IND-W vs SL-W: 6,6,4,6.. ಒಂದೇ ಓವರ್​ನಲ್ಲಿ ಲಂಕಾ ಸ್ಪಿನ್ನರ್ ಬೆವರಿಳಿಸಿದ ರಿಚಾ ಘೋಷ್

ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20ಪಂದ್ಯದಲ್ಲಿ ಭಾರತ 221 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಸ್ಮೃತಿ, ಶಫಾಲಿ ಹಾಗೂ ರಿಚಾ ಘೋಷ್ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ರಿಚಾ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಪಂದ್ಯದ 19ನೇ ಓವರ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದ ರಿಚಾ, ಈ ಓವರ್​ನ ಕೊನೆಯ 4 ಎಸೆತಗಳನ್ನು ಬೌಂಡರಿಗಟ್ಟಿದರು. ಮೂರು ಹಾಗೂ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಿಚಾ, ಐದನೇ ಎಸೆತದಲ್ಲಿ ಬೌಂಡರಿ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್​ನಲ್ಲಿ 23 ರನ್​ಗಳು ಬಂದವು. ಮಾತ್ರವಲ್ಲದೆ ಅಂತಿಮ 10 ಓವರ್‌ಗಳಲ್ಲಿ ಭಾರತ ಬರೋಬ್ಬರಿ 136 ರನ್‌ಗಳನ್ನು ಕಲೆಹಾಕಿತು.

Source link

IND-W vs SL-W: ಶತಕ ವಂಚಿತರಾದರೂ ತಮ್ಮದೇ ಹಳೆಯ ದಾಖಲೆ ಮುರಿದ ಸ್ಮೃತಿ- ಶಫಾಲಿ

Source link

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್ – Kannada News | Fire erupts at Hyderabad apartment firefighters rescued pet dog

ಹೈದರಾಬಾದ್, ಡಿಸೆಂಬರ್ 28: ಹೈದರಾಬಾದ್ ನಗರದ ಸೋಮಾಜಿಗುಡ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಶನಿವಾರ ಸಂಜೆ ಬೆಂಕಿ (Fire Accident) ಕಾಣಿಸಿಕೊಂಡಿದೆ. ಪಂಜಾಗುಟ್ಟ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಆಲ್ಪ ನೈಟ್ಸ್ ಬ್ಲಾಕ್ ಎಂದೂ ಕರೆಯಲ್ಪಡುವ ಆಲ್ಪೈನ್ ಹೈಟ್ಸ್ ನಲ್ಲಿ ಈ ಘಟನೆ ಸಂಭವಿಸಿದೆ. ಅಪಾರ್ಟ್​​ಮೆಂಟ್​​ನ 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ದಟ್ಟ ಹೊಗೆ ಹರಡಿತ್ತು. ಈ ವೇಳೆ ಅಪಾರ್ಟ್​​ಮೆಂಟ್ ನಿವಾಸಿಗಳು ಸುರಕ್ಷತೆಗಾಗಿ ಹೊರಗೆ ಧಾವಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು 3 ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಈ ವೇಳೆ ಅಪಾರ್ಟ್​​ಮೆಂಟ್ ಒಳಗೆ ಸಿಲುಕಿದ್ದ ಸಾಕು ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾಪಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು? – Kannada News | G. Parameshwara Clarifies Karnataka Police Also Involved in Maharashtra Police Operation in Bengaluru

ಬೆಂಗಳೂರು, ಡಿಸೆಂಬರ್​ 28: ಮಹಾರಾಷ್ಟ್ರ ಪೊಲೀಸರಿಂದ ರಾಜ್ಯದಲ್ಲಿ ಡ್ರಗ್ಸ್ ಸೀಜ್​​ ವಿಚಾರ ನಮ್ಮ ಪೊಲೀಸರಿಗೆ ಗೊತ್ತಿರಲಿಲ್ವ ಎಂಬ ಮಾಧ್ಯಮದವರ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ವೇಳೆ ನಮ್ಮ ಬೆಂಗಳೂರು ನಗರ ಪೊಲೀಸರ ಡಿಸಿಪಿ ಸೇರಿದಂತೆ ಎನ್.ಸಿ.ಬಿ ಮತ್ತು ನಮ್ಮ ವಿಶೇಷ ಕಾರ್ಯಾಚರಣಾ ತಂಡ ಕೂಡ ಸಕ್ರಿಯವಾಗಿ ಭಾಗವಹಿಸಿತ್ತು. ಕರ್ನಾಟಕ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎಂಬುವುದು ಸುಳ್ಳು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ 55 ಕೋಟಿ ರೂ ಡ್ರಗ್ಸ್​​ ಪತ್ತೆ: ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್ – Kannada News | Bengaluru Drug Factory Bust: G. Parameshwara Says Maharashtra Police Statement Is Far from the Truth

ಬೆಂಗಳೂರು, ಡಿಸೆಂಬರ್​​ 28: ಹೊಸ ವರ್ಷದ ಸಂಭ್ರಮದ ಹೊಸ್ತಿಲಲ್ಲೇ ಮೂರು ಬೃಹತ್ ಡ್ರಗ್ಸ್ ಫ್ಯಾಕ್ಟರಿಗಳನ್ನು ಭೇದಿಸಲಾಗಿದೆ. ಮಹಾರಾಷ್ಟ್ರದ ಎಎನ್‌ಟಿಎಫ್ ಡಿಸೆಂಬರ್ 26ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಹೊರಮಾವು, ಯರಪನಹಳ್ಳಿ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಮತ್ತು ಎಂ.ಡಿ.ಎಂ.ಎ. ತಯಾರಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಜಿ ಪರಮೇಶರ್​​ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು 55 ಕೋಟಿ ರೂ ಮೌಲ್ಯದ್ದು ಎಂದಿದ್ದಾರೆ. ಅದು 1 ಕೋಟಿ 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಕಚ್ಚಾ ವಸ್ತು. ಮಹಾರಾಷ್ಟ್ರ ಪೊಲೀಸರು ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ? – Kannada News | Bengaluru: QR Code System Introduced for the Convenience of New Year Celebrations

ಬೆಂಗಳೂರು, ಡಿಸೆಂಬರ್​ 28: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಕ್ಯೂಆರ್ ಕೋಡ್‌ಗಳು ಆಂಬುಲೆನ್ಸ್ ಸೇವೆಗಳು, ವಾಹನ ಪಾರ್ಕಿಂಗ್ ಮತ್ತು ಸಂಚಾರ ಮಾಹಿತಿ ಸೇರಿದಂತೆ ಅಗತ್ಯ ವಿವರಗಳನ್ನು ಒದಗಿಸುತ್ತವೆ. ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳಲ್ಲಿ ಅಳವಡಿಸಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವ ಕಲ್ಯಾಣಕ್ಕಾಗಿ ಭಾರತ ವಿಶ್ವಗುರು ಆಗಲೇಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ – Kannada News | India should become vishwaguru for the world welfare RSS chief Mohan Bhagwat says

