Axar Patel: ಸ್ವಲ್ಪ ಜಾಣತನ ಮೆರೆಯಬೇಕು… ಇದುವೇ ಸೋಲಿಗೆ ಕಾರಣ..!

Axar Patel: ಸ್ವಲ್ಪ ಜಾಣತನ ಮೆರೆಯಬೇಕು… ಇದುವೇ ಸೋಲಿಗೆ ಕಾರಣ..!

IPL 2026: ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಸೋತ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಮನಬಿಚ್ಚಿ ಮಾತನಾಡಿದ್ದಾರೆ. ಪಂದ್ಯದ ನಂತರದ ಮಾತನಾಡಿದ ಅವರು, ತಂಡದ ಪ್ರದರ್ಶನ ಮತ್ತು ಕೆ.ಎಲ್. ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ಸೋಲಿಗೆ ಕಾರಣವಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಸೋಲಿನಲ್ಲೂ ಧನಾತ್ಮಕ ಅಂಶಗಳು:

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳು ನಡೆದಾಗ ಯಾವುದೋ ಒಂದು ನಿರ್ದಿಷ್ಟ ಕಾರಣವನ್ನು ಬೆರಳು ಮಾಡಿ ತೋರಿಸುವುದು ಕಷ್ಟ. ಆದರೆ ಒಟ್ಟಾರೆಯಾಗಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂಬ ತೃಪ್ತಿಯಿದೆ” ಎಂದು ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಚೇಸಿಂಗ್‌ನಲ್ಲಿ ‘ಸ್ಮಾರ್ಟ್’ ಅಗತ್ಯವಿತ್ತು:

211 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ತಂಡವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, “ಚೇಸಿಂಗ್ ಮಾಡುವಾಗ ನಾವು ಇನ್ನೂ ಸ್ವಲ್ಪ ಜಾಣತನದಿಂದ ಆಡಬೇಕಿತ್ತು. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ಗಳು ಉರುಳಿದ್ದು ನಮಗೆ ದೊಡ್ಡ ಹೊಡೆತ ನೀಡಿತು. ಆ ಸಮಯದಲ್ಲಿ ವಿಕೆಟ್ ಉಳಿಸಿಕೊಂಡಿದ್ದರೆ, ನಾವು ಪಂದ್ಯವನ್ನು ಮೊದಲೇ ಮುಗಿಸಬಹುದಿತ್ತು” ಎಂದು ಸೋಲಿನ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.

ಕೆ.ಎಲ್. ರಾಹುಲ್​ಗೆ ಬಹುಪರಾಕ್:

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೆ.ಎಲ್. ರಾಹುಲ್ (92 ರನ್) ಅವರ ಬಗ್ಗೆ ಅಕ್ಷರ್ ಪಟೇಲ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಸಿಕ್ಕ ಆರಂಭವನ್ನು ಅವರು ಪಂದ್ಯದ ಉದ್ದಕ್ಕೂ ಮುಂದುವರಿಸಿದರು. ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರೂ, ಅವರು ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಂಡರು. ಅವರ ಬ್ಯಾಟಿಂಗ್ ನಿಜಕ್ಕೂ ಶ್ಲಾಘನೀಯ” ಎಂದರು.

ಕಂಬ್ಯಾಕ್ ಭರವಸೆ:

“ನಾವು ಪ್ರಸ್ತುತ ಉತ್ತಮ ಲಯದಲ್ಲಿದ್ದೇವೆ. ಈ ಪಂದ್ಯದಿಂದ ಕಲಿತ ಪಾಠಗಳೊಂದಿಗೆ ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಜಯ ಸಾಧಿಸುತ್ತೇವೆ” ಎಂದು ಅಭಿಮಾನಿಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಭರವಸೆ ನೀಡಿದ್ದಾರೆ.

ಮಿಲ್ಲರ್ ಬಗ್ಗೆ ಮಾತಿಲ್ಲ:

ಇದಾಗ್ಯೂ ಈ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಡೇವಿಡ್ ಮಿಲ್ಲರ್ ಅವರ ಹೋರಾಟದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎಂಬುದು ಅಚ್ಚರಿ.

“ನಾವು ಚೇಸಿಂಗ್‌ನಲ್ಲಿ ಇನ್ನೂ ಸ್ವಲ್ಪ ಜಾಣತನದಿಂದ ಆಡಬೇಕಿತ್ತು” ಎಂದು ಅಕ್ಷರ್ ಪಟೇಲ್ ಹೇಳಿದ್ದು ಡೇವಿಡ್ ಮಿಲ್ಲರ್ ಅವರ ಈ ನಿರ್ಧಾರವನ್ನು ಉದ್ದೇಶಿಸಿಯೇ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ಈ ಪಂದ್ಯದ ಕೊನೆಯ ಓವರ್​ನ 5ನೇ ಎಸೆತದಲ್ಲಿ ಸಿಂಗಲ್ ತೆಗೆದು ಪಂದ್ಯವನ್ನು ಟೈ ಮಾಡುವ ಅವಕಾಶವಿದ್ದರೂ ಡೇವಿಡ್ ಮಿಲ್ಲರ್ ರನ್ ನಿರಾಕರಿಸಿದ್ದರು. ಪರಿಣಾಮ ಕೊನೆಯ ಎಸೆತದಲ್ಲಿ 2 ರನ್​ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 1 ರನ್​ನಿಂದ ಸೋಲೊಪ್ಪಿಕೊಂಡಿತು.

ಒಂದು ವೇಳೆ ಡೇವಿಡ್ ಮಿಲ್ಲರ್ 5ನೇ ಎಸೆತದಲ್ಲಿ ಒಂದು ರನ್ ಓಡಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲನ್ನು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಮಿಲ್ಲರ್​ ಅವರ ಅತಿಯಾದ ಆತ್ಮ ವಿಶ್ವಾಸದಿಂದಾಗಿ ಡಿಸಿ ಪಡೆ ಒಂದು ರನ್​​ನಿಂದ ಸೋಲಬೇಕಾಯಿತು.

ಇದನ್ನೂ ಓದಿ: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಬ್ಯಾನ್ ಭೀತಿ?

ಇನ್ನು ಈ ಸೋಲಿನ ಹೊರತಾಗಿಯೂ, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

 

Source link

ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ

ವಿಜಯಪುರ, ಏಪ್ರಿಲ್ 9: ಜಿಲ್ಲೆಯ ತಿಕೋಟಾ ತಾಲುಕು ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ 8:21ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಹಬನೂರು ಮತ್ತು ಟಕ್ಕಳಕಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಬಂದಿದ್ದಾರೆ. ಮಹಾರಾಷ್ಟ್ರದ ಗಡಿ ಗ್ರಾಮಗಳಾದ ಮೊರಬಗಿ ಮತ್ತು ತಿಕ್ಕುಂಡಿಯಲ್ಲೂ ಕಂಪನ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಣ್ಣಿಲ್ಲದವಳಿಗೆ ಕಿವಿ ಕೇಳದವನೇ ದಾರಿ: ಊಬರ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂವಹನ ಕಂಡು ಜಗತ್ತೇ ಫಿದಾ

ಇದು ಕೇವಲ ಒಂದು ಪ್ರಯಾಣದ ಕತೆಯಲ್ಲ, ಭಾಷೆ ಮತ್ತು ಶಬ್ದಗಳನ್ನು ಮೀರಿದ ಎರಡು ಮನಸ್ಸುಗಳ ನಡುವಿನ ಮೌನ ಸಂವಾದ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹೃದಯಸ್ಪರ್ಶಿ ಕಥೆ ‘ಮಾನವೀಯತೆ’ ಎನ್ನುವುದು ದೃಷ್ಟಿ ಅಥವಾ ಶ್ರವಣದ ಶಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ದೃಷ್ಟಿದೋಷವುಳ್ಳ ಪ್ರಯಾಣಿಕರೊಬ್ಬರು ಊಬರ್(Uber) ಬುಕ್ ಮಾಡಿದಾಗ ಅವರಿಗೆ ಸಿಕ್ಕ ಚಾಲಕ ಶ್ರವಣದೋಷವುಳ್ಳವರಾಗಿದ್ದರು. ಒಬ್ಬರಿಗೆ ದಾರಿ ಕಾಣಿಸುತ್ತಿರಲಿಲ್ಲ, ಇನ್ನೊಬ್ಬರಿಗೆ ಶಬ್ದ ಕೇಳಿಸುತ್ತಿರಲಿಲ್ಲ.

ಆದರೆ ಇವರಿಬ್ಬರು ತಮ್ಮ ನಡುವಿನ ಸವಾಲುಗಳನ್ನು ಮೀರಿ, ಅತ್ಯಂತ ಪ್ರೀತಿಯಿಂದ ಸಂವಹನ ನಡೆಸಿ ಪ್ರಯಾಣ ಪೂರೈಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾನವೀಯತೆಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಐಶ್ವರ್ಯ ಟಿವಿ ಪಿಳ್ಳೈ ಅವರು ತಮ್ಮ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಈ ಅನುಭವ, ಓದುಗರ ಕಣ್ಣಾಲಿಗಳನ್ನು ಒದ್ದೆ ಮಾಡುವುದರ ಜೊತೆಗೆ ಮುಖದಲ್ಲಿ ನಗು ಮೂಡಿಸುತ್ತದೆ.

ಆ ಒಂದು ಕುತೂಹಲದ ನಿರ್ಧಾರ
ಐಶ್ವರ್ಯ ಅವರು ಅಂದು ಎಂದಿನಂತೆ ಊಬರ್ ರೈಡ್ ಬುಕ್ ಮಾಡಿದ್ದರು. ರೈಡ್ ದೃಢಪಟ್ಟಾಗ ಅವರಿಗೆ ಒಂದು ವಿಷಯ ತಿಳಿಯಿತು, ತಮ್ಮನ್ನು ಕರೆದೊಯ್ಯಲು ಬರುತ್ತಿರುವ ಚಾಲಕನಿಗೆ ಶ್ರವಣದೋಷವಿದೆ ಎಂಬುದು. ಐಶ್ವರ್ಯ ಅವರಿಗೆ ಒಂದು ಕ್ಷಣ ತಮಾಷೆ ಎನಿಸಿತು, ಏಕೆಂದರೆ ಸ್ವತಃ ಅವರೂ ದೃಷ್ಟಿಹೀನರಾಗಿದ್ದರು.

ಮತ್ತಷ್ಟು ಓದಿ: ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?

ಶ್ರವಣದೋಷವುಳ್ಳ ಚಾಲಕ ಮತ್ತು ದೃಷ್ಟಿದೋಷವುಳ್ಳ ಪ್ರಯಾಣಿಕ ಈ ಜೋಡಿಯ ಪಯಣ ಹೇಗಿರುತ್ತೆ?” ಎಂಬ ಕುತೂಹಲದಲ್ಲಿ ಐಶ್ವರ್ಯ ರೈಡ್ ರದ್ದುಗೊಳಿಸದೆ, ಏನಾಗುತ್ತದೋ ನೋಡೋಣ ಎಂದು ಕಾಯುತ್ತಾ ನಿಂತರು. ಕ್ಯಾಬ್ ಬಂದಿತು. ಐಶ್ವರ್ಯ ತಮ್ಮ ಬಿಳಿ ಸ್ಟಿಕ್ ಸಹಾಯದಿಂದ ಆತ್ಮವಿಶ್ವಾಸದಿಂದ ಕಾರಿನೊಳಗೆ ಕುಳಿತರು. ಚಾಲಕನಿಗೆ ತನ್ನ ಪ್ರಯಾಣಿಕರಿಗೆ ಕಣ್ಣು ಕಾಣಿಸುವುದಿಲ್ಲ ಎಂಬುದು ಅರಿವಾಯಿತು. ಐಶ್ವರ್ಯ ಅವರಿಗೆ ಚಾಲಕನಿಗೆ ಕಿವಿ ಕೇಳಿಸುವುದಿಲ್ಲ ಎಂಬುದು ಗೊತ್ತಿತ್ತು.

ಐಶ್ವರ್ಯ ತಮ್ಮ ಫೋನ್‌ನಲ್ಲಿ OTP ಟೈಪ್ ಮಾಡಿ, ಬೆರಳುಗಳ ಮೂಲಕ ಚಾಲಕನಿಗೆ ತೋರಿಸಿದರು. ದಾರಿಯ ಮಧ್ಯೆ, “ನನ್ನನ್ನು ನಿಖರವಾಗಿ ಪ್ರವೇಶದ್ವಾರದಲ್ಲೇ ಬಿಡಿ” ಎಂದು ಫೋನ್ ಮೂಲಕ ಸಂದೇಶ ಕಳುಹಿಸಿದರು. ಚಾಲಕ ಆ ಸಂದೇಶವನ್ನು ಓದಿ, ಯಾವುದೇ ಗೊಂದಲವಿಲ್ಲದೆ ಸಮ್ಮತಿಸಿದರು.

ಪ್ರಯಾಣದ ಸುಂದರ ಅಂತ್ಯ
ಹೋಗಬೇಕಾದ ಜಾಗ ತಲುಪಿದಾಗ ಅಸಲಿ ಮ್ಯಾಜಿಕ್ ನಡೆಯಿತು. ಐಶ್ವರ್ಯ ಪಾವತಿ ಮುಗಿಸಿ ಕಾರಿನಿಂದ ಇಳಿದರು. ಆಗ ಚಾಲಕ ತಾನಾಗಿಯೇ ಕೆಳಗಿಳಿದು ಬಂದು, ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಕರೆದರು. ಯಾವುದೇ ಮಾತಿಲ್ಲದೆ, ಸನ್ನೆಯ ಮೂಲಕವೇ ಐಶ್ವರ್ಯ ಅವರನ್ನು ಸುರಕ್ಷಿತವಾಗಿ ಗೇಟ್​ವರೆಗೆ ತಲುಪಿಸುವಂತೆ ಸೂಚಿಸಿದರು.

ನಮ್ಮ ನಡುವೆ ಸಂಭಾಷಣೆ ಇರಲಿಲ್ಲ, ಆದರೆ ಎಲ್ಲವೂ ಅರ್ಥವಾಗುತ್ತಿತ್ತು ಎಂದು ಐಶ್ವರ್ಯ ಆ ಕ್ಷಣವನ್ನು ನೆನೆಯುತ್ತಾರೆ. ಆ ರೈಡ್‌ಗೆ ಅವರು 5 ಸ್ಟಾರ್ ರೇಟಿಂಗ್ ನೀಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka 2nd PUC Results 2026 Live: ಪಿಯುಸಿ ಫಲಿತಾಂಶದ ಕ್ಷಣಗಣನೆ ಶುರು; ಮಧ್ಯಾಹ್ನ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ರಿಸಲ್ಟ್ – Kannada News | Karnataka 2nd PUC Result 2026 Live Check Ranking, Score Toppers and more at karresults.nic.in, digilocker.gov.in online

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿರುವಂತೆ, ಇಂದು (ಏಪ್ರಿಲ್ 9, 2026) ಮಧ್ಯಾಹ್ನದ ವೇಳೆಗೆ ರಾಜ್ಯದ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಉನ್ನತ ವ್ಯಾಸಂಗದ ಕನಸು ಕಾಣುತ್ತಿದ್ದಾರೆ. ಫಲಿತಾಂಶದಲ್ಲಿ ಅಂಕಗಳ ಬಗ್ಗೆ ಸಮಾಧಾನವಿಲ್ಲದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಮಂಡಳಿಯ ವೆಬ್‌ಸೈಟ್‌ನಲ್ಲಿ ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಫಲಿತಾಂಶಕ್ಕಾಗಿ karresults.nic.in ಗಮನಿಸುತ್ತಿರಿ.

ಕ್ಷಣ ಕ್ಷಣ ದ್ವಿತೀಯ ಪಿಯುಸಿ ಫಲಿತಾಂಶ ಸುದ್ದಿಗಳಿಗಾಗಿ ಟಿವಿ9 ವೆಬ್​​​ ಸೈಟ್​ ನೋಡಿ

Source link

ಕಾಡಾನೆ ಹಾವಳಿಗೆ ಬ್ರೇಕ್ ಹಾಕುತ್ತಾ ರೈಲ್ವೆ ಹಳಿ ಬ್ಯಾರಿಕೇಡ್? ಹಾಸನ ಗಡಿಯಲ್ಲಿ 35 ಕಿಮೀ ಭದ್ರಕೋಟೆ ಸಿದ್ಧ!

ಹಾಸನ, ಏಪ್ರಿಲ್ 9: ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆಗಳ ಸಮಸ್ಯೆಗೆ ಕೊನೆಗೂ ತಾಂತ್ರಿಕ ಪರಿಹಾರವೊಂದು ದಕ್ಕಿದೆ. ಕೊಡಗಿನಿಂದ ಹಾಸನಕ್ಕೆ (Hassan) ಲಗ್ಗೆಯಿಡುತ್ತಿದ್ದ ಆನೆ ಹಿಂಡುಗಳನ್ನು ತಡೆಯಲು ನಿರ್ಮಿಸಲಾಗುತ್ತಿದ್ದ ರೈಲ್ವೆ ಹಳಿ ಬ್ಯಾರಿಕೇಡ್ (Railway Track Barricade) ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಕಳೆದ 20 ವರ್ಷಗಳಲ್ಲಿ ಕಾಡಾನೆ ದಾಳಿಗೆ ಸುಮಾರು 80ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೊಡಗಿನಿಂದ ವಲಸೆ ಬರುವ ಆನೆಗಳು ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲೇ ಬೀಡುಬಿಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಾಗಿತ್ತು. ಇದನ್ನು ತಡೆಯಲು ಸರ್ಕಾರವು ಹಾಸನ ಮತ್ತು ಕೊಡಗು ಗಡಿಭಾಗದಲ್ಲಿ ಸುಮಾರು 35 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು.

ಮಾಸ್ಟರ್ ಪ್ಲಾನ್ ಸಿದ್ಧ

ಆಲೂರು ಮತ್ತು ಸಕಲೇಶಪುರ ತಾಲ್ಲೂಕಿನ ಗಡಿಭಾಗದಲ್ಲಿ ಈ ಬ್ಯಾರಿಕೇಡ್ ನಿರ್ಮಾಣವಾಗಿದ್ದು, ಇದರಲ್ಲಿ ಆನೆಗಳ ಸಂಚಾರ ನಿಯಂತ್ರಿಸಲು 13 ಪ್ರಮುಖ ಗೇಟ್‌ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ಕಟ್ಟೆಪುರ, ಶಿರಗಾವರ ಮೂಲಕ ನೀರಿಗಾಗಿ ಬರುವ ಆನೆಗಳಿಗೆ ಇನ್ಮುಂದೆ ಈ ರೈಲ್ವೆ ಹಳಿಗಳ ತಡೆಗೋಡೆ ಅಡ್ಡಿಯಾಗಲಿದೆ.

ಕಾಫಿ ಬೆಳೆಗಾರರ ಆಗ್ರಹವೇನು?

ಬ್ಯಾರಿಕೇಡ್ ನಿರ್ಮಾಣವೇನೋ ಪೂರ್ಣಗೊಂಡಿದೆ, ಇದರಿಂದ ಕೊಡಗಿನಿಂದ ಹೊಸ ಆನೆಗಳು ಬರುವುದು ತಪ್ಪಬಹುದು. ಆದರೆ ಈಗಾಗಲೇ ಹಾಸನದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ 80ಕ್ಕೂ ಹೆಚ್ಚು ಆನೆಗಳ ಕಥೆಯೇನು? ಎಂಬುದು ಸ್ಥಳೀಯ ಬೆಳೆಗಾರರ ಪ್ರಶ್ನೆ. ನಾಡಿನಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಅಥವಾ ಶ್ರೀಲಂಕಾ ಮಾದರಿಯಲ್ಲಿ ಆನೆಧಾಮ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ.

ಇದನ್ನೂ ಓದಿ: ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯು ನಾಡಿನಲ್ಲಿರುವ ಆನೆಗಳ ಸ್ಥಳಾಂತರ ಪ್ರಕ್ರಿಯೆಗೂ ತಯಾರಿ ನಡೆಸುತ್ತಿದ್ದು, ಮಲೆನಾಡಿಗರ ಆತಂಕ ದೂರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VIDEO: ನನ್ನಿಂದಾನೇ ಸೋತ್ವಿ… ಕಣ್ಣೀರಿಟ್ಟ ಮಿಲ್ಲರ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯವು ಹೈ ಡ್ರಾಮಾಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ಆದರೆ ಈ ಸೋಲಿಗಿಂತ ಹೆಚ್ಚಾಗಿ ಕ್ರಿಕೆಟ್ ಪ್ರೇಮಿಗಳ ಮನ ಕಲಕಿದ್ದು ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಕಣ್ಣೀರು.

ಕೊನೆಯ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ದಾಳಿಗೆ ಇಳಿದಾಗ ಡೆಲ್ಲಿಗೆ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಮಿಲ್ಲರ್ ಅದ್ಭುತವಾಗಿ ಆಡುತ್ತಾ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯಕ್ಕೆ ತಂದಿಟ್ಟರು.

ಆದರೆ 5ನೇ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಹೊಡೆದರೂ ಸಿಂಗಲ್ ಓಡಲು ನಿರಾಕರಿಸಿದರು. ಬಹುಶಃ ತಾನೇ ಸಿಕ್ಸರ್ ಅಥವಾ ಬೌಂಡರಿ ಬಾರಿಸಿ ಪಂದ್ಯ ಮುಗಿಸುವ ಆತ್ಮವಿಶ್ವಾಸ ಅವರಲ್ಲಿತ್ತು.

ಪ್ರಸಿದ್ಧ್ ಕೃಷ್ಣ ಎಸೆದ ಅಂತಿಮ ಬೌನ್ಸರ್ ಅನ್ನು ಮಿಲ್ಲರ್ ಕನೆಕ್ಟ್ ಮಾಡಲು ವಿಫಲರಾದರು. ಬೈ ರನ್ ಓಡಲು ಯತ್ನಿಸಿದ ಕುಲ್ದೀಪ್ ಯಾದವ್ ರನ್ ಔಟ್ ಆದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ 1 ರನ್ ರೋಚಕ ಜಯ ಸಾಧಿಸಿತು.

ಇತ್ತ ಗುಜರತಾ ಟೈಟಾನ್ಸ್ ತಂಡವು ಕೇವಲ ಒಂದು ರನ್​​ನಿಂದ ಸೋಲುತ್ತಿದ್ದಂತೆ ಡೇವಿಡ್ ಮಿಲ್ಲರ್ ಭಾವುಕರಾದರು. ಅಲ್ಲದೆ ತಾನು ಮಾಡಿದ ಆ ಒಂದು ತಪ್ಪು (ಸಿಂಗಲ್ ಓಡದಿರುವುದು) ಮಿಲ್ಲರ್ ಅವರನ್ನು ಬಹುವಾಗಿ ಕಾಡಿದಂತಿತ್ತು.

ಈ ನೋವಿನೊಂದಿಗೆ ಕಣ್ಣೀರಿಡುತ್ತಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ ಡೇವಿಡ್ ಮಿಲ್ಲರ್ ಅವರನ್ನು ರಶೀದ್ ಖಾನ್ ಮತ್ತು ಶುಭ್​ಮನ್ ಗಿಲ್, ಅಕ್ಷರ್ ಪಟೇಲ್ ಬಂದು ಸಂತೈಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲ್ಲರ್ ಅವರ ಆಟದ ಮೇಲಿನ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

 

Source link

2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್

‘ಕಾಡ’ ಹೆಸರಿನ ಸಿನಿಮಾದಲ್ಲಿ ಜಯರಾಂ ಕಾರ್ತಿಕ್ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸಿನಿಮಾ ಬಗ್ಗೆ ಮಾತು ಆರಂಭಿಸಿವುದಕ್ಕೂ ಮೊದಲು ತಮ್ಮ ಬಣ್ಣದ ಲೋಕದ ಜರ್ನಿಯನ್ನು ಬೆಂಬಲಿಸಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ. ‘ಕಾಡ’ ಚಿತ್ರ ಅವರು ತಮ್ಮ ಡ್ರೀಮ್ ಪ್ರಾಜೆಕ್ಟ್ ಎಂದು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಸಿಲಿನ ನಡುವೆ ತಂಪಾದ ಸುದ್ದಿ: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆ!

ಬೆಂಗಳೂರು, ಏ.9: ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಿದ್ದರೂ, ಇಂದು ಸಂಜೆ ವೇಳೆಗೆ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ರಾಜಧಾನಿಯಲ್ಲಿ ಇಂದು ಗರಿಷ್ಠ ಉಷ್ಣಾಂಶ 35°C ರಿಂದ 37°C ರವರೆಗೆ ದಾಖಲಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಬಿಸಿಲು ಹೆಚ್ಚಾಗಿದ್ದರೂ, ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ 60% ಮುನ್ಸೂಚನೆ ಇದೆ.

ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಸೆಖೆ ಹೆಚ್ಚಿರಲಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಅಸಹನೀಯ ವಾತಾವರಣವಿರಬಹುದು. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 40°C ದಾಟುವ ಸಾಧ್ಯತೆಯಿದೆ.

ಮೈಸೂರು, ಹಾಸನ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ತಾಪಮಾನ ಅತಿ ಹೆಚ್ಚಿರಲಿದೆ (41°C – 42°C). ಮಧ್ಯಾಹ್ನ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಬೇಕು. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಒಣ ಹವೆ ಮುಂದುವರಿಯಲಿದ್ದು, ತಾಪಮಾನದಲ್ಲಿ ಏರಿಕೆಯಾಗಲಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗುಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸೆಖೆ ಹೆಚ್ಚಿದ್ದರೂ, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ತುಮಕೂರು ಮತ್ತು ಕೋಲಾರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುನೀತ್ ಹೆಸರಲ್ಲಿ ದುಡ್ಡು ಮಾಡ್ತಾರೆ ಎಂದವರಿಗೆ ಗಿಲ್ಲಿ ಸ್ಟೈಲ್​​ನಲ್ಲಿ ಉತ್ತರ ಕೊಟ್ಟ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು (Anushree) ಪುನೀತ್ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ. ಈ ಕಾರಣದಿಂದಲೇ ಅನುಶ್ರೀ ಅವರ ಯೂಟ್ಯೂಬ್ ಲೋಗೋದಲ್ಲಿ ಪುನೀತ್ ಫೋಟೋ ಸೇರಿಸಿಕೊಂಡಿದ್ದಾರೆ. ಪುನೀತ್ ನಿಧನದ ಬಳಿಕ ಅನುಶ್ರೀ ಸಾಕಷ್ಟು ಬಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಿದೆ. ತಮ್ಮ ಮದುವೆಯಲ್ಲಿ ಪುನೀತ್ ಫೋಟೋ ಇಟ್ಟು ಅವರು ಪೂಜಿಸಿದ್ದರು. ಇದು ಪುನೀತ್ ಮೇಲೆ ಅವರಿಗೆ ಇರೋ ಪ್ರೀತಿಗೆ ಸಾಕ್ಷಿ. ಆದರೆ, ಕೆಲವರು ಇದನ್ನು ಟ್ರೋಲ್ ಮಾಡಿದ್ದು ಇದೆ. ಇದಕ್ಕೆ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ.

ಪುನೀತ್ ಅವರನ್ನು ಅನುಶ್ರೀ ಆರಾಧಿಸುತ್ತಾರೆ. ಅವರು ಅನೇಕ ಸಂದರ್ಶನಗಳಲ್ಲಿ ಪುನೀತ್ ಬಗ್ಗೆ ಹಾಡಿ ಹೊಗಳಿದ್ದಾರೆ. ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಅನೇಕರು ಅನುಶ್ರೀ ಅವರನ್ನು ಟೀಕೆ ಮಾಡಿದ್ದರು. ಅವರದ್ದು ಮೊಸಳೆ ಕಣ್ಣೀರು, ಪುನೀತ್ ಹೆಸರಲ್ಲಿ ಅವರು ದುಡ್ಡು ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಅನುಶ್ರೀ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಆರ್​​ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಅನುಶ್ರೀ ಮಾತನಾಡಿದ್ದಾರೆ. ‘ಇವಳು ಎಷ್ಟು ಡವ್ ಮಾಡ್ತಾಳೆ ಗುರು ಎಂದು ಹೇಳುತ್ತಾರೆ. ಈ ಬಗ್ಗೆ ಏನು ಹೇಳ್ತೀರಾ’ ಎಂದು ಅನುಶ್ರೀಗೆ ಕೇಳಲಾಯಿತು. ಮುಚ್ಚುಮರೆ ಇಲ್ಲದೆ ಇದಕ್ಕೆ ಅವರು ಉತ್ತರಿಸಿದರು.

ಇದನ್ನೂ ಓದಿ: ‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

‘ನೀವು ತುಂಬಾನೇ ಸ್ವೀಟ್. ನಿಮ್ಮಂತವರ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ’ ಎಂದು ಪುನೀತ್ ಅವರು ಅನುಶ್ರೀಗೆ ಹೇಳಿದ್ದರಂತೆ. ಇದರ ಸ್ಕ್ರೀನ್​ ಶಾಟ್ ಅನ್ನು ಅನುಶ್ರೀ ತೋರಿಸಿದ್ದಾರೆ. ಆ ಬಳಿಕ ಮಾತನಾಡಿದ ಅವರು. ‘ನಾನು ಎಂತಹ ಫ್ಯಾನ್ ಅಂತ ಅವರಿಗೆ ಗೊತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು. ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್’ ಎಂದರು ಅನುಶ್ರೀ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಬ್ಯಾನ್ ಭೀತಿ?

IPL 2026: ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿರುವ ಆಲ್-ರೌಂಡರ್ ಕೃನಾಲ್ ಪಾಂಡ್ಯ (Krunal Pandya) ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಒಬ್ಬ ಸ್ಪಿನ್ನರ್ ಆಗಿದ್ದರೂ 120-125 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಕುತೂಹಲ ಹಾಗೂ ಅನುಮಾನಗಳನ್ನು ಮೂಡಿಸಿದೆ.

ಚರ್ಚೆಗೆ ಕಾರಣವೇನು?

ಏಪ್ರಿಲ್ 5, 2026 ರಂದು ನಡೆದ ಸಿಎಸ್‌ಕೆ (CSK) ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬರೋಬ್ಬರಿ 126.1 ಕಿ.ಮೀ. ವೇಗದಲ್ಲಿ ಎಸೆತವೊಂದನ್ನು ಎಸೆದರು. ಇದು ಸಾಮಾನ್ಯ ಮಧ್ಯಮ ವೇಗದ ಬೌಲರ್‌ಗಳ ವೇಗಕ್ಕೆ ಸಮನಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಇದು ‘ಚಕ್ಕಿಂಗ್’ (Chucking) ಇರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.

ಹಿಂದೆ ಮಾರ್ಲನ್ ಸ್ಯಾಮ್ಯುಯೆಲ್ಸ್ ಕೂಡ ಇದೇ ರೀತಿಯ ವೇಗದ ಎಸೆತಗಳನ್ನು ಎಸೆದಾಗ ಅವರ ಬೌಲಿಂಗ್ ಆಕ್ಷನ್ ಬಗ್ಗೆ ದೂರುಗಳು ಕೇಳಿಬಂದಿದ್ದವು.

ನಿಯಮ ಏನು ಹೇಳುತ್ತದೆ?

ಐಸಿಸಿ ಮತ್ತು ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಬೌಲರ್ ಚೆಂಡನ್ನು ಎಸೆಯುವಾಗ ಅವರ ಮೊಣಕೈ (Elbow) 15 ಡಿಗ್ರಿಗಿಂತ ಹೆಚ್ಚು ನೇರವಾಗಬಾರದು.

ವೇಗ ಮತ್ತು ಆಕ್ಷನ್: ಬೌಲರ್ ಎಷ್ಟೇ ವೇಗವಾಗಿ ಬೌಲಿಂಗ್ ಮಾಡಿದರೂ, ಅವರ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗಿದ್ದರೆ ಅದು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ.

ಅನುಮಾನ: ಕೃನಾಲ್ ಪಾಂಡ್ಯ 125 ಕ್ಕಿಂತ ವೇಗದಲ್ಲಿ ಚೆಂಡೆಸೆದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗೆ ಸ್ಪಿನ್ನರ್​ಗೆ ಇಷ್ಟೊಂದು ವೇಗದಲ್ಲಿ ಚೆಂಡೆಸಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಯಾಮ್ಯುಯೆಲ್ಸ್​ಗೆ ನಿಷೇಧ:

ಈ ಹಿಂದೆ ಐಪಿಎಲ್​ನಲ್ಲಿ ಇದೇ ಮಾದರಿಯಲ್ಲಿ ಚೆಂಡೆಸೆದಿದ್ದ ವೆಸ್ಟ್ ಇಂಡೀಸ್‌ನ ಆಲ್-ರೌಂಡರ್ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಮೇಲೆ ನಿಷೇಧ ಹೇರಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

2012ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದ ಪರ ಆಡಿದ್ದ ಸ್ಯಾಮ್ಯುಯೆಲ್ಸ್, ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಸಂಶಯಾಸ್ಪದ ಬೌಲಿಂಗ್ ಆಕ್ಷನ್ ಬಗ್ಗೆ ವರದಿ ಮಾಡಲ್ಪಟ್ಟಿದ್ದರು.

ಸ್ಪಿನ್ನರ್ ಆಗಿದ್ದ ಸ್ಯಾಮ್ಯುಯೆಲ್ಸ್​ ಸುಮಾರು 122 ಕಿ.ಮೀ. ವೇಗದಲ್ಲಿ ಎಸೆದಿದ್ದ “ಫಾಸ್ಟರ್ ಒನ್” ಎಸೆತಗಳು ಅಂಪೈರ್‌ಗಳಾದ ಅಲೀಂ ದಾರ್ ಮತ್ತು ಬ್ರೂಸ್ ಆಕ್ಸನ್‌ಫೋರ್ಡ್ ಅವರ ಸಂಶಯಕ್ಕೆ ಕಾರಣವಾಗಿದ್ದವು.

ಈ ಫಾಸ್ಟರ್ ಎಸೆತಗಳ ಬಗ್ಗೆ ಸಂಶಯ ಮೂಡಿದ್ದ ಕಾರಣ, ಈ ಪಂದ್ಯದ ಬಳಿಕ ಮಾರ್ಲನ್ ಸ್ಯಾಮ್ಯುಯೆಲ್ಸ್​ ಅವರನ್ನು ಆ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಯಿತು.

ಕೃನಾಲ್​ಗೆ ಬ್ಯಾನ್ ಭೀತಿ:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಕೃನಾಲ್ ಪಾಂಡ್ಯ ಅವರ ಎಸೆತಗಳ ವೇಗ ಕೂಡ ಚರ್ಚೆಗೀಡಾಗಿದೆ. ಅಲ್ಲದೆ ಈ  ‘ವೇಗದ ಸ್ಪಿನ್ ಬೌನ್ಸರ್’ ಆಕಸ್ಮಿಕವೇನಲ್ಲ. ಈ ಹಿಂದೆ ಕೂಡ ಕೃನಾಲ್ ಇಂತಹದ್ದೇ ಎಸೆತಗಳ ಮೂಲಕ ಬ್ಯಾಟರ್​ಗಳನ್ನು ತಬ್ಬಿಬ್ಬು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿವೆ…

  • ಬೌಲಿಂಗ್ ವೇಗ: ಕೃನಾಲ್ ಅವರು ಸ್ಪಿನ್ನರ್ ಆಗಿದ್ದರೂ 125-130 kmph ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದಾರೆ. ಒಬ್ಬ ಸ್ಪಿನ್ನರ್ ತನ್ನ ಶೈಲಿಯನ್ನು ಬದಲಿಸದೆ ಹಠಾತ್ತನೆ ವೇಗಿಗಳ ವೇಗದಲ್ಲಿ ಬೌನ್ಸರ್ ಎಸೆಯುವುದು ಬ್ಯಾಟರ್‌ಗಳಿಗೆ ಅಪಾಯಕಾರಿ ಎನಿಸಬಹುದು ಎಂಬುದು ಕೆಲವರ ವಾದ.
  • ಬೌಲಿಂಗ್ ಶೈಲಿಯ ಗೊಂದಲ: ಕೃನಾಲ್ ಅವರು ಬೌನ್ಸರ್ ಎಸೆಯುವಾಗ ಸ್ಲಿಂಗ್ (Slingy) ಅಥವಾ ಪಕ್ಕದಿಂದ ಕೈ ಬೀಸಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ನಿಯಮಬದ್ಧವೇ ಅಥವಾ ಇಲ್ಲವೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.
  • ಮಿತಿ ಮೀರಿದ ಪ್ರಯೋಗ: ಕೆಲವರು ಕೃನಾಲ್ ಅವರು ತುಂಬಾ ಹೆಚ್ಚು ಪ್ರಯೋಗಗಳನ್ನು ಮಾಡುತ್ತಿದ್ದಾರೆ, ಇದು ಕೇವಲ ಗೊಂದಲ ಮೂಡಿಸಲು ಮಾಡುತ್ತಿರುವ ‘ತಂತ್ರ’ವೇ ಹೊರತು ನೈಜ ಸ್ಪಿನ್ ಬೌಲಿಂಗ್ ಅಲ್ಲ ಎಂದು ಟೀಕಿಸುತ್ತಿದ್ದಾರೆ.
  • ಅಸುರಕ್ಷಿತ ಎಂಬ ಆರೋಪ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಅವರಿಗೆ ಸತತವಾಗಿ ಬೌನ್ಸರ್ ಎಸೆದ ಹಿನ್ನೆಲೆಯಲ್ಲಿ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಈ ಬಗ್ಗೆ ಬಿಸಿಸಿಐಗೆ ದೂರು ನೀಡಲು ಮುಂದಾಗಿದೆ ಎಂಬ ವರದಿಗಳಿವೆ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಕೃನಾಲ್ ಪಾಂಡ್ಯ ಬೌಲಿಂಗ್ ಆ್ಯಕ್ಷನ್ ಬಗ್ಗೆ ದೂರು ನೀಡಿದರೆ, ಅವರು ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲಿಯವರೆಗೆ ಬೌಲಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆಯಿಲ್ಲ. ಇನ್ನು ಪರೀಕ್ಷೆಗೆ ಒಳಗಾದರೆ ವೇಗದ ಸ್ಪಿನ್ ಬೌನ್ಸರ್​ಗೆ ಕಡಿವಾಣ ಹಾಕಬಹುದು.

ಏಕೆಂದರೆ ಈ ಹಿಂದೆ ಐಪಿಎಲ್​ನಲ್ಲಿ 120 ಕ್ಕಿಂತ ವೇಗದಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ಮೂಡಿದ್ದ ಕಾರಣ ಅವರಿಗೆ ಐಪಿಎಲ್​ನಲ್ಲಿ ಬೌಲಿಂಗ್ ಬ್ಯಾನ್ ಮಾಡಲಾಗಿತ್ತು.

ಇದನ್ನೂ ಓದಿ: ಒಂದು ರನ್ ಸೋಲುಗಳೊಂದಿಗೆ ಹೀಗೊಂದು ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್

ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೃನಾಲ್ ಪಾಂಡ್ಯ 125 ಕಿ.ಮೀ ವೇಗದಲ್ಲಿ ಬೌನ್ಸರ್​ ಎಸೆಯುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಚರ್ಚೆಗಳ ನಡುವೆ ಸಿಎಸ್​ಕೆ ತಂಡ ಬಿಸಿಸಿಐಗೆ ದೂರು ನೀಡಲಿದೆಯಾ ಎಂಬುದೇ ಈಗ ಕುತೂಹಲ.

 

 

Source link

Exit mobile version