ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳ: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ಕಿಮ್ಸ್ ಸಂಸ್ಥೆ ವೈದ್ಯರ ತಂಡ – Kannada News | KIMS Hubballi Study Reveals Alarming Rise in Heart Attack Risk Among Children

ಬೆಂಗಳೂರು, ಆಗಸ್ಟ್​ 06: ಮಕ್ಕಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಳವಾಗುತ್ತಿರುವ ಬಗ್ಗೆ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯು ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಮಹತ್ವದ ಅಧ್ಯಯನ ನಡೆಸಿದೆ. ಡಾ. ರಾಮ್ ಕವಲಗುಡ್ಡ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯು ಕರ್ನಾಟಕ ಸೇರಿದಂತೆ 13 ರಾಜ್ಯಗಳ ಮಕ್ಕಳಿಗೆ ಸಂಬಂಧಿಸಿದಂತೆ ಆತಂಕಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. 8 ರಿಂದ 18 ವರ್ಷ ವಯಸ್ಸಿನ 347 ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಶೇಕಡಾ 70ರಷ್ಟು ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಅಂಶಗಳು ಪತ್ತೆಯಾಗಿವೆ. ಅದರಲ್ಲಿ ಶೇಕಡಾ 17ರಷ್ಟು ಮಕ್ಕಳಲ್ಲಿ ಹೃದಯದ ಅಪಧಮನಿಗಳ ಒಳಪದರವಾದ ಎಂಡೋಥೀಲಿಯಂ ಹಾನಿಯಾಗಿರುವುದು ಕಂಡುಬಂದಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜುತನ, ದೈಹಿಕ ಚಟುವಟಿಕೆಯ ಕೊರತೆ, ಅತಿಯಾದ ಜಂಕ್ ಫುಡ್ ಸೇವನೆ, ಕೋಲ್ಡ್ ಡ್ರಿಂಕ್ಸ್, ಹೆಚ್ಚು ಸಕ್ಕರೆ ಮತ್ತು ಉಪ್ಪಿನ ಆಹಾರ ಸೇವನೆ ಇವೇಲ್ಲವೂ ಈ ಅಪಾಯಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅಧ್ಯಯನ ವರದಿ ಹೇಳುತ್ತದೆ. ಸೂಕ್ತ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳದಿದ್ದರೆ, ಈ ಮಕ್ಕಳಿಗೆ ಮುಂದಿನ 10-15 ವರ್ಷಗಳಲ್ಲಿ ಹೃದಯಾಘಾತವಾಗುವ ಸಾಧ್ಯತೆಯಿದೆ. ಈ ವರದಿಯನ್ನು ಕಿಮ್ಸ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Solar Eclipse: ಆ. 12 ಸೂರ್ಯಗ್ರಹಣ; ಈ 3 ರಾಶಿಯವರು ಜಾಗರೂಕರಾಗಿರಿ! – Kannada News | August 12 Solar Eclipse: Impact on Zodiac Signs and Sutaka Rules Explained

ಆಗಸ್ಟ್ 12 ರಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವೂ ಹೌದು. ಸಾಮಾನ್ಯವಾಗಿ ಗ್ರಹಣದ ಹೆಸರು ಕೇಳಿದ ತಕ್ಷಣ ಜನರಲ್ಲಿ ಭಯ, ಅನುಮಾನಗಳು ಮತ್ತು ಸೂತಕದ ನಿಯಮಗಳ ಬಗ್ಗೆ ಪ್ರಶ್ನೆಗಳು ಮೂಡುವುದು ಸಹಜ. ಈ ಗ್ರಹಣದ ಸಮಯದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಮತ್ತು ಧಾರ್ಮಿಕ ನಿಯಮಗಳು ಅನ್ವಯಿಸುತ್ತವೆಯೇ ಎಂಬ ಗೊಂದಲ ಹಲವರಲ್ಲಿದೆ.

ಆದರೆ ಜ್ಯೋತಿಷ್ಯ ಹಾಗೂ ಖಗೋಳ ವಿದ್ವಾಂಸರ ಪ್ರಕಾರ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣವು ಗೋಚರಿಸದಿರುವುದರಿಂದ ಭಾರತದಲ್ಲಿ ಇದಕ್ಕೆ ಯಾವುದೇ ರೀತಿಯ ಸೂತಕ ಅವಧಿ ಅನ್ವಯಿಸುವುದಿಲ್ಲ. ಹೀಗಾಗಿ ಗ್ರಹಣದ ಸೂತಕದ ಕುರಿತು ಭಯ ಪಡುವ ಅಗತ್ಯವಿಲ್ಲ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಬಾಹ್ಯಾಕಾಶ ಪ್ರಭಾವವು 12 ರಾಶಿಗಳ ಮೇಲೆಯೂ ಒಂದಲ್ಲ ಒಂದು ರೀತಿಯಲ್ಲಿ ಬೀರುತ್ತದೆ. ವಿಶೇಷವಾಗಿ 3 ರಾಶಿಗಳ ಜಾತಕದವರಿಗೆ ಈ ಸೂರ್ಯಗ್ರಹಣವು ಕೆಲವು ಸವಾಲುಗಳು ಹಾಗೂ ತೊಂದರೆಗಳನ್ನು ತರಬಹುದು ಎಂದು ಹೇಳಲಾಗಿದೆ. ಆ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಸಿಂಹ ರಾಶಿ:

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿರುವುದರಿಂದ ಈ ಗ್ರಹಣದ ಪ್ರಭಾವ ಸಿಂಹ ರಾಶಿಯವರ ಮೇಲೆ ಕೊಂಚ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಸಿಂಹ ರಾಶಿಯವರು ಪ್ರತಿಯೊಂದು ಹೆಜ್ಜೆಯನ್ನೂ ಜಾಗರೂಕತೆಯಿಂದ ಇಡಬೇಕು. ವಿಶೇಷವಾಗಿ ಮಾತನಾಡುವಾಗ ತಾಳ್ಮೆ ವಹಿಸುವುದು ಅತ್ಯಗತ್ಯ; ಯಾವುದೇ ಮಾತು ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು. ನೀವು ಪಡುವ ಶ್ರಮ ಹಾಗೂ ಮಾಡುವ ಪ್ರಯತ್ನಗಳು ತಕ್ಷಣಕ್ಕೆ ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ. ಸಾಲದ ತೊಂದರೆಗಳು ಮತ್ತು ಆರ್ಥಿಕ ನಷ್ಟಗಳು ಎದುರಾಗುವುದರಿಂದ ಮನಸ್ಸಿನಲ್ಲಿ ಆತಂಕ ಹಾಗೂ ಉದ್ವೇಗ ಹೆಚ್ಚಾಗಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಉದ್ಯೋಗ ಮತ್ತು ಆರೋಗ್ಯದ ವಿಷಯದಲ್ಲಿ ಈ ಅವಧಿಯು ಕೊಂಚ ಸವಾಲಿನಿಂದ ಕೂಡಿರಲಿದೆ ಎಂದು ವಿದ್ವಾಂಸರು ಹೇಳುತ್ತಾರೆ. ನೀವು ಎಷ್ಟೇ ಕಠಿಣ ಪರಿಶ್ರಮ ಪಟ್ಟರೂ ಅದಕ್ಕೆ ತಕ್ಕ ಸೂಕ್ತ ಫಲಿತಾಂಶ ಅಥವಾ ಗೌರವ ಸಿಗದೆ ಮನಸ್ಸಿನಲ್ಲಿ ಅತೃಪ್ತಿ ಮೂಡಬಹುದು. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಅಥವಾ ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗುವುದು ಕಷ್ಟಕರವಾಗಬಹುದು. ಆರ್ಥಿಕ ವಿಷಯಗಳಲ್ಲಿ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ ಕನ್ಯಾ ರಾಶಿಯವರು ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯಕ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಕುಟುಂಬ ಮತ್ತು ಹಣಕಾಸಿನ ವಿಚಾರದಲ್ಲಿ ಗ್ರಹಣದ ಪ್ರಭಾವ ಕೊಂಚ ಆತಂಕ ತರಬಹುದು. ಹೆಚ್ಚಾಗುವ ಸಾಲದ ಬಾಧೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ, ಆದ್ದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿ ಕುಟುಂಬದಲ್ಲಿ ನಿರಂತರ ಜಗಳ ಅಥವಾ ಮನಸ್ತಾಪಗಳು ಎದುರಾಗಬಹುದು. ಇದರೊಂದಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿರುವುದರಿಂದ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು.

ಭಾರತದಲ್ಲಿ ಗ್ರಹಣ ಗೋಚರಿಸದ ಕಾರಣ ಭಯ ಪಡುವ ಅಗತ್ಯವಿಲ್ಲವಾದರೂ, ಜ್ಯೋತಿಷ್ಯೀಯವಾಗಿ ಈ ಮೂರು ರಾಶಿಯವರು ಮುನ್ನೆಚ್ಚರಿಕೆಯಾಗಿ ನಡೆದುಕೊಳ್ಳುವುದು ಉತ್ತಮ. ದಿನನಿತ್ಯ ಇಷ್ಟದೈವದ ಪ್ರಾರ್ಥನೆ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಗ್ರಹಣದ ನಕಾರಾತ್ಮಕ ಪ್ರಭಾವಗಳನ್ನು ಶಮನಗೊಳಿಸಿಕೊಳ್ಳಬಹುದು.

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:30 pm, Thu, 6 August 26

Source link

ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ! – Kannada News | Bengaluru Gold Loan Fraud: Bank Employee Cheats IndusInd Bank of Rs 1.53 Crore Using Fake Gold

ಬೆಂಗಳೂರು, ಆಗಸ್ಟ್ 6: ಬೆಂಗಳೂರಿನ ಪೀಣ್ಯದಲ್ಲಿರುವ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ಗೋಲ್ಡ್ ಲೋನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಉದ್ಯೋಗಿ ನಾಗೇಶ್, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 1.53 ಕೋಟಿ ರೂ. ಸಾಲ ಪಡೆದು ಬ್ಯಾಂಕ್‌ಗೆ ಮೋಸ ಮಾಡಿದ್ದಾನೆ. ಸುಮಾರು 15 ನಕಲಿ ಅಕೌಂಟ್‌ಗಳ ಮೂಲಕ ಈ ಕೃತ್ಯ ಎಸಗಿದ್ದಾನೆ. ಗೋಲ್ಡ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್, ಅಡಮಾನವಿಡುವ ಚಿನ್ನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ. ಇದನ್ನೇ ದುರುಪಯೋಗಪಡಿಸಿಕೊಂಡು, ನಕಲಿ ಚಿನ್ನದ ಸರಗಳಿಗೆ ಹಾಲ್‌ಮಾರ್ಕ್ ಇರುವ ಅಸಲಿ ಕೊಂಡಿಗಳನ್ನು ಮಾತ್ರ ಜೋಡಿಸಿ, ಅವುಗಳನ್ನು ಅಸಲಿ ಎಂದು ಪರಿಗಣಿಸಿ ಲೋನ್ ಮಂಜೂರು ಮಾಡಿದ್ದಾನೆ. ಬ್ಯಾಂಕ್‌ನ ಆಡಿಟಿಂಗ್ ವೇಳೆ ನಾಗೇಶ್‌ನ ವಂಚನೆ ಬಯಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದಾಗ, ನಾಗೇಶ್ ತನ್ನ ಸ್ನೇಹಿತನಾಗಿರುವ ಉದ್ಯಮಿ ಜಗದೀಶ್‌ಗೆ ಮೋಸ ಮಾಡುವ ಯೋಜನೆ ರೂಪಿಸಿದ್ದಾನೆ. ಕಡಿಮೆ ಬೆಲೆಗೆ ಹರಾಜಿಗೆ ಬಂದಿರುವ ಚಿನ್ನದಿಂದ 40 ಲಕ್ಷ ರೂ. ಲಾಭ ಗಳಿಸಬಹುದು ಎಂದು ಜಗದೀಶ್‌ರನ್ನು ನಂಬಿಸಿದ್ದಾನೆ. ನಾಗೇಶ್‌ ಮಾತಿಗೆ ಮರುಳಾದ ಜಗದೀಶ್ 1.53 ಕೋಟಿ ರೂ. ಹಣವನ್ನು ನಾಗೇಶ್‌ಗೆ ನೀಡಿದ್ದು, ಆ ಹಣವನ್ನು ಬ್ಯಾಂಕ್‌ಗೆ ಪಾವತಿಸಿ ನಾಗೇಶ್ ಎಸ್ಕೇಪ್ ಆಗಿದ್ದಾನೆ. ವಂಚನೆಗೊಳಗಾದ ಜಗದೀಶ್ ಈಗ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ನಾಗೇಶ್ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಲ ಮಾಲಿನ್ಯದ ಆತಂಕ: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗಿಲ್ಲ ಅವಕಾಶ – Kannada News | Eco Friendly Ganeshotsava: Karnataka Bans PoP Ganesha Idols in Gram Panchayats to Prevent Water Pollution

ಬೆಂಗಳೂರು, ಆಗಸ್ಟ್​​ 06: ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನಿರಾಕರಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಚಿವ ಈಶ್ವರ್​​ ಖಂಡ್ರೆ ನಿರ್ದೇಶನ ನೀಡಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು ಮತ್ತು ಸಾಗಾಟಕ್ಕೆ ತಡೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೆರವು ಪಡೆಯುವಂತೆಯೂ ಅವರು ತಿಳಿಸಿದ್ದಾರೆ. ಕೆರೆ, ನದಿಗಳಲ್ಲಿ ಪಿಒಪಿ ಮೂರ್ತಿ ವಿಸರ್ಜಿಸಿದರೆ ಜಲಚರಗಳಿಗೆ ಕಂಟಕವಾಗಲಿರುವ ಕಾರಣ ಜಲಮಾಲಿನ್ಯ ತಡೆ ಕಾಯ್ದೆ 1974ರ ಕಲಂ 33(ಎ)ರಡಿ ವಿಸರ್ಜನೆಗೆ ನಿಷೇಧ ವಿಧಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಒಪಿ ಬಳಕೆ ವಿರುದ್ಧ ಜಾಗೃತಿಗೂ ಸಚಿವರು ಸೂಚಿಸಿದ್ದು, 2023ರ ಸೆ.15ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಿಳಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಪಿಒಪಿ ಮೂರ್ತಿ ಸಾಗಾಟ, ಮಾರಾಟ ಬಂದ್ ಸಂಬಂಧ ಧಾರ್ಮಿಕ ಭಾವನೆಗೆ ನೋವಾಗದಂತೆ ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಗ್ರಾಮೀಣ ಭಾಗದ ಜಲ ಮೂಲಗಳು ಹಾಗೂ ಪರಿಸರ ರಕ್ಷಣೆಗೆ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿ: ಪ್ರಧಾನಿ ಮೋದಿ ಕರೆಗೂ ಇಲ್ಲ ಬೆಲೆ!

ಸಚಿವರ ನಿರ್ದೇಶನ ಪತ್ರದಲ್ಲಿ ಏನಿದೆ?

ಸೆಪ್ಟೆಂಬರ್ 13 ಮತ್ತು 14ರಂದು ನಾಡಿನಾದ್ಯಂತ ಗೌರಿ ಮತ್ತು ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾಲ್ಸಿಯಂ, ಸಟ್, ಹೆಮಿಹೈಡ್ರೆಟ್ ಯುಕ್ತ ಪುಡಿಯಿಂದ ಕೂಡಿದ ಪ್ಲಾಸ್ಟರ್ ಆಫ್ ಪ್ಯಾರಿಸ್ -ಪಿಓಪಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನಿಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುವುದರ ಜೊತೆಗೆ ಈ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ. ಈ ಪಿಓಪಿ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಜಲ ಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ)ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ. ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ, ರಾಜ್ಯ ಘನ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿರುತ್ತದೆ.

ಗಣೇಶ ಪರಿಸರ (ಮಣ್ಣಿನಿಂದ)ದಿಂದಲೇ ಹುಟ್ಟಿದ ದೇವರಾಗಿದ್ದು, ಪರಿಸರ ಮತ್ತು ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಅವಕಾಶ ನೀಡುವುದು ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯತಿಗಳ ಮಟ್ಟದಲ್ಲಿ ಮಾಡುವ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈಗಿನಿಂದಲೇ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆಯಲು ಹಾಗೂ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆಗೆ ಮಾತ್ರ ಅನುಮತಿ ನೀಡಲು ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಸಿನಿಮಾಕ್ಕೆ ಮೊದಲಿದ್ದ ಹೆಸರೇನು? ವಿಲನ್ ಪಾತ್ರದ ಹಿನ್ನೆಲೆ ಗೊತ್ತೆ? – Kannada News | Rajamouli planed to name Varanasi as Gen 63 why he changed it

ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ಸಿನಿಮಾ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾವನ್ನು ಭಾರತ, ಆಫ್ರಿಕಾ, ಅಂಟಾರ್ಕಿಟಾ, ರೋಮ್, ಪ್ಯಾರಿಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂದೆಂದೂ ನೋಡದ ರೀತಿಯ ಆಕ್ಷನ್ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಲಾಗಿದೆಯಂತೆ. ಸಿನಿಮಾದ ಹೆಸರನ್ನು ‘ವಾರಣಾಸಿ’ ಎಂದು ಕಳೆದ ವರ್ಷ ರಾಜಮೌಳಿ ಘೋಷಣೆ ಮಾಡಿದರು. ಆದರೆ ಈ ಸಿನಿಮಾಕ್ಕೆ ಮೊದಲು ಇಡಬೇಕು ಎಂದುಕೊಂಡಿದ್ದ ಹೆಸರು ಬೇರೆಯದ್ದೇ ಆಗಿತ್ತು. ಆದರೆ ರಾಜಮೌಳಿ ಅದನ್ನು ಬದಲಾವಣೆ ಮಾಡಿದರಂತೆ.

‘ವಾರಣಾಸಿ’ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡುವ ಆಲೋಚನೆಯನ್ನು ರಾಜಮೌಳಿ ಮಾಡಿದ್ದರಂತೆ. ಇದಕ್ಕೆ ಕಾರಣವೂ ಇದೆ. ಈ ಸಿನಿಮಾನಲ್ಲಿ ರಾಮಾಯಣ ಕತೆ ಬಹಳ ಪ್ರಮುಖವಾದ ಪಾತ್ರ ವಹಿಸಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೈಟಲ್ ಟೀಸರ್​​ನಲ್ಲಿ ಹನುಮಂತನ ಬೃಹತ್ ಮೂರ್ತಿಯನ್ನು ಸಹ ತೋರಿಸಲಾಗಿದೆ. ಈ ಸಿನಿಮಾದ ಕತೆಗೂ ರಾಮಾಯಣದ ಕತೆಗೂ ಲಿಂಕ್ ಇದೆಯಂತೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ನಿರ್ಧಾರ ಮಾಡಿದ್ದರಂತೆ ರಾಜಮೌಳಿ.

