ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ – Kannada News | CM D.K. Shivakumar Inaugurates 220th Lalbagh Flower Show Featuring Ganga Empire Theme

ಬೆಂಗಳೂರು, ಆಗಸ್ಟ್​​ 06: ಇಂದಿನಿಂದ ಆಗಸ್ಟ್ 17ರವರೆಗೆ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ಬಾರಿ ಗಂಗರ ವೈಭವ ಸಾರುವ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಕಾರ್ಕ್ರಮದಲ್ಲಿ ಸಿಎಂಗೆ ಜೆಡಿಎಸ್​ ಎಂಎಲ್​ಸಿ ಶರವಣ ಸಾಥ್​ ನೀಡಿದ್ದಾರೆ. ಫಲಪುಷ್ಪ ಉದ್ಘಾಟನೆ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾಡಿನ ಎಲ್ಲ ಜನತೆಗೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಫಲಪುಷ್ಪ ಪ್ರದರ್ಶನ ನೋಡಬೇಕು. ವಿಶೇಷವಾಗಿ ಹೆಣ್ಣುಮಕ್ಕಳು, ಮಕ್ಕಳು ಎಲ್ಲರೂ ಬರಬೇಕು. ಈ ಅವಕಾಶ ಕಳೆದುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

AIIMS NORCET 2026: 2,218 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ – Kannada News | AIIMS NORCET 2026: 2218 Nursing Officer Posts – Apply Now for Rs 85K Salary!

ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ B.Sc. ನರ್ಸಿಂಗ್ ಮತ್ತು GNM ಅಭ್ಯರ್ಥಿಗಳಿಗೆ ಸುವರ್ಣಾವಕಾಶ ತಂದಿದೆ. ದೇಶಾದ್ಯಂತ ಇರುವ ವಿವಿಧ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 2,218 ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳನ್ನು ‘ನರ್ಸಿಂಗ್ ಆಫೀಸರ್ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ’ (NORCET) ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ 44,900 ರೂ. ಸಿಗಲಿದ್ದು, DA, HRA ಹಾಗೂ ಇತರೆ ಭತ್ಯೆಗಳು ಸೇರಿ ಮೊದಲ ತಿಂಗಳಿನಿಂದಲೇ 85,000ರೂ. ಕ್ಕೂ ಹೆಚ್ಚು ವೇತನ ದೊರೆಯಲಿದೆ. ಈ ಒಟ್ಟು ಹುದ್ದೆಗಳಲ್ಲಿ ಶೇಕಡಾ 80 ರಷ್ಟು ಮಹಿಳೆಯರಿಗೆ ಹಾಗೂ ಶೇಕಡಾ 20 ರಷ್ಟು ಪುರುಷರಿಗೆ ಮೀಸಲಿಡಲಾಗಿದೆ.

ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು B.Sc. ನರ್ಸಿಂಗ್, ಪೋಸ್ಟ್ ಬೇಸಿಕ್ B.Sc. ನರ್ಸಿಂಗ್ ಅಥವಾ ಕನಿಷ್ಠ 50 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವದೊಂದಿಗೆ GNM (General Nursing and Midwifery) ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು. ವಯೋಮಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ ಮತ್ತು ಆನ್‌ಲೈನ್ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ದಿನಾಂಕ 13 ಆಗಸ್ಟ್ ಸಂಜೆ 5:00 ಗಂಟೆಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 3,000ರೂ. ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳು 2,400ರೂ. ಪಾವತಿಸಬೇಕಾಗುತ್ತದೆ. ದಿವ್ಯಾಂಗ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಎರಡು ಹಂತಗಳ ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಗಳ ಮೂಲಕ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:

  • ಹಂತ-1 (ಪೂರ್ವಭಾವಿ ಪರೀಕ್ಷೆ): ಪ್ರಿಲಿಮ್ಸ್ ಪರೀಕ್ಷೆಯು ಒಟ್ಟು 100 ಅಂಕಗಳಿಗೆ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 80 ವಿಷಯಾಧಾರಿತ ಪ್ರಶ್ನೆಗಳು ಹಾಗೂ 20 ಸಾಮಾನ್ಯ ಜ್ಞಾನ ಮತ್ತು ಯೋಗ್ಯತಾ ಆಧಾರಿತ ಪ್ರಶ್ನೆಗಳಿರುತ್ತವೆ. 90 ನಿಮಿಷಗಳ ಕಾಲಾವಧಿಯ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳ ಋಣಾತ್ಮಕ (Negative) ಕಡಿತವಿರುತ್ತದೆ. ಈ ಹಂತವು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಅಂತಿಮ ಮೆರಿಟ್ ಪಟ್ಟಿಗೆ ಈ ಅಂಕಗಳನ್ನು ಪರಿಗಣಿಸುವುದಿಲ್ಲ.
  • ಹಂತ-2 (ಮುಖ್ಯ ಪರೀಕ್ಷೆ): ಪ್ರಿಲಿಮ್ಸ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಇರುತ್ತದೆ. ಇದು 3 ಗಂಟೆಗಳ ಅವಧಿಯ ಪರೀಕ್ಷೆಯಾಗಿದ್ದು, ಒಟ್ಟು 160 ಪ್ರಶ್ನೆಗಳಿಗೆ 160 ಅಂಕಗಳನ್ನು ಹೊಂದಿರುತ್ತದೆ. ಇಲ್ಲೂ ಸಹ ಪ್ರತಿ ತಪ್ಪು ಉತ್ತರಕ್ಕೆ 1/3 ನೆಗೆಟಿವ್ ಅಂಕ ಕಡಿತವಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಮೀಸಲಾತಿ ನಿಯಮಗಳು ಮತ್ತು ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಆಗಸ್ಟ್ 2026 (ಸಂಜೆ 5:00 ಗಂಟೆಯವರೆಗೆ)
  • ಪ್ರಿಲಿಮ್ಸ್ (ಹಂತ-1) ಪರೀಕ್ಷಾ ದಿನಾಂಕ: 12 ಸೆಪ್ಟೆಂಬರ್ 2026
  • ಮುಖ್ಯ ಪರೀಕ್ಷೆ (ಹಂತ-2) ದಿನಾಂಕ: 30 ಸೆಪ್ಟೆಂಬರ್ 2026

