ಅಪರೂಪದ ದಾಖಲೆ ಬರೆಯಲಿರುವ ‘ಅವತಾರ್’ ನಿರ್ದೇಶಕ ಜೇಮ್ಸ್ ಕ್ಯಾಮರನ್ – Kannada News | James Cameron to be create record by Avatar fire and Ash
‘ಅವತಾರ್ 3’ (Avatar 3) ಸಿನಿಮಾ ಬಿಡುಗಡೆ ಆಗಿ ಕೆಲ ವಾರಗಷ್ಟೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವಿಶ್ವಮಟ್ಟದಲ್ಲಿ ವ್ಯಕ್ತವಾಗಿದೆ. ಜೇಮ್ಸ್ ಕ್ಯಾಮರನ್ ಈ ವರೆಗೆ ನಿರ್ದೇಶಿಸಿರುವ ಸಿನಿಮಾಗಳಲ್ಲಿಯೇ ಕಡಿಮೆ ಗುಣಮಟ್ಟದ ಸಿನಿಮಾ ಇದೆಂದು ಸಹ ಕೆಲವು ವಿಮರ್ಶಕರು ಟೀಕೆ ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಅವತಾರ್ 3’ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿದೆ. ಇದೆಲ್ಲದರ ಹೊರತಾಗಿಯೂ ‘ಅವತಾರ್ 3’ ಸಿನಿಮಾ ಹಾಗೂ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜೇಮ್ಸ್ ಕ್ಯಾಮರನ್…