ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶ: ಕರ್ನಾಟದಲ್ಲಿ 6 ದಿನ ಭಾರೀ ಮಳೆ, ಯೆಲ್ಲೋ- ಆರೇಂಜ್ ಅಲರ್ಟ್ – Kannada News
ಬೆಂಗಳೂರು, (ಜೂನ್ 04): ಕೊನೆಗೂ ಕೇರಳಕ್ಕೆ (Kerala) ಮುಂಗಾರು (Southwest Monsoon) ಪ್ರವೇಶಿಸಿದೆ. ಇಂದು (ಜೂನ್ 04) ಅಧಿಕೃತವಾಗಿ ನೈಋತ್ಯ ಮುಂಗಾರು ಕೇರಳ ಎಂಟ್ರಿಕೊಟ್ಟಿದ್ದು, ಕರ್ನಾಟಕದ (Karnataka) ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಇನ್ನುಳಿಂದಂತೆ ಇಂದಿನಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮುಂಗಾರು ಮಳೆ ವ್ಯಾಪಿಸಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಇಂದಿನಿಂದ ಜೂನ್ 9ರವರೆಗೂ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ…