ ಜಮೀನು ಹೊಂದಿರುವ ಸುಮಾರು 25ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ಈ ರೀತಿ ಆಗಿದೆ. ರೈತರ ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ, ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ. ಸಾಲದ್ದಕ್ಕೆ ನೀರಾವರಿ ಕಾಲುವೆ ಪಕ್ಕದ ಜಮೀನು ಸಣ್ಣ ನೀರಾವರಿ ಇಲಾಖೆಗೆ ಸೇರಿದೆ ಎಂದು ನೋಟಿಸ್ ಕೂಡ ನೀಡಲಾಗಿದ್ದು, ಇದರಿಂದಾಗಿ ತಮ್ಮದೇ ಜಮೀನಿನ ಮಾಲೀಕತ್ವದ ಬಗ್ಗೆ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಅಧಿಕಾರಿಗಳ ಕೈವಾಡ ಇದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!

ಉಗ್ರ ಹೋರಾಟದ ಎಚ್ಚರಿಕೆ

ವಿಚಿತ್ರ ಅಂದರೆ ಇಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಪರಿಹಾರವನ್ನೂ ನೀಡಲಾಗಿಲ್ಲ. ಆದರೆ ರೈತರ ಹೆಸರಿನಲ್ಲಿದ್ದ ಜಮೀನು ಮಾತ್ರ ಪಹಣಿಯಲ್ಲಿ ಮಾಯವಾಗಿದೆ. ಹೀಗಾಗಿ ಇದೇ ಜಮೀನಿನ ದಾಖಲೆ ಆಧಾರದಲ್ಲಿ ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದ ರೈತರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆಯಾಗಿರುವ ಕಾರಣ ಸಾಲ ಮರುಪಾವತಿಗೆ ಬ್ಯಾಂಕ್‌ಗಳು ಒತ್ತಡ ಹೇರುವ ಭೀತಿಯೂ ಎದುರಾಗಿದೆ. ಅಧಿಕಾರಿಗಳ ಈ ಕ್ರಮದಿಂದ ಕಂಗಾಲಾದ ರೈತರು ಜಿಲ್ಲಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪಹಣಿಯಲ್ಲಿನ ತಪ್ಪು ದಾಖಲೆಯನ್ನು ಕೂಡಲೇ ಸರಿಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ತದ್ವಿರುದ್ದ’ ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್ ಬಿಚ್ಚುಮಾತು: ವಿಡಿಯೋ – Kannada News | Actor Suchendra Prasad talks about Tadvirudha movie

ಖ್ಯಾತ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರು ‘ತದ್ವಿರುದ್ಧ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸುಚೇಂದ್ರ ಪ್ರಸಾದ್, ವಿಕ್ರಮ್ ರಾಮಯ್ಯ, ಸುಮನ್‌ ರಂಗನಾಥ್‌, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಪಾತ್ರದ ವಿಶೇಷತೆಯ ಬಗ್ಗೆ, ತಾವೇಕೆ ಗಾಲಿ ಕುರ್ಚಿಯಲ್ಲಿ ಕೂತು ನಟಿಸಿದ್ದು ಇನ್ನೂ ಕೆಲವು ವಿಷಯಗಳನ್ನು ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು – Kannada News | Who pays if MDR fixed for UPI payments, RBI governor clarifies

ಮುಂಬೈ, ಆಗಸ್ಟ್ 5: ಯುಪಿಐ (UPI) ಡಿಜಿಟಲ್ ಪಾವತಿಗಳ ಮೇಲೆ ಮುಂದಿನ ದಿನಗಳಲ್ಲಿ ಶುಲ್ಕ ವಿಧಿಸಲಾಗುವುದೇ ಮತ್ತು ಈ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂಬ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಮಂಡನೆ ಮಾಡಿರುವ ವಿಧೇಯಕದಲ್ಲಿ ಯುಪಿಐ ಪಾವತಿಯನ್ನು ಪ್ರಸ್ತಾಪಿಸಿಲ್ಲ. ಎಂಡಿಆರ್ ದರವನ್ನು ನಿಗದಿ ಮಾಡಿಲ್ಲ. ಅಥವಾ ಎಂಡಿಆರ್​ಗೆ ಹಣದ ಮಿತಿಯನ್ನೂ ಪ್ರಸ್ತಾಪಿಸಿಲ್ಲ ಎಂದು ತಿಳಿಸಿರುವ ಆರ್​ಬಿಐ ಗವರ್ನರ್, ಎಂಡಿಆರ್ ಅನ್ನು ಗ್ರಾಹಕರ ಹೊರತಾಗಿ ಸರ್ಕಾರವೋ, ವರ್ತಕರೋ ಅಥವಾ ವಿಶಾಲ ಆರ್ಥಿಕ ವ್ಯವಸ್ಥೆಯೂ ಭರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನಲ್ಲಿ ಮಂಡಿಸಲಾದ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ತಿದ್ದುಪಡಿ ವಿಧೇಯಕ’ದ (Payment and Settlement Systems Amendment Bill) ಹಿನ್ನೆಲೆಯಲ್ಲಿ, ಯುಪಿಐ ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅಥವಾ ಶುಲ್ಕಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು

ಡಿಜಿಟಲ್ ಮೂಲಸೌಕರ್ಯ ನಿರ್ವಹಣೆಗೆ ವೆಚ್ಚ ಅಗತ್ಯ

ಯುಪಿಐನಂತಹ ಬೃಹತ್ ಡಿಜಿಟಲ್ ಮೂಲಸೌಕರ್ಯವು ದೀರ್ಘಕಾಲದವರೆಗೆ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಾಚರಿಸಲು ಅದರ ನಿರ್ವಹಣಾ ವೆಚ್ಚವನ್ನು ಯಾರಾದರೂ ಒಬ್ಬರು ಭರಿಸಲೇಬೇಕಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.

