ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್ – Kannada News | Gilli Bigg Boss: Fans Fulfill Actor’s 1M Instagram Follower Wish

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ರೇಸ್​​ನಲ್ಲಿ ಗಿಲ್ಲಿ ನಟ ಕಠಿಣ ಸ್ಪರ್ಧೆಯನ್ನೇ ನೀಡುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬ ಪ್ರಾರ್ಥನೆಯನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಗಿಲ್ಲಿ ನಟ ಇಟ್ಟ ಒಂದು ಬೇಡಿಕೆಯನ್ನು ಫ್ಯಾನ್ಸ್ ಹೊರಗೆ ಈಡೇರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗಿಲ್ಲಿ ಆಸೆ ಪೂರ್ಣಗೊಳ್ಳಲಿದೆ. ಹಾಗಾದರೆ, ಗಿಲ್ಲಿ ಇಟ್ಟ ಕೋರಿಕೆ ಏನು? ಆ ಬಗ್ಗೆ ಇಲ್ಲಿದೆ ವಿವರ.

ಜನಪ್ರಿಯತೆ ಹೆಚ್ಚಾದಂತೆಲ್ಲ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಇದು ಕೆಲವರಿಗೆ ಪ್ರತಿಷ್ಠೆ ಕೂಡ ಹೌದು. ಈ ಕಾರಣದಿಂದಲೇ ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್​​ಗಳನ್ನು ಹಂಚಿಕೊಂಡು ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ಗಿಲ್ಲಿ ನಟ ಅವರ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಒಂದು ಮಿಲಿಯನ್ (10 ಲಕ್ಷ) ಗಡಿ ತಲುಪುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ಆರಂಭಿಸಿದ ಆಂದೋಲನವೇ ಕಾರಣ.

ಗಿಲ್ಲಿ ನಟ ಅವರು ಇತ್ತೀಚೆಗೆ ಕಾವ್ಯಾ ಬಳಿ ಮಾತನಾಡುತ್ತಾ, ‘ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರಬೇಕಿತ್ತು’ ಎಂದು ಹೇಳಿಕೊಂಡರು. ಇದನ್ನು ಅವರ ಅಭಿಮಾನಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸದ್ಯ (ಜನವರಿ 8 ಬೆಳಿಗ್ಗೆ 9 ಗಂಟೆ) ಅವರ ಫಾಲೋವರ್ಸ್ ಸಂಖ್ಯೆ 9.36 ಲಕ್ಷ ಇದೆ. ಅನಾಯಾಸವಾಗಿ ಅವರ ಹಿಂಬಾಲಕರ ಸಂಖ್ಯೆ ಮಿಲಿಯನ್ ತಲುಪಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ

ಗಿಲ್ಲಿ ಅವರು ಬಿಗ್ ಬಾಸ್​​ಗೆ ಬಂದಾಗ ಅವರ ಇನ್​ಸ್ಟಾ ಹಿಂಬಾಲಕರ ಸಂಖ್ಯೆ 1.69 ಲಕ್ಷ ಮಂದಿ ಇದ್ದರು. ಈಗ ಅದು ಮಿಲಿಯನ್ ತಲುಪುತ್ತಿದೆ. ಮತ್ತೊಂದು ವಿಶೇಷ ಎಂದರೆ ಕೆಲವೇ ದಿನಗಳ ಹಿಂದೆ ಅವರ ಇನ್​​ಸ್ಟಾ ಫಾಲೋವರ್ಸ್​ ಸಂಖ್ಯೆ 6 ಲಕ್ಷ ಇತ್ತು. ಈಗ ಅಭಿಮಾನಿಗಳ ಕ್ಯಾಂಪೇನ್ ಬಳಿಕ ಆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಫಿನಾಲೆ ಪೂರ್ಣಗೊಳ್ಳುವ ವೇಳೆಗೆ ಅವರ ಹಿಂಬಾಲಕರ ಸಂಖ್ಯೆ ಎಷ್ಟಾಗಿರುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಮರಿ ವೀರಪ್ಪನ್ ಕೊನೆಗೂ ಬಂಧನ – Kannada News | Male Mahadeshwara Tiger Poacher Govinda Caught: Forest Officials End 5 Month Hunt

ಚಾಮರಾಜನಗರ, ಜ.8: ಬರೋಬ್ಬರಿ 5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ನಟೋರಿಯಸ್ ಗೋವಿಂದ (Govinda) ಅಲಿಯಾಸ್​​ ಮರಿ ವೀರಪ್ಪನ್ ಇದೀಗ ಕೊನೆಗೂ ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಮರಿ ವೀರಪ್ಪನ್ ಬಂಧನ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಇದೀಗ ನಿರಂತರ ಕಾರ್ಯಚರಣೆಯ ನಂತರ ಗೋವಿಂದನ್ನು ಬಂಧಿಸಲಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟೋರಿಯಸ್ ಗೋವಿಂದ ಹುಡುಕಾಟ ನಡೆದಿತ್ತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಕಾಡಂಚಿನ ಗ್ರಾಮದಲ್ಲಿ ಈ ನಟೋರಿಯಸ್ ಗೋವಿಂದ ತಿರುಗಾಡುತ್ತಿದ್ದ ಎಂದು ಹೇಳಲಾಗಿತ್ತು.

ಇದೀಗ ಅರಣ್ಯಾಧಿಕಾರಿಗಳು ಮೈಸೂರಿನ ರೈಲ್ವೆ ನಿಲ್ಧಾಣದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಗೋವಿಂದ ಹುಲಿಗಳಿಗೆ ಕಾರ್ಬೊಫ್ಯೂರಾನ್ ವಿಷ ಹಾಕಿ ಸತ್ತ ಬಳಿಕ ದೇಹವನ್ನು ಮೂರು ತುಂಡಗಳಾಗಿ ಕತ್ತರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣ ಅರಣ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಚ್ಚಮಲ್ಲ, ಸಿದ್ದ, ಸಂಪು, ಚಂದು ಹಾಗೂ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಇತ್ತೀಚೆಗಷ್ಟೆ ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಆದ್ರೆ 5 ತಿಂಗಳಿಂದ ಅರಣ್ಯ ಅಧಿಕಾರಿಗಳ ಕೈಗೆ ಸಿಗದೆ ಆಟವಾಡಿಸುತ್ತಿದ್ದ ಗೋವಿಂದನ ಖಚಿತ ಮಾಹಿತಿ ಸಿಕ್ಕ ತಕ್ಷಣ ಅರಣ್ಯಾಧಿಕಾರಿಗಳು ಅವನನ್ನು ಬಂಧಿಸಿದ್ದಾರೆ. ಬರೋಬ್ಬರಿ 30 ಮಂದಿ ಅರಣ್ಯ ಸಿಬ್ಬಂದಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’, ಸಂಕಷ್ಟದಲ್ಲಿ ರೈತರು

ಯಾರು ಈ ‘ಮರಿ ವೀರಪ್ಪನ್’?

ಕಾಡುಗಳ್ಳ ವೀರಪ್ಪನ್ ಸತ್ತು ಹಲವು ವರ್ಷಗಳಾಗಿದ್ದರೂ, ಅವನಷ್ಟೇ ಅರಣ್ಯ ಪ್ರದೇಶದಲ್ಲಿ ಕ್ರೌರ್ಯ ಮೆರೆವ ಈ ಗೋವಿಂದನ್ನು ಮರಿ ವೀರಪ್ಪನ್​​ ಎಂದು ಕರೆಯಾಲಾಗಿತ್ತು. ಇತ್ತೀಚೆಗೆ (ನವೆಂಬರ್ 2025 ರಲ್ಲಿ) ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಭೀಕರ ಹುಲಿ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನಲ್ಲಿ ಚಿರತೆ ಅಥವಾ ಹುಲಿಗಳನ್ನು ಗುರಿಯಾಗಿಸಿ ಇರಿಸಿದ್ದ ವಿಷವನ್ನು ಸೇವಿಸಿ ದೊಡ್ಡ ಹುಲಿಯೊಂದು ಸಾವನ್ನಪ್ಪಿತ್ತು. ಅದನ್ನು ಮೂರು ತುಂಡುಗಳಾಗಿ ಕತ್ತರಿಸಿ ಕಾಡಿನೊಳಗೆ ಬಿಸಾಡಿದ್ದರು. ಈ ಭೀಕರ ಕೃತ್ಯ ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಇದು ಕೇವಲ ಬೇಟೆಯಲ್ಲ, ಅರಣ್ಯ ಅಧಿಕಾರಿಗಳ ಮೇಲಿನ ಆಕ್ರೋಶ ಎಂದು ಹೇಳಲಾಗಿತ್ತು. ಇದೀಗ ಆತನ ಬಂಧನ ಮಾಡಲಾಗಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್ – Kannada News | Late Night Rescue in Pune as Delivery Agent Helps Men Trapped on Balcony

ಪುಣೆ, ಜನವರಿ 08: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್​ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್​ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು. ಡೆಲಿವರಿ ಮಾಡಲು ಬಂದವರ ಬಳಿ ಸಹಾಯ ಕೇಳುವುದು ಅವರ ಪ್ಲ್ಯಾನ್ ಆಗಿತ್ತು. ಮಲಗಿದ್ದ ಪೋಷಕರಿಗೆ ಡಿಸ್ಟರ್ಬ್ ಆಗದಂತೆ ಮುಖ್ಯ ಬಾಗಿಲನ್ನು ತೆರೆಯುವುದು ಹೇಗೆ ಎಂಬುದನ್ನು ಸೂಚಿಸಿದರು. ಈ ಘಟನೆಯನ್ನು ಪುಣೆ ನಿವಾಸಿ ಮಿಹಿರ್ ಗಹುಕರ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Census 2027: ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತ ಶುರು – Kannada News | Census of India 2027: First Enumeration Stage of Census 2027 Set Between April and September

ಜನಗಣತಿ-ಸಾಂದರ್ಭಿಕ ಚಿತ್ರImage Credit source: Indian Express

ನವದೆಹಲಿ, ಜನವರಿ 08: ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿ(Census)ಯ ಮೊದಲ ಹಂತವು ಆರಂಭಗೊಳ್ಳಲಿದ್ದು ಸೆಪ್ಟೆಂಬರ್ 30ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಪಟ್ಟಿ ಅಭಿಯಾನದೊಂದಿಗೆ ನಡೆಯಲಿದೆ. ಬುಧವಾರ ಹೊರಡಿಸಲಾಗಿರುವ ಸರ್ಕಾರಿ ಅಧಿಸೂಚನೆಯಲ್ಲಿ ಈ ಉದ್ದೇಶಕ್ಕಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು 30 ದಿನಗಳ ಅವಧಿಯನ್ನು ನಿರ್ದಿಷ್ಟಪಡಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) ಸರ್ಕಾರಗಳು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2026 ರವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ನಡೆಸುತ್ತವೆ. ಇದು ಜನಗಣತಿಯ ಮೊದಲ ಹಂತವಾಗಿದ್ದು, ಮನೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ದಾಖಲಿಸಲಾಗುತ್ತದೆ. ಆದರೆ ಇದು ಜನಸಂಖ್ಯೆಯ ಬಗ್ಗೆ ಅಲ್ಲ ಎನ್ನಲಾಗಿದೆ.

30ದಿನಗಳ ಮನೆ ಪಟ್ಟಿ ಅಭಿಯಾನ ಪ್ರಾರಂಭವಾಗುವ ಮೊದಲು 15 ದಿನಗಳ ಅವಧಿಯಲ್ಲಿ ಸ್ವಯಂ ಗಣತಿಗೆ ಅವಕಾಶವಿರುತ್ತದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದ್ದ ಜನಗಣತಿಯನ್ನು COVID-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇದನ್ನು 2021 ರಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.

ಎರಡು ಹಂತಗಳಲ್ಲಿ ಡಿಜಿಟಲ್ ಜನಗಣತಿ
ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026 ರವರೆಗೆ ಮನೆ ಪಟ್ಟಿ ಮತ್ತು ವಸತಿ ಜನಗಣತಿ ಮತ್ತು ಫೆಬ್ರವರಿ 2027 ರಲ್ಲಿ ಜನಸಂಖ್ಯಾ ಜನಗಣತಿ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಭಾರತದ ಜನಗಣತಿ 2027 ರ ಭಾಗವಾಗಿ ಮನೆ ಪಟ್ಟಿ ಕಾರ್ಯವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 1, 2026 ಮತ್ತು ಸೆಪ್ಟೆಂಬರ್ 30, 2026 ರ ನಡುವೆ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮತ್ತಷ್ಟು ಓದಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ, 11,718 ಕೋಟಿ ರೂ.ಮೀಸಲು

ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುವುದು ಎಂಬುದು ಗಮನಿಸಬೇಕಾದ ಸಂಗತಿ. ಈ ಕಾರ್ಯದ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವುದರಿಂದ, COVID-19 ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿಯವರೆಗೆ ವಿಳಂಬವಾಗಿದ್ದ ಹತ್ತು ವರ್ಷಗಳ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಕಳೆದ ವರ್ಷ ಡಿಸೆಂಬರ್ 12 ರಂದು, ಪ್ರಧಾನಿ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು 11,718.2 ಕೋಟಿ ರೂ. ವೆಚ್ಚದಲ್ಲಿ 2027 ರ ಭಾರತದ ಜನಗಣತಿಯನ್ನು ನಡೆಸುವ ಪ್ರಸ್ತಾಪವನ್ನು ಅನುಮೋದಿಸಿತು.

ದೇಶದ ಮೊದಲ ಡಿಜಿಟಲ್ ಜನಗಣತಿಯಲ್ಲಿ ಸುಮಾರು 3 ಮಿಲಿಯನ್ ಗಣತಿದಾರರು ಭಾಗವಹಿಸಲಿದ್ದಾರೆ. ಉತ್ತಮ ಗುಣಮಟ್ಟದ ಡೇಟಾವನ್ನು ಖಚಿತಪಡಿಸಿಕೊಳ್ಳಲು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ.

ಸಾಮಾನ್ಯವಾಗಿ ಸರ್ಕಾರಿ ಶಿಕ್ಷಕರಾಗಿರುವ ಜನಗಣತಿ ಗಣತಿದಾರರು ಎಲ್ಲಾ ಮಾಹಿತಿಯನ್ನು ತಮ್ಮ ಟ್ಯಾಬ್ಲೆಟ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಮನೆ-ಮನೆಗೆ ಹೋಗಿ ನಮೂದಿಸುತ್ತಾರೆ. ಪ್ರತಿಯೊಂದು ಮನೆಯ ಸ್ಥಳ, ಸೌಕರ್ಯಗಳು, ಕುಟುಂಬ ಸದಸ್ಯರ ಶಿಕ್ಷಣ, ಭಾಷೆ, ಧರ್ಮ, ಉದ್ಯೋಗ, ಅಂಗವೈಕಲ್ಯ, ವಲಸೆ ಮತ್ತು ಇತರ ಪ್ರಮುಖ ವಿವರಗಳನ್ನು ದಾಖಲಿಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿ ನಮೂದಿಸಲಾದ ಡೇಟಾವನ್ನು ರಕ್ಷಿಸಲು ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಯಾವುದೇ ಡೇಟಾ ಸೋರಿಕೆ ಅಥವಾ ಟ್ಯಾಂಪರಿಂಗ್ ಆಗದಂತೆ ನೋಡಿಕೊಳ್ಳುತ್ತದೆ.

ಸ್ವಯಂ ಗಣತಿಯ ಆಯ್ಕೆ

ಈ ಬಾರಿ, ಸರ್ಕಾರವು ಜನರಿಗೆ ಸ್ವಯಂ-ಗಣತಿಯ ಆಯ್ಕೆಯನ್ನು ಸಹ ನೀಡುತ್ತದೆ. ಜನರು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ನಮೂದಿಸಲು ಸಾಧ್ಯವಾಗುತ್ತದೆ. ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಸಿಸ್ಟಮ್ ಲೋಡ್ ಅನ್ನು ಕಡಿಮೆ ಮಾಡುತ್ತದೆ. ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಲಭ್ಯವಿಲ್ಲದವರಿಗೆ ಕಾರ್ಯಕರ್ತರು ಡೇಟಾವನ್ನು ನಮೂದಿಸಲು ಮನೆ-ಮನೆಗೆ ಹೋಗುತ್ತಾರೆ. ಡಿಜಿಟಲ್ ಜನಗಣತಿಯು ಅತ್ಯಂತ ವೇಗವಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಡೇಟಾವನ್ನು ಒದಗಿಸುತ್ತದೆ ಎಂದು ಸರ್ಕಾರ ಹೇಳಿದೆ.

ದೇಶದ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿ ಪ್ರಮುಖ ಆಧಾರ

ದೇಶದ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿಯು ಅತ್ಯಂತ ಪ್ರಮುಖ ಆಧಾರವಾಗಿದೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಎಷ್ಟು ಜನರು ವಾಸಿಸುತ್ತಿದ್ದಾರೆ, ಎಲ್ಲಿ, ಯಾವ ಪರಿಸ್ಥಿತಿಗಳಲ್ಲಿ ಮತ್ತು ಯಾವ ಸೌಕರ್ಯಗಳೊಂದಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ. ನೀರು, ವಿದ್ಯುತ್, ರಸ್ತೆಗಳು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಲೋಕಸಭೆ, ವಿಧಾನಸಭೆ, ಪುರಸಭೆ ಮತ್ತು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಮತ್ತು ಗಡಿ ನಿರ್ಣಯಕ್ಕೂ ಈ ದತ್ತಾಂಶವು ಅತ್ಯಗತ್ಯ.

ಇದಕ್ಕೂ ಮೊದಲು ಜನಗಣತಿಯನ್ನು ಯಾವಾಗ ನಡೆಸಲಾಗಿತ್ತು?
ಭಾರತದಲ್ಲಿ ಕೊನೆಯ ಜನಗಣತಿಯನ್ನು 2011 ರಲ್ಲಿ ನಡೆಸಲಾಯಿತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿಯನ್ನು ಮುಂದೂಡಬೇಕಾಯಿತು. ಈಗ, ಈ ಪ್ರಕ್ರಿಯೆಯು 2027 ರಲ್ಲಿ ಪ್ರಾರಂಭವಾಗಲಿದೆ. ಜನಗಣತಿ ಕಾಯ್ದೆ 1948 ಮತ್ತು ಜನಗಣತಿ ನಿಯಮಗಳು 1990 ಈ ಕೆಲಸದ ಕಾನೂನು ಅಡಿಪಾಯಗಳಾಗಿವೆ. ಜನಗಣತಿಯು ಭಾರತದ ಅತ್ಯಂತ ಹಳೆಯ, ಅತ್ಯಂತ ವಿಶ್ವಾಸಾರ್ಹ ಮತ್ತು ಸಮಗ್ರ ದತ್ತಾಂಶ ಮೂಲವಾಗಿದ್ದು, ಎಲ್ಲಾ ಪ್ರಮುಖ ಸರ್ಕಾರಿ ಯೋಜನೆಗಳು ಮತ್ತು ನೀತಿಗಳನ್ನು ಆಧರಿಸಿದೆ.

Source link

ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ

ಗಿಲ್ಲಿ ನಟ ಅವರು ಇಬ್ಬರ ಮಧ್ಯೆ ತಂದಿಟ್ಟು ಮಜ ತೆಗೆದುಕೊಳ್ಳುವದರಲ್ಲಿ ಎತ್ತಿದ ಕೈ. ಬಿಗ್ ಬಾಸ್ ಮನೆಯಲ್ಲಿ ಆಪ್ತರಾಗಿದ್ದ ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿದೆ. ಇದನ್ನು ಬಳಸಿಕೊಳ್ಳಲು ಗಿಲ್ಲಿ ಪ್ರಯತ್ನಿಸಿದ್ದಾರೆ. ಧ್ರುವಂತ್ ಅವರಿಗೆ ಹವಾ ಹಾಕಿದ್ದಾರೆ ಗಿಲ್ಲಿ. ಈ ಫನ್ ವಿಟಿ ವೈರಲ್ ಆಗಿ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Madhav Gadgil Death: ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ – Kannada News | Renowned Ecologist Madhav Gadgil Dies in Pune After Short Illness

ಪುಣೆ, ಜನವರಿ 08: ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನರಾಗಿದ್ದಾರೆ. ಪಶ್ಚಿಮ ಘಟ್ಟಗಳು ಹಾಗೂ ಪರಿಸರ ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಅವರು ಮುಡಿಪಾಗಿಟ್ಟಿದ್ದರು. ಅವರು ಪುಣೆಯಲ್ಲಿ ಕೊನೆಯುಸಿರೆಳೆದಿದ್ದು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪಶ್ಚಿಮ ಘಟ್ಟಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿರ್ಮಿಸುವುದು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಕೆ ನೀಡುತ್ತಲೇ ಇದ್ದರು.

