ಚಳಿಗಾಲದಲ್ಲಿ ಸೈನಸ್ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣವೇನು? ತಡೆಯಲು ಈ ರೀತಿ ಮಾಡಿ – Kannada News | Sinusitis in Winter: How to Prevent and Manage Symptoms

ಚಳಿಗಾಲದಲ್ಲಿ (Winter), ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಬಹಳ ಸಾಮಾನ್ಯ. ಅದರಲ್ಲಿ ಸೈನಸ್ (Sinusitis) ಕೂಡ ಒಂದು. ಇದು ಒಬ್ಬ ವ್ಯಕ್ತಿಗೆ ಬಹಳಷ್ಟು ಕಿರಿಕಿರಿ ಉಂಟುಮಾಡಬಹುದು. ಅಷ್ಟೇ ಅಲ್ಲ, ನಿರಂತರ ಶೀತ, ಜ್ವರ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೆಲ್ಲದರ ಜೊತೆಗೆ ಚಳಿಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ, ಸಣ್ಣ ನಿರ್ಲಕ್ಷ್ಯವೂ ಕೂಡ ಶೀತ ಅಥವಾ ಜ್ವರ ಸೈನುಟಿಸ್ ಅಥವಾ ಕಿವಿ ಸೋಂಕಾಗಿ ಬದಲಾಗಬಹುದು. ಸಮಯಕ್ಕೆ ಸರಿಯಾಗಿ ಮದ್ದು ಮಾಡದಿದ್ದರೆ ಅದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಸೈನಸ್ ಕಂಡುಬರುವುದಕ್ಕೆ ಕಾರಣವೇನು, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿಯುವುದು ಬಹಳ ಅನಿವಾರ್ಯವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಮೂಗಿನಲ್ಲಿರುವ ಲೋಳೆಯಿಂತಿರುವ ಪೊರೆ ಒಣಗಿ, ಸೈನಸ್‌ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚಿನವರು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ, ಆದರೆ ಅನೇಕರಲ್ಲಿ ಇದು ಕಿವಿ ಸಂಬಂಧಿತ ಸೋಂಕಿಗೆ ಕಾರಣವಾಗಬಹುದು ಮತ್ತು ಮೂಗಿನಲ್ಲಿ ಪೊರೆಗಳು ಸಂಗ್ರಹವಾಗಲು ಕಾರಣವಾಗಬಹುದು. ಮೂಗಿನ ಮಾರ್ಗದಲ್ಲಿ ಲೋಳೆಯ ಸಂಗ್ರಹವಾದಲ್ಲಿ ಅದು ಪೊರೆಯಂತಹ ಪದರವನ್ನು ರೂಪಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು.

ಯಾರಲ್ಲಿ ಈ ಸಮಸ್ಯೆ ಕಂಡುಬರುತ್ತದೆ?

ಸೈನಸ್ ಸಮಸ್ಯೆಗಳಿಂದ ಪದೇ ಪದೇ ಬಳಲುತ್ತಿರುವವರು ಚಳಿಗಾಲದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇದರ ಜೊತೆಗೆ, ಅಲರ್ಜಿ, ಅಸ್ತಮಾ ಅಥವಾ ಆಗಾಗ ಶೀತದಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ, ಧೂಮಪಾನ ಮಾಡುವವರಲ್ಲಿ ಈ ಅಪಾಯ ಹೆಚ್ಚಾಗಬಹುದು. ಏಕೆಂದರೆ ಹೊಗೆ ಮೂಗಿನ ಒಳಪದರವನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ: ಪದೇ ಪದೇ ಶೀತವಾಗುತ್ತಾ, ಕೆಮ್ಮು ಒಮ್ಮೆ ಶುರುವಾದರೆ ಕಡಿಮೆನೇ ಆಗ್ತಾ ಇಲ್ವಾ? ಇದಕ್ಕೆ ಕಾರಣ ಏನು ಗೊತ್ತಾ?

ಸೈನಸ್ ಸಮಸ್ಯೆಯನ್ನು ತಡೆಯುವುದು ಹೇಗೆ?

  • ಹೊರಗಡೆ ಹೋಗುವಾಗ ಗಾಳಿ ಇದ್ದಲ್ಲಿ ಮೂಗು ಮತ್ತು ಕಿವಿಯನ್ನು ಮುಚ್ಚಿಕೊಳ್ಳುವ ಮೂಲಕ ಬೆಚ್ಚಗಿಟ್ಟುಕೊಳ್ಳಿ.
  • ಲೋಳೆಯು ತೆಳುವಾಗಿಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಧೂಳು ಇತ್ಯಾದಿ ಅಲರ್ಜಿ ಉಂಟುಮಾಡುವ ಅಂಶಗಳಿಂದ ದೂರವಿರಿ.
  • ಮೂಗಿನ ದಟ್ಟಣೆ, ಕಿವಿ ನೋವು ಅಥವಾ ತಲೆತಿರುಗುವಿಕೆ ಕೆಲವು ದಿನಗಳವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Supreme Court Recruitment 2026: ಸುಪ್ರೀಂ ಕೋರ್ಟ್​​ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ – Kannada News | Supreme court law clerk recruitment 2026 apply for 90 posts by feb 7

