Republic Day 2026: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ – Kannada News | Republic Day 2026 Live Streaming in Tv9 Kannada, Grand Military Parade, Battlefield Display and Vande Mataram Theme

ನವದೆಹಲಿ, ಜನವರಿ 23: ಈ ಬಾರಿ ಗಣರಾಜ್ಯೋತ್ಸವ(Republic Day)ವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕೇವಲ ಮಿಲಿಟರಿ ಮೆರವಣಿಗೆಯಲ್ಲ ಬದಲಾಗಿ ಯುದ್ಧಭೂಮಿಯೇ ಕಣ್ಣೆದುರು ಬರಲಿದೆ. ಸ್ವಾತಂತ್ರ್ಯ ಹೋರಾಟದಿಂದ ಸ್ವಾವಲಂಬಿ ಭಾರತದವರೆಗೆ, ಭಾರತ ತೆಗೆದುಕೊಂಡ ಹೆಜ್ಜೆಗಳು ಕಣ್ಮುಂದೆ ಬರಲಿದೆ. ಕಲಾವಿದರು ತಮ್ಮ ಪೂರ್ವಾಭ್ಯಾಸಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
ಮೆರವಣಿಗೆಯ ಮುಖ್ಯ ವಿಷಯ ವಂದೇ ಮಾತರಂ ಆಗಿರುತ್ತದೆ. ವಿವಿಧ ರಾಜ್ಯಗಳ ಮೆರವಣಿಗೆಗಳು ದೇಶವು ಸಾಧಿಸಿದ ಆರ್ಥಿಕ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸುತ್ತವೆ. ಕಲಾವಿದರು ಅಭಿವೃದ್ಧಿ ಹೊಂದಿದ ಭಾರತದ ರೂಪಗಳನ್ನು ಅನಾವರಣಗೊಳಿಸಲಿದ್ದಾರೆ. ಕರ್ತವ್ಯಪಥದಲ್ಲಿ ಪೂರ್ಣ ಡ್ರೆಸ್ ರಿಹರ್ಸಲ್ ನಡೆಯುತ್ತಿದೆ.

77ನೇ ಗಣರಾಜ್ಯೋತ್ಸವ ಆಚರಣೆಗಾಗಿ ಕರ್ತವ್ಯ ಪಥವನ್ನು ಅಲಂಕರಿಸಲಾಗುತ್ತಿದೆ. ಈ ಬಾರಿ ಗಣರಾಜ್ಯೋತ್ಸವದ ಮೆರವಣಿಗೆ ಕೇವಲ ಸಾಂಪ್ರದಾಯಿಕ ಮೆರವಣಿಗೆಯಾಗಿರುವುದಿಲ್ಲ, ಬದಲಾಗಿ ನಿಜವಾದ ಯುದ್ಧಭೂಮಿಯನ್ನು ನೆನಪಿಸುವ ರೀತಿಯಲ್ಲಿ ನಡೆಯಲಿದೆ. ಯುದ್ಧಭೂಮಿಯ ತಂತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧ ಭಾರತದ ‘ಆಪರೇಷನ್ ಸಿಂಧೂರ್’ ನಂತರ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಚರಣೆ ಇದಾಗಿರುವುದರಿಂದ, ಈ ಬಾರಿ ಭಾರತೀಯ ಸೇನೆಯು ನಿಜವಾದ ಯುದ್ಧಭೂಮಿ ದೃಶ್ಯವನ್ನು ಪ್ರತಿಬಿಂಬಿಸಲು ಕರ್ತವ್ಯ ಪಥದಲ್ಲಿ ಗಿ ಅಭ್ಯಾಸ ಮಾಡುತ್ತಿದೆ.

ಈ ಐತಿಹಾಸಿಕ ಕಾರ್ಯಕ್ರಮವು ಭಾರತದ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಪ್ರಗತಿ ಮತ್ತು ದೇಶಭಕ್ತಿಯ ಮನೋಭಾವವನ್ನು ಪ್ರದರ್ಶಿಸುತ್ತದೆ. ಯಾವುದೇ ಕಾರಣಕ್ಕೂ ನೀವು ಪರೇಡ್ ಅನ್ನು ವೈಯಕ್ತಿಕವಾಗಿ ವೀಕ್ಷಿಸಲು ಸಾಧ್ಯವಾಗದಿದ್ದರೆ, ಹತಾಶೆಗೊಳ್ಳಬೇಡಿ.
ಜನವರಿ 26, 2026 ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುವ ಪರೇಡ್‌ನ ಪ್ರತಿಯೊಂದು ಭಾಗವನ್ನು ನೀವು ಟಿವಿ9 ಕನ್ನಡ ಯೂಟ್ಯೂಬ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅದ್ಭುತ ಪಥಸಂಚಲನ ನಡೆಯಲಿದ್ದು, ಶಿಸ್ತು ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರದರ್ಶಿಸುತ್ತದೆ.

