ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿಗರ ಟೀಕೆಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು – Kannada News | KPCC President B.K. Hariprasad Hits Back at BJP Over Cabinet Expansion Criticism

ಬೆಂಗಳೂರು, ಆಗಸ್ಟ್​​ 05: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಲೇವಡಿ ವಿಚಾರ ಸಂಬಂಧ ಬಿಜೆಪಿಗರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೂಟ್​ಕೇಸ್, ಬ್ರೀಫ್​ಕೇಸ್, ಆಪರೇಷನ್ ಕಮಲ ಮಾಡಿದ್ಯಾರು? ಕಾಂಗ್ರೆಸ್, JDSನ 16 ಶಾಸಕರನ್ನು ಬಾಂಬೆಗೆ ಕರೆದೊಯ್ದಿದ್ಯಾರು? ಎಂದವರು ಪ್ರಶ್ನಿಸಿದ್ದಾರೆ. ಬಾಂಬೆ ಬಾಯ್ಸ್ ಗೋಣಿ ಚೀಲ ಹಿಡಿದುಕೊಂಡು ಹೋಗಿದ್ರಂತಾ? ರಾಜ್ಯ ಬಿಜೆಪಿ ಅಧ್ಯಕ್ಷ, ಆರ್.ಅಶೋಕ್ ಎಷ್ಟು ಕೋಟಿಗೆ ಬಾಳ್ತಾರೆ? ಸುಮ್ಮನೆ ನನ್ನನ್ನು ಇವರ ಚಾರ್ಟರ್ಡ್ ಅಕೌಂಟೆಂಟ್​ ಮಾಡಬೇಡಿ. ಪ್ರತಿಪಕ್ಷ ಬಿಜೆಪಿ ನಾಯಕರು ಮಾತೆತ್ತಿದ್ದರೆ ಗಂಜಲ, ಹೊಲಸು. ವಿಪಕ್ಷ ನಾಯಕರಿಗೆ ಸಾಮಾಜಿಕ ನ್ಯಾಯ ಅಂದ್ರೆ ಏನೆಂದು ಗೊತ್ತಿಲ್ಲ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಸಂಘಿ’ ಎಂದು ಟ್ರೋಲ್ ಮಾಡಿದವರಿಗೆ ‘ಧುರಂಧರ್’ ನಟ ಆರ್‌. ಮಾಧವನ್ ತಿರುಗೇಟು – Kannada News | R Madhavan reacts to Sanghi tag and Dhurandhar Propaganda Criticism

ಭಾರತೀಯ ಚಿತ್ರರಂಗದ ಜನಪ್ರಿಯ ನಟ ಆರ್‌. ಮಾಧವನ್ (R. Madhavan) ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಅವರನ್ನು ‘ಸಂಘಿ’ ಎಂದು ಕರೆಯಲಾಗಿತ್ತು. ಅವರು ನಟಿಸಿದ ‘ಧುರಂಧರ್’ (Dhurandhar) ಮತ್ತು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಗಳನ್ನು ‘ಪ್ರೊಪಗಾಂಡಾ’ ಎಂದು ಟೀಕಿಸಲಾಗಿತ್ತು. ಆ ಎಲ್ಲ ಆರೋಪಗಳಿಗೆ ಆರ್. ಮಾಧವನ್ ಅವರು ತಿರುಗೇಟು ನೀಡಿದ್ದಾರೆ.

ಭಾರತದ ಶ್ರೇಷ್