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Source link

ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’, ಸಂಕಷ್ಟದಲ್ಲಿ ರೈತರು – Kannada News | Tomato Price Plummets: Karnataka Farmers in Distress, Consumers Benefit

ಚಿಕ್ಕಬಳ್ಳಾಪುರ, ಜ.8: ಟೊಮೇಟೊ (Tomato price) ಮತ್ತೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭಾರೀ ಏರಿಕೆ ಕಂಡಿದ್ದ ಟೊಮೇಟೊ ರೈತರ ಮುಖದಲ್ಲಿ ಮಂದಹಾಸ ಬೀರಿತ್ತು. ಆದರೆ ಇದೀಗ ಮತ್ತೆ ರೈತರಿಗೆ ಸಂಕಷ್ಟ ತಂದಿದೆ. ಆಪಲ್ ಬೆಲೆ ಮೀರಿಸಿದ್ದ ಟೊಮೇಟೊ ಮತ್ತೆ ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಆದರೆ ರೈತರಿಗೆ ಸಂಕಷ್ಟ ಎದುರಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಅವಳಿ ಜಿಲ್ಲೆಗಳ ರೈತರು ಕೊರೆಯುವ ಚಳಿಯಲ್ಲೂ ಯಥೇಚ್ಛವಾಗಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಇದರಿಂದ ಒಳ್ಳೆಯ ಫಸಲು ಕೂಡ ಪಡೆದಿದ್ದರು. ಆದರೆ ಇದೀಗ ಚಿಕ್ಕಬಳ್ಳಾಪುರದ ಎ.ಪಿ.ಎಂ.ಸಿ ಟೊಮೇಟೊ ಮಾರುಕಟ್ಟೆಯಲ್ಲಿ 15 ಕೆ.ಜಿ ಕ್ರೇಟ್ 250 ರೂಪಾಯಿಯಿಂದ ಆರು ನೂರು ರೂಪಾಯಿಗೆ ಮಾತ್ರ ಮಾರಾಟವಾಗಿದೆ.

ಇನ್ನೂ ಒಂದು ಎಕರೆ ಟೊಮೇಟೊ ಬೆಳೆಯಲು 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಆಗುತ್ತೆ. ಟೊಮೇಟೊ ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ, ಉಳುಮೆ ಅಂತ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದ್ರೆ ಈಗ ಮತ್ತೆ ಟೊಮ್ಯಾಟೊ ಹಣ್ಣಿಗೆ ಬೆಲೆ ಕಡಿಮೆಯಾಗಿದೆ. ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಟೊಮ್ಯಾಟೊ ಬೆಳೆ ಆರಂಭ ಮಾಡಿದ್ದೆ ಚಿಕ್ಕಬಳ್ಳಾಪುರದಲ್ಲಿ ಟೊಮೇಟೊ ಹಣ್ಣಿನ ಬೆಲೆ ಕುಸಿತವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬೆಂಗಳೂರು ಸೇರಿದಂತೆ ಹಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ, ವಾಹನ ಸವಾರರಿಗೆ ಎಚ್ಚರಿಕೆ

ಕಷ್ಟ ಪಟ್ಟು ಬೆಳೆದ ಟೊಮೇಟೊ ಗೆ ಬೆಲೆ ಕಡಿಮೆಯಾದ ಕಾರಣ, ಬೇಸರ ವ್ಯಕ್ತಪಡಿಸಿರುವ ರೈತರ, ತೋಟಗಳ ಕಡೆ ಗಮನ ಕಡಿಮೆ ಮಾಡಿದ್ದಾರೆ. ಕಳೆದ ವಾರವಷ್ಟೇ 15 ಕೆಜಿಯ ಒಂದು ಬಾಕ್ಸ್‌ಗೆ 600 ರೂ. – 800 ರೂ. ರಷ್ಟಿದ್ದ ಬೆಲೆ, ಈಗ ಕೆಲವು ಕಡೆ 150 ರೂ. – 250 ರೂ. ಕ್ಕೆ ಇಳಿದಿದೆ. ರೈತರಿಗೆ ಸಿಗುವ ಬೆಲೆ ಕಡಿಮೆ ಇದ್ದರೂ, ಬೆಂಗಳೂರಿನಂತಹ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇನ್ನೂ ಕೆಜಿಗೆ 30 ರೂ. – 50 ರೂ. ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಕೆಲವು ಮಂಡಿಗಳಲ್ಲಿ ಕೆಜಿಗೆ ಕೇವಲ 10 ರೂ. ರಿಂದ 15 ರೂ. ರವರೆಗೆ ದರ ಸಿಗುತ್ತಿದೆ. ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ. ರಾಜ್ಯದಾದ್ಯಂತ ಏಕಕಾಲಕ್ಕೆ ಟೊಮೆಟೊ ಫಸಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಹಿಟ್ ಸಾಂಗ್​​ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು – Kannada News | Mamitha Baiju Trolled for ‘Ella Pugazhum’ Song at Jananaayagan Event; Vijay’s Reaction

ಮಲಯಾಳಂ ನಟಿ ಮಮಿತಾ ಬೈಜು ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ‘ಪ್ರೇಮುಲು’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ಈಗ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ಅವರ ಸಾಕು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಹಾಡಿದ್ದು, ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಮಮಿತಾ ಅವರು ತಮ್ಮ ಗ್ಲಾಮರ್ ಮೂಲಕ ಗಮನ ಸೆಳೆದವರು. ನಟನೆಯನ್ನು ಕೂಡ ಉತ್ತಮವಾಗಿ ಅವರು ಮಾಡುತ್ತಾರೆ. ಇದಕ್ಕಾಗಿಯೇ ವಿಜಯ್ ಸಿನಿಮಾದಲ್ಲಿ ಆಫರ್ ಸಿಕ್ಕಿತು. ಅವರು ಹಲವು ದಿನ ಸಿನಿಮಾ ಶೂಟ್ ಮಾಡಿದರು ಮತ್ತು ವಿಜಯ್ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡರು. ಈಗ ವಿಜಯ್ ಅವರನ್ನು ಹಾಗೂ ಅವರನ್ನು ಮೆಚ್ಚಿಸಲು ಮಮಿತಾ ಹಾಡು ಹೇಳಿದ್ದರು. ಆದರೆ, ಇದು ಟ್ರೋಲಿಗರಿಗೆ ಆಹಾರ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ

ದಳಪತಿ ವಿಜಯ್ ಅಭಿನಯದ ‘ಅಳಗಿಯ ತಮಿಳ ಮಗನ್’ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ವಿಜಯ್ ಜೊತೆ ಶ್ರಿಯಾ ಶರಣ್, ನಮಿತಾ ಮೊದಲಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ‘ಎಲ್ಲಾ ಪುಗಳುಮ್’ ಎಂಬ ಹಾಡು ಇದೆ. ಈ ಹಾಡು ಗಮನ ಸೆಳೆದಿತ್ತು. ಎಆರ್ ರೆಹಮಾನ್ ಅವರು ಈ ಹಾಡನ್ನು ಕಂಪೋಸ್ ಮಾಡಿದ್ದರು. ಈ ಹಾಡನ್ನು ಮಮಿತಾ ಹಾಡಿದ್ದರು. ಈ ಸಂದರ್ಭದಲ್ಲಿ ವಿಜಯ್ ಅವರ ಭಾವನೆ ಹೇಗಿತ್ತು ಎಂಬುದನ್ನು ಕ್ಯಾಪ್ಚರ್ ಮಾಡಲಾಗಿದೆ. ಅವರು ಸಿಟ್ಟಿನಿಂದ ಇದ್ದಂತೆ ಕಾಣಿಸಿತ್ತು.

ಈ ವಿಡಿಯೋನ ಟ್ರೋಲ್ ಮಾಡಲಾಗುತ್ತಿದೆ. ನಾವು ದೇವರ ಬಳಿ ಕೇಳಿದ್ದು ಏನು ಎಂದು ಹೇಳಿದಾಗ ಒರಿಜಿನಲ್ ಸಾಂಗ್ ಹಾಕಲಾಗಿದೆ. ದೇವರು ಕೊಟ್ಟಿದ್ದು ಏನು ಎಂದಾಗ ಮಮಿತಾ ಹಾಡನ್ನು ಹಾಕಲಾಗಿದೆ. ಸದ್ಯಕ್ಕೆ ಸೆನ್ಸಾರ್ ಸಮಸ್ಯೆಯಿಂದ ‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಯಾವಾಗ ಈ ಸಿನಿಮಾ ತೆರೆಗೆ ಬರುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಮೂರು ತಂಡಗಳಿಗೆ ಹೊಸ ನಾಯಕಿಯರು

Source link

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ ಕೇಸ್ – Kannada News | BJP Worker Assault Case in Hubballi: FIR Against Congress Corporator Suvarna Kalkuntla and 9 Others

ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ

ಹುಬ್ಬಳ್ಳಿ, ಜನವರಿ 8: ಬಿಜೆಪಿ (BJP) ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ (Hubballi) ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ (Congress) ಸದಸ್ಯೆ ಸುವರ್ಣಾ ಕಲಕುಂಟ್ಲಾ, ಡೇವಿಡ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೇರಿ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಜನವರಿ 2ರಂದು ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ, ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಸಹೋದರ ಮರಿಯಾದಾಸ್ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 109, 115(2), 118(1), 189(2), 191(2), 74, 190 ಹಾಗೂ 351ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದರು. ಮಾಜಿ ಶಾಸಕ ಸೀಮಾ ಮಸೂತಿ, ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ್ ಚೌಹಾಣ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಬುಧವಾರ ಸಂಜೆ 7 ಗಂಟೆಯವರೆಗೆ ಮುಂದುವರಿದಿತ್ತು. ಪ್ರತಿಭಟನೆಯ ಒತ್ತಡದ ಬೆನ್ನಲ್ಲೇ ಕೇಶ್ವಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಎರಡು ಕುಟುಂಬಗಳ ವೈಯಕ್ತಿಕ ಜಗಳಕ್ಕೆ ರಾಜಕೀಯ ಬಣ್ಣ?

ಈ ಪ್ರಕರಣಕ್ಕೆ ಎರಡು ಕುಟುಂಬಗಳ ನಡುವಿನ ಹಳೆಯ ವೈಯಕ್ತಿಕ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣಾ ಕಲಕುಂಟ್ಲಾ ನಡುವೆ ಕಳೆದ ಕೆಲ ವರ್ಷಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದು, ಏರಿಯಾದಲ್ಲಿ ಹಿಡಿತ ಸಾಧಿಸುವ ಪೈಪೋಟಿ ಇದಕ್ಕೆ ಕಾರಣ ಎನ್ನಲಾಗಿದೆ. ಮೊದಲು ಸುವರ್ಣಾ ಕಲಕುಂಟ್ಲಾ ಜೊತೆಗೆ ಇದ್ದ ಸುಜಾತಾ ಹಂಡಿ, ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಿಕೊಂಡ ಬಳಿಕ ಇಬ್ಬರ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿದೆ. ಈ ವೈಯಕ್ತಿಕ ಜಗಳವೇ ಇದೀಗ ರಾಜಕೀಯ ಆಯಾಮ ಪಡೆದು ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಕಾರ್ಯಕರ್ತೆಯ ಅರೆನಗ್ನಗೊಳಿಸಿ ಹಲ್ಲೆ ಪ್ರಕರಣದ ಹಿನ್ನೆಲೆ

ಜನವರಿ 5ರಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ ವೇಳೆ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಂಧನದ ಸಮಯದಲ್ಲಿ ಪೊಲೀಸ್ ವಾಹನದಲ್ಲೇ ಸುಜಾತಾ ಅರೆನಗ್ನ ಸ್ಥಿತಿಯಲ್ಲಿ ಇರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ವರ್ತನೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಆರೋಪಿತ ಪೊಲೀಸರ ಅಮಾನತಿಗೆ ಆಗ್ರಹಿಸಿದ್ದರು.

ಇದನ್ನೂ ಓದಿ: BJP ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ್ದು ಯಾರು? ಮಹಿಳೆಯ ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?

ಆದರೆ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಹಲ್ಲೆ ಆರೋಪ ಹಾಗೂ ವಿಡಿಯೋ ವೈರಲ್ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಇತ್ತ, ಈ ಘಟನೆ ಕಾಂಗ್ರೆಸ್ ಕಾರ್ಪೋರೇಟರ್ ಕುಮ್ಮಕ್ಕಿನಿಂದ ನಡೆದ ದೌರ್ಜನ್ಯ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಪ್ರಕರಣ ರಾಜ್ಯ ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version