Karnataka Electricity Tariff Hike: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರೆಂಟ್ ಶಾಕ್! ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ ಸಾಧ್ಯತೆ – Kannada News | Karnataka Electricity Tariff Hike: KERC Announces “Top Up” Amidst Gruha Jyothi yojna

ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರೆಂಟ್ ಶಾಕ್!

ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷದ ಸಂಭ್ರಮಾಚರಣೆಯ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಗ್ರಾಹಕರಿಗೆ ಶಾಕ್ ನೀಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರು ಬಳಸುವ ವಿದ್ಯುತ್‌ಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದಿರುವ ಆಯೋಗ, ಇದನ್ನು ವಿದ್ಯುತ್ ದರ ಪರಿಷ್ಕರಣೆ ಎಂದು ಕರೆಯದೆ, “ಟಾಪ್-ಅಪ್” ಅಥವಾ “ಟ್ರೂ-ಅಪ್” ಎಂದು ಸ್ಪಷ್ಟಪಡಿಸಿದೆ.

ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ

ಮಾರ್ಚ್ 2025 ರಲ್ಲಿ KERC ವಿದ್ಯುತ್ ದರ ಪರಿಷ್ಕರಣೆಯನ್ನು ಘೋಷಿಸಿದಾಗ, ಮೂರು ವರ್ಷಗಳ ಕಾಲ ಸುಂಕಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿರುವ (ಎಸ್ಕಾಮ್‌ಗಳು) ಬಾಕಿಗಳನ್ನು ಆಧರಿಸಿ ಇದೀಗ ವಾರ್ಷಿಕವಾಗಿ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ಟಾಪ್-ಅಪ್ ಎಂದು ಕರೆಯಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.

ಈ ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ. ಟಾಪ್-ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್‌ಗೆ ಗರಿಷ್ಠ 8–10 ಪೈಸೆ ಮಾತ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೃಷಿ ಸಬ್ಸಿಡಿಯಲ್ಲಿ ಕಡಿಮೆ ಮಾಡಲು ಸೂಚನೆ

ರಾಜ್ಯದಲ್ಲಿ ಕೃಷಿ ವಿದ್ಯುತ್ ಸಬ್ಸಿಡಿ ಈಗ ಆರ್ಥಿಕ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) ಅದರ ಮೊತ್ತವನ್ನು ಕಡಿಮೆ ಮಾಡುವಂತೆ ಚಿಂತನೆ ನಡೆಸಿದ್ದು, ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಂತೆ ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 8.3 ರೂ.ಇದ್ದ ಕೃಷಿ ಸಬ್ಸಿಡಿಯನ್ನು 7.7 ಕ್ಕೆ ಇಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

2025–26 ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಬೆಲೆ ಸ್ಥಿರವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರ ಕಲ್ಲಿದ್ದಲು ಪೂರೈಕೆ ಲಭ್ಯವಿದ್ದ ಕಾರಣ ಆಮದು ಕಲ್ಲಿದ್ದಲಿನ ಅವಶ್ಯಕತೆ ಕಡಿಮೆಯಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉತ್ಪಾದನೆ ಮತ್ತು ಸರಬರಾಜು ವೆಚ್ಚಗಳು ವಿಭಿನ್ನವಾಗಿವೆ.

ಗೃಹ ಜ್ಯೋತಿ ಯೋಜನೆಯಿರುವ ಸಲುವಾಗಿ ದರ ಕಡಿತ ಇಲ್ಲ

ಈ ಎಲ್ಲ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತದೆ. ಆದರೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಬದಲಾಗಿ ಈ ವರ್ಷವೂ ವಿದ್ಯುತ್ ದರದಲ್ಲಿ ಏರಿಕೆ ಸಂಭವಿಸಲಿದೆ. ಇದನ್ನು ದರ ಪರಿಷ್ಕರಣೆ ಎಂದು ಕರೆಯದೆ ‘ಟಾಪ್-ಅಪ್’ ಎಂದು ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Optical Illusion: ಈ ಚಿತ್ರದಲ್ಲಿದೆ ಐಸ್ ಕ್ರೀಮ್; ಜಸ್ಟ್ 9 ಸೆಕೆಂಡುಗಳಲ್ಲಿ ಪತ್ತೆಹಚ್ಚಬಲ್ಲಿರಾ – Kannada News | Optical Illusion: Let’s find the hidden ice cream in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದಾಗಲೆಲ್ಲಾ ಆಪ್ಟಿಕಲ್‌ ಇಲ್ಯೂಷನ್‌ (optical illusion) ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅಷ್ಟೇ ಟ್ರಿಕ್ಕಿಯಾಗಿರುತ್ತದೆ. ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಆಗುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು  ಬಹಳ ಕಠಿಣವಾಗಿದೆ. ಜಾಣತನದಿಂದ ಮರೆ ಮಾಡಲಾಗಿರುವ ಐಸ್ ಕ್ರೀಮ್ ಕಂಡು ಹಿಡಿಯುವ ಸವಾಲು ಇಲ್ಲಿದೆ.  ಈ ಒಗಟು ಬಿಡಿಸಲು ಕೇವಲ 9 ಸೆಕೆಂಡುಗಳಷ್ಟು ಟೈಮ್ ಇದೆ.

