Nagara Panchami 2026: ನಾಗರ ಪಂಚಮಿಗೆ ಮನೆಯಲ್ಲಿಯೇ ಮಾಡಿ ಅರಶಿನ ಎಲೆ ಕಡುಬು; ಇಲ್ಲಿದೆ ರೆಸಿಪಿ – Kannada News | Nagara Panchami 2026: Make turmeric leaf kadubu for this festivals

ನಾಗರ ಪಂಚಮಿ (Nagara Panchami) ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ಈ ಬಾರಿ ಈ ಹಬ್ಬವನ್ನು ಆಗಸ್ಟ್‌ 27 ರಂದು ಆಚರಿಸಲಾಗುತ್ತಿದೆ. ನಾಗರ ಪಂಚಮಿಯ ದಿನ ನಾಗ ದೇವರಿಗೆ ಹಾಲೆರೆದು, ವಿಶೇಷ ಖಾದ್ಯಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವರ ನೈವೇದ್ಯಕ್ಕಾಗಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಹುರಿಗಡಲೆ ಮತ್ತು ಬೆಲ್ಲ ಬಳಸಿ ರುಚಿಕರ ತಂಬಿಟ್ಟು ತಯಾರಿಸುವಂತೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರ ಪಂಚಮಿಯ ದಿನ ಅರಶಿನ ಎಲೆ ಕಡುಬು ಮಾಡಲಾಗುತ್ತದೆ. ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೆ ನೀವು ಕೂಡ ಮನೆಯಲ್ಲಿ ಅರಶಿನ ಎಲೆ ಕಡುಬನ್ನು ಮಾಡಿ, ಇದರ ಈಸಿ ರೆಸಿಪಿ ಇಲ್ಲಿದೆ.

ಅರಶಿನ ಎಲೆ ಕಡುಬು ಮಾಡುವುದು ಹೇಗೆ?

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯ ದಿನ ಸಾಂಪ್ರದಾಯಿಕ ತಿನಿಸು ಅರಶಿನ ಎಲೆ ಕಡುಬು ತಯಾರಿಸಲಾಗುತ್ತದೆ. ಈ ಬಾರಿ ಹಬ್ಬಕ್ಕೆ ನೀವು ಕೂಡ ಈ ಸಿಹಿ ಕಡುಬನ್ನು ಮನೆಯಲ್ಲಿ ತಯಾರಿಸಿ. ಇದರ ಈಸಿ ರೆಸಿಪಿಯನ್ನು Sandhya Shetty’s Kitchen ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಅರಿಶಿನ ಎಲೆ ಕಡುಬು ಮಾಡಲು ಬೇಕಾಗುವ ಪದಾರ್ಥಗಳು: ಅಕ್ಕಿ, ನೀರು, ತುರಿದ ತೆಂಗಿನಕಾಯಿ, ಪುಡಿ ಮಾಡಿದ ಬೆಲ್ಲ, ತುಪ್ಪ, ಏಲಕ್ಕಿ, ಉಪ್ಪು, ಅರಿಶಿನ ಎಲೆ

ರೆಸಿಪಿ ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ

ಅರಶಿನ ಎಲೆ ಕಡುಬು ತಯಾರಿಸುವ ವಿಧಾನ:

  • ಮೊದಲಿಗೆ 4 ರಿಂದ 5 ಗಂಟೆ ನೆನೆಸಿಟ್ಟ ಅಕ್ಕಿ, ಒಂದು ಕಪ್‌ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಲೋಟ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಜಾಸ್ತಿ ತೆಳುವಾಗಿರಬಾರದು.
  • ಈಗ ಹೂರಣ ತಯಾರಿಸಿಕೊಳ್ಳಲು, ಒಂದು ಬೌಲ್‌ಗೆ ತುರಿದ ಬೆಲ್ಲವನ್ನು ಹಾಕಿ. ಒಂದು ಕಪ್‌ ಬೆಲ್ಲಕ್ಕೆ ಎರಡು ಕಪ್‌ನಷ್ಟು ತೆಂಗಿನಕಾಯಿ ತುರಿ ಹಾಕಿ, ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀವು ಈ ಹೂರಣವನ್ನು ತುಪ್ಪದಲ್ಲಿ ಹುರಿಯಬಹುದು ಹಾಗೂ ಹುರಿದ ಬಿಳಿ ಎಳ್ಳನ್ನು ಕೂಡ ಸೇರಿಸಬಹುದು.
  • ಹೂರಣ ಸಿದ್ಧವಾದ ಬಳಿಕ ಒಂದೊಂದೇ ಅರಶಿನ ಎಲೆಯನ್ನು ತೆಗೆದುಕೊಂಡು ಅದಕ್ಕೆ ತೆಳುವಾಗಿ ಹಿಟ್ಟನ್ನು ಹರಡಿ, ನಂತರ ಮೊದಲೇ ತಯಾರಿಸಿಟ್ಟ ಕಾಯಿ ತುರಿ, ಬೆಲ್ಲದ ಹೂರಣವನ್ನು ಹಾಕಿ ಎಲೆಯನ್ನು ಮಡಸಿ. ನಂತರ ಇಡ್ಲಿ ಪಾತ್ರೆ ಅಥವಾ ಬಿಸಿ ನೀರಿನ ಹಬೆಯಲ್ಲಿ ಬೇಯಿಸಿ.
  • 10 ರಿಂದ 15 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರ ಅರಶಿನ ಎಲೆ ಕಡುಬು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಬ್ರೇಕ್ ಪಡೆದ ಮಳೆ; ಎರಡನೇ ದಿನದಾಟ ಆರಂಭ – Kannada News | India vs SL Galle Test Day 2: Rain Delays Play, Match Finally Resumes

ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಗಾಲೆ ಟೆಸ್ಟ್‌ ಪಂದ್ಯದ ಎರಡನೇ ದಿನದಾಟ ಕೊನೆಗೂ ಆರಂಭವಾಗಿದೆ. ಮಳೆಯಿಂದಾಗಿ ಎರಡನೇ ದಿನದಾಟವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಮೊದಲ ದಿನವೂ ಮಳೆಯಿಂದಾಗಿ ಸಂಪೂರ್ಣ 90 ಓವರ್​ಗಳ ಆಟವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟವನ್ನು ಬೇಗನೇ ಶುರು ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಆಟ ಬೆಳಿಗ್ಗೆ 9:45 ಕ್ಕೆ ಆರಂಭವಾಗಬೇಕಿತ್ತು. ಆದರೆ ಎರಡನೇ ದಿನದಂದು ಮಳೆ ಸುರಿದ ಕಾರಣದಿಂದ ಮೊದಲ ಸೆಷನ್ ಸಂಪೂರ್ಣವಾಗಿ ರದ್ದಾಯಿತು. ಇದೀಗ ಎರಡನೇ ಸೆಷನ್​ನ ಅಂತ್ಯಕ್ಕೂ ಮುನ್ನ ಆಟ ಮತ್ತೆ ಆರಂಭವಾಗಿದೆ.

288 ರನ್​ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಮೊದಲ ದಿನದಾಟವನ್ನು ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದಂದು ತನ್ನ ಸ್ಕೋರ್​ಗೆ 46 ರನ್ ಸೇರಿಸುವಷ್ಟರಲ್ಲಿ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಮೊದಲ ದಿನ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್, ಎರಡನೇ ದಿನ ತಮ್ಮ ಖಾತೆಗೆ 12 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. 62 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 39 ರನ್ ಬಾರಿಸಿದ ಪಂತ್, ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿದರು.

ಇನ್ನು ಮೊದಲ ದಿನದಂದು ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಿದ್ದ ಕೆಎಲ್ ರಾಹುಲ್, ಪಂತ್ ವಿಕೆಟ್ ಬಳಿಕ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಇಳಿದರು. ಆದರೆ ರಾಹುಲ್​ಗೆ ಎರಡನೇ ದಿನ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಮೊದಲ ದಿನ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮೊದಲು 162 ಎಸೆತಗಳಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ್ದ ರಾಹುಲ್ ಎರಡನೇ ದಿನ 13 ಎಸೆತಗಳನ್ನು ಹೆಚ್ಚುವರಿಯಾಗಿ ಆಡಿ ತಮ್ಮ ಖಾತೆಗೆ 5 ರನ್ ಸೇರಿಸಲಷ್ಟೇ ಶಕ್ತರಾದರು. ಈ ಮೂಲಕ ರಾಹುಲ್ 175 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 82 ರನ್ ಬಾರಿಸಿ ಔಟಾದರು.

Published On – 3:11 pm, Sun, 16 August 26

Source link

ರಾಜಕೀಯಕ್ಕೆ ಎಂಟ್ರಿ, ಸುಳಿವು ಕೊಟ್ಟ ನಟ ಯಶ್ – Kannada News | Yash talks about entering politics, he said may be

ಸಿನಿಮಾ (Cinema) ಹಾಗೂ ರಾಜಕೀಯಗಳ ನಂಟು ಅರ್ಧ ಶತಮಾನಕ್ಕೂ ಹಳೆಯದು. ಸ್ವಾತಂತ್ರ್ಯ ಪೂರ್ವದಿಂದಲೂ ಸಿನಿಮಾ ಮತ್ತು ರಾಜಕೀಯಗಳು ಜೊತೆ-ಜೊತೆಯಾಗಿ ಸಾಗುತ್ತಿವೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿದವರ ನಿವೃತ್ತಿ ಯೋಜನೆ ರಾಜಕೀಯವೇ ಆಗಿರುತ್ತದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಬಹಳ ಸಾಮಾನ್ಯ. ಇತ್ತೀಚೆಗೆ ತಾನೆ, ಸ್ಟಾರ್ ನಟ ವಿಜಯ್ ಅವರು ತಮಿಳುನಾಡಿನ ಸಿಎಂ ಆಗುವ ಮೂಲಕ ದಕ್ಷಿಣದ ಕೆಲವು ಸ್ಟಾರ್ ನಟರುಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ಇದಕ್ಕೆ ನಟ ಯಶ್ ಸಹ ಹೊರತಲ್ಲ.

‘ಆಪ್​​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ಯಶ್ ಅವರನ್ನು ಪ್ರೇಕ್ಷಕರೊಬ್ಬರು, ‘ವಿಜಯ್ ಸಿಎಂ ಆಗಿದ್ದಾರೆ. ಅವರಂಥೆ ದೊಡ್ಡ ಅಭಿಮಾನಿ ವರ್ಗ ನಿಮಗೂ ಇದೆ. ನೀವೂ ರಾಜಕೀಯಕ್ಕೆ ಬರುತ್ತೀರ? ಸಿಎಂ ಆಗುವ ಆಸೆ ಇದೆಯಾ?’ ಎಂದು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿರುವ ಯಶ್, ರಾಜಕೀಯ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿಲ್ಲ. ಬದಲಿಗೆ ಅಭಿಮಾನಿಗಳು ನಿರೀಕ್ಷೆ ಇರಿಸಿಕೊಳ್ಳಬಹುದಾದ ಉತ್ತರವನ್ನೇ ನೀಡಿದ್ದಾರೆ.

‘ನಾನು ಸದ್ಯಕ್ಕೆ ನಟನಾಗಿ ಹೆಚ್ಚು ಕೆಲಸ ಮಾಡಬೇಕಿದೆ, ನಟನಾಗಿ ಸಾಧಿಸುವುದು ಹೆಚ್ಚಿದೆ. ನಮ್ಮ ಚಿತ್ರರಂಗವನ್ನು ಇನ್ನೂ ಒಳ್ಳೆಯ ಸ್ಟೇಜ್​​ಗೆ ಹೇಗೆ ತರಬಹುದು ಎಂಬ ಗುರಿಯನ್ನಿರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ರಾಜಕೀಯದ ಬಗ್ಗೆ ಯಾವುದೇ ಪೂರ್ವಾಗ್ರಹ ಇಲ್ಲ. ನಾನು ಅರ್ಥ ಮಾಡಿಕೊಂಡಿರುವಂತೆ ರಾಜಕೀಯ ಎಂದರೆ ಪ್ರಜೆಗಳ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಜನಪರವಾಗಿ ಕೆಲಸ ಮಾಡುವುದೇ ಆಗಿದೆ. ಮುಂದೆ ಭವಿಷ್ಯದಲ್ಲಿ ಅವಶ್ಯಕತೆ ಇದೆ ಎನಿಸಿದರೆ, ಅವಕಾಶ ಇದೆ ಎನಿಸಿದರೆ ರಾಜಕೀಯಕ್ಕೆ ಬರಬಹುದೇನೋ, ಆದರೆ ಈಗ ಖಂಡಿತ ಅದರ ಅವಶ್ಯಕತೆ ಇಲ್ಲ ಎನಿಸುತ್ತದೆ. ಹಾಗೂ ನಟನಾಗಿ ನಾನು ಮಾಡಬೇಕಾದ ಕೆಲಸಗಳು ಇನ್ನೂ ಹೆಚ್ಚಿವೆ’ ಎಂದಿದ್ದಾರೆ ನಟ ಯಶ್.

ಇದನ್ನೂ ಓದಿ:ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು

ಮುಂದೆ ಅವಶ್ಯಕತೆ ಇದ್ದರೆ, ಅನಿವಾರ್ಯತೆ ಇದ್ದರೆ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದಾರೆ ಯಶ್. ಇದು ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. 40 ವರ್ಷ ವಯಸ್ಸಿನ ಯಶ್​​ ಅವರಿಗೆ ಕನಿಷ್ಟ ಇನ್ನೂ 10-15 ವರ್ಷ ಚಿತ್ರರಂಗದಲ್ಲಿ ಒಳ್ಳೆಯ ಮಾರುಕಟ್ಟೆ ಇದ್ದೇ ಇರಲಿದೆ. ಬಹುಷಃ 15 ವರ್ಷಗಳ ಬಳಿಕ ಚಿತ್ರರಂಗದಲ್ಲಿ ನಿವೃತ್ತಿ ಪಡೆಯುವ ವೇಳೆಗೆ ರಾಜಕೀಯಕ್ಕೆ ಬರಬಹುದೇನೋ ನೋಡಬೇಕಿದೆ.

ಕರ್ನಾಟಕದಲ್ಲಿ ಸಿನಿಮಾ ಮಂದಿ ರಾಜಕೀಯಕ್ಕೆ ಬಂದು ದೊಡ್ಡ ಯಶಸ್ಸು ಕಂಡಿದ್ದಿಲ್ಲ. ಅಂಬರೀಶ್, ಜಗ್ಗೇಶ್, ಉಮಾಶ್ರೀ ಅಂಥಹಾ ಕೆಲವರು ಸಚಿವರಾಗಿದ್ದಾರೆ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಗಳಾಗಿದ್ದು ಯಾರೂ ಇಲ್ಲ. ಯಶ್ ಅವರು ರಾಜಕೀಯಕ್ಕೆ ಬರುವ ಕಾಲಕ್ಕೆ ಪರಿಸ್ಥಿತಿ ಹೇಗಿರಲಿದೆ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ; ಬಾಡಿ ಶೇಮಿಂಗ್ ಮಾಡಿದ ನಾಲ್ವರ ವಿರುದ್ಧ FIR – Kannada News | Female PSI Body Shamed and Attacked in KR Puram, FIR Filed Against Four

ಮಹಿಳಾ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆImage Credit source: tv9 kannada

ಬೆಂಗಳೂರು, ಆಗಸ್ಟ್​​ 16: ಕರ್ತವ್ಯನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಕೆಲ ವ್ಯಕ್ತಿಗಳಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯಂತ ಕೀಳುಮಟ್ಟದ ಪದಗಳಿಂದ ಬಾಡಿ ಶೇಮಿಂಗ್ (Body Shaming) ಮಾಡಿ ಅವಮಾನಿಸಿರುವ ಘಟನೆ ಬೆಂಗಳೂರಿನ (bengaluru) ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಚಾರಿ ಮಹಿಳಾ ಪಿಎಸ್ಐ ನಯಾನಾ ಮೇಲೆ ಹಲ್ಲೆ ನಡೆದಿದ್ದು, ಹೇಮಂತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಹರ್ಷಿತ್ ರೆಡ್ಡಿ ಹಾಗೂ ರಾಹುಲ್ ಎಂಬುವವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ನಡೆದಿದ್ದೇನು?

ಭಟ್ಟರಹಳ್ಳಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಮಂಜುನಾಥ್ ಎಂಬುವವರೊಂದಿಗೆ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುತ್ತಿದ್ದರು. ಇದನ್ನು ಗಮನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಲಾಟೆ ಬಿಡಿಸಲು ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನಯನಾ, ಸ್ಥಳಕ್ಕೆ ಬಂದಿದ್ದಾರೆ.

‘ಎಮ್ಮೆ ತರ ಇದ್ದೀಯಾ, ಹೊಟ್ಟೆಗೇನು ತಿಂತೀಯಾ?’

ಒಬ್ಬ ಜವಾಬ್ದಾರಿಯುತ ಮಹಿಳಾ ಅಧಿಕಾರಿಯಾಗಿ ಕರ್ತವ್ಯ ಪಾಲನೆಗೆ ಮುಂದಾದ ಅವರ ಮೇಲೆಯೇ ಆರೋಪಿಗಳು ದರ್ಪ ಮೆರೆದಿದ್ದಾರೆ. ಘಟನೆ ವೇಳೆ ಆರೋಪಿಗಳು ಪಿಎಸ್‌ಐ ನಯನಾ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ‘ಎಮ್ಮೆ ತರ ಇದ್ದೀಯಾ, ಹೊಟ್ಟೆಗೇನು ತಿಂತೀಯಾ?’ ಎಂದು ಬಾಡಿ ಶೇಮಿಂಗ್​ ಮಾಡಿದ್ದಾರೆ.​ ಅಷ್ಟೇ ಅಲ್ಲದೆ ‘ಇವಳನ್ನ ಇವತ್ತೇ ಸಸ್ಪೆಂಡ್ ಮಾಡಿಸುತ್ತೇನೆ’ ಎಂದು ಅಹಂಕಾರದ ಮಾತುಗಳನ್ನಾಡಿ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ, ನೂರಾರು ಜನರ ಎದುರು ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಂದಿಗೆ ಹೀಗೆ ವರ್ತಿಸಿರುವ ಆರೋಪಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಮೃತರ ಕುಟುಂಬಸ್ಥರ ಒಪ್ಪಿಗೆ ಇಲ್ಲದೆಯೇ ಮುಗಿಯಿತಾ ಪೋಸ್ಟ್​ಮಾರ್ಟಮ್?

ಇನ್ನು ಈ ಸಂಪೂರ್ಣ ಕೃತ್ಯವು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ನಾಲ್ವರು ಆರೋಪಿಗಳ ವಿರುದ್ಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಕಾಲಿಸ್ ದಾಖಲೆ ಮುರಿದು ಗೇಲ್ ದಾಖಲೆಯನ್ನು ಸರಿಗಟ್ಟಿದ ಪಂತ್

Source link

ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು – Kannada News | Ramayana Trailer Chinese viewers praise Ranbir Kapoor Yash Sai Pallavi starrer movie

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‌ನ ಮಹಾಕಾವ್ಯವಾಗಿ ಹೊರಹೊಮ್ಮುತ್ತಿದೆ. ಹಾಲಿವುಡ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಶೈಲಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಟ್ರೇಲರ್ ಈಗ ಚೀನಾದಲ್ಲಿ (China) ಸೃಷ್ಟಿಸಿರುವ ಕ್ರೇಜ್ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ.

ಯೂಟ್ಯೂಬ್ ಹಾಗೂ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಚೀನಿ ಪ್ರೇಕ್ಷಕರು ಕಮೆಂಟ್ ಮಾಡುವ ಮೂಲಕ ಚಿತ್ರದ ಬೃಹತ್ ಕ್ಯಾನ್ವಾಸ್, ಅದ್ಭುತ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಹಲವರು ತಮ್ಮ ಸ್ವದೇಶಿ ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ದ ಮೇಕಿಂಗ್ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್:

ಚೀನಾದ ಪ್ರೇಕ್ಷಕರು ಭಾರತೀಯ ಸಿನಿಮಾವೊಂದರ ಈ ಮಟ್ಟದ ತಾಂತ್ರಿಕ ವೈಭವವನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚೀನಾದ ಸೂಪರ್ ಹಿಟ್ ಸಿನಿಮಾಗಳಿಗೆ ಹೋಲಿಸಿದ ಅಲ್ಲಿನ ನೆಟ್ಟಿಗರೊಬ್ಬರು, ‘360 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾದ ನಮ್ಮ ಸಿನಿಮಾಗಿಂತಲೂ ರಾಮಾಯಣದ ಸ್ಪೆಷಲ್ ಎಫೆಕ್ಟ್ಸ್ ಅತ್ಯುತ್ತಮವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಕಳೆದ ಎರಡು ವರ್ಷಗಳಲ್ಲಿ ಬಂದ ನಮ್ಮ ದೇಶದ ಸಿನಿಮಾಗಳಿಗಿಂತ ಇದು ಹೇಗೆ ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ’ ಎಂದು ಪ್ರಶ್ನಿಸಿದ್ದಾರೆ.

‘ರಾಮಾಯಣ’ ಸಿನಿಮಾ ಟ್ರೇಲರ್:

ಅಷ್ಟೇ ಅಲ್ಲದೆ, ಚೀನಾದ ಪೌರಾಣಿಕ ಕಥೆಗಳಿಗೆ ಅಲ್ಲಿನ ನಿರ್ದೇಶಕರು ಸೂಕ್ತ ಗೌರವ ನೀಡುತ್ತಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ನಿರ್ದೇಶಕರಿಗೆ ಸ್ವದೇಶಿ ಪುರಾಣಗಳ ಮೇಲೆ ಗೌರವವಿಲ್ಲ, ಆದ್ದರಿಂದಲೇ ನಮಗೆ ಇಂತಹ ದೃಶ್ಯ ವೈಭವದ ಕಾವ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇದೇ ರೀತಿ ಹಲವಾರು ಕಮೆಂಟ್​ಗಳು ಬರುತ್ತಿವೆ.

ಹಾಲಿವುಡ್‌ ಮಟ್ಟದ ಗ್ರಾಫಿಕ್ಸ್:

ಕೆಲವು ವೀಕ್ಷಕರು ಈ ಚಿತ್ರದ ತಾಂತ್ರಿಕತೆಯನ್ನು ಹಾಲಿವುಡ್‌ನ ಪ್ರಸಿದ್ಧ ‘ಲೆಜೆಂಡರಿ ಎಂಟರ್‌ಟೈನ್‌ಮೆಂಟ್’ ನಿರ್ಮಾಣದ ಸಿನಿಮಾಗಳಿಗೆ ಹೋಲಿಸಿದ್ದಾರೆ. ‘300’, ‘ಗಾಡ್ಜಿಲ್ಲಾ’, ‘ಜುರಾಸಿಕ್ ವರ್ಲ್ಡ್’ ರೀತಿಯ ಸಿನಿಮಾಗಳ ಗುಣಮಟ್ಟ ರಾಮಾಯಣದಲ್ಲಿ ಕಾಣುತ್ತಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ‘ರಾಮಾಯಣದ ಮೇಕಿಂಗ್ ಲೆಜೆಂಡರಿ ಸಂಸ್ಥೆಯ ಸಿನಿಮಾಗಳಿಗಿಂತ ಉತ್ತಮವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರೆ. ಇನ್ನು ಕೆಲವರು ರಾಮಾಯಣವನ್ನು ‘ಭಾರತದ ಆಡಸ್ಸಿ’ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ

ಈ ಎರಡು ಭಾಗಗಳ ಪೌರಾಣಿಕ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಅವರು ನಮಿತ್ ಮಲ್ಹೋತ್ರಾ ಅವರೊಂದಿಗೆ ಈ ಚಿತ್ರದ ಸಹ-ನಿರ್ಮಾಪಕರಾಗಿಯೂ ಪಾಲುದಾರಿಕೆ ಹೊಂದಿದ್ದಾರೆ. ಜೊತೆಗೆ ಸನ್ನಿ ಡಿಯೋಲ್, ರವಿ ದುಬೆ, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್ ಹಾಗೂ ಕುನಾಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 3,993 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB JE Recruitment 2026: 3993 Indian Railways Jr. Engineer and DMS Vacancies Out

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿImage Credit source: Getty Images

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN 04/2026) ಮೂಲಕ ಜೂನಿಯರ್ ಎಂಜಿನಿಯರ್ (JE) ಹಾಗೂ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 3,993 ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ಸಿಕಂದರಾಬಾದ್ ರೈಲ್ವೆ ವಲಯಕ್ಕೆ 110 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಐಟಿ ವಿಭಾಗದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು.

ಹುದ್ದೆಯ ವಿವರಗಳು ಮತ್ತು ವೇತನ ಶ್ರೇಣಿ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಮತ್ತು ಸವಲತ್ತುಗಳು ದೊರೆಯಲಿವೆ. ಜೂನಿಯರ್ ಎಂಜಿನಿಯರ್ ಮತ್ತು ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ 7ನೇ ವೇತನ ಆಯೋಗದ ಪ್ರಕಾರ ಆರಂಭಿಕ ಮೂಲ ವೇತನ ತಿಂಗಳಿಗೆ 35,400ರೂ. ಆಗಿರುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA) ಸೇರಿದಂತೆ ವಿವಿಧ ಭತ್ಯೆಗಳು ಮತ್ತು ಉದ್ಯೋಗ ಭದ್ರತೆಯ ಸವಲತ್ತುಗಳು ಲಭ್ಯವಿರುತ್ತವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ:

ಅಭ್ಯರ್ಥಿಗಳು ಜನವರಿ 1, 2027 ರ ವೇಳೆಗೆ 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದ್ದು, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. PwBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಹೆಚ್ಚುವರಿ ವಿನಾಯಿತಿ ಇರುತ್ತದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ (B.E/B.Tech) ಅಥವಾ B.Sc ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT-I ಮತ್ತು CBT-II), ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಮೊದಲ ಹಂತದ CBT-I ಪರೀಕ್ಷೆಯು 90 ನಿಮಿಷಗಳ ಅವಧಿಯದ್ದಾಗಿದ್ದು, ಗಣಿತ (30), ಸಾಮಾನ್ಯ ವಿಜ್ಞಾನ (30), ಸಾಮಾನ್ಯ ಬುದ್ಧಿಮತ್ತೆ & ತಾರ್ಕಿಕತೆ (25) ಮತ್ತು ಸಾಮಾನ್ಯ ಅರಿವು (15) ಒಳಗೊಂಡ ಒಟ್ಟು 100 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಎರಡನೇ ಹಂತದ CBT-II ಪರೀಕ್ಷೆಯು 2 ಗಂಟೆಗಳ ಅವಧಿಯದ್ದಾಗಿದ್ದು, ತಾಂತ್ರಿಕ ಸಾಮರ್ಥ್ಯ (100), ಭೌತಶಾಸ್ತ್ರ & ರಸಾಯನಶಾಸ್ತ್ರ (15), ಸಾಮಾನ್ಯ ಅರಿವು (15), ಕಂಪ್ಯೂಟರ್ ಬೇಸಿಕ್ಸ್ (10) ಮತ್ತು ಪರಿಸರ & ಮಾಲಿನ್ಯ ನಿಯಂತ್ರಣ (10) ಒಳಗೊಂಡ ಒಟ್ಟು 150 ಅಂಕಗಳ 150 ಪ್ರಶ್ನೆಗಳನ್ನು ಹೊಂದಿರುತ್ತದೆ. ಎರಡೂ ಪರೀಕ್ಷೆಗಳಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/3 ಋಣಾತ್ಮಕ ಅಂಕಗಳಿರುತ್ತವೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ಮತ್ತು ಮರುಪಾವತಿ ವಿವರಗಳು:

ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500ರೂ. ನಿಗದಿಪಡಿಸಲಾಗಿದೆ. ಈ ಅಭ್ಯರ್ಥಿಗಳು CBT-I ಪರೀಕ್ಷೆಗೆ ಹಾಜರಾದ ನಂತರ 400ರೂ. ಮರುಪಾವತಿಯಾಗುತ್ತದೆ. ಇನ್ನು SC, ST, ಮಹಿಳೆಯರು, ಟ್ರಾನ್ಸ್‌ಜೆಂಡರ್, ಮಾಜಿ ಸೈನಿಕರು, EBC ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕವಿದ್ದು, ಇವರು CBT-I ಪರೀಕ್ಷೆ ಬರೆದರೆ ₹250 ಶುಲ್ಕದ ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಆನ್‌ಲೈನ್ ಅರ್ಜಿ ಸಲ್ಲಿಕೆಯು ಆಗಸ್ಟ್ 14 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 13 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 15 ರವರೆಗೆ ಕಾಲಾವಕಾಶವಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಆಯಾ RRB ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಮೃತರ ಕುಟುಂಬಸ್ಥರ ಒಪ್ಪಿಗೆ ಇಲ್ಲದೆಯೇ ಮುಗಿಯಿತಾ ಪೋಸ್ಟ್​ಮಾರ್ಟಮ್? – Kannada News | Hanur Forest Firing: Family Alleges Post Mortem Conducted Without Consent

ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣಕ್ಕೆ ಟ್ವಿಸ್ಟ್

ಮೈಸೂರು, ಆಗಸ್ಟ್ 16: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಪ್ರಕರಣ ತೀವ್ರ ಗಂಭೀರ ತಿರುವು ಪಡೆದುಕೊಂಡಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ (Post-Mortem) ಕುಟುಂಬಸ್ಥರು ಒಪ್ಪಿಗೆ ನೀಡದಿರುವ ನಡುವೆಯೇ, ಪೊಲೀಸರು ಹಾಗೂ ಜಿಲ್ಲಾಡಳಿತ ಅಮಾಯಕರನ್ನು ಯಾಮಾರಿಸಿ ಪೋಸ್ಟ್​ಮಾರ್ಟಮ್ ಮುಗಿಸಿದ್ದಾರೆ ಎಂದು ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ.

ಹೈಡ್ರಾಮಾಗೆ ಕಾರಣವಾದ ಪಂಚನಾಮೆ

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಬಳಿಕ ಶವಗಳ ಮರಣೋತ್ತರ ಪರೀಕ್ಷೆಗೆ ಮೃತರ ಕುಟುಂಬಸ್ಥರೇ ಅಡ್ಡಿಪಡಿಸಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ಘೋಷಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಸಮ್ಮತಿಸುವುದಿಲ್ಲ ಎಂದು ಮೃತರ ಸಂಬಂಧಿಕರು ಪಟ್ಟು ಹಿಡಿದಿದ್ದರು.

ಕುಟುಂಬಸ್ಥರ ಇಚ್ಛೆಯಂತೆ ಕೊಳ್ಳೇಗಾಲ, ಯಳಂದೂರು ಹಾಗೂ ಚಾಮರಾಜನಗರ ತಹಶೀಲ್ದಾರ್‌ಗಳು ಆಗಮಿಸಿ ಅವರ ಮನವೊಲಿಸಿದ ನಂತರ, ಮೂವರಲ್ಲಿ ಇಬ್ಬರ ಮೃತದೇಹಗಳ ವೈಜ್ಞಾನಿಕ ಸ್ಕ್ಯಾನಿಂಗ್ ನಡೆಸಲು ಅಧಿಕಾರಿಗಳು ಮುಂದಾದರು. ಆದರೆ, ಶವಗಳನ್ನು ಸ್ಕ್ಯಾನಿಂಗ್‌ಗೆ ಕಳುಹಿಸುವ ವೇಳೆ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಶವಾಗಾರದ ಬಾಗಿಲಲ್ಲೇ ಶವದ ವಾಹನ ತಡೆದಿದ್ದಾರೆ. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹಗಳನ್ನು ಮತ್ತೆ ಶವಾಗಾರಕ್ಕೇ ವಾಪಸ್ ಕಳುಹಿಸಿದ್ದಾರೆ.

ಪಂಚನಾಮೆ ಹೆಸರಲ್ಲಿ ಸಹಿ ಪಡೆದು ಪೋಸ್ಟ್ ಮೌರ್ಟಮ್ ಮುಕ್ತಾಯ?

ಮೃತರ ಕುಟುಂಬಸ್ಥರ ಅಮಾಯಕತೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಪೊಲೀಸರು, ಕೇವಲ ಪಂಚನಾಮೆ ಪ್ರಕ್ರಿಯೆ ಎಂದು ಹೇಳಿ ಅವರಿಂದ ಸಹಿ ಪಡೆದುಕೊಂಡಿದ್ದಾರೆ. ಆದರೆ, ಕುಟುಂಬಸ್ಥರಿಗೆ ತಿಳಿಸದೇ, ಅವರ ಯಾವುದೇ ಒಪ್ಪಿಗೆಯೂ ಇಲ್ಲದೆ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಅವರು ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲಾಡಳಿತದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವು ಮರಣೋತ್ತರ ಪರೀಕ್ಷೆಗೆ ಸಮ್ಮತಿಯನ್ನೇ ನೀಡಿರಲಿಲ್ಲ. ಆದರೆ ಹನೂರಿನಿಂದ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಈಗಾಗಲೇ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿರುವುದು ಗೊತ್ತಾಗಿದೆ. ನಾನು ನರ್ಸ್ ಆಗಿರುವುದರಿಂದ ಶವಾಗಾರದ ಒಳಗಿನ ಸ್ಥಿತಿ ನೋಡಿ ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಶವಗಳ ಮುಂದೆ ನಮ್ಮನ್ನು ನಿಲ್ಲಿಸಿ ಫೋಟೋ ತೆಗೆಯಲು ಮುಂದಾದರು, ನಾನು ನಿರಾಕರಿಸಿದೆ. ಅಲ್ಲದೆ ಮೃತದೇಹಗಳನ್ನು ಐಸ್ ಬಾಕ್ಸ್‌ನಲ್ಲಿ ಇಡಬೇಕಾಗಿದ್ದರೂ ಹಾಗೆ ಮಾಡಿಲ್ಲ,” ಎಂದು ಮಾರ್ಗರೇಟ್ ದೂರಿದ್ದಾರೆ.

ಇದನ್ನೂ ಓದಿ ಹನೂರಿನಲ್ಲಿ ಗುಂಡೇಟಿಗೆ ಮೂವರು ಬಲಿ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ

ಶವಾಗಾರದ ಬಳಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಆಕ್ರೋಶ

ಇದಕ್ಕೂ ಮುನ್ನ ಮೃತದೇಹಗಳನ್ನು ವೈಜ್ಞಾನಿಕ ಸ್ಕ್ಯಾನಿಂಗ್‌ಗೆ ಒಯ್ಯಲು ಅಧಿಕಾರಿಗಳು ಯತ್ನಿಸಿದಾಗ ಸಂಬಂಧಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಶವದ ವಾಹನ ತಡೆದಿದ್ದರು. ಪರಿಹಾರ ಘೋಷಣೆ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಶವಪರೀಕ್ಷೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬಸ್ಥರು, ಈಗ ಪೊಲೀಸರ ಈ ಮೋಸದ ಆಟದಿಂದ ತೀವ್ರ ಆಕ್ರೋಶಗೊಂಡಿದ್ದು, ಕೆ.ಆರ್. ಆಸ್ಪತ್ರೆ ಶವಾಗಾರದ ಬಳಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:20 pm, Sun, 16 August 26

Source link

ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ – Kannada News | Varanasi International Airport witnesses accidental firing during security screening, injuring two

ವಾರಣಾಸಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣImage Credit source: Nicolas Economou/NurPhoto via Getty Images

ವಾರಣಾಸಿ, ಆಗಸ್ಟ್ 16: ವಿಮಾನ ಪ್ರಯಾಣಿಕರೊಬ್ಬರು ಭದ್ರತಾ ತಪಾಸಣೆ ವೇಳೆ ತಮ್ಮಲ್ಲಿದ್ದ ಪಿಸ್ತೂಲನ್ನು ಆಕಸ್ಮಿಕವಾಗಿ ಫೈರ್ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Varanasi international airport) ಇಂದು (ಆಗಸ್ಟ್ 16) ಸಂಭವಿಸಿದೆ. ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (IX-1810) ಪ್ರಯಾಣಿಕರೊಬ್ಬರು ತಂದಿದ್ದ ಪಿಸ್ತೂಲು ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಸಿಡಿದಿದೆ. ಇದು ಪರವಾನಗಿ ಪಡೆದ ಪಿಸ್ತೂಲ್ ಎಂಬುದು ಗೊತ್ತಾಗಿದೆ.

ಭಾನುವಾರ ಬೆಳಗ್ಗೆ ಸುಮಾರು 9:30 ಗಂಟೆಗೆ ವಿಮಾನ ನಿಲ್ದಾಣದ ಭದ್ರತಾ ತಪಾಸಣಾ ವಿಭಾಗದಲ್ಲಿ ಈ ಘಟನೆ ನಡೆದಿದೆ. ಅಜಂಗಢ ಜಿಲ್ಲೆಯ ನಿವಾಸಿ ಕಮಲೇಶ್ ರಾಯ್ (Kamlesh Rai) ಅವರು ಈ ಘಟನೆಗೆ ಕಾರಣರಾದ ಪ್ರಯಾಣಿಕರು ಎನ್ನಲಾಗಿದೆ. ಕಮಲೇಶ್ ತನ್ನ ಪತ್ನಿಯೊಂದಿಗೆ ವಿಮಾನ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಅವರು ನಿಯಮದಂತೆ ತಮ್ಮ ಬಳಿ ಇರುವ ಲೈಸೆನ್ಸ್ಡ್ ಬಂದೂಕಿನ ಬಗ್ಗೆ ಘೋಷಣೆ ಮಾಡಿದ್ದರು. ಭದ್ರತಾ ಸಿಬ್ಬಂದಿ (AAICLAS) ಬಂದೂಕನ್ನು ತಪಾಸಣೆ ಮಾಡುತ್ತಿದ್ದಾಗ, ಅದು ಆಕಸ್ಮಿಕವಾಗಿ ಸಿಡಿದಿದೆ.

ಬಂದೂಕು ಸಿಡಿದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಒಬ್ಬ ಮಹಿಳಾ ಸಿಬ್ಬಂದಿಯ ಕಾಲಿಗೆ ಮತ್ತು ಮತ್ತೊಬ್ಬ ಸಿಬ್ಬಂದಿಯ ಕೈಬೆರಳಿಗೆ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಹತ್ತಿರದ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರಿಬ್ಬರೂ ತೀರಾ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ.

