ಬೆಂಗಳೂರು, (ಏಪ್ರಿಲ್ 13): ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಟಾಬಯಲಾಗಿವೆ.. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿಗೆ ಧರ್ಮದೇಟು ಬಿದ್ದಿವೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಬೆಂಗಳೂರಿನ ಜಿಗಣಿ ಬಳಿಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, 2024ರ ಜನವರಿಯಲ್ಲಿ ಒಂದು ಮದುವೆಯಾಗಿದೆ. ಬಳಿಕ ಆಕೆ ಗರ್ಭಿಣಿಯಾದಾಗ ರವಿ ತನ್ನ ಆಟ ಶುರು ಮಾಡಿಕೊಂಡಿದ್ದ. ಮೊದಲ ಪತ್ನಿ ಗರ್ಭಿಣಿ ಆಗಿರುವಾಗ್ಲೇ ಹುಡುಗಿ ನೋಡೋಕೆ ಶುರು ಮಾಡಿದ್ದ ರವಿ, ತನಗಿನ್ನು ಮದುವೆ ಆಗಿಲ್ಲ ಎಂದು ತನ್ನ ಕುಟುಂಬದವರ ಜೊತೆ ಊರೂರು ಸುತ್ತುತ್ತಿದ್ದ. ಅಲ್ಲದೇ ಅಕ್ಟೋಬರ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಹೀಗೆ ಈತ ಶರ್ಟ್ ಬದಲಿಸೋ ರೀತಿ ಹೆಣ್ಣು ಮಕ್ಕಳನ್ನ ಬದಲಿಸುವ ಕಾಮುಕ ರವಿ ವಿರುದ್ಧ ಈಗ ಜಿಗಣಿ (Jigani) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ.
ಗೆಲುವು ಪಡೆಯುವ ರಾಶಿಗಳು:
ಮೇಷ :
ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ ಬರಲಿದೆ. ಅನಿರೀಕ್ಷಿತವಾಗಿ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ.
ಕುಂಭ :
ನಿಮ್ಮ ರಾಶ್ಯಾಧಿಪತಿ ಶನಿಯು ಎರಡನೇ ಮನೆಯಲ್ಲಿರುವುದರಿಂದ ಆರ್ಥಿಕ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ಗುಪ್ತವಾಗಿ ನಡೆಸುವ ರಾಜಕೀಯ ತಂತ್ರಗಳು ಫಲಪ್ರದವಾಗಲಿವೆ.
ಮಿಶ್ರ ಫಲದ ರಾಶಿಗಳು:
ಕರ್ಕಾಟಕ :
ಚಂದ್ರನ ಚಲನೆಯಿಂದಾಗಿ ವಾರದ ಆರಂಭದಲ್ಲಿ ಅಸ್ಥಿರತೆ ಇರಲಿದ್ದರೂ, ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರವಿರಲಿ; ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು.
ಮಕರ :
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆದರೆ ವಿರೋಧಿಗಳ ಕುತಂತ್ರದಿಂದಾಗಿ ಗೆಲುವು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.
ಸೋಲುವ ರಾಶಿಗಳು:
ಕನ್ಯಾ :
ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರವಿರುವುದರಿಂದ ಮಿತ್ರ ಪಕ್ಷಗಳಿಂದ ಅಥವಾ ಆಪ್ತರಿಂದಲೇ ನಂಬಿಕೆ ದ್ರೋಹವಾಗುವ ಸಾಧ್ಯತೆಯಿದೆ. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ.
ಮಿಥುನ :
ಹತ್ತನೇ ಮನೆಯಲ್ಲಿ ರಾಹು-ಬುಧರ ಯುತಿಯಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಇಡುವ ಹೆಜ್ಜೆ ರಾಜಕೀಯವಾಗಿ ದೊಡ್ಡ ಬೆಲೆ ತೆರುವಂತೆ ಮಾಡಬಹುದು.
ವಿಶೇಷ ಸೂಚನೆ ಎಂದರೆ ಮಂಗಳನು ಶನಿಯೊಂದಿಗೆ ಯುತಿಯಲ್ಲಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ವಾಕ್ಸಮರ ಅಥವಾ ಆಂತರಿಕ ಬಂಡಾಯ ಏಳುವ ಸಾಧ್ಯತೆಯಿದೆ. ಹಳೆಯ ನಾಯಕರ ಪ್ರಭಾವ ಕಡಿಮೆಯಾಗಿ, ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಹ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯಲಿವೆ.
ಈ ಬದಲಾವಣೆಗಳು ವಿಶೇಷವಾಗಿ ಏಪ್ರಿಲ್ ೧೪ರ ಸೌರಮಾನ ಯುಗಾದಿ ಅನಂತರ ವೇಗ ಪಡೆಯಲಿವೆ.
ದಾವಣಗೆರೆ, (ಏಪ್ರಿಲ್ 13): ಪಂಚಮಸಾಲಿ ಮಠದಲ್ಲಿ ಲೆಕ್ಕ ಕೊಡಿ ಅಭಿಯಾನ ಮುಂದುವರೆದಿದೆ. ಈ ಸಂಬಂಧ ಇದೀಗ ಪೀಠದಿಂದ ವಚನಾನಂದ ಸ್ವಾಮೀಜಿಗಳನ್ನ (vachanananda swamiji) ಉಚ್ಛಾಟನೆ ಮಾಡಲಾಗಿದೆ. ಇದರಿಂದ ದಾವಣಗೆರೆ (Davanagere) ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಈಗ ಅಕ್ಷರಶಃ ರಣಾಂಗಣವಾಗಿದೆ. ಮಠದ ಟ್ರಸ್ಟಿಗಳಿಗೆ ‘ಲೆಕ್ಕ ಕೊಡಿ ಎಂದು ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟ್ರಸ್ಟಿಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಠದ ಆವರಣದಲ್ಲಿ ತಳ್ಳಾಟ, ನೂಕಾಟ ಶುರುವಾಗಿದ್ದು, ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ ಕೈಗೆ ಗಾಯವಾಗಿದೆ. ಇದರಿಂದ ಕೆರಳ ಸ್ವಾಮೀಜಿ ಪೊಲೀಸರ ಜತೆ ವಾಗ್ದಾದಕ್ಕಿಳಿದು.
ನವದೆಹಲಿ, ಏಪ್ರಿಲ್ 13: ಭಾರತದಾದ್ಯಂತ ಉಷ್ಣ ಅಲೆಗಳ (Heatwave) ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಭಾರತದಾದ್ಯಂತ ತಾಪಮಾನವು ಏರುತ್ತಲೇ ಇರುವುದರಿಂದ ಈ ವಾರ ಶಾಖ ಹೆಚ್ಚಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಬೇಸಿಗೆಯ ಶಾಖ ಹೆಚ್ಚಾಗಲಿದೆ. ಈ ಬಗ್ಗೆ ಇಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದ್ದು, ಏಪ್ರಿಲ್ 17ರ ವೇಳೆಗೆ ದೆಹಲಿಯು ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಲಿದೆ.
ಏಪ್ರಿಲ್ 18ರವರೆಗೆ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ 4ರಿಂದ 6 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢ ಸೇರಿದಂತೆ ಮಧ್ಯ ಭಾಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿಯೂ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ.
ಒಡಿಶಾ, ಗುಜರಾತ್ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿ ವಾತಾವರಣ ಇರಲಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿಗಳು ಕಂಡುಬರುವ ನಿರೀಕ್ಷೆಯಿದೆ. ಈಶಾನ್ಯದಲ್ಲಿ ಮಳೆ, ಗುಡುಗು ಸಹಿತ ಮಳೆಯಾಗಲಿದೆ. ಈಶಾನ್ಯ ಭಾರತದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮುಂಬರುವ ದಿನಗಳಲ್ಲಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ (ಗಂಟೆಗೆ 30–50 ಕಿ.ಮೀ) ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈ ವಾರದ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿಯೂ ಸಹ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಕರ್ನಾಟಕ, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳ ಕೆಲವು ಸ್ಥಳಗಳಲ್ಲಿ ಭಾರೀ ಉಷ್ಣ ಅಲೆಯ ನಿರೀಕ್ಷೆಯಿದೆ. ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲಾರ, ಏಪ್ರಿಲ್ 13: ಕೆರೆಗೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲಾದ (death) ಘಟನೆ ಕೋಲಾರದ ಅರಹಳ್ಳಿ ಕೆರೆಯಲ್ಲಿ ನಡೆದಿದೆ. ಮೊಹಮದಿ(25) ಮತ್ತು ಸಲ್ಮಾ (26) ನೀರುಪಾಲಾದ ಮಹಿಳೆಯರು. ಮೃತ ಮಹಿಳೆಯರು ನಿಸಾರ್ ನಗರದ ನಿವಾಸಿಗಳು. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದಿದ್ದೇನು?
ಕೋಲಾರದ ಅರಹಳ್ಳಿ ಕೆರೆಗೆ ಮಹಿಳೆಯರು ಸೇರಿದಂತೆ ಮಕ್ಕಳು ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಮಕ್ಕಳು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಮೊಹಮದಿ ಮತ್ತು ಸಲ್ಮಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕಾರ್ಯಕ್ರಮ ಹಿನ್ನೆಲೆ ಸಲ್ಮಾ ಬೆಂಗಳೂರಿಂದ ಬಂದಿದ್ದರು.
ಇನ್ನು ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕೃಷ್ಣಾವರಂ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಬೆಂಗಳೂರು ಮೂಲದ ದೇವಾನಂದ್ (24) ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಸರ್ವೇಶ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತಕ್ಕೀಡಾದ ವಾಹನವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ನಿರ್ಮಾಣ ಮಾಡಿರುವ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿರುವುದು ಗೊತ್ತೇ ಇದೆ. ಈಗ ಅದೇ ನಿರ್ಮಾಣ ಸಂಸ್ಥೆಯ ‘ಕೆಡಿ’ ಸಿನಿಮಾ (KD Movie) ಕೂಡ ಇದೇ ರೀತಿಯ ಸಮಸ್ಯೆಗೆ ಸಿಲುಕಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಿದ್ದು, ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಹೊಸ ಸಂಕಷ್ಟ ಶುರುವಾಗಿದೆ. ಚಿತ್ರತಂಡದ ಗಮನಕ್ಕೂ ಬಾರದಂತೆ ಈ ಸಿನಿಮಾವನ್ನು ಸೆನ್ಸಾರ್ (Censor) ಮಂಡಳಿಯ ರಿವೈಸಿಂಗ್ ಕಮಿಟಿಗೆ ಕಳಿಸಲಾಗಿದೆ.
‘ಕೆಡಿ’ ಸಿನಿಮಾವನ್ನು ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ರಕ್ತಪಾತ ಇರುವುದರಿಂದ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಲು ಸಜ್ಜಾಗಿತ್ತು. ಹಾಡಿನ ಸಾಹಿತ್ಯದಲ್ಲಿ ಕೆಲವು ಸಾಲುಗಳನ್ನು ಬದಲಾಯಿಸುವಂತೆ ಸೂಚಿಸಲಾಗಿತ್ತು. ಅದನ್ನು ಚಿತ್ರತಂಡ ಕೂಡ ಒಪ್ಪಿಕೊಂಡಿತ್ತು. ಆದರೆ ಅಂತಿಮವಾಗಿ ಈ ಚಿತ್ರಕ್ಕೆ ಪ್ರಮಾಣಪತ್ರ ನೀಡಿಲ್ಲ.
ಪ್ರಾದೇಶಿಕ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡುವ ಬದಲು ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ರಿವೈಸಿಂಗ್ ಕಮಿಟಿಗೆ ಸಿನಿಮಾವನ್ನು ಕಳಿಸಲಾಗಿದೆ. ನಿರ್ದೇಶಕರಿಗಾಗಲೀ, ನಿರ್ಮಾಣ ಸಂಸ್ಥೆಗಾಗಲಿ ತಿಳಿಸದೆಯೇ ‘ಕೆಡಿ’ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಿದ್ದು ಚಿತ್ರತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಸೆನ್ಸಾರ್ ಮಂಡಳಿಯಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಚಿತ್ರತಂಡ ಆರೋಪಿಸಿದೆ.