ಸಾಮಾನ್ಯ ಗ್ರಾಹಕರ ಮೇಲೆ ನೇರ ಹೊರೆ ಬೀಳದು: ಯುಪಿಐ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ವೆಚ್ಚ ತಗುಲಿದರೂ, ಆ ಹೊರೆಯನ್ನು ಸಾಮಾನ್ಯ ಬಳಕೆದಾರರ (General Consumers) ಮೇಲೆ ನೇರವಾಗಿ ಹೇರುವ ಪ್ರಸ್ತಾವನೆ ಸರ್ಕಾರದ ಅಥವಾ ಆರ್‌ಬಿಐ ಮುಂದಿಲ್ಲ. ಉದ್ಯಮ ಅಥವಾ ಆರ್ಥಿಕ ವ್ಯವಸ್ಥೆಯ ಇತರ ಮಾರ್ಗಗಳ ಮೂಲಕ ಇದನ್ನು ಸರಿದೂಗಿಸುವ ಸಾಧ್ಯತೆ ಇರುತ್ತದೆ ಎಂದು ಸಂಜಯ್ ಮಲ್ಹೋತ್ರಾ ವಿವರಿಸಿದ್ದಾರೆ.

₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳು

ಕೇಂದ್ರ ಹಣಕಾಸು ಸಚಿವಾಲಯವು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು, ಹೆಚ್ಚಿನ ಮೌಲ್ಯದ ವಾಣಿಜ್ಯ ವಹಿವಾಟುಗಳ ಮೇಲೆ ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಂಡಿಆರ್ (MDR) ವಿಧಿಸಲು ಸರ್ಕಾರಕ್ಕೆ ನಮ್ಯತೆ (Flexibility) ಒದಗಿಸುತ್ತದೆ.

ದೈನಂದಿನ ಸಣ್ಣ ವಹಿವಾಟುಗಳು ಉಚಿತ: ಹಾಲು, ತರಕಾರಿ, ದಿನಸಿ ಸಾಮಗ್ರಿಗಳಂತಹ ಶೇಕಡಾ 90 ಕ್ಕಿಂತ ಹೆಚ್ಚಿನ ದೈನಂದಿನ ಸಣ್ಣ ವಹಿವಾಟುಗಳು ಮತ್ತು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ (P2P) ಮಾಡುವ ಹಣ ವರ್ಗಾವಣೆಗಳು ಉಚಿತವಾಗಿಯೇ ಮುಂದುವರಿಯಲಿವೆ.

ಇದನ್ನೂ ಓದಿ: ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ

ಸದ್ಯಕ್ಕೆ ಶುಲ್ಕದ ಪ್ರಸ್ತಾವ ಇಲ್ಲ ಎಂದ ಆರ್​ಬಿಐ

ಯುಪಿಐ ವಹಿವಾಟುಗಳ ಮೇಲೆ ತಕ್ಷಣವೇ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾವನೆ ಇಲ್ಲ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ನಿಯಮಗಳು ರೂಪುಗೊಳ್ಳುವವರೆಗೆ ಕಾಯಿರಿ ಎಂದು ಗವರ್ನರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಇರುವ ವದಂತಿಗಳ ಪ್ರಕಾರ, ಅಂಗಡಿ ಮುಂಗಟ್ಟು ಇತ್ಯಾದಿ ವ್ಯಾಪಾರಿಗಳಿಗೆ ಗ್ರಾಹಕರು ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ವ್ಯಾಪಾರಿಗಳಿಂದ ನಿರ್ದಿಷ್ಟ ಎಂಡಿಆರ್ ಅನ್ನು ಬ್ಯಾಂಕುಗಳು ಮತ್ತು ಪೇಮೆಂಟ್ ಕಂಪನಿಗಳು ಮುರಿದುಕೊಳ್ಳಬಹುದು. ಈ ಸುದ್ದಿಗಳ ಪ್ರಕಾರ ಎಂಡಿಆರ್ ಶುಲ್ಕ ಶೇ. 0.5ರಷ್ಟಿರಬಹುದು. ಅಂದರೆ, ₹2,000 ಪೇಮೆಂಟ್ ಮಾಡಿದರೆ ಎಂಡಿಆರ್ ಶುಲ್ಕ ₹10 ಇರಬಹುದು. ವ್ಯಾಪಾರಿಗಳಿಗೆ ಸಿಗುವ ಪೇಮೆಂಟ್ ₹1,990 ರೂ ಆಗುತ್ತದೆ. ಆದರೆ, ಆರ್​ಬಿಐ ಗವರ್ನರ್ ಅವರು ಸದ್ಯಕ್ಕೆ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿದ ಕಾವ್ಯಾ ಮಾರನ್ – Kannada News | Kavya Maran Sparks New Controversy: Sunrisers Eastern Cape Signs Bangladesh Player Rishad Hossain

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾದ ಕಾವ್ಯಾ ಮಾರನ್ (Kavya Maran) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಚರ್ಚೆಗೆ ಕಾರಣ ತಂಡದ ಪ್ರದರ್ಶನವಲ್ಲ, ಬದಲಿಗೆ ತಮ್ಮ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ (Sunrisers Eastern Cape) ತಂಡಕ್ಕೆ ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿರುವುದು. ಕೆಲವು ತಿಂಗಳ ಹಿಂದೆ ಇದೇ ಕಾವ್ಯಾ ಮಾರನ್ ತಮ್ಮ ತಂಡಕ್ಕೆ ಪಾಕಿಸ್ತಾನದ ಆಟಗಾರನನ್ನು ಖರೀದಿಸಿ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಬಾಂಗ್ಲಾದೇಶ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ವಾಸ್ತವವಾಗಿ ಕಾವ್ಯಾ ಮಾರನ್ ಐಪಿಎಲ್‌ನಲ್ಲಿ ತಂಡವನ್ನು ಹೊಂದಿರುವಂತೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್​ಎ20 ಲೀಗ್​ನಲ್ಲೂ ತಂಡವನ್ನು ಹೊಂದಿದ್ದಾರೆ. ಈ ಲೀಗ್​ನಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಫ್ರಾಂಚೈಸಿ ಮುಂಬರುವ ಆವೃತ್ತಿಗಾಗಿ ಬಾಂಗ್ಲಾದೇಶದ ಸ್ಪಿನ್ನರ್ ರಿಷದ್ ಹೊಸೈನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಈಸ್ಟರ್ನ್ ಕೇಪ್ ತಂಡಕ್ಕೆ ಹೊಸ ಎಂಟ್ರಿ