‘ಜೆನ್ 63’ ಎಂದರೆ 63ನೇ ಜನರೇಷನ್ ಎಂದರ್ಥ. ಅಂದರೆ ಸಿನಿಮಾನಲ್ಲಿ ಮಹೇಶ್ ಬಾಬು, ಶ್ರೀರಾಮನ ವಂಶಸ್ಥರಾಗಿದ್ದು, ಶ್ರೀರಾಮನ ಬಳಿಕ 63ನೇ ವಂಶಸ್ಥನಾಗಿರುತ್ತಾರೆ. ಹಾಗಾಗಿ ಸಿನಿಮಾಕ್ಕೆ ‘ಜೆನ್ 63’ ಎಂದು ಹೆಸರಿಡಲು ರಾಜಮೌಳಿ ಮುಂದಾಗಿದ್ದರಂತೆ. ಅದು ಮಾತ್ರವೇ ಅಲ್ಲದೆ, ಸಿನಿಮಾದ ವಿಲನ್ ಆಗಿರುವ ಪೃಥ್ವಿರಾಜ್ ಸುಕುಮಾರ್ ಹೆಸರು ಸಹ ‘ಕುಂಭ’ ಎಂದಿದೆ. ವಿಲನ್, ಕುಂಭಕರ್ಣನ ವಂಶಸ್ಥನಾಗಿರಲಿದ್ದಾನೆ ಎನ್ನಲಾಗುತ್ತಿದೆ. ರಾಮಾಯಣ ಕತೆಯಲ್ಲಿ ಕುಂಭಕರ್ಣನನ್ನು ರಾಮ ಕೊಲ್ಲುತ್ತಾನೆ, ಕೊಲ್ಲುವ ಮುಂಚೆ ಕುಂಭಕರ್ಣನ ಕೈಗಳು, ಕಾಲುಗಳನ್ನು ಕತ್ತರಿಸಿ ಆ ಬಳಿಕ ತಲೆ ಕತ್ತರಿಸುತ್ತಾನೆ.

ಇದನ್ನೂ ಓದಿ:‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಈಗ ‘ವಾರಣಾಸಿ’ ಸಿನಿಮಾದ ವಿಲನ್ ಕುಂಭನಿಗೂ ಕೈಗಳು, ಕಾಲುಗಳು ಇಲ್ಲ. ಆದರೆ ತಮ್ಮ ಬುದ್ಧಿಶಕ್ತಿಯಿಂದ ಆತ ನಾಯಕನನ್ನು ಎದುರಿಸುತ್ತಾನೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಇದ್ದು, ಅವರ ಪಾತ್ರದ ಹೆಸರು ಮಂದಾಕಿನಿ.

‘ವಾರಣಾಸಿ’ ಸಿನಿಮಾವು ಆಕ್ಷನ್ ಅಡ್ವೇಂಚರ್ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಕತೆ ‘ವಾರಣಾಸಿ’ ಯಲ್ಲಿ ಪ್ರಾರಂಭವಾಗಿ ಪ್ಯಾರಿಸ್, ಆಫ್ರಿಕಾ, ಅಂಟಾರ್ಟಿಕಾ, ರೋಮ್ ಇನ್ನೂ ಕೆಲವು ದೇಶಗಳನ್ನು ಸುತ್ತಿಕೊಂಡು ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಸಿನಿಮಾದ 80% ಭಾಗ ಚಿತ್ರೀಕರಣ ಮುಗಿದಿದ್ದು, ಕೆಲವು ಸಣ್ಣ-ಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಆ. 17ರವರೆಗೆ ಲಾಲ್‌ಬಾಗ್ ಫ್ಲವರ್ ಶೋ: ಶ್ರವಣಬೆಳಗೊಳ ಬಾಹುಬಲಿ, ತಲಕಾಡು ದೇಗುಲಗಳ ಹೂವಿನ ಕಲಾಕೃತಿ ರೂಪಿಸಿದ ತೋಟಗಾರಿಕೆ ಇಲಾಖೆ – Kannada News | Bengaluru Lalbagh Flower Show: Independence Day, Attractions, Online Tickets

ಬೆಂಗಳೂರು,ಆ.6: ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಇಂದಿನಿಂದ (ಆಗಸ್ಟ್ 6) ಅಧಿಕೃತ ಚಾಲನೆ ಸಿಕ್ಕಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ 12 ದಿನಗಳ ಹೂಗಳ ಹಬ್ಬವು ಆಗಸ್ಟ್ 17ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವು ‘ಗಂಗರ ಸಾಮ್ರಾಜ್ಯದ 1,000 ವರ್ಷಗಳ ವೈಭವ’ ಎಂಬ ವಿಶೇಷ ವಸ್ತುವಿಷಯದ (Theme) ಆಧಾರದ ಮೇಲೆ ಸಿದ್ಧಗೊಂಡಿದೆ.

ಲಾಲ್‌ಬಾಗ್‌ನ ಪ್ರಸಿದ್ಧ ಗ್ಲಾಸ್ ಹೌಸ್‌ನಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಬೃಹತ್ ವಿಗ್ರಹ ಹಾಗೂ ತಲಕಾಡಿನ ಐತಿಹಾಸಿಕ ದೇವಾಲಯಗಳ ಆಕರ್ಷಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. 2.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ.

