ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು – Kannada News | No Petrol likely if don’t have third party insurance for vehicles, Supreme Court tells govt to come up with a law

ನವದೆಹಲಿ, ಆಗಸ್ಟ್ 5: ವಾಹನಗಳಿಗೆ ಮಾನ್ಯತೆ ಹೊಂದಿರುವ ಥರ್ಡ್ ಪಾರ್ಟಿ ಇನ್ಶೂರೆನ್ಸ್ (Third-party Insurance) ಇಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್/ಡೀಸಲ್/ಗ್ಯಾಸ್ ಸಿಗದೇ ಹೋಗುವ ದಿನ ದೂರ ಇಲ್ಲ. ಇಂಥದ್ದೊಂದು ಕಾನೂನು ರೂಪಿಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪ್ರಾಯೋಗಿಕವಾಗಿ ಈ ಕಾನೂನು ತರುವಂತೆ ಕೋರ್ಟ್ ಆದೇಶ ನೀಡಿದೆ. ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ.

‘ಇನ್ಶೂರೆನ್ಸ್ ಇಲ್ಲದಿದ್ದರೆ ಇಂಧನವಿಲ್ಲ’

ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜಂಟಿಯಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನಗಳ ಇನ್ಶೂರೆನ್ಸ್ ತಪಾಸಣೆ ಮಾಡುವ ಪೈಲಟ್ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಮಾನ್ಯವಾಗಿರುವ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ನೀಡಬಾರದು ಎನ್ನುವುದು ಕೋರ್ಟ್ ಅನಿಸಿಕೆ.

ಏನಿದು ಥರ್ಡ್ ಪಾರ್ಟಿ ಇನ್ಷೂರೆನ್ಸ್?

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಎಂದರೆ ನಿಮ್ಮ ವಾಹನ ಅಪಘಾತವಾಗಿ ಬೇರೆಯವರಿಗೆ ಹಾನಿಯಾದಾಗ ಆ ನಷ್ಟ ಭರಿಸುವ ವಿಮೆ. ಉದಾಹರಣೆಗೆ, ವಾಹನ ಅಪಘಾತವಾದಾಗ ನಿಮ್ಮ ವಾಹನದಿಂದ ಇನ್ನೊಬ್ಬರಿಗೆ ಗಾಯವಾದರೆ, ಅಥವಾ ಸಾವಾದರೆ, ಅಥವಾ ಪ್ರಾಪರ್ಟಿಗೆ ಹಾನಿಯಾದರೆ ಅದನ್ನು ಥರ್ಡ್ ಪಾರ್ಟಿ ಇನ್ಷೂರೆನ್ಸ್​ನಲ್ಲಿ ಕವರೇಜ್ ಸಿಗುತ್ತದೆ.

ಇದನ್ನೂ ಓದಿ: ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಯಾಕೆ ಮುಖ್ಯ?

ವಾಹನ ಅಪಘಾತ ಸಂಭವಿಸಿದಾಗ ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕೋರ್ಟ್ ಅಲೆದಾಡುವುದನ್ನು ತಪ್ಪಿಸಬಹುದು. ಈಗ ಸುಪ್ರೀಂಕೋರ್ಟ್ ಈ ವಿಚಾರದ ಬಗ್ಗೆ ಮಧ್ಯಪ್ರವೇಶಿಸಿರುವುದರಿಂದ ಹೊಸ ಕಾನೂನು ಬರುವ ಸಾಧ್ಯತೆ ದಟ್ಟವಾಗಿದೆ. ಇದೇನಾದರೂ ಜಾರಿಗೆ ಬಂದರೆ, ಪೊಲೀಸರು ಥರ್ಡ್ ಪಾರ್ಟಿ ಇನ್ಷೂರೆನ್ಸ್​ಗಾಗಿ ವಾಹನಗಳ ತಪಾಸಣೆ ಮಾಡುವುದು ಹೆಚ್ಚಾಗಲಿದೆ.