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಪ್ರದೋಷ್ ಮಾಫಿ ಸಾಕ್ಷಿ; ಕೋರ್ಟ್​​ನಲ್ಲಿ ನಡೆದ ಪ್ರಕರಣದ ವಿಚಾರಣೆ ಇಲ್ಲಿದೆ – Kannada News | Renukaswamy Murder Case: Intense Arguments in Court Over Accused Pradosh Becoming Approver

ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿವೆ. ಈ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಹಾಗೂ ನಟ ದರ್ಶನ್ (Darshan) ಪರ ಹಿರಿಯ ವಕೀಲ ಹಷ್ಮತ್ ಪಾಷಾ ತಮ್ಮ ಸುದೀರ್ಘ ವಾದ ಮಂಡಿಸಿದರು. ಅದರ ವಿವರ ಇಲ್ಲಿದೆ.

ಪ್ರಾಸಿಕ್ಯೂಷನ್ ಪರ ಎಸ್​​ಪಿಪಿ ಪ್ರಸನ್ನ ಕುಮಾರ್ ವಾದ

ಸಿಆರ್‌ಪಿಸಿ ಸೆಕ್ಷನ್ 306 ಮತ್ತು 307ರ ಅಡಿಯಲ್ಲಿ ಮಾಫಿ ಸಾಕ್ಷಿ ಮಾಡಲು ಅವಕಾಶವಿದೆ ಎಂದು ಎಸ್​​ಪಿಪಿ ಪ್ರಸನ್ನ ಕುಮಾರ್ ವಾದಿಸಿದರು. ಕ್ಷಮಾದಾನ ನೀಡುವಾಗ ನ್ಯಾಯಾಧೀಶರು ನಿರ್ದಿಷ್ಟ ಕಾರಣಗಳನ್ನು ನಮೂದಿಸಬೇಕಾಗುತ್ತದೆ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಮಾಫಿ ಸಾಕ್ಷಿಯಾಗಬಯಸುವ ಆರೋಪಿಯು ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ವಿನಯ್ ಕುಲಕರ್ಣಿ ಪ್ರಕರಣದ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಇತರೆ ಸಹ ಆರೋಪಿಗಳ ವಾದವನ್ನು ಕೇಳುವ ಅಗತ್ಯವಿಲ್ಲ ಹಾಗೂ ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದರು.

ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ

ಎಸ್​​ಪಿಪಿ ವಾದಕ್ಕೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮತ್ತು ವಾದ ಮಂಡಿಸುವ ಮೂಲಭೂತ ಹಕ್ಕು ಆರೋಪಿಗೆ ಇದೆ ಎಂದು ಪ್ರತಿಪಾದಿಸಿದರು. ಮಾಫಿ ಸಾಕ್ಷಿ ಕೋರಿದ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ದರ್ಶನ್​​ಗೆ ಶಾಕ್ ಮೇಲೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ

ಪ್ರದೋಷ್ ಮೇಲಿರುವ ಗಂಭೀರ ಆರೋಪಗಳು

ಪ್ರದೋಷ್ ಪ್ರಕರಣದ ಮುಖ್ಯ ಸಂಚುಕೋರರಲ್ಲಿ ಒಬ್ಬನಾಗಿದ್ದು, ಕೊಲೆ ಮತ್ತು ಸಾಕ್ಷ್ಯ ನಾಶದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾನೆ. ಸಾಕ್ಷ್ಯ ಮುಚ್ಚಿಹಾಕಲು ದರ್ಶನ್ ಕಡೆಯಿಂದ ₹30 ಲಕ್ಷ ಹಣ ಸ್ವೀಕರಿಸಿದ್ದ ಹಾಗೂ ಬೇರೆ ವ್ಯಕ್ತಿಗಳನ್ನು ಶರಣಾಗಿಸಲು ಸೂತ್ರಧಾರಿಯಾಗಿದ್ದ ಎಂಬ ಆರೋಪವಿದೆ. ಘಟನಾ ಸ್ಥಳದಲ್ಲಿ ಹಾಜರಿದ್ದು ರೇಣುಕಾಸ್ವಾಮಿ ಸಾವಿನ ವಿಚಾರವನ್ನು ದರ್ಶನ್‌ಗೆ ತಿಳಿಸಿದ್ದಲ್ಲದೆ, ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡ ಅವರನ್ನು ಕರೆತಂದಿದ್ದ ಆರೋಪವೂ ಆತನ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿ-ಕಾಂಗ್ರೆಸ್​​ ನಡುವೆ ‘ಹಿಂದೂ ರಾಷ್ಟ್ರ’ ಸಮರ: ಸಚಿವ ಯಂತೀಂದ್ರ ಹೇಳಿಕೆ ಬೆನ್ನಲ್ಲೇ ಹೊತ್ತಿಕೊಂಡ ಕಿಡಿ – Kannada News | Political Slugfest in Karnataka: BJP Slams Yathindra Siddaramaiah Over ‘Anti Hindu Rashtra’ Remarks

ಬಿಜೆಪಿ-ಕಾಂಗ್ರೆಸ್​​ ನಡುವೆ ಹಿಂದೂ ರಾಷ್ಟ್ರ ಸಮರImage Credit source: Tv9 Kannada

ಮೈಸೂರು, ಆಗಸ್ಟ್​​ 06: ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ. ಹೀಗಾಗಿ ಹಿಂದೂ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸಂವಿಧಾನನಾತ್ಮಕವಾಗಿ ನನ್ನ ಮಾತು ಹೇಳಿದ್ದೇನೆ. ಹಿಂದೂ ರಾಷ್ಟ್ರ ಆಗಬಾರದು ಎಂಬ ತತ್ನ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಸಚಿವರು ಹೇಳಿರೋದೀಗ ವಿಪಕ್ಷ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ವಿಧಾನ ಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​, ಅವರಿಗೆ ಹಿಂದೂ ಧರ್ಮ ಅಂದ್ರೆ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?

ಆರ್​​. ಅಶೋಕ್​​ ಹೇಳಿದ್ದೇನು?

ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ಕಾಂಗ್ರೆಸಿಗರು ಬೆಂಬಲ ಕೊಡ್ತಾರೆ. ವಿಧಾನಸೌದದಲ್ಲಿ ಪಾಕಿಸ್ತಾನ ಬಗ್ಗೆ ಮಾತನಾಡುವವರಿಗೆ ರಾಜ್ಯ ಸಭೆ ಸ್ಥಾನ ಕೊಟ್ಟು ಗೌರವಿಸ್ತಾರೆ. ಇಂಥವರಿಂದ ಹಿಂದುತ್ವ ವಿಚಾರ ಕಲಿಯುವ ಅವಶ್ಯಕತೆ ಇಲ್ಲ. ಅವರು ಪಾಕಿಸ್ತಾನ, ಬಾಂಗ್ಲಾದೇಶದ ಬಗ್ಗೆ ಮಾತನಾಡಲಿ. ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳು ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ. ಹೀಗಾಗಿ ಇವರು ಹಿಂದುತ್ವದ ಬಗ್ಗೆ ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ. ಮೊದಲು ಅಂಬೇಡ್ಕರ್ ಅವರ ವಾದದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ ಎಂದು ಅಶೋಕ್​​ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹೈಕಮಾಂಡ್​​ಗೆ ಕೊಟ್ಟ ಪಟ್ಟಿಯಲ್ಲಿ ಹೆಚ್​ಸಿ ಮಹದೇವಪ್ಪ ಹೆಸರಿದ್ದರೂ ಸಚಿವ ಸ್ಥಾನ ತಪ್ಪಿದೆ: ಯತೀಂದ್ರ

ನಾವೆಲ್ಲ ಹಿಂದೂಗಳು ಎಂದ ಸಚಿವ ನಾಗೇಂದ್ರ!

ಮತ್ತೊಂದೆಡೆ ತಮ್ಮದೇ ಸಚಿವ ಸಂಪುಟ ಸಹೋದ್ಯೋಗಿ ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿ. ನಾಗೇಂದ್ರ, ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವೆಲ್ಲ ಹಿಂದೂಗಳು, ಬಿಜೆಪಿಯವ್ರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಸಿಎಂಗಿಂತಲೂ ಹಿಂದುತ್ವವಾದಿ ಯಾರಾದ್ರೂ ಇದ್ದಾರಾ? ಅವರು ಮಾಡಿಸುವಷ್ಟು ಪೂಜೆ, ಪುನಸ್ಕಾರ, ಹೋಮ ಯಾರೂ ಮಾಡಿಸಲ್ಲ. ಹಿಂದೂ ಅನ್ನೋದು ನಮ್ಮ ಸಂಪ್ರದಾಯ. ಜಾತಿ ವ್ಯವಸ್ಥೆ ಹೋಗಬೇಕು ಅನ್ನೋದು ನಿಜ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:23 pm, Thu, 6 August 26

Source link

Video: ಮುಗಿಲೆತ್ತರದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಕಂಡು ಪುಟ್ಟ ಮಕ್ಕಳಂತೆ ಕುಣಿದಾಡಿದ ವ್ಯಕ್ತಿ – Kannada News | A man came running as soon as he heard the sound of a helicopter

ವಯಸ್ಸು ಆದ್ರೂ ಮನಸ್ಸು ಮಗುವಿನಂತೆಯೇ ಇರುತ್ತದೆ. ಆದರೆ ಕೆಲವೊಮ್ಮೆ ತಮಗೆ ಅರಿಯದೇನೇ ನಾವು ಮಕ್ಕಳಾಗಿ (children) ಬಿಡುತ್ತೇವೆ. ಸಣ್ಣ ಸಣ್ಣ ವಿಷ್ಯಗಳನ್ನು ಮಕ್ಕಳಂತೆ ಸಂಭ್ರಮಿಸುತ್ತೇವೆ. ಇದೀಗ ವ್ಯಕ್ತಿಯೊಬ್ಬರು ಮುಗಿಲೆತ್ತರದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಕಂಡು ಪುಟ್ಟ ಮಕ್ಕಳಂತೆ ಕುಣಿದಾಡಿದ್ದಾರೆ. ಬೈ ಬೈ ಎಂದು ಹೇಳುತ್ತಾ ಮನೆ ಮೇಲಿಂದ ಹಾದು ಹೋದ ಹೆಲಿಕಾಪ್ಟರ್ ಕಂಡು ಖುಷಿ ಪಟ್ಟಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮೈಸೂರು ಭಟ್ರೇ (mysuru bhatree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವ್ಯಕ್ತಿಯೊಬ್ಬರು, ಮನೆ ಮೇಲಿದ್ದ ಹಾದು ಹೋಗುತ್ತಿರುವ ಹೆಲಿಕಾಪ್ಟರ್ ಸದ್ದು ಕಿವಿಗೆ ಅಪ್ಪಳಿಸುತ್ತಿದ್ದಂತೆ ಓಡೋಡಿ ಬಂದಿದ್ದಾರೆ. ಪುಟ್ಟ ಮಕ್ಕಳಂತೆ ಬಾನೆತ್ತರಲ್ಲಿ ಹೆಲಿಕಾಪ್ಟರ್ ನೋಡುತ್ತಾ ಟಾಟಾ ಮಾಡುತ್ತಾ ನಿಂತಿರುವುದನ್ನು ನೋಡಬಹುದು. ಆ ಕ್ಷಣವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಯುವತಿ,  ಅವರು ಯಾರು ಎಂದು ಕೇಳಿದ್ದಾರೆ. ಆ ವ್ಯಕ್ತಿ ಆ ಪೈಲೆಟ್ ನನ್ನ ಫ್ರೆಂಡ್ ಕಣೆ, ಆ ಅಣ್ಣ ನಂಗೆ ಟಾಟಾ ಮಾಡಿದ್ರು ಎಂದು ನಗುತ್ತಾ ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೇಹಕ್ಕೆ ಎಷ್ಟೇ ವಯಸ್ಸಾದ್ರೂ, ಮನಸ್ಸು ಮಗು ತರಹನೇ ಇರುತ್ತೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಖುಷಿ ನೋಡಿ ಈ ಭಟ್ರಿಗೆ, ಅದರಲ್ಲಿ ಸಂತೋಷ, ಆತ್ಮತೃಪ್ತಿ ಕಂಡುಕೊಂಡ್ರು. ನಿಮ್ಮ ಹಾಗೆ ಇರಬೇಕು ಅನಿಸುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುಗ್ಧತೆಯ ಮಹಾಪೂರ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:20 pm, Thu, 6 August 26

