‘ಆಲ್ಫಾ’ ಸಿನಿಮಾದ ‘ರಾವ ರಾವ’ ಕಲರ್​ಫುಲ್ ಹಾಡಿಗೆ ಅನೂಪ್ ಸೀಳಿನ್ ಸಂಗೀತ – Kannada News | Hemanth Kumar starrer Alpha Men Love Vengeance movie Rawa Rawa Song released

ನಿರ್ದೇಶಕ ವಿಜಯ್ ಅವರು ಈ ಮೊದಲು ‘ಗೀತಾ’ ಮತ್ತು ‘ಹೊಯ್ಸಳ’ ಸಿನಿಮಾಗಳನ್ನು ಮಾಡಿದ್ದರು. ಈಗ ಅವರು ‘ಆಲ್ಫಾ’ (Alpha) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಆಲ್ಫಾ – ಮೆನ್ ಲವ್ ವೆಂಜೆನ್ಸ್’ (Alpha Men Love Vengeance) ಎಂಬುದು ಈ ಸಿನಿಮಾದ ಪೂರ್ತಿ ಟೈಟಲ್. ಈ ಸಿನಿಮಾದಿಂದ ಈಗೊಂದು ಹೊಸ ಹಾಡು ಬಿಡುಗಡೆ ಆಗಿದೆ. ‘ರಾವ ರಾವ’ ಎಂಬ ಈ ಹಾಡನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ. ತುಂಬ ಕಲರ್​​ಫುಲ್ ಆಗಿ ಈ ಹಾಡು ಮೂಡಿಬಂದಿದೆ. ಹಾಡಿನ ಬಿಡುಗಡೆ ಬಳಿಕ ‘ಆಲ್ಫಾ’ ಸಿನಿಮಾ ಮೇಲಿನ ಕೌತುಕ ಹೆಚ್ಚಿದೆ.

‘ಆಲ್ಫಾ’ ಸಿನಿಮಾದಲ್ಲಿ ನಾಯಕನಾಗಿ ಹೇಮಂತ್‌ ಕುಮಾರ್ ಅವರು ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಸಿನಿಮಾದ ಮೊದಲ ಹಾಡು ‘ರಾವ ರಾವ..’ ಬಿಡುಗಡೆ ಆಗಿ ಜನಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿಗೆ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಅನೂರಾಗ ಕುಲಕರ್ಣಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

 ‘ರಾವ ರಾವ’ ಹಾಡು:

ಈ ಮೊದಲು ‘ಆಲ್ಫಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇದು ಆ್ಯಕ್ಷನ್ ಜೊತೆಗೆ ಅಪ್ಪ-ಮಗನ ಭಾವನಾತ್ಮಕ ಕಥೆ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾ ಮೂಲಕ ಹೇಮಂತ್ ಕುಮಾರ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಸಿನಿಮಾ ಬಗ್ಗೆ ನಿರ್ದೇಶಕ ವಿಜಯ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಆ್ಯಕ್ಷನ್ ಮತ್ತು ಕ್ರೈಂನ ಭಯಾನಕತೆ ಎಷ್ಟಿರುತ್ತದೆ ಎಂಬುದು ಸಿನಿಮಾದ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ 3 ಪಾತ್ರಗಳು ಪ್ರಮುಖವಾಗಿ ಬರಲಿವೆ’ ಎಂದು ಅವರು ಹೇಳಿದ್ದಾರೆ. ಆನಂದ್ ಕುಮಾರ್ ಅವರು ನಿರ್ಮಾಪಕರಾಗಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಸಿನಿಮಾ ಫಸ್ಟ್ ಲುಕ್; ಹೀರೋ ಆದ ಹೇಮಂತ್ ಕುಮಾರ್

ನಟ ಹೇಮಂತ್ ಕುಮಾರ್ ಅವರು ‘ಆಲ್ಫಾ’ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದಾರೆ. ರಾಘು ಶಿವಮೊಗ್ಗ ಬಳಿ ಅವರು ನಟನೆಯ ತಯಾರಿ ನಡೆಸಿದ್ದಾರೆ. ಅರ್ಜುನ್ ಜೊತೆ ಸಾಹಸ ಅಭ್ಯಾಸ ಮಾಡಿದ್ದಾರೆ. ಅಲ್ಲದೇ, ಡ್ಯಾನ್ಸ್ ಮತ್ತು ಮಾರ್ಷಲ್ ಆರ್ಟ್ ಕಲಿತು ಹೀರೋ ಆಗಲು ಬೇಕಾದ ಪೂರ್ತಿ ತಯಾರಿ ಮಾಡಿಕೊಂಡು ಎಂಟ್ರಿ ನೀಡಿದ್ದಾರೆ. ಕಾರ್ತಿಕ್ ಛಾಯಾಗ್ರಹಣ ಮಾಡಿರುವ ಈ ಸಿನಿಮಾಗೆ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ನಾಯಕಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುಟಿನ್ ನಿವಾಸದ ಮೇಲಿನ ಉಕ್ರೇನ್ ದಾಳಿಗೆ ಪ್ರಧಾನಿ ಮೋದಿ ಖಂಡನೆ – Kannada News | PM Narendra Modi condemns Ukraine attack on Russia President Putin residence

ನವದೆಹಲಿ, ಡಿಸೆಂಬರ್ 30: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ದಾಳಿ ಮಾಡಿದೆ ಎಂಬ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಎರಡೂ ದೇಶಗಳು ರಾಜತಾಂತ್ರಿಕ ಪ್ರಯತ್ನಗಳತ್ತ ಗಮನಹರಿಸುವಂತೆ ಅವರು ಒತ್ತಾಯಿಸಿದ್ದಾರೆ.

“ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಮಾಡಲಾಗಿರುವ ರಾಜತಾಂತ್ರಿಕ ಪ್ರಯತ್ನಗಳು ಇಂತಹ ದಾಳಿಗಳಿಂದ ವ್ಯರ್ಥವಾಗುತ್ತವೆ. ಆದಷ್ಟೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನಗಳ ಮೇಲೆ ಗಮನಹರಿಸಲು ನಾವು ಎರಡೂ ದೇಶಗಳಿಗೆ ಮನವಿ ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್​​ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಎರಡೂ ದೇಶಗಳ ನಡುವೆ ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತಿದ್ದಾರೆ.

ಇದನ್ನೂ ಓದಿ: ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಿನ್ನೆ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವಿನ ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು. ಅವರ ಪ್ರಕಾರ, ನವ್ಗೊರೊಡ್ ಪ್ರದೇಶದಲ್ಲಿ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ 91 ಡ್ರೋನ್‌ಗಳನ್ನು ತಡೆಹಿಡಿದು ಹೊಡೆದುರುಳಿಸಲಾಯಿತು. ಈ ಘಟನೆಯಿಂದ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ. ಆದರೆ, ಉಕ್ರೇನ್​ನ ಈ ದಾಳಿಯಿಂದಾಗಿ ರಷ್ಯಾ ಶಾಂತಿ ಮಾತುಕತೆಗೆ ಒಪ್ಪಬೇಕೇ ಬೇಡವೇ ಎಂಬುದನ್ನು ಮರುಪರಿಶೀಲಿಸಲಾಗುವುದು” ಎಂದು ಲಾವ್ರೊವ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ – Kannada News | Air India Passenger Urinates on Co passenger Flight Safety Concerns Rise

ನವದೆಹಲಿ, ಡಿಸೆಂಬರ್ 30: ದೆಹಲಿಯಿಂದ ಬ್ಯಾಂಕಾಕ್​ಹೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಮಾನಮತ್ತ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿರುವ ಘಟನೆ ನಡೆದಿದೆ. ಇದು ವಿಮಾನಯಾನ ಸುರಕ್ಷತೆ ಮತ್ತು ಪ್ರಯಾಣಿಕರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ .

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಕುಡುಕ ಪ್ರಯಾಣಿಕನೊಬ್ಬ ವಿಮಾನ ಕ್ಯಾಬಿನ್ ಒಳಗೆ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುತ್ತದೆ, ಅವರು ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರಲ್ಲಿ ಒಬ್ಬರಾದ ಶಿವಮ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ, ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕ ಇತರ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದ.