ಹೈದರಾಬಾದ್, ಡಿಸೆಂಬರ್ 28: “ವಿಶ್ವಗುರು” ಆಗುವ ಭಾರತದ ಪ್ರಯಾಣವು ಕೇವಲ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ವಿಷಯವಲ್ಲ, ಅದು ಜಾಗತಿಕ ಅವಶ್ಯಕತೆಯಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಒತ್ತಿ ಹೇಳಿದ್ದಾರೆ. ಈ ಗುರಿಗೆ ಕಠಿಣ ಪರಿಶ್ರಮ, ಬದ್ಧತೆ ಮತ್ತು ಮಾನವ ಮೌಲ್ಯಗಳು ಮತ್ತು ಸಾಮಾಜಿಕ ಬದಲಾವಣೆಯನ್ನು ಅಭಿವೃದ್ಧಿಪಡಿಸುವತ್ತ ಅಚಲ ಗಮನದ ಅಗತ್ಯವಿದೆ ಎಂದು ಹೇಳಿದ್ದಾರೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಿಶ್ವಗುರುವಾಗಿ ಭಾರತದ ಪಾತ್ರವು ಕೇವಲ ಒಂದು ಆಕಾಂಕ್ಷೆಯಲ್ಲ. ಆರ್‌ಎಸ್‌ಎಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಯತ್ನಗಳ ಮೂಲಕ ಈ ಗುರಿಯತ್ತ ಸ್ಥಿರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಎಲ್ಲಾ ಹಿಂದೂಗಳು ಒಗ್ಗೂಡಿ ಸನಾತನ ಧರ್ಮವನ್ನು ಉನ್ನತೀಕರಿಸುವ ಸಮಯ ಬಂದಿದೆ” ಎಂದು ಮೋಹನ್ ಭಾಗವತ್ ಹೇಳಿದ್ದಾರೆ. “100 ವರ್ಷಗಳ ಹಿಂದೆ ಯೋಗಿ ಅರವಿಂದ ಅವರು ಸನಾತನ ಧರ್ಮದ ಪುನರುತ್ಥಾನವು ದೇವರ ಇಚ್ಛೆಯಾಗಿದೆ ಮತ್ತು ಹಿಂದೂ ರಾಷ್ಟ್ರದ ಉದಯವು ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಇದೆ ಎಂದು ಘೋಷಿಸಿದ್ದರು. ಭಾರತ ಅಥವಾ ಹಿಂದೂ ರಾಷ್ಟ್ರ ಮತ್ತು ಸನಾತನ ಧರ್ಮ, ಹಿಂದುತ್ವ, ಸಮಾನಾರ್ಥಕ ಪದಗಳಾಗಿವೆ” ಎಂದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತದ ಜಾಗತಿಕ ಪಾತ್ರದ ಕುರಿತು ಮಾತನಾಡಿದ ಮೋಹನ್ ಭಾಗವತ್, “ವಿಶ್ವಗುರುವಾಗಲು ಬಹು ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನದ ಅಗತ್ಯವಿದೆ. ಆರ್‌ಎಸ್‌ಎಸ್ ಪಾತ್ರ ನಿರ್ಮಾಣ ಮತ್ತು ಸಾಮಾಜಿಕ ಜವಾಬ್ದಾರಿಯ ಮೇಲೆ ಕೇಂದ್ರೀಕರಿಸುವ ಮೂಲಕ ಕೊಡುಗೆ ನೀಡುತ್ತದೆ, ಇದು ಅದರ ಸ್ವಯಂಸೇವಕರು ಸಾರ್ವಜನಿಕ ವಿಶ್ವಾಸವನ್ನು ಪಡೆಯಲು ಸಹಾಯ ಮಾಡಿದೆ” ಎಂದು ಅವರು ಹೇಳಿದ್ದಾರೆ.

“ನಾವು ಮತ್ತೆ ‘ವಿಶ್ವಗುರು’ ಆಗುವ ಕೆಲಸವನ್ನು ಮಾಡಬೇಕಾಗುತ್ತದೆ. ‘ವಿಶ್ವಗುರು’ ಆಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲ. ನಾವು ‘ವಿಶ್ವಗುರು’ ಆಗುವುದು ಪ್ರಪಂಚದ ಅಗತ್ಯವಾಗಿದೆ.

ಇದನ್ನೂ ಓದಿ: ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ

“ನಾವು ‘ವಿಶ್ವಗುರು’ ಆಗುವುದು ಜಗತ್ತಿನ ಅಗತ್ಯವಾಗಿದೆ. ಆದರೆ, ಇದು ರಾತ್ರೋರಾತ್ರಿ ನಡೆಯುವ ಸಂಗತಿಯಲ್ಲ. ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ, ಮತ್ತು ಈ ಕಠಿಣ ಪರಿಶ್ರಮವನ್ನು ವಿವಿಧ ಮಾರ್ಗಗಳ ಮೂಲಕ ನಡೆಸಲಾಗುತ್ತಿದೆ, ಅವುಗಳಲ್ಲಿ ಒಂದು ಆರ್‌ಎಸ್‌ಎಸ್” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಲ್​​​ನಲ್ಲಿ ಕ್ರಿಸ್ಮಸ್ ಆಚರಣೆ ವೇಳೆ ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ: ಕಾಮುಕ ಅರೆಸ್ಟ್ – Kannada News | A delivery boy arrested for molesting young woman private parts during christmas celebration in bengaluru

ಬೆಂಗಳೂರು, (ಡಿಸೆಂಬರ್ 28): ಮಾಲ್‌ನಲ್ಲಿ ಕ್ರಿಸ್ಮಸ್ ಆಚರಿಸುತ್ತಿದ್ದಾಗ (christmas celebration) ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಡೆಲಿವರಿ ಬಾಯ್‌ನ್ನು ಪೊಲೀಸರು ಬಂಧಿಸಿದ್ದಾರೆ. ಗುವಾಹಟಿ ಮೂಲದ ಮನೋಜ್(27) ಬಂಧಿತ ಆರೋಪಿ. ಬೆಂಗಳೂರಿನ (Bengaluru) ಮಾಲ್​​​ನಲ್ಲಿ ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಣೆ ವೇಳೆ ಡೆಲಿವರಿ ಬಾಯ್‌ ಮನೋಜ್, ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಇದರಿಂದ ಮುಜುಗರಕ್ಕೊಳಗಾದ ಯುವತಿ, ಕೂಡಲೇ ಸ್ಥಳದಲ್ಲೇ ಇದ್ದ ಹದೇವಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರು, ಕಾಮುಕ ಮನೋಜ್​​​​ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಯುವತಿಯನ್ನು ಫಾಲೋ ಮಾಡಿದ್ದವರು ಅರೆಸ್ಟ್​

ಮೊನ್ನೆ ಅಂದರೆ ಡಿಸೆಂಬರ್ 25ರಂದು ಬೆಂಗಳೂರಿನ ಸಿಲ್ಕ್ ಬೋರ್ಡ್​ನಲ್ಲಿ ಪುಂಡರ ಗ್ಯಾಂಗ್​, ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿತ್ತು. ಬೈಕ್‌ನಲ್ಲಿದ್ದ ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿದ್ದು, ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ವಿಡಿಯೋ ಸರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಸುದ್ದಗುಂಟೆಪಾಳ್ಯ ಪೊಲೀಸರು, 3 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಶೇಕ್ ಅಯನ್ ಮತ್ತು ಶೇಕ್ ರೋಷನ್‌ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದರು.

ಇದನ್ನೂ ನೋಡಿ: ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ವಿಡಿಯೋ ಮಾಡ್ತಿದ್ದವನ ಬಂಧನ

ಇನ್ನೊಂದು ಪ್ರಕರಣದಲ್ಲಿ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ನಾಗರಭಾವಿ ಖಾಸಗಿ ಆಸ್ಪತ್ರೆ ನೌಕರ ಸುವೆಂದು ಮೊಹಂತ ಎನ್ನುವಾತ ಸಹ ಅರೆಸ್ಟ್ ಆಗಿದ್ದಾನೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್​ನಲ್ಲಿ ಕೆಲಸ ಮಾಡ್ತಿದ್ದ ಕಾಮುಕ, ಲೇಡಿ ನರ್ಸ್​ಗಳು ಬಟ್ಟೆ ಬದಲಿಸುವುದನ್ನು ಮೊಬೈಲ್​​ನಲ್ಲಿ ಸರೆ ಹಿಡಿದುಕೊಳ್ಳುತ್ತಿದ್ದ. ಹೀಗೆ ಓರ್ವ ನರ್ಸ್​ ಕಾಮುಕನ ಆಟವನ್ನು ಗಮನಿಸಿ ಕೂಡಲೇ ಆಸ್ಪತ್ರೆ ವಯದ್ಯರ ಗಮನಕ್ಕೆ ತಂದಿದ್ದರು. ಬಳಿಕ ಆಸ್ಪತ್ರೆಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್​​ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸುವೆಂದು ಮೊಹಂತನನ್ನ ಬಂಧಿಸಿದ್ದಾರೆ.

ಮತ್ತಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BECIL Recruitment 2025: 10 ನೇ ತರಗತಿಯಿಂದ ಪದವೀಧರರವರೆಗೆ BECILನಲ್ಲಿ ನೇಮಕಾತಿ; 40 ಸಾವಿರ ರೂ. ಮಾಸಿಕ ವೇತನ – Kannada News | BECIL Recruitment 2025: 78 Government Jobs for 10th Pass and Graduates, Apply by Jan 5

ಪದವಿ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಗುಡ್​​ ನ್ಯೂಸ್​ ಇಲ್ಲಿದೆ. ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) 10 ನೇ ತರಗತಿಯಿಂದ ಪದವೀಧರರವರೆಗಿನ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು BECIL ನ ಅಧಿಕೃತ ವೆಬ್‌ಸೈಟ್ becil.com ಗೆ ಭೇಟಿ ನೀಡುವ ಮೂಲಕ ಅಧಿಸೂಚನೆಯನ್ನು ಪರಿಶೀಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 5 ಸಂಜೆ 6:00 ಗಂಟೆ. BECIL ತಾಂತ್ರಿಕ ಸಹಾಯಕ (ENT), ನೇತ್ರ ತಂತ್ರಜ್ಞ, ರೋಗಿಯ ಆರೈಕೆ ವ್ಯವಸ್ಥಾಪಕ (PCM), ಮತ್ತು ರೋಗಿಯ ಆರೈಕೆ ಸಂಯೋಜಕ (PCC) ಸೇರಿದಂತೆ ಒಟ್ಟು 78 ವಿವಿಧ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ.