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಆಪ್ಟಿಕಲ್ ಭ್ರಮೆಯ ಚಿತ್ರವೊಂದು ವೈರಲ್ ಆಗಿದ್ದು, ಇಲ್ಲಿ ಮಕ್ಕಳು ಯುವಕ ಯುವತಿಯರು, ಪುರುಷರು, ಮಹಿಳೆಯರು ಸೇರಿದಂತೆ ವೃದ್ಧರು ಇರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಐಸ್ ಕ್ರೀಮ್ ಅನ್ನು ಜಾಣತನದಿಂದ ಮರೆಮಾಡಲಾಗಿದೆ. ಅದನ್ನು ನಿಮಗೆ ನೀಡಿರುವ ಇಂತಿಷ್ಟು ಸಮಯದೊಳಗೆ ಪತ್ತೆ ಹಚ್ಚಬೇಕು.

ಇದನ್ನೂ ಓದಿ:ಈ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಗುರುತಿಸಿ ನೋಡೋಣ

ಐಸ್ ಕ್ರೀಮ್ ನಿಮ್ಮ ಕಣ್ಣಿಗೆ ಕಂಡಿತೇ?

ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು ನಿಮಗೆ ಕೊಟ್ಟಿರುವ ಸಮಯಾವಕಾಶ ಒಂಬತ್ತು ಸೆಕೆಂಡುಗಳು ಮಾತ್ರ. ಈ ಸಮಯದೊಳಗೆ ನಿಮಗೆ ಐಸ್ ಕ್ರೀಮ್ ಹುಡುಕಲು ಸಾಧ್ಯವಾಗದೇ ಇರಬಹುದು. ಆದರೆ ಐಸ್ ಕ್ರೀಮ್ ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

INSV Kaundinya: ಈ ಹಡಗಿಗೆ ಎಂಜಿನ್ನೇ ಇಲ್ಲ, ಚಲಿಸಲು ಸಾಕು ಬೀಸೋ ಗಾಳಿ! ಐಎನ್​ಎಸ್​ವಿ ಕೌಂಡಿನ್ಯ ವೈಶಿಷ್ಟ್ಯ – Kannada News | No Engine, No GPS: INSV Kaundinya Revives Ancient Indian Navigation

ನವದೆಹಲಿ, ಡಿಸೆಂಬರ್ 30: ಎಂಜಿನ್ ಇಲ್ಲ, ಜಿಪಿಎಸ್ ಇಲ್ಲ, ನಟ್ ಹಾಗೂ ಬೋಲ್ಟ್​ ಇಲ್ಲವೇ ಇಲ್ಲ, ಇದು ಚಲಿಸಲು ಬೀಸುವ ಗಾಳಿಯೇ ಸಾಕು. ಗುಜರಾತ್​ನಿಂದ ಒಮನ್​ಗೆ ಅಂತಾರಾಷ್ಟ್ರೀಯ ಪ್ರಯಾಣ ಹೊರಟ ಐಎನ್​ಎಸ್​ವಿ ಕೌಂಡಿನ್ಯ(INSV Kaundinya) ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ. ಅಜಂತಾ ಗುಹೆಗಳಲ್ಲಿ ಕಂಡುಬರುವ ವರ್ಣಚಿತ್ರಗಳನ್ನು ಆಧರಿಸಿದ 2,000 ವರ್ಷಗಳಷ್ಟು ಹಳೆಯ ತಂತ್ರಗಳನ್ನು ಬಳಸಿ ನಿರ್ಮಿಸಲಾದ ಐಎನ್‌ಎಸ್‌ವಿ ಕೌಂಡಿನ್ಯ ಪೋರಬಂದರಿನಿಂದ ಒಮನ್‌ಗೆ ಹೊರಟಿದೆ.

ತೆಂಗಿನ ಹಗ್ಗಗಳಿಂದ ಹೊಲಿಯಲಾದ ಮರದ ಹಲಗೆಗಳಿಂದ ಮಾಡಲ್ಪಟ್ಟ ಈ ಹಡಗಿನಲ್ಲಿ ಯಾವುದೇ ಮೊಳೆಗಳನ್ನು ಬಳಸಿಲ್ಲ. ಹಡಗಿನಲ್ಲಿ ಎಂಜಿನ್ ಅಥವಾ ಜಿಪಿಎಸ್ ಇಲ್ಲ. ಇದು ಚೌಕಾಕಾರದ ಹತ್ತಿ ಹಾಯಿಗಳು ಮತ್ತು ಪ್ಯಾಡಲ್‌ಗಳಿಂದ ಮಾಡಲಾಗಿದೆ.

ಸಂಪೂರ್ಣವಾಗಿ ಗಾಳಿಯಿಂದ ಚಲಿಸುವ ಹಡಗು

ಮರದ ಹಲಗೆಗಳನ್ನು ಒಟ್ಟಿಗೆ ಜೋಡಿಸಲು ಯಾವುದೇ ಮೊಳೆಗಳನ್ನು ಬಳಸಲಾಗಿಲ್ಲ. ಹಡಗು ಸಂಪೂರ್ಣವಾಗಿ ಗಾಳಿ ಚಾಲಿತವಾಗಿದ್ದು, ಬಟ್ಟೆಯ ಹಾಯಿಗಳನ್ನು ಹೊಂದಿರುತ್ತದೆ.

2 ಸಾವಿರ ವರ್ಷಗಳಷ್ಟು ಹಳೆಯ ತಂತ್ರಜ್ಞಾನ

ಈ ಹಡಗನ್ನು 2,000 ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಪೋರಬಂದರಿನಿಂದ ಓಮನ್ ಗೆ ಸಮುದ್ರ ದೂರ 1,400 ಕಿಲೋಮೀಟರ್ . ಈ ಪ್ರಯಾಣವು 15 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು 13 ನಾವಿಕರು ಮತ್ತು 3 ಅಧಿಕಾರಿಗಳಿರಲಿದ್ದಾರೆ.

‘ಕೌಂಡಿನ್ಯ’ ಎಂಬ ನಾವಿಕನ ಹೆಸರು

ಈ ಹಡಗು 65 ಅಡಿ ಉದ್ದ, 22 ಅಡಿ ಅಗಲ, 13 ಅಡಿ ಎತ್ತರ ಮತ್ತು 50 ಟನ್ ತೂಕವಿದ್ದು, ದಂತಕಥೆಯ ನಾವಿಕ ಕೌಂಡಿನ್ಯ ಅವರ ಹೆಸರನ್ನು ಇಡಲಾಗಿದ್ದು, ಇದು ಭಾರತದ ಸಹಸ್ರಮಾನಗಳ ಹಳೆಯ ಸಮುದ್ರ ವ್ಯಾಪಾರದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಿ ಮೋದಿ ಪೋಸ್ಟ್

ಈ ಯೋಜನೆಗೆ 2023 ಸಿಕ್ಕಿತ್ತು ಅನುಮೋದನೆ

ಈ ಹಡಗನ್ನು ನಿರ್ವಹಿಸುವಲ್ಲಿ ಯಾರಿಗೂ ಪ್ರಾಯೋಗಿಕ ಅನುಭವವಿಲ್ಲ. ಆದ್ದರಿಂದ, ಅದರ ಸಿಬ್ಬಂದಿ ಕಳೆದ ಹಲವಾರು ತಿಂಗಳುಗಳಿಂದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಭಾರತದ ಪ್ರಾಚೀನ ಹಡಗು ನಿರ್ಮಾಣ ಕೌಶಲ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2023 ರಲ್ಲಿ ಈ ಯೋಜನೆಯನ್ನು ಅನುಮೋದಿಸಿತು.

ಮತ್ತಷ್ಟು ಓದಿ: Indian Navy Day 2025: ಡಿಸೆಂಬರ್‌ 4 ರಂದೇ ಏಕೆ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುವುದು ಗೊತ್ತಾ?

7 ತಿಂಗಳ ಹಿಂದೆ ನೌಕಾಪಡೆಗೆ ಸೇರಿದೆ

ಗೋವಾ ಮೂಲದ ಕಂಪನಿಯೊಂದು 2,000 ವರ್ಷಗಳಷ್ಟು ಹಳೆಯದಾದ ಟ್ಯಾಂಕ್ ತಂತ್ರವನ್ನು ಬಳಸಿಕೊಂಡು ಈ ಹಡಗನ್ನು ನಿರ್ಮಿಸಿದೆ. ಐಎನ್‌ಎಸ್‌ವಿ ಕೌಂಡಿನ್ಯವನ್ನು ಏಳು ತಿಂಗಳ ಹಿಂದೆ ನೌಕಾಪಡೆಗೆ ನಿಯೋಜಿಸಲಾಯಿತು. ಐಎನ್‌ಎಸ್‌ವಿ ಕೌಂಡಿನ್ಯ ಭಾರತೀಯ ನೌಕಾಪಡೆಗೆ ನಿಯೋಜಿಸಲಾದ ವಿಶೇಷ ನೌಕಾಯಾನ ಹಡಗು.

ಪ್ರಾಚೀನ ಭಾರತದ ನೌಕಾಪಡೆಯ ಇತಿಹಾಸ

ಇದು ಪ್ರಾಚೀನ ಭಾರತದ ನೌಕಾ ಇತಿಹಾಸ ಮತ್ತು ನೌಕಾ ಕೌಶಲ್ಯವನ್ನು ಆಧರಿಸಿದೆ. ಈ ಹಡಗಿನ ವಿನ್ಯಾಸವು ಅಜಂತಾ ಗುಹೆಗಳ ಗೋಡೆ ವರ್ಣಚಿತ್ರಗಳಲ್ಲಿ ಚಿತ್ರಿಸಲಾದ 5 ನೇ ಶತಮಾನದ AD ವ್ಯಾಪಾರಿ ಹಡಗುಗಳಿಂದ ಪ್ರೇರಿತವಾಗಿದೆ. ಆಗ್ನೇಯ ಏಷ್ಯಾಕ್ಕೆ ಪ್ರಯಾಣಿಸಿ ಫ್ಯೂನಾನ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಪ್ರಾಚೀನ ಭಾರತೀಯ ನಾವಿಕ ಕೌಂಡಿನ್ಯ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಇದರಲ್ಲಿ ಮರದ ಪಟ್ಟಿಗಳನ್ನು ಮರದ ಹಲಗೆಗಳಿಗೆ ಜೋಡಿಸಲಾಗುತ್ತದೆ, ಗಂಟು ಹಾಕಲಾಗುತ್ತದೆ ಮತ್ತು ನೈಸರ್ಗಿಕ ಅಂಟುಗಳಿಂದ ಮುಚ್ಚಲಾಗುತ್ತದೆ.

ಹಡಗನ್ನು ನಿರ್ಮಿಸಿದ್ಯಾರು?

ಇದನ್ನು ಎಂ/ಎಸ್ ಹೊಡಿ ಇನ್ನೋವೇಶನ್ಸ್ (OPC) ಪ್ರೈ. ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ನೌಕಾಪಡೆಯು ಇದರ ವಿನ್ಯಾಸ ಮತ್ತು ತಾಂತ್ರಿಕ ಮೌಲ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊಡಿ ಇನ್ನೋವೇಶನ್ಸ್ ನಡುವಿನ ತಿಳಿವಳಿಕೆ ಒಪ್ಪಂದದ (MoU) ಭಾಗವಾಗಿ ಪ್ರಾರಂಭಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ

ಗಿಲ್ಲಿ ನಟ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ಅವರಿಗೆ ಗಿಲ್ಲಿ ಅಭಿಮಾನಿಗಳು ತೊಂದರೆ ಕೊಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ಸಂದರ್ಶನದಲ್ಲಿ ಗಿಲ್ಲಿಗೆ ಕೆಟ್ಟ ಶಬ್ದಗಳಲ್ಲಿ ಸತೀಶ್ ಬೈದಿದ್ದರು. ಅವರನ್ನು ಕೊಳಕ ಎಂದೆಲ್ಲ ಹೇಳಿದ್ದರು. ಇದಕ್ಕೆ ಅವರು ದಂಡ ತೆತ್ತಬೇಕಾಗಿದೆ. ಕಾರ್ಯಕ್ರಮ ಒಂದಕ್ಕೆ ಸತೀಶ್ ತೆರಳಿದ್ದರು. ಅವರ ಹೊರ ಬರುವಾಗ ಎಲ್ಲರೂ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದಾರೆ. ಅವರ ಕಾರು ಪೂರ್ತಿಯಾಗಿ ಗಿಲ್ಲಿ ಹೆಸರಿನಿಂದ ತುಂಬಿ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಶಾನ್ ಕಿಶನ್​ಗೆ ಪಂದ್ಯವಾಡದಂತೆ ಬಿಸಿಸಿಐ ಸೂಚನೆ – Kannada News | Ishan Kishan has been given rest by the BCCI team

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್​ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಹೊರಗುಳಿಯುವಿಕೆಗೆ ಮುಖ್ಯ ಕಾರಣ ಬಿಸಿಸಿಐ ಕಡೆಯಿಂದ ಬಂದ ಸೂಚನೆ.

ಹೌದು, ಇಶಾನ್ ಕಿಶನ್​ಗೆ ಎಲ್ಲಾ ಪಂದ್ಯಗಳನ್ನು ಆಡದಂತೆ ಬಿಸಿಸಿಐ ಆಯ್ಕೆ ಸಮಿತಿ ಸೂಚಿಸಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ಹಾಗೂ ಪುದುಚೇರಿ ವಿರುದ್ಧದ ಪಂದ್ಯಗಳಿಂದ ಇಶಾನ್ ಕಿಶನ್ ಹೊರಗುಳಿದಿದ್ದಾರೆ. ಅಲ್ಲದೆ ನಾಳೆ (ಡಿ.31) ನಡೆಯಲಿರುವ ತಮಿಳುನಾಡು ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.

ಇಶಾನ್ ಕಿಶನ್ ಹೊರಗುಳಿಯುತ್ತಿರುವುದೇಕೆ?

ಇಶಾನ್ ಕಿಶನ್ ಮುಂಬರುವ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ. 15 ಸದಸ್ಯರುಗಳ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿರುವ ಕಿಶನ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇತ್ತ ವಿಜಯ ಹಝಾರೆ ಟೂರ್ನಿಯಲ್ಲೂ ಆ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ.

ಇದಾಗ್ಯೂ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಯದಂತೆ ಸೂಚಿಸಲು ಮುಖ್ಯ ಕಾರಣ ಗಾಯದ ಸಮಸ್ಯೆಯಿಂದ ಹೊರಗಿಡುವುದು. ಇಶಾನ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಸತತ ಪಂದ್ಯವಾಡುತ್ತಿದ್ದಾರೆ.

ಹೀಗೆ ಸತತ ಪಂದ್ಯಗಳನ್ನಾಡುತ್ತಿರುವುದರಿಂದ ಫಿಟ್​ನೆಸ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಮುನ್ನಚ್ಚರಿಕೆಯ ಸಲುವಾಗಿ ಎಲ್ಲಾ ಪಂದ್ಯಗಳನ್ನಾಡದಂತೆ ಸೂಚಿಸಲಾಗಿದೆ.

ಹೀಗಾಗಿಯೇ ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ಇಶಾನ್ ಕಿಶನ್ ಮನೆಗೆ ತೆರಳಿದ್ದಾರೆ. ಅಲ್ಲದೆ ಜನವರಿ 3 ರಂದು ನಡೆಯಲಿರುವ ಕೇರಳ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಜಾರ್ಖಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಏಕದಿನ ತಂಡಕ್ಕೂ ಇಶಾನ್?

ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗುವ ಸಾಧ್ಯತೆಯಿದೆ. ಆಯ್ಕೆ ಸಮಿತಿಯು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಆಯ್ಕೆ ಮಾಡಲು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…

ಹೀಗಾಗಿ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಟಿ20 ತಂಡದಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಕಾರಣ ಅವರು ಕಿವೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Source link

ರೈಲ್ವೆಯ ನಿವೃತ್ತ ಉದ್ಯೋಗಿ ಸಾವು, ಮಗಳ ದೇಹದಲ್ಲಿ ಮಾಂಸವೇ ಇಲ್ಲ, ಕೇರ್​ ಟೇಕರ್ ಆಗಿ ನೇಮಕಗೊಂಡಿದ್ದವರು ಮಾಡಿದ್ದೇನು? – Kannada News | Uttar Pradesh: Elderly Man Found Dead at Home, Daughter Rescued in Critical Condition

ಮಹೋಬಾ, ಡಿಸೆಂಬರ್ 30: ಕೆಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಮಗಳು ಮಾನಸಿಕ ಅಸ್ವಸ್ಥೆ, ಏನು ಮಾಡಬೇಕೆಂದು ತೋಚದೆ ರೈಲ್ವೆಯ ನಿವೃತ್ತ ಉದ್ಯೋಗಿ ಕೇರ್ ಟೇಕರ್ ನೇಮಿಸಿಕೊಂಡಿದ್ದರು. ಅವರು ಆರೈಕೆದಾರರಾಗಿರಲಿಲ್ಲ, ಬದಲಾಗಿ ಪ್ರಾಣವನ್ನೇ ತೆಗೆಯುವ ಹಂತಕರಾಗಿದ್ದರು.

ಸುಮಾರು ಐದು ವರ್ಷಗಳ ಕಾಲ ಕೇರ್ ಟೇಕರ್ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ಹೀಗಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಮಗಳ ದೇಹದಲ್ಲಿ ಒಂದಿಷ್ಟು ಮಾಂಸವೂ ಇಲ್ಲದೆ ನಿತ್ರಾಣಳಾಗಿದ್ದಾಳೆ. ಓಂಪ್ರಕಾಶ್ ಸಿಂಗ್ ರಾಥೋಡ್ (70), ಭಾರತೀಯ ರೈಲ್ವೆಯಲ್ಲಿ ಮಾಜಿ ಹಿರಿಯ ಗುಮಾಸ್ತರಾಗಿದ್ದರು.

2016 ರಲ್ಲಿ ಅವರ ಪತ್ನಿ ನಿಧನರಾದ ನಂತರ, ಓಂಪ್ರಕಾಶ್ ಮಾನಸಿಕ ಅಸ್ವಸ್ಥೆಯಾಗಿದ್ದ 27 ವರ್ಷದ ಮಗಳು ರಶ್ಮಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಮನೆಯನ್ನು ನಿರ್ವಹಿಸಲು, ಕುಟುಂಬವು ರಾಮ್ ಪ್ರಕಾಶ್ ಕುಶ್ವಾಹ ಮತ್ತು ಅವರ ಪತ್ನಿ ರಾಮದೇವಿ ಎಂಬ ದಂಪತಿಗಳನ್ನು ಆರೈಕೆದಾರರನ್ನಾಗಿ ನೇಮಿಸಿಕೊಂಡಿತು.