ಎಲ್ಲಾ ಆರು ಫ್ರಾಂಚೈಸಿಗಳು ಮುಂಬರುವ ಹೊಸ ಆವೃತ್ತಿಗೂ ಮುನ್ನ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಹಾಗೂ ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಅದರಂತೆ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್, ನಾಯಕ ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸನ್ ಮತ್ತು ಕ್ವಿಂಟನ್ ಡಿ ಕಾಕ್ ಅವರಂತಹ ದಿಗ್ಗಜರನ್ನು ಉಳಿಸಿಕೊಂಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ ಅವರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಿದ್ದು, ಇವರ ಜೊತೆಗೆ ಬಾಂಗ್ಲಾದೇಶ ಸ್ಪಿನ್ನರ್ ರಿಯಾದ್ ಹೊಸೈನ್ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ.

ಬಾಂಗ್ಲಾ ಆಟಗಾರನ ಖರೀದಿ

ತಂಡದ ಆಫ್ಘನ್ ಸ್ಪಿನ್ನರ್ ಅಲ್ಲಾ ಗಜನ್‌ಫರ್ ಈ ಬಾರಿ ಲೀಗ್‌ನ ಭಾಗವಾಗಿರದ ಕಾರಣ ಕಾವ್ಯ ಮಾರನ್ ಫ್ರಾಂಚೈಸಿ ಬಾಂಗ್ಲಾದೇಶದ ಲೆಗ್-ಸ್ಪಿನ್ನರ್ ರಿಷದ್ ಹೊಸೈನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಕಾವ್ಯಾ ಮಾರನ್ ಈ ಬಾಂಗ್ಲಾದೇಶ ಸ್ಪಿನ್ನರ್ ಅನ್ನು ಖರೀದಿಸಿರುವುದು ಭಾರತೀಯರ ಕೋಪವನ್ನು ಹೆಚ್ಚಿಸಿದೆ. ಏಕೆಂದರೆ ಇದೇ ಕಾವ್ಯಾ ಮಾರನ್ ದಿ ಹಂಡ್ರೆಡ್‌ ಲೀಗ್​ನಲ್ಲಿ ತನ್ನ ತಂಡಕ್ಕೆ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ ಅಹ್ಮದ್ ಅವರನ್ನು ಖರೀದಿಸಿದ್ದರು. ಆ ಸಮಯದಲ್ಲಿ ಕಾವ್ಯಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದಿತ್ತು.

ಇದೀಗ ಮತ್ತೊಮ್ಮೆ ಕಾವ್ಯಾ ಮಾರನ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಕಳೆದ ಒಂದೂವರೆ ವರ್ಷದಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿರುವುದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಇದರ ಪರಿಣಾಮವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಲಾಗಿತ್ತು. ಇದರಿಂದ ಕೆರಳಿದ್ದ ಬಾಂಗ್ಲಾದೇಶ ಕೂಡ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಲು ನಿರಾಕರಿಸಿತು. ಇದರ ನಂತರ, ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧಗಳು ಇನ್ನಷ್ಟು ಹದಗೆಟ್ಟಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:44 pm, Wed, 5 August 26

Source link

ಸೋರೆಕಾಯಿ ಜ್ಯೂಸ್ ಕುಡಿಯುವವರೇ ಗಮನಿಸಿ! ಹೃದಯ, ಜೀರ್ಣಕ್ರಿಯೆ, ತೂಕ ಇಳಿಕೆಗೆ ಸಿಗುವ ಆರೋಗ್ಯ ಲಾಭಗಳು – Kannada News | Bottle Gourd Juice for Heart Health: Benefits, Side Effects & Best Time to Drink

ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಬಯಸುವವರು ಸಹಜ ಪಾನೀಯಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂತಹ ಪಾನೀಯಗಳಲ್ಲಿ ಸೋರೆಕಾಯಿ (Bottle Gourd) ಜ್ಯೂಸ್ ಕೂಡ ಪ್ರಮುಖವಾಗಿದೆ. ಕಡಿಮೆ ಕ್ಯಾಲೊರಿ, ಹೆಚ್ಚು ನೀರಿನ ಅಂಶ, ಫೈಬರ್ ಹಾಗೂ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಸೋರೆಕಾಯಿ ಜ್ಯೂಸ್ ಜೀರ್ಣಕ್ರಿಯೆ ಸುಧಾರಿಸಲು, ತೂಕ ನಿಯಂತ್ರಣಕ್ಕೆ ಮತ್ತು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ತಯಾರಿಸಿ, ಮಿತ ಪ್ರಮಾಣದಲ್ಲಿ ಸೇವಿಸುವುದು ಅತ್ಯಂತ ಮುಖ್ಯ. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಸೋರೆಕಾಯಿ ಜ್ಯೂಸ್‌ನ ಪ್ರಮುಖ ಆರೋಗ್ಯ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಿಸುತ್ತದೆ: ಸೊರೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದ್ದು, ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು.

ತೂಕ ಇಳಿಕೆಗೆ ಸಹಕಾರಿ: ಸೋರೆಕಾಯಿ ಜ್ಯೂಸ್‌ನಲ್ಲಿ ಕ್ಯಾಲೊರಿ ಕಡಿಮೆ ಹಾಗೂ ನೀರಿನ ಪ್ರಮಾಣ ಹೆಚ್ಚು. ಇದರಿಂದ ಹೊಟ್ಟೆ ಹೆಚ್ಚು ಸಮಯ ತುಂಬಿದ ಅನುಭವವಾಗುತ್ತದೆ. ಪರಿಣಾಮವಾಗಿ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು.

ಹೃದಯ ಆರೋಗ್ಯಕ್ಕೆ ಉತ್ತಮ: ಸೋರೆಕಾಯಿಯಲ್ಲಿ ಪೊಟ್ಯಾಸಿಯಂ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಬಹುದು. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಇದನ್ನೂ ಓದಿ: ಓಂ ಕಾಳಿನ ನೀರಿನ ಪ್ರಯೋಜನಗಳೇನು? ಯಾರು ಕುಡಿಯಬಾರದು? ವೈದ್ಯರು ತಿಳಿಸಿರುವ ಮಾಹಿತಿ

ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ: ಬೇಸಿಗೆ ಹಾಗೂ ಮಳೆಗಾಲದಲ್ಲೂ ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಮುಖ್ಯ. ಸೋರೆಕಾಯಿ ಜ್ಯೂಸ್ ದೇಹದಲ್ಲಿ ನೀರಿನ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ: ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಿರುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಲು ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಬಹುದು.

ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ನೀಡುತ್ತದೆ: ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕೆ, ಪೊಟ್ಯಾಸಿಯಂ ಹಾಗೂ ಇತರ ಖನಿಜಾಂಶಗಳಿದ್ದು, ದೇಹದ ಸಾಮಾನ್ಯ ಕಾರ್ಯಗಳನ್ನು ಸುಗಮವಾಗಿಡಲು ನೆರವಾಗುತ್ತವೆ.

ಸೋರೆಕಾಯಿ ಜ್ಯೂಸ್‌ನಲ್ಲಿ ಸಹಜವಾಗಿ ಕ್ಯಾಲೊರಿ ಕಡಿಮೆ ಇರುವುದರಿಂದ ಮಧುಮೇಹ ಅಥವಾ ತೂಕ ನಿಯಂತ್ರಣ ಆಹಾರ ಪದ್ಧತಿಯಲ್ಲಿ ಮಿತ ಪ್ರಮಾಣದಲ್ಲಿ ಸೇರಿಸಬಹುದು. ಜ್ಯೂಸ್ ಅನ್ನು ಸೋಸಿ ಕುಡಿಯುವುದಕ್ಕಿಂತ ಹಾಗೆಯೇ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಯಾವುದೇ ಒಂದು ಪಾನೀಯ ಮಾತ್ರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮತೋಲಿತ ಆಹಾರ, ವ್ಯಾಯಾಮ ಮತ್ತು ಉತ್ತಮ ಜೀವನಶೈಲಿ ಅತ್ಯಗತ್ಯ. ಕಹಿ ರುಚಿ ಇರುವ ಸೊರೆಕಾಯಿಯನ್ನು ಎಂದಿಗೂ ಜ್ಯೂಸ್ ಮಾಡಿ ಕುಡಿಯಬಾರದು. ಅತಿಯಾದ ಕಹಿತನವು ವಿಷಕಾರಿ ಸಂಯುಕ್ತಗಳಿರುವ ಸೂಚನೆಯಾಗಿರಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ.

ಯಾರಿಗೆ ಎಚ್ಚರಿಕೆ ಅಗತ್ಯ?

  • ಗರ್ಭಿಣಿಯರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.
  • ಕಿಡ್ನಿ ಅಥವಾ ಇತರೆ ದೀರ್ಘಕಾಲದ ಕಾಯಿಲೆಗಳಿರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.
  • ಹೊಟ್ಟೆನೋವು, ವಾಂತಿ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ಸೇವನೆ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.
  • ಕಹಿಯಾದ ಸೊರೆಕಾಯಿ ಜ್ಯೂಸ್ ಅನ್ನು ಎಂದಿಗೂ ಸೇವಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿಗರ ಟೀಕೆಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು – Kannada News | KPCC President B.K. Hariprasad Hits Back at BJP Over Cabinet Expansion Criticism

ಬೆಂಗಳೂರು, ಆಗಸ್ಟ್​​ 05: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಲೇವಡಿ ವಿಚಾರ ಸಂಬಂಧ ಬಿಜೆಪಿಗರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೂಟ್​ಕೇಸ್, ಬ್ರೀಫ್​ಕೇಸ್, ಆಪರೇಷನ್ ಕಮಲ ಮಾಡಿದ್ಯಾರು? ಕಾಂಗ್ರೆಸ್, JDSನ 16 ಶಾಸಕರನ್ನು ಬಾಂಬೆಗೆ ಕರೆದೊಯ್ದಿದ್ಯಾರು? ಎಂದವರು ಪ್ರಶ್ನಿಸಿದ್ದಾರೆ. ಬಾಂಬೆ ಬಾಯ್ಸ್ ಗೋಣಿ ಚೀಲ ಹಿಡಿದುಕೊಂಡು ಹೋಗಿದ್ರಂತಾ? ರಾಜ್ಯ ಬಿಜೆಪಿ ಅಧ್ಯಕ್ಷ, ಆರ್.ಅಶೋಕ್ ಎಷ್ಟು ಕೋಟಿಗೆ ಬಾಳ್ತಾರೆ? ಸುಮ್ಮನೆ ನನ್ನನ್ನು ಇವರ ಚಾರ್ಟರ್ಡ್ ಅಕೌಂಟೆಂಟ್​ ಮಾಡಬೇಡಿ. ಪ್ರತಿಪಕ್ಷ ಬಿಜೆಪಿ ನಾಯಕರು ಮಾತೆತ್ತಿದ್ದರೆ ಗಂಜಲ, ಹೊಲಸು. ವಿಪಕ್ಷ ನಾಯಕರಿಗೆ ಸಾಮಾಜಿಕ ನ್ಯಾಯ ಅಂದ್ರೆ ಏನೆಂದು ಗೊತ್ತಿಲ್ಲ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಸಂಘಿ’ ಎಂದು ಟ್ರೋಲ್ ಮಾಡಿದವರಿಗೆ ‘ಧುರಂಧರ್’ ನಟ ಆರ್‌. ಮಾಧವನ್ ತಿರುಗೇಟು – Kannada News | R Madhavan reacts to Sanghi tag and Dhurandhar Propaganda Criticism

