ನಿತ್ಯವೂ ಒಂದು ಬಾಳೆಹಣ್ಣು ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತಾ? – Kannada News | Do you know what happens if you eat a banana every day?

ಬಾಳೆಹಣ್ಣಿನ ಪ್ರಯೋಜನImage Credit source: Pinterest

ಶಕ್ತಿಯ ಮೂಲವಾಗಿರುವ ಬಾಳೆಹಣ್ಣಿನಲ್ಲಿ (banana) ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸುವುದರಿಂದ ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳು ಬೀರುತ್ತವೆ.  ಹೌದು ಇದರಲ್ಲಿ  ವಿಟಮಿನ್ ಸಿ, ಪ್ರೋಟೀನ್, ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿದ್ದು, ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು  ಲಭಿಸುತ್ತವೆ. ಹೀಗಿರುವಾಗ ದಿನಕ್ಕೊಂದು ಬಾಳೆಹಣ್ಣು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು?

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ನೀವು ರಕ್ತದೊತ್ತಡವನ್ನು ನಿಯಂತ್ರಿಸಲು ಬಯಸುವಿರಾ? ಹಾಗಿದ್ದಲ್ಲಿ, ನೀವು  ನಿತ್ಯವೂ ಒಂದು ಬಾಳೆಹಣ್ಣು ತಿನ್ನಲು ಪ್ರಾರಂಭಿಸಿ. ಬಾಳೆಹಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳು ಗಂಭೀರ ಮತ್ತು ಮಾರಕ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಹಣ್ಣಿನ ಸೇವನೆಯು ಮೂತ್ರಪಿಂಡದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ.

ಮೂಳೆಗಳನ್ನು ಬಲಪಡಿಸಲು ಸಹಕಾರಿ: ಬಾಳೆಹಣ್ಣು ಮೂಳೆಗಳನ್ನು ಬಲಪಡಿಸಲು ಸಹ ಸಹಕಾರಿ.  ನಿಮ್ಮ ಮೂಳೆಗಳನ್ನು ದೀರ್ಘಕಾಲದವರೆಗೆ ಬಲವಾಗಿಡಲು ನೀವು ಬಯಸಿದರೆ, ನೀವು ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸಲು ಪ್ರಾರಂಭಿಸಿ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ. ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಬಾಳೆಹಣ್ಣನ್ನು ಸೇವನೆ ಮಾಡಿ.

ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ:  ಬಾಳೆಹಣ್ಣುಗಳು ನಿಮ್ಮ ಕರುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ನೀವು ಆಗಾಗ್ಗೆ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪ್ರತಿನಿತ್ಯ ಒಂದು ಬಾಳೆಹಣ್ಣನ್ನು ಸೇವನೆ ಮಾಡಿ. ಅಲ್ಲದೆ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಮನಸ್ಥಿತಿಯನ್ನು ಸಹ ಸುಧಾರಿಸಬಹುದು.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ: ಬಾಳೆಹಣ್ಣಿನಲ್ಲಿರುವ ಹೇರಳವಾದ ನಾರು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದು ಹಾಕಲು ಸರಳ ವಿಧಾನ ಅನುಸರಿಸಿ

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ: ಬಾಳೆಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ನಂತಹ ಪೋಷಕಾಂಶಗಳಿದ್ದು, ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಪೋಷಕಾಂಶಗಳು ನರಪ್ರೇಕ್ಷಕ ಸಂವಹನವನ್ನು ಹೆಚ್ಚಿಸುತ್ತವೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ: ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಪೋಷಕಾಂಶಗಳು ಚರ್ಮಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ ಮತ್ತು ವಯಸ್ಸಾಗುವಿಕೆಯ ಚಿಹ್ನೆಗಳನ್ನು ಕಡಿಮೆ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ಬಳಕೆಯಿಂದ ಟ್ರೋಲ್ ಆದ ವರುಣ್ ಧವನ್ ಹೊಸ ಸಿನಿಮಾ ಟೀಸರ್ – Kannada News | Varun Dhawan new film Hai Jawani Toh Ishq Hona Hai teaser gets trolled for using AI

ಬಾಲಿವುಡ್‌ನ ಖ್ಯಾತ ಕಾಮಿಡಿ ಚಿತ್ರಗಳ ನಿರ್ದೇಶಕ ಡೇವಿಡ್ ಧವನ್ ಮತ್ತು ವರುಣ್ ಧವನ್ (Varun Dhawan) ಜೋಡಿಯ ಬಹುನಿರೀಕ್ಷಿತ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ (Hai Jawani Toh Ishq Hona Hai) ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ಜೊತೆ ಸೌತ್ ಸುಂದರಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಎಐ (AI) ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿದೆ.

ಈ ಟೀಸರ್‌ನ ಆರಂಭವೇ ಪ್ರೇಕ್ಷಕರನ್ನು ಅಚ್ಚರಿಗೊಳಿಸುವಂತಿದೆ. ಇಬ್ಬರು ಮಕ್ಕಳು ತಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಕೊನೆಗೆ ಆ ಇಬ್ಬರು ಮಕ್ಕಳಿಗೂ ತಂದೆ ಒಬ್ಬರೇ ಎಂಬ ಟ್ವಿಸ್ಟ್ ರಿವೀಲ್ ಆಗುತ್ತದೆ. ಈ ದೃಶ್ಯವನ್ನು ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದ್ದು, ಇದು ನೋಡಲು ಸ್ವಲ್ಪ ವಿಚಿತ್ರವಾಗಿ ಮತ್ತು ಅತಿ ಎನಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಟೀಸರ್ ನೋಡಿದ ನೆಟ್ಟಿಗರು ಸಿನಿಮಾ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಕಥೆ ಹಳೆಯ ಕಾಲದ ಕಮರ್ಷಿಯಲ್ ಸಿನಿಮಾಗಳಂತೆಯೇ ಇದೆ ಮತ್ತು ಪ್ರೆಸೆಂಟೇಶನ್‌ನಲ್ಲಿ ಯಾವುದೇ ಹೊಸತನವಿಲ್ಲ ಎಂದು ಒಂದು ವರ್ಗದ ಪ್ರೇಕ್ಷಕರು ದೂರಿದ್ದಾರೆ. ಟೀಸರ್ ಬಿಡುಗಡೆ ಹಂತದಲ್ಲೇ ಈ ರೀತಿಯ ಟೀಕೆ ಬಂದಿರುವುದರಿಂದ ಚಿತ್ರಕ್ಕೆ ಹಿನ್ನಡೆ ಆಗಬಹುದು.

‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಟೀಸರ್‌:

ಆದರೆ ಕೆಲವರು ಮೆಚ್ಚಿಕೊಂಡಿದ್ದಾರೆ. ಡೇವಿಡ್ ಧವನ್ ನಿರ್ದೇಶನದ ಸಿನಿಮಾಗಳೆಂದರೆ ಅಲ್ಲಿ ಫನ್ ಮತ್ತು ಮನರಂಜನೆಗೆ ಕೊರತೆಯಿರುವುದಿಲ್ಲ. ಹೀಗಾಗಿ, ಇದು ಫ್ಯಾಮಿಲಿ ಆಡಿಯನ್ಸ್ ಮತ್ತು ಸಿಂಗಲ್ ಸ್ಕ್ರೀನ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ ಎಂದು ಮತ್ತೊಂದು ವರ್ಗದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೇ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವರುಣ್ ಧವನ್​​ಗೆ ದಂಡ

ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣದ ವರುಣ್ ಧವನ್ ಅವರಿಗೆ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರವು ಬಹಳ ಮುಖ್ಯವಾಗಿದೆ. ತಮ್ಮ ತಂದೆಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಅವರ ಕೈ ಹಿಡಿಯುತ್ತಾ ಎಂಬುದನ್ನು ಕಾದುನೋಡಬೇಕು. ‘ಬಾರ್ಡರ್ 2’ ಸಿನಿಮಾ ತೆರೆಕಂಡಾಗ ವರುಣ್ ಧವನ್ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ; 9 ಕಾರ್ಮಿಕರು ಸಾವು, 15 ಜನರಿಗೆ ಗಾಯ – Kannada News | 9 workers killed, 15 injured in boiler blast at Vedanta power plant in Chhattisgarh

ನವದೆಹಲಿ, ಏಪ್ರಿಲ್ 14: ಛತ್ತೀಸ್‌ಗಢದ (Chhattisgarh) ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ಸಿಂಗಿತರೈ ಗ್ರಾಮದಲ್ಲಿರುವ ವೇದಾಂತ ಲಿಮಿಟೆಡ್ ವಿದ್ಯುತ್ ಸ್ಥಾವರದಲ್ಲಿನ ಬಾಯ್ಲರ್ ಟ್ಯೂಬ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಕ್ತಿ ಪೊಲೀಸ್ ಅಧೀಕ್ಷಕ (SP) ಪ್ರಫುಲ್ ಠಾಕೂರ್ ಹೇಳಿದ್ದಾರೆ.

ಸುಮಾರು 30ರಿಂದ 40 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ತಕ್ಷಣದ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸ್ಫೋಟದ ನಿಖರವಾದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಗಾಯಾಳುಗಳನ್ನು ರಾಯಗಢದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ:

ಸುದ್ದಿ ತಿಳಿದ ಕೂಡಲೇ, ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಮಧ್ಯಾಹ್ನ 2 ಗಂಟೆಗೆ ಅಪಘಾತ ವರದಿಯಾಗಿದೆ. ಈ ಸ್ಫೋಟದ ಸಮಯದಲ್ಲಿ, ಎಲ್ಲಾ ಕಾರ್ಮಿಕರು ವಿದ್ಯುತ್ ಸ್ಥಾವರದೊಳಗೆ ಇದ್ದರು ಮತ್ತು ಕೆಲಸ ಮಾಡುತ್ತಿದ್ದರು. ಈ ಸ್ಫೋಟವು ಇಡೀ ಆವರಣದಲ್ಲಿ ಭೀತಿಯನ್ನು ಉಂಟುಮಾಡಿತು. ಆದರೆ, ಈ ಘಟನೆಯ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತಕ್ಷಣವೇ ಪ್ರಾರಂಭಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ? – Kannada News | Know what happens to Mutual Fund and Equity assets if investor dies without mentioning nominee

ಪ್ರತಿಯೊಂದು ಹಣಕಾಸು ಸ್ಕೀಮ್​ಗೂ ನಾಮಿನಿ ಹೆಸರಿಸುವುದು ಕಡ್ಡಾಯ. ಬ್ಯಾಂಕ್ ಅಕೌಂಟ್​ಗೂ ನಾಮಿನಿ ಕೇಳಲಾಗುತ್ತದೆ. ಎಫ್​ಡಿ ಇತ್ಯಾದಿ ಯಾವುದೇ ಪ್ಲಾನ್​ಗಳಿಗೂ ನಾಮಿನಿ ಹೆಸರಿಸಬೇಕು. ಹಾಗೆಯೇ, ಮ್ಯೂಚುವಲ್ ಫಂಡ್ ಹೂಡಿಕೆದಾರರು (Mutual fund investors) ಮತ್ತು ಡೀಮ್ಯಾಟ್ ಖಾತೆದಾರರು ಕೂಡ ನಾಮಿನಿ ಹೆಸರಿಸಬೇಕು. ನಾಮಿನಿ ಬೇಡ ಎನಿಸಿದರೆ ಅದಕ್ಕೂ ಆಯ್ಕೆ ಇರುತ್ತದೆ. ಸೆಬಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ನಾಮಿನಿ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ನಾಮಿನಿ ಹೆಸರಿಸಬೇಕು, ಅಥವಾ ನಾಮಿನಿ ಬೇಡವೆಂದು ನಮೂದಿಸಬೇಕು.

