ಇದು ಧುರಂಧರ್ 3: ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾನ್ನು ಹೇಗೆ ಕೊಂದ್ರು ನೋಡಿ? ವಿಡಿಯೋ ವೈರಲ್

ಲಾಹೋರ್, ಏ.17: ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಾಗೂ ಲಷ್ಕರ್-ಎ-ತೈಬಾ (LeT) ಸಂಘಟನೆಯ ಹಿರಿಯ ನಾಯಕ ಅಮೀರ್ ಹಮ್ಜಾ ಪಾಕಿಸ್ತಾನದ ಲಾಹೋರ್‌ನಲ್ಲಿ ಹತ್ಯೆಯಾಗಿದ್ದಾನೆ. ಮೋಟಾರ್ ಸೈಕಲ್‌ನಲ್ಲಿ ಬಂದ ಅಜ್ಞಾತ ಬಂದೂಕುಧಾರಿಗಳು ಹಮ್ಜಾನನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಲಾಹೋರ್‌ನ ಲಖ್ಪತ್ ಜಿಲ್ಲೆಯ ಸಮೀಪ ಈ ಘಟನೆ ನಡೆದಿದೆ. ಹಮ್ಜಾ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಂಧಾಭಿಮಾನಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಹಮ್ಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ಆತನ ಪತ್ನಿ ಮತ್ತು ಮಗಳಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಮೀರ್ ಹಮ್ಜಾ 2012ರ ಸುನಿತಾ ವಿಲಿಯಮ್ಸ್ ಭೇಟಿಯ ವೇಳೆ ಮುಂಬೈ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತನನ್ನು ಅಮೆರಿಕವು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆ: ಹಿಂದಿ ಭಾಷೆಗೆ ಸಿಗುತ್ತಾ ಗ್ರೇಸ್ ಮಾರ್ಕ್ಸ್? ಖಾಸಗಿ ಶಾಲೆಗಳ ಒಕ್ಕೂಟ ಮನವಿ – Kannada News | SSLC Exam Update: KAMS Urges Karnataka Govt to Give 8 Grace Marks for Hindi After High Court Quashes Grade System

ಬೆಂಗಳೂರು, ಏಪ್ರಿಲ್ 17: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ ಹಿಂದಿಗೆ 8 ಹೆಚ್ಚುವರಿ ಗ್ರೇಸ್ ಅಂಕಗಳನ್ನು ನೀಡುವಂತೆ ಮನವಿ ಮಾಡಿ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದೆ. ಈ ಕ್ರಮವು ಹಿಂದಿ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಒಕ್ಕೂಟ ಹೇಳಿದೆ. ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಸರ್ಕಾರ ತೃತೀಯ ಭಾಷೆಗೆ ಗ್ರೇಡ್ ನೀಡುವುದಾಗಿ ತಿಳಿಸಿತ್ತು. ಆದರೆ, ನ್ಯಾಯಾಲಯವು ಈ ನಿರ್ಧಾರವನ್ನು ರದ್ದುಗೊಳಿಸಿ, ಗ್ರೇಡ್‌ಗಳ ಬದಲಿಗೆ ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡಬೇಕು ಎಂದು ಸೂಚಿಸಿತ್ತು. ಆದರೆ, ಸರ್ಕಾರದ ಗ್ರೇಡ್ ನಿರ್ಧಾರದ ಘೋಷಣೆ ನಂತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೃತೀಯ ಭಾಷೆಯನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಈಗ ಫಲಿತಾಂಶ ಕುಸಿತದ ಭೀತಿ ಎದುರಾಗಿದೆ. ಹೀಗಾಗಿ ನಿರ್ದಿಷ್ಟವಾಗಿ ಹಿಂದಿ ಭಾಷೆಗೆ 8 ಗ್ರೇಸ್ ಮಾರ್ಕ್ಸ್ ನೀಡಬೇಕೆಂದು ಒತ್ತಾಯಿಸುತ್ತಿದೆ.

ಈ ಮನವಿಯಿಂದಾಗಿ ಹಿಂದಿ ವಿಷಯದಲ್ಲಿ ಉತ್ತೀರ್ಣರಾಗಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್​​ಗೆ ಹೋದ ತಮನ್ನಾಗೆ ಹಿನ್ನಡೆ – Kannada News | Tamannaah Bhatia’s Rs 1 Cr Claim Against Soap Co. Dismissed by Madras HC: 16 Year Legal Battle Ends

ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಖಾಸಗಿ ಸೋಪ್ ಕಂಪನಿಯ ವಿರುದ್ಧ ಅವರು ಸಲ್ಲಿಸಿದ್ದ 1 ಕೋಟಿ ರೂ. ಪರಿಹಾರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಪ್ರಕರಣ ಸುಮಾರು 16 ವರ್ಷಗಳ ಹಿಂದಿನದು ಎಂದೆ ನೀವು ನಂಬಲೇಬೇಕು. ಹಾಗಾದರೆ ಏನಿದು ಪ್ರಕರಣ? ಅವರ ವಾದವೇನು? ಆ ಬಗ್ಗೆ ಇಲ್ಲಿದೆ ವಿವರ.