ದೊಡ್ಡ ಬಜೆಟ್ನಲ್ಲಿ ‘ಕೆಡಿ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಒಂದು ವೇಳೆ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದರೆ ಚಿತ್ರದ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಜನ ನಾಯಗನ್’ ಸಿನಿಮಾ ಈ ತೊಂದರೆಯನ್ನು ಅನುಭವಿಸಿದೆ. ರಾಜಕೀಯದ ಕಾರಣದಿಂದ ಸಿನಿಮಾಗೆ ತೊಂದರೆ ಮಾಡಲಾಗಿದೆ ಎಂಬ ಅಭಿಪ್ರಾಯ ಇದೆ.
‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆ ಆಗಾದ ಕೂಡ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಆ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಆಯೋಗ ಕೂಡ ಚಿತ್ರತಂಡಕ್ಕೆ ನೋಟಿಸ್ ನೀಡಿತ್ತು. ಅದರ ಪರಿಣಾಮವಾಗಿ ಪೂರ್ತಿ ಹಾಡನ್ನು ಡಿಲೀಟ್ ಮಾಡಬೇಕಾಯಿತು.
ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳನ್ನು ಪ್ರೀತಿಸುತ್ತವೆ, ಕಾಳಜಿ ವಹಿಸುತ್ತವೆ. ತಪ್ಪು ಮಾಡಿದರೆ ದಂಡಿಸುತ್ತವೆ. ಇದೀಗ ತಾಯಿ ಸಿಂಹವೊಂದು ನೀರಿಗೆ ಬಿದ್ದ ತನ್ನ ಕಂದನನ್ನು ರಕ್ಷಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.
gulnara.de ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೃಗಾಲಯದ ದೃಶ್ಯವನ್ನು ಕಾಣಬಹುದು. ಕೆರೆಗೆ ಬಿದ್ದ ಮರಿಯನ್ನು ಹೆಣ್ಣು ಸಿಂಹವೊಂದು ರಕ್ಷಣೆ ಮಾಡಿದೆ. ಇದೇ ವೇಳೆ ಗಂಡು ಸಿಂಹವೂ ಅಡ್ಡಿ ಪಡಿಸಿದೆ. ಆದರೆ ಗಂಡು ಸಿಂಹದೊಂದಿಗೆ ಜಗಳಕ್ಕಿಳಿದ ಹೆಣ್ಣು ಸಿಂಹವೊಂದು ಕೊನೆಗೂ ತನ್ನ ಮರಿಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿರುವ ದೃಶ್ಯವನ್ನು ನೋಡಬಹುದು.
ಈ ವಿಡಿಯೋ 3.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯಿಗಿಂತ ನಮ್ಮನ್ನು ಸದಾ ಕಾಪಾಡುವ ಜೀವ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಂಗೆ ಒಂದು ಕ್ಷಣ ಗಾಬರಿಯಾಯ್ತು, ಒಳ್ಳೆಯ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲಾ ಗಂಡಸರು ಒಂದೇ ರೀತಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ, ಏಪ್ರಿಲ್ 13: ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಹೊತ್ತಿರುವ ಬೈಂದೂರು ತಾಲೂಕಿನ ಸರಕಾರಿ ಶಾಲೆ ರಾಜ್ಯದ ಉಳಿದ ಶಾಲೆಗಳು ಮೂಗಿನ ಮೇಲೆ ಬೆರಳಿಡುವ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ತಂತ್ರಜ್ಞಾನ ಆಧಾರಿತ ನವೀನ ಸಾಧನಗಳ ಮೂಲಕ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೈಂದೂರು ವಲಯದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯದಲ್ಲೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಬೋಧನೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಕ್ಷಕಿ ಐರಿಸ್ನ ಪರಿಚಯಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಇದು ವಿದ್ಯಾರ್ಥಿಗಳಿಗೆ ನೇರ ಬೋಧನೆ ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ರೋಬೋಟ್ನ ಕಾರ್ಯನಿರ್ವಹಣೆಗೆ ಸಜ್ಜುಗೊಳಿಸುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಶುರುವಾಗಿದೆ. ಐರಿಸ್ ಎಐ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ವೈಯಕ್ತಿಕ ಕಲಿಕೆಯ ಅನುಭವವನ್ನು ಒದಗಿಸಲಿದೆ. ಸೀರೆ ಧಾರಣೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಐರಿಸ್, ಕೈಕುಲುಕಿ ಮಾತನಾಡುವಂತಹ ವೈಶಿಷ್ಟ್ಯಗಳಿಂದ ಮಕ್ಕಳ ಗಮನ ಸೆಳೆಯುತ್ತಿದೆ.
ಭಾರತದಲ್ಲಿ ಕಳೆದ ಆರೇಳು ವರ್ಷಗಳಿಂದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಹಳ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೋಟ್ಯಂತರ ಜನರು ನಿತ್ಯವೂ ಪೇಮೆಂಟ್ಗೆ ಯುಪಿಐ ಬಳಸುತ್ತಾರೆ. ಅಂಗಡಿಯಲ್ಲಿ ಪೇಮೆಂಟ್ ಮಾಡಲು, ಸ್ನೇಹಿತರಿಗೆ ಹಣ ಕಳುಹಿಸಲು, ಪರಿಚಿತರಿಗೆ ಹಣ ಕಳುಹಿಸಲು, ಥರ್ಡ್ ಪಾರ್ಟಿಗೆ ಹಣ ಕಳುಹಿಸಲು ಹೀಗೆ ಯುಪಿಐ ಬಳಕೆ ತೀರಾ ಸಾಮಾನ್ಯವಾಗಿದೆ.
ಮಾರ್ಚ್ ತಿಂಗಳಲ್ಲಿ ದೇಶದಲ್ಲಿ 2,264 ಕೋಟಿ ಸಂಖ್ಯೆಗಳಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಇಷ್ಟು ಅಪಾರ ಪ್ರಮಾಣದಲ್ಲಿ ಟ್ರಾನ್ಸಾಕ್ಷನ್ಗಳು ಆಗುವಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಯುಪಿಐ ಪೇಮೆಂಟ್ ಮಾಡುವಾಗ ಸಾಮಾನ್ಯವಾಗಿ ಸ್ವೀಕೃತರ ಮೊಬೈಲ್ ನಂಬರ್ ಅನ್ನು ಹಾಕಿ ಪೇಮೆಂಟ್ ಮಾಡಲಾಗುತ್ತದೆ. ಈ ವೇಳೆ ಮೊಬೈಲ್ ನಂಬರ್ ತಪ್ಪಾಗಿ ಹಾಕಿಬಿಟ್ಟರೆ ತಪ್ಪಾದ ವ್ಯಕ್ತಿಗೆ ಪೇಮೆಂಟ್ ಹೋಗಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳಬಹುದು.
ತಪ್ಪಾದ ವ್ಯಕ್ತಿಗಳಿಗೆ ಯುಪಿಐ ಪೇಮೆಂಟ್ ಮಾಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಣವನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವೇ? ಅಥವಾ ಪೇಮೆಂಟ್ ರಿವರ್ಸ್ ಮಾಡಲು ಸಾಧ್ಯವೇ? ಇದಕ್ಕೆ ಸಿಂಪಲ್ಲಾದ ಉತ್ತರ ಎಂದರೆ ಆಗೊಲ್ಲ ಎನ್ನುವುದು.
ಯುಪಿಐ ಮೂಲಕ ಪೇಮೆಂಟ್ ಮಾಡಿದಾಗ ಅದನ್ನು ರಿವರ್ಸ್ ಮಾಡುವ ಅವಕಾಶ ಇರುವುದಿಲ್ಲ. ಇದು ರಿಯಲ್ ಟೈಮ್ನಲ್ಲಿ ಮಾಡಲಾಗುವ ಪೇಮೆಂಟ್. ಸರ್ಕಾರ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಮೌಲ್ಯದ ಯುಪಿಐ ಪೇಮೆಂಟ್ನಲ್ಲಿ ಒಂದು ಗಂಟೆ ಕೂಲಿಂಗ್ ಆಫ್ ಅವಧಿಯ ನಿಯಮ ಮಾಡಲು ಆರ್ಬಿಐ ಯೋಜಿಸುತ್ತಿದೆ. ಆಗ ಪೇಮೆಂಟ್ ರಿವರ್ಸ್ ಮಾಡಿಸಲು ಅವಕಾಶ ಸಿಗಬಹುದು.