ನಾಮಿನಿ ಹೆಸರಿಸಿಲ್ಲವೆಂದರೆ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಏನಾಗುತ್ತದೆ?

ಒಂದು ವೇಳೆ ಹೂಡಿಕೆದಾರನು ಸಾಯುವ ಮುನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾಮಿನಿ ಹೆಸರಿಸಿಲ್ಲದಿದ್ದರೆ ಮ್ಯೂಚುವಲ್ ಫಂಡ್​ಗಳಿಗೆ ಏನಾಗುತ್ತದೆ ಎನ್ನುವ ಪ್ರಶ್ನೆ ಸಹಜ. ಈ ಆಸ್ತಿ ಹಾಗೆಯೇ ಉಳಿದಿರುತ್ತದೆ. ಹೂಡಿಕೆದಾರನ ವಾರಸುದಾರರಿಗೆ ಅದನ್ನು ವರ್ಗಾಯಿಸುವ ಅವಕಾಶ ಇರುತ್ತದೆ. ಅದರ ಪ್ರಕ್ರಿಯೆ ಸ್ವಲ್ಪ ಸಂಕೀರ್ಣವಾಗಿರುತ್ತದೆ. ಶೀಘ್ರದಲ್ಲಿ ಆಗುವ ಕೆಲಸ ಅಲ್ಲ.

ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

ವಾರಸುದಾರರು ಫಂಡ್ ವರ್ಗಾಯಿಸಿಕೊಳ್ಳಲು ಏನು ಮಾಡಬೇಕು?

ಹೂಡಿಕೆದಾರರು ಮೃತಪಟ್ಟಿದ್ದು, ಅವರ ಆಸ್ತಿಯನ್ನು ವರ್ಗಾಯಿಸಿಕೊಳ್ಳಬೇಕಾದರೆ, ತಾವು ಕಾನೂನು ರೀತ್ಯಾ ವಾರಸುದಾರರೆಂಬುದನ್ನು ನಿರೂಪಿಸಬೇಕು. ಸಕ್ಸಶನ್ ಸರ್ಟಿಫಿಕೇಟ್ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗಬಹುದು. ಈ ಸಕ್ಸಶನ್ ಸರ್ಟಿಫಿಕೇಟ್ ಪಡೆಯಲು ತಿಂಗಳುಗಳೇ ಆಗಬಹುದು. ಅಲ್ಲಿಯವರೆಗೆ ಹೂಡಿಕೆ ಆಸ್ತಿಗಳು ಹಾಗೆಯೇ ಉಳಿದಿರುತ್ತವೆ.

ನಾಮಿನಿ ಇಲ್ಲದಿದ್ದ ಸಂದರ್ಭದಲ್ಲಿ ವಾರಸುದಾರರು ಡೆತ್ ಸರ್ಟಿಫಿಕೇಟ್ ಸಲ್ಲಿಸಬೇಕು. ತಮ್ಮ ಗುರುತಿನ ದಾಖಲೆ, ಹಾಗೂ ಮೃತರಿಗೆ ತಾನು ಯಾವ ಸಂಬಂಧಿ ಎಂಬುದನ್ನು ತೋರಿಸುವ ದಾಖಲೆ ಕೊಡಬೇಕು. ವಿಲ್ ಇದ್ದಾಗ ಅದಕ್ಕೆ ಕೋರ್ಟ್​ನಿಂದ ದೃಢೀಕರಣ ಪಡೆಯಬೇಕು. ವಿಲ್ ಇಲ್ಲದಿದ್ದಾಗ ಕೋರ್ಟ್​ನಿಂದಲೇ ಸಕ್ಸಶನ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಸಣ್ಣ ಮೊತ್ತದ ಹೂಡಿಕೆಯಾದರೆ ಕೆಲ ಮ್ಯೂಚುವಲ್ ಫಂಡ್ ಸಂಸ್ಥೆಗಳು ನೋಟರಿ ಮಾಡಿಸಿದ ಇನ್​ಡೆಮ್ನಿಟಿ ಬಾಂಡ್ ಮತ್ತು ಅಫಿಡವಿಟ್ ಸ್ವೀಕರಿಸಿ, ಆಸ್ತಿ ವರ್ಗಾವಣೆ ಮಾಡುವ ಅವಕಾಶ ಇರುತ್ತದೆ. ಆದರೆ, ಹೂಡಿಕೆ ಮೊತ್ತ ದೊಡ್ಡದಿದ್ದಾಗ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಲೇಬೇಕಾಗುತ್ತದೆ. ಒಳ್ಳೆಯ ವಕೀಲರ ಮೂಲಕ ಕೋರ್ಟ್​ನಿಂದ ಅನುಮೋದನೆ ಪಡೆಯುವುದು ಅನಿವಾರ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದಲ್ಲಿ ವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಹಂಸಿನಿಯೂ ಸಾವು – Kannada News | Hippo hansini Dies In who killed Dr sameeksha reddy In Tyavarekoppa Safari camp

ಶಿವಮೊಗ್ಗ, (ಏಪ್ರಿಲ್ 14): ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ (Tyavarekoppa Safari) ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಮಾರ್ಚ್ 19 ರಂದು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿನಿ ನೀರಾನೆ ದಾಳಿ ನಡೆಸಿ ಕೊಂದಿತ್ತು. ಇದಾದ ಬಳಿಕ ಹಂಸಿಣಿಯ ಗರ್ಭದಲ್ಲಿದ್ದ ಮರಿ ಸಾವನ್ನಪ್ಪಿತ್ತು. ಇದೀಗ ತಾಯಿ ಹಂಸಿನಿ ಸಹ ಮೃತಟ್ಟಿದೆ. ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದ್ದ 12 ವರ್ಷದ ಹಂಸಿನಿ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಇಂದು (ಏಪ್ರಿಲ್ 14) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಹಂಸಿನಿ ಬಲಿ ಪಡೆದಿತ್ತು. ಇದಾದ ಬಳಿಕ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಹೊಟ್ಟೆಯಲ್ಲೇ ಮರಿ ಸಾವನ್ನಪ್ಪಿದ್ದರಿಂದ ಸೋಂಕು ತಗುಲಿ ಹಂಸಿನಿ ಅನಾರೋಗ್ಯಕ್ಕೀಡಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ 3:08ಕ್ಕೆ ಹಂಸಿನಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷನರ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಹಂಸಿನಿಯ ಜೀವನದ ನೋವಿನ ಕಥೆ

12 ವರ್ಷದ ಈ ಹಂಸಿನಿ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೂ ಸಹ ಈ ಬಾರಿಯೂ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವನ್ನಪ್ಪಿತ್ತು. ಇದೀಗ ಕೊನೆಗೆ ತಾಯಿ ಹಂಸಿನಿ ಸಹ ಮೃತಪಟ್ಟಿದೆ.