ಸುಪ್ರೀಂ ಕೋರ್ಟ್ 90 ಕಾನೂನು ಗುಮಾಸ್ತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಯು ಕಾನೂನು ಜ್ಞಾನದಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವುದಲ್ಲದೆ, ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯೊಂದಿಗೆ ಕೆಲಸ ಮಾಡುವ ಪ್ರಾಯೋಗಿಕ ಅನುಭವವನ್ನು ಸಹ ನೀಡುತ್ತದೆ. ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಗಡುವಿನೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ದಿನಾಂಕ:

ಈ ಸುಪ್ರೀಂ ಕೋರ್ಟ್ ನೇಮಕಾತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 20 ರಂದು ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ಫೆಬ್ರವರಿ 7 ರವರೆಗೆ ಅರ್ಜಿ ಸಲ್ಲಿಸಬಹುದು. ಇದರ ನಂತರ, ಮಾರ್ಚ್ 7 ರಂದು ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯ ಮಾದರಿ ಉತ್ತರದ ಕೀಲಿಯನ್ನು ಮಾರ್ಚ್ 8 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅಭ್ಯರ್ಥಿಗಳು ಮಾರ್ಚ್ 9 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ.

ಅರ್ಹತಾ ಮಾನದಂಡ:

ಅರ್ಹತಾ ಮಾನದಂಡಗಳಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಾನೂನಿನಲ್ಲಿ ಪದವಿ ಸೇರಿದೆ. ಇದರಲ್ಲಿ ಐದು ವರ್ಷಗಳ ಇಂಟಿಗ್ರೇಟೆಡ್ ಲಾ ಕೋರ್ಸ್ ಮತ್ತು ಮೂರು ವರ್ಷಗಳ ಎಲ್‌ಎಲ್‌ಬಿ ಎರಡೂ ಸೇರಿವೆ. ಹೆಚ್ಚುವರಿಯಾಗಿ, ಐದು ವರ್ಷಗಳ ಕೋರ್ಸ್‌ನ ಅಂತಿಮ ವರ್ಷ ಅಥವಾ ಮೂರು ವರ್ಷಗಳ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಆಯ್ಕೆಯಾದರೆ, ನೇಮಕಗೊಳ್ಳುವ ಮೊದಲು ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ಪುರಾವೆಯನ್ನು ಒದಗಿಸಬೇಕಾಗುತ್ತದೆ.

ವಯಸ್ಸಿನ ಮಿತಿ:

ವಯಸ್ಸಿನ ಮಿತಿಯ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 32 ವರ್ಷಗಳು ಆಗಿರಬೇಕು, ಇದನ್ನು ಫೆಬ್ರವರಿ 7, 2026 ರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳು ಅರ್ಜಿ ಶುಲ್ಕ 750 ರೂ. ಜೊತೆಗೆ ಅನ್ವಯವಾಗುವ ಬ್ಯಾಂಕ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಈ ಪಾವತಿಯನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು!

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಗೆ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಮೊದಲ ಹಂತವು ಬಹು ಆಯ್ಕೆಯ ಪ್ರಶ್ನೆ ಪರೀಕ್ಷೆಯಾಗಿದ್ದು, ಇದು ಅಭ್ಯರ್ಥಿಯ ಕಾನೂನಿನ ತಿಳುವಳಿಕೆ, ಅದರ ಪ್ರಾಯೋಗಿಕ ಅನ್ವಯಿಕೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ. ಎರಡನೇ ಹಂತವು ವಿವರಣಾತ್ಮಕ ಲಿಖಿತ ಪರೀಕ್ಷೆಯಾಗಿದ್ದು, ಇದು ಬರವಣಿಗೆಯ ಸಾಮರ್ಥ್ಯ ಮತ್ತು ವಿಶ್ಲೇಷಣಾತ್ಮಕ ಚಿಂತನೆಯನ್ನು ನಿರ್ಣಯಿಸುತ್ತದೆ. ಮೂರನೇ ಮತ್ತು ಅಂತಿಮ ಹಂತವು ಸಂದರ್ಶನವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ sci.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವ ಮೊದಲು ನೀವು ಎಲ್ಲಾ ಮಾರ್ಗಸೂಚಿಗಳು, ಅರ್ಹತಾ ಅವಶ್ಯಕತೆಗಳು ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಎಚ್ಚರಿಕೆಯಿಂದ ಓದಬೇಕೆಂದು ಶಿಫಾರಸು ಮಾಡಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ – Kannada News | Belagavi Wife Murder: Husband’s Brutal Torture Exposed After Cover Up Attempt

ಮೃತ ಕಿರಣಾ ಮತ್ತು ಆರೋಪಿ ಅವಿನಾಶ್​​

ಬೆಳಗಾವಿ, ಜನವರಿ 22: ಪತ್ನಿ ಶೀಲದ ಮೆಲೆ ಶಂಕಿಸಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪತ್ತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣಾ ಮೃತ ಮಹಿಳೆಯಾಗಿದ್ದು, ಆರೋಪಿ ಅವಿನಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಮರ್ಡರ್​​ ಮಾಡಿ ಬಳಿಕ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ ಅವಿನಾಶ್​​, ಹೃದಯಾಘಾತದಿಂದ ಕಿರಣಾ ಮೃತಪಟ್ಟಿರೋದಾಗಿ ಎಲ್ಲರನ್ನ ನಂಬಿಸಿದ್ದ. ಆದ್ರೆ ಮೃತದೇಹದ ಸ್ನಾನ ಮಾಡಿಸುವ ವೇಳೆ ಅಸಲೀ ಸತ್ಯ ರಿವೀಲ್​​ ಆಗಿದೆ.

ಅವಿನಾಶ್​​ ಮತ್ತು ಕಿರಣಾ ದಂಪತಿ ಗ್ರಾಮದಲ್ಲಿ ಅಂಗಡಿ ಹೊಂದಿದ್ದು, ಅದುವೇ ಜೀವನಕ್ಕೆ ಪ್ರಮುಖ ಆಧಾರವಾಗಿತ್ತು. ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಅನ್ಯೋನ್ಯವಾಗಿದ್ದು, ಇಬ್ಬರು ಮುದ್ದಾದ ಮಕ್ಕಳು ಕೂಡ ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಕೆಲ ತಿಂಗಳುಗಳಿಂದ ಅವಿನಾಶ್​​ ಮನಸ್ಸಿನಲ್ಲಿ ಪತ್ನಿಯ ಬಗ್ಗೆ ಸಂಶಯ ಮೂಡಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು. ಅಂಗಡಿ ಅಂದಮೇಲೆ ಜನ ಬರೋದು ಹೋಗೋದು ಸಾಮಾನ್ಯ. ಆದರೆ ಇದನ್ನೇ ದೊಡ್ಡದು ಮಾಡಿ ಅವಿನಾಶ್​​ ಜಗಳವಾಡುತ್ತಿದ್ದ. ಎರಡು ದಿನ ಹಿಂದೆ ಇದೇ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದ. ಈ ವೇಳೆ ಅಲ್ಲಿಗೆ ಬಂದ ಕುಟುಂಬದ ಹಿರಿಯರು ದಂಪತಿ ಸಮಾಧಾನ ಮಾಡಿ ಹೋಗಿದ್ರು. ಹಿರಿಯರು ಹೋದ ಬಳಿಕ ಮೊನ್ನೆ ಮಧ್ಯರಾತ್ರಿ ಕಿರಣಾಳ ಮೇಲೆ ಪತಿ ತೀವ್ರವಾಗಿ ಹಲ್ಲೆ ಮಾಡಿದ್ದು, ಈ ವೇಳೆ ಆಕೆ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ: ಧಾರವಾಡ ಝಕಿಯಾ ಮುಲ್ಲಾ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್; ಮದ್ವೆ ಆಗಬೇಕಿದ್ದವನೇ ಹಂತಕ!

ಆಕೆ ಸಾಯುತ್ತಿದ್ದಂತೆ ಮೃತ ದೇಹವನ್ನುತೆ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದ ಅವಿನಾಶ್​​, ಬಳಿಕ ಮತ್ತೆ ಊರಿಗೆ  ಶವ ತಂದು ಪತ್ನಿ ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ಬಿಂಬಿಸಿದ್ದಾನೆ. ಈ ವೇಳೆ ಮಹಿಳೆಯರು ಶವಕ್ಕೆ ಸ್ನಾನ ಮಾಡಿಸಬೇಕು ಅಂತಾ ಬಟ್ಟೆ ತೆಗೆದಾಗ ಪಾಪಿ ಗಂಡನ ಕ್ರೌರ್ಯ ಬಯಲಾಗಿದೆ. ಕಿರಣಾ ಮೈ ತುಂಬ ಬಾಸುಂಡೆ ಬಂದಿದ್ದು, ಕಪ್ಪು ಕಲೆ ಕಂಡು ಮಹಿಳೆಯರು ಶಾಕ್​​ ಆಗಿದ್ದಾರೆ. ಬಳಿಕ ಗಂಡನೇ ಹೊಡೆದು ಪತ್ನಿಯನ್ನು ಕೊಂದಿದ್ದಾನೆ ಎಂದು ನಂದಗಡ ಠಾಣೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಪತಿಯಲ್ಲ ರಾಕ್ಷಸ!

ಕಿರಣಾಳ ಜೊತೆ ಪತಿ ಅವಿನಾಶ್​​ ರಾಕ್ಷಸೀಯ ವರ್ತನೆ ತೋರಿದ್ದು, ವಿದ್ಯುತ್ ಶಾಕ್ ಕೊಟ್ಟಿದ್ದಾನೆ. ಸಾಲದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದಾನೆ. ಮಕ್ಕಳ ಮುಂದೆಯೇ ಆಕೆಯನ್ನು ಬೆತ್ತಲೆ ಮಾಡಿ ಹಿಂಸೆ ಕೊಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕಿರಣಾ ಮೃತದೇಹವನ್ನು ಬೆಳಗಾವಿ ಬೀಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದರ ಪ್ರಾಥಮಿಕ ವರದಿಯಲ್ಲಿಯೂ ಕೊಲೆ ಎಂಬುದು ದೃಢವಾಗಿದೆ. ವಿಚಾರಣೆ ವೇಳೆ ಪತ್ನಿಯನ್ನು ಕೊಲೆಗೈದ ಬಗ್ಗೆ ಅವಿನಾಶ್​​ ಕೂಡ ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಅಮ್ಮ ಮೃತಪಟ್ಟರೆ ಇತ್ತ ಅಪ್ಪ ಜೈಲಿಗೆ ಹೋಗಿದ್ದರಿಂದ ದಂಪತಿಯ ಇಬ್ಬರು ಮಕ್ಕಳೀಗ ಅನಾಥವಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ: ನಿಧಿ ಕೊಟ್ಟಿದ್ದಕ್ಕೆ ಸೈಟ್, ರಿತ್ತಿ ಕುಟುಂಬ ಫುಲ್ ಖುಷ್ – Kannada News | Lakkundi Gram Panchayat Announces 30 40 Site to Ritti family for Gold treasure handed over to Governmnet