ಮತ್ತಷ್ಟು ಓದಿ:ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ಮನೆಯ ಉಸ್ತುವಾರಿಗಳು ಕ್ರಮೇಣ ಮನೆಯ ಸಂಪೂರ್ಣ ನಿಯಂತ್ರಣವನ್ನು ಪಡೆದರು. ಆ ದಂಪತಿ ಓಂಪ್ರಕಾಶ್ ಮತ್ತು ರಶ್ಮಿ ಅವರನ್ನು ನೆಲ ಮಹಡಿಯ ಕೋಣೆಗಳಲ್ಲಿ ಬಂಧಿಸಿ, ಮೇಲಿನ ಭಾಗವನ್ನು ತಾವೇ ಆಕ್ರಮಿಸಿಕೊಂಡು ಆರಾಮವಾಗಿ ವಾಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಓಂಪ್ರಕಾಶ್ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಸೋಮವಾರ ಈ ದೌರ್ಜನ್ಯ ಬೆಳಕಿಗೆ ಬಂದಿತು. ಸಂಬಂಧಿಕರು ಮನೆಗೆ ತಲುಪಿದಾಗ, ಅವರಿಗೆ ಆತಂಕಕಾರಿ ದೃಶ್ಯಗಳು ಎದುರಾಗಿದ್ದವು. ಓಂಪ್ರಕಾಶ್ ಅವರ ದೇಹವು ಅತ್ಯಂತ ದುರ್ಬಲವಾಗಿದ್ದು, ದೀರ್ಘಕಾಲದ ನಿರ್ಲಕ್ಷ್ಯದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವಿವರಿಸಲಾಗಿದೆ. ರಶ್ಮಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ, ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಹಸಿವಿನಿಂದಾಗಿ ರಶ್ಮಿ ಅಸ್ಥಿಪಂಜರದ ಸ್ಥಿತಿಗೆ ತಲುಪಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ಯಾವುದೇ ಮಾಂಸ ಉಳಿದಿರಲಿಲ್ಲ ಕೇವಲ ಒಂದು ಅಸ್ಥಿಪಂಜರದ ಚೌಕಟ್ಟು ಮಾತ್ರ ಉಳಿದಿತ್ತು. ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಘಟನೆಯಿಂದ ತಾವು ದಿಗ್ಭ್ರಮೆಗೊಂಡಿದ್ದೇವೆ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಓಂಪ್ರಕಾಶ್ ಅವರನ್ನು ಒಳ್ಳೆಯ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆ. ರಶ್ಮಿ ಈಗ ಕುಟುಂಬ ಸದಸ್ಯರ ಆರೈಕೆಯಲ್ಲಿದ್ದಾರೆ, ಅವರು ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ – Kannada News | Rakshitha Shetty Is the reason for Malu Elimination In bigg Boss Says Spandana Somanna

ಬಿಗ್ ಬಾಸ್ ಮನೆಯಿಂದ ಕಳೆದ ವಾರ ಮಾಳು ಅವರು ಎಲಿಮಿನೇಟ್ ಆಗಿದ್ದಾರೆ. ಮಾಳು ದೊಡ್ಮನೆಯಿಂದ ಹೊರ ಹೋಗಲು ರಕ್ಷಿತಾ ಕಾರಣ ಎಂದು ಸ್ಪಂದನಾ ಆರೋಪಿಸಿದ್ದಾರೆ. ಸ್ಪಂದನಾ ಅವರಿಂಗಿಂತ ಮಾಳು ಉತ್ತಮವಾಗಿದ್ದರು ಎಂದು ಎಕ್ಷಿತಾ ಹೇಳಿದರು. ಇದಕ್ಕೆ ಕೌಂಟರ್ ಕೊಡುವಾಗ ಸ್ಪಂದನಾ ಈ ಆರೋಪ ಮಾಡಿದ್ದಾರೆ. ಈ ಸಂದರ್ಭದ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿಯ ಆ ಒಂದು ಡೈಲಾಗ್​​ನಿಂದ ಸಹನಾ ಶೆಟ್ಟಿಗೆ ಸಿಕ್ತು ಮತ್ತಷ್ಟು ಜನಪ್ರಿಯತೆ; ಧನ್ಯವಾದ ಹೇಳಿದ ಮೋನಿಕಾ – Kannada News | Sahana Shetty and Gilli Viral: Big Boss Kannada 12 Boosts Gauri Kalyana Serial Buzz

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಭಾನುವಾರದ ಎಪಿಸೋಡ್ ಭರ್ಜರಿ ಗಮನ ಸೆಳೆಯಿತು. ಕಲರ್ಸ್ ಕನ್ನಡದಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿ ಶೀಘ್ರವೇ ಪ್ರಸಾರ ಕಾಣಲಿದೆ. ಈ ಧಾರಾವಾಹಿ ತಂಡ ಬಿಗ್ ಬಾಸ್ ಮನೆಗೆ ಪ್ರವೇಶಿಸಿತ್ತು. ಈ ಧಾರಾವಾಹಿಯಲ್ಲಿ ಮೋನಿಕಾ ಪಾತ್ರದಲ್ಲಿ ಸಹನಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಹಾಗೂ ಗಿಲ್ಲಿ ಮಧ್ಯೆ ನಡೆದ ಸಂಭಾಷಣೆಗಳು ಸಾಕಷ್ಟು ವೈರಲ್ ಆಗುತ್ತಿವೆ. ಸಹನಾ ಶೆಟ್ಟಿ ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಅವರು ಗಿಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಹನಾ ಶೆಟ್ಟಿ ಅವರು ‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ಮೋನಿಕಾ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಮೋನಿಕಾನ ಇಂಪ್ರೆಸ್ ಮಾಡಬೇಕು ಎಂಬ ಟಾಸ್ಕ್​ ಗಿಲ್ಲಿಗೆ ನೀಡಲಾಯಿತು. ಈ ವೇಳೆ ಗಿಲ್ಲಿ ಅವರು ಬಂದು, ‘ನನ್ನ ಬಳಿ ಫ್ಲ್ಯಾಟ್ ಇದೆ, ಜಾಗ ಇದೆ’ ಎಂದೆಲ್ಲ ಹೇಳಿದರು. ಕೊನೆಗೆ ಇದ್ಯಾವುದೂ ತಮ್ಮ ಹೆಸರಲ್ಲಿ ಇಲ್ಲ ಎಂದು ಉಲ್ಲೇಖಿಸಿದರು. ಆ ಬಳಿಕ ಮೋನಿಕಾಗೋಸ್ಕರ ಒಂದು ಕವನ ಬರೆದರು ಗಿಲ್ಲಿ.

‘ಮೋನಿಕಾ, ಬೇಡ ನಿನನಗೆ ಆತಂಕ, ಜೊತೆಗೆ ಇರ್ತೀನಿ ಕೊನೆ ತನಕ’ ಎಂದರು ಗಿಲ್ಲಿ. ಇದಕ್ಕೆ ಅವರ ತಾಯಿ ಪಾತ್ರಧಾರಿ, ‘ನಾನು ಇಂಪ್ರೆಸ್ ಆಗಿಲ್ಲ’ ಎಂದರು. ಆಗ ಮೋನಿಕಾ ಪಾತ್ರಧಾರಿ ಸಹನಾ ಶೆಟ್ಟಿ, ‘ನಾನು ಇಂಪ್ರೆಸ್ ಆದೆ ಅಮ್ಮ’ ಎಂದಿದ್ದಾರೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದೆ. ಟ್ರೋಲ್​ ಪೇಜ್​​ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಮೋನಿಕಾ ಕ್ಯೂಟ್​​ನೆಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇದೆ. ಇದರಿಂದ ಸಹನಾ ಶೆಟ್ಟಿ ಅವರ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾವಿರಾರು ಸಂಖ್ಯೆಯ ಹಿಂಬಾಲಕರು ಅವರ ಖಾತೆಯನ್ನು ಫಾಲೋ ಮಾಡೋಕೆ ಆರಂಭಿಸಿದ್ದಾರೆ. ‘ಗಿಲ್ಲಿ ಬಾಯ್ಸ್, ನಿಮಗೆ ಧನ್ಯವಾದ’ ಎಂದು ಸಹನಾ ಶೆಟ್ಟಿ ಹೊಸ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಕಮೆಂಟ್ ಬಾಕ್ಸ್​ ಅಲ್ಲಿ ‘ಗಿಲ್ಲಿ ಗಿಲ್ಲಿ’ ಎಂಬ ಕಮೆಂಟ್​​ಗಳು ತುಂಬಿ ಹೋಗಿವೆ.

ಇದನ್ನೂ ಓದಿ: ಎಲಿಮಿನೇಷನ್​ನಿಂದ ಉ.ಕರ್ನಾಟಕ ಅಳ್ತಿದೆ ಎಂದ ಮಾಳುಗೆ ಅವರದ್ದೇ ಭಾಷೆಯಲ್ಲಿ ಬಂತು ಖಡಕ್ ಉತ್ತರ

ಸದ್ಯ ‘ಗೌರಿ ಕಲ್ಯಾಣ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಈ ಧಾರಾವಾಹಿ ಪ್ರಸಾರ ಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಕಷ್ಟಕ್ಕೆ ಸಿಲುಕಿಸಿದ ಪರಪುರುಷನ ಸಹವಾಸ: ಬ್ಲ್ಯಾಕ್​​ಮೇಲ್​ಗೆ ಹೆದರಿ ಪುಟ್ಟ ಮಗನ ಜತೆ ಮಹಿಳೆ ಆತ್ಮಹತ್ಯೆ – Kannada News | Mother and Son body Found Dead in Tumakuru Lake: Blackmail Allegation Emerges in Kallambella Case

ತುಮಕೂರು, ಡಿಸೆಂಬರ್ 29: ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ತಾಯಿ–ಮಗ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೀಗ ಸ್ಫೋಟಕ ತಿರುವು ದೊರೆತಿದೆ. ಮಹಿಳೆ ಪರ ಪುರುಷನ ಸಹವಾಸ ಮಾಡಿದ್ದೇ ಆಕೆಗೆ ಮುಳುವಾಗಿದೆ ಎಂಬುದು ತಿಳಿದುಬಂದಿದೆ. ದೂರವಾಣಿ ಸಂಭಾಷಣೆ, ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಮಹಿಳೆ ಸಾವಿನ ಮೊರೆ ಹೋಗಿರುವುದು ಬಹಿರಂಗವಾಗಿದೆ.

ಮೃತರನ್ನು ಹಂಸಲೇಖ (32) ಹಾಗೂ ಆಕೆಯ 8 ವರ್ಷದ ಪುತ್ರ ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಎಂಬಾತನೊಂದಿಗೆ ಹಂಸಲೇಖ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಆತ ತನ್ನ ಬಳಿ ಇರುವ ಸಂಭಾಷಣೆಗಳು ಮತ್ತು ವಿಡಿಯೋಗಳನ್ನು ಆಧಾರವಾಗಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭಯಗೊಂಡ ಹಂಸಲೇಖ, ಮಗನೊಂದಿಗೆ ಮನೆ ತೊರೆದು ಶುಕ್ರವಾರ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಳು.

ಶನಿವಾರ ಬೆಳಗ್ಗೆ ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ–ಮಗ ಇಬ್ಬರೂ ನೀರಿಗೆ ಹಾರಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಈ ಪ್ರಕರಣದ ಹಿನ್ನೆಲೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಬ್ಲ್ಯಾಕ್‌ಮೇಲ್ ಆರೋಪದ ಕುರಿತು ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಹಂಸಲೇಖ ಭೂಪಸಂದ್ರ ಗ್ರಾಮದ ನಾಗೇಶ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಕೆಲವು ವರ್ಷಗಳ ಹಿಂದೆ ಹಂಸಲೇಖ ಪತಿ ನಾಗೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. 3 ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್​ ಜತೆ ಹಂಸಲೇಖಗೆ ಮದುವೆ ಮಾಡಲಾಗಿತ್ತು. ಆದಾಗ್ಯೂ ಪರ ಪುರುಷನ ಸಹವಾಸ ಮಾಡಿದ್ದು, ಮುಳುವಾಗಿದೆ. ಪರಿಣಾಮವಾಗಿ ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಕಳಪೆ ಏರ್ ಕ್ವಾಲಿಟಿ – Kannada News | Bangalore Air Pollution Crisis: Bengaluru and surrounding places face severe Air pollution

ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಕಳಪೆ ಏರ್ ಕ್ವಾಲಿಟಿ

ಬೆಂಗಳೂರು, ಡಿಸೆಂಬರ್ 30: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ವಾಯು ಗುಣಮಟ್ಟ (Bengaluru Air Quality) ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 174 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 88 ಇದ್ದರೆ, PM10 124 ಇದೆ.

ಎಲ್ಲೆಲ್ಲಿ ಏರ್ ಕ್ವಾಲಿಟಿ ಕುಸಿತ?

ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಅರೆಕೆರೆ-179, ಬಾಪೂಜಿ ನಗರ-171, ಬ್ರಿಗೇಡ್ ರೋಡ್-179, ಬ್ರೂಕ್ ಫೀಲ್ಡ್- 179, BTM ಲೇಔಟ್- 168, ಹೆಬ್ಬಾಳ- 173 , ಜಯನಗರ-175, ಕೋರಮಂಗಲ-172, ಸಿಲ್ಕ್ ಬೋರ್ಡ್-168​, ತಾವರೆಕೆರೆ-170, ವೈಟ್​ಫೀಲ್ಡ್- 189 ಇದ್ದು, ಇಷ್ಟು ಹದಗೆಟ್ಟ ಏರ್ ಕ್ವಾಲಿಟಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ.

ಸೂಕ್ಷ್ಮಕಣಗಳಿಂದಲೂ ಬರುತ್ತೆ ಶ್ವಾಸಕೋಶದ ತೊಂದರೆ

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –173
  • ಮಂಗಳೂರು-136
  • ಮೈಸೂರು – 174
  • ಬೆಳಗಾವಿ – 142
  • ಕಲಬುರ್ಗಿ – 107
  • ಶಿವಮೊಗ್ಗ – 73
  • ಬಳ್ಳಾರಿ – 185
  • ಹುಬ್ಬಳ್ಳಿ- 96
  • ಉಡುಪಿ –110
  • ವಿಜಯಪುರ –117

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version