ಶೇ. 56 ರಷ್ಟು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲ

ಸಂಸದೀಯ ಸಮಿತಿಯ ವರದಿ ಪ್ರಕಾರ ಭಾರತದ ರಸ್ತೆಗಳಲ್ಲಿ ಸಂಚರಿಸುವ ಶೇ. 56 ರಷ್ಟು ವಾಹನಗಳು ಯಾವುದೇ ಇನ್ಶೂರೆನ್ಸ್ ಹೊಂದಿಲ್ಲದಿರುವುದು ಆಘಾತಕಾರಿ ಎಂದು ಇದೇ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಎಎನ್‌ಪಿಆರ್ (ANPR) ಕ್ಯಾಮೆರಾಗಳ ಬಳಕೆ: ಹೆದ್ದಾರಿಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾಗಳನ್ನು ‘ವಾಹನ್’ (VAHAN) ಪೋರ್ಟಲ್ ಹಾಗೂ ಇನ್ಶೂರೆನ್ಸ್ ಡೇಟಾಬೇಸ್‌ಗೆ ಲಿಂಕ್ ಮಾಡಿ. ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಆಟೋಮ್ಯಾಟಿಕ್ ಇ-ಚಲನ್ ಕಳುಹಿಸಿ ಎಂದು ಕೋರ್ಟ್ ಸಲಹೆ ಕೊಟ್ಟಿದೆ.

ಟ್ರಾಫಿಕ್ ಪೊಲೀಸರಿಗೆ ಹೊಸ ಆ್ಯಪ್/ಸಾಧನ: ಸ್ಥಳದಲ್ಲೇ ಇನ್ಶೂರೆನ್ಸ್ ಪರಿಶೀಲಿಸಲು ರಾಜ್ಯ ಟ್ರಾಫಿಕ್ ಪೊಲೀಸರಿಗೆ ‘ವಾಹನ್’ ಡೇಟಾ ಸಂಪರ್ಕವಿರುವ ಮೊಬೈಲ್ ಆ್ಯಪ್ ಅಥವಾ ಡಿಜಿಟಲ್ ಸಾಧನಗಳನ್ನು ಒದಗಿಸುವಂತೆಯೂ ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

ಹೊಸ ವಾಹನಗಳಿಗೆ ಇನ್ಶೂರೆನ್ಸ್ ಅವಧಿ ಹೆಚ್ಚಳ

  • ಹೊಸ ಕಾರುಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅವಧಿಯನ್ನು 3 ವರ್ಷದಿಂದ 4 ವರ್ಷಕ್ಕೆ ಹೆಚ್ಚಿಸಲಾಗಿದೆ.
  • ಹೊಸ ದ್ವಿಚಕ್ರ ವಾಹನಗಳಿಗೆ (ಬೈಕ್/ಸ್ಕೂಟರ್) ಈ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಂಡನಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜ್ಯೋತಿಕಾ: ಈಗ 30 ಪಟ್ಟು ಕಡಿಮೆ – Kannada News | Jyotika Remuneration was 3 times more than husband Suriya Kaakha Kaakha days

ದಕ್ಷಿಣ ಭಾರತದ ಸೂಪರ್‌ಹಿಟ್ ಜೋಡಿಗಳಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ (Jyotika) ದಂಪತಿ ಪ್ರಮುಖರು. 1999ರಲ್ಲಿ ತೆರೆಕಂಡ ‘ಪೂವೆಲ್ಲಾಂ ಕೇಟ್ಟುಪ್ಪಾರ್’ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ, 2003ರ ‘ಕಾಖಾ ಕಾಖಾ’ ಚಿತ್ರದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. 2006ರ ಸೆಪ್ಟೆಂಬರ್ 11ರಂದು ಚೆನ್ನೈನಲ್ಲಿ ವಿವಾಹವಾದ ಈ ದಂಪತಿ, ಶೀಘ್ರದಲ್ಲೇ ತಮ್ಮ 20ನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸುಂದರ ದಂಪತಿಗೆ ದಿಯಾ ಎಂಬ ಮಗಳು ಹಾಗೂ ದೇವ್ ಎಂಬ ಮಗನಿದ್ದಾನೆ. ಸೂರ್ಯ (Suriya) ಮತ್ತು ಜ್ಯೋತಿಕಾ ಅವರ ಸಂಭಾವನೆ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಇಲ್ಲಿದೆ.