ಮತ್ತಷ್ಟು ಓದಿ:
ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ, ಯಾವುದು ಗೊತ್ತಾ?

ಮೆರವಣಿಗೆಯ ಸಮಯದಲ್ಲಿ, ನೀವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರದರ್ಶನಗಳನ್ನು ಸಹ ನೋಡುತ್ತೀರಿ. ಈ ಪ್ರದರ್ಶನಗಳು ಭಾರತದ ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಕಲೆಗಳು ಮತ್ತು ಅಭಿವೃದ್ಧಿ ಸಾಧನೆಗಳನ್ನು ಪ್ರದರ್ಶಿಸುತ್ತವೆ. ಇದು ದೇಶದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್‌ಗಳು, ಜಾನಪದ ಕಲಾವಿದರು ಮತ್ತು ಸಾಂಸ್ಕೃತಿಕ ಪ್ರದರ್ಶಕರು ಸಹ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಅವರು ಆಚರಣೆಗಳಿಗೆ ಶಕ್ತಿ ಮತ್ತು ಹಬ್ಬದ ಮೋಡಿಯನ್ನು ತರುತ್ತಾರೆ. ರಾಷ್ಟ್ರೀಯ ನಾಯಕರು, ವಿದೇಶಿ ಗಣ್ಯರು ಮತ್ತು ಗಣ್ಯ ಅತಿಥಿಗಳು ಭಾಗವಹಿಸುವ ಈ ಕಾರ್ಯಕ್ರಮವು ಭಾರತದ ಪ್ರತಿಷ್ಠೆ ಮತ್ತು ಬೆಳೆಯುತ್ತಿರುವ ಜಾಗತಿಕ ನಿಲುವನ್ನು ಪ್ರತಿಬಿಂಬಿಸುತ್ತದೆ.

17 ರಾಜ್ಯಗಳು ಮತ್ತು 13 ಕೇಂದ್ರ ಸಚಿವಾಲಯಗಳ ಮೆರವಣಿಗೆಗಳು ಸಿದ್ಧವಾಗಿವೆ. ಈ ಬಾರಿ, 2,500 ಕಲಾವಿದರು ಕರ್ತವ್ಯ ಪಥದಲ್ಲಿ ನೃತ್ಯಗಳ ರೂಪದಲ್ಲಿ ತಮ್ಮ ರಾಜ್ಯದ ಸಂಸ್ಕೃತಿಯನ್ನು ಪ್ರದರ್ಶಿಸಲಿದ್ದಾರೆ. ಈ ಬಾರಿ, ಕರ್ತವ್ಯ ಪಥದಲ್ಲಿ 90 ನಿಮಿಷಗಳ ಕಾಲ ಮೆರವಣಿಗೆಗಳನ್ನು ಪ್ರದರ್ಶಿಸಲಾಗುವುದು. ಕಾರ್ಯಕ್ರಮದ ಪ್ರಮುಖ ವಿಷಯ ವಂದೇ ಮಾತರಂ ಗೀತೆಯಾಗಿದ್ದು, ಇದು 150 ವರ್ಷಗಳನ್ನು ಪೂರೈಸಿದೆ. ಬಂಕಿಂಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶವನ್ನು ಒಂದುಗೂಡಿಸಿತು. ಸಿಡಿಯುವ ಫಿರಂಗಿಯಂತೆ, ವಂದೇ ಮಾತರಂ ಘೋಷಣೆ ದೇಶಾದ್ಯಂತ ಪ್ರತಿಧ್ವನಿಸಿತು.

2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಹೇಗಿರುತ್ತದೆ ಎಂಬುದನ್ನು ಈ ಪ್ರದರ್ಶನಗಳ ಮೂಲಕ ನೋಡಬಹುದು. ಈ ಬಾರಿ ಭಾರತೀಯ ಕಾನೂನು ಸಂಹಿತೆ ಸಕತವು ವಿಶೇಷ ಆಕರ್ಷಣೆಯಾಗಲಿದೆ. ಆಪರೇಷನ್ ಸಿಂಧೂರ್ ನಂತರದ ಮೊದಲ ಗಣರಾಜ್ಯೋತ್ಸವದ ಪರೇಡ್ ಇದಾಗಿರುವುದರಿಂದ, ನಮ್ಮ ರಕ್ಷಣಾ ಪಡೆಗಳು ಭಾರತದ ಮಿಲಿಟರಿಯ ಶಕ್ತಿ ಮತ್ತು ಶಸ್ತ್ರಾಸ್ತ್ರಗಳನ್ನು ಜಗತ್ತಿಗೆ ತೋರಿಸುತ್ತವೆ. ಯಾವುದನ್ನು ಮಿಸ್ ಮಾಡಿಕೊಳ್ಳಲೇಬೇಡಿ.

Source link

Kalaburagi: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡಳು ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ! – Kannada News | Kalaburagi Newlywed Suicide: City Obsession Led to Young Woman’s Tragic Death

ಕಲಬುರಗಿ, ಜನವರಿ 23: ತನ್ನ ಸಹೋದರಿಯರು ನಗರದಲ್ಲಿ ವಾಸಿಸುತ್ತಿದ್ದು, ತಾನು ಮಾತ್ರ ಹಳ್ಳಿಯಲ್ಲಿ ನೆಲೆಸಿದ್ದೇನೆ ಎಂದು ಮನನೊಂದು ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ಆಜಾದಪುರ್ ಬಡಾವಣೆಯಲ್ಲಿ ನಡೆದಿದೆ. ಅನಸೂಯಾ ಮೃತ ಯುವತಿಯಾಗಿದ್ದು, ಮನೆಯಲ್ಲಿಯೇ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಮನೆ ಮಗಳ ಹುಚ್ಚು ನಿರ್ಧಾರಕ್ಕೆ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.

ಅತ್ತೆ ಮಗ ಅವಿನಾಶ್​​ ಜೊತೆ ಸಪ್ತಪದಿ ತುಳಿದಿದ್ದ ಅನಸೂಯಾ, ಆರಂಭದಲ್ಲಿ ಚೆನ್ನಾಗಿಯೇ ಇದ್ದಳು. ಈಕೆಗ ಮೂವರು ಸಹೋದರಿಯರಿಗೂ ಕೂಡ ವಿವಾಹವಾಗಿದ್ದು, ಅವರೆಲ್ಲರೂ ಸಿಟಿಯಲ್ಲಿ ನೆಲೆಸಿದ್ದರು. ಇದೇ ವಿಚಾರಕ್ಕೆ ದಿನ ಕಳೆದಂತೆ ಅನಸೂಯಾಗೆ ಬೇಸರ ಮೂಡಿದೆ. ತಾನು ಮಾತ್ರ ಮದುವೆಯಾಗಿ ಹಳ್ಳಿಯಲ್ಲಿ ಇದ್ದೇನೆ ಎಂಬ ಗಿಲ್ಟಿ ಫೀಲ್ ಬಂದಿದೆ. ಹೀಗಾಗಿ ಮಾನಸಿಕವಾಗಿ ನೊಂದಿದ್ದ ಈಕೆ, ತವರಿಗೆ ಹೋದಾಗಲೂ ವಿಚಾರವನ್ನು ಒಂದೆರಡುಬಾರಿ ಕುಟುಂಬಸ್ಥರಿಗೆ ಹೇಳಿದ್ದಳು. ತಾನು ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ‌ ನಡೆಸುತ್ತಿರುವ ಕೊರಗಿನ ಬಗ್ಗೆ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಪೋಷಕರು ಬುದ್ಧಿಮಾತು ಕೂಡ ಹೇಳಿದ್ದರು. ಆದರೂ ಇದೇ ವಿಚಾರವಾಗಿ ಕೊರಗುತ್ತಿದ್ದ ಆಕೆ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಇನ್ನು ಮದುವೆಗೂ ಮುನ್ನ ಅನಸೂಯಾ ಕೂಡ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಳು. ಹೀಗಾಗಿ ಆಕೆಗೆ ಹಳ್ಳಿ ಜೀವನ ಅಂದ್ರೆ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಇತ್ತ ಪ್ರೀತಿಸಿದ ಹುಡುಗ ಬಿಡೋಕು ಆಗ್ತಿರಲಿಲ್ಲ. ಮದುವೆ ಬಳಿಕ ಸಿಟಿ ವ್ಯಾಮೋಹ ಈಕೆಯನ್ನು ವಿಪರೀತ ಕಾಡತೊಡಗಿದೆ. ಈ ನಡುವೆಯೂ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದ ಈಕೆ, ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:32 pm, Fri, 23 January 26

