ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯಿಲ್ಲ, ಡಿಎಂಕೆ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ; ಕಾಂಗ್ರೆಸ್ಗೆ ಸಿಎಂ ಸ್ಟಾಲಿನ್ ಸಂದೇಶ – Kannada News | No Power sharing in Tamil Nadu CM MK Stalin’s message to ally Congress ahead of election
ಚೆನ್ನೈ, ಫೆಬ್ರವರಿ 11: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಡಿಎಂಕೆ ಸ್ವಂತವಾಗಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಿತ್ರಪಕ್ಷಗಳ ನಡುವಿನ ಬಿರುಕು ಬಗ್ಗೆ ಗುಸುಗುಸು ಕೇಳಿಬರುತ್ತಿರುವ ನಡುವೆಯೂ 2026ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ತಾವು ರಾಹುಲ್ ಗಾಂಧಿಯೊಂದಿಗೆ ಸಹೋದರ ಬಾಂಧವ್ಯ ಹೊಂದಿರುವುದಾಗಿ ಹೇಳಿದ್ದಾರೆ. ಆದರೆ ಡಿಎಂಕೆ ತನ್ನದೇ ಆದ ಸರ್ಕಾರವನ್ನು ರಚಿಸುತ್ತದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ಡಿಎಂಕೆ ಪಕ್ಷವು 2021ಕ್ಕಿಂತ ಇನ್ನೂ ಹೆಚ್ಚಿನ ಮುನ್ನಡೆ ಸಾಧಿಸುವ ವಿಶ್ವಾಸ…