ಅಕ್ಟೋಬರ್ 2008ರಲ್ಲಿ, ತಮನ್ನಾ ಸೋಪ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಅವರು ಒಂದು ವರ್ಷದ ಅವಧಿಗೆ (ಅಕ್ಟೋಬರ್ 2009 ರವರೆಗೆ) ಕಂಪನಿಯ ಉತ್ಪನ್ನಗಳಿಗೆ ಬ್ರಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಒಪ್ಪಂದದ ಅವಧಿ ಮುಗಿದ ನಂತರವೂ, ಕಂಪನಿಯು ತನ್ನ ಫೋಟೋಗಳನ್ನು ಜಾಹೀರಾತುಗಳಲ್ಲಿ ಮತ್ತು ಸೋಪ್ ಪ್ಯಾಕೇಜಿಂಗ್‌ನಲ್ಲಿ ಬಳಸುತ್ತಿದೆ ಎಂದು ತಮನ್ನಾ ಆರೋಪಿಸಿದರು.

2010 ಮತ್ತು 2011ರ ಅವಧಿಯಲ್ಲಿ ಅನುಮತಿಯಿಲ್ಲದೆ ತಮ್ಮ ಫೋಟೋಗಳನ್ನು ಬಳಸುವುದರಿಂದ ಆರ್ಥಿಕವಾಗಿ ಹಾನಿಯಾಗಿದೆ ಮತ್ತು ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡಿದೆ ಎಂದು ಅವರು ವಾದಿಸಿದರು. 1 ಕೋಟಿ ರೂ. ಪರಿಹಾರವನ್ನು ಕೋರಿ ಅವರು ನ್ಯಾಯಾಲಯವನ್ನು ಸಹ ಸಂಪರ್ಕಿಸಿದರು.

ಆರಂಭದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ತಮನ್ನಾ ಅವರು ಒದಗಿಸಿದ ಸಾಕ್ಷ್ಯಗಳು ಸರಿಯಾಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. ಅವರು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. ಏಪ್ರಿಲ್ 16, 2026ರಂದು, ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕಾವತಿ ಅವರ ಪೀಠವು ತಮನ್ನಾ ಅವರ ವಾದವನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ

ಒಪ್ಪಂದದ ಅವಧಿಯ ನಂತರ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೀಠ ಹೇಳಿದೆ. ಏಕ ನ್ಯಾಯಾಧೀಶರ ಹಿಂದಿನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತು. ಈ ತೀರ್ಪು ದೀರ್ಘಕಾಲದ ಕಾನೂನು ಹೋರಾಟವನ್ನು ಕೊನೆಗೊಳಿಸಿದಂತೆ ತೋರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ? – Kannada News | MNC Job Offer: Bengaluru Manager or Hyd Senior Manager? IT Pros Debate Career vs. City

ಬೆಂಗಳೂರು, ಏ.17: ಸೋಶಿಯಲ್​ ಮೀಡಿಯಾದಲ್ಲಿ ಈ ಐಟಿ ಕಂಪನಿಗಳು ಉದ್ಯೋಗಿಗಳ ಗೋಳು ಮುಗಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಇಂತಹ ಪೋಸ್ಟ್​​​ಗಳು ವೈರಲ್​ ಆಗುತ್ತ ಇರುತ್ತದ. ಸಾಫ್ಟ್‌ವೇರ್ ಮತ್ತು ಕಾರ್ಪೊರೇಟ್ ಲೋಕದಲ್ಲಿ ‘ಹುದ್ದೆಯ ಹೆಸರು’ (Title) ಮುಖ್ಯವೋ ಅಥವಾ ‘ವಾಸಿಸುವ ನಗರ’ (Location) ಮುಖ್ಯವೋ? ರೆಡ್ಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ಒಂದು ಪೋಸ್ಟ್ ಈಗ ಐಟಿ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಎಂಟು ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ‘ಸೀನಿಯರ್ ಮ್ಯಾನೇಜರ್’ ಹುದ್ದೆಗೆ ಸಂದರ್ಶನ ನೀಡಿದ್ದರು. ಅಭ್ಯರ್ಥಿಯು ವೈಯಕ್ತಿಕ ಕಾರಣಗಳಿಂದಾಗಿ ಬೆಂಗಳೂರಿನಲ್ಲೇ ಇರಲು ಬಯಸಿದ್ದರು. ಆದರೆ, ಕಂಪನಿಯು ಅವರ ಮುಂದೆ ಎರಡು ವಿಚಿತ್ರ ಆಯ್ಕೆಗಳನ್ನು ಇಟ್ಟಿದೆ. ಒಂದು ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’ ಹುದ್ದೆ, ಎರಡನೇಯದ್ದು, ಬೆಂಗಳೂರಿನಲ್ಲೇ ಇರಬೇಕೆಂದರೆ ‘ಮ್ಯಾನೇಜರ್’ ಹುದ್ದೆ. ಈಗ ಈ ವ್ಯಕ್ತಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಎರಡೂ ಆಯ್ಕೆಗಳಲ್ಲಿ ಸಂಬಳ (CTC) ಒಂದೇ ಆಗಿರುತ್ತದೆ! ಕಂಪನಿಯ ಪ್ರಕಾರ, ಎರಡೂ ಕೆಲಸಗಳು ಒಂದೇ ರೀತಿಯದ್ದಾಗಿದ್ದರೂ, ಬೆಂಗಳೂರಿನಲ್ಲಿ ಸದ್ಯಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ ಇಲ್ಲದ ಕಾರಣ ಈ ‘ಟೈಟಲ್ ಹಿಟ್’ (Title Hit) ಅನಿವಾರ್ಯ ಎಂದಿದೆ.ಈ ಗೊಂದಲಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

“ಹೈದರಾಬಾದ್‌ಗೆ ತೆರಳುವುದು ಉತ್ತಮ. ಬೆಂಗಳೂರಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದಿನ ಹತ್ತು ವರ್ಷ ಅಲ್ಲಿ ಯಾವುದೇ ಭರವಸೆ ಇಲ್ಲ. ಉತ್ತಮ ಜೀವನ ಗುಣಮಟ್ಟಕ್ಕಾಗಿ ಹೈದರಾಬಾದ್ ಆರಿಸಿಕೊಳ್ಳಿ” ಎಂದು ಒಬ್ಬರು ಸಲಹೆ ನೀಡಿದ್ದಾರೆ. ಮುಂದಿನ ಕೆಲಸದ ಸಂದರ್ಶನಗಳಲ್ಲಿ ಹುದ್ದೆಯ ಹೆಸರು ಮುಖ್ಯವಾಗುತ್ತದೆ. ಒಂದು ವೇಳೆ ಬೆಂಗಳೂರನ್ನೇ ಆರಿಸಿಕೊಂಡರೆ, ಸಂಬಳ ಮತ್ತು ಜವಾಬ್ದಾರಿ ಒಂದೇ ಆಗಿದ್ದರೂ ಟೈಟಲ್ ಮಾತ್ರ ಬದಲಾಗಿದೆ ಎಂಬ ಬಗ್ಗೆ ಕಂಪನಿಯಿಂದ ಲಿಖಿತ ದಾಖಲೆ ಪಡೆದುಕೊಳ್ಳಿ” ಎಂದಿದ್ದಾರೆ. “ಕೇವಲ ಹುದ್ದೆಯ ಹೆಸರಿಗಾಗಿ ಚೆನ್ನಾಗಿರುವ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳಬೇಡಿ. ಸಂಬಳ ಒಂದೇ ಇರುವಾಗ ನಿಮಗೆ ಇಷ್ಟವಾದ ನಗರದಲ್ಲೇ ಇರಿ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, “ಕೇವಲ 8 ವರ್ಷದ ಅನುಭವಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆ ಸಿಗುತ್ತದೆಯೇ? ಮತ್ತು ಮ್ಯಾನೇಜರ್ ಆಗಿ ಒಬ್ಬರೇ ಕೆಲಸ ಮಾಡುವ (IC Role) ಜವಾಬ್ದಾರಿ ಏಕೆ?” ಎಂಬ ಕುತೂಹಲಕಾರಿ ಪ್ರಶ್ನೆಗಳನ್ನೂ ಎತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು – Kannada News | Gautam Adani overtakes Mukesh Ambani as Asia’s richest man as per Bloomberg billionaires index

ನವದೆಹಲಿ, ಏಪ್ರಿಲ್ 17: ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ನಡುವೆ ಯಾರು ನಂಬರ್ ಒನ್ ಎನ್ನುವ ರೇಸ್ ನಡೆದಿದೆ. ಹೆಚ್ಚು ಆಸ್ತಿವಂತಿಕೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗೌತಮ್ ಅದಾನಿ (Gautam Adani) ಹಿಂದಿಕ್ಕಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪಟ್ಟಿಯಲ್ಲಿ ಅದಾನಿ 19ನೇ ಸ್ಥಾನಕ್ಕೇರಿದರೆ, ಮುಕೇಶ್ ಅಂಬಾನಿ 20ನೇ ಸ್ಥಾನದಲ್ಲಿದ್ದಾರೆ. ಅದಾನಿ ನಿವ್ವಳ ಆಸ್ತಿ ಮೌಲ್ಯ 3.56 ಬಿಲಿಯನ್ ಡಾಲರ್​ನಷ್ಟು ಏರಿಕೆಯಾಗಿ 92.6 ಬಿಲಿಯನ್ ಡಾಲರ್ ಆಗಿದೆ. ಇದೇ ವೇಳೆ, ಮುಕೇಶ್ ಅಂಬಾನಿ ಅವರ ನಿವ್ವಳ ಆಸ್ತಿಮೌಲ್ಯ 90.8 ಬಿಲಿಯನ್ ಡಾಲರ್ ಇದೆ.

2022ರಲ್ಲಿ ಹಿಂಡನ್ಬರ್ಗ್ ವರದಿ ಬಿಡುಗಡೆಗೆ ಮುನ್ನ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದರು. ಆ ಬಳಿಕ ಅದಾನಿ ಗ್ರೂಪ್​ನ ವಿವಿಧ ಷೇರುಗಳು ಕುಸಿದ ಪರಿಣಾಮ ಅವರ ಆಸ್ತಿಮೌಲ್ಯ ತುಸು ಕ್ಷೀಣಿಸಿತ್ತು. ಈಗ ಮತ್ತೆ ಅವರು ಪುಟಿದೆದಿದ್ದಾರೆ. ಭಾರತದ ನಂಬರ್ ಒನ್ ಮಾತ್ರವಲ್ಲ, ಏಷ್ಯಾದ ನಂಬರ್ ಒನ್ ಶ್ರೀಮಂತ ಎನಿಸಿದ್ದಾರೆ.

ಟಾಪ್-20ಯಲ್ಲಿ ಅಮೆರಿಕ ಕಾರುಬಾರು

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನಲ್ಲಿ ವಿಶ್ವದ ಅತೀ ಶ್ರೀಮಂತರಾದ 500 ಮಂದಿಯ ಪಟ್ಟಿ ಇದೆ. ಇದರಲ್ಲಿ ಟಾಪ್-20ಯಲ್ಲಿ 15 ಮಂದಿ ಅಮೆರಿಕನ್ನರೇ ಇದ್ದಾರೆ. ಫ್ರಾನ್ಸ್, ಮೆಕ್ಸಿಕೋ ಮತ್ತು ಸ್ಪೇನ್ ದೇಶದ ಒಬ್ಬೊಬ್ಬರು ಈ ಪಟ್ಟಿಯಲ್ಲಿದ್ದಾರೆ. ಭಾರತದವರು ಇಬ್ಬರಿದ್ದಾರೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಇಲಾನ್ ಮಸ್ಕ್ 656 ಬಿಲಿಯನ್ ಡಾಲರ್​ನೊಂದಿಗೆ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ದಾಖಲೆ ಮುಂದುವರಿಸಿದ್ದಾರೆ. ಲ್ಯಾರಿ ಪೇಜ್​ನಿಂದ ಹಿಡಿದು ಲ್ಯಾರಿ ಎಲಿಸನ್​ವರೆಗೆ ಐವರು ಶ್ರೀಮಂತರು 200 ಬಿಲಿಯನ್ ಡಾಲರ್​ಗೂ ಹೆಚ್ಚಿನ ನಿವ್ವಳ ಆಸ್ತಿ ಹೊಂದಿದ್ದಾರೆ.

ಬ್ಲೂಮ್​ಬರ್ಗ್ ಇಂಡೆಕ್ಸ್; ವಿಶ್ವದ ಟಾಪ್-10 ಶ್ರೀಮಂತರು

  1. ಇಲಾನ್ ಮಸ್ಕ್: 656 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 286 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 269 ಬಿಲಿಯನ್ ಡಾಲರ್
  4. ಸೆರ್ಗೇ ಬ್ರಿನ್: 266 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 239 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 230 ಬಿಲಿಯನ್ ಡಾಲರ್
  7. ಮೈಕೇಲ್ ಡೆಲ್: 170 ಬಿಲಿಯನ್ ಡಾಲರ್
  8. ಜೆನ್ಸೆನ್ ಹುವಾಂಗ್: 164 ಬಿಲಿಯನ್ ಡಾಲರ್
  9. ಬರ್ನಾರ್ಡ್ ಆರ್ನಾಲ್ಟ್: 164 ಬಿಲಿಯನ್ ಡಾಲರ್
  10. ಜಿಮ್ ವಾಲ್ಟನ್: 150 ಬಿಲಿಯನ್ ಡಾಲರ್

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಬ್ಲೂಮ್​ಬರ್ಗ್ ಇಂಡೆಕ್ಸ್​ನಲ್ಲಿ 23 ಮಂದಿ ಭಾರತೀಯರು

  1. ಗೌತಮ್ ಅದಾನಿ: 19ನೇ ಸ್ಥಾನ
  2. ಮುಕೇಶ್ ಅಂಬಾನಿ: 20ನೇ ಸ್ಥಾನ
  3. ಲಕ್ಷ್ಮೀ ಮಿಟ್ಟಲ್: 62ನೇ ಸ್ಥಾನ
  4. ಶಿವ ನಾದರ್: 70ನೇ ಸ್ಥಾನ
  5. ಶಾಪೂರ್ ಮಿಸ್ತ್ರಿ ಕುಟುಂಬ: 71ನೇ ಸ್ಥಾನ
  6. ಸಾವಿತ್ರಿ ಜಿಂದಾಲ್: 73ನೇ ಸ್ಥಾನ
  7. ಸುನಿಲ್ ಮಿಟ್ಟಲ್ ಕುಟುಂಬ: 101ನೇ ಸ್ಥಾನ
  8. ದಿಲೀಪ್ ಶಾಂಘವಿ: 107ನೇ ಸ್ಥಾನ
  9. ಅಜೀಮ್ ಪ್ರೇಮ್​ಜಿ: 119ನೇ ಸ್ಥಾನ
  10. ಕುಮಾರ್ ಬಿರ್ಲಾ: 120ನೇ ಸ್ಥಾನ
  11. ರಾಧಾಕೃಷ್ಣ ದಮಾನಿ: 147ನೇ ಸ್ಥಾನ
  12. ಉದಯ್ ಕೋಟಕ್: 219ನೇ ಸ್ಥಾನ
  13. ಸೈರಸ್ ಪೂನಾವಾಲ: 232ನೇ ಸ್ಥಾನ
  14. ಕೆಪಿ ಸಿಂಗ್: 281ನೇ ಸ್ಥಾನ
  15. ವಿಕ್ರಮ್ ಲಾಲ್: 282ನೇ ಸ್ಥಾನ
  16. ರವಿ ಜೈಪುರಿಯಾ: 293ನೇ ಸ್ಥಾನ
  17. ಮುರಳಿ ದಿವಿ: 370ನೇ ಸ್ಥಾನ
  18. ನುಸ್ಲಿ ವಾಡಿಯಾ: 386ನೇ ಸ್ಥಾನ
  19. ಸಮೀರ್ ಮೆಹತಾ: 433ನೇ ಸ್ಥಾನ
  20. ಪಂಕಜ್ ಪಟೇಲ್: 447ನೇ ಸ್ಥಾನ
  21. ರಾಹುಲ್ ಭಾಟಿಯಾ: 451ನೇ ಸ್ಥಾನ
  22. ಸುಧೀರ್ ಮೆಹತಾ: 456ನೇ ಸ್ಥಾನ
  23. ಇಂದರ್ ಜೈಸಿಂಘಾನಿ: 466ನೇ ಸ್ಥಾನ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:34 pm, Fri, 17 April 26

Source link

ಸಚಿವ ಸತೀಶ್​​ ಜಾರಕಿಹೊಳಿ ಜೊತೆಗಿನ ಮೀಟಿಂಗ್​​ ರಹಸ್ಯ ಬಿಚ್ಚಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್​​ – Kannada News | DkShivakumars Reaction to Satish Jarakiholi Meeting: Focusing on Congress Growth and City Traffic Solutions

ಬೆಂಗಳೂರು, ಏಪ್ರಿಲ್​​ 17: ಸಚಿವ ಸತೀಶ್ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿರುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರೋಡ್ ಬಗ್ಗೆ ಮಾತಾಡಿದ್ದು, ನೆಲ ಮಂಗಲದಲ್ಲಿ ಸಮಸ್ಯೆ ಆಗ್ತಿದೆ ಎಂದಿದ್ದಾರೆ. ಎರಡನೇದಾಗಿ ರಾಜಕಾರಣ ದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿಗೆ ಏನು ಬೇಕು ಎನ್ನುಬ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್​ ಮುಸ್ಲಿಂ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಸಂಬಂಧವೂ ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದೇ ಆದ ವರದಿ ಇದೆ. ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಎಲ್ಲರೂ ನನ್ನ ಮೇಲೆ ಹೇಳಬಹುದು, ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ವರ್ಗಕ್ಕೆ ನ್ಯಾಯ ಕೊಡುವುದಕ್ಕೆ ಇರೋದೆ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪವನ್​ ಖೇರಾಗೆ ಸುಪ್ರೀಂ ಶಾಕ್, ಜಾಮೀನು ವಿಸ್ತರಣೆಗೆ ನಿರಾಕರಣೆ, ಇನ್ನು ಅಸ್ಸಾಂ ನ್ಯಾಯಾಲಯವೇ ಗತಿ – Kannada News | Pavan Khera Bail: Supreme Court Refuses Extension, Assam Court Now His Only Recourse

ನವದೆಹಲಿ, ಏಪ್ರಿಲ್ 17: ಕಾಂಗ್ರೆಸ್ ಸಂಸದ ಪವನ್ ಖೇರಾ(Pawan Khera) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿರುವ ಪ್ರಕರಣದಲ್ಲಿ ಖೇರಾ ಅವರ ಜಾಮೀನು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ವಿಷಯದಲ್ಲಿ ನಾವು ಜಾಮೀನು ವಿಸ್ತರಿಸಲು ಸಾಧ್ಯವಿಲ್ಲ. ಅರ್ಜಿದಾರರು ಈ ಕುರಿತು ಅಸ್ಸಾಂನ ಸಂಬಂಧಪಟ್ಟ  ನ್ಯಾಯಾಲಯವನ್ನೇ ಸಂಪರ್ಕಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ತೆಲಂಗಾಣ ಹೈಕೋರ್ಟ್ ಆದೇಶಕ್ಕೆ ತಡೆ
ಕೆಲವು ದಿನಗಳ ಹಿಂದಷ್ಟೇ ತೆಲಂಗಾಣ ಹೈಕೋರ್ಟ್ ಪವನ್ ಖೇರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾದಾಗ ಸುಪ್ರೀಂ ಕೋರ್ಟ್ ಆ ಜಾಮೀನಿಗೆ ತಡೆ ನೀಡಿತ್ತು. ಈಗ ಸಾಗಣೆ ಜಾಮೀನನ್ನೂ ವಿಸ್ತರಿಸಲು ನಿರಾಕರಿಸುವ ಮೂಲಕ ಖೇರಾ ಅವರ ಮುಂದಿದ್ದ ಕಾನೂನು ರಕ್ಷಣೆಯ ದಾರಿಗಳು ಕಿರಿದಾಗಿವೆ.

ಈ ಹಿಂದೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನೀಡಿದ್ದ ಯಾವುದೇ ಮಧ್ಯಂತರ ಆದೇಶಗಳು ಅಸ್ಸಾಂನ ಸ್ಥಳೀಯ ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು. ಪವನ್ ಖೇರಾ ಅವರು ಜಾಮೀನು ಕೋರಿ ಅಲ್ಲಿನ ನ್ಯಾಯಾಲಯಕ್ಕೆ ಹೋದಾಗ, ಆ ನ್ಯಾಯಾಲಯವು ಪ್ರಕರಣದ ಅರ್ಹತೆಯ ಆಧಾರದ ಮೇಲೆ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಬಹುದು.

ಮತ್ತಷ್ಟು ಓದಿ: ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ಪವನ್ ಖೇರಾ ಅವರು ಈಗ ಅಸ್ಸಾಂನ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಾದ ಅಥವಾ ಅಲ್ಲಿ ನಿರೀಕ್ಷಣಾ ಜಾಮೀನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಸಕಾಲದಲ್ಲಿ ನ್ಯಾಯಾಲಯವು ಕಾರ್ಯನಿರ್ವಹಿಸದಿದ್ದರೆ, ರಿಜಿಸ್ಟ್ರಿಗೆ ವಿನಂತಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವರಿಗೆ ಸ್ವಾತಂತ್ರ್ಯವಿದೆ ಎಂದು ಪೀಠವು ಹೇಳಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಮಾನಹಾನಿ ಅಥವಾ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಈಗ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಪವನ್ ಖೇರಾ ಅವರಿಗೆ ಇದ್ದ ತಾತ್ಕಾಲಿಕ ರಿಲೀಫ್ ಅಂತ್ಯಗೊಂಡಿದೆ. ಈಗ ಅವರು ಅಸ್ಸಾಂನ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರಾಗಿ ತಮ್ಮ ವಾದ ಮಂಡಿಸಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:04 pm, Fri, 17 April 26

Source link

RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ? – Kannada News | Usain Bolt Joins RCB Fan Base: Fastest Man Backs Royal Challengers Bangalore IPL

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ.

Source link

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​ – Kannada News | Karnataka High Court: POCSO Accused Not Entitled to Statutory Bail if Probe Delays

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಹೈ ಕೋರ್ಟ್​
Image Credit source: istockphoto.com

ಬೆಂಗಳೂರು, ಏಪ್ರಿಲ್ 17: ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ರ ಪ್ರಕಾರ, ಪೋಕ್ಸೊ (POCSO) ಕಾಯ್ದೆಯಡಿಯಲ್ಲಿ ಆರೋಪಿಯು 60 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳದ ಕಾರಣ ಗೋವಿಂದ ಎಂಬವರು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ.

ಕೋರ್ಟ್​ ಹೇಳಿದ್ದೇನು?

ಪೋಕ್ಸೋ (POCSO) ಕಾಯಿದೆಯಂತಹ ವಿಶೇಷ ಕಾನೂನುಗಳ ಅಡಿಯಲ್ಲಿನ ಕಾಲಮಿತಿಗಳು ಸಂತ್ರಸ್ತ-ಕೇಂದ್ರಿತವಾಗಿವೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಹೊರತು, ಆರೋಪಿಗಳು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡಲು ಅಲ್ಲ ಎಂದು ನ್ಯಾಯಶಾಸ್ತ್ರವು ನಿರಂತರವಾಗಿ ಒತ್ತಿಹೇಳುತ್ತದೆ. ಶಾಸನಬದ್ಧ ಜಾಮೀನು ಪಡೆಯಲು ಅರ್ಜಿದಾರರು ಬಿಎನ್‌ಎಸ್‌ಎಸ್ (BNSS) ನ ಕಲಂ 193(2) ರ ಸಹಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಎಫ್‌ಎಸ್‌ಎಲ್ ಅಥವಾ ಸಿಡಿಆರ್‌ನ ವರದಿಗಳಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸುವುದರಿಂದ ಕಾನೂನಿನ ದೃಷ್ಟಿಯಲ್ಲಿ ಅಂತಿಮ ವರದಿಯಾಗಿ ಆರೋಪಿಗೆ ಶಾಸನಬದ್ಧ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು 60 ದಿನಗಳ ಕಾಲಮಿತಿ ಮತ್ತು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನಗಳ ಕಾಲಮಿತಿ ಇರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, ಗೋವಿಂದ ಎನ್ನುವವರ ಪ್ರಕರಣದಲ್ಲಿ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿರುವುದರಿಂದ ಮತ್ತು ಅದು ಅಪೂರ್ಣವಾಗಿದೆ ಎಂಬ ಅಂಶವು ‘ಡಿಫಾಲ್ಟ್ ಜಾಮೀನು’ ಪಡೆಯಲು ಕಾನೂನುಬದ್ಧವಾಗಿ ಯಾವುದೇ ಪರಿಣಾಮ ಬೀರದ ಕಾರಣ ಸದರಿ ಆಧಾರದ ಮೇಲೆ ಅರ್ಜಿದಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದೇ ಪ್ರಕರಣದ ಹಿನ್ನೆಲೆ ಈ ಆದೇಶ

ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ಸಂದರ್ಭಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ದೂರುದಾರರ ಮಗಳು ಸುಮಾರು ಒಂದು ವರ್ಷ ಆಸ್ಪತ್ರೆಯಲ್ಲಿ ಮನೆಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಆರೋಪಿಯು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಎಂದು ಆರೋಪಿಸಲಾಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಆಕೆ ಅಪ್ರಾಪ್ತೆ ಎಂದು ತಿಳಿದಿದ್ದೂ ಸಹ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ನಂತರ ಅಕ್ಟೋಬರ್ 2025 ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಆದ್ದರಿಂದ, ದೂರಿನ ನಂತರ ಆರೋಪಿಯನ್ನು ಬಂಧಿಸಿ 2025 ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:15 pm, Fri, 17 April 26

Source link

ಮತ್ತೊಂದು ಹಂತಕ್ಕೆ ತಲುಪಿದ ಕಾಂಗ್ರೆಸ್​​ನ ಬಣ ಬಡಿದಾಟ: ಸಿಎಂ ನಡೆಗೆ ಆಪ್ತರಿಂದಲೇ ಅಸಮಾಧಾನ – Kannada News | Karnataka Congress Infighting: Siddaramaiah’s Allies Express Dissatisfaction Over CM’s Inaction