ಯುಪಿಐ ಪೇಮೆಂಟ್ ಮೂಲಕ ಹಣವು ಬೇರೆ ವ್ಯಕ್ತಿಯ ಬ್ಯಾಂಕ್ ಅಕೌಂಟ್ಗೆ ಹೋಗಿಬಿಟ್ಟರೆ ಅದನ್ನು ಹಿಂಪಡೆಯಲು ಇರುವ ಏಕೈಕ ಮಾರ್ಗ ಎಂದರೆ ಅದು ಸ್ವೀಕೃತರು ಮಾತ್ರವೇ. ಹಣ ಸ್ವೀಕರಿಸಿದವರನ್ನು ನೀವು ಸಂಪರ್ಕಿಸಿ ಮನವಿ ಮಾಡಿಕೊಳ್ಳಬಹುದು ಅಷ್ಟೇ. ಅವರು ಹಾಕಿದರೆ ಆಯಿತು. ಇಲ್ಲದಿದ್ದರೆ ಕೆಲ ದೂರುಗಳನ್ನು ಸಲ್ಲಿಸುವುದಷ್ಟೇ ಉಳಿದಿರುವ ಮಾರ್ಗೋಪಾಯಗಳು.
ಸ್ವೀಕೃತರು ಸ್ಪಂದಿಸದಿದ್ದಾಗ ಥರ್ಡ್ ಪಾರ್ಟಿ ಆ್ಯಪ್ನಲ್ಲಿ ‘ರಿಪೋರ್ಟ್ ಇಷ್ಯೂ’ (Report Issue) ಆಯ್ಕೆ ಬಳಸಬಹುದು. ಎನ್ಪಿಸಿಐ ಸಿಸ್ಟಂ ಮೂಲಕ ದೂರು ಸಲ್ಲಿಸಬಹುದು. ಇಲ್ಲಿ ಪರಿಹಾರ ಸಿಗದಿದ್ದಾಗ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿಯೂ ಕೆಲಸವಾಗದಿದ್ದಾಗ ಆರ್ಬಿಐ ಓಂಬುಡ್ಸ್ಮ್ಯಾನ್ (RBI Ombudsman) ಅವರ ಬಳಿ ದೂರು ಕೊಂಡೊಯ್ಯಬಹುದು. ಅಲ್ಲಿಯೂ ನಿಮ್ಮ ಹಣ ವಾಪಸ್ ಬರಲು ಸಾಧ್ಯವಾಗುತ್ತದೆ ಎಂದನ್ನಲು ಕಷ್ಟ.
ಇತ್ತೀಚಿನ ದಿನಗಳಲ್ಲಿ ಅನೇಕರು ಉಸಿರಾಟ ಸಂಬಂಧಿ (Difficulty Breathing) ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರಿಗಿಂತ ಅದನ್ನು ನಿರ್ಲಕ್ಸ್ಯ ಮಾಡುವವರ ಸಂಖ್ಯೆಯೇ ಹೆಚ್ಚು. ಈ ರೀತಿ ಸಮಸ್ಯೆಗಳನ್ನು ಸರಿಯಾದ ಸಮಯದಲ್ಲಿ ಕಡಿಮೆ ಮಾಡಿಕೊಳ್ಳದಿರುವುದು ಬಹಳ ಅಪಾಯಕಾರಿ ಅದಲ್ಲದೆ ಇದು ದೇಹದ ಒಳಗಿನ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾಗಿ ಈ ರೀತಿ ಆಗುವುದಕ್ಕೆ ಕಾರಣ, ರೋಗಲಕ್ಷಣಗಳು ಹೇಗಿರುತ್ತವೆ ಮತ್ತು ಯಾರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉಸಿರಾಟದ ತೊಂದರೆಗೆ ಸಾಮಾನ್ಯ ಕಾರಣಗಳು
ಅತಿಯಾದ ಶಾರೀರಿಕ ಚಟುವಟಿಕೆ, ದೇಹದ ದುರ್ಬಲತೆ, ಅತಿಯಾದ ತೂಕ, ಮಾನಸಿಕ ಒತ್ತಡ ಮತ್ತು ಆತಂಕ ಇವುಗಳಿಂದಲೂ ಉಸಿರಾಟದಲ್ಲಿ ತೊಂದರೆ ಉಂಟಾಗಬಹುದು. ಜೊತೆಗೆ ಧೂಳು, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಅಲರ್ಜಿ ಸಮಸ್ಯೆಗಳು ಉಸಿರಾಟದ ಮೇಲೆ ಪರಿಣಾಮ ಬೀರುತ್ತವೆ.
