ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂದ ಮೇಲೆ ಅಲ್ಲಿ ದಾಖಲೆಗಳಿಗೆ ಕೊರತೆಯಿಲ್ಲ. ದಾಖಲೆಗಳ ನಡುವೆ ಸಂಜು ಸ್ಯಾಮ್ಸನ್ (Sanju Samson) ಅಪರೂಪದ ರೆಕಾರ್ಡ್ವೊಂದನ್ನು ನಿರ್ಮಿಸಿದ್ದಾರೆ. ಅದು ಸಹ ನಾಲ್ಕು ವಿಭಿನ್ನ ಸೀಸನ್ಗಳಲ್ಲಿ 'ಸೀಸನ್ನ ಮೊದಲ ಶತಕ' ಸಿಡಿಸುವ ಮೂಲಕ ಎಂಬುದು ವಿಶೇಷ.
ಸಾಮಾನ್ಯವಾಗಿ ಒಂದು ಸೀಸನ್ನಲ್ಲಿ ಶತಕ ಸಿಡಿಸುವುದೇ ದೊಡ್ಡ ಸಾಧನೆ. ಆದರೆ ಸಂಜು ಸ್ಯಾಮ್ಸನ್ ಅವರು ಲೀಗ್ ಆರಂಭದ ಹಂತದಲ್ಲೇ ಅಬ್ಬರಿಸಿ, ಆ ಸೀಸನ್ನ ಚೊಚ್ಚಲ ಶತಕವನ್ನು ತಮ್ಮದಾಗಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈ ಹವ್ಯಾಸದೊಂದಿಗೆ ಇದೀಗ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅಂದರೆ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಸೀಸನ್ಗಳಲ್ಲಿ ಸಂಜು ಸ್ಯಾಮ್ಸನ್ ಮೊದಲ ಶತಕ ಬಾರಿಸಿದ್ದಾರೆ. 2017 ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಕಣಕ್ಕಿಳಿದಿದ್ದ ಸಂಜು ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ವಿರುದ್ಧ 102 ರನ್ ಗಳಿಸುವ ಮೂಲಕ ಆ ಸೀಸನ್ನ ಮೊದಲ ಶತಕ ದಾಖಲಿಸಿದ್ದರು. 2019 ಹಾಗೂ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ ಸೀಸನ್ನ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೀಗ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಚೊಚ್ಚಲ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ನಾಲ್ಕು ಸೀಸನ್ಗಳಲ್ಲಿ ಮೊದಲ ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬ್ರೆಂಡನ್ ಮೆಕಲಮ್ (2008 ಮತ್ತು 2015) ಎರಡು ಸೀಸನ್ಗಳಲ್ಲಿ ಮೊದಲ ಸೆಂಚುರಿ ಸಿಡಿಸಿ ಮಿಂಚಿದ್ದರು. ಆದರೆ ಸಂಜು ಸ್ಯಾಮ್ಸನ್ ನಾಲ್ಕು ಸೀಸನ್ಗಳಲ್ಲಿ ಮೊದಲ ಶತಕ ಬಾರಿಸುವ ಮೂಲಕ ಐಪಿಎಲ್ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 12: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ನೌಕರು ಮಾತ್ರ ಅನ್ನ ತಿಂದ ಮನೆಗೆ ಕನ್ನ ಹಾಕೋ ಕೆಲಸ ಮಾಡುತ್ತಿದ್ದಾರೆ. ಕನ್ನಡ ಬಾರದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡಿ ದುಡ್ಡು ಮಾಡ್ತಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ಯುಪಿಐ ಕ್ಯೂಆರ್ ಕೋಡ್ಗಳನ್ನು ಅಳವಡಿಸಿದೆ. ಇದನ್ನು ಸ್ಕ್ಯಾನ್ ಮಾಡಿ ಟಿಕೆಟ್ ಹಣ ಪಾವತಿಸುವಂತೆ ಪ್ರಯಾಣಿಕರಿಗೆ ಸೂಚಿವ ಬದಲು, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಮಾಹಿತಿ ನೀಡಿ ದುಡ್ಡು ಪೀಕುವ ಕೆಲಸಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆ ನಿಗಮಕ್ಕೆ ಸೇರಬೇಕಿದ್ದ ಲಕ್ಷ ಲಕ್ಷ ಹಣ ತಮ್ಮ ಜೇಬಿಗೆ ಇಳಿಸಿಕೊಂಡಿದ್ದ ನಾಲ್ಕು ಜನ ಕಿಲಾಡಿ ಕಂಡಕ್ಟರ್ಗಳನ್ನೀಗ ಮನೆಗೆ ಕಳುಹಿಸಲಾಗಿದೆ.
ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ ನೀಡ್ತಿದ್ದಿದ್ದು ಹೇಗೆ?
ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಅವರಿಗೆ ಟಿಕೆಟ್ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.
ಇನ್ನು ಈ ಕಿಲಾಡಿ ಕಂಡಕ್ಟರ್ಗಳು ಡಿಪೋದಿಂದ ಬಸ್ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್ ಕೋಡ್ಗಳನ್ನು ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕೇಳಿದಾಗ, ತಮ್ಮ ಮೊಬೈಲ್ನಲ್ಲಿರುವ ಸ್ವಂತ ಅಕೌಂಟ್ನ ಕ್ಯೂಆರ್ ಕೋಡ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ಗಳು ತಗ್ಲಾಕೊಂಡಿದ್ದು, ಪ್ರತಿಯೊಬ್ಬರ ಅಕೌಂಟ್ ನಲ್ಲಿ 10ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರೋದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮನೆಗೆ ಹೋಗೋದು ಫಿಕ್ಸ್ ಎನ್ನಲಾಗಿದೆ. ಇಂತಹುದೇ ಘಟನೆ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವೃತ್ತಿಜೀವನದ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ (Jana Nayagan) ಬಿಡುಗಡೆಗೂ ಮುನ್ನವೇ ಪೈರಸಿ ಕಾಟಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿಯೊಂದಿಗೆ ಚಿತ್ರತಂಡ ಸುದೀರ್ಘ ಹೋರಾಟ ನಡೆಸುತ್ತಿರುವ ನಡುವೆಯೇ, ಚಿತ್ರದ ಸಂಪೂರ್ಣ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್ ನೀಡಿದೆ. ಈ ದುರದೃಷ್ಟಕರ ಘಟನೆಯ ಬೆನ್ನಲ್ಲೇ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಜನ ನಾಯಗನ್’ ಸಿನಿಮಾದ ಪೈರಸಿ (Piracy) ಕಾಪಿ ಡೌನ್‌ಲೋಡ್ ಮಾಡುವವರಿಗೂ ಎಚ್ಚರಿಕೆ ನೀಡಲಾಗಿದೆ.
ಪೈರಸಿ ಹಿಂದೆ ಇರುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ತಿಳಿಸಿದೆ. ಲೀಕ್ ಆಗಿರುವ ದೃಶ್ಯಗಳನ್ನು ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು ಅಥವಾ ಸಂಗ್ರಹಿಸಿಡುವುದು ಅಪರಾಧ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಹಂಚಿಕೊಳ್ಳುವುದು ಅಥವಾ ಫಾರ್ವರ್ಡ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಈ ಪೈರಸಿ ಜಾಲವನ್ನು ಭೇದಿಸಲು ಆ್ಯಂಟಿ ಪೈರಸಿ ಕಂಪನಿ ‘WarX’ ಅಖಾಡಕ್ಕೆ ಇಳಿದಿದೆ. ಮೂಲತಃ ಚಿತ್ರದ ಪ್ರಿಂಟ್ ಅನ್ನು ಅನಧಿಕೃತವಾಗಿ ಯಾರು ಲೀಕ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಈ ಸಂಸ್ಥೆಯು ಟೊರೆಂಟ್ ಡೌನ್‌ಲೋಡ್ ಮಾಡುವವರ ಐಪಿ (IP) ಅಡ್ರೆಸ್‌ಗಳನ್ನು ಕೂಡ ಸಂಗ್ರಹಿಸುತ್ತಿದೆ.
ಟೊರೆಂಟ್ ಮೂಲಕ ಸಿನಿಮಾ ಡೌನ್‌ಲೋಡ್ ಮಾಡುವವರ ಐಪಿ ವಿಳಾಸಗಳು ಪತ್ತೆಯಾಗುವುದರಿಂದ, ಡೌನ್‌ಲೋಡ್ ಮಾಡಿದ ಸಾಮಾನ್ಯ ಜನರಿಗೂ ನೋಟಿಸ್ ಬರುವ ಸಾಧ್ಯತೆ ಇದೆ. ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಇಂತಹ ಕ್ರಮಗಳು ಸಾಮಾನ್ಯವಾಗಿದ್ದರೂ, ಭಾರತದಲ್ಲಿ ಇದು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಜಾರಿಯಾಗುವ ಸೂಚನೆ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಕಾಪಿರೈಟ್ ಉಲ್ಲಂಘಿಸಿ ಕಂಟೆಂಟ್ ಡೌನ್‌ಲೋಡ್ ಮಾಡುವವರ ಮೇಲೆ ಐಟಿ ಕಾಯ್ದೆ 2000 ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು WarX ಪ್ರತಿಪಾದಿಸುತ್ತಿದೆ. ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡುವಾಗ ಪ್ರತಿಯೊಬ್ಬರ ಮೇಲೆ ಕ್ರಮ ಕೈಗೊಳ್ಳುವುದು ಪ್ರಾಯೋಗಿಕವಾಗಿ ಕಷ್ಟವಾದರೂ, ಡೌನ್‌ಲೋಡ್ ಮಾಡಿದವರನ್ನು ಪತ್ತೆಹಚ್ಚುವುದರಿಂದ ಚಿತ್ರರಂಗದಲ್ಲಿ ಒಂದು ಬಲಿಷ್ಠ ಕಾನೂನು ಮಾದರಿಯನ್ನು ರೂಪಿಸಲಿದೆ.
ಸಿನಿಮಾ ಬಿಡುಗಡೆಯ ವಿಳಂಬದ ನಡುವೆಯೇ ಈ ಪೈರಸಿ ಆಗಿರುವುದು ‘ಜನ ನಾಯಗನ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಅಭಿಮಾನಿಗಳು ಪೈರಸಿಯನ್ನು ಪ್ರೋತ್ಸಾಹಿಸದೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಬೇಕೆಂದು ಚಿತ್ರತಂಡ ಮನವಿ ಮಾಡಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 12, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ದಶಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮರಣ ಹೊಂದಿದವರ ಹೆಸರಲ್ಲಿ ಅರ್ಚನೆ ಮಾಡಿಸಬಹುದಾ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅನೇಕರಿಗೆ ಮರಣ ಹೊಂದಿದವರ ಹೆಸರಿನಲ್ಲಿ ದೇವಾಲಯಗಳಲ್ಲಿ ಅರ್ಚನೆ ಮಾಡಿಸಬಹುದೇ ಎಂಬ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ, ಬದುಕಿರುವವರ ಹೆಸರು, ಗೋತ್ರ, ನಕ್ಷತ್ರ ಹೇಳಿ ಅರ್ಚನೆ ಮಾಡಿಸುವ ಪದ್ಧತಿ ಇದೆ, ಅವರಿಗೆ ಆಯುರಾರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಲಾಗುತ್ತದೆ.
ಆದರೆ, ಮರಣ ಹೊಂದಿದವರ ಹೆಸರಿನಲ್ಲಿ ಅರ್ಚನೆ ಮಾಡಿಸುವುದು ಅಷ್ಟು ಶುಭವಲ್ಲ ಎಂದು ಹಲವು ಧಾರ್ಮಿಕ ಕೇಂದ್ರಗಳು ಹೇಳುತ್ತವೆ. ಕೆಲವು ದೇವಾಲಯಗಳಲ್ಲಿ ಇದನ್ನು ಒಪ್ಪಿಕೊಂಡರೂ, ಎಲ್ಲೆಡೆ ಇದು ವಾಡಿಕೆಯಲ್ಲ. ಅವರ ಆತ್ಮ ಶಾಂತಿಗಾಗಿ ಬೇರೆ ಮಾರ್ಗಗಳಿವೆ. ಹೂವಿನ ಅಲಂಕಾರ, ಹಣ್ಣುಗಳ ಅಲಂಕಾರ, ಅಭಿಷೇಕಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅನ್ನದಾನ ಮಾಡುವುದು ಹೆಚ್ಚು ಸೂಕ್ತ ಎಂದು ಗುರೂಜಿ ಹೇಳಿದ್ದಾರೆ.
ನೆಲಮಂಗಲ, ಏಪ್ರಿಲ್ 12: ರಾಜ್ಯದ ಹಲವೆಡೆ ಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಉಡುಪಿ ಗ್ರಾಂಡ್ ಹೋಟೆಲ್ನ ಬೆಂಗಳೂರುಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೊಂಡಿಕೊಪ್ಪದಲ್ಲಿರುವ ಶಾಖೆಯಲ್ಲಿ ನೈರ್ಮಲ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಧನಂಜಯ ಎಂಬ ಗ್ರಾಹಕರು ತಮ್ಮ ಊಟದ ನಂತರ ಆರ್ಡರ್ ಮಾಡಿದ ಐಸ್ ಕ್ರೀಮ್‌ನಲ್ಲಿ ರಬ್ಬರ್ ಬ್ಯಾಂಡ್ ಪತ್ತೆಯಾಗಿದೆ. ಐಸ್ ಕ್ರೀಮ್‌ನ ಮಧ್ಯಭಾಗದಲ್ಲಿ ರಬ್ಬರ್ ಬ್ಯಾಂಡ್ ಇದ್ದು, ಇದನ್ನು ಮಕ್ಕಳು ಸೇವಿಸಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಈ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ಮಾಲೀಕರು ಉಡಾಫೆ ಉತ್ತರ ನೀಡಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಗ್ರಾಹಕರು ಹೋಟೆಲ್ ಲೈಸೆನ್ಸ್ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ನಂತರ, ನೆಲಮಂಗಲ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಹೋಟೆಲ್‌ಗೆ 20,000 ದಂಡ ವಿಧಿಸಿದ್ದಾರೆ. ಹೋಟೆಲ್ ಮಾಲೀಕರು ನಂತರ ಕ್ಷಮೆ ಯಾಚಿಸಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಮಸ್ಯೆಗಳಿಗೆ ಸೊಪ್ಪು ಹಾಕಿದಷ್ಟೂ ದೊಡ್ಡದಾಗುತ್ತದೆ. ನಿಮ್ಮದಲ್ಲದ ಕೆಲಸವನ್ನು ನೀವೇ ಮಾಡಬೇಕಾಗಬಹುದು. ಮಕ್ಕಳ ಚಲನವಲನದ ಕಡೆಗೆ ಗಮನವಿರಲಿ. ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಮನೆಯನ್ನು ಸ್ಥಳಾಂತರ ಮಾಡುವಿರಿ. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ವಸ್ತು ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ.
ವೃಷಭ ರಾಶಿ:
ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ವ್ಯಾಪರದ ವಿಚಾರದಲ್ಲಿ ಸಹಭಾಗಿಯ ಜೊತೆ ಮಾತನಾಡಿ ಮುಂದಡಿಯಿಡಿ. ನಿಮಗೆ ಸಿಕ್ಕ ಗೌರವವನ್ನು ಬೇರೆಯವರಿಗೆ ಬಿಟ್ಟುಕೊಡುವಿರಿ. ಅಪರಿಚಿತ ಕ್ಷೇತ್ರಕ್ಕೆ ಮುಂದಡಿಯಿಡುವಾಗ ಜಾಗರೂಕತೆ ಇರಲಿ. ನಿಮ್ಮ ವಸ್ತುವಿಗಾದ ತೊಂದರೆಗೆ ಪರಿಹಾರವನ್ನು ಕೇಳುವಿರಿ. ವಿದೇಶದಲ್ಲಿ ವಾಸಿಸುವವರಿಂದ ಶುಭವಾರ್ತೆ ಸಿಗುವುದು. ನಿಯಮಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು.
ಮಿಥುನ ರಾಶಿ:
ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಹಿರಿಯರ, ತಜ್ಞರ ಮಾತುಗಳು ನಿಮಗೆ ನಿಮ್ಮ ಬಹುದಿನದಿಂದ ಬೆಳವಣಿಗೆ ಕಾಣದ ಯೋಜನೆಯೊಂದು ಆರಂಭವಾಗುತ್ತದೆ. ಉದ್ಯೋಗದ ವಿಚಾರದಲ್ಲಿ ಪ್ರಭಾವಿಗಳಿಂ ಒತ್ತಡ ಬರಲಿದೆ. ವೃತ್ತಿಯಲ್ಲಿ ನಿಮ್ಮನ್ನು ಸೋಲಿಸಬಹುದು. ಮಕ್ಕಳ ಜೊತೆ ಖುಷಿಯಿಂದ ಕಳೆಯಿರಿ. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ. ಭೂವ್ಯವಹಾರದ ಪ್ರಸ್ತಾಪವು ಕುಟುಂಬದಲ್ಲಿ ನಡೆಯಬಹುದು. ಆರೋಪಮುಕ್ತದಿಂದ ಮನಸ್ಸು ಹಗುರ.
ಕರ್ಕಾಟಕ ರಾಶಿ:
ಹಣಕಾಸಿನ ವಿಚಾರದಲ್ಲಿ ವಂಚನೆ ಸಾಧ್ಯವಾಗಬಹುದು. ಕರೆ ಸಂದೇಶಗಳಿಗೆ ಪ್ರತ್ಯುತ್ತರ ಬೇಡ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ಬಂಧುಗಳ ಜೊತೆ ನಿಮ್ಮ ಹೊಂದಾಣಿಕೆ ಕಷತಡವಾಗಬಹುದು. ಅದನ್ನೇ ಗಟ್ಟಿಗೊಳಿಸಿಕೊಂಡು ಮುನ್ನಡೆಯಿರಿ. ಅನೇಕ ಉತ್ತಮಮಾರ್ಗಗಳು ತೆರೆದುಕೊಳ್ಳಬಹುದು. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ಅತಿಯಾದ ಆತ್ಮವಿಶ್ವಾಸವೂ ನಿಮಗೇ ತೊಂದರೆಯನ್ನು ಉಂಟುಮಾಡೀತು. ಎಲ್ಲರಿಂದ ಹೇಳಿಸಿಕೊಳ್ಳುಬಿರಿ.
ಸಿಂಹ ರಾಶಿ:
ಇಂದು ಮೋಸಮಾಡುವ ಮನಸ್ಸುಳ್ಳವರಾಗಿರುತ್ತೀರಿ. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಮನೆಯಿಂದ ನಿಮಗೆ ಶುಭಸಂದೇಶದ ಆಗಮನವಾಗಲಿದೆ. ಉದ್ಯಮಕ್ಕೆ ವಿದೇಶದ ಸಹಕಾರ ಸಿಕ್ಕಿದ್ದು, ಇನ್ನಷ್ಟು ಉತ್ಸಾಹ ಬರವುದು. ಸಹೋದ್ಯೋಗಿಗಳ ಬೆಂಬಲವು ಉದ್ಯೋಗದಲ್ಲಿ ಸಿಗಲಿದೆ. ಪರಿಚಯದವರ ಜೊತೆ ವೃತ್ತಿಯನ್ನು ಮಾಡಬೇಕಾದೀತು. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಅಧಿಕವಾಗುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು.
ಕನ್ಯಾ ರಾಶಿ :
ಯಾರ್ಯಾರದೋ ಒತ್ತಾಯಕ್ಕೂ ಮಣಿಯಬೇಡಿ. ಪ್ರಭಾವಿಗಳ ವ್ಯಕ್ತಿತ್ವವು ನಿಮಗೆ ಅನುಸರೀಣಯವಾಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಅರಗಿಸಿಕೊಳ್ಳಲಾರಿರಿ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಕುಟುಂಬದವರ ಜೊತೆ ಸಂತೋಷದಿಂದ ದಿನವನ್ನು ಕಳೆಯುವಿರಿ. ನಿಮ್ಮ ಪ್ರಮಾಣಿಕತೆಯೇ ನಿಮಗೆ ಮುಳ್ಳಾಗಬಹುದು. ಕೌಟುಂಬಿಕ ವಿಷಯಗಳಲ್ಲಿ, ನೀವು ಬಾಹ್ಯ ವ್ಯಕ್ತಿಯನ್ನು ಸಂಪರ್ಕಿಸುವುದು ಬೇಡ.
ತುಲಾ ರಾಶಿ :
ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ನ್ಯಾಯಾಲಯದಿಂದ ಸಿಕ್ಕ ತೀರ್ಪು ನಿಮಗೆ ಸಂತೋಷಕೊಡುವುದು. ಭವಿಷ್ಯದ ಆರ್ಥಿಕತೆಯ ಚಿಂತನೆಯನ್ನು ನಡಸುವಿರಿ. ಸಂಗಾತಿಯ ಜೊತೆ ಶೀತಲಸಮರವು ನಡೆಯಬಹುದು. ಅನಿರೀಕ್ಷತ ಸಂಕಟಕ್ಕೆ ಹಣದ ಕೊರತೆ ಕಾಣಿಸುವುದು. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು.
ವೃಶ್ಚಿಕ ರಾಶಿ:
ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ವಿದೇಶ ಪ್ರವಾಸ ದಾಖಲೆಗಳ ಕೊರೆತೆಯಿಂದ ಸ್ಥಗತಿವಾಗಲಿದೆ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಸಂಗತಿಯ ಜೊತೆ ಈ ದಿನವನ್ನು ಆನಂದದಿಂದ ಕಳೆಯಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ. ಸಾಮಾಜಿಕ ಸೇವೆಗೆ ಪ್ರಶಂಸೆ.
ಧನು ರಾಶಿ:
ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸವನ್ನು ದುರಪಯೋಗ ಮಾಡಿಕೊಳ್ಳುವಿರಿ. ಅನ್ಯಚಿಂತೆಯಿಂದ ಕೆಲಸಗಳು ಹಾಗೆಯೇ ಉಳಿದಿರಬಹುದು. ಇಂದು ನೀವು ಕೆಲವು ವಿಷಯಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ಭರವಸೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಪ್ರಯತ್ನಿಸಿ. ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಕುಟುಂಬ ಸಂಬಂಧಗಳಿಗೆ ಪ್ರಾಮುಖ್ಯವನ್ನು ನೀಡುತ್ತದೆ.
ಮಕರ ರಾಶಿ:
ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ ಅಸಮಾಧಾನವಾಗುವ ಸಾಧ್ಯತೆ ಇದೆ. ಯಾವುದಾರೂ ಸ್ಪರ್ಧೆಯಲ್ಲಿ ಭಾಗವಹಿಸುವುದಿದ್ದರೆ ಇಂದು ಜಯ ನಿಮ್ಮದೇ. ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಂಡು ಬೇಸರವಾಗಿದ್ದರೂ ಅದನ್ನು ಮಾಡಿಕೊಳ್ಳದೇ ವಿಧಿಯಿಲ್ಲ. ನಿಮ್ಮ ಅಗತ್ಯ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಬಹುದು. ನೆರಮನೆಯವರ ಜೊತೆ ಭೂಮಿಯ ವಿಚಾರಕ್ಕೆ ವಾಗ್ವಾದವು ಆಗಬಹುದು. ಗೃಹನಿರ್ಮಾಣದ ದಾಖಲೆ ಪಡೆಯಲು ನೀವು ಓಡಾಟ ಮಾಡಬೇಕಾಗುವುದು.
ಕುಂಭ ರಾಶಿ:
ಉತ್ತಮವಾದ ಅಭ್ಯಾಸವನ್ನು ಆರಂಭಿಸಲು ಸಕಾಲ. ಉತ್ಸಾಹಕ್ಕೆ ಭಂಗವಾಗುವ ಯಾವ ವಿಚಾರಗಳೂ ಇಂದ ಆಗದು. ನಿಶ್ಚಿಂತೆಯಿಂದ ಇರಬಹುದು. ಗೆಳಯರ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡು ಖುಷಿಪಡುವಿರಿ. ಅವಸರದಲ್ಲಿ ಯಾವುದೇ ಕಾರ್ಯವನ್ನು ಮಾಡುವುದು ಬೇಡ. ಮನೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ಕಾರ್ಯನಿರ್ವಹಣೆಗೆ ಪ್ರಶಂಸೆಯು ಸಿಗಲಿದೆ. ಗ್ರಾಹಕರಿಂದ ಮೋಸ ಹೋಗಬೇಕಾದೀತು.
ಮೀನ ರಾಶಿ:
ಮಾತುಗಳನ್ನು ಆಡುವಾಗ ಯಾರ ಜೊತೆ ಮಾತನಾಡುತ್ತಿದ್ದೀರಿ ಎಂಬ ಗಮನವಿರಲಿ. ಸ್ನೇಹಿತರ ಬೆಂಬಲವು ನಿಮಗೆ ಅಗತ್ಯವಾಗಿ ಸಿಗಲಿದೆ. ಕೆಲವು ಅಪರಿಚಿತರ ಜೊತೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಲಿ. ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಪ್ರಯೋಜನವುದೆ. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 10:53, ಯಮಗಂಡ ಕಾಲ 15:36 – 12:25, ಗುಳಿಕ ಕಾಲ 15:31 – 17:04
ಧರ್ಮ ಕೀರ್ತಿ (Dharma Keerthy) ನಟನೆಯ ‘ಬೆಂಗಳೂರು ಇನ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಾರ್ಥ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಧರ್ಮ ಕೀರ್ತಿ ಮಾತನಾಡಿದರು. ಧರ್ಮ ಕೀರ್ತಿ ಹಾಗೂ ಅನುಷಾ ರೈ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದು. ಅನುಷಾ ರೈ ಅವರೊಟ್ಟಿಗಿನ ತಮ್ಮ ಕೆಮಿಸ್ಟ್ರಿ ಬಗ್ಗೆ ಹಾಗೂ ಅನುಷಾ ರೈ ಅವರ ನಟನೆ, ವ್ಯಕ್ತಿತ್ವದ ಬಗ್ಗೆ ಧರ್ಮ ಕೀರ್ತಿ ಮಾತನಾಡಿದರು. ವಿಡಿಯೋ ನೋಡಿ…
ದಾವಣಗೆರೆ, ಏಪ್ರಿಲ್ 11: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕೆಲವರು ಹುನ್ನಾರ ನಡೆಸಿದ್ದರು. ಮತ್ತೆ ಕೆಲ ನಾಯಕರು ಫಂಡಿಂಗ್ ಸಹ ಮಾಡಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಂಡಿಂಗ್ ಮಾಡಿದವರ ಬಗ್ಗೆ ಪಕ್ಷದ ಹೈಕಮಾಂಡ ಬಳಿ ಮಾಹಿತಿ ಇದೆ. ಸೂಕ್ತ ಕ್ರಮಕೈಗೊಳ್ಳುತ್ತಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮೂರು ಸಲ ಎಂಎಲ್ಸಿ ಆಗಿದ್ದಾರೆ. ಪಕ್ಷದ ಕೆಲಸ ಬಂದು ಮಾಡಿಬೇಕು. ಅದನ್ನ ಬಿಟ್ಟು ಕರೆದಿಲ್ಲ ಎಂದರೇ ಹೇಗೆ. ನನ್ನ ಸಹೋದರ ಸಾಧಿಕ್ ಪೈಲ್ವಾನ್ ಸ್ಪರ್ಧೆ ಮಾಡಲು ಮುಂದಾಗ ಸಿಎಂ ಸಿದ್ದರಾಮಯ್ಯ ನಮಗೆ ಫೋನ್ ಮಾಡಿದ್ದರು. ಇದಾದ ಬಳಿಕ ಎಲ್ಲವೂ ಸರಿಯಾಗಿದೆ. ಒಂದಂತು ಸತ್ಯ ಈ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಗೆಲ್ಲುತ್ತಾರೆ ಎಂದರು.
ನವದೆಹಲಿ, ಏಪ್ರಿಲ್ 11: ಬಿಹಾರದ ಕೊರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆರಾಬರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಂದು 10 ಜನರು ಸಾವನ್ನಪ್ಪಿದ್ದಾರೆ. 25 ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ (Accident) ಬಸ್ ಮತ್ತು ಪಿಕಪ್ ವಾಹನವು ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ.
ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸುಮಾರು 20 ಗಂಭೀರ ಗಾಯಗೊಂಡ ರೋಗಿಗಳನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಪೂರ್ಣಿಯಾ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹತ್ತಿರದಲ್ಲೇ ಚಲಿಸುತ್ತಿದ್ದ 2 ಬೈಕ್ಗಳು ಸಹ ಅಪಘಾತದಲ್ಲಿ ಸಿಲುಕಿಕೊಂಡಿದ್ದು, ನಾಲ್ವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
— Journalist Ravendra kumar (@Chhotukingoffi1) April 11, 2026
ಅಧಿಕಾರಿಗಳ ಪ್ರಕಾರ, ಪಿಕಪ್ ಟ್ರಕ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪೂರ್ಣಿಯಾ ಜಿಲ್ಲೆಯ ಧಮ್ದಾಹಾ ನಿವಾಸಿಗಳಾಗಿದ್ದು, ದುರಂತ ಸಂಭವಿಸಿದಾಗ ಜಾತ್ರೆಯಿಂದ ಮನೆಗೆ ಮರಳುತ್ತಿದ್ದರು. ಈ ಘಟನೆಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸದಾನಂದ ಹಸ್ದಾ ಕೂಡ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