‘ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದೆ’

2003ರಲ್ಲಿ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಕಾಖಾ ಕಾಖಾ’ ಸಿನಿಮಾ ಸೆಟ್ಟೇರಿದಾಗ ಜ್ಯೋತಿಕಾ ಆಗಲೇ ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿದ್ದರು. ಆ ಸಮಯದಲ್ಲಿ ಜ್ಯೋತಿಕಾ ಅವರು ಸೂರ್ಯ ಅವರಿಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ನಟಿಯೊಬ್ಬಳು ತಮಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರೆ ಪುರುಷ ನಟರಿಗೆ ಅಹಂ ಅಡ್ಡ ಬರುವುದು ಸಹಜ. ಆದರೆ ಸೂರ್ಯ ಅವರಿಗೆ ಆ ರೀತಿಯ ಯಾವುದೇ ಅಹಂ ಇರಲಿಲ್ಲ.

ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ನಕ್ಕ ಜ್ಯೋತಿಕಾ, ‘ಆಗ ನಾನು ಅವರಿಗಿಂತ 3 ಪಟ್ಟು ಹೆಚ್ಚು ಗಳಿಸುತ್ತಿದ್ದೆ, ಆದರೆ ಈಗ ನನ್ನ ಸಂಭಾವನೆ ಅವರ ಗಳಿಕೆಗಿಂತ 30 ಪಟ್ಟು ಕಡಿಮೆಯಾಗಿದೆ’ ಎಂದು ಹೇಳಿದರು. ಈಗಲೂ ಜ್ಯೋತಿಕಾ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಒಟಿಟಿಯಲ್ಲೂ ಅವರು ಮಿಂಚುತ್ತಿದ್ದಾರೆ.

ಪತಿಯನ್ನು ಹೊಗಳಿದ ಜ್ಯೋತಿಕಾ:

ಸೂರ್ಯ ಅವರ ಸರಳತೆ ಮತ್ತು ಸಮಾನತೆಯ ಮನೋಭಾವವನ್ನು ಮೆಚ್ಚಿಕೊಂಡ ಜ್ಯೋತಿಕಾ, ‘ಸೂರ್ಯ ಒಬ್ಬ ನಟನಾಗಿ ಎಲ್ಲರಿಗೂ ಗೊತ್ತು. ಆದರೆ ಒಬ್ಬ ಪತಿಯಾಗಿ, ಗಂಡಸಾಗಿ ಅವರು ಅದ್ಭುತ ವ್ಯಕ್ತಿ. ಅವರ ಮನಸ್ಸಿನಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲ, ಸಮಾನತೆಯಿದೆ. ಅದು ವ್ಯಕ್ತಿಯ ಒಳಗಿನಿಂದಲೇ ಬರಬೇಕು. ಮನೆಯಲ್ಲೂ ನಾವಿಬ್ಬರೂ ಸಮಾನರು. ಅವರು ನನ್ನನ್ನು ಸದಾ ತಮಗೆ ಸಮಾನವಾಗಿ ಕಾಣುತ್ತಾರೆ’ ಎಂದು ಪತಿಯ ಗುಣವನ್ನು ಹೊಗಳಿದರು.

ಇದನ್ನೂ ಓದಿ: 47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್

ಪ್ರೀತಿಯ ಬಗ್ಗೆ ಸೂರ್ಯ ನೀಡಿದ ಮಹತ್ವದ ಸಲಹೆ

ಇತ್ತೀಚೆಗೆ ತಮ್ಮ ಮುಂಬರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಸೂರ್ಯ, ‘ಮದುವೆಯಾದ ತಕ್ಷಣ ಪ್ರೀತಿ ಮುಗಿದುಹೋಗಬಾರದು. 20 ವರ್ಷಗಳಾದರೂ ಪ್ರತಿದಿನ ಪ್ರೀತಿಸುತ್ತಿರಬೇಕು. ವಯಸ್ಸಾದಂತೆ ನಮ್ಮ ಆಲೋಚನೆಗಳು, ಆದ್ಯತೆಗಳು ಬದಲಾಗಬಹುದು. ಆದರೆ ಪರಸ್ಪರ ಗೌರವ ಮತ್ತು ಪ್ರೀತಿ ಎಂದಿಗೂ ಬದಲಾಗಬಾರದು. ಪ್ರೀತಿಯ ವಿಷಯದಲ್ಲಿ ನಾನು ನೀಡುವ ಏಕೈಕ ಸಲಹೆ ಎಂದರೆ ಪರಸ್ಪರ ಗೌರವಿಸುವುದು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ: ಸಚಿವ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ – Kannada News | Karnataka Firm on Mekedatu: Minister Reddy Dismisses TN Resolution, DPR by Aug 15

ಬೆಂಗಳೂರು ಆ. 5: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ತಮಿಳುನಾಡಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಯಾವುದೇ ಅಧಿಕಾರವಿಲ್ಲ ಹಾಗೂ ರಾಜ್ಯ ಸರ್ಕಾರವು ಖಂಡಿತವಾಗಿಯೂ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳು ಆಕ್ಷೇಪ ಎತ್ತುವಂತಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಆಗಸ್ಟ್ 15ರೊಳಗೆ ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು. ಯೋಜನೆಗೆ ತಡೆ ಒಡ್ಡಲು ತಮಿಳುನಾಡಿಗೆ ಯಾವುದೇ ಅಧಿಕಾರವಿಲ್ಲ. ಅವರು ತಮ್ಮ ವಿಧಾನಸಭೆಯಲ್ಲಿ ನಿರ್ಣಯ ಮಾಡಿಕೊಳ್ಳಲಿ, ಅದಕ್ಕೆ ಬೆಲೆ ಇಲ್ಲ. ಈ ಹಿಂದೆ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಎರಡು ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ, ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ. “ನಾವು ಮೇಕೆದಾಟು ಯೋಜನೆಯನ್ನು ಮಾಡಿಯೇ ಸೀರುತ್ತೇವೆ. ಮುಂಬರುವ ಸದನದಲ್ಲೂ ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದೇವೆ” ಎಂದು ಸಚಿವರು ಪುನರುಚ್ಚರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ರೇವಣ್ಣ ಹುಟ್ಟು ಹಬ್ಬದ ಹಿನ್ನೆಲೆ ಹಾಸನದಲ್ಲಿ ರಾರಾಜಿಸಿದ ಫ್ಲೆಕ್ಸ್​​ಗಳು – Kannada News | Former MP Prajwal Revanna’s Flexes Return to Hassan After Two Years

ಹಾಸನ, ಆಗಸ್ಟ್​​ 05: ಎರಡು ವರ್ಷಗಳ ಬಳಿಕ ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು ಮತ್ತೆ ಪ್ರತ್ಯಕ್ಷವಾಗಿವೆ. ಇಂದು ಪ್ರಜ್ವಲ್ ಹುಟ್ಟು ಹಬ್ಬದ ಹಿನ್ನೆಲೆ ಹೊಳೆನರಸೀಪುರದ ಅಂಬೇಡ್ಕರ್ ವೃತ್ತದಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿ ಶುಭಾಶಯ ಕೋರಲಾಗಿದೆ. ಸಂಸದರಾಗಿದ್ದ ವೇಳೆ ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧನಕ್ಕ ಒಳಗಾಗಿದ್ದ ಪ್ರಜ್ವಲ್, ಸದ್ಯ ಒಂದು ಕೇಸ್​​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎನ್ನುವುದಿಲ್ಲಿ ಗಮನಾರ್ಹ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Source link

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ – Kannada News | Matrimony Trap: Bengaluru Man Duped of Lakhs in Fake Cryptocurrency Trading Scam; FIR Registered