ಭಾರತೀಯ ಚಿತ್ರರಂಗದ ಜನಪ್ರಿಯ ನಟ ಆರ್‌. ಮಾಧವನ್ (R. Madhavan) ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಅವರನ್ನು ‘ಸಂಘಿ’ ಎಂದು ಕರೆಯಲಾಗಿತ್ತು. ಅವರು ನಟಿಸಿದ ‘ಧುರಂಧರ್’ (Dhurandhar) ಮತ್ತು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಗಳನ್ನು ‘ಪ್ರೊಪಗಾಂಡಾ’ ಎಂದು ಟೀಕಿಸಲಾಗಿತ್ತು. ಆ ಎಲ್ಲ ಆರೋಪಗಳಿಗೆ ಆರ್. ಮಾಧವನ್ ಅವರು ತಿರುಗೇಟು ನೀಡಿದ್ದಾರೆ.

ಭಾರತದ ಶ್ರೇಷ್ಠ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ‘ಜಿಡಿಎನ್’ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿತರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಆರ್‌. ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.

‘ಬಾಲ್ಯದಿಂದಲೇ ದೇಶ ಪ್ರೇಮ ರಕ್ತಗತವಾಗಿದೆ’

ಮಾಧ್ಯಮವೊಂದರ ಸಂದರ್ಶನದಲ್ಲಿ ಆರ್. ಮಾಧವನ್ ಅವರು ಮಾತನಾಡಿದ್ದಾರೆ. ‘ಆನ್‌ಲೈನ್‌ನಲ್ಲಿ ಯಾರು ನಿಜವಾದ ಬಳಕೆದಾರರು ಮತ್ತು ಯಾರು ದುಡ್ಡು ಪಡೆದು ಕಮೆಂಟ್ ಮಾಡುವವರು ಎಂಬುದು ಸುಲಭವಾಗಿ ತಿಳಿಯುತ್ತದೆ. ಪ್ರತಿಯೊಬ್ಬರೂ ತಾವು ಬೆಳೆದು ಬಂದ ವಾತಾವರಣದ ಪ್ರತಿಫಲವಾಗಿರುತ್ತಾರೆ. ಬಾಲ್ಯದಿಂದಲೂ ನನ್ನ ದೇಶವನ್ನು ನಂಬಲು ಮತ್ತು ಪ್ರೀತಿಸಲು ನನಗೆ ಕಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕಮೆಂಟ್​ಗಳಿಗೆ ತಲೆ ಕೆಡಿಸಿಕೊಳ್ಳಲ್ಲ’

‘ನಾನು ಎಂದಿಗೂ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ವಿರುದ್ಧ ಪೋಸ್ಟ್ ಮಾಡಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಿ ಪೋಸ್ಟ್ ಮಾಡಿದ್ದೇನೆ. ಒಬ್ಬ ವ್ಯಕ್ತಿ ದೇಶದ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಆಯ್ಕೆಯಾದಾಗ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನಾನು ಕಾಮೆಂಟ್‌ಗಳನ್ನು ಓದುತ್ತೇನೆ, ಆದರೆ ಅದು ನನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರಲ್ಲ. ಯಾರಾದರೂ ಇದರ ಬಗ್ಗೆ ನನಗೆ ಅಪರಾಧಿ ಭಾವನೆ ಮೂಡಿಸಲು ಯತ್ನಿಸಿದರೆ, ಅವರ ಉದ್ದೇಶವನ್ನೇ ನಾನು ಪ್ರಶ್ನಿಸುತ್ತೇನೆ’ ಎಂದಿದ್ದಾರೆ ಆರ್. ಮಾಧವನ್.

ಇದನ್ನೂ ಓದಿ: ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್

‘ಧುರಂಧರ್’ ಪ್ರೊಪಗಾಂಡಾ ಚಿತ್ರ ಎಂದವರಿಗೆ ತಿರುಗೇಟು:

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರವು ಸರ್ಕಾರಿ ಪರ ಪ್ರೊಪಗಾಂಡಾ ಸಿನಿಮಾ ಎಂಬ ಟೀಕೆಗೆ ಗುರಿ ಆಗಿತ್ತು. ಅದಕ್ಕೂ ಮಾಧವನ್ ಉತ್ತರ ನೀಡಿದ್ದಾರೆ. ‘ಧುರಂಧರ್ ಸಿನಿಮಾದ ಕಥೆ ಪಾಕಿಸ್ತಾನದ ಹಿನ್ನೆಲೆಯಲ್ಲಿ ನಡೆಯುತ್ತದೆ. ಅಲ್ಲಿ ಏನೇ ನಡೆದರೂ ಅದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರಲ್ಲಿ ಪ್ರೊಪಗಾಂಡಾ ಎಲ್ಲಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಆರ್. ಮಾಧವನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸ್ಪೈಡರ್​ಮ್ಯಾನ್’ ನಟ ಟಾಮ್ ಹಾಲೆಂಡ್​​ಗೆ ದಕ್ಷಿಣದ ಈ ಸಿನಿಮಾ ಇಷ್ಟ – Kannada News | Spider Man fame Tom Holland says he loves RRR movie