Source link

ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ಖಾಸಗಿ ಬಸ್​​​ಗಳಿಂದ ದುಪ್ಪಟ್ಟು ದರ ವಸೂಲಿ – Kannada News | Republic Day Holiday Rush: Private Bus Ticket Prices Soar Amid Series of Holidays

ಬೆಂಗಳೂರು, ಜನವರಿ 23: ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ದರಗಳು ಗಣನೀಯವಾಗಿ ಏರಿಕೆಯಾಗಿವೆ. ನಾಳೆ ನಾಲ್ಕನೇ ಶನಿವಾರ, ಭಾನುವಾರ ಮತ್ತು ಸೋಮವಾರ ಗಣರಾಜ್ಯೋತ್ಸವದ ಹಿನ್ನೆಲೆ ಸತತ ಮೂರು ದಿನಗಳ ರಜೆ ಇರುವುದರಿಂದ ಜನರು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಿಂದಿನ ದರ 1473 ರೂ ಇತ್ತು, ಈಗ ಅದು 5000 ರೂ ತಲುಪಿದೆ. ಬೆಂಗಳೂರು-ಕಾರವಾರ ನಡುವೆ ಪ್ರಸ್ತುತ 1790 ರೂಪಾಯಿಗಳಿಗಿಂತ ಅಧಿಕ ದರವಿದೆ. ಬೆಂಗಳೂರಿನಿಂದ ಕಲಬುರಗಿಗೆ 1299 ರೂಪಾಯಿಯಿಂದ 2200 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು-ಶಿವಮೊಗ್ಗ ಪ್ರಯಾಣ ದರ 599 ರೂಪಾಯಿಯಿಂದ ಸುಮಾರು 3000 ರೂ ಇದೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿಗೆ 909 ರೂಪಾಯಿಯಿಂದ 2299 ರೂಪಾಯಿಗೆ ದರ ಏರಿಕೆಯಾಗಿದೆ. ರಜೆಗೆ ತೆರಳುವವರು ಹೆಚ್ಚುವರಿ ದರ ನೀಡಿ ಊರುಗಳಿಗೆ ತೆರಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದು 240 ಕೋಟಿ ಗೂ. ಅಧಿಕ ನಷ್ಟ ಅನುಭವಿಸಿದ ಬಾಂಗ್ಲಾದೇಶ – Kannada News | Bangladesh Refuses T20 World Cup 2026 India Trip: ICC Warning, Massive Losses

ಬಾಂಗ್ಲಾದೇಶ 2026 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಭದ್ರತಾ ಕಾರಣಗಳಿಂದಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಈ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಯುವಜನ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಭಾರತದ ಭದ್ರತಾ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತಿಲ್ಲ ಎಂದಿದ್ದರು.

ವಾಸ್ತವವಾಗಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರಿಂದ, ಬಾಂಗ್ಲಾದೇಶದ ಗುಂಪು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ, ಐಸಿಸಿಯನ್ನು ಕೋರಿತ್ತು. ಆದಾಗ್ಯೂ, ಐಸಿಸಿ ಮಂಡಳಿಯ ಸಭೆಯು ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಹೇಳಿ ಈ ಪ್ರಸ್ತಾಪವನ್ನು ತಿರಸ್ಕರಿಸಿತು.

ಮಾತ್ರವಲ್ಲದೆ ಬಾಂಗ್ಲಾ ತಂಡ ಭಾರತಕ್ಕೆ ಪ್ರಯಾಣಿಸದಿದ್ದರೆ, ನಿಮ್ಮ ಸ್ಥಾನದಲ್ಲಿ ಬೇರೆ ತಂಡವನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗುತ್ತದೆ ಎಂದು ಐಸಿಸಿ, ಬಿಸಿಬಿಗೆ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿಯೂ, ಬಾಂಗ್ಲಾದೇಶ ತನ್ನ ನಿಲುವು ಬದಲಾಯಿಸದೆ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.

ಈ ನಿರ್ಧಾರದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಭಾರೀ ಬೆಲೆಯನ್ನು ತೆರಬೇಕಾಗಿದೆ. ಐಸಿಸಿಯಿಂದ ಬರುವ ವಾರ್ಷಿಕ ಆದಾಯದ ಪಾಲಿನಲ್ಲಿ ಸುಮಾರು 3.25 ಬಿಲಿಯನ್ ಬಾಂಗ್ಲಾದೇಶಿ ಟಾಕಾ (ಸುಮಾರು 240 ಕೋಟಿ ಭಾರತೀಯ ರೂಪಾಯಿಗಳು) ನಷ್ಟವಾಗಬಹುದು ಎಂದು ವರದಿಯಾಗಿದೆ.

ಇದಲ್ಲದೆ, ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವಗಳು ಮತ್ತು ಇತರ ಗಳಿಕೆಗಳಿಂದ ಬರುವ ಒಟ್ಟು ಆರ್ಥಿಕ ನಷ್ಟವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚಾಗಬಹುದು. ಇದರ ಜೊತೆಗೆ ಆಟಗಾರರಿಗೆ ಸಿಗುತ್ತಿದ್ದ ಪಂದ್ಯ ಶುಲ್ಕ, ಬೋನಸ್‌ ಮತ್ತು ಬಹುಮಾನದ ಹಣಕ್ಕೂ ಕತ್ತರಿ ಬಿದ್ದಿದೆ.

ಈ ವಿವಾದವು ದ್ವಿಪಕ್ಷೀಯ ಕ್ರಿಕೆಟ್ ಮೇಲೂ ಪರಿಣಾಮ ಬೀರಬಹುದು. ಪೂರ್ವ ನಿಗದಿಯಂತೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತ ತಂದ ಬಾಂಗ್ಲಾದೇಶ ಪ್ರವಾಸವನ್ನು ಮಾಡಬೇಕಿತ್ತು. ಆದರೀಗ ಆ ಪ್ರವಾಸ ರದ್ದಾಗಬಹುದು. ಇದರಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಮತ್ತಷ್ಟು ನಷ್ಟಕ್ಕೆ ಕಾರಣವಾಗಬಹುದು. ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು 2025 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಬಿಸಿಸಿಐ ಅದನ್ನು ಮುಂದೂಡಿತ್ತು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರವಾಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತಾದರೂ ಅದು ನಡೆಯುವ ಸಾಧ್ಯತೆಗಳಿಲ್ಲ.

Published On – 3:18 pm, Fri, 23 January 26

Source link

Ranji Trophy: ದೇಶಿ ಅಂಗಳದಲ್ಲಿ 5 ನೇ ದ್ವಿಶತಕ ಬಾರಿಸಿದ ಸರ್ಫರಾಜ್ ಖಾನ್

Source link

ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್ – Kannada News | Kichcha Sudeep Gave 10 Lakh rs Gilli Nata In Home Says Bigg boss winner

ಬಿಗ್ ಬಾಸ್ ಕನ್ನಡ ಫಿನಾಲೆಯಲ್ಲಿ ಸುದೀಪ್ ಅವರು ಗಿಲ್ಲಿಗೆ 10 ಲಕ್ಷ ರೂಪಾಯಿ ನೀಡೋದಾಗಿ ಹೇಳಿದ್ದರು.ಕೊಟ್ಟ ಮಾತಿನಂತೆ ಸುದೀಪ್ ನಡೆದುಕೊಂಡಿದ್ದಾರೆ. ಅವರು 10 ಲಕ್ಷ ರೂಪಾಯಿ ಹಣವನ್ನು ಗಿಲ್ಲಿಗೆ ನೀಡಿದ್ದಾರೆ. ಬಿಗ್ ಬಾಸ್ ವೇದಿಕೆ ಮೇಲೆಯೇ ಗಿಲ್ಲಿಗೆ ಸುದೀಪ್ ಕಿವಿಮಾತೊಂದನ್ನು ಹೇಳಿದ್ದರಂತೆ. ‘ಸಿಗೋ ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದ್ದರಂತೆ. ಈ ಮಾತಿನಿಂದ ಗಿಲ್ಲಿ ಕೂಡ ಖುಷಿಪಟ್ಟಿದ್ದಾರೆ. ಅವರು ಮಾತನ್ನು ಅನುಸರಿಸೋದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lakkundi Gold Tressure: 8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ! ಉತ್ಖನನಕ್ಕೆ ಜನರ ಕಿರಿಕಿರಿ! – Kannada News | Gadags Lakkundi Dig: Eighth Day Reveals Historical Clues, Draws Crowds, and Raises Concerns

ಗದಗ, ಜನವರಿ 23: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ (Lakkundi Excavation) ಎಂಟನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ಸುಮಾರು ಎಂಟು ಅಡಿ ಆಳಕ್ಕೆ ಅಗೆಯಲಾಗುತ್ತಿದ್ದು, ರಾಜ ಮಹಾರಾಜರ ಕಾಲದ ಗತ ವೈಭವದ ಕುರುಹುಗಳು ಪತ್ತೆಯಾಗುವ ನಿರೀಕ್ಷೆ ಸ್ಥಳೀಯರಲ್ಲಿ ಹೆಚ್ಚಿದೆ. ಸುತ್ತಮುತ್ತಲಿನ ಜಿಲ್ಲೆಗಳಿಂದ ಮಾತ್ರವಲ್ಲದೆ, ಫ್ರಾನ್ಸ್‌ನಂತಹ ದೂರದ ದೇಶಗಳಿಂದಲೂ ಪ್ರವಾಸಿಗರು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

ಆದಾಗ್ಯೂ, ಉತ್ಖನನ ಸ್ಥಳದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳ ಕೊರತೆಯಿದೆ. ಜಿಲ್ಲಾಧಿಕಾರಿಗಳು ಈ ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಘೋಷಿಸಿದ್ದರೂ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಂಬಂಧಿತ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಸಾರ್ವಜನಿಕರ ಓಡಾಟವು ಉತ್ಖನನ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ. ಪೊಲೀಸ್ ಮತ್ತು ಉತ್ಖನನ ಕಾರ್ಮಿಕರಿಗೆ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Gadag: ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!

ಗದಗ, ಜನವರಿ 23: ಮನೆ ಅಡಿಪಾಯ ನಿರ್ಮಾಣದ ವೇಳೆ ನಿಧಿ ಸಿಕ್ಕ ಬೆನ್ನಲ್ಲೇ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಆರಂಭವಾಗಿದ್ದು, ದೇಶ ಮತ್ತು ವಿದೇಶಗಳಲ್ಲಿಯೂ ಈ ವಿಚಾರ ಸುದ್ದಿಯಾಗಿದೆ. ಈ ನಡುವೆ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ನೋಡಲು ವಿದೇಶಿ ಪ್ರವಾಸಿಗರು ಸಹ ಬಂದಿದ್ದಾರೆ. ಫ್ರಾನ್ಸ್​ ದೇಶದ 9 ಪ್ರವಾಸಿಗರು ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ದೇವಸ್ಥಾನಗಳ ವೀಕ್ಷಣೆ ಬಳಿಕ ಉತ್ಖನನ ಸ್ಥಳದಲ್ಲೂ ಓಡಾಟ ನಡೆಸಿ ಮಾಹಿತಿ ಪಡೆದಿದ್ದಾರೆ. ಮತ್ತೊಂದೆಡೆ ನಿರ್ಬಂಧಿತ ಪ್ರದೇಶದಲ್ಲಿ ಜನರ ಓಡಾಟದಿಂದ ಉತ್ಖನ ಕಾರ್ಯಕ್ಕೆ ಕಿರಿಕಿರಿ ಉಂಟಾಗಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯಕ್ಕೆ ಜನರನ್ನು ಹೊರ ಕಳುಹಿಸಲು ಪೊಲೀಸರು ಸುಸ್ತಾಗಿದ್ದು, ಅವ್ಯವಸ್ಥೆಗೆ ಕಾರ್ಮಿಕರು, ಪೊಲೀಸರು ಹೈರಾಣಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಬೆಂಗಳೂರಿನಲ್ಲಿ ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು – Kannada News | Bengaluru Traffic Police found 26 Drunk School Bus Drivers while special operation