ಯಾವ ರೋಗಗಳ ಲಕ್ಷಣವಾಗಿರಬಹುದು?
ನಿರಂತರವಾಗಿ ಉಸಿರು ಕಡಿಮೆಯಾಗುವುದು ಅಸ್ಥಮಾ, ಬ್ರಾಂಕೈಟಿಸ್ ಹಾಗೂ ಇತರ ಫೆಫ್ಸು ಸಂಬಂಧಿತ ಕಾಯಿಲೆಗಳ ಲಕ್ಷಣವಾಗಿರಬಹುದು. ಇದಲ್ಲದೆ ಹೃದಯ ಸಂಬಂಧಿತ ಸಮಸ್ಯೆಗಳು, ಉದಾಹರಣೆಗೆ ಹಾರ್ಟ್ ಫೇಲಿಯರ್ ಅಥವಾ ರಕ್ತನಾಳಗಳಲ್ಲಿ ಬ್ಲಾಕೇಜ್ ಇದ್ದರೂ ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು. ಅನಿಮಿಯಾ (ರಕ್ತಹೀನತೆ) ಇರುವವರಲ್ಲಿ ದೇಹಕ್ಕೆ ಅಗತ್ಯವಾದ ಆಮ್ಲಜನಕ ಕಡಿಮೆ ಸಿಗುವುದರಿಂದ ಉಸಿರಾಟ ಹೆಚ್ಚಾಗುತ್ತದೆ. ಕೆಲ ಸಂದರ್ಭಗಳಲ್ಲಿ ಥೈರಾಯ್ಡ್ ಅಸಮತೋಲನ ಅಥವಾ ಫೆಫ್ಸು ಸೋಂಕುಗಳೂ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು. ಉಸಿರಾಟದ ತೊಂದರೆಯ ಜೊತೆ ಎದೆನೋವು, ತಲೆ ಸುತ್ತುವುದು ಅಥವಾ ತೀವ್ರ ದಣಿವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಹಿರಿಯರು, ಧೂಮಪಾನ ಮಾಡುವವರು, ಮಾಲಿನ್ಯ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಅತಿಯಾದ ತೂಕ ಹೊಂದಿರುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಜೊತೆಗೆ ಚಟುವಟಿಕೆ ಕಡಿಮೆ ಇರುವ ಜೀವನಶೈಲಿ ಹೊಂದಿರುವವರಲ್ಲೂ ಈ ಸಮಸ್ಯೆ ಸಾಮಾನ್ಯವಾಗಿದೆ.
ತಡೆಗಟ್ಟುವುದು ಹೇಗೆ?
ನಿಯಮಿತ ವ್ಯಾಯಾಮದಿಂದ ಫೆಫ್ಸುಗಳ ಶಕ್ತಿ ಹೆಚ್ಚುತ್ತದೆ ಮತ್ತು ಸಹನಶಕ್ತಿ ಉತ್ತಮಗೊಳ್ಳುತ್ತದೆ. ಸಮತೋಲನದ ಆಹಾರ ಸೇವನೆ ಮತ್ತು ಧೂಮಪಾನದಿಂದ ದೂರವಿರುವುದು ಒಳ್ಳೆಯದು. ಮಾಲಿನ್ಯದಿಂದ ರಕ್ಷಣೆಗಾಗಿ ಮಾಸ್ಕ್ ಬಳಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ.