ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್​​ಗಿದೆ ಭಾರತದ ನಂಟು; ಇವರೂ ಕೂಡ ಸಾಯಿ ಬಾಬಾ ಭಕ್ತೆ! – Kannada News | Venezuela’s Interim President Delcy Rodriguez is a worshiper of Sri Sathya Sai Baba

ನವದೆಹಲಿ, ಜನವರಿ 6: ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬದಲಾಗಿ ವೆನೆಜುವೆಲಾದ (Venezuela) ಉಪಾಧ್ಯಕ್ಷೆ ಮತ್ತು ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಅಲ್ಲಿನ ಮಧ್ಯಂತರ ಸರ್ಕಾರದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ ಡೆಲ್ಸಿಗೂ ಭಾರತದ ನಂಟಿದೆ. ಮಡುರೋ ಅವರಂತೆಯೇ ಡೆಲ್ಸಿ ಕೂಡ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಭಕ್ತೆ. ಅವರು ಆಗಾಗ ಭಾರತಕ್ಕೆ ಆಗಮಿಸುತ್ತಿರುತ್ತಾರೆ.

ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಡೆಲ್ಸಿ ರೊಡ್ರಿಗಸ್ ಆಂಧ್ರಪ್ರದೇಶದಲ್ಲಿರುವ ಸತ್ಯಸಾಯಿ ಬಾಬಾ ಅವರ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಆಗಾಗ ಭೇಟಿ ನೀಡುವ ಮೂಲಕ ಭಾರತದ ಸಂಪರ್ಕ ಹೊಂದಿದ್ದಾರೆ. ಅವರು ಆಗಸ್ಟ್ 2023ರಲ್ಲಿ ಜಿ 20 ಶೃಂಗಸಭೆಯ ಸಮಯದಲ್ಲಿ ಮತ್ತು ಅಕ್ಟೋಬರ್ 2024ರಲ್ಲಿ ಸತ್ಯ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು.

ಯುನೈಟೆಡ್ ಸ್ಟೇಟ್ಸ್ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ನಲ್ಲಿ ಕೋರ್ಟ್​ ಮುಂದೆ ಹಾಜರುಪಡಿಸಿ ವಿಚಾರಣೆಯನ್ನು ನಡೆಸುತ್ತಿವೆ. ಇದರ ನಡುವೆ ಸೋಮವಾರ ಡೆಲ್ಸಿ ರೊಡ್ರಿಗಸ್ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು

ವೆನೆಜುವೆಲಾದ ಸಂಸತ್ತಿನಿಂದ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಡೆಲ್ಸಿ ರೊಡ್ರಿಗಸ್ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಈ ಹಿಂದಿನ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯಂತೆ ಡೆಲ್ಸಿ ಕೂಡ ಭಾರತೀಯ ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಭಕ್ತೆ ಎಂಬುದು ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಡೆಲ್ಸಿ ರೊಡ್ರಿಗಸ್ ಇತ್ತೀಚಿನ ವರ್ಷಗಳಲ್ಲಿ 2023 ಮತ್ತು 2024ರಲ್ಲಿ 2 ಬಾರಿ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಸತ್ಯ ಸಾಯಿ ಬಾಬಾ ಅವರ ಆಧ್ಯಾತ್ಮಿಕ ಕೇಂದ್ರ ಮತ್ತು ಸಮಾಧಿ ಮಂದಿರವಾದ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪ್ರಶಾಂತಿ ನಿಲಯಕ್ಕೆ 2ನೇ ಬಾರ ಭೇಟಿ ನೀಡಿದ ಬಗ್ಗೆ ಡೆಲ್ಸಿ ರೊಡ್ರಿಗಸ್ ತೀವ್ರ ಸಂತೋಷ ವ್ಯಕ್ತಪಡಿಸಿದ್ದರು. ಸತ್ಯ ಸಾಯಿ ಬಾಬಾ ಅವರ ದೈವಿಕ ಸನ್ನಿಧಿಯಲ್ಲಿರುವುದು ತನಗೆ ಶಾಂತಿ ಮತ್ತು ನೆಮ್ಮದಿಯ ಭಾವನೆಯನ್ನು ನೀಡಿತು ಎಂದು ಹೇಳಿದ್ದರು ಎಂದು ಸತ್ಯ ಸಾಯಿಬಾಬಾ ಟ್ರಸ್ಟ್ ತಿಳಿಸಿದೆ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಸತ್ಯ ಸಾಯಿ ಬಾಬಾ, ಬ್ರಹ್ಮ ಕುಮಾರಿಯರು ಮತ್ತು ರಾಧಾ ಸ್ವಾಮಿ ಅವರ ಅನುಯಾಯಿಗಳು ಸೇರಿದಂತೆ ಭಾರತೀಯ ಗುರುಗಳು ಮತ್ತು ಸಂಸ್ಥೆಗಳು ವೆನೆಜುವೆಲಾದಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ಎರಡೂ ದೇಶಗಳ ನಡುವಿನ ಶಾಶ್ವತ ಆಧ್ಯಾತ್ಮಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:10 pm, Tue, 6 January 26

Source link

ಕುತ್ತಿಗೆಯ ಭಾಗದಲ್ಲಿ ನೋವು ಬಂದು ತಲೆ ಭಾರವೆನಿಸುವುದು ಸರ್ವಿಕಲ್ ಸ್ಪಾಂಡಿಲೋಸಿಸ್‌ನ ಆರಂಭವಾಗಿರಬಹುದು ಎಚ್ಚರ! – Kannada News | Neck Pain? Know About Cervical Spondylosis

ಇತ್ತೀಚಿನ ದಿನಗಳಲ್ಲಿ ಕುತ್ತಿಗೆ ನೋವು (Neck Pain) ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಈ ರೀತಿ ಕುತ್ತಿಗೆ ನೋವಿನ ಜೊತೆಗೆ ತಲೆ ನೋವು ಮತ್ತು ಭುಜಗಳಲ್ಲಿ ಬಿಗಿತ ನಿರಂತರವಾಗಿ ಕಂಡುಬರುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಹೌದು, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ಸರ್ವಿಕಲ್ ಸ್ಪಾಂಡಿಲೋಸಿಸ್ (Cervical Spondylosis) ಎಂಬ ಕಾಯಿಲೆಯ ಲಕ್ಷಣವಾಗಿರಬಹುದು. ಘಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಮತ್ತು ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಳೆದ ಕೆಲವು ವರ್ಷಗಳಿಂದ, ಈ ಸಮಸ್ಯೆ ಗಮನಾರ್ಹವಾಗಿ ಹೆಚ್ಚುತ್ತಿದ್ದು ಯುವಜನತೆಯಲ್ಲಿ ಹೆಚ್ಚೆಚ್ಚು ವರದಿಯಾಗುತ್ತಿವೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಇದರ ಬಗ್ಗೆ ಸರಿಯಾಗಿ ತಿಳಿದಿರುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಸರ್ವಿಕಲ್ ಸ್ಪಾಂಡಿಲೋಸಿಸ್‌ ಎಂದರೇನು, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ವರ್ಷಗಳಲ್ಲಿ ಸರ್ವಿಕಲ್ ಸ್ಪಾಂಡಿಲೋಸಿಸ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದ್ದು ಒಂದೇ ಜಾಗದಲ್ಲಿ ಘಂಟೆಗಟ್ಟಲೆ ಕುಳಿತು ಕೆಲಸ ಮಾಡುವವರ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಜನರ ಫೋನ್ ಬಳಕೆ ಹೆಚ್ಚಾಗಿದ್ದು, ಫೋನ್‌ಗಳನ್ನು ಗಂಟೆಗಟ್ಟಲೆ ನೋಡುತ್ತಾ ಸಮಯ ಕಳೆಯುತ್ತಾರೆ, ಇದು ಕುತ್ತಿಗೆಯ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟು ಮಾತ್ರವಲ್ಲ, ಕಳವಳಕಾರಿ ವಿಷಯವೆಂದರೆ ಈ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದೆ. 20 ರಿಂದ 30 ವರ್ಷ ವಯಸ್ಸಿನವರು ಸಹ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಮುಖ್ಯ ಕಾರಣ ಸರಿಯಾಗಿ ಕುಳಿತುಕೊಳ್ಳದಿರುವುದಾಗಿದೆ.

ಸರ್ವಿಕಲ್ ಸ್ಪಾಂಡಿಲೋಸಿಸ್ ಎಂದರೇನು?

ತುಂಬಾ ಸಮಯ ಒಂದೇ ಭಂಗಿಯಲ್ಲಿ ಕುಳಿತಿರುವುದು ಅಥವಾ ಸರಿಯಾಗಿ ಕುಳಿತುಕೊಳ್ಳದಿದ್ದರೆ ನಮಗೆ ತಿಳಿಯದಂತೆ ಕುತ್ತಿಗೆಯ ಮೂಳೆಗಳು ಮತ್ತು ಅವುಗಳ ನಡುವಿನ ಡಿಸ್ಕ್‌ಗಳಲ್ಲಿ ಸವೆತ ಉಂಟಾಗುತ್ತದೆ. ಇದು ಜೀವನಶೈಲಿಯನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಅಥವಾ ವಯಸ್ಸಾಗುವುದರಿಂದ ಮತ್ತು ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದಲೂ ಸಂಭವಿಸಬಹುದು. ಈ ಸವೆತದಿಂದಾಗಿ, ಡಿಸ್ಕ್‌ಗಳು ತೆಳುವಾಗಲು ಪ್ರಾರಂಭಿಸುತ್ತವೆ. ಕೆಲವರಲ್ಲಿ, ಮೂಳೆ ಸ್ಪರ್ಸ್ ಸಹ ಬೆಳೆಯಬಹುದು. ಈ ಸ್ಥಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ, ಇದು ಬೆನ್ನುಮೂಳೆಯ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ಸರ್ವಿಕಲ್ ಸ್ಪಾಂಡಿಲೋಸಿಸ್ ನ ಆರಂಭಿಕ ಲಕ್ಷಣಗಳು:

  • ನಿರಂತರ ಕುತ್ತಿಗೆ ನೋವು
  • ಕುತ್ತಿಗೆಯಲ್ಲಿ ಬಿಗಿತ
  • ತಲೆ ಭಾರವಾದ ಭಾವನೆ ಅಥವಾ ತಲೆನೋವು, ಬೆನ್ನು ನೋವು
  • ಭುಜಗಳು ಮತ್ತು ತೋಳುಗಳಲ್ಲಿ ನೋವು
  • ಕೈಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ

ಸರ್ವಿಕಲ್ ಸ್ಪಾಂಡಿಲೋಸಿಸ್ ತಡೆಗಟ್ಟಲು ಸಲಹೆಗಳು:

  • ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.
  • ಪ್ರತಿದಿನ ಲಘು ವ್ಯಾಯಾಮಗಳನ್ನು ಮಾಡಿ.
  • ಹೆಚ್ಚು ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ.
  • ಕೆಲಸ ಮಾಡುವಾಗ ಕಂಪ್ಯೂಟರ್‌ನ ಪರದೆ ಕಣ್ಣಿನ ಮಟ್ಟದಲ್ಲಿರಲಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲೆಕೋಸನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು – Kannada News | This is how to clean cabbage properly

ಕ್ಯಾಬೇಜ್‌ ಕ್ಲೀನಿಂಗ್

Image Credit source: Pinterest

ಎಲೆಕೋಸು (cabbage) ಬಹುತೇಕರ ನೆಚ್ಚಿನ ತರಕಾರಿ. ಪಲ್ಯ, ಮಂಚೂರಿಯನ್‌, ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ, ಆದರೆ ಹೆಚ್ಚಿನವರು ಎಲೆಕೋಸನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ, ಜೊತೆಗೆ ಇದನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನವೂ ಅನೇಕರಿಗೆ ಗೊತ್ತಿಲ್ಲ. ಎಷ್ಟೇ ಸ್ವಚ್ಛಗೊಳಿಸಿದರೂ ಎಲೆಕೋಸಿನಲ್ಲಿ ಕೊಳಕು, ಕೀಟಗಳು, ಹುಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶ ಹಾಗೆಯೇ ಉಳಿದು ಬಿಡುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ, ಆಹಾರವು ರುಚಿಕರ ಮತ್ತು ಆರೋಗ್ಯಕರವಾಗಿರಲು ಅದನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಹಾಗಿದ್ದರೆ ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದೆಂಬುದನ್ನು ನೋಡೋಣ ಬನ್ನಿ.

ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದು?

ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ: ಎಲೆಕೋಸು ಕತ್ತರಿಸಿದ ನಂತರ, ಅದನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ಮಾಡಲು, ಮೊದಲು ಎಲೆಕೋಸಿನ ಮೇಲಿನ ಎರಡರಿಂದ ಮೂರು ಪದರಗಳನ್ನು ತೆಗೆಯಿರಿ. ಏಕೆಂದರೆ ಇವು ಅತ್ಯಂತ ಕೊಳಕಾಗಿರುತ್ತವೆ, ಧೂಳು ಮತ್ತು ಕೀಟನಾಶಕಗಳನ್ನು ಹೊಂದಿರುತ್ತವೆ. ಈ ಎಲೆಗಳನ್ನು ತೆಗೆದುಹಾಕುವುದರಿಂದ ಗಮನಾರ್ಹ ಪ್ರಮಾಣದ ಕೊಳೆಯನ್ನು ತೆಗೆದು ಹಾಕಬಹುದು. ಈಗ ಒಂದು ಪಾತ್ರೆಗೆ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿ, ಅದರಲ್ಲಿ ಎಲೆಕೋಸನ್ನು 15 ರಿಂದ 20 ನಿಮಿಷಗಳ ಕಾಲ ಇಟ್ಟು ಕ್ಲೀನ್‌ ಮಾಡಿ ನಂತರವೇ ಬೇಯಿಸಿ. ಈ ಪ್ರಕ್ರಿಯೆಯು ಕೀಟಗಳನ್ನು ಕೊಲ್ಲಲು ಸಹಕಾರಿ.

ವಿನೆಗರ್ ಬಳಸಬಹುದು: ಎಲೆಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೀವು ವಿನೆಗರ್ ಸಹ ಬಳಸಬಹುದು. ಇದು ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಇದು ತರಕಾರಿಯಿಂದ ಎಲ್ಲಾ ಕೊಳೆಯನ್ನು ತೆಗೆದುಹಾಕುತ್ತದೆ. ಇದನ್ನು ಮಾಡಲು, ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಮೂರರಿಂದ ನಾಲ್ಕು ಟೀ ಚಮಚ ವಿನೆಗರ್ ಸೇರಿಸಿ ಬಳಿಕ ಅದರಲ್ಲಿ ಎಲೆಕೋಸನ್ನು ಇಟ್ಟು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಇನ್ನೊಮ್ಮೆ ಸ್ವಚ್ಛಗೊಳಿಸಿ ಎಲೆಕೋಸನ್ನು ಕತ್ತರಿಸಿ.  ಇದಲ್ಲದೆ ಅಡಿಗೆ ಸೋಡಾವನ್ನು ಸಹ ಸೇರಿಸಬಹುದು, ಇದು ಕೀಟನಾಶಕಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬಾತ್‌ರೂಮ್‌ ಟ್ಯಾಪ್, ಕನ್ನಡಿಯ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಸಲಹೆ

ಇದು ಮಾತ್ರವಲ್ಲದೆ ಎಲೆಕೋಸನ್ನು ಸಂಪೂರ್ಣವಾಗಿ ಕತ್ತರಿಸಿ ಬಳಿಕ ಬಿಸಿನೀರಿಗೆ ವಿನೆಗರ್‌ ಅಥವಾ ಅಡಿಗೆ ಸೋಡಾವನ್ನು ಸೇರಿಸಿ ಅದರಲ್ಲಿ ಕ್ಲೀನ್‌ ಮಾಡು. ತೊಳೆದ ನಂತರ, ಎಲೆಕೋಸನ್ನು ಒಂದು ಜರಡಿಯಲ್ಲಿ ಇರಿಸಿ ಅಥವಾ ಹೆಚ್ಚುವರಿ ನೀರನ್ನು ಹೊರಹಾಕಲು ಸ್ವಚ್ಛವಾದ ಬಟ್ಟೆಯ ಮೇಲೆ ಅದನ್ನು ಹರಡಿ.  ಈ ರೀತಿ ಎಲೆಕೋಸನ್ನು ಸರಿಯಾಗಿ ತೊಳೆಯುವುದರಿಂದ ಅದರ ರುಚಿ ಸುಧಾರಿಸುವುದಲ್ಲದೆ, ನಿಮ್ಮ ಆರೋಗ್ಯವೂ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಎಲೆಕೋಸು ಕ್ಲೀನ್‌ ಮಾಡುವಾಗ ಅದನ್ನು ತೊಳೆಯಲು ಆತುರಪಡಬೇಡಿ, ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇವರೇ ನೋಡಿ ‘ಟಾಕ್ಸಿಕ್’ ಸಿನಿಮಾದ ‘ಬ್ಯಾಡ್ ಗರ್ಲ್ಸ್’ – Kannada News | Yash starrer Toxic movie heroines photo gallery

ಬಾಲಿವುಡ್ ನಟಿ ಹುಮಾ ಖುರೇಷಿ ಸಹ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರು ಎಲಿಜಬೆತ್. ಪೋಸ್ಟರ್ ನೋಡಿದರೆ ಕ್ಯೂಟ್ ಆದ, ಮುಗ್ಧತೆಯಿಂದ ಕೂಡಿದ ಪಾತ್ರದಲ್ಲಿ ಹುಮಾ ನಟಿಸಿದಂತಿದೆ.

Source link

50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು? – Kannada News | India may overtake USA economy in 2075 says Goldman Sachs report, here are top economies in next 50 years

ನವದೆಹಲಿ, ಜನವರಿ 6: ಭಾರತದ ಆರ್ಥಿಕತೆ (India GDP) ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅಪಾರ ವೇಗದಲ್ಲಿ ಬೆಳೆಯುತ್ತಿದೆ. ಕಳೆದೆರಡು ವರ್ಷದಲ್ಲಿ ಫ್ರಾನ್ಸ್, ಬ್ರಿಟನ್ ಆರ್ಥಿಕತೆಗಳನ್ನು ಹಿಂದಿಕ್ಕಿದೆ. ಈಗ ಜಪಾನ್ ಜಿಡಿಪಿಯನ್ನೂ ಮೀರಿಸಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ ಭಾರತ. ಮುಂದಿನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ ನಂ. 3 ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ. ಆದರೆ, ಎರಡನೇ ಸ್ಥಾನಕ್ಕೇರಲು ಭಾರತಕ್ಕೆ ಬಹಳ ಸಮಯ ಬೇಕು. ಗೋಲ್ಡ್​ಮನ್ ಸ್ಯಾಕ್ಸ್ (Goldman Sachs) ವರದಿಯೊಂದರ ಪ್ರಕಾರ ಭಾರತ ಎರಡನೇ ಸ್ಥಾನಕ್ಕೇರಲು 2075 ಆಗಬಹುದು.

2075ರಲ್ಲಿ ಟಾಪ್ ಆರ್ಥಿಕತೆಗಳು

ಗೋಲ್ಡ್​ಮನ್ ಸ್ಯಾಕ್ಸ್ ಸಂಸ್ಥೆ ಮುಂದಿನ 50 ವರ್ಷದಲ್ಲಿ ಜಾಗತಿಕ ಆರ್ಥಿಕತೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ವಿಶ್ಲೇಷಿಸಿದೆ. ಇವತ್ತಿನ ಅನೇಕ ಮುಂದುವರಿದ ದೇಶಗಳು ಕೆಳಗಿಳಿಯುತ್ತವೆ. ಅಭಿವೃದ್ಧಿ ಮಂದಗೊಳ್ಳುತ್ತಿರುವುದು ಹಾಗು ಜನಸಂಖ್ಯೆ ಕಡಿಮೆ ಆಗುತ್ತಿರುವುದು ಅನೇಕ ಮುಂದುವರಿದ ದೇಶಗಳಿಗೆ ಹಿನ್ನಡೆಯ ಅಂಶಗಳೆನಿಸಿವೆ.

ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

ಯುವಜನರ ಸಂಖ್ಯೆ ಹೆಚ್ಚಿರುವ ಭಾರತ ಮುಂದಿನ ಕೆಲ ದಶಕಗಳಲ್ಲಿ ಅಪಾರ ಬೆಳವಣಿಗೆ ಕಾಣಲಿದೆ. 2075ರಲ್ಲಿ ಅದು 52.5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರಲಿದೆ. ಅಮೆರಿಕವನ್ನು ಅದು ಹಿಂದಿಕ್ಕುತ್ತದೆ. 2075ರಲ್ಲಿ ಅಮೆರಿಕದ ಜಿಡಿಪಿ 51.5 ಟ್ರಿಲಿಯನ್ ಡಾಲರ್ ಇರುತ್ತದೆ. ಆದರೆ, ಚೀನಾ 57 ಟ್ರಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನದಲ್ಲಿರುತ್ತದೆ ಎಂಬುದು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯಲ್ಲಿ ತಿಳಿಸಲಾಗಿರುವ ಅಂಶ.

ಪಾಕಿಸ್ತಾನ ನಂ. 6

ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ ಇತ್ಯಾದಿ ಹೆಚ್ಚಿನ ಜನಸಂಖ್ಯೆ ಹಾಗೂ ಯುವಜನರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಸರಿಯಾದ ಆರ್ಥಿಕ ನೀತಿ ಜಾರಿಗೆ ಬಂದರೆ ವೇಗದ ಬೆಳವಣಿಗೆ ಕಾಣಬಹುದು ಎಂಬುದು ಈ ವರದಿಯಲ್ಲಿ ಸೂಚಿಸಲಾಗಿದೆ. ಪಾಕಿಸ್ತಾನ 2075ರಲ್ಲಿ 12.3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ಗೋಲ್ಡ್​ಮನ್ ಸ್ಯಾಕ್ಸ್ ರಿಪೋರ್ಟ್; 2075ರಲ್ಲಿ ಟಾಪ್-12 ಆರ್ಥಿಕತೆಗಳಿವು…

  1. ಚೀನಾ: 57 ಟ್ರಿಲಿಯನ್ ಡಾಲರ್
  2. ಭಾರತ: 52.5 ಟ್ರಿಲಿಯನ್ ಡಾಲರ್
  3. ಅಮೆರಿಕ: 51.5 ಟ್ರಿಲಿಯನ್ ಡಾಲರ್
  4. ಇಂಡೋನೇಷ್ಯಾ: 13.7 ಟ್ರಿಲಿಯನ್ ಡಾಲರ್
  5. ನೈಜೀರಿಯಾ: 13.1 ಟ್ರಿಲಿಯನ್ ಡಾಲರ್
  6. ಪಾಕಿಸ್ತಾನ: 12.3 ಟ್ರಿಲಿಯನ್ ಡಾಲರ್
  7. ಈಜಿಪ್ಟ್: 10.5 ಟ್ರಿಲಿಯನ್ ಡಾಲರ್
  8. ಬ್ರೆಜಿಲ್: 8.7 ಟ್ರಿಲಿಯನ್ ಡಾಲರ್
  9. ಜರ್ಮನಿ: 8.1 ಟ್ರಿಲಿಯನ್ ಡಾಲರ್
  10. ಮೆಕ್ಸಿಕೋ: 7.6 ಟ್ರಿಲಿಯನ್ ಡಾಲರ್
  11. ಬ್ರಿಟನ್: 7.6 ಟ್ರಿಲಿಯನ್ ಡಾಲರ್
  12. ಜಪಾನ್: 7.5 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ – Kannada News | Bigg Boss Kannada 12: Gilli fight with Rashika for Rakshita

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. ತಂಡ ಮಾಡಿಕೊಳ್ಳುವಂತೆ ಬಿಗ್​​ಬಾಸ್ ಹೇಳಿದಾಗ ರಾಶಿಕಾಗೆ ರಕ್ಷಿತಾರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ರಕ್ಷಿತಾ ಮತ್ತು ರಾಶಿಕಾ ನಡುವೆ ಜಗಳವಾಗಿದೆ. ಆಗ ರಕ್ಷಿತಾ ಪರ ನಿಂತ ಗಿಲ್ಲಿ ಮೇಲೂ ರಾಶಿಕಾ ಕೂಗಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಾಯಿ ಪಲ್ಲವಿ ಮೊದಲ ಹಿಂದಿ ಸಿನಿಮಾಕ್ಕೆ ಆಮಿರ್ ಖಾನ್ ಅಡ್ಡಗಾಲು? – Kannada News | Sai Pallavi’s debut Hindi movie release delayed due to Aamir Khan

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಸಾಯಿ ಪಲ್ಲವಿಯನ್ನು ಪವನ್ ಕಲ್ಯಾಣ್ ಅವರಿಗೆ ಸಹ ಹೋಲಿಸಿದ್ದರು, ಅಷ್ಟು ದೊಡ್ಡ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ಭಿನ್ನ ಸಿನಿಮಾಗಳ ಆಯ್ಕೆ, ಸಿನಿಮಾಗಳ ಹೊರಗೆ ಅವರ ವ್ಯಕ್ತಿತ್ವ, ನಿಲವುಗಳು ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿ ಕೊಟ್ಟಿವೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ, ಇದೀಗ ಮೊದಲ ಬಾರಿಗೆ ಹಿಂದಿಗೆ ಕಾಲಿರಿಸಿದ್ದು, ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಮೊದಲ ಸಿನಿಮಾ ಬಿಡುಗಡೆಗೆ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಅಡ್ಡಗಾಲು ಹಾಕುತ್ತಿದ್ದಾರೆ. ಅದು ಹೇಗೆ?

ಸಾಯಿ ಪಲ್ಲವಿ, ಬಾಲಿವುಡ್​ನ ಬಲು ದೊಡ್ಡ ಬಜೆಟ್​ನ ಸಿನಿಮಾ ‘ರಾಮಾಯಣ’ದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಮತ್ತು ಯಶ್ ಸಹ ನಟಿಸುತ್ತಿರುವುದು ಗೊತ್ತಿರುವುದೇ. ಆದರೆ ಇದು ಸಾಯಿ ಪಲ್ಲವಿ ಅವರ ಮೊದಲ ಹಿಂದಿ ಸಿನಿಮಾ ಅಲ್ಲ. ‘ರಾಮಾಯಣ’ಕ್ಕೆ ಮುಂಚೆ, ಆಮಿರ್ ಖಾನ್ ಪುತ್ರನ ಜೊತೆಗೆ ಸಾಯಿ ಪಲ್ಲವಿ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ‘ಮೇರೆ ರಹೊ’ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಭಾರತ ಮತ್ತು ಜಪಾನ್​​ನಲ್ಲಿ ನಡೆದಿದೆ. ಅಸಲಿಗೆ 2024ರಲ್ಲೇ ಚಿತ್ರೀಕರಣ ಶುರುವಾಗಿದ್ದು, ಚಿತ್ರೀಕರಣ ಮುಗಿದು ತಿಂಗಳುಗಳೇ ಆಗಿವೆ. ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇದಕ್ಕೆ ಆಮಿರ್ ಖಾನ್ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್​​ಗೆ ಎಸ್ ಎಂದ ಸಾಯಿ ಪಲ್ಲವಿ

ಆಮಿರ್ ಖಾನ್ ಅವರು ‘ಮೇರೆ ರಹೊ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಹೋಗುತ್ತಿದ್ದಾರಂತೆ. ಪೋಸ್ಟ್ ಪ್ರೊಡಕ್ಷನ್ ಸರಿ ಬಾರದೇ ಇರುವುದು ಸೇರಿದಂತೆ, ಇತರೆ ದೊಡ್ಡ ಸಿನಿಮಾಗಳು ಚಿತ್ರಮಂದಿರದಲ್ಲಿ ಇಲ್ಲದೇ ಇರುವ ಸಮಯದಲ್ಲಿ ಬಿಡುಗಡೆ ಮಾಡಲೆಂದು ಸಿನಿಮಾದ ಬಿಡುಗಡೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಇದೀಗ ಫೆಬ್ರವರಿ 14ರ ವೇಳೆಗೆ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಆದರೆ ಇನ್ನೂ ಖಾತ್ರಿ ಆಗಿಲ್ಲ.

ಇನ್ನು ಸಾಯಿ ಪಲ್ಲವಿ ಅವರ ಕೈಯಲ್ಲಿ ಪ್ರಸ್ತುತ ಹಲವು ಸಿನಿಮಾಗಳಿವೆ. ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿಸಲಿದ್ದಾರೆ. ಮಣಿರತ್ನಂ ನಿರ್ದೇಶಿಸಲಿರುವ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ ಮತ್ತೊಮ್ಮೆ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.

Source link

T20 World Cup 2026: ವಿವಿಐಪಿ ಭದ್ರತೆ ನೀಡಿದರೂ ಭಾರತದಲ್ಲಿ ಆಡಲ್ಲ ಎಂದ ಬಾಂಗ್ಲಾ – Kannada News | T20 World Cup 2026: Bangladesh Rejects India’s VVIP Security Offer

2026 ರ ಟಿ20 ವಿಶ್ವಕಪ್‌ಗೆ (T20 World Cup 2026) ಸರಿಯಾಗಿ ಒಂದು ತಿಂಗಳು ಬಾಕಿ ಇದೆ. ಈ ಮಿನಿ ವಿಶ್ವಕಪ್‌ಗಾಗಿ ಐಸಿಸಿ (ICC) ಹಾಗೂ ಆತಿಥ್ಯದ ಹಕ್ಕು ಹೊಂದಿರುವ ಬಿಸಿಸಿಐ (BCCI) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹೊಸ ಖ್ಯಾತೆ ತಲೆನೋವು ತಂದ್ದೊಡ್ಡಿದೆ. ಒಂದೆಡೆ ಬಾಂಗ್ಲಾದೇಶ ತಂಡ ಭಾರತದಲ್ಲಿ ಟಿ20ವಿಶ್ವಕಪ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಬಿಸಿಸಿಐ ಕೂಡ ಈ ಸಮಯದಲ್ಲಿ ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ ಎನ್ನುತ್ತಿದೆ. ಉಭಯ ಮಂಡಳಿಗಳ ಈ ಪ್ರತಿಷ್ಠೆಯ ಹೋರಾಟವನ್ನು ಪರಿಹರಿಸುವುದು ಐಸಿಸಿಗೆ ದೊಡ್ಡ ಸವಾಲಾಗಿದೆ. ಇದೆಲ್ಲದರ ನಡುವೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದ ಬಾಂಗ್ಲಾದೇಶವು ಈಗ “ವಿವಿಐಪ ಭದ್ರತೆ” ಒದಗಿಸಿದ್ದರೂ ಭಾರತದಲ್ಲಿ ಆಡಲು ನಿರಾಕರಿಸಿದೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿವೆ.

ಬಿಸಿಸಿಐ ಆಫರ್ ನಿರಾಕರಿಸಿದ ಬಾಂಗ್ಲಾ- ವರದಿ

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಜನವರಿ 6 ರ ಮಂಗಳವಾರ ನಡೆಯಲಿರುವ ಆನ್‌ಲೈನ್ ಸಭೆಯಲ್ಲಿ ಐಸಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಿದೆ. ಬಾಂಗ್ಲಾದೇಶ ಮಂಡಳಿ ಉಲ್ಲೇಖಿಸಿರುವ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಬಿಸಿಸಿಐ, ಬಾಂಗ್ಲಾದೇಶ ತಂಡಕ್ಕೆ ರಾಜ್ಯ ಮಟ್ಟದ ಭದ್ರತೆಯನ್ನು (ವಿವಿಐಪಿ ಭದ್ರತೆ) ಒದಗಿಸಲು ಪ್ರಸ್ತಾಪಿಸಿದೆ.

ಆದರೆ ಈ ಭರವಸೆಯ ಹೊರತಾಗಿಯೂ, ಟಿ20 ವಿಶ್ವಕಪ್‌ಗಾಗಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಸಿದ್ಧವಿಲ್ಲ ಎಂದು ಬಾಂಗ್ಲಾದೇಶ ಮಂಡಳಿಯು ಅನೌಪಚಾರಿಕವಾಗಿ ಐಸಿಸಿಗೆ ತಿಳಿಸಿದೆ ಎಂದು ವರದಿಯಾಗಿದೆ. ಇನ್ನು ಮಂಗಳವಾರ ನಡೆಯಲಿರುವ ಸಭೆಯಲ್ಲಿ ಐಸಿಸಿ, ಬಿಸಿಸಿಐನ ಪ್ರಸ್ತಾವನೆಯನ್ನು ಬಾಂಗ್ಲಾದೇಶ ಮಂಡಳಿಗೆ ಔಪಚಾರಿಕವಾಗಿ ಮಂಡಿಸಲಿದೆ. ಆದಾಗ್ಯೂ, ಈಗಾಗಲೇ ಸ್ಪಷ್ಟವಾಗಿರುವಂತೆ, ಬಿಸಿಬಿ ಈ ಪ್ರಸ್ತಾವನೆಯನ್ನು ತಿರಸ್ಕರಿಸುವ ಸಾಧ್ಯತೆಯಿದೆ.

T20 World Cup: ಭಾರತಕ್ಕೆ ಬರಲ್ಲ ಎನ್ನುತ್ತಲೇ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಬಾಂಗ್ಲಾ

ಪಾಕಿಸ್ತಾನದ ಹಾದಿಯಲ್ಲಿ ಬಾಂಗ್ಲಾದೇಶ

ಬಾಂಗ್ಲಾದೇಶ ಮಂಡಳಿಯ ನಿಲುವು, ತಾನು ಕೂಡ ಪಾಕಿಸ್ತಾನದ ಮಾರ್ಗವನ್ನು ಅನುಸರಿಸಲು ಬಯಸುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ, ಭಾರತೀಯ ತಂಡದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಯಿತು. ಪ್ರತಿಯಾಗಿ, ಪಾಕಿಸ್ತಾನ ಕೂಡ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತು. ಆ ನಂತರ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಯಿತು. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ, ಪಾಕಿಸ್ತಾನ ತಂಡವು ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ಈಗ ಭಾರತದ ಹೊರಗೆ ತನ್ನ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಅದೇ ರೀತಿ ದೃಢನಿಶ್ಚಯ ಹೊಂದಿದೆ. ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಈ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:23 pm, Tue, 6 January 26

Source link

ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ: ಬಸವಂತನ ಜೀವ ಉಳಿಸಿದ ಐಪಿಎಸ್ ಅಧಿಕಾರಿ – Kannada News | Belagavi Knife Attack: Car Driver of Minister Laxmi Hebbalkar Son Stabbed

ಬೆಳಗಾವಿ, ಜನವರಿ 06: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಪುತ್ರನ ಕಾರು ಚಾಲಕನಿಗೆ ದುಷ್ಕರ್ಮಿಗಳಿಂದ ಚಾಕು ಇರಿದಿರುವಂತಹ (stabbed) ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್(32)ಗೆ ಬೈಕ್​​​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಎದೆ, ಭುಜ, ತೊಡೆ ಸೇರಿ 4 ಕಡೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ. ಮೈನಿಂಗ್ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಬಸವಂತರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಡೆದದ್ದೇನು?

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್​​, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್​​​ ಕಾರು ಚಾಲಕರಾಗಿದ್ದಾರೆ. ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದರು. ಈ ವೇಳೆ ಬೈಕ್​​​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ. ಹಲ್ಲೆ ಮಾಡಿರುವವರು ಬೆಳಗಾವಿ ತಾಲೂಕಿನ ಗೊಜಗಾ ಮೂಲದವರು ಎನ್ನಲಾಗುತ್ತಿದೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ

ಇನ್ನು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಬಸವಂತ ಕಡೋಲ್ಕರ್​​ ಜೀವ ಉಳಿಸಿದ್ದಾರೆ.  ಘಟನೆ ವೇಳೆ ರವೀಂದ್ರ ಗಡಾದಿ ಅವರು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಗಲಾಟೆ ನೋಡುತ್ತಿದ್ದಂತೆ ಸ್ಥಳಕ್ಕೆ ಹೋಗಿ ದುಷ್ಕರ್ಮಿಗಳಿಂದ ಬಸವಂತನ ಜೀವ ಉಳಿಸಿದ್ದಾರೆ. ಸದ್ಯ ಆಸ್ಪತ್ರೆಗೆ ಡಿಸಿಪಿ, ಎಸಿಪಿ ಹಾಗೂ ಸಚಿವೆ ಲಕ್ಷ್ಮೀ ಪುತ್ರ ಮೃಣಾಲ್‌ ಭೇಟಿ ಮಾಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

ಹಲ್ಲೆಗೊಳಗಾದ ಬಸವಂತ ಹೇಳಿದ್ದಿಷ್ಟು 

ಹಲ್ಲೆಗೊಳಗಾದ ಬಸವಂತ ಟಿವಿ9 ಜೊತೆಗೆ ಪ್ರತಿಕ್ರಿಯಿಸಿದ್ದು, ಮೈನಿಂಗ್ ವಿಚಾರದಲ್ಲಿ ಬಂದು ನನ್ಮೇಲೆ ಹಲ್ಲೆ ಮಾಡಿದ್ದಾರೆ. ಮೈನಿಂಗ್ ವಿಚಾರಕ್ಕೆ ಪದೇಪದೆ ಜಗಳ ತೆಗೆಯುತ್ತಿದ್ದರು. ಇಂದು ಗೋಜಗಾ ಗ್ರಾಮದ ಶಿವಾ ಪೂಜಾರಿ, ಪರಶುರಾಮ ಮತ್ತು ಮೋನಪ್ಪ ಪಾಟೀಲ್​ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:17 pm, Tue, 6 January 26

Source link

NABARD Recruitment 2026: ಲಿಖಿತ ಪರೀಕ್ಷೆ ಇಲ್ಲದೆ ನೇರ ಆಯ್ಕೆ ಮತ್ತು ಲಕ್ಷಗಳಲ್ಲಿ ಸಂಬಳ; ಕೂಡಲೇ ಅರ್ಜಿ ಸಲ್ಲಿಸಿ! – Kannada News | NABARD Specialist Recruitment 2026: High Paying Contract Jobs, Apply Now!

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್

ದೇಶದ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಅತಿದೊಡ್ಡ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD), ಯುವ ಮತ್ತು ಅನುಭವಿ ವೃತ್ತಿಪರರಿಗೆ ದೊಡ್ಡ ನೇಮಕಾತಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ನಬಾರ್ಡ್ ವಿವಿಧ ಇಲಾಖೆಗಳಲ್ಲಿ ತಜ್ಞರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್, ಅಪಾಯ ನಿರ್ವಹಣೆ, ಹಣಕಾಸು, ದತ್ತಾಂಶ ವಿಶ್ಲೇಷಣೆ, ತಾಂತ್ರಿಕ ಕ್ಷೇತ್ರಗಳಲ್ಲಿ ಉತ್ತಮ ಅನುಭವ ಹೊಂದಿರುವ ಮತ್ತು ಗೌರವಾನ್ವಿತ ಸಂಸ್ಥೆಯೊಂದಿಗೆ ಕೆಲಸ ಮಾಡಲು ಬಯಸುವವರಿಗೆ ಈ ನೇಮಕಾತಿ ಬಹಳ ವಿಶೇಷವಾಗಿದೆ.

ನಬಾರ್ಡ್ ನಿಂದ ಈ ನೇಮಕಾತಿ ಶಾಶ್ವತವಲ್ಲ, ಬದಲಾಗಿ ಒಪ್ಪಂದದ ಆಧಾರದ ಮೇಲೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಆರಂಭಿಕ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಅಗತ್ಯ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಅವಧಿಯನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಆದ್ದರಿಂದ, ದೀರ್ಘಕಾಲದವರೆಗೆ ದೊಡ್ಡ ಸಂಸ್ಥೆಯೊಂದಿಗೆ ವೃತ್ತಿಪರವಾಗಿ ಕೆಲಸ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಯಾವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ?

ಈ ನೇಮಕಾತಿಯಡಿಯಲ್ಲಿ, ನಬಾರ್ಡ್ ಒಟ್ಟು 17 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇವುಗಳಲ್ಲಿ ಅಪಾಯ ನಿರ್ವಹಣೆ, ಹಣಕಾಸು, ಡೇಟಾ ಸೈನ್ಸ್, ಐಟಿ, ಸ್ಟಾರ್ಟ್ಅಪ್, ಭೌಗೋಳಿಕ ಸೂಚನೆ, ಸಲಹಾ ಇತ್ಯಾದಿ ಹಲವಾರು ಪ್ರಮುಖ ಹುದ್ದೆಗಳು ಸೇರಿವೆ. ಹೆಚ್ಚಿನ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಸೇರಿವೆ, ಆದರೆ ಕೆಲವು ಹುದ್ದೆಗಳು ಒಬಿಸಿ ವರ್ಗಕ್ಕೂ ಮೀಸಲಾಗಿವೆ.

ಯಾರು ಅರ್ಜಿ ಸಲ್ಲಿಸಬಹುದು?

ನಬಾರ್ಡ್ ನಿಂದ ಈ ನೇಮಕಾತಿಗೆ ಉನ್ನತ ಶಿಕ್ಷಣ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
ಹೆಚ್ಚುವರಿ ಮುಖ್ಯ ಅಪಾಯ ವ್ಯವಸ್ಥಾಪಕ ಹುದ್ದೆಗೆ ಅಭ್ಯರ್ಥಿಯು ಪದವೀಧರರಾಗಿರಬೇಕು. ಇದರೊಂದಿಗೆ, ಅರ್ಥಶಾಸ್ತ್ರ, ಹಣಕಾಸು, ಅಂಕಿಅಂಶಗಳು, ವ್ಯವಹಾರ ಆಡಳಿತ, ಎಂಬಿಎ, ಸಿಎ ಅಥವಾ ಸಿಎಸ್‌ನಲ್ಲಿ ಪದವಿ ಪಡೆದಿರಬೇಕು. ಈ ಹುದ್ದೆಗೆ ಕನಿಷ್ಠ 10 ವರ್ಷಗಳ ಬ್ಯಾಂಕಿಂಗ್ ಅನುಭವದ ಅಗತ್ಯವಿದೆ.

ರಿಸ್ಕ್ ಮ್ಯಾನೇಜರ್ ಸಂಬಂಧಿತ ಹುದ್ದೆಗಳಿಗೆ, ಅಭ್ಯರ್ಥಿಯು ಹಣಕಾಸು, ವಾಣಿಜ್ಯ, ಅರ್ಥಶಾಸ್ತ್ರ, ಅಂಕಿಅಂಶಗಳು, ಗಣಿತ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿರಬೇಕು. ಇದರ ಜೊತೆಗೆ, ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿದೆ.
ಮಾರುಕಟ್ಟೆ ಅಪಾಯ ವ್ಯವಸ್ಥಾಪಕರಂತಹ ಹುದ್ದೆಗಳಿಗೆ ಬಹುತೇಕ ಒಂದೇ ರೀತಿಯ ಅರ್ಹತೆಗಳಿವೆ, ಅಲ್ಲಿ ಸ್ನಾತಕೋತ್ತರ ಪದವಿ ಅಥವಾ MBA ಜೊತೆಗೆ ಅನುಭವದ ಅಗತ್ಯವಿರುತ್ತದೆ.

ಹಣಕಾಸು ವಿಶ್ಲೇಷಕ, ದತ್ತಾಂಶ ವಿಜ್ಞಾನಿ, ಯೋಜನಾ ವ್ಯವಸ್ಥಾಪಕ, ಹಿರಿಯ ಸಲಹೆಗಾರ, ಆರಂಭಿಕ ವ್ಯವಸ್ಥಾಪಕ, ಭೌಗೋಳಿಕ ಸೂಚಕ ವ್ಯವಸ್ಥಾಪಕರಂತಹ ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಅನುಭವದ ಅಗತ್ಯವಿರುತ್ತದೆ.

ವಯಸ್ಸಿನ ಮಿತಿ ಎಷ್ಟು?

ನಬಾರ್ಡ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 28 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 62 ವರ್ಷಗಳು. ಸರ್ಕಾರಿ ಮಾನದಂಡಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಎಷ್ಟು ಸಂಬಳ ಸಿಗಲಿದೆ?

ಈ ನೇಮಕಾತಿಯ ಪ್ರಮುಖ ಅಂಶವೆಂದರೆ ಅದರ ಸಂಬಳ. ನಬಾರ್ಡ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ತಿಂಗಳಿಗೆ 1.50 ಲಕ್ಷದಿಂದ 3.85 ಲಕ್ಷ ರೂ.ಗಳವರೆಗೆ ವೇತನವನ್ನು ಪಡೆಯಬಹುದು. ಈ ವೇತನವನ್ನು ಅನುಭವ ಮತ್ತು ಹುದ್ದೆಯ ಜವಾಬ್ದಾರಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಪ್ಯಾಕೇಜ್ ಅನ್ನು ಬ್ಯಾಂಕಿಂಗ್ ವಲಯದಲ್ಲಿ ಬಹಳ ಆಕರ್ಷಕವೆಂದು ಪರಿಗಣಿಸಲಾಗಿದೆ.

ಆಯ್ಕೆ ಹೇಗೆ ಮಾಡಲಾಗುತ್ತದೆ?

ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಸಂದರ್ಶನದ ಆಧಾರದ ಮೇಲೆ ಮಾತ್ರ ಮಾಡಲಾಗುತ್ತದೆ. ಅಂದರೆ, ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸಂದರ್ಶನವು ಅಭ್ಯರ್ಥಿಯ ಅನುಭವ, ಕೆಲಸದ ಶೈಲಿ ಮತ್ತು ವೃತ್ತಿಪರ ಕೌಶಲ್ಯಗಳನ್ನು ಪರಿಶೀಲಿಸುತ್ತದೆ.

ಇದನ್ನೂ ಓದಿ: ರೈಲ್ವೆಯಲ್ಲಿ 22 ಸಾವಿರ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ; ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸಬೇಕು. ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ 850 ರೂ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 150 ರೂ.

ಅರ್ಜಿ ಸಲ್ಲಿಸುವುದು ಹೇಗೆ?

ಈ ನೇಮಕಾತಿಗೆ ನಬಾರ್ಡ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಅಭ್ಯರ್ಥಿಗಳು ನಬಾರ್ಡ್‌ನ ಅಧಿಕೃತ ವೆಬ್‌ಸೈಟ್ www.nabcons.com ಗೆ ಭೇಟಿ ನೀಡಬೇಕು. ಅಲ್ಲಿ, ವೃತ್ತಿ ವಿಭಾಗಕ್ಕೆ ಹೋಗಿ ಸಂಬಂಧಿತ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಹೊಸ ಅಭ್ಯರ್ಥಿಗಳು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ತಮ್ಮ ವಿವರಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಬೇಕು. ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಫಾರ್ಮ್‌ನ ಪ್ರತಿಯನ್ನು ಡೌನ್‌ಲೋಡ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version