ಪಶುವೈದ್ಯೆಯ ಬಲಿ ಪಡೆದಿದ್ದ ಹಂಸಿನಿ

ಇದೇ ನೀರಾನೆ ಹಂಸಿನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರನ್ನ ಬಲಿಪಡೆದಿತ್ತು. ಮಾರ್ಚ್ 19 ರಂದು ಮಧ್ಯರಾತ್ರಿ ಹಂಸಿಣಿಗೆ ಚಿಕಿತ್ಸೆ ನೀಡುವಾಗ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಅದೇನಾಯ್ತೋ ಏನೋ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಬಳಿಕ ತಾಯಿ ಹಂಸಿನಿ ಆರೋಗ್ಯ ಸಹ ಹದಗೆಟ್ಟಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗಳು ಖಂಡಿತಾ 10ನೇ ತರಗತಿ ಫೇಲ್ ಆಗುತ್ತಾಳೆ ಎಂದುಕೊಂಡಿದ್ದ ಆಮಿರ್ ಖಾನ್; ಆದರೆ ಆಗಿದ್ದೇನು? – Kannada News | Aamir Khan funny throwback interview about daughter Ira Khan class 10 Results

ಸಿಬಿಎಸ್‌ಇ (CBSE) 10ನೇ ತರಗತಿಯ ಫಲಿತಾಂಶ ಶೀಘ್ರವೇ ಪ್ರಕಟವಾಗುವ ನಿರೀಕ್ಷೆಯಿದೆ. ಈ ಕುತೂಹಲದ ನಡುವೆ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan) ಅವರು ತಮ್ಮ ಮಗಳು ಇರಾ ಖಾನ್ (Ira Khan) ಅವರ ಹತ್ತನೇ ತರಗತಿಯ ರಿಸಲ್ಟ್ ಬಂದಾಗ ನಡೆದ ಒಂದು ಮೋಜಿನ ಘಟನೆಯನ್ನು ಈ ಹಿಂದೆ ಹಂಚಿಕೊಂಡಿದ್ದರು. ತಮ್ಮ ಮಗಳು ಫೇಲ್ ಆಗುತ್ತಾಳೆ ಎಂದು ಬಲವಾಗಿ ನಂಬಿದ್ದ ಆಮಿರ್‌ ಖಾನ್​ಗೆ, ಆಕೆಯ ಅಂಕಪಟ್ಟಿಯನ್ನು ನೋಡಿ ಅಕ್ಷರಶಃ ಶಾಕ್ ಆಗಿತ್ತಂತೆ! ಆ ಕುತೂಹಲಕಾರಿ ಘಟನೆಯ ವಿವರ ಇಲ್ಲಿದೆ.

ಈ ಹಿಂದೆ ‘ಬಾಲಿವುಡ್ ಹಂಗಾಮಾ’ ನಡೆಸಿದ ಸಂದರ್ಶನವೊಂದರಲ್ಲಿ ಆಮಿರ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದರು. ಪುತ್ರಿ ಇರಾ ಖಾನ್ ಐಸಿಎಸ್‌ಇ ಬೋರ್ಡ್ ಎಕ್ಸಾಂ ಫಲಿತಾಂಶ ಬಂದಾಗ ಆ ಸಂದರ್ಭ ಹೇಗಿತ್ತು ಎಂಬುದನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದರು. ಇರಾ ಖಾನ್ ಅವರು ಹತ್ತನೇ ತರಗತಿಯಲ್ಲಿ ಶೇಕಡ 88.3 ಅಂಕಗಳನ್ನು ಗಳಿಸಿದ್ದರು. ಆದರೆ ಇದನ್ನು ಕೇಳಿದ ಆಮಿರ್‌ಗೆ ಮೊದಲು ನಂಬಲು ಸಾಧ್ಯವೇ ಆಗಲಿಲ್ಲ.

ಇರಾ ಅವರ ತಾಯಿ ರೀನಾ ದತ್ತಾ ಅವರು ಬಂದು ರಿಸಲ್ಟ್ ಹೇಳಿದಾಗ, ‘ಇದು ಖಂಡಿತಾ ಏನೋ ತಪ್ಪು ಇರಬೇಕು. ರೀನಾ ಮತ್ತೊಮ್ಮೆ ಚೆಕ್ ಮಾಡು’ ಎಂದು ಆಮಿರ್ ಖಾನ್ ಹೇಳಿದ್ದರಂತೆ. ರೀನಾ ಚೆಕ್ ಮಾಡಿದ ಮೇಲೂ ಆಮಿರ್‌ಗೆ ಸಮಾಧಾನವಾಗಲಿಲ್ಲ. ಕೊನೆಗೆ ತಾವೇ ಸ್ವತಃ ಆನ್‌ಲೈನ್‌ಗೆ ಹೋಗಿ, ಇರಾ ಅವರ ರೋಲ್ ನಂಬರ್ ಹಾಕಿ ರಿಸಲ್ಟ್ ನೋಡಿದಾಗ ಅಲ್ಲಿ ಶೇಕಡ 88.3 ಅಂಕಗಳು ಇರುವುದು ಖಚಿತವಾಯಿತು.

ಸಂದರ್ಶನದಲ್ಲಿ ಈ ಬಗ್ಗೆ ಹೇಳುತ್ತಾ ನಕ್ಕ ಆಮಿರ್ ಖಾನ್, ‘ನನಗೆ ಅವಳು ಫೇಲ್ ಆಗುತ್ತಾಳೆ ಎಂಬ ಪೂರ್ಣ ನಂಬಿಕೆಯಿತ್ತು. ಆದರೆ ಅವಳು 89ರ ಆಸುಪಾಸು ಅಂಕ ಗಳಿಸಿದಾಗ ನನಗೆ ತುಂಬಾ ಹೆಮ್ಮೆಯಾಯಿತು’ ಎಂದಿದ್ದಾರೆ. ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಲಿ ಎಂದು ಬಯಸುತ್ತಾರೆ, ಆದರೆ ಆಮಿರ್ ಅವರು ಮಗಳ ಓದಿನ ವಿಚಾರದಲ್ಲಿ ಇಷ್ಟು ತಮಾಷೆಯಾಗಿ ವರ್ತಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್

ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ಸಹಜ. ಆದರೆ ಐರಾ ಖಾನ್ ಅವರು ಚಿತ್ರರಂಗಕ್ಕೆ ಬಂದಿಲ್ಲ. ತಂದೆ ದೊಡ್ಡ ಸ್ಟಾರ್ ನಟ ಆಗಿದ್ದರೂ ಕೂಡ ಐರಾ ಖಾನ್ ಅವರು ಬಣ್ಣದ ಲೋಕದ ಹಾದಿಯನ್ನು ತುಳಿದಿಲ್ಲ. ಫಿಟ್ನೆಸ್ ಟ್ರೇನರ್ ನೂಪುರ್ ಶಿಕಾರೆ ಜೊತೆ ಇರಾ ಖಾನ್ ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೂದಿ ಮುಚ್ಚಿದ ಕೆಂಡವಾದ ರಾಯರ ಜಪದ ಕಟ್ಟೆ ವಿವಾದ: ಅರ್ಚಕರ ಕುಟುಂಬದಿಂದ ಕಾನೂನು ಹೋರಾಟದ ಚಿಂತನೆ – Kannada News | Mantralaya Rayaru Bichchali Land Dispute: Priest’s family considering legal action

ರಾಯರ ಜಪದ ಕಟ್ಟೆ ವಿವಾದImage Credit source: tv9 kannada

ರಾಯಚೂರು, ಏಪ್ರಿಲ್​ 14: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಬಳಿಯ ಜಮೀನು ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿದೆ. ತಳ್ಳಾಟ, ನೂಕಾಟದ ಮಧ್ಯೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ವಿವಾದ ಸಂಬಂಧ ಹೈಕೋರ್ಟ್​ ಆದೇಶ ಪ್ರಶ್ನಿಸಿ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿರುವ ಜಪದ ಕಟ್ಟೆ ಸಮೀಪದ ಜಮೀನು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿವಾದ ಯಾವಾಗ ಬೇಕಾದರೂ ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ಇದೆ. ಇದೇ ಜಪದ ಕಟ್ಟೆ ಪಕ್ಕದಲ್ಲೇ ತುಂಗಭದ್ರಾ ನದಿ ಕೂಡ ಹರಿಯುತ್ತೆ. ಬಿಚ್ಚಾಲಿ ಮೂಲದ ರಾಯರ ಶಿಷ್ಯ ಅಪ್ಪಣ್ಣಾಚಾರ್ಯರ ಜೊತೆ ರಾಯರು ಇದೇ ಜಪದ ಕಟ್ಟೆ ಸ್ಥಳದಲ್ಲಿ 13 ವರ್ಷ ತಪಸ್ಸು ಮಾಡಿದ್ರಂತೆ.

ಇದನ್ನೂ ಓದಿ: ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ಆ ಬಳಿಕ ನದಿ ದಾಟಿ ರಾಯರು ಮಂತ್ರಾಲಯಕ್ಕೆ ಹೋಗಿ ವೃಂದಾವನಸ್ಥರಾದರು. ಆ ಬಳಿಕ ರಾಯರು ಜ್ಯೋತಿ ರೂಪದಲ್ಲಿ ಅಪ್ಪಣ್ಣಾಚಾರ್ಯರಿಗೆ ದರ್ಶನ ನೀಡಿ, ನೀನು ನಿತ್ಯ ಮಂತ್ರಾಲಯಕ್ಕೆ ಬರಬೇಡ. ನಾನು ತಪಸ್ಸು ಮಾಡಿದ ಸ್ಥಳದಲ್ಲೇ ಬೃಂದಾವನ ನಿರ್ಮಿಸಿ ಅಲ್ಲೇ ಪೂಜೆ ಮಾಡು ಅಂತ ಹೇಳಿದ್ರಂತೆ. ಹಾಗಾಗಿ ಅದೇ ಸ್ಥಳದಲ್ಲಿ ರಾಯರ ಏಕಶಿಲಾ ಬೃಂದಾವನವನ್ನ ಅಪ್ಪಣ್ಣಾಚಾರ್ಯರು ನಿರ್ಮಿಸಿದ್ದರು. ಅದೇ ಅಪ್ಪಣ್ಣಾಚಾರ್ಯರ ವಂಶಸ್ಥರೇ ಇಲ್ಲಿ ಈಗ ಅರ್ಚಕರಾಗಿದ್ದಾರೆ.

ಜಪದ ಕಟ್ಟೆ ಪಕ್ಕದಲ್ಲಿರುವ ಸರ್ವೆ ನಂಬರ್ 35ರಲ್ಲಿ 1.2 ಎಕರೆ ಹಾಗೂ ಸರ್ವೆ ನಂಬರ್ 37ರಲ್ಲಿ 1.31 ಎಕರೆ ಸೇರಿ ಒಟ್ಟು 2 ಎಕರೆ 33 ಗುಂಟೆ ಜಮೀನನ್ನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ‌ ಆದೇಶಿಸಿತ್ತು. ರಾಘವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನ ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡೆಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶವನ್ನ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಚಕರ ಕುಟುಂಬಸ್ಥರಾದ ಪಾಡದ ರಾಘವೇಂದ್ರ ಆಚಾರ್ಯ ಹಾಗೂ ಇತರರು ರಿಟ್ ಅರ್ಜಿ ಹಾಕಿದ್ದರು.

ವಿರೋಧದ ಮಧ್ಯೆ ಸರ್ವೆ ಕಾರ್ಯ ಅಂತ್ಯ

ಕಳೆದ ವಾರ ರಿಟ್ ಅರ್ಜಿ ವಜಾ ಆದ ಹಿನ್ನೆಲೆ ನಿನ್ನೆ ಅಧಿಕಾರಿಗಳ ತಂಡ ಸೂಕ್ತ ಬಿಗಿ ಭದ್ರತೆಯಲ್ಲಿ ಜಮೀನಿನ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಿದ್ದರು. ಆಗಲೇ ದೊಡ್ಡ ಹೈಡ್ರಾಮಾ ಕೂಡ ನಡೆದಿತ್ತು. ಸರ್ವೆ ಮಾಡಲು ಬಿಡಲ್ಲ ಅಂತ ಕೆಲ ಸಾಗುವಳಿದಾರರು ಕಿಡಿಕಾರಿದ್ದರು. ಆಗ ತಳ್ಳಾಟ, ನೂಕಾಟವಾಗಿ ರಂಪಾಟ ನಡೆದುಹೋಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನ ವಶಕ್ಕೂ ಪಡೆದಿದ್ದರು. ಸದ್ಯ ವಿರೋಧದ ಮಧ್ಯೆಯೂ ಸರ್ವೆ ಕಾರ್ಯ ಮುಗಿದಿದೆ.

ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಸರ್ವೆ ಕಾರ್ಯ ಮುಗಿಸಿ, ಪಂಚನಾಮೆ ಮಾಡಲಾಗಿದೆ. ಆದರೆ ಪಂಚನಾಮೆ ವೇಳೆ ಅರ್ಚಕರ ಕುಟುಂಬ ಸಹಿ ಹಾಕಲು ನಿರಾಕರಿಸಿ, ವಾಗ್ವಾದಕ್ಕೆ ಕಾರಣವಾಯ್ತು. ಕೂಡಲೇ ಸರ್ವೆಗೆ ಒಳಪಟ್ಟ ಕಟ್ಟಡಗಳನ್ನ ಖಾಲಿ ಮಾಡಲು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ನೋಟಿಸ್ ನೀಡಿ ಅತಿಕ್ರಮಣ ಸ್ಥಳ ತೆರುವುಗೊಳಿಸಲು ಅಧಿಕಾರಿಗಳ ತಂಡ ಸಿದ್ಧತೆ ನಡೆಸಿದೆ.

ಮಂತ್ರಾಲಯ ಮಠದ ವಿರುದ್ಧ ಅರ್ಚಕರ ಕುಟುಂಬ ಕಿಡಿ: ಕಾನೂನು ಹೋರಾಟಕ್ಕೆ ಸಜ್ಜ

ಇತ್ತ ಇಷ್ಟಕ್ಕೆ ಸುಮ್ಮನಾಗದ ಜಪದ ಕಟ್ಟೆ ಅರ್ಚಕರ ಕುಟುಂಬ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದೆ. ನಾವು ಮಂತ್ರಾಲಯ ರಾಯರ ಭಕ್ತರು. ಆದರೆ ಮಠದ ಆಡಳಿತದವರು ಹೀಗೆ ಮಾಡೋದು ಎಷ್ಟು ಸರಿ ಅಂತ ಮಂತ್ರಾಲಯ ಮಠದ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಮಂತ್ರಾಲಯದಲ್ಲಿ ಮೂಲ ರಾಮದೇವರ ವಿಗ್ರಹ ಕಳೆದು ಹೋದಾಗ, ನಮ್ಮ ಹಿರಿಯರು ಅದನ್ನ ಹುಡುಕಿ ಕೊಟ್ಟಿದ್ದರು. ಆಗ ಇದೇ ಶ್ರೀಮಠದವರು ನಮ್ಮ ಕುಟುಂಬ ಬಾಡಿ ಹೋಗಬಾರ್ದು ಅಂತ ಬಾಡದ ಕುಟುಂಬ ಅಂತ ತಾಮ್ರದ ಪತ್ರದ ಮೂಲಕ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷ ಇದೆ. ಆದರೆ ಈ ರೀತಿ ನಮ್ಮ ಕುಟುಂಬಕ್ಕೆ ಮಾಡೋದು ಸರಿಯಲ್ಲ ಅಂತ ಅರ್ಚಕರಾದ ಪವನ್ ಆಚಾರ್ಯ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಜಪದ ಕಟ್ಟೆ ಅರ್ಚಕರ ಕಡೆಯವರು ಸಜ್ಜಾಗಿದ್ದಾರೆ.

ಸದ್ಯ ಭೂ ವಿವಾದ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದು ಯಾವಾಗ ಬೇಕಾದ್ರೂ ಮತ್ತೆ ಕಿಡಿಹೊತ್ತುವ ಸಾಧ್ಯತೆ ಇದೆ. ಇತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ತೀವ್ರ ನಿಗಾವಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತುಂಬಾ ಬೇಗ ಸುಸ್ತಾಗುವುದಕ್ಕೆ ಕಾರಣ ಏನ್ ಗೊತ್ತಾ? ಕಾರಣ ತಿಳಿದರೆ ಆಶ್ಚರ್ಯವಾಗುವುದು ಖಂಡಿತ

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಯಾವುದೇ ರೀತಿಯ ಕೆಲಸ ಮಾಡದಿದ್ದರೂ ಕೂಡ ಸುಸ್ತಾಗುವುದನ್ನು (Fatigue) ನೋಡಿರಬಹುದು. ಯಾವುದೇ ರೀತಿಯ ದೇಹ ದಂಡಿಸುವ ಕೆಲಸ ಮಾಡದಿದ್ದರೂ ಕೂಡ ದಣಿವು, ದುರ್ಬಲತೆ ಮತ್ತು ನಿಷ್ಕ್ರಿಯತೆ ಕಂಡುಬರುತ್ತದೆ. ಆದರೆ ಈ ರೀತಿಯಾಗುವುದನ್ನು ಯಾರೂ ಕೂಡ ಅಷ್ಟಾಗಿ ಗಣನೆಗೆ ತೆಗದುಕೊಳ್ಳುವುದಿಲ್ಲ. ಸಾಮಾನ್ಯ ಸಮಸ್ಯೆಗಳಲ್ಲಿ ಒಂದೆಂದು ನಿರ್ಲಕ್ಷಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ಏಕೆಂದರೆ ಈ ರೀತಿ ಕಾರಣವಿಲ್ಲದೆ ದಣಿವಾಗುವುದಕ್ಕೆ ಬಹಳಷ್ಟು ಕಾರಣಗಳಿರಬಹುದು ಅವುಗಳಲ್ಲಿ ಪ್ರಮುಖವಾದದ್ದು ದೇಹದಲ್ಲಿ ಅಗತ್ಯವಿರುವ ವಿಟಮಿನ್ ಕೊರತೆಯಾಗಿದೆ.

ದಣಿವಿಗೆ ಕಾರಣವಾಗುವ ಲಕ್ಷಣಗಳು:

ನಿರಂತರವಾಗಿ ದೌರ್ಬಲ್ಯ, ಕೆಲಸ ಮಾಡಲು ಆಸಕ್ತಿ ಕಡಿಮೆ, ತಲೆಸುತ್ತು, ಸ್ನಾಯು ನೋವು, ಗಮನ ಕೇಂದ್ರೀಕರಣದಲ್ಲಿ ತೊಂದರೆ ಮತ್ತು ಬೇಗನೆ ದಣಿವು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ಕೆಲವರಿಗೆ ಮೆಟ್ಟಿಲೇರುವಾಗ ಉಸಿರಾಟ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು ಅಥವಾ ತಲೆ ಭಾರವಾಗಿರುವ ಅನುಭವವೂ ಕಾಣಬಹುದು.

ಇದನ್ನೂ ಓದಿ: ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳ ವರದಿ ನಾರ್ಮಲ್ ಇದ್ದರೂ ದಿನಪೂರ್ತಿ ದಣಿವೇ? ಈ 4 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಗಮನ

ಯಾವ ವಿಟಮಿನ್ ಮುಖ್ಯ?

ದಣಿವನ್ನು ಕಡಿಮೆ ಮಾಡಿಕೊಳ್ಳಲು ವಿಟಮಿನ್ ಬಿ12 ಅತ್ಯಂತ ಮುಖ್ಯವಾಗಿದೆ. ಇದು ರಕ್ತದ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಮತ್ತು ನರಮಂಡಲದ ಕಾರ್ಯವನ್ನು ಸರಾಗವಾಗಿ ನಡೆಸುತ್ತದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕ ಸರಬರಾಜು ಕಡಿಮೆಯಾಗುತ್ತದೆ, ಇದರಿಂದ ದಣಿವು ಹೆಚ್ಚಾಗುತ್ತದೆ. ಈ ವಿಟಮಿನ್ ಬಿ12ನ್ನು ಸರಿಯಾಗಿ ಪಡೆಯಲು ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು ಮತ್ತು ಮಾಂಸಾಹಾರವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸಸ್ಯಾಹಾರಿಗಳು ಫೋರ್ಟ್‌ಫೈಡ್ ಆಹಾರಗಳನ್ನು ಆಯ್ಕೆ ಮಾಡಬಹುದು. ಕೆಲ ಸಂದರ್ಭಗಳಲ್ಲಿ ವೈದ್ಯರು ಸಪ್ಲಿಮೆಂಟ್ ಅಥವಾ ಇಂಜೆಕ್ಷನ್ ಸಲಹೆ ನೀಡಬಹುದು, ಆದರೆ ವೈದ್ಯರ ಸಲಹೆಯಿಲ್ಲದೆ ಅವನ್ನು ಬಳಸಬಾರದು.

ಜೀವನಶೈಲಿಯೂ ಮುಖ್ಯ:

ಸರಿಯಾದ ನಿದ್ರೆ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಹೆಚ್ಚು ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ದಿನದ ನಡುವೆ ವಿರಾಮ ತೆಗೆದುಕೊಳ್ಳುವುದು ಸಹ ಉಪಯುಕ್ತ. ನಿರಂತರ ದಣಿವು ಕೇವಲ ವಿಶ್ರಾಂತಿ ಕೊರತೆಯ ಕಾರಣವಲ್ಲ, ಅದು ವಿಟಮಿನ್ ಕೊರತೆಯ ಸೂಚನೆಯಾಗಿರಬಹುದು. ಹಾಗಾಗಿ ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಮೀಸಲಾತಿಗೆ ವೇದಿಕೆ ಸಜ್ಜು; ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಲು ಮೋದಿ ಸರ್ಕಾರ ಪ್ರಸ್ತಾಪ – Kannada News | Modi Government proposes increase of Lok Sabha seats from 543 to 850 setting stage for womens reservation

ನವದೆಹಲಿ, ಏಪ್ರಿಲ್ 14: ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಜಾರಿಗೆ ತರಲು ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ವಿಸ್ತರಣೆಯು ನಾರಿ ಶಕ್ತಿ ವಂದನ (Nari Shakti Vandana) ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ಅನುಷ್ಠಾನವನ್ನು ಜಾರಿಗೊಳಿಸುವ ಯೋಜನೆಯ ಭಾಗವಾಗಿದೆ. ಇದು ಕೆಳಮನೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ.

ಈ ಕಾಯ್ದೆ ಸದನದ ಸುಮಾರು ಮೂರನೇ ಒಂದು ಭಾಗದಷ್ಟು ಅಥವಾ 273 ಸ್ಥಾನಗಳನ್ನು ಮಹಿಳಾ ಶಾಸಕರಿಗೆ ಮೀಸಲಿಡಲು ಅವಕಾಶ ಕಲ್ಪಿಸುತ್ತದೆ. ಮಹಿಳಾ ಮೀಸಲಾತಿ ಮಸೂದೆಯ ಜಾರಿಗೆ ಕೇಂದ್ರ ಸರ್ಕಾರವು ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ನಿಗದಿಪಡಿಸಿದೆ. ಮಸೂದೆಯ ಪ್ರತಿಯನ್ನು ಇಂದು ಸಂಸದರೊಂದಿಗೆ ಹಂಚಿಕೊಳ್ಳಲಾಯಿತು.

ಈ ಪ್ರಸ್ತಾವನೆಯಡಿಯಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಕೇಂದ್ರಾಡಳಿತ ಪ್ರದೇಶಗಳಿಗೆ ಹೋಗಲಿದ್ದು, ಒಟ್ಟು ಬಲವನ್ನು 850ಕ್ಕೆ ಏರಿಸಲಾಗುವುದು. ಈ ಬದಲಾವಣೆಗಳು 2029ರ ಲೋಕಸಭಾ ಚುನಾವಣೆಯಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಮಹಿಳೆಯರಿಗೆ ಹಂಚಿಕೆಯಾಗುವ ಸ್ಥಾನಗಳನ್ನು ನಿರ್ಧರಿಸಲು ಡಿಲಿಮಿಟೇಶನ್ ಆಯೋಗವನ್ನು ರಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Explainer: ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ನಾರಿ ಶಕ್ತಿ ವಂದನ ಅಧಿನಿಯಮವನ್ನು ಭಾರತೀಯ ಸಂಸತ್ ಸೆಪ್ಟೆಂಬರ್ 202 ರಲ್ಲಿ ಅಂಗೀಕರಿಸಿತು. ಇದನ್ನು ಸೆಪ್ಟೆಂಬರ್ 19, 2023ರಂದು ಲೋಕಸಭೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪರಿಚಯಿಸಲಾಯಿತು. ಸೆಪ್ಟೆಂಬರ್ 20, 2023ರಂದು 454 ಮತಗಳ ಪರವಾಗಿ ಮತ್ತು 2 ಮತಗಳ ವಿರುದ್ಧವಾಗಿ ಅಂಗೀಕರಿಸಲಾಯಿತು. ರಾಜ್ಯಸಭೆಯು ಸೆಪ್ಟೆಂಬರ್ 21, 2023ರಂದು 214 ಮತಗಳೊಂದಿಗೆ ಸರ್ವಾನುಮತದಿಂದ ಈ ಮಸೂದೆಯನ್ನು ಅಂಗೀಕರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 28, 2023ರಂದು ಇದನ್ನು ಕಾನೂನಾಗಿ ಪರಿವರ್ತಿಸಲು ಸಹಿ ಮಾಡಿದರು.

ಇದನ್ನೂ ಓದಿ: Women’s Reservation Bill 2026: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಪತ್ರ

ಇದರ ಪ್ರಕಾರ ಮಹಿಳೆಯರಿಗೆ 33% ಮೀಸಲಾತಿ: ನೀಡಲಾಗಿದ್ದು, ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮೀಸಲಿಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು? – Kannada News | Samrat Choudharys first reaction after being selected as Bihar Chief Minister

ಪಾಟ್ನಾ, ಏಪ್ರಿಲ್ 14: ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ (Samrat Chaudhary) ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬುಧವಾರ (ಏಪ್ರಿಲ್ 15) ಬೆಳಿಗ್ಗೆ 11 ಗಂಟೆಗೆ ಅವರು ಬಿಹಾರ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ನಡೆದ ಶಾಸಕಾಂಗ ಸಭೆಯಲ್ಲಿ ಘೋಷಣೆಯಾದ ಕೂಡಲೇ ಸಾಮ್ರಾಟ್ ಚೌಧರಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲೆ ನಂಬಿಕೆ ಇರಿಸಿ ಬಿಹಾರ ಶಾಸಕಾಂಗ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್​ಗೆ ಸಾಮ್ರಾಟ್ ಚೌಧರಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

“ನನ್ನ ಮೇಲೆ ನಂಬಿಕೆ ಇಟ್ಟು ಬಿಜೆಪಿ ಬಿಹಾರ ಶಾಸಕಾಂಗ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್​​ಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನಗೆ, ಇದು ಕೇವಲ ಒಂದು ಹುದ್ದೆಯಲ್ಲ. ಇದು ಬಿಹಾರದ ಜನರಿಗೆ ಸೇವೆ ಸಲ್ಲಿಸಲು, ಅವರ ನಂಬಿಕೆ ಮತ್ತು ಕನಸುಗಳನ್ನು ನನಸಾಗಿಸಲು ಒಂದು ಪವಿತ್ರ ಅವಕಾಶ. ಪ್ರತಿಯೊಬ್ಬ ನಾಗರಿಕನ ನಿರೀಕ್ಷೆಗಳನ್ನು ಸಂಪೂರ್ಣ ಸಮಗ್ರತೆ, ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಪೂರೈಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಮಾರ್ಗದರ್ಶನದಲ್ಲಿ ಬಿಹಾರವನ್ನು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಹೊಸ ಆಯಾಮಗಳತ್ತ ಕೊಂಡೊಯ್ಯಲು ನಾನು ನಿರಂತರವಾಗಿ ಬದ್ಧನಾಗಿರುತ್ತೇನೆ. ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ನನ್ನ ದೊಡ್ಡ ಶಕ್ತಿ. ಜೈ ಬಿಹಾರ, ಜೈ ಭಾರತ್!” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version