Source link

ಸೇನಾ ಮುಖ್ಯಸ್ಥರಿಗೆ ಮುಹಮ್ಮದ್ ಯೂನಸ್ ನೇಮಕ ಇಷ್ಟವಿರಲಿಲ್ಲ: ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹೇಳಿದ್ದೇನು? – Kannada News | Bangladesh Army Chief Opposed Yunus Appointment: Ex Advisor Reveals Political Turmoil

ಢಾಕಾ, ಆಗಸ್ಟ್​ 06: ಬಾಂಗ್ಲಾದೇಶದಲ್ಲಿ 2024 ರಲ್ಲಿ ಶೇಖ್ ಹಸೀನಾ(Sheikh Hasina) ಸರ್ಕಾರ ಪತನಗೊಂಡ ನಂತರ, ಮುಹಮ್ಮದ್ ಯೂನಸ್ (Muhammad Yunus) ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಆರಂಭದಲ್ಲಿ ತೀವ್ರವಾಗಿ ವಿರೋಧಿಸಿದ್ದರು ಎಂಬ ಅಪರೂಪದ ರಹಸ್ಯ ತೆರೆಮರೆಯ ರಾಜಕೀಯ ಸತ್ಯ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದ ಮಾಜಿ ಕಾನೂನು ಸಲಹೆಗಾರ ಹಾಗೂ ಢಾಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಸಿಫ್ ನಜ್ರುಲ್ ಅವರು ಪತ್ರಿಕೆ ‘ಪ್ರೋಥೋಮ್ ಅಲೋ’ಗೆ (Prothom Alo) ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

ನಜ್ರುಲ್ ಅವರ ಪ್ರಕಾರ, ವಿದ್ಯಾರ್ಥಿ ನಾಯಕರು ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿಯಲು ಆಯ್ಕೆ ಮಾಡಿದ್ದರು. ಆದರೆ ಸೇನಾ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರಲ್ ವಾಕರ್ ಎರಡು ಪ್ರಮುಖ ಕಾರಣಗಳನ್ನು ನೀಡಿ ಯೂನಸ್ ನೇಮಕವನ್ನು ನಿರಾಕರಿಸಿದ್ದರು.

ಜನವರಿ 2024 ರಲ್ಲಿ ಯೂನಸ್ ಅವರ ‘ಗ್ರಾಮೀಣ ಟೆಲಿಕಾಂ’ ಸಂಸ್ಥೆಯಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ನೀಡದ ಆರೋಪದ ಮೇಲೆ ಅವರಿಗೆ 6 ತಿಂಗಳ ಜೈಲು ಶಿಕ್ಷೆಯಾಗಿತ್ತು. ಜೂನ್ 2024 ರಲ್ಲಿ ಯೂನಸ್ ಹಾಗೂ ಇತರ 13 ಜನರ ವಿರುದ್ಧ 3 ಮಿಲಿಯನ್‌ ಡಾಲರ್​ಗಿಂತ ಅಧಿಕ ಹಣ ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿತ್ತು. ಈ ಪ್ರಕರಣಗಳು ಶೇಖ್ ಹಸೀನಾ ಸರ್ಕಾರದ ರಾಜಕೀಯ ದ್ವೇಷದ ಪಿತೂರಿಯಿಂದ ಕೂಡಿದ್ದವು ಎಂದು ಆಸಿಫ್ ನಜ್ರುಲ್ ಸೇನಾ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ಮತ್ತಷ್ಟು ಓದಿ: ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ವಿದ್ಯಾರ್ಥಿ ನಾಯಕರ ಸಂಪೂರ್ಣ ಬೆಂಬಲ ಯೂನಸ್ ಅವರಿಗೇ ಇದೆ ಎಂಬುದನ್ನು ಮನಗಂಡ ನಂತರವೇ ಜನರಲ್ ವಾಕರ್-ಉಜ್-ಜಮಾನ್ ಅವರು ಯೂನಸ್ ಅವರ ಹೆಸರನ್ನು ಉನ್ನತ ಹುದ್ದೆಗೆ ಬೆಂಬಲಿಸಲು ಒಪ್ಪಿಕೊಂಡರು. ನಂತರ ಯೂನಸ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರ ಮೇಲಿದ್ದ ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿತು.

2024 ರ ಹಸೀನಾ ವಿರೋಧಿ ಬೃಹತ್ ಪ್ರತಿಭಟನೆಯಲ್ಲಿ ನಜ್ರುಲ್ ಪ್ರಮುಖ ಮಾರ್ಗದರ್ಶಕರಾಗಿದ್ದರು. ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ ಮಿಲಿಟರಿ ಮತ್ತು ನಾಗರಿಕ ನಾಯಕರ ನಡುವೆ ಸಂಧಾನಕಾರರಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವು ಅಧಿಕಾರದಲ್ಲಿದ್ದು, ಚುನಾವಣೆಗೆ ಹಾಗೂ ಮೂಲಭೂತ ಪ್ರಜಾಸತ್ತಾತ್ಮಕ ಸುಧಾರಣೆಗಳಿಗೆ ಮಿಲಿಟರಿ ಮತ್ತು ಯೂನಸ್ ಆಡಳಿತದ ನಡುವೆ ಹಲವು ವಿಷಯಗಳಲ್ಲಿ ಇನ್ನೂ ಚರ್ಚೆಗಳು ಮುಂದುವರೆದಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನಪ್ರಿಯ ನಟಿ ಪ್ರಗತಿ ಈಗ ವೇಟ್​​ಲಿಫ್ಟಿಂಗ್ ಚಾಂಪಿಯನ್ – Kannada News | Actress Pragathi became weightlifting champion in her 50s

ಸಾಧನೆಗೆ ವಯಸ್ಸು, ಹೆಣ್ಣು-ಗಂಡು ಭೇದವಿಲ್ಲ ಎಂಬುದಕ್ಕೆ ಭಾರತದಲ್ಲಿ ಹಲವಾರು ಉದಾಹರಣೆಗಳಿವೆ. ಇದೀಗ ಇದಕ್ಕೆ ತಾಜಾ ಸೇರ್ಪಡೆ ಖ್ಯಾತ ತೆಲುಗು ನಟಿ ಪ್ರಗತಿ. ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ನಾಯಕಿಯಾಗಿ, ಪೋಷಕ ನಟಿಯಾಗಿ ತೊಡಗಿಸಿಕೊಂಡಿರುವ ಪ್ರಗತಿ ತಮ್ಮ 50ನೇ ವಯಸ್ಸಿನಲ್ಲಿ, ಅಪೂರಪವಾದ ಕನಸೊಂದನ್ನು ಕಂಡು ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಬಹುತೇಕ ಮಹಿಳೆಯರು 50ರ ವಯಸ್ಸಿಗೆ ಮನೆ-ಮಕ್ಕಳು, ಮೊಮ್ಮಕ್ಕಳ ಸಾಧನೆಗಳನ್ನು ಸಂಭ್ರಮಿಸುತ್ತಾ, ಧಾರಾವಾಹಿಗಳನ್ನು ನೋಡುತ್ತಾ ‘ಆರಾಮ’ವಾಗಿ ಕಾಲ ಕಳೆಯುವ ಹೊತ್ತಿನಲ್ಲಿ ಪ್ರಗತಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಪ್ರಗತಿ ಅವರು ವೇಟ್​​ಲಿಫ್ಟಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ. 2025ರ ಆರಂಭದಲ್ಲಿ, ಪ್ರಗತಿಯವರು ಕೇರಳದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 115 ಕೆ.ಜಿ ಸ್ಕ್ವಾಟ್, 50 ಕೆ.ಜಿ ಬೆಂಚ್ ಪ್ರೆಸ್ ಮತ್ತು 122.5 ಕೆ.ಜಿ ಡೆಡ್‌ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ಆ ಬಳಿಕ ಅವರು ಏಷ್ಯನ್ ಓಪನ್ ಮತ್ತು ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಡೆಡ್‌ಲಿಫ್ಟ್‌ನಲ್ಲಿ ಚಿನ್ನದ ಪದಕವನ್ನು ಪಡೆದರು ಮತ್ತು ಸ್ಕ್ವಾಟ್, ಬೆಂಚ್ ಪ್ರೆಸ್ ಹಾಗೂ ಸಮಗ್ರ ಪ್ರದರ್ಶನದಲ್ಲಿ ಮೂರು ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಎಲ್ಲ ಸಾಧನೆಯನ್ನು ಪ್ರಗತಿ ಮಾಡಿರುವುದು ತಮ್ಮ 50ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

ತೆಲುಗು ಚಿತ್ರರಂಗದ ಬಲು ಬೇಡಿಕೆಯ ಪೋಷಕ ನಟಿ ಆಗಿರುವ ಪ್ರಗತಿ ಅವರು ಬಹುತೇಕ ಎಲ್ಲ ಸ್ಟಾರ್ ನಟರುಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಆರಾಮವಾಗಿ ಕಾಲ ಕಳೆಯುವ ಎಲ್ಲ ಅವಕಾಶವೂ ಪ್ರಗತಿ ಅವರಿಗಿತ್ತು. ಆದರೆ ಅದನ್ನು ನಿರಾಕರಿಸಿ ಅವರು ತಮ್ಮ ದೇಹದ ಆರೋಗ್ಯ ಮತ್ತು ಸಾಧಿಸುವ ಛಲದಿಂದ ವೇಟ್​​ಲಿಫ್ಟಿಂಗ್ ಕಡೆ ಗಮನ ಹರಿಸಿದರು. ಈಗ ಅವರ ಸಾಧನೆಯನ್ನು ಜನ ಕೊಂಡಾಡುತ್ತಿದ್ದಾರೆ. ನಟನೆಗಿಂತಲೂ ಹೆಚ್ಚಿನ ಆತ್ಮತೃಪ್ತಿಯನ್ನು ತಮಗೆ ವೇಟ್​ಲಿಫ್ಟಿಂಗ್ ನೀಡಿದೆ ಎನ್ನುತ್ತಾರೆ ಪ್ರಗತಿ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾಕ್ಕೆ ಮೊದಲಿದ್ದ ಹೆಸರೇನು? ವಿಲನ್ ಪಾತ್ರದ ಹಿನ್ನೆಲೆ ಗೊತ್ತೆ?

1993 ರಿಂದಲೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಪ್ರಗತಿ, ಇತ್ತೀಚೆಗೆ ಕಾಲವಾದ ಭಾಗ್ಯರಾಜ್ ಅವರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆರಂಭದ ಕೆಲ ವರ್ಷ ನಾಯಕಿಯಾಗಿ ನಟಿಸಿದರಾದರೂ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಆದರೆ ಕೇವಲ ಮೂರೇ ವರ್ಷಕ್ಕೆ ಚಿತ್ರರಂಗಕ್ಕೆ ಮರಳಿ, ಹಲವಾರು ಧಾರಾವಾಹಿ, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 2002 ರಲ್ಲಿ ಬಿಡುಗಡೆ ಆದ ‘ಪ್ರೇಮಖೈದಿ’, 2003 ರಲ್ಲಿ ಬಿಡುಗಡೆ ಆದ ‘ಹೃದಯವಂತ’, 2011 ರ ‘ವಿನಾಯಕ ಗೆಳೆಯರ ಬಳಗ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗಲೂ ಅವರು ಸಿನಿಮಾ ಮತ್ತು ಟಿವಿಗಳಲ್ಲಿ ಸಕ್ರಿಯರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಆರ್‌ಟಿಒ ಶಾಕ್: 11 ವಿಶೇಷ ಪಡೆಗಳಿಂದ ದಾಳಿ, 85ಕ್ಕೂ ಹೆಚ್ಚು ವಾಹನಗಳು ಸೀಜ್

ಬೆಂಗಳೂರು, ಆ.6: ರಾಜಧಾನಿಯಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ) ಅಧಿಕಾರಿಗಳು ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ಹಲವು ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರಮುಖವಾಗಿ, ಕೆ.ಎ.-01 ಕೋರಮಂಗಲ ಆರ್.ಟಿ.ಓ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ತೀವ್ರಗೊಂಡಿದೆ. ಅಧಿಕಾರಿಗಳು ಈಗಾಗಲೇ 85 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿ ವಶಪಡಿಸಿಕೊಂಡಿದ್ದಾರೆ. ಅನಧಿಕೃತ ಬೈಕ್ ಟ್ಯಾಕ್ಸಿಗಳ ನಿಯಂತ್ರಣಕ್ಕಾಗಿ ಸಾರಿಗೆ ಇಲಾಖೆಯು ಒಟ್ಟು 11 ತಂಡಗಳನ್ನು ರಚನೆ ಮಾಡಿದೆ. ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಚಾಲಕರೊಬ್ಬರನ್ನು ತಡೆದು, ಹೆಲ್ಮೆಟ್ ತೆಗೆಯುವಂತೆ ಸೂಚಿಸಿ, ಅವರ ವಾಹನವನ್ನು ಸೀಜ್ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉಡುಪಿ: ಕಾರ್ಕಳದ ರೇಂಜಾಳದಲ್ಲಿ ಭಾರೀ ಭೂಕುಸಿತದ ಆತಂಕ, ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ – Kannada News | Udupi Landslide Alert: Hill Slope Threatens Three Houses in Karkala’s Renjala

ಭೂ ಕುಸಿತ ಸಾಧ್ಯತೆ ಹಿನ್ನಲೆ ರೇಂಜಾಳ ಗ್ರಾಮಕ್ಕೆ ದೌಡಾಯಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆImage Credit source: tv9

ಉಡುಪಿ, ಆಗಸ್ಟ್ 6: ಕಳೆದ ಒಂದು ವಾರದಿಂದ ಉಡುಪಿ (Udupi) ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಇದೀಗ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಪರಿಸರದಲ್ಲಿ ಆತಂಕಕಾರಿ ಪರಿಸ್ಥಿತಿ ಸೃಷ್ಟಿಸಿದೆ. ಪ್ರಕೃತಿಯ ರೌದ್ರಾವತಾರಕ್ಕೆ ಸಾಕ್ಷಿಯಾಗಿರುವ ಈ ಪ್ರದೇಶದಲ್ಲಿ ಭೂಮಿ ನಿಧಾನವಾಗಿ ಬಿರುಕು ಬಿಡುತ್ತಿದ್ದು, ಮೇಲ್ಭಾಗದಿಂದ ಮಣ್ಣು, ಬಂಡೆಗಳು ಹಾಗೂ ಮರಮಟ್ಟು ಜಾರಿಬೀಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಹೆಡ್ಮೆ ಹರಿಪ್ರಸಾದ್ ಅವರ ಮನೆಯ ಸಮೀಪ ಆರಂಭವಾದ ಭೂಕುಸಿತ ಇದೀಗ ಭಾರಿ ಅಪಾಯದ ಮುನ್ಸೂಚನೆಯಾಗಿ ಪರಿಣಮಿಸಿದೆ. ಸುಮಾರು ಎರಡು ಎಕರೆ ವ್ಯಾಪ್ತಿಯ ಗುಡ್ಡದ ಭಾಗ ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದ್ದು, ಅದರ ಅಡಿಭಾಗದಲ್ಲಿರುವ ಮೂರು ಮನೆಗಳ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದು ದಿನ ಕಳೆಯುವಂತಾಗಿದೆ.

ರಾತ್ರಿಯಿಡೀ ಸುರಿದ ಮಳೆಯ ಬಳಿಕ ಬೆಳಗಾಗುವಷ್ಟರಲ್ಲಿ ಬೃಹತ್ ಬಂಡೆಯೊಂದು ಜಾರಿಬಂದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಗುಡ್ಡದ ಮೇಲ್ಭಾಗದಿಂದ ನಿರಂತರವಾಗಿ ಜರಿದು ಬರುತ್ತಿರುವ ಮಣ್ಣು ಮತ್ತು ಕಲ್ಲುಗಳ ಸದ್ದು ಕೇಳಿದಾಗಲೆಲ್ಲ ಮನೆಗಳಿಂದ ಹೊರಗೆ ಓಡಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವರು ತಮ್ಮ ಮನೆಯಲ್ಲಿದ್ದ ಅಗತ್ಯ ದಾಖಲೆಗಳು, ವಸ್ತುಗಳು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯ ಮಾಹಿತಿ ಪಡೆದ ತಹಶೀಲ್ದಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಾಂತರಕ್ಕೆ ಸೂಚನೆ; ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಅಧಿಕಾರಿಗಳ ಭೇಟಿ ಬಳಿಕ ಅಪಾಯದ ಪ್ರಮಾಣ ಮತ್ತಷ್ಟು ಸ್ಪಷ್ಟವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ, ಸ್ಥಳಾಂತರಕ್ಕೆ ಸೂಚನೆ ನೀಡಿದರೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರ್ಯಾಯ ವಸತಿ, ಮೂಲಭೂತ ಸೌಲಭ್ಯ ಅಥವಾ ಪುನರ್ವಸತಿ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮನೆ ಬಿಟ್ಟು ಹೊರಡಲು ಹೇಳುತ್ತಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು? ಮಕ್ಕಳೊಂದಿಗೆ ಎಲ್ಲಿ ಆಶ್ರಯ ಪಡೆಯಬೇಕು?’ ಎಂದು ಸಂತ್ರಸ್ತ ಕುಟುಂಬಗಳು ಪ್ರಶ್ನಿಸುತ್ತಿವೆ.

ಭಯ, ಅನಿಶ್ಚಿತತೆ ಮತ್ತು ಆತಂಕದ ನಡುವೆ ಗ್ರಾಮಸ್ಥರು ದಿನ ಕಳೆಯುತ್ತಿದ್ದು, ಮಳೆ ಇನ್ನೂ ಮುಂದುವರಿದರೆ ಇಡೀ ಗುಡ್ಡವೇ ಕುಸಿಯುವ ಭೀತಿ ಆವರಿಸಿದೆ. ಸ್ಥಳೀಯರ ಪ್ರಕಾರ, ಮಳೆ ಇದೇ ರೀತಿ ಮುಂದುವರಿದರೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಂತಹ ದುರಂತ ಇಲ್ಲಿಯೂ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಹೀಗಾಗಿ ಜಿಲ್ಲಾಡಳಿತ ತುರ್ತು ತಾಂತ್ರಿಕ ಸಮೀಕ್ಷೆ ನಡೆಸಿ, ಅಪಾಯದ ಪ್ರದೇಶವನ್ನು ಸಂಪೂರ್ಣವಾಗಿ ಗುರುತಿಸಬೇಕು. ಸಂತ್ರಸ್ತರಿಗೆ ಸುರಕ್ಷಿತ ಪುನರ್ವಸತಿ ಕಲ್ಪಿಸುವ ಜೊತೆಗೆ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಪ್ಪುರಂನಲ್ಲಿ ಭೀಕರ ಭೂಕುಸಿತ; ರಸ್ತೆ ಸಂಚಾರ ಸ್ಥಗಿತ

ಒಟ್ಟಾರೆಯಾಗಿ, ಸದ್ಯ ಹೆಡ್ಮೆ ಪ್ರದೇಶದಲ್ಲಿ ಪ್ರತಿಯೊಂದು ಮಳೆಯ ಹನಿಯೂ ಆತಂಕವನ್ನು ಹೆಚ್ಚಿಸುತ್ತಿದ್ದು, ಪ್ರತಿಯೊಂದು ಗುಡ್ಡ ಜಾರುವ ಶಬ್ದವೂ ಗ್ರಾಮಸ್ಥರ ಹೃದಯಬಡಿತ ಹೆಚ್ಚಿಸುತ್ತಿದೆ. ಪ್ರಕೃತಿಯ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಸ್ಥಳೀಯರ ಕೂಗಿಗೆ ಜಿಲ್ಲಾಡಳಿತ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ – Kannada News | Vaibhav Will Break My World Record: Jos Buttler’s Big Prediction

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಸದ್ಯ ಉತ್ತರ ಜೋಸ್ ಬಟ್ಲರ್. ಇಂಗ್ಲೆಂಡ್​ನಲ್ಲಿ ನಡೆದಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯ 21ನೇ ಪಂದ್ಯದಲ್ಲಿ 20 ಎಸೆತಗಳಲ್ಲಿ 51 ರನ್ ಸಿಡಿಸುವ ಮೂಲಕ ಬಟ್ಲರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಕೀರನ್ ಪೊಲಾರ್ಡ್ ಹೆಸರಿನಲ್ಲಿದ್ದ  14,803 ರನ್‌ಗಳ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ  492 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 10074 ಎಸೆತಗಳಲ್ಲಿ 14833 ರನ್ ಕಲೆಹಾಕಿದ್ದಾರೆ.
  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ 663 ಇನಿಂಗ್ಸ್ ಆಡಿರುವ ಕೀರನ್ ಪೊಲಾರ್ಡ್ 9802 ಎಸೆತಗಳಲ್ಲಿ 14803 ರನ್ ರನ್ ಗಳಿಸಿದ್ದಾರೆ.

ಸದ್ಯ ಟಿ20 ರನ್ ಸರದಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದು, ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಾಖಲೆ ಮುರಿಯುವವರು ಯಾರು?

ಈ ಐತಿಹಾಸಿಕ ದಾಖಲೆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಜೋಸ್ ಬಟ್ಲರ್​ಗೆ ಭವಿಷ್ಯದಲ್ಲಿ ನಿಮ್ಮ ದಾಖಲೆ ಯಾರು ಮುರಿಯಬಹುದು? ಎಂಬ ಪ್ರಶ್ನೆ ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಬಟ್ಲರ್ ಕಡೆಯಿಂದ ಮೂಡಿಬಂದ ಉತ್ತರ ವೈಭವ್ ಸೂರ್ಯವಂಶಿ.

“ನನ್ನ ಈ ದಾಖಲೆಯನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯುತ್ತಾರೆ ಎಂದರೆ ಅದು ಬಹುಶಃ ಭಾರತದ ವೈಭವ್ ಸೂರ್ಯವಂಶಿ” ಎಂದು ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಬಟ್ಲರ್ ಹೇಳಿದ್ದಾರೆ. ಈ ಮೂಲಕ ವೈಭವ್ ಕೂಡ ಟಿ20 ಕ್ರಿಕೆಟ್​ನಲ್ಲಿ ರನ್ ರಾಶಿ ಪೇರಿಸಲಿದ್ದಾರೆ ಎಂದು ಬಟ್ಲರ್ ಭವಿಷ್ಯ ನುಡಿದಿದ್ದಾರೆ.

ಬಟ್ಲರ್ ಮನಗೆದ್ದ ವೈಭವ್!

ಕೇವಲ 15 ವರ್ಷದ ಬಿಹಾರದ ಎಡಗೈ ಓಪನರ್ ವೈಭವ್ ಸೂರ್ಯವಂಶಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತ್ಯಂತ ಚರ್ಚಿತ ಆಟಗಾರ. ಬಟ್ಲರ್ ತಮ್ಮ ಮಾಜಿ ಐಪಿಎಲ್ ಸಹ ಆಟಗಾರನ ಬಗ್ಗೆ ಇಷ್ಟೊಂದು ದೊಡ್ಡ ಭವಿಷ್ಯ ನುಡಿಯಲು ಬಲವಾದ ಕಾರಣಗಳಿವೆ…

  • ಅತಿ ಕಿರಿಯ ವಯಸ್ಸಿನಲ್ಲೇ ಅಬ್ಬರ: ವೈಭವ್ ಸೂರ್ಯವಂಶಿ ಕೇವಲ 23 ಐಪಿಎಲ್​ ಇನ್ನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 6 ಅರ್ಧಶತಕಗಳೊಂದಿಗೆ 1,028 ರನ್ ಚಚ್ಚಿದ್ದಾರೆ.
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಭಟ: ಇತ್ತೀಚೆಗೆ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಕೇವಲ 3 ಪಂದ್ಯಗಳಲ್ಲಿ 151 ರನ್ ಗಳಿಸಿ ‘ಪ್ಲೇಯರ್ ಆಫ್ ದಿ ಸೀರಿಸ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಮೊದಲ 40 ಇನ್ನಿಂಗ್ಸ್‌ಗಳ ಅಂಕಿ-ಅಂಶಗಳ ಹೋಲಿಕೆಯಲ್ಲೂ ವೈಭವ್ ಸೂರ್ಯವಂಶಿ ಜೋಸ್ ಬಟ್ಲರ್ ಅವರಿಗಿಂತ ಮುಂದಿದ್ದಾರೆ. ಇಬ್ಬರ ಮೊದಲ 40 ಇನಿಂಗ್ಸ್​ಗಳ ಹೋಲಿಕೆ ಈ ಕೆಳಗಿನಂತಿದೆ…

ಮೊದಲ 40 ಇನ್ನಿಂಗ್ಸ್ ಒಟ್ಟು ರನ್ ಸ್ಟ್ರೈಕ್ ರೇಟ್ ಶತಕಗಳು
ವೈಭವ್ ಸೂರ್ಯವಂಶಿ 1,670 216.32 4
ಜೋಸ್ ಬಟ್ಲರ್ 1,590 152.44 0

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಂಡಿಗರು:

ಸ್ಥಾನ ಆಟಗಾರ ದೇಶ ಒಟ್ಟು ಟಿ20 ರನ್‌ಗಳು
1 ಜೋಸ್ ಬಟ್ಲರ್ ಇಂಗ್ಲೆಂಡ್ 14,833
2 ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ 14,803
3 ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ 14,562

“ಇಷ್ಟು ದೊಡ್ಡ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ವಿಷಯ. ಆದರೆ ಯಾರಾದರೂ ಒಬ್ಬರು ಇದನ್ನು ದಾಟಿ ಹೋಗಲೇಬೇಕು. ವೈಭವ್ ಸೂರ್ಯವಂಶಿ ಬೌಲರ್‌ಗಳನ್ನು ಧ್ವಂಸ ಮಾಡುವ ಸಂಪೂರ್ಣ ‘ಬಾಕ್ಸ್ ಆಫೀಸ್’ ಆಟಗಾರ” ಎಂದು ಬಟ್ಲರ್ ಹೊಗಳಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್​ನಲ್ಲಿ 15 ಸಾವಿರ ರನ್​ಗಳನ್ನು ಪೇರಿಸಿದರೂ ಅಚ್ಚರಿಪಡಬೇಕಿಲ್ಲ.

Source link

Exit mobile version