ಲಾಲ್‌ಬಾಗ್ ಕೆರೆಯ ಬಳಿ ನಯನಮನೋಹರ ಕೃತಕ ಜಲಪಾತ ಮತ್ತು ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿರುವುದರಿಂದ 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ, ಉತ್ಪಾದಕತೆ ಭಾರೀ ಕುಸಿತ! ಕಾರಣವೇನು?

ದರ್ಶನದ ಸಮಯ, ಟಿಕೆಟ್ ದರ ಮತ್ತು ಸೌಲಭ್ಯಗಳು:

ವಿವರಗಳು ಮಾಹಿತಿ
ದಿನಾಂಕ ಆಗಸ್ಟ್ 6 ರಿಂದ ಆಗಸ್ಟ್ 17, 2026 (12 ದಿನಗಳು)
ಸಮಯ ಪ್ರತಿದಿನ ಬೆಳಿಗ್ಗೆ 7:00 ರಿಂದ ಸಂಜೆ 7:00 ರವರೆಗೆ
ಸಾಮಾನ್ಯ ದಿನಗಳಲ್ಲಿ (Weekdays) ಟಿಕೆಟ್ ಮುಖಬೆಲೆ: ₹80 (ಹಿರಿಯರು/ಸಾಮಾನ್ಯರಿಗೆ)
ವಾರಾಂತ್ಯ ಮತ್ತು ರಜಾ ದಿನಗಳಲ್ಲಿ (Weekends) ಮುಖಬೆಲೆ: ₹100
ಮಕ್ಕಳ ಟಿಕೆಟ್ ದರ ₹30 (ಎಲ್ಲಾ ದಿನಗಳಲ್ಲಿ)
ಉಚಿತ ಪ್ರವೇಶ ಸಮವಸ್ತ್ರಧಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಕ್ಯಾಮೆರಾ ಮತ್ತು ಸುರಕ್ಷತಾ ಮಾರ್ಗಸೂಚಿಗಳು:

ಮೊಬೈಲ್ ಕ್ಯಾಮೆರಾ: ಪ್ರವಾಸಿಗರು ಮೊಬೈಲ್ ಫೋನ್ ಮೂಲಕ ಉಚಿತವಾಗಿ ಫೋಟೋ ಹಾಗೂ ವೀಡಿಯೊ ಚಿತ್ರೀಕರಣ ಮಾಡಬಹುದು.

ಕ್ಯಾಮೆರಾ/ಡಿಎಸ್‌ಎಲ್‌ಆರ್ ಬಳಕೆಗೆ: ವೃತ್ತಿಪರ ಕ್ಯಾಮೆರಾ (DSLR/Prof. Camera) ತರಲು ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿಯಿಂದ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಸೌಲಭ್ಯಗಳು: ಜನಸಂದಣಿ ನಿಯಂತ್ರಿಸಲು ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ, ಕೆರೆ ಬಳಿ ಕೃತಕ ಜಲಪಾತ, ಆಕರ್ಷಕ ಸೆಲ್ಫಿ ಪಾಯಿಂಟ್‌ಗಳು, ಸಿಸಿಟಿವಿ ಕಣ್ಗಾವಲು ಹಾಗೂ ಹೆಚ್ಚಿನ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವರದಿ: ಅರುಣ್ ಮೆಟ್ರೋ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು – Kannada News | Tanush Shivanna Explain What Exactly Darshan Said about Movie

ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ ಜುಲೈ 7ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ದರ್ಶನ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಇದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೇಸ್ ಹಾಕಿದ್ದರು ಆ ಬಳಿಕ ಸಿನಿಮಾ ರಿಲೀಸ್ ಮಾಡಲು ಅನುವು ಮಾಡಿಕೊಡಲಾಯಿತು. ಈ ಬಗ್ಗೆ ಮಾತನಾಡಿರೋ ಧನುಷ್ ಶಿವಣ್ಣ ‘ದರ್ಶನ್ ಅವರೇ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದರು’ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಮೇಲೆ ಮುನಿಸುಕೊಂಡ ಅಹಿಂದ ಶಾಸಕರು – Kannada News | Karnataka Cabinet Row: Ahinda MLAs Upset with Siddaramaiah, HC Mahadevappa Rushes to Delhi Amid Ministerial Snub

ಬೆಂಗಳೂರು, ಆಗಸ್ಟ್​​ 06: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ಸಿಗದ ಕಾರಣ ಅಹಿಂದ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಅಹಿಂದ ಶಾಸಕರಿಗಾಗಿ ಪ್ರಬಲವಾಗಿ ವಾದ ಮಂಡಿಸಿಲ್ಲ. ಕೇವಲ ಕೆಲವರ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಿದ್ದಾರೆ ಎಂಬ ಮಾಹಿತಿ ಆಪ್ತರಿಗೆ ತಲುಪಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಅಹಿಂದ ಶಾಸಕರು ಮುನಿಸಿಕೊಂಡಿದ್ದಾರೆ. ಈ ನಡುವೆ ಮಹದೇವಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದು,ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ಗೊಂದಲಗಳು ಹೆಚ್ಚಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಯಾಲಿಟಿ ಶೋಗಾಗಿ ವಿಚ್ಛೇದನದ ಬಗ್ಗೆ ಸುಳ್ಳು ಹೇಳಿದ್ರಾ ಆಕಾಂಕ್ಷಾ? – Kannada News | Lock Upp 2: Akanksha Chamola Denies Divorce Publicity Stunt Allegations Involving Gaurav Khanna

‘ಲಾಕ್ ಅಪ್ 2’ ರಿಯಾಲಿಟಿ ಶೋನಿಂದ ಹೊರಬಿದ್ದ ನಂತರ ನಟಿ ಆಕಾಂಕ್ಷಾ ಚಮೋಲಾ ತಮ್ಮ ವಿವಾಹ ವಿಚ್ಛೇದನದ ಕುರಿತು ಮತ್ತೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಶೋನ ಟಿಆರ್‌ಪಿ ಹೆಚ್ಚಿಸಲು ವಿಚ್ಛೇದನದ ವಿಚಾರವನ್ನು ಬಳಸಿಕೊಂಡರು ಎಂಬ ಆರೋಪಕ್ಕೆ ಅವರು ಖಡಕ್ ಉತ್ತರ ನೀಡಿದ್ದಾರೆ. ಟಿಆರ್‌ಪಿಗಾಗಿ ಯಾವುದೇ ಮಹಿಳೆ ತಮ್ಮ ವೈಯಕ್ತಿಕ ಜೀವನದ ಇಂತಹ ಸೂಕ್ಷ್ಮ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಟಿಆರ್‌ಪಿ ಆರೋಪಕ್ಕೆ ಖಡಕ್ ಉತ್ತರ

‘ರಿಯಾಲಿಟಿ ಶೋನಲ್ಲಿ ಟಿಆರ್‌ಪಿ ಪಡೆಯಲು ಯಾವ ಹೆಣ್ಣುಮಗಳೂ ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಹೇಳುವುದಿಲ್ಲ. ಇಂತಹ ಮಾತುಗಳನ್ನು ಆಡುವವರು ನಮ್ಮ ಮನೆಗೆ ಬರಬಹುದು. ನನ್ನ ಲೀಗಲ್ ಟೀಮ್ ಜೊತೆ ನೇರವಾಗಿ ಮಾತನಾಡಬಹುದು’ ಎಂದು ಆಕಾಂಕ್ಷಾ ತಿರುಗೇಟು ನೀಡಿದ್ದಾರೆ. ನಾವು ನಟರಾಗಿದ್ದೇವೆ ಎಂದ ಮಾತ್ರಕ್ಕೆ ಮಾಡುವ ಪ್ರತಿಯೊಂದನ್ನೂ ಪಬ್ಲಿಸಿಟಿಗಾಗಿ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅಂತಿಮ ಹಂತದಲ್ಲಿ ಕಾನೂನು ಪ್ರಕ್ರಿಯೆ

ಗೌರವ್ ಖನ್ನಾ ಮತ್ತು ತಮ್ಮ ನಡುವಿನ ವಿಚ್ಛೇದನದ ಪ್ರಕ್ರಿಯೆ ಬಹಳ ದಿನಗಳಿಂದ ನಡೆಯುತ್ತಿದೆ. ‘ಲಾಕ್ ಅಪ್’ ಶೋಗೆ ಹೋಗುವ ಮುನ್ನವೇ ಲೀಗಲ್ ಟೀಮ್ ಈ ಬಗ್ಗೆ ವ್ಯವಹರಿಸುತ್ತಿತ್ತು. ಈಗ ಕಾನೂನುಬದ್ಧ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡಿವೆ. ಪ್ರಸ್ತುತ ಕೇವಲ ಡಾಕ್ಯುಮೆಂಟ್‌ಗಳಿಗೆ ಸಹಿ ಹಾಕುವುದು ಮಾತ್ರ ಬಾಕಿ ಇದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ?

ವಿಚ್ಛೇದನಕ್ಕೆ ಸೂಕ್ತ ಕಾರಣ ರಹಸ್ಯ

ನಟ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ 2016ರ ನವೆಂಬರ್ 24ರಂದು ವಿವಾಹವಾಗಿದ್ದರು. ಕೆಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಈಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಗೌರವ್ ಮಗುವನ್ನು ಬಯಸಿದ್ದರು, ಆದರೆ ತಮಗೆ ಮಗು ಬೇಡವಾಗಿತ್ತು ಎಂದು ಆಕಾಂಕ್ಷಾ ಹಿಂದೆ ಹೇಳಿದ್ದರು. ಆದರೆ ಈ ವಿಚ್ಛೇದನಕ್ಕೆ ನಿಖರವಾದ ಕಾರಣವನ್ನು ನಟಿ ಎಲ್ಲೂ ಬಹಿರಂಗಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:31 am, Thu, 6 August 26

Source link

Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು – Kannada News | Bombay High Court Overturns Acquittal, Holds Tarun Tejpal Guilty in 2013 Case

ಪಣಜಿ, ಆಗಸ್ಟ್ 06: ತೆಹಲ್ಕಾ  ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ (Tarun Tejpal) ವಿರುದ್ಧದ 2013ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌(High Court)ನ ಗೋವಾ ಪೀಠವು ಮಹತ್ವದ ಹಾಗೂ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 2021ರಲ್ಲಿ ಗೋವಾ ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ಬದಿಗೊತ್ತಿರುವ ಹೈಕೋರ್ಟ್, ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ಘೋಷಿಸಿದೆ. ನ್ಯಾಯಮೂರ್ತಿ ನೀಲಾ ಗೋಖಲೆ ಮತ್ತು ನ್ಯಾಯಮೂರ್ತಿ ಅಮಿತ್ ಜಮ್ಸಂದೇಕರ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ತೇಜ್‌ಪಾಲ್ ಪರ ಹಾಜರಿದ್ದ ಹಿರಿಯ ವಕೀಲ ಅಬಾದ್ ಪೋಂಡಾ, ಆರೋಪಿಗೆ ಈಗ 62 ವರ್ಷ ವಯಸ್ಸಾಗಿದೆ. ಇದು ಅವರ ಮೊದಲ ಅಪರಾಧ. ಈಗಾಗಲೇ 6 ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದು, ಕನಿಷ್ಠ ಶಿಕ್ಷೆ ವಿಧಿಸುವ ಮೂಲಕ ಸೌಮ್ಯತೆ ತೋರಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು. ನ್ಯಾಯಾಲಯಕ್ಕೆ ಸ್ವತಃ ಹೇಳಿಕೆ ನೀಡಿದ ತೇಜ್‌ಪಾಲ್, ಕಳೆದ 30 ವರ್ಷಗಳಿಂದ ನಾವು ಸತ್ಯ ಬಹಿರಂಗಪಡಿಸುವ
ಕೆಲಸ ಮಾಡಿದ್ದೇವೆ. ನಾನು ಇಬ್ಬರು ಹೆಣ್ಣುಮಕ್ಕಳ ತಂದೆ, ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.

ಕೇಂದ್ರ ಮತ್ತು ಗೋವಾ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಯಲ್ಲಿ ಯಾವುದೇ ಪಶ್ಚಾತ್ತಾಪ ಕಾಣುತ್ತಿಲ್ಲ. ಆತನ ವರ್ತನೆ ಅತ್ಯಂತ ನಿರ್ಲಜ್ಜತನದಿಂದ ಕೂಡಿದ್ದು, ಆತನಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ಕಟ್ಟುನಿಟ್ಟಾಗಿ ವಾದಿಸಿದರು.

ಮತ್ತಷ್ಟು ಓದಿ:

ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

2013ರ ನವೆಂಬರ್‌ನಲ್ಲಿ ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಥಿಂಕ್ ಫೆಸ್ಟ್​ ಕಾರ್ಯಕ್ರಮದ ವೇಳೆ, ತಮ್ಮ ಉದ್ಯೋಗಿಯಾಗಿದ್ದ ಯುವ ಪತ್ರಕರ್ತೆಯ ಮೇಲೆ ಹೋಟೆಲ್ ಲಿಫ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತೇಜ್‌ಪಾಲ್ ಮೇಲಿತ್ತು.

2021 ರಲ್ಲಿ ಗೋವಾ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು “ರೇಪ್ ಸಂತ್ರಸ್ತರ ವರ್ತನೆಯ ಕೈಪಿಡಿಯಂತಿದೆ ಎಂದು ಟೀಕಿಸಿದ್ದ ಸರ್ಕಾರ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಹೈಕೋರ್ಟ್‌ನ ದೋಷಾರೋಪಣೆಯ ತೀರ್ಪಿನ ನಂತರ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟಕರವಾಗಿದ್ದು, ತೇಜ್‌ಪಾಲ್ ಪರ ವಕೀಲರು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. 2012ರ ನಿರ್ಭಯಾ ದುರಂತದ ನಂತರ ಭಾರತದಲ್ಲಿ ಜಾರಿಗೆ ತರಲಾದ ಕಠಿಣ ಲೈಂಗಿಕ ಅಪರಾಧ ತಡೆ ಕಾನೂನುಗಳ (Criminal Law Amendment Act 2013) ಅಡಿಯಲ್ಲಿ ತನಿಖೆಗೊಳಪಟ್ಟ ಮೊದಲ ಉನ್ನತ ಮಟ್ಟದ ಪ್ರಕರಣ ಇದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version