ಬೆಂಗಳೂರು, ಆಗಸ್ಟ್​ 05: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ನಂಬಿಕೆ ಗಳಿಸಿ ನಕಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ, ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಆಗಸ್ಟ್ 3ರಂದು ದಾಖಲಾಗಿರುವ ಎಫ್‌ಐಆರ್ ಪ್ರಕಾರ ಈ ವಂಚನೆ 2025ರ ಅಕ್ಟೋಬರ್ 27ರಂದು ಆರಂಭವಾಗಿದ್ದು, ನಿಹಾರಿಕಾ ಚೌಧರಿ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಮಹಿಳೆ ಹಣ ಪೀಕಿರುವುದಾಗಿ ಆರೋಪಿಸಲಾಗಿದೆ. ಆಕೆ ತಾನು ಮೂಲತಃ ಆಂಧ್ರಪ್ರದೇಶದ ವಿಜಯವಾಡದವಳಾಗಿದ್ದು, ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸವಿದ್ದೇನೆ. ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ನಂತರ ಹಲವು ವಾಟ್ಸಾಪ್ ಸಂಖ್ಯೆಗಳ ಮೂಲಕ ಸಂಪರ್ಕ ಮುಂದುವರಿಸಿ, ದೂರುದಾರರ ವಿಶ್ವಾಸ ಗಳಿಸಿದ ಬಳಿಕ mivonexchg.com ಹಾಗೂ binzoex.com ಎಂಬ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಳು.

ಆಕೆಯ ಸೂಚನೆಯಂತೆ ದೂರುದಾರರು ವಿವಿಧ ಕ್ರಿಪ್ಟೋ ವಿನಿಮಯ ವೇದಿಕೆಗಳ ಮೂಲಕ USDT (ಟೆಥರ್) ಖರೀದಿಸಿ, ಅದನ್ನು ತಮ್ಮ ಟ್ರಸ್ಟ್​​ ವಾಲೆಟ್​​ಗೆ ವರ್ಗಾಯಿಸಿದ್ದರು. ಬಳಿಕ ಸುಮಾರು 30,000 USDT ಅನ್ನು ಆಕೆ ನೀಡಿದ ವಿವಿಧ ಕ್ರಿಪ್ಟೋ ವಾಲೆಟ್ ವಿಳಾಸಗಳಿಗೆ ವರ್ಗಾಯಿಸಿದ್ದರು. ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ, ತೆರಿಗೆ ಹಾಗೂ ಇತರ ಶುಲ್ಕಗಳನ್ನು ಪಾವತಿಸಬೇಕೆಂದು ವೆಬ್‌ಸೈಟ್ ತಿಳಿಸಿತು. ಸೂಚನೆಯಂತೆ ಹೆಚ್ಚುವರಿ ಹಣ ಪಾವತಿಸಿದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:  ಫುಡ್ ಡೆಲಿವರಿ ಬಾಯ್ಸ್​ನ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ!

ಪೊಲೀಸರ ಪ್ರಕಾರ, ಆರೋಪಿಗಳು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಗುರುತು ಸೃಷ್ಟಿಸಿ, ದೂರುದಾರರನ್ನು ಸಂಪರ್ಕಿಸಿ ನಕಲಿ ಕ್ರಿಪ್ಟೋ ಹೂಡಿಕೆ ವೇದಿಕೆಗಳಲ್ಲಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ವರ್ಗಾಯಿಸಿದ ಹಣವನ್ನು ವಿವಿಧ ಕ್ರಿಪ್ಟೋ ವಾಲೆಟ್‌ಗಳಿಗೆ ವರ್ಗಾಯಿಸಿ ದೂರುದಾರರಿಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ. ಅಲ್ಲದೆ ಈ ವೆಬ್‌ಸೈಟ್‌ಗಳು ನಕಲಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಎಂದು ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual Guidelines: ಮಧ್ಯಾಹ್ನ ಪೂಜೆ ಮಾಡುವುದು ಶುಭವೇ? ಧರ್ಮಗ್ರಂಥಗಳು ಹೇಳುವುದೇನು? – Kannada News | Midday Pooja Rules: Is Worship Allowed? Hindu Shastra Guidelines and Exceptions

ಮಧ್ಯಾಹ್ನ ಪೂಜೆ ಮಾಡುವುದು ಶುಭವೇ? Image Credit source: Getty Images

ಇಂದಿನ ಕಾರ್ಯನಿರತ ಜೀವನಶೈಲಿಯಿಂದಾಗಿ ಅನೇಕರಿಗೆ ಬೆಳಿಗ್ಗೆ ಬೇಗನೆ ಪೂಜೆ-ಪುರಸ್ಕಾರಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕೆಲವರು ಮಧ್ಯಾಹ್ನ ಸ್ನಾನ ಮಾಡಿ ಪೂಜೆ ಸಲ್ಲಿಸುವುದನ್ನು ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಮನೆಯಲ್ಲಿ ನೆರವೇರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಹೋಮ-ಹವನಗಳು ಮಧ್ಯಾಹ್ನದವರೆಗೂ ಮುಂದುವರಿಯುತ್ತವೆ. ಆದರೆ, ಧರ್ಮಗ್ರಂಥಗಳು ಮತ್ತು ಶಾಸ್ತ್ರಗಳ ಪ್ರಕಾರ ಮಧ್ಯಾಹ್ನದ ವೇಳೆಯಲ್ಲಿ ಹೊಸದಾಗಿ ಪೂಜೆ ಪ್ರಾರಂಭಿಸುವುದು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ.

ಮಧ್ಯಾಹ್ನದ ವೇಳೆಯಲ್ಲಿ ಪೂಜೆ ಮಾಡಬಾರದು ಏಕೆ?

ಸಾಮಾನ್ಯ ನಿಯಮದಂತೆ, ಮಧ್ಯಾಹ್ನದ ಸಮಯದಲ್ಲಿ ಹೊಸದಾಗಿ ದಿನನಿತ್ಯದ ಪೂಜೆಯನ್ನು ಪ್ರಾರಂಭಿಸುವುದನ್ನು ಶಾಸ್ತ್ರಗಳಲ್ಲಿ ನಿಷಿದ್ಧವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗಿನ ಅವಧಿಯು ದೇವತೆಗಳ ವಿಶ್ರಾಂತಿಯ ಸಮಯವಾಗಿರುತ್ತದೆ. ದೇವರ ವಿಶ್ರಾಂತಿಗೆ ಭಂಗ ಬರಬಾರದು ಎಂಬ ಕಾರಣಕ್ಕಾಗಿಯೇ ದೇವಾಲಯಗಳಲ್ಲಿಯೂ ಈ ಸಮಯದಲ್ಲಿ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆದ್ದರಿಂದ, ಮನೆಯಲ್ಲೂ ಸಹ ಈ ವೇಳೆಯಲ್ಲಿ ದಿನನಿತ್ಯದ ನೈವೇದ್ಯ ಅಥವಾ ಪ್ರಾರ್ಥನೆಗಳನ್ನು ಹೊಸದಾಗಿ ಪ್ರಾರಂಭಿಸುವುದನ್ನು ತಪ್ಪಿಸುವುದು ಶ್ರೇಯಸ್ಕರ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮಧ್ಯಾಹ್ನ ಪೂಜೆ ಮಾಡಲು ಇರುವ ವಿಶೇಷ ಮಿನಾಯಿತಿಗಳು:

ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಪೂಜೆಯನ್ನು ದೋಷಪೂರಿತವೆಂದು ಪರಿಗಣಿಸುವುದಿಲ್ಲ. ಬೆಳಿಗ್ಗೆಯೇ ಪ್ರಾರಂಭವಾದ ಸುದೀರ್ಘ ಪೂಜೆಗಳು ಮಧ್ಯಾಹ್ನದವರೆಗೆ ಮುಂದುವರಿದರೆ ಅದರಲ್ಲಿ ಯಾವುದೇ ದೋಷವಿರುವುದಿಲ್ಲ. ಅಲ್ಲದೆ, ನವರಾತ್ರಿಯ ಸಂದರ್ಭದಲ್ಲಿ ಕಲಶ ಸ್ಥಾಪನೆಗೆ ಬೆಳಗಿನ ಶುಭ ಸಮಯ ತಪ್ಪಿಹೋದರೆ, ಮಧ್ಯಾಹ್ನದ ‘ಅಭಿಜಿತ್ ಮುಹೂರ್ತ’ದಲ್ಲಿ ಪೂಜೆ ಸಲ್ಲಿಸಬಹುದು. ಇದರ ಜೊತೆಗೆ, ಕಾಳಸರ್ಪ ದೋಷ ನಿವಾರಣೆಯಂತಹ ವಿಶೇಷ ಪರಿಹಾರ ಪೂಜೆಗಳನ್ನು ರಾಹುಕಾಲದಲ್ಲೇ ನೆರವೇರಿಸಬೇಕಿರುವುದರಿಂದ, ರಾಹುಕಾಲವು ಮಧ್ಯಾಹ್ನದ ವೇಳೆ ಬಂದಾಗ ಆ ಸಮಯದಲ್ಲಿ ಆಚರಣೆ ನಡೆಸಲು ಶಾಸ್ತ್ರೀಯ ಸಮ್ಮತಿಯಿದೆ.

ಮಧ್ಯಾಹ್ನದ ವೇಳೆ ಮಾನಸಿಕ ಪ್ರಾರ್ಥನೆ ಮತ್ತು ನಾಮಸ್ಮರಣೆ:

ಒಂದು ವೇಳೆ ಮಧ್ಯಾಹ್ನದ ಸಮಯದಲ್ಲಿ ದೇವರಿಗೆ ಗೌರವ ಸಲ್ಲಿಸಬೇಕೆನಿಸಿದರೆ ಅಥವಾ ಪ್ರಾರ್ಥಿಸಬೇಕಾದರೆ ವಿಗ್ರಹಗಳನ್ನು ಸ್ಪರ್ಶಿಸದೆ ‘ಮಾನಸಿಕ ಪೂಜೆ’ ಮಾಡುವುದು ಸೂಕ್ತ. ಅಂದರೆ, ದೇವರಿಗೆ ತೊಂದರೆಯಾಗದಂತೆ ದೂರದಿಂದಲೇ ನಿಮ್ಮ ಇಷ್ಟದೈವದ ನಾಮಸ್ಮರಣೆ ಮಾಡುವುದು ಮತ್ತು ಮನಸ್ಸಿನಲ್ಲೇ ಧನ್ಯವಾದಗಳನ್ನು ಅರ್ಪಿಸುವುದು ಅತ್ಯಂತ ಶುಭಫಲ ನೀಡುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್ ಯುದ್ಧದ ನಡುವೆ ದುಬೈನ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ 7 ಸ್ಫೋಟ – Kannada News | 7 Blasts In 20 Minutes; Mysterious Explosions In Dubai Jebel Ali Industrial Area Amid Iran War

ದುಬೈ ಆಗಸ್ಟ್ : ಯುಎಇಯ ದುಬೈನ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಮುಂಜಾನೆ ಕೇವಲ 20 ನಿಮಿಷಗಳ ಅಂತರದಲ್ಲಿ ಕನಿಷ್ಠ 7 ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ (Iran) ಮಾಧ್ಯಮಗಳು ವರದಿ ಮಾಡಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಮುಗಿಲೆತ್ತರಕ್ಕೆ ಭಾರಿ ಪ್ರಮಾಣದ ಕಪ್ಪು ಹೊಗೆ ಚಿಮ್ಮುತ್ತಿರುವುದು ಕಂಡುಬಂದಿದೆ. ಇರಾನ್‌ನ ಮೆಹ್ರ್ ಸುದ್ಧಿ ಸಂಸ್ಥೆಯು ಎಮಿರೇಟಿ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಘಟನೆಯನ್ನು ವರದಿ ಮಾಡಿದೆ.

ಈ ಘಟನೆಯಲ್ಲಿ ಆಗಿರುವ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸ್ಫೋಟ ಮತ್ತು ಅದರಿಂದ ಉಂಟಾದ ಭಾರಿ ಬೆಂಕಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಘಟನೆಯನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ ಇಬ್ಬರನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಯೆಮೆನ್‌ನಿಂದ ನಡೆಸಲಾದ ಕ್ಷಿಪಣಿ ದಾಳಿಯೇ ಈ ಸ್ಫೋಟಗಳಿಗೆ ಕಾರಣ ಎನ್ನಲಾಗಿದೆ. ಆದರೆ, ಈ ಘಟನೆಗೆ ಸೂಕ್ತ ಕಾರಣವೇನೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಇದೇ ವೇಳೆ, ಜೆಬೆಲ್ ಅಲಿ ಬಂದರಿನ ಪಕ್ಕದಲ್ಲಿರುವ ಇಂಧನ ಸಂಗ್ರಹಣೆ ಮತ್ತು ಸಾಗಣೆಗೆ ಬಳಸಲಾಗುವ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ನಾಸಾ (NASA) ತಾಪಮಾನ ಇಮೇಜಿಂಗ್ ಪತ್ತೆ ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟ ನಡೆದ ಸಮಯದಲ್ಲೇ ಯೆಮೆನ್ ರಾಜಧಾನಿ ಸನಾದಲ್ಲೂ ಭಾರಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಇವು ವೈಮಾನಿಕ ದಾಳಿಯ ಸದ್ದು ಎಂದು ಕೆಲವು ವರದಿಗಳು ಹೇಳಿದ್ದರೆ, ಇನ್ನು ಕೆಲವು ಮೂಲಗಳು ಯೆಮೆನ್ ಭೂಪ್ರದೇಶದಿಂದ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿವೆ.

ಇದನ್ನೂ ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ ನಡುವಿನ ಸಂಘರ್ಷದಿಂದಾಗಿ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿದ್ದು, ಗಲ್ಫ್ ಪ್ರದೇಶದಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಯುಎಇ ಅಧಿಕಾರಿಗಳು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ – Kannada News | Chalavadi Narayanaswamy Released Viral Audio Of MLA RB Timmapur With Nanjayya Math about Minister Post

ಬೆಂಗಳೂರು, (ಆಗಸ್ಟ್ 05): ಸಚಿವ ಸಂಪುಟ ವಿಸ್ತರಣೆ ಹಾಗೂ ‘ಪೇಮೆಂಟ್ ಸೀಟ್’ ಹಂಚಿಕೆ ಕುರಿತು ಶಾಸಕ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಈ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು, ಪ್ರತಿಪಕ್ಷಗಳಿಗೆ ಹೊಸ ಪ್ರಹಾರ ಮಾಡಲು ಅಸ್ತ್ರ ಸಿಕ್ಕಂತಾಗಿದೆ. ಈ ಸಂಬಂಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್​ವಾಮಿ ಅವರು ಆಡಿಯೋ ಬಿಡುಗಡೆ ಮಾಡಿ ಸಚಿವ ಸ್ಥಾನ ಹರಾಜು ಆಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು? – Kannada News | Satish Jarkiholi Reacts about Siddaramaiah obeisant for ministers swearing in ceremony

ಬೆಂಗಳೂರು, (ಆಗಸ್ಟ್ 05): ಡಿಕೆ ಶಿವಕುಮಾರ್  (DK Shivakumar) ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಕರ್ನಾಟಕ ಕಾಂಗ್ರೆಸ್​​​​ನಲ್ಲಿ ಕೆಲ ಗೊಂದಲಗಳು ಹುಟ್ಟಿಕೊಂಡಿವೆ. ಸಚಿವ ಸ್ಥಾನ ಸಂಬಂಧ ಸಿದ್ದರಾಮಯ್ಯ (Siddaramaiah) ಕೊಂಚ ಬೇಸರಗೊಂಡಂತೆ ಕಾಣುತ್ತಿದ್ದು, ತಾವು ಹೇಳಿದವರಿಗೆ ಸಚಿವ ಸ್ಥಾನ ನೀಡದಿದ್ದರಿಂದ ನೂತನ ಸಚಿವ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಹಲವು ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವಾಗಲೇ ಸಿದ್ದರಾಮಯ್ಯನವರ ಈ ನಡೆ, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನು ಸಿದ್ದರಾಮಯ್ಯ ಗೈರಾಗಿದ್ಯಾಕೆ? ಎನ್ನುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಕಾರಣ ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rishabh Pant: ಅತಿ ಹೆಚ್ಚು ತೆರಿಗೆ ಪಾವತಿ; ಅಗ್ರಸ್ಥಾನಕ್ಕೇರಿದ ರಿಷಭ್ ಪಂತ್

Source link

Exit mobile version