ಸ್ಪೈಡರ್​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spiderman: Brand New Day) ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿ ಒಂದು ವಾರವಾಗುತ್ತಾ ಆಗಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಜುಲೈ 30ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಕೇವಲ ಐದು ದಿನದಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ವಾರಾಂತ್ಯಕ್ಕೆ ಕಲೆಕ್ಷನ್ 600 ಕೋಟಿ ದಾಟುವ ಸಾಧ್ಯತೆ ಇದೆ. ‘ಸ್ಪೈಡರ್​ಮ್ಯಾನ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ಟಾಮ್ ಹಾಲೆಂಡ್, ಇತ್ತೀಚೆಗಷ್ಟೆ ಅವರ ಇನ್ನೊಂದು ಸಿನಿಮಾ ‘ದಿ ಆಡಸ್ಸಿ’ಯ ಪ್ರಚಾರಕ್ಕೆ ಭಾರತಕ್ಕೆ ಬಂದಿದ್ದರು. ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟಾಮ್ ಹಾಲೆಂಡ್, ಭಾರತದ ಬಗ್ಗೆ ಹಾಗೂ ತಮ್ಮಿಷ್ಟದ ಭಾರತೀಯ ಸಿನಿಮಾ ಬಗ್​ಗೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಟಾಮ್ ಹಾಲೆಂಡ್, ‘ಭಾರತದ ಪ್ರವಾಸ ಅದ್ಭುತವಾಗಿತ್ತು. ಅದು ನನ್ನ ಜೀವನದಲ್ಲೇ ಮರೆಯಲಾಗದಂತಹ ಪಯಣ. ನಾನು ಭಾರತಕ್ಕೆ ಬರಲು ಬಯಸಿದ್ದೆ, ಮತ್ತು ಮತ್ತೊಮ್ಮೆ ಇಲ್ಲಿಗೆ ಬರಲು ಉತ್ಸುಕನಾಗಿದ್ದೇನೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತದೆ. ನಾನು ಅದ್ಭುತ ಜನರನ್ನು ಭೇಟಿಯಾದೆ, ಅತ್ಯುತ್ತಮವಾದ ಊಟವನ್ನು ಸವಿದೆ ಮತ್ತು ಅದ್ಭುತವಾದ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ನೋಡುವ ಅವಕಾಶ ಸಿಕ್ಕಿತು. ಒಟ್ಟಿನಲ್ಲಿ ನಾನು ಅತ್ಯಂತ ಸುಂದರವಾದ ಸಮಯವನ್ನು ಕಳೆದೆ’ ಎಂದರು.

ನೀವು ಯಾವುದೇ ಭಾರತೀಯ ಚಲನಚಿತ್ರವನ್ನು ನೋಡಿದ್ದೀರಾ ಎಂದು ಸಂದರ್ಶಕಿ ಕೇಳಿದಾಗ, ಟಾಮ್ ಹಾಲೆಂಡ್, ‘ನಾನು ‘RRR’ ಸಿನಿಮಾ ನೋಡಿದ್ದೇಉ ಮತ್ತು ನನಗೆ ಅದು ತುಂಬಾ ಇಷ್ಟವಾಯಿತು’ ಎಂದು ಹೇಳಿದ್ದಾರೆ. ರಾಜಮೌಳಿ ನಿರ್ದೇಶಿಸಿ, ರಾಮ್ ಚರಣ್, ಜೂ ಎನ್​​ಟಿಆರ್ ನಟಿಸಿದ್ದ ‘ಆರ್​​ಆರ್​​ಆರ್’ ಸಿನಿಮಾ ಟಾಮ್ ಹಾಲೆಂಡ್ ಅವರಿಗೆ ಬಹಳ ಇಷ್ಟವಾಯ್ತಂತೆ. ಟಾಮ್ ಹಾಲೆಂಡ್ ತಮಗೆ ‘ಆರ್​​ಆರ್​​ಆರ್’ ಸಿನಿಮಾ ಇಷ್ಟವಾಯ್ತು ಎಂದು ಹೇಳಿರುವ ವಿಡಿಯೋ ತುಣುಕನ್ನು ‘ಆರ್​​ಆರ್​​ಆರ್’ ತಂಡವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ರಣ್​​ಬೀರ್ ಕಪೂರ್

ಟಾಮ್ ಹಾಲೆಂಡ್ ಮಾತ್ರವೇ ಅಲ್ಲ ಹಲವು ಹಾಲಿವುಡ್ ತಾರೆಯರಿಗೆ ‘ಆರ್​​ಆರ್​​ಆರ್’ ಸಿನಿಮಾ ಬಲು ಅಚ್ಚುಮೆಚ್ಚು. ಹಾಲಿವುಡ್​ ಮಾತ್ರವಲ್ಲ, ವಿಶ್ವ ಸಿನಿಮಾ ರಂಗದ ಅತ್ಯುತ್ತಮ ನಿರ್ದೇಶಕರು ಎಂದು ಕರೆಯಲಾಗುವ ‘ಟೈಟಾನಿಕ್’, ‘ಅವತಾರ್’ ಖ್ಯಾತಿಯ ಜೇಮ್ಸ್ ಕ್ಯಾಮರನ್, ಹಲವು ಆಸ್ಕರ್ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಟಿವನ್ ಸ್ಪೀಲ್​​ಬರ್ಗ್ ಸೇರಿದಂತೆ ಇನ್ನೂ ಹಲವು ಖ್ಯಾತನಾಮರಿಗೆ ‘ಆರ್​​ಆರ್​​ಆರ್’ ಸಿನಿಮಾ ಇಷ್ಟವಾಗಿದೆ.

ಟಾಮ್ ಹಾಲೆಂಡ್ ಹಲವು ವರ್ಷಗಳಿಂದ ‘ಸ್ಪೈಡರ್​ ಮ್ಯಾನ್’ ಆಗಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಅವರ ನಾಲ್ಕನೇ ‘ಸ್ಪೈಡರ್ ಮ್ಯಾನ್’ ಸ್ಟಾಂಡ್ ಅಲೋನ್ ಸಿನಿಮಾ. ಆದರೆ ಇದು ಅವರ ಕಟ್ಟ ಕಡೆಯ ಸಿನಿಮಾ ಎನ್ನಲಾಗುತ್ತಿದೆ. ಮುಂದಿನ ‘ಸ್ಪೈಡರ್ ಮ್ಯಾನ್’ ಸಿನಿಮಾನಲ್ಲಿ ಹೊಸ ಪಾತ್ರಧಾರಿ ಆ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸುವುದು ಉತ್ತಮ – Kannada News | How to prevent motion sickness while traveling by car

ಈ ಲಾಂಗ್‌ ಟ್ರಿಪ್‌ ವೇಳೆ ಅಥವಾ ದೂರದೂರಿಗೆ ಕಾರ್‌, ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಅನೇಕರಿಗೆ ವಾಕರಿಗೆ (motion sickness), ತಲೆ ತಿರುಗುವುದು, ಸಸ್ತು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಕೆಲವರಿಗೆ ಹೊಟ್ಟೆಯಲ್ಲಿ ತಳಮಳ ಉಂಟಾಗಿ ವಾಂತಿ ಬಂದ ಅನುಭವವಾದರೆ ಇನ್ನೂ ಕೆಲವರು ಪ್ರಯಾಣದುದ್ದಕ್ಕೂ ವಾಂತಿ ಮಾಡುತ್ತಾರೆ. ಈ ಸಮಸ್ಯೆ ಇಡೀ ಟ್ರಿಪ್‌ನ ಖುಷಿಯನ್ನು ಹಾಳು ಮಾಡಿಬಿಡುತ್ತದೆ. ಈ ಒಂದು ಕಾರಣದಿಂದಾಗಿ ಹಲವರು ದೂರ ಪ್ರಯಾಣ ಮಾಡಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ಈ ಮೋಷನ್‌ ಸಿಕ್ನೆಸ್‌ ಅನ್ನು ತಡೆಯಲು ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಪ್ರಯಾಣಕ್ಕೂ ಮುನ್ನ ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮೋಷನ್‌ ಸಿಕ್ನೆಸ್‌ ಇಲ್ಲದೆ ಆರಾಮವಾಗಿ ಪ್ರಯಾಣಿಸಬಹುದು. ಅಲ್ಲದೆ ಈ ಕೆಲವೊಂದು ಮನೆ ಮದ್ದುಗಳು ಸಹ ವಾಂತಿ ತಡೆಯಲು ಸಹಕಾರಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ದೂರ ಪ್ರಯಾಣದ ವೇಳೆ ವಾಂತಿ ಬರದಂತೆ ತಡೆಯಲು ಈ ಟಿಪ್ಸ್‌ ಪಾಲಿಸಿ:

ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಬೇಡಿ: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಪ್ರಯಾಣಿಸಬಾರದು, ಈ ತಪ್ಪಿನಿಂದ ಪ್ರಯಾಣದ ವೇಳೆ ವಾಕರಿಕೆ ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಆದ್ದರಿಂದ ದೂರ ಪ್ರಯಾಣಕ್ಕೂ ಮುನ್ನ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ ಮತ್ತು ಭಾರವಾದ, ಹುರಿದ ಅಥವಾ ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ.

ಸರಿಯಾದ ಆಸನವನ್ನು ಆರಿಸಿ: ನಿಮಗೆ ಮೋಷನ್‌ ಸಿಕ್ನೆಸ್‌ ಇದ್ದರೆ ನೀವು ಪ್ರಯಾಣದ ಸಂದರ್ಭದಲ್ಲಿ ಯಾವಾಗಲೂ ಬಸ್ ಅಥವಾ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ.  ಇದು ನಿಮಗೆ ಮುಂದಿನ ರಸ್ತೆಯ ಸ್ಪಷ್ಟ ನೋಟವನ್ನು ನೀಡುತ್ತದೆ ಮತ್ತು ನಿಮ್ಮ ಮೆದುಳಿಗೆ ಕಾರಿನ ವೇಗವನ್ನು ಗ್ರಹಿಸಲು ಸುಲಭವಾಗುತ್ತದೆ. ಅಲ್ಲದೆ ಮುಂದಿನ ದೃಶ್ಯಾವಳಿಗಳನ್ನು ನೋಡುವುದರಿಂದ ಮೆದುಳು-ಕಣ್ಣಿನ ಸಮನ್ವಯವು ಸುಧಾರಿಸುತ್ತದೆ, ಇದು ಮೋಷನ್‌ ಸಿಕ್ನೆನ್‌ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತಾಜಾ ಗಾಳಿಯನ್ನು ಪಡೆಯಿರಿ: ಕಾರಿನ ಗ್ಲಾಸ್‌ ಅನ್ನು ಸಂಪೂರ್ಣವಾಗಿ ಮುಚ್ಚಿ, ಎಸಿ ಹಾಕಿ ಪ್ರಯಾಣಿಸಿದರೆ ವಾಂತಿ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಯಾಣ ಮಾಡುವಾಗ, ಕಾರಿನ ಗ್ಲಾಸ್‌ ಸ್ವಲ್ಪ ತೆರೆದಿಡಿ ಅಥವಾ ಸ್ವಲ್ಪ ತಾಜಾ ಗಾಳಿಯನ್ನು ಪಡೆಯಲು ಪ್ರಯತ್ನಿಸಿ. ಇದು ಆತಂಕ ಅಥವಾ ಪ್ಯಾನಿಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಪ್ರಯಾಣಿಸುವಾಗ ಮೊಬೈಲ್‌ ಫೋನ್‌ ನೋಡುವುದು, ಪುಸ್ತಕ ಓದುವುದನ್ನು ಕೂಡ ತಪ್ಪಿಸಬೇಕು.