ಬೆಂಗಳೂರು, ಜನವರಿ 23: ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿದ್ದು, ಒಟ್ಟು 5110 ಶಾಲಾ ಬಸ್​ ಚಾಲಕರ ತಪಾಸಣೆ ಮಾಡಿದ್ದಾರೆ. ಈ ವೇಳೆ 26 ಶಾಲಾ ಬಸ್​ ಚಾಲಕರು ಮದ್ಯಸೇವಿಸಿರೋದು ಪತ್ತೆ ಆಗಿದೆ. ಮದ್ಯಸೇವಿಸಿ ವಾಹನ ಚಲಾಯಿಸುತ್ತಿದ್ದ 26 ಚಾಲಕರ ಡಿಎಲ್​​ ರದ್ದುಗೊಳಿಸಲು ಆರ್​ಟಿಒಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ. ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ: ಸುರೇಶ್ ಕುಮಾರ್ ಮಾತಿಗೆ ಕಲಾಪದಲ್ಲಿ ಭಾರೀ ಗದ್ದಲ

ಬೆಂಗಳೂರು, ಜ.23: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ(Karnataka Assembly) ನಡೆದ ಘಟನೆಯೊಂದು ಸದನದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಏಳು ತಿಂಗಳಿಗೆ ಹುಟ್ಟಿದವರಂತೆ ಆಡಬೇಡಿ ಎಂಬ ಹೇಳಿಕೆಯು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಸಚಿವ ಭೈರತಿ ಸುರೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಮಾತನಾಡುತ್ತಿದ್ದಾಗ ಭೈರತಿ ಸುರೇಶ್ ಮಧ್ಯಪ್ರವೇಶಿಸಿದ್ದರೆ ಈ ವೇಳೆ ಸುರೇಶ್ ಕುಮಾರ್ “ಒಂಭತ್ತು ತಿಂಗಳಿಗೆ ಹುಟ್ಟಿದ್ರೆ ಸರಿಯಾಗುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದ್ದೀರಾ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಈ ಮಾತು ಸದನದಲ್ಲಿ ಆಕ್ರೋಶದ ಅಲೆಯ್ನುಎಬ್ಬಿಸಿದೆ. ಹಲವಾರು ಸದಸ್ಯರು, ಅದರಲ್ಲಿಯೂ ಪ್ರಿಯಾಂಕಾ ಮತ್ತು ಭೈರತಿ ಸುರೇಶ್ ಅವರು ತೀವ್ರವಾಗಿ ವಿರೋಧಿಸಿ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಈ ಹೇಳಿಕೆ ಅನ್ ಪಾರ್ಲಿಮೆಂಟರಿ (ಅಸಂಸದೀಯ) ಎಂದು ಹಲವರು ವಾದಿಸಿದರು. “ನೀವು ಹೆಲ್ತ್ ಮಿನಿಸ್ಟರ್ ಆಗಿದ್ದೀರಾ. ಏಳು ತಿಂಗಳಲ್ಲಿ ಯಾರೂ ಹುಟ್ಟೋದೇ ಇಲ್ವಾ? ಪ್ರೀ ಮೆಚ್ಯೂರ್ ಬೇಬಿ ಹುಟ್ಟಲ್ವಾ? ಏಳು ತಿಂಗಳಲ್ಲಿ ಹುಟ್ಟೋರಿಗೆ ಮಾನ ಮರ್ಯಾದೆ ಇಲ್ವಾ?” ಸದನದಲ್ಲಿ ಶಾಸಕರೊಬ್ಬರು ಹೇಳಿದ್ದಾರೆ. ಈ ಮಾತಿನಿಂದ ಏಳು ತಿಂಗಳಲ್ಲಿ ಜನಿಸಿದವರ ಕುರಿತು ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ವಾಗ್ವಾದ ತಾರಕಕ್ಕೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಸುರೇಶ್ ಕುಮಾರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಅವರು ಹೇಳಿದ ಮಾತನ್ನು ಕಡತದಿಂದ ತೆಗೆದುಹಾಕಿ ಎಂದು ಸ್ಪೀಕರ್​​​ಗೆ ಹೇಳಿದ್ರು, ತಕ್ಷಣ ಎದ್ದು ನಿಂತು ಸುರೇಶ್ ಕುಮಾರ್ ಅವರು ತಾವು ಏಳು ತಿಂಗಳು, ಒಂಬತ್ತು ತಿಂಗಳು ಎಂದು ಹೇಳಿದ ಮಾತನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version