ಇದನ್ನೂ ಓದಿ: ‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್​ನೋಟ್ ಬರೆದಿಟ್ಟು ಸಾವು

ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಕಸ್ಮಿಕ ಘಟನೆಯಾಗಿದ್ದು, ಭದ್ರತಾ ಪ್ರೋಟೋಕಾಲ್‌ಗಳ ಅನುಸಾರ ಬಂದೂಕು ಹಸ್ತಾಂತರದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

WTC ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ್ – Kannada News | WTC Points Table update after Bangladesh beat Australia

ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಮಣಿಸಿ ಬಾಂಗ್ಲಾದೇಶ್ ತಂಡ ಐತಿಹಾಸಿಕ ಜಯ ಸಾಧಿಸಿದೆ. ಇದು ಆಸ್ಟ್ರೇಲಿಯಾ ಮಣ್ಣಿನಲ್ಲಿ ಬಾಂಗ್ಲಾದೇಶ್ ತಂಡಕ್ಕೆ ಸಿಕ್ಕ ಮೊದಲ ಟೆಸ್ಟ್ ಗೆಲುವುವಾಗಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಬಾಂಗ್ಲಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಅಂಕಪಟ್ಟಿಯಲ್ಲೂ ಮೇಲೇರಿದೆ.

ಅಗ್ರಸ್ಥಾನದಲ್ಲೇ ಉಳಿದ ಆಸ್ಟ್ರೇಲಿಯಾ!

ಈ ಆಘಾತಕಾರಿ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ, ಅವರ ಪಾಯಿಂಟ್ಸ್ ಶೇಕಡಾವಾರು (PCT) ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪಂದ್ಯಕ್ಕೂ ಮುನ್ನ 87.50% ನೊಂದಿಗೆ ಸುಭದ್ರವಾಗಿದ್ದ ಆಸೀಸ್ ಪಡೆಯ PCT, ಈ ಸೋಲಿನ ನಂತರ 77.78% ಗೆ ಕುಸಿದಿದೆ. ಇದರೊಂದಿಗೆ ಎರಡನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಅಂತರ ಈಗ ಅತ್ಯಂತ ಕಿರಿದಾಗಿದೆ.

ನಾಲ್ಕನೇ ಸ್ಥಾನಕ್ಕೇರಿದ ಬಾಂಗ್ಲಾದೇಶ್:

ಈ ಐತಿಹಾಸಿಕ ಗೆಲುವಿನೊಂದಿಗೆ ಬಾಂಗ್ಲಾದೇಶ್ ಅಂಕಪಟ್ಟಿಯ 4ನೇ ಸ್ಥಾನದಲ್ಲಿ ನೆಲೆಯೂರಿದೆ. ಬಾಂಗ್ಲಾ ಪಡೆಯ PCT 58.33% ರಿಂದ ನೇರವಾಗಿ 66.67% ಗೆ ಜಿಗಿದಿದ್ದು, ಈ ಮೂಲಕ WTC ಫೈನಲ್ ರೇಸ್‌ನಲ್ಲಿ ಮುಂದುವರೆದಿದೆ.

WTC (2025-27) ಅಂಕಪಟ್ಟಿ:

ಸ್ಥಾನ ತಂಡ ಪಾಯಿಂಟ್ಸ್ ಶೇಕಡಾವಾರು (PCT)
1 ಆಸ್ಟ್ರೇಲಿಯಾ 77.78%
2 ಸೌತ್ ಆಫ್ರಿಕಾ 75.00%
3 ನ್ಯೂಝಿಲೆಂಡ್ 72.22%
4 ಬಾಂಗ್ಲಾದೇಶ್ 66.67%
5 ಭಾರತ 48.15%
6 ಶ್ರೀಲಂಕಾ 41.67%
7 ಇಂಗ್ಲೆಂಡ್ 24.36%
8 ಪಾಕಿಸ್ತಾನ 22.22%
9 ವೆಸ್ಟ್ ಇಂಡೀಸ್ 20.83%

ಭಾರತಕ್ಕೆ ಹೆಚ್ಚಿದ ಆತಂಕ?

ಬಾಂಗ್ಲಾದೇಶ್ ತಂಡದ ಈ ಗೆಲುವಿನಿಂದಾಗಿ ಅಂಕಪಟ್ಟಿಯ ಮಧ್ಯಭಾಗದಲ್ಲಿರುವ ತಂಡಗಳಿಗೆ, ವಿಶೇಷವಾಗಿ 5ನೇ ಸ್ಥಾನದಲ್ಲಿರುವ ಭಾರತಕ್ಕೆ ಫೈನಲ್ ತಲುಪುವ ಹಾದಿ ಮತ್ತಷ್ಟು ಕಠಿಣವಾಗಲಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಂಕಪಟ್ಟಿಯಲ್ಲಿ ಮತ್ತಷ್ಟು ರೋಚಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

ಒಂದು ವೇಳೆ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಗೆಲ್ಲಲು ಸಾಧ್ಯವಾಗದೇ ಇದ್ದರೆ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ನಿರ್ಣಾಯಕವಾಗಲಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧ 2-0 ಹಾಗೂ ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಿಂದ ಗೆಲ್ಲಬೇಕು. ಇನ್ನು ಗೆಲ್ಲಲು ಸಾಧ್ಯವಾಗದೇ ಇದ್ದರೂ ಈ ಎರಡು ತಂಡಗಳ ವಿರುದ್ಧ ಸೋಲನ್ನು ತಪ್ಪಿಸಿ ಸರಣಿ ಗೆಲ್ಲಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗೆ ಎದುರಾಗಲಿದೆ.

Source link

Exit mobile version