ಇದನ್ನೂ ಓದಿ: ಮಲಗುವ ಮುನ್ನ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು

ಕಾರಿನೊಳಗೆ ಏರ್‌ ಫ್ರೆಶ್ನರ್‌ ಹಾಕಬೇಡಿ: ಕಾರಿನೊಳಗಿನ ಏರ್ ಫ್ರೆಶ್ನರ್‌ಗಳ ಬಲವಾದ ವಾಸನೆ ಸಹ ಕೆಲವರಿಗೆ ವಾಂತಿ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಏರ್‌ ಫ್ರೆಶ್ನರ್‌ ಹಾಕಲು ಬಿಡಬೇಡಿ. ಅಲ್ಲದೆ ಈ ವಾಸನೆಯಿಂದ ನಿಮಗೆ ಅನಾನುಕೂಲವಾಗಿದ್ದರೆ, ಕಾರನ್ನು ನಿಲ್ಲಿಸಿ ಮತ್ತು ತಾಜಾ ಗಾಳಿಯಲ್ಲಿ ಪಡೆಯಲು ಕಾರಿನಿಂದ ಹೊರಗಿಳಿದು ಸ್ವಲ್ಪ ತಾಜಾ ಗಾಳಿಯನ್ನು ತೆಗೆದುಕೊಳ್ಳಿ. ಇದರಿಂದ ದೇಹವು ಹಗುರವಾಗುತ್ತದೆ. ದೇಹವು ಹೆಚ್ಚು ಹಗುರವಾಗಿರುತ್ತದೆ.

ಶುಂಠಿ ಬಳಕೆ: ಮೋಷನ್‌ ಸಿಕ್ನೆಸ್‌ ಕಡಿಮೆ ಮಾಡಲು ಶುಂಠಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರಯಾಣದ ಮೊದಲು, ನೀವು ಶುಂಠಿ ಚಹಾವನ್ನು ಕುಡಿಯಬಹುದು ಅಥವಾ ಸಣ್ಣ ತುಂಡು ಶುಂಠಿಯನ್ನು ಅಗಿಯಬಹುದು. ಶುಂಠಿಯಲ್ಲಿರುವ ನೈಸರ್ಗಿಕ ಪದಾರ್ಥಗಳು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಪುದೀನ ಬಳಕೆ: ಪ್ರಯಾಣಕ್ಕೂ ಮುನ್ನ ನಿಂಬೆ ಅಥವಾ ಪುದೀನ ಚಹಾ ಕುಡಿಯುವ ಮೂಲಕವೂ ವಾಂತಿಯನ್ನು ತಡೆಯಬಹುದು. ಇದಲ್ಲದೆ ಪುದೀನ ಕ್ಯಾಂಡಿಯ ಪರಿಮಳವು ಸಹ ವಾಕರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಕಮಲಕ್ಕೆ ಒಪ್ಪಿದ್ದರೆ ಅಂದೇ ಮಂತ್ರಿಯಾಗ್ತಿದ್ದೆ: ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ – Kannada News | Disgruntled Congress MLA Subbareddy Expresses Disappointment Over Cabinet Expansion

ಬೆಂಗಳೂರು, ಆ.5: ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಡಿ ಹೊತ್ತಿದ್ದು, ಚಿಕ್ಕಬಳ್ಳಾಪುರ ಶಾಸಕ ಸುಭಾ ರೆಡ್ಡಿ ತಮ್ಮ ಬೇಸರ ಹೊರಹಾಕಿದ್ದಾರೆ. ಬಾಗೇಪಲ್ಲಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಚಿವ ಸ್ಥಾನ ಸಿಕ್ಕೇ ಇಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಸುಭಾ ರೆಡ್ಡಿ ಮಾತನಾಡಿ, ಆಪರೇಷನ್ ಕಮಲದ ವೇಳೆ ನಾನು ಅಡ್ಡದಾರಿನಲ್ಲಿ ಹೋಗಿದ್ದರೆ ಮಂತ್ರಿ ಆಗ್ತಿದ್ದೆ. ಆದರೆ ನನ್ನ ಮನಸ್ಸು ಅದಕ್ಕೆ ಒಪ್ಪಲಿಲ್ಲ. ಯಾವತ್ತಾದರೂ ಪಕ್ಷಕ್ಕೆ ನಿಷ್ಠೆ ತೋರಿದರೆ ಒಳ್ಳೇದಾಗುತ್ತೆ ಎಂದು ನಂಬಿದ್ದೆ. ಆದರೆ ನಾನು ತೋರಿಸಿದ ನಿಷ್ಠೆಯನ್ನು ಪಕ್ಷ ನನಗೆ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿದಾಗ ನನ್ನ ಸ್ನೇಹಿತ ಡಾಕ್ಟರ್ ಸುಧಾಕರ್ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆಗ ಇಬ್ಬರೂ ಜೊತೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಉಸ್ತುವಾರಿ ಆಗ್ತೀವಿ ಎಂದಿದ್ದರು. ಆದರೆ ನಾನು ಹೋಗಲಿಲ್ಲ ಎಂದಿದ್ದಾರೆ. ತಮಗೆ ಲಕ್ ಇಲ್ಲ ಎಂದ ಸುಭಾ ರೆಡ್ಡಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರು ತಾವು ಶಾಸಕನಾಗಲು ಯಾವುದೇ ಕ್ಯಾನ್ವಾಸ್ ಮಾಡಿಲ್ಲ. ಒಂದು ರೂಪಾಯಿ ಕೂಡ ಪಾರ್ಟಿ ಫಂಡ್ ನೀಡಿಲ್ಲ ಎಂದು ಹೇಳಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version