ಖಾಲಿ ಹುದ್ದೆಗಳ ವಿವರ:

  • ತಾಂತ್ರಿಕ ಸಹಾಯಕ (ಇಎನ್‌ಟಿ) – 1
  • ನೇತ್ರ ತಂತ್ರಜ್ಞ – 3
  • ಸಹಾಯಕ ಆಹಾರ ತಜ್ಞರು – 2
  • ವೈದ್ಯಕೀಯ ದಾಖಲೆ ತಂತ್ರಜ್ಞ (MRT) – 3
  • ಡೇಟಾ ಎಂಟ್ರಿ ಆಪರೇಟರ್ (DEO) – 30
  • ಟೇಲರ್ – 1
  • ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ – 5
  • ಪ್ರಯೋಗಾಲಯ ಸಹಾಯಕರು – 1
  • ದಂತ ತಂತ್ರಜ್ಞ – 2
  • ಪಿಟಿಐ (ಮಹಿಳೆ) – 1
  • ರೇಡಿಯೋಗ್ರಾಫರ್ – 1
  • ಡೇಟಾ ಎಂಟ್ರಿ ಆಪರೇಟರ್ (DEO) – 10

ಯಾವ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?

ತಾಂತ್ರಿಕ ಸಹಾಯಕ (ಇಎನ್‌ಟಿ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ. ಸ್ಪೀಚ್ ಮತ್ತು ಹಿಯರಿಂಗ್ ಪದವಿಯನ್ನು ಹೊಂದಿರಬೇಕು ಮತ್ತು ಆರ್‌ಸಿಐನಲ್ಲಿ ನೋಂದಾಯಿಸಿಕೊಂಡಿರಬೇಕು. ಟೆಲ್ಲರ್ ಹುದ್ದೆಗೆ, ಅಭ್ಯರ್ಥಿಗಳು 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಎಂಟಿಎಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅರ್ಜಿ ಶುಲ್ಕ ಎಷ್ಟು?

ಈ ವಿವಿಧ ಹುದ್ದೆಗಳಿಗೆ ಅರ್ಜಿ ಶುಲ್ಕ 295 ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL), BECIL ಭವನ, C-56/A-17, ಸೆಕ್ಟರ್-62, ನೋಯ್ಡಾ 201307 (UP) ಗೆ ಕಳುಹಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿದಾರರನ್ನು ಕೌಶಲ್ಯ ಪರೀಕ್ಷೆ, ಸಂದರ್ಶನ ಇತ್ಯಾದಿಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ತಾಂತ್ರಿಕ ಸಹಾಯಕ (ಇಎನ್‌ಟಿ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 40,710 ರೂ. ವೇತನ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೊರಡಿಸಲಾದ ಅಧಿಸೂಚನೆಯನ್ನು ಪರಿಶೀಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಕ್ಷಯ್​​ಗೆ ಶಾಕ್ ಕೊಟ್ಟ ನಿರ್ಮಾಪಕ – Kannada News | Drishyam 3 movie producer case against Akshay Khanna

ಧುರಂಧರ್’ (Dhurandhar) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಸಿನಿಮಾ ಇದಾಗಿದ್ದರೂ ಸಹ ಸಿನಿಮಾನಲ್ಲಿ ಹೆಚ್ಚು ಗಮನ ಸೆಳೆದಿರುವುದು ನಟ ಅಕ್ಷಯ್ ಖನ್ನಾ. ಸಿನಿಮಾನಲ್ಲಿ ರಹಮಾನ್ ಡಕೈತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದು, ಅವರ ಡೈಲಾಗ್​​ಗಳು, ಅವರ ಎಂಟ್ರಿ, ಅವರ ಡ್ಯಾನ್ಸಿನ ರೀಲುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಸಿನಿಮಾ ನೋಡಿದವರೆಲ್ಲ ರಣ್ವೀರ್ ಸಿಂಗ್​​ಗಿಂತಲೂ ಹೆಚ್ಚಾಗಿ ಅಕ್ಷಯ್ ಖನ್ನಾ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಅಚಾನಕ್ ಯಶಸ್ಸು ಅಕ್ಷಯ್ ಖನ್ನಾಗೆ ಸಣ್ಣ ಅಹಂ ಮೂಡಿಸಿದ್ದು, ಇದೀಗ ನಿರ್ಮಾಪಕರೊಬ್ಬರು ಅಕ್ಷಯ್ ಖನ್ನಾಗೆ ಪಾಠ ಕಲಿಸಲು ಮುಂದಾಗಿದ್ದಾರೆ.

ಅಕ್ಷಯ್ ಖನ್ನಾ, ‘ದೃಶ್ಯಂ 2’ ಹಿಂದಿ ಸಿನಿಮಾನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದ್ದು, ‘ದೃಶ್ಯಂ 3’ ಸಿನಿಮಾನಲ್ಲಿಯೂ ಅಕ್ಷಯ್ ಖನ್ನಾ ಅವರಿಗೆ ಮಹತ್ವದ ಪಾತ್ರವಿತ್ತು. ಆದರೆ ‘ಧುರಂಧರ್’ ಸಿನಿಮಾದ ಯಶಸ್ಸು ಮತ್ತು ತಮಗೆ ವೈಯಕ್ತಿಕವಾಗಿ ಆ ಸಿನಿಮಾದಿಂದ ಸಿಕ್ಕ ಯಶಸ್ಸಿನಿಂದಾಗಿ ಇದೀಗ ಅವರು ಹಠಾತ್ತನೆ ಸಂಭಾವನೆ ಹೆಚ್ಚಿಗೆ ಕೇಳುತ್ತಿದ್ದು, ಬೇಡಿಕೆಯಷ್ಟು ಸಂಭಾವನೆ ಕೊಡದಿದ್ದಲ್ಲಿ ‘ದೃಶ್ಯಂ 3’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು ನಟನ ವಿರುದ್ಧ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ

‘ದೃಶ್ಯಂ 3’ ನಿರ್ಮಾಪಕರು ಆರೋಪಿಸಿರುವಂತೆ, ‘ದೃಶ್ಯಂ 3’ ಸಿನಿಮಾಕ್ಕೆ ಈಗಾಗಲೇ ಅಕ್ಷಯ್ ಅವರಿಗೆ ಅಡ್ವಾನ್ಸ್ ಹಣ ನೀಡಲಾಗಿದೆಯಂತೆ. ‘ದೃಶ್ಯಂ 2’ಗೆ ಅವರಿಗೆ ನೀಡಿದ ಮೊತ್ತಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನೇ ನಿಗದಿ ಪಡಿಸಲಾಗಿದೆಯಂತೆ. ಅವರು ಸಿನಿಮಾನಲ್ಲಿ ತಮ್ಮ ಲುಕ್ ಬದಲಿಸುವಂತೆ ಬೇಡಿಕೆ ಇರಿಸಿದ್ದರಂತೆ ಆದರೆ ಅದಕ್ಕೆ ನಿರ್ದೇಶಕರು ಒಪ್ಪಿರಲಿಲ್ಲ. ಆದರೆ ‘ಧುರಂಧರ್’ ಸಿನಿಮಾ ಬಿಡುಗಡೆಗೆ ಮುಂಚಿನಿಂದಲೂ ಅಕ್ಷಯ್ ಖನ್ನಾ ನಿರ್ಮಾಪಕರು, ನಿರ್ದೇಶಕರುಗಳ ಕರೆ ಸ್ವೀಕರಿಸುತ್ತಿಲ್ಲವಂತೆ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು, ಅಕ್ಷಯ್ ಖನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.

ಅಕ್ಷಯ್ ಖನ್ನ ಅವರು ‘ದೃಶ್ಯಂ 2’ನಲ್ಲಿ ಐಜಿ ತರುಣ್ ಅಹ್ಲಾವತ್ ಅವರ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಖ್ಯಾತ ನಟ ಜಯದೀಪ್ ಅಲ್ಹಾವತ್ ಅವರನ್ನು ಕರೆತರಲಾಗಿದೆ. ಸಿನಿಮಾದ ಚಿತ್ರೀಕರಣ ಜನವರಿ ತಿಂಗಳಿಂದ ಶುರುವಾಗಲಿದೆ. ಮಲಯಾಳಂ ಸಿನಿಮಾನಲ್ಲಿಯೂ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮಲಯಾಳಂ ‘ದೃಶ್ಯಂ 3’ ಮತ್ತು ಹಿಂದಿಯ ‘ದೃಶ್ಯಂ 3’ ಸಿನಿಮಾಗಳು ಒಂದೇ ಸಮಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version