ಆದರೆ ಆತನ ಮೇಲೆ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ. ವಿಮಾನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ಯಾವುದೇ ಕಾನೂನು ಅಥವಾ ಸುರಕ್ಷತಾ ಪ್ರೋಟೋಕಾಲ್ ಇಲ್ಲವೇ, ಬಿಸಿನೆಸ್ ಕ್ಲಾಸ್​ನಲ್ಲಿ ಹೋಗುವ ನಮಗೆ ಯಾರಾದರೂ ಉಚಿತ ಪಾಸ್ ಕೊಡುತ್ತಿದ್ದಾರಾ, ಒಂದು-ಮಾರ್ಗ ಟಿಕೆಟ್‌ಗಾಗಿ ಸುಮಾರು $1,000 ( 80,000 ರೂ.) ಖರ್ಚು ಮಾಡಿ, ಇಂಥಾ ಘಟನೆಗಳನ್ನು ನೋಡುವುದು ನಿಜಕ್ಕೂ ವಿಪರ್ಯಾಸ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು

ಅದೃಷ್ಟವಶಾತ್ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಯಾವುದೇ ಮಹಿಳಾ ಪ್ರಯಾಣಿಕರು ಇರಲಿಲ್ಲ, ಒಬ್ಬ ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಈ ರೀತಿಯ ಅನುಭವವಾದರೆ ಮತ್ತೆಂದು ಒಬ್ಬಂಟಿಯಾಗಿ ಬರಲು ಹಿಂಜರಿಯುತ್ತಾಳೆ.

ಏರ್ ಇಂಡಿಯಾ ವಿಮಾನದಲ್ಲಿ ಈ ರೀತಿ ನಡೆದಿರುವುದು ಇದೇ ಮೊದಲಲ್ಲ, ನವೆಂಬರ್ 2022 ರಲ್ಲಿ ನ್ಯೂಯಾರ್ಕ್ ನಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ, ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರೊಬ್ಬರು ಬಿಸಿನೆಸ್ ಕ್ಲಾಸ್ ನಲ್ಲಿ ಹಿರಿಯ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ವಿಮಾನದ ವಿಡಿಯೋ

ಆ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆ ಪ್ರಯಾಣಿಕನಿಗೆ 30 ದಿನಗಳವರೆಗೆ ಹಾರಾಟ ನಿಷೇಧಿಸಿತು, ಶಿಕ್ಷೆಯು ಅಸಮರ್ಪಕ ಎಂದು ಜನರು ಕರೆಯಲಾಗಿತ್ತು. ವಿಮಾನಗಳಲ್ಲಿ ಮದ್ಯಪಾನವನ್ನು ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.ಘಟನೆಯ ಬಗ್ಗೆ ಏರ್ ಇಂಡಿಯಾ ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಸಿ ವೇಣುಗೋಪಾಲ್ ಮಾತು ಕೇಳಿ ಆಡಳಿತ ಮಾಡುವುದು 6 ಕೋಟಿ ಜನತೆಗೆ ಮಾಡಿದ ಅವಮಾನ; ಲಹರ್ ಸಿಂಗ್ – Kannada News | Governing by Listening to KC Venugopal Is an Insult to 6 Crore People: Says lahar singh siroya

ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ

ಬೆಂಗಳೂರು, ಡಿಸೆಂಬರ್​ 30: ಕೋಗಿಲು (Kogilu Layout) ನಿರಾಶ್ರಿತರ ಬೆನ್ನಿಗೆ ಸರ್ಕಾರ ನಿಂತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಕೊಡಲು ಮುಂದಾಗಿದೆ. ಅಕ್ರಮ ಒತ್ತುವರಿ ತೆರವು ಮಾಡಿ, ಮನೆ ಕೊಡುತ್ತಿರುವ  ಸರ್ಕಾರದ ನಡೆ ವಿಪಕ್ಷಗಳ ಪಾಲಿಗೆ ಬ್ರಹ್ಮಾಸ್ತ್ರವಾಗಿವಾಗಿದೆ. ರಾಜ್ಯದ 6 ಕೋಟಿ ಜನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​​ರನ್ನು ಆಯ್ಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್​ರನ್ನು ಆಯ್ಕೆ ಮಾಡಿಲ್ಲ. ಜುಜುಬಿ ವೇಣುಗೋಪಾಲ್ ಮಾತು ಕೇಳಿಕೊಂಡು ಆಡಳಿತ ಮಾಡುವುದು 6 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ (Lehar Singh Siroya) ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಲಹರ್ ಸಿಂಗ್ ಸಿರೋಯಾ ಕಿಡಿ

ಕೋಗಿಲು ಲೇಔಟ್​ ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರವಾಗಿ ಟಿವಿ9 ಜೊತೆಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ಈ ಸರ್ಕಾರದಿಂದ ಏನೂ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ. ಸೋ ಕಾಲ್ಡ್ ಪವರ್ ಫುಲ್ ಲೀಡರ್​​​ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಕೆ.ಸಿ.ವೇಣುಗೋಪಾಲ್ ಮಾತು ಕೇಳಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಕೇರಳಕ್ಕಾಗಿ ಈವರೆಗೆ ಏನೇನು ಮಾಡಿದ್ರು? ಪಟ್ಟಿ ಸಮೇತ ಟಾಂಗ್ ಕೊಟ್ಟ ಜೆಡಿಎಸ್

ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? ಅವರ ಆದೇಶ ನಾವು ಪಾಲಿಸಬೇಕಾ? ಈ ಸರ್ಕಾರ ಕೇವಲ ಕುರ್ಚಿ ಜಗಳಕ್ಕೆ ಮಾತ್ರ ಸೀಮಿತ ಅಷ್ಟೇ. ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ, ಡ್ರಗ್ಸ್ ಸಮಸ್ಯೆ ಸರಿಪಡಿಸಿಲ್ಲ, ಇಂತಹ ಸರ್ಕಾರ ನಮಗೆ ಸಿಕ್ಕಿರುವುದು ದುರದೃಷ್ಟಕರ. ಪಾಕಿಸ್ತಾನ ಪ್ರತಿಕ್ರಿಯೆ ಕೊಡುತ್ತದೆ ಎಂದರೆ, ಇದು ಬಹಳ ಭಯನಕ ಟ್ರೆಂಡ್. ಪಶ್ಚಿಮ ಬಂಗಾಳ ರೀತಿ ಇಲ್ಲಿ ಆದರೆ ನಮ್ಮ ಗತಿ ಏನು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ

ಇನ್ನು ಎಐಸಿಸಿಯ ಕೆ.ಸಿ. ವೇಣು ಗೋಪಾಲ್ ಹೇಳಿದ್ರು ಅನ್ನೋ ಒಂದೇ ಕಾರಣಕ್ಕೆ ಇಷ್ಟು ದೊಡ್ಡ ನಿರ್ಧಾರ ಮಾಡಿರೋದನ್ನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಕಾಂಪಿಟೇಷನ್ ಮೇಲೆ ಸಿಎಂ, ಡಿಸಿಎಂ ಹೈಕಮಾಂಡ್ ಓಲೈಕೆ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್​ ಮಾತ್ರ ಇದನ್ನ ತಳ್ಳಿಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

BSF Recruitment 2025: 10th ಪಾಸಾದವರಿಗೆ ಗಡಿ ಭದ್ರತಾ ಪಡೆಗೆ ಸೇರಲು ಸುವರ್ಣವಕಾಶ; ಯಾವುದೇ ಲಿಖಿತ ಪರೀಕ್ಷೆಯಿಲ್ಲ! – Kannada News | BSF Constable Recruitment 2025: 549 Sports Quota Posts Apply Online Now!

ಗಡಿ ಭದ್ರತಾ ಪಡೆ (BSF) ಕ್ರೀಡಾ ಕೋಟಾದಡಿಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 549 ಕಾನ್ಸ್‌ಟೇಬಲ್ ಹುದ್ದೆಗಳನ್ನು ಅಂದರೆ 277 ಹುದ್ದೆಗಳು ಪುರುಷರಿಗೆ ಮತ್ತು 272 ಹುದ್ದೆಗಳು ಮಹಿಳೆಯರಿಗೆ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ 10 ನೇ ತರಗತಿ ಪಾಸಾದವರು ಮತ್ತು ಕ್ರೀಡೆಯಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಕಳೆದ ಎರಡು ವರ್ಷಗಳಲ್ಲಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಫುಟ್‌ಬಾಲ್, ಹಾಕಿ, ಈಜು, ಶೂಟಿಂಗ್, ಜೂಡೋ, ಕರಾಟೆ, ಕುಸ್ತಿ, ವೇಟ್‌ಲಿಫ್ಟಿಂಗ್, ಟೇಬಲ್ ಟೆನ್ನಿಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜಲ ಕ್ರೀಡೆ, ವುಶು ಮುಂತಾದ ಯಾವುದೇ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕಗಳನ್ನು ಗೆದ್ದಿರಬೇಕು.

ಅಧಿಸೂಚನೆಯಲ್ಲಿ ಸೂಚಿಸಿದಂತೆ, ಪುರುಷರ ದೈಹಿಕ ಮಾನದಂಡಗಳು 170 ಸೆಂಟಿಮೀಟರ್ ಮತ್ತು ಮಹಿಳೆಯರಿಗೆ 157 ಸೆಂಟಿಮೀಟರ್ ಆಗಿರಬೇಕು. ಪುರುಷರ ಎದೆಯ ಸುತ್ತಳತೆ 80 ಸೆಂಟಿಮೀಟರ್ ಆಗಿರಬೇಕು. ಉಸಿರಾಡುವಾಗ 5 ಸೆಂಟಿಮೀಟರ್ ಹೆಚ್ಚಾಗಬೇಕು. ಎಸ್‌ಟಿಯ ಎತ್ತರ 76 ಸೆಂಟಿಮೀಟರ್ ಆಗಿರಬೇಕು ಮತ್ತು ಉಸಿರಾಡುವಾಗ 5 ಸೆಂಟಿಮೀಟರ್ ಹೆಚ್ಚಾಗಬೇಕು. ಎತ್ತರ ಮತ್ತು ತೂಕವು ವಯಸ್ಸಿಗೆ ಅನುಗುಣವಾಗಿರಬೇಕು. ವಯಸ್ಸು 23 ವರ್ಷ ಮೀರಬಾರದು. ಒಬಿಸಿಗಳಿಗೆ ಮೂರು ವರ್ಷ ಮತ್ತು ಎಸ್‌ಸಿ ಮತ್ತು ಎಸ್‌ಟಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಈ ಅರ್ಹತೆಗಳನ್ನು ಹೊಂದಿರುವವರಿಗೆ ಜನವರಿ 1 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 159 ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ) ಮತ್ತು ಅರ್ಹತೆಯ ಆಧಾರದ ಮೇಲೆ ಅಂತಿಮ ನೇಮಕಾತಿಗಳನ್ನು ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ 21,700 ರಿಂದ 69,100 ರೂ. ರವರೆಗೆ ವೇತನವನ್ನು ನೀಡಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Tue, 30 December 25

Source link

ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಕೇರಳಕ್ಕಾಗಿ ಈವರೆಗೆ ಏನೇನು ಮಾಡಿದ್ರು? ಪಟ್ಟಿ ಸಮೇತ ಟಾಂಗ್ ಕೊಟ್ಟ ಜೆಡಿಎಸ್ – Kannada News | ‘Kerala’s Chetta Siddaramaiah’? JDS Slams CM Over Kogilu Issue, Releases List of Alleged Favors to Kerala

ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಕೇರಳಕ್ಕಾಗಿ ಈವರೆಗೆ ಏನೇನು ಮಾಡಿದ್ರು? ಪಟ್ಟಿ ಸಮೇತ ಟಾಂಗ್ ಕೊಟ್ಟ ಜೆಡಿಎಸ್

ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನ (Bengaluru) ಕೋಗಿಲು ಕ್ರಾಸ್ ಬಡಾವಣೆಯಲ್ಲಿ ಅಕ್ರಮ ಶೆಡ್​​ಗಳ ತೆರವು ಹಾಗೂ ನಂತರದ ಬೆಳವಣಿಗೆಗಳು ಕರ್ನಾಟಕದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬೆನ್ನಲ್ಲೇ ತಕ್ಷಣವೇ ಅಕ್ರಮ ಶೆಡ್​ಗಳಲ್ಲಿ ವಾಸಿಸುತ್ತಿದ್ದ ಕೇರಳಿಗರಿಗೆ ಮನೆ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ನಿರಾಶ್ರಿತರಾದ ಕನ್ನಡಿಗರಿಗೇ ವರ್ಷಗಳಿಂದ ಪರಿಹಾರ ನೀಡದೇ ಇರುವ ವಿಚಾರ ಮುನ್ನೆಲೆಗೆ ಬಂದಿದೆ. ಇದೀಗ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಎಕ್ಸ್ ಮೂಲಕ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಎಂದು ಜರೆದಿದೆ. ಅಲ್ಲದೆ, ಕೇರಳಕ್ಕಾಗಿ ಸಿದ್ದರಾಮಯ್ಯ ಈವರೆಗೆ ಏನೇನು ಮಾಡಿದ್ದಾರೆ ಎಂಬ ಪಟ್ಟಿ ನೀಡಿದೆ.

‘ಇದೊಂದು ಪ್ರಕರಣಕ್ಕೆ ಮಾತ್ರ ಸೀಮಿತ’ ಎಂದು ತಿಪ್ಪೇಸಾರುವ ಕೇರಳಿಗರ ಚೇಟಾ ಸಿದ್ದರಾಮಯ್ಯ ಅವರ ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ಇಬ್ಭಗೆ ನೀತಿಗೆ ಧಿಕ್ಕಾರವಿರಲಿ. ಹೈಕಮಾಂಡ್ ಆರ್ಡರ್‌ ಅನ್ನು ತಲೆಬಾಗಿ, ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ರಮ ವಲಸಿಗರ ಪರವಾಗಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಆದೇಶ ಹೊರಡಿಸಿ, ವಸತಿ ರಹಿತ ಕನ್ನಡಿಗರಿಗೆ ಬಗೆದ ವಿಶ್ವಾಸದ್ರೋಹವಲ್ಲವೇ? ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಸತಿರಹಿತ ಬಡ ಕನ್ನಡಿಗರಿಗೆ ಸೂರಿಲ್ಲ. ವಸತಿ ಇಲಾಖೆಯ ಮನೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿದ ಹಣವನ್ನು ಮುಂಗಡ ಕಟ್ಟಿ, ವರ್ಷಾನುಗಟ್ಟಲೇ ಇನ್ನೂ ಕಾಯುತ್ತಿದ್ದಾರೆ. ಇಂತಹ ನಿರ್ಗತಿಕರಿಗೆ ಮನೆಗಳನ್ನು ನೀಡುವ ಮನಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದೆ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ವೋಟ್‌ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ, ವಸತಿ ಸಚಿವ ಜಮೀರ್ ಅಹ್ಮದ್ ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ 11.20 ಲಕ್ಷ ರೂ ವೆಚ್ಚದ ಮನೆಗಳನ್ನು ನೀಡಿ, ರಾಜ ಮಾರ್ಯಾದೆ ಕೊಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಜೆಡಿಎಸ್ ಟೀಕಿಸಿದೆ.

ಜೆಡಿಎಸ್ ಎಕ್ಸ್ ಸಂದೇಶ

ಹೈಕಮಾಂಡ್‌ನ ತೊಗಲುಗೊಂಬೆಯಾದ ಕಾಂಗ್ರೆಸ್‌ ಸರ್ಕಾರ ಎಂದು ಮತ್ತೊಂದು ಎಕ್ಸ್ ಸಂದೇಶದ ಮೂಲಕ ಕಿಡಿಕಾರಿದೆ.

ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರನ್ನು ಹೈಕಮಾಂಡ್‌ ತನ್ನ ಕೈಗೊಂಬೆಯಾಗಿಸಿಕೊಂಡು ಆಟವಾಡಿಸುತ್ತಿದೆ. ಕೇರಳದ ಅಕ್ರಮ ವಲಸಿಗರಿಗೆ ಬೆಂಗಳೂರಿನಲ್ಲಿ 11.20 ಲಕ್ಷ ರೂ. ಮೌಲ್ಯದ ಮನೆ ಗ್ಯಾರಂಟಿ, ಕೇರಳದ ವಯನಾಡಿನ ಸಂತ್ರಸ್ತರಿಗೆ 10 ಕೋಟಿ ರೂ. ವೆಚ್ಚದಲ್ಲಿ 100 ಮನೆ, ಆನೆದಾಳಿಗೆ ಬಲಿಯಾದ ಕೇರಳದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ, ಇದು ಕನ್ನಡಿಗರ ವಿರೋಧಿ ಕಾಂಗ್ರೆಸ್​​​​ನಿಂದ ರಾಜ್ಯದ ಜನತೆಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಎಂದು ಜೆಡಿಎಸ್ ಹೇಳಿದೆ.

ಇದನ್ನೂ ಓದಿ: ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ

ಭೂಸ್ವಾಧೀನ ವಿರೋಧಿಸಿದ ರೈತರ ಮೇಲೆ ಕೋಪ, ಆಕ್ರೋಶ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗ ಕೇರಳಿಗರ ಮೇಲೆ ಮೃದುಧೋರಣೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯಕ್ಕೆ ಧಿಕ್ಕಾರ ಎಂದು ಜೆಡಿಎಸ್ ಉಲ್ಲೇಖಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ – Kannada News | Karnataka Teacher Uday Makes Students Wash Car; Education Dept Acts

ಉತ್ತರ ಕನ್ನಡ, ಡಿ.30: ಶಾಲೆ ವಿದ್ಯಾರ್ಥಿಗಳಿಂದ ಕಾರು ತೊಳೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಉದಯ್​​ ವಿದ್ಯಾರ್ಥಿಗಳಿಂದ ಶಾಲೆ ಮಕ್ಕಳಿಂದ ಕಾರು ತೊಳೆಸಿದ್ದಾರೆ. ಶಾಲಾ ಅವಧಿಯಲ್ಲೇ ತನ್ನ ಕಾರು ತೊಳೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಮಕ್ಕಳು ಕಾರು ಕ್ಲಿನ್​​ ಮಾಡುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಶಿಕ್ಷಕ ಉದಯ್​​​​​​ ಇಂತಹ ಕೆಲಸ ಮಾಡಿಸಿದ್ದರು ಎಂದು ಹೇಳಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಕೂಡ ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಹಳಿಯಾಳ ಬಿಇಒ ಪ್ರಮೋದ ಮಹಾಲೆ ಈ ವಿಷಯದ ಬಗ್ಗೆ ವರದಿ ನೀಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ CSK ಆಟಗಾರ – Kannada News | Aman Khan Creates Unwanted Record in ODI Cricket

ಏಕದಿನ ಕ್ರಿಕೆಟ್ ಶುರುವಾಗಿ ಬರೋಬ್ಬರಿ 54 ವರ್ಷಗಳಾಗಿವೆ. ಈ ಐವತ್ತನಾಲ್ಕು ವರ್ಷಗಳಲ್ಲಿ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಹೀನಾಯ ದಾಖಲೆಯೊಂದು ಭಾರತೀಯ ಆಟಗಾರನ ಹೆಸರಿಗೆ ಸೇರ್ಪಡೆಯಾಗಿದೆ. ಅದು ಕೂಡ 10 ಓವರ್​ಗಳಲ್ಲಿ ಬರೋಬ್ಬರಿ 123 ರನ್​ಗಳನ್ನು ನೀಡುವ ಮೂಲಕ ಎಂಬುದೇ ಅಚ್ಚರಿ.

ವಿಜಯ ಹಝಾರೆ ಟೂರ್ನಿಯಲ್ಲಿ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪುದುಚೇರಿ ಪರ ಕಣಕ್ಕಿಳಿದ ಅಮಾನ್ ಖಾನ್ 10 ಓವರ್​ಗಳಲ್ಲಿ ಬರೋಬ್ಬರಿ 123 ರನ್​​ಗಳನ್ನು ನೀಡಿದ್ದಾರೆ. ಈ ಮೂಲಕ ಲಿಸ್ಟ್​ ಎ (ಏಕದಿನ) ಕ್ರಿಕೆಟ್​ನಲ್ಲಿ 10 ಓವರ್​ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಹೀನಾಯ ದಾಖಲೆ ನೆದರ್​ಲೆಂಡ್ಸ್​ ತಂಡದ ಬಾಸ್ ಡಿ ಲೀಡೆ ಹೆಸರಿನಲ್ಲಿತ್ತು. 2023 ರ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಬಾಸ್ ಡಿ ಲೀಡೆ 10 ಓವರ್​ಗಳಲ್ಲಿ ಬರೋಬ್ಬರಿ 115 ರನ್ ನೀಡಿ ಈ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದರು.

ಇದೀಗ ಪುದುಚೇರಿ ತಂಡದ ನಾಯಕ ಅಮಾನ್ ಖಾನ್ ಈ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಪ್ರತಿ ಓವರ್​ಗೆ 12.30 ರನ್ ನೀಡುವ ಮೂಲಕ ಅಮಾನ್ ಒಟ್ಟು 123 ರನ್​ ಚಚ್ಚಿಸಿಕೊಂಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಬೌಲರ್​ ಎನಿಸಿಕೊಂಡಿದ್ದಾರೆ.

ಅಮಾನ್ ಖಾನ್ ಸಿಎಸ್​ಕೆ ಆಟಗಾರ:

29 ವರ್ಷದ ಅಮಾನ್ ಖಾನ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್​ 2026ರ ಮಿನಿ ಹರಾಜಿನ ಮೂಲಕ ಸಿಎಸ್​ಕೆ ಅಮಾನ್ ಖಾನ್ ಅವರನ್ನು 40 ಲಕ್ಷ ರೂ.ಗೆ ಖರೀದಿಸಿದ್ದಾರೆ.

ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…

ಇದಕ್ಕೂ ಮುನ್ನ ಅಮಾನ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಒಟ್ಟು 12 ಪಂದ್ಯಗಳನ್ನಾಡಿರುವ ಅಮಾನ್ ಒಂದು ಅರ್ಧಶತಕದೊಂದಿಗೆ ಒಟ್ಟು 115 ರನ್ ಕಲೆಹಾಕಿದ್ದಾರೆ. ಇದೀಗ ಐಪಿಎಲ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದ ಅಮಾನ್ ಖಾನ್ ಬೇಡದ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

Published On – 1:59 pm, Tue, 30 December 25

Source link

ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?

ಮಾಳು ಹಾಗೂ ಸೂರಜ್ ಅವರು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಇಬ್ಬರೂ ಮನೆಯಿಂದ ಹೊರ ಹೋದರು. ಇವರ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಗಿಲ್ಲಿ ಆಡಿದ ಮಾತು. ರಕ್ಷಿತಾ ಅವರು ಮಾಳು ಹಾಗೂ ಸೂರಜ್ ಬಳಿ ಹೋಗಿ ಅತ್ತಿದ್ದರಂತೆ. ಇವರು ಹೋಗುವ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಇತ್ತು ಎಂದು ಗಿಲ್ಲಿ ನಟ ಮಾತನಾಡಿದ್ದಾರೆ. ಆ ಬಗ್ಗೆ ಚರ್ಚೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮೀ ಹಣ – Kannada News | Gruhalakshmi Schemes 24th Instalment Credited to Belagavi Beneficiaries

ಬೆಳಗಾವಿ, ಡಿಸೆಂಬರ್​​ 30: ಹೊಸ ವರ್ಷದ ಸಂದರ್ಭದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯೋಜನೆಯ 24ನೇ ಕಂತಿನ 2,000 ರೂ.  ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಸಂದಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಟಿವಿ9 ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇನ್ನು ಹಣ ಪಡೆದ ಫಲಾನುಭವಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಣ ಹಾಕೋದು ವಿಳಂಬವಾದ ಹಿನ್ನೆಲೆ ಮಹಿಳೆಯರಲ್ಲಿ ಅಸಮಾಧಾನವಿತ್ತು.  ಆದರೆ ಈಗ ಹೊಸ ವರ್ಷದ ಹೊತ್ತಲ್ಲಿ ಹಣ ಬಂದಿರುವುದು ಸಂತಸ ತಂದಿದೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version