ಬೆಂಗಳೂರು, ಏಪ್ರಿಲ್​​ 17: ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್​​ನಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಟಾರ್ಗೆಟ್​ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಹೀಗಿದ್ದರೂ ತಮ್ಮ ಆಪ್ತರ ರಕ್ಷಣೆಗೆ ಮುಂದಾಗದ ಮುಖ್ಯಮಂತ್ರಿಗಳ ನಡೆಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ತಮ್ಮ ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ. ಅಸಹಾಯಕರಂತೆ ಅವರು ವರ್ತಿಸುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರಿ ಹಿನ್ನಡೆ ಆಗುತ್ತದೆ. ಪಕ್ಷಕ್ಕೆ ಕೆಲಸ ಮಾಡಿದವರನ್ನ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗ್ತಿದೆ. ಟಾರ್ಗೆಟ್ ಆಗ್ತಿರೋದು ಕೇವಲ ವ್ಯಕ್ತಿಗಳಲ್ಲ, ಬೇರೆ ಬೇರೆ ಸಮುದಾಯಗಳು. ಹೀಗಾಗಿ ಸಮುದಾಯಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಿವೆ ಎಂದು ಸಿದ್ದರಾಮಯ್ಯ ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇಂತಹ ಅಸಹಾಯಕತೆ ನಿರೀಕ್ಷಿಸಿರಲಿಲ್ಲ’

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್​​. ರಾಜಣ್ಣ, ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ಧ ಕ್ರಮ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಹೀಗೆ ಆಗ್ತಿದ್ದು, ಸಿಎಂ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ ಅನ್ನೋದು ನಮಗೂ ಬೇಸರ ತಂದಿದೆ. ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ. ಆದರೆ ಅವರಿಂದ ಇಂತಹ ಅಸಹಾಯಕತೆ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿ ಎಂದು ಈ ಹಿಂದೆ ಶಾಮನೂರು ಹೇಳಿದ್ದರು. ಆಗ ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಇನ್ನೊಂದು ಪಕ್ಷಕ್ಕೆ ಮತ‌ಹಾಕಿ ಅನ್ನೋದು ಅಶಿಸ್ತು ಅಲ್ಲವೇ? ರಾಜ್ಯ ನಾಯಕರ ಜತೆ ಚರ್ಚಿಸಿಯೇ ಹೈಕಮಾಂಡ್ ತೀರ್ಮಾನಿಸುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್; ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

‘ಪಕ್ಷಕ್ಕೆ ವಿರೋಧವಾಗಿ ಯಾರೇ ಕೆಲಸ ಮಾಡಿದ್ರೂ ಟಾರ್ಗೆಟ್’

ಹೈಕಮಾಂಡ್​ನಿಂದ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಹೆಚ್​.ಸಿ.ಬಾಲಕೃಷ್ಣ, ಏನಾಗಿದೆ ಅಂತಾ ನಾವು ಕೂಡ ಇನ್ನೂ ಗೊಂದಲದಲ್ಲಿ ಇದ್ದೇವೆ. ಪಕ್ಷಕ್ಕೆ ವಿರೋಧವಾಗಿ ಯಾರೇ ಕೆಲಸ ಮಾಡಿದ್ರೂ ಟಾರ್ಗೆಟ್ ಆಗ್ತಾರೆ. ಸಿಎಂ, ಡಿಸಿಎಂ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ಅವರನ್ನೂ ಟಾರ್ಗೆಟ್ ಮಾಡ್ತಾರೆ. ಪಕ್ಷಕ್ಕಿಂತ ದೊಡ್ಡ ವ್ಯಕ್ತಿ ಇಲ್ಲಿ ಯಾರೂ ಇಲ್ಲ, ಪಕ್ಷವೇ ದೊಡ್ಡದು. ಮುಸ್ಲಿಂ ಧರ್ಮ ಗುರುಗಳು ಅವರವರ ಅಭಿಪ್ರಾಯ ಹೇಳಿದ್ದಾರೆ. ನಾವು ಒಂದು ಪಕ್ಷದಲ್ಲಿ ಇದ್ದಾಗ ಆ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಪಕ್ಷದ ಚೌಕಟ್ಟು ಮೀರಿ ನಡೆದಾಗ ಯಾವುದೇ ಜಾತಿ ಮುಂದೆ ಬರಲ್ಲ. ಇದರಲ್ಲಿ ಜಾತಿ ಪ್ರಶ್ನೆ ಎತ್ತೋದು ಸೂಕ್ತ ಅಲ್ಲ ಅಂತಾ ನನ್ನ ಅಭಿಪ್ರಾಯ ಎಂದಿದ್ದಾರೆ.

ಸಿಎಂ-ಡಿಸಿಎಂ ಭೇಟಿಯಾದ ನಾಯಕರು

ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಣ್ಣ, ಎಂ.ಬಿ.ಪಾಟೀಲ್ ಮತ್ತು ಸಲೀಂ ಅಹ್ಮದ್​​ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ನ ಮುಸ್ಲಿಂ ನಾಯಕರ ವಿರುದ್ಧ ಕ್ರಮ ಆಗುತ್ತಿರುವ ವಿಚಾರ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:12 pm, Fri, 17 April 26

Source link

Exit mobile version