ಗದಗ, (ಜನವರಿ 22): ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯಿತಿ (Lakkundi Gram Panchayat) ಬೆಲೆ ನೀಡಿದೆ. ಹೌದು…ಲಕ್ಕುಂಡಿ ಗ್ರಾಮದಲ್ಲಿ ರಿತ್ತಿ ಕುಟುಂಬ ಮನೆಯ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಸಿಕ್ಕಿದ್ದು, ಕೂಡಲೇ ಪ್ರಜ್ವಲ್ ಎನ್ನುವ ಬಾಲಕ ಅದನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮೆರೆದಿದ್ದಾನೆ. ಇದೀಗ ಈ ಪ್ರಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯಿತಿ ರಿತ್ತಿ ಕುಟುಂಬಕ್ಕೆ ಸೈಟ್ ನೀಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ರಿತ್ತಿ ಕುಟುಂಭಕ್ಕೆ 30 ಬೈ 40 ಅಳತೆಯ ಜಾಗ ನೀಡಲು ತೀರ್ಮಾನಿಸಿದೆ. ಇದಕ್ಕೆ ರಿತ್ತಿ ಕುಟುಂಬ ಫುಲ್ ಖುಷ್ ಆಗಿದ್ದು, ಆ ಸಂತೋಷನ್ನು ಟಿವಿ9 ಮೂಲಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಲಕ್ಕುಂಡಿ: ಸಿಕ್ಕ ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ್ದ ಕುಟುಂಬಕ್ಕೆ ಬಂಪರ್ ಗಿಫ್ಟ್​,!

Source link

ಗಿಲ್ಲಿ ಮತ್ತು ಸಿದ್ದರಾಮಯ್ಯ ನಡುವೆ ನಡೆದ ಮಾತುಕತೆ ಬಲು ಮಜಾ – Kannada News | Bigg Boss winner Gilli met Siddaramaiah had nice conversation

ಗಿಲ್ಲಿ ನಟ (Gilli Nata) ಅದ್ಧೂರಿಯಾಗಿ ಬಿಗ್​​ಬಾಸ್ ಗೆದ್ದಿದ್ದಾರೆ. ಬಿಗ್​​ಬಾಸ್ ಕನ್ನಡದ ಇತಿಹಾಸದಲ್ಲೇ ಯಾರೂ ಪಡೆಯದಷ್ಟು ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಬಿಗ್​​ಬಾಸ್ ದೆಸೆಯಿಂದ ಗಿಲ್ಲಿಗೆ ರಾಜ್ಯದಾದ್ಯಂತ ಅಭಿಮಾನಿಗಳಾಗಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲ ಜನ ಮುಗಿಬೀಳುತ್ತಿದ್ದಾರೆ. ಗಿಲ್ಲಿ ಸಹ ಗೆದ್ದು ಬಂದ ಬಳಿಕ ಚಿತ್ರರಂಗದ ಹಿರಿಯರು, ರಾಜ್ಯದ ಹಿರಿಯರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಮೊದಲಿಗೆ ಸುದೀಪ್ ಬಳಿಕ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಗಿಲ್ಲಿ ನಟ, ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಹಾಗೂ ಗಿಲ್ಲಿ ನಡುವೆ ನಡೆದ ಮಾತುಕತೆ ಬಲು ಮಜವಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಭೇಟಿಯಾಗಿ ಗಿಲ್ಲಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಅಲ್ಲಿದ್ದ ಕೆಲವರು ಗಿಲ್ಲಿಯ ಪರಿಚಯವನ್ನು ಸಿದ್ದರಾಮಯ್ಯ ಅವರಿಗೆ ಮಾಡಿಕೊಟ್ಟು, ಮಳವಳ್ಳಿಯವನು ಎಂದಿದ್ದಾರೆ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು, ‘ಓಹ್ ಶಿವಣ್ಣನ ಊರಿನವನಾ?’ ಎಂದಿದ್ದಾರೆ. ಸಿದ್ದರಾಮಯ್ಯ ಅವರು ರಾಜಕೀಯ ಮುಖಂಡ ಮಳವಳ್ಳಿ ಶಿವಣ್ಣ ಬಗ್ಗೆ ಗಿಲ್ಲಿಯಲ್ಲಿ ವಿಚಾರಿಸಿದರು. ‘ಶಿವಣ್ಣ ಊರಿನಲ್ಲಿ ಇಲ್ಲ ಅನಿಸುತ್ತೆ, ಬರ್ತಿರ್ತಾರಾ ಊರು ಕಡೆಗೆ?’ ಎಂದು ಕೇಳಿದರು ಸಿಎಂ. ಅದಕ್ಕೆ ಗಿಲ್ಲಿ, ‘ಹೌದಣ್ಣ, ಆಗಾಗ ಬರ್ತಿರ್ತಾರೆ’ ಎಂದರು.

ಬಳಿಕ ಅಲ್ಲಿದ್ದ ಕೆಲವರು, ‘50 ಲಕ್ಷ ಕೊಟ್ಟಿದ್ದಾರೆ ಬಹುಮಾನ’ ಎಂದರು. ಇನ್ನೊಬ್ಬರು ಕಾರು ಸಹ ಕೊಟ್ಟವ್ರೆ ಎಂದರು. ಇನ್ನೊಬ್ಬರು ಶರವಣ 20 ಲಕ್ಷ ಕೊಟ್ಟರು ಎಂದರು. ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಓಹ್ ಶರವಣನೂ ಕೊಟ್ರ ಎಂದರು. ಅದಕ್ಕೆ ಗಿಲ್ಲಿ, ಅವರು ರನ್ನರ್ ಅಪ್​​ಗೆ ಅಂದರೆ ಸೆಕೆಂಡ್ ಬಂದವರಿಗೆ ಕೊಟ್ರು ಸಾರ್ ಎಂದರು. ಬಳಿಕ ಅಲ್ಲೇ ಇದ್ದ ಭೈರತಿ ಸುರೇಶ್ ಅವರು, ಸುದೀಪ್ ಅವರು 10 ಕೊಟ್ಟಿರಬೇಕು ಅಲ್ವ ಎಂದರು, ಗಿಲ್ಲಿ ಹೌದೆಂದರು.

ಇದನ್ನೂ ಓದಿ:ಫ್ಯಾನ್ಸ್​​ಗೆ ಧನ್ಯವಾದ ಅರ್ಪಿಸಿದ ಗಿಲ್ಲಿ ನಟ

ಬಳಿಕ ಸಿದ್ದರಾಮಯ್ಯ ಅವರು, ‘ನಿಮ್ಮ ತಂದೆ ತಾಯಿ ಏನು ಮಾಡ್ತಾರೆ? ಎಂದರು ಅದಕ್ಕೆ ಗಿಲ್ಲಿ, ಊರಲ್ಲೇ ವ್ಯವಸಾಯ ಮಾಡ್ತಾರೆ ಸಾರ್ ಎಂದರು. ‘ನೀವು ಎಷ್ಟು ಜನ ಅಣ್ಣ-ತಮ್ಮಂದಿರು’ ಎಂದು ಲೋಕಾಭಿರಾಮವಾಗಿ ವಿಚಾರಿಸಿದರು. ಅದಕ್ಕೆ ಗಿಲ್ಲಿ, ಅಲ್ಲೇ ಇದ್ದ ಅಣ್ಣನನ್ನು ತೋರಿಸಿ, ಪರಿಚಯ ಮಾಡಿಸಿದರು. ಗಿಲ್ಲಿಯ ಅಣ್ಣಣೂ ಸಿಎಂ ಅವರ ಆಶೀರ್ವಾದ ಪಡೆದರು.

ಅಷ್ಟರಲ್ಲೇ ಸಚಿವ ಭೈರತಿ ಸುರೇಶ್ ಅವರು, ‘ಬಾಳ ಓಟು ಬಂದಿರಬೇಕು ಅಲ್ವ?’ ಎಂದರು. ಅದಕ್ಕೆ ಅಲ್ಲಿದ್ದ ಕೆಲವರು 45 ಕೋಟಿ ಬಂದಿದೆ ಸಾರ್ ಎಂದರು. ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯ ಅವರು, ‘ಬಿಗ್​​ಬಾಸ್ ಇತಿಹಾಸದಲ್ಲೇ ಇವನಿಗೆ ಹೆಚ್ಚು ಓಟು ಬಂದಿದೆ’ ಎಂದರು. ಬಳಿಕ ಮಾತು ಮುಂದುವರೆಸಿ, ‘ಓಟಿಗಿಂತಲೂ ಬಾಳ ಜನಪ್ರಿಯತೆ ಪಡೆದಿದ್ದಾನೆ, ಒಳ್ಳೆದಾಗಲಿ’ ಎಂದರು.

ಸಚಿವ ಭೈರತಿ ಸುರೇಶ್ ಅವರು, ‘ಒಳ್ಳೆ ಹುಡುಗ ಸಾರ್, ಪಾಪ ಎಲ್ಲರನ್ನೂ ನಗಿಸುತ್ತಿದ್ದ, ಮನೆಯಲ್ಲಿ ನನ್ನ ಪತ್ನಿ ಸಹ ಶೋ ನೋಡ್ತಿದ್ರು, ಇವನ ಫ್ಯಾನ್ ಅವರು’ ಎಂದರು. ಭೈರತಿ ಸುರೇಶ್ ಮಾತಿಗೆ ಎಲ್ಲರೂ ನಕ್ಕರು. ಸಚಿವ ಭೈರತಿ ಸುರೇಶ್ ಅವರು, ‘ಮುಂದೆ, ಸಿನಿಮಾ ಮಾಡ್ತೀಯ’ ಎಂದರು, ಗಿಲ್ಲಿ ನೋಡೋಣ ಎಂಬಂತೆ ನಕ್ಕು ಸುಮ್ಮನಾದರು. ಗಿಲ್ಲಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕುವ ಪ್ರಯತ್ನ ಮಾಡಿದರು. ಆದರೆ ಅದೇ ಹಾರನ್ನು ಸಿಎಂ ಸಿದ್ದರಾಮಯ್ಯ ಅವರು ಗಿಲ್ಲಿಗೆ ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಏರ್​​ಪೋರ್ಟ್​​​ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ – Kannada News | Bengaluru Airport: Rs 38.60 Cr Cocaine Seized from Brazil Passenger; Customs Bust at KIA

ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಕೊಕೇನ್

ದೇವನಹಳ್ಳಿ, ಜನವರಿ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕಸ್ಟಮ್ಸ್​ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 38.60 ಕೋಟಿ ರೂ ಮೌಲ್ಯದ 7.72 ಕೆಜಿ ಕೊಕೇನ್​​ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಕೆಐಎಬಿಗೆ ಬಂದಿದ್ದ ವ್ಯಕ್ತಿ, ಮಕ್ಕಳ ಕಥೆ ಪುಸ್ತಕಗಳ ಮಾದರಿಯಲ್ಲಿ ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದಾನೆ. ಅನುಮಾನಗೊಂಡು ಲಗೇಜ್​ ಬ್ಯಾಗ್​ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್​​ನಲ್ಲಿ ಮಕ್ಕಳ ಕಥೆ ಪುಸ್ತಕಗಳ ಬುಕ್​ಗಳ ರಟ್ ಅಡಿಯಲ್ಲಿ ಡ್ರಗ್ಸ್​ ಇಟ್ಟಿದ್ದ. ಅನುಮಾನಗೊಂಡ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ಲಗೇಜ್​ ಬ್ಯಾಗ್​ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​ಗೆ ಬಂದವನ ಬ್ಯಾಗ್​ನಲ್ಲಿದ್ದವು ಹಾವುಗಳು, ಸರೀಸೃಪಗಳು!

ಇನ್ನು ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದ ಪ್ರಯಾಣಿಕನನ್ನು ಇದೀಗ ವಶಕ್ಕೆ ಪಡೆದಿರುವ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜೊತೆಗೆ 38.60 ಕೋಟಿ ರೂ ಮೌಲ್ಯದ 7.72 ಕೆಜಿ ಕೊಕೇನ್​​ ವಶಕ್ಕೆ ಪಡೆದುಕೊಂಡಿದ್ದಾರೆ.

35 ವಿವಿಧ ಬಗೆಯ ವನ್ಯ ಜೀವಿಗಳು ವಶಕ್ಕೆ: ಮೂವರು ಪ್ರಯಾಣಿಕರ ಬಂಧನ

ಬ್ಯಾಂಕಾಕ್​​ನಿಂದ ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 35 ವಿವಿಧ ಬಗೆಯ ವನ್ಯ ಜೀವಿಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರಿಯಾ ವಿಮಾನ ನಿಲ್ಥಾಣದ ಟರ್ಮಿನಲ್ 2ಕ್ಕೆ ಬ್ಯಾಂಕಾಕ್ ನಿಂದ ಮೂವರು ಪ್ರಯಾಣಿಕರು ಆಗಮಿಸಿದ್ದರು.

ಇದನ್ನೂ ಓದಿ: ದುಬೈಯಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನದ ಮರುದಿನವೇ ಅಂಧ ವ್ಯಕ್ತಿ ಅರೆಸ್ಟ್

ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಲಗೇಜ್​​ ಪರಿಶೀಲನೆ ವೇಳೆ ಲಗೇಜ್​ನಲ್ಲಿ ವನ್ಯಜೀವಿಗಳು ಪೆತ್ತೆಯಾಗಿದ್ದು, ಯಾವುದೇ ಸೂಕ್ತ ದಾಖಲೆಗಳನ್ನ ತೋರಿಸಿಲ್ಲ. ಹೀಗಾಗಿ ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆ ಹಾಗೂ ಕಸ್ಟಮ್ಸ್ ಕಾಯ್ದೆ ಅಡಿ ಮೂವರು ಆರೋಪಿಗಳನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ವನ್ಯ ಜೀವಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ketu Transit 2026: ಜ. 25ರಂದು ಕೇತು ಸಂಚಾರ; ಈ ಮೂರು ರಾಶಿಯವರು ಜಾಗರೂಕರಾಗಿರಿ – Kannada News | Ketu Transit 2026: Warning for Gemini, Libra, Pisces – Astrological Forecast and Safety Tips

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳಲ್ಲಿ ಕೇತು ಅತ್ಯಂತ ಪ್ರಮುಖವಾದುದು. ಸಾಮಾನ್ಯವಾಗಿ ಕೇತು ಸುಮಾರು 18 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. 2026 ರ ಜನವರಿ 25ರಂದು ಕೇತು ಪುನರ್ವಸು ನಕ್ಷತ್ರದ 2ನೇ ಹಂತದಿಂದ 1ನೇ ಹಂತಕ್ಕೆ ಸಾಗುತ್ತದೆ. ಕೇತು ಮಾರ್ಚ್ 29ರವರೆಗೆ ಈ ನಕ್ಷತ್ರದಲ್ಲಿಯೇ ಇರಲಿದೆ. ನಂತರ ರಾಶಿ ಮತ್ತು ನಕ್ಷತ್ರ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿವೆ.

ಕೇತುವಿನ ಈ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಇನ್ನೂ ಕೆಲವು ರಾಶಿಗಳಿಗೆ ಎಚ್ಚರಿಕೆಯ ಸಮಯವಾಗಲಿದೆ. ಈಗ ಯಾವ ರಾಶಿಗಳಿಗೆ ಅಶುಭ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ರಾಶಿಯವರು ಜಾಗರೂಕರಾಗಿರಿ:

ಮಿಥುನ ರಾಶಿ:

ಮಿಥುನ ರಾಶಿಯವರಿಗೆ ಕೇತುವಿನ ಸಂಚಾರವು ಸ್ವಲ್ಪ ಕಠಿಣವಾಗಿರಬಹುದು. ನೀವು ಸಾಕಷ್ಟು ಶ್ರಮಪಟ್ಟರೂ ನಿರೀಕ್ಷಿತ ಫಲ ಸಿಗದೆ ನಿರಾಸೆ ಉಂಟಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸಾಲ ಅಥವಾ ಹಣಕಾಸು ಸಂಬಂಧಿತ ವಿಚಾರಗಳು ಒತ್ತಡಕ್ಕೆ ಕಾರಣವಾಗಬಹುದು. ವೈವಾಹಿಕ ಜೀವನದಲ್ಲಿ ಸಣ್ಣ ವಿವಾದಗಳು ಉಂಟಾಗುವ ಸಾಧ್ಯತೆಯಿರುವುದರಿಂದ ಮಾತು ಮತ್ತು ವರ್ತನೆಯಲ್ಲಿ ಸಂಯಮ ಅಗತ್ಯ.

ತುಲಾ ರಾಶಿ:

ತುಲಾ ರಾಶಿಯವರಿಗೆ ಈ ಅವಧಿ ಪರೀಕ್ಷೆಯ ಸಮಯವಾಗಿರಲಿದೆ. ವಿಶೇಷವಾಗಿ ಮಾರ್ಚ್ ವರೆಗೆ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಉದ್ಯೋಗ ಬದಲಾವಣೆ ಅಥವಾ ಹೊಸ ಹೂಡಿಕೆಗಳನ್ನು ಮುಂದೂಡುವುದು ಒಳಿತು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ, ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಮೀನ ರಾಶಿ:

ಮೀನ ರಾಶಿಯವರಿಗೆ ಕೇತುವಿನ ಸಂಚಾರದಿಂದಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಅಪ್ರತ್ಯಾಶಿತ ವೆಚ್ಚಗಳು ಹೆಚ್ಚಾಗಬಹುದು. ಮಾರ್ಚ್ ವರೆಗೆ ದೂರ ಪ್ರಯಾಣವನ್ನು ತಪ್ಪಿಸುವುದು ಒಳಿತು. ಉದ್ಯೋಗ ಮತ್ತು ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೇ, ಶಾಂತವಾಗಿ ಯೋಚಿಸಿ ಮುಂದುವರೆಯುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್​​ ಗೆದ್ದ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಆಶೀರ್ವಾದ: ಚಿತ್ರಗಳ ನೋಡಿ – Kannada News | Bigg Boss Kannada winner Gilli Nata met CM Siddaramaiah and took his blessing

ಗಿಲ್ಲಿ ನಟ, ಇಂದು (ಜನವರಿ 22) ವಿಧಾನಸೌಧಕ್ಕೆ ತೆರಳಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದಾರೆ. ಬಿಗ್​​ಬಾಸ್ ಗೆದ್ದಿದ್ದಕ್ಕೆ ಗಿಲ್ಲಿಯನ್ನು ಸಿಎಂ ಅಭಿನಂಧಿಸಿದ್ದಾರೆ.

Source link

T20 World Cup 2026: ಟಿ20 ವಿಶ್ವಕಪ್​ ಬಹಿಷ್ಕರಿಸಿದ ಬಾಂಗ್ಲಾದೇಶ – Kannada News | Bangladesh Quits T20 World Cup Over BCCI Spat; Scotland Steps In

ಬಿಸಿಸಿಐ ವಿರುದ್ಧ ತನ್ನ ಪಟ್ಟು ಸಡಿಲಿಸದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡದ ಹೆಸರನ್ನು ಟಿ20 ವಿಶ್ವಕಪ್​ನಿಂದ ಹಿಂಪಡೆದಿದೆ. ಇದರರ್ಥ ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ವಾಸ್ತವವಾಗಿ ಐಸಿಸಿ, ಬಾಂಗ್ಲಾದೇಶಕ್ಕೆ ತನ್ನ ನಿರ್ಧಾರ ತಿಳಿಸಲು 24 ಗಂಟೆಗಳ ಕಾಲಾವಕಾಶ ನೀಡಿತ್ತು. ಆ ಪ್ರಕಾರ ಗುರುವಾರ ಢಾಕಾದಲ್ಲಿ ಬಿಸಿಬಿ ಮತ್ತು ಬಾಂಗ್ಲಾದೇಶ ಸರ್ಕಾರದ ನಡುವೆ ಸಭೆ ನಡೆದಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಇದೀಗ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿರುವ ಕಾರಣ ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್‌ ತಂಡಕ್ಕೆ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಗಲಿದೆ.

Source link

ತಹಶೀಲ್ದಾರ್​​ರಿಂದ ಕಿರುಕುಳ ಆರೋಪ: ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್ – Kannada News | Beluru Tehsildar Faces Harassment Allegation; Shirastedar Attempts Suicide

ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನ

ಹಾಸನ/ ದಕ್ಷಿಣ ಕನ್ನಡ, ಜನವರಿ 22: ತಹಶೀಲ್ದಾರ್ ವಿರುದ್ಧ ಕಿರುಕುಳ ಆರೋಪ ಮಾಡಿ ಮಾತ್ರೆ ಸೇವಿಸಿ ಶಿರಸ್ತೇದಾರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಬೇಲೂರು ತಹಶೀಲ್ದಾರ್​ ಶ್ರೀಧರ್ ಕಂಕನವಾಡಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ತನ್ವೀರ್ ಅಹ್ಮದ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯಾಗಿದ್ದಾರೆ. ತನ್ವೀರ್​​ನ್ನು ಬೇಲೂರು ಆಸ್ಪತ್ರೆಗೆ ಸಿಬ್ಬಂದಿ ದಾಖಲಿಸಿದ್ದು, ತಮ್ಮ ಮೇಲಿನ ಆರೋಪವನ್ನು ಶ್ರೀಧರ್ ನಿರಾಕರಿಸಿದ್ದಾರೆ.

ತಹಶೀಲ್ದಾರ್ ಅವರು ಬೇಕಂತಲೇ ಕೆಲಸದ ಒತ್ತಡ ಹೇರುತ್ತಿರುವ ಜೊತೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂಭಾದಲ್ಲೇ ಮಾತ್ರೆಗಳನ್ನು ಸೇವಿಸಿ ತನ್ವೀರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್​​ ಅವರು, ತನ್ವೀರ್ ಅಹಮದ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್​ಮೇಲ್, ಲಕ್ಷಾಂತರ ರೂ. ವಸೂಲಿ; ಚಿಕ್ಕಮಗಳೂರಿನ ಮಹಿಳೆಯ ಬಂಧನ

ನ್ಯಾಯಾಲಯದಲ್ಲೇ ಆತ್ಮಹತ್ಯೆಗೆ ಯತ್ನ

ನ್ಯಾಯಾಲಯದಲ್ಲೇ ವಿಷ ಕುಡಿದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್​ನಲ್ಲಿ ನಡೆದಿದೆ. ವಿಷ ಕುಡಿದು ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದ್ದು,ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿದೆ.

ರವಿ ಹಾಗೂ ಪತ್ನಿ ವಿದ್ಯಾಶ್ರೀ ನಡುವೆ ಕೌಟುಂಬಿಕ ಕಲಹ ಇತ್ತು. 2 ದಿನದ ಹಿಂದೆ ವಿದ್ಯಾಶ್ರೀ ಕತ್ತು ಹಿಸುಕಿ ಕೊಲೆಗೆ ರವಿ ಯತ್ನಿಸಿದ್ದ ಎನ್ನಲಾಗಿದ್ದು, ಗಂಡ ಮತ್ತು ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಪೊಲೀಸರು ಮಹಿಳಾ ಠಾಣೆಗೆ ಹಾಜರಾಗಲು ರವಿಗೆ ಸೂಚಿಸಿದ್ದು, ಈ ನಡುವೆ ಪುತ್ತೂರು ಕೋರ್ಟ್​ ಆವರಣಕ್ಕೆ ಬಂದ ರವಿ ಜಡ್ಜ್ ಮುಂದೆಯೇ ವಿಷ ಸೇವಿಸಿದ್ದಾರೆ. ವಿಷ ಸೇವನೆ ಬಳಿಕ ನ್ಯಾಯಾಲಯದಲ್ಲೇ ವಾಂತಿ ಮಾಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡನ ವಿರುದ್ಧ ದೂರು ನೀಡಿದ್ದ ಪತ್ನಿಯೇ ಆತನನ್ನು ಆ್ಯಂಬುಲೆನ್ಸ್​ ಮೂಲಕ ಮಂಗಳೂರಿಗೆ ಕರೆದೊಯ್ದಿದ್ದಾಳೆ.

ಎಣ್ಣೆ ನಶೆಯಲ್ಲಿ ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡ ವ್ಯಕ್ತಿ

ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡು ವ್ಯಕ್ತಿಯೋರ್ವ ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಪತ್ನಿ ರಂಜಿತಾ ಜತೆ ಜಗಳವಾಡಿ ಕತ್ತು ಕೊಯ್ದುಕೊಂಡ ಪತಿ ಲೋಕೇಶ್ ರಕ್ತಸ್ರಾವವಾಗಿ ಒದ್ದಾಡುತ್ತಿದ್ದರು. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸದ್ಯ ಚಿಕಿತ್ಸೆ ಪಡೆದು ಗಾಯಾಳು ಲೋಕೇಶ್ ಮನೆಗೆ ವಾಪಾಸಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:34 pm, Thu, 22 January 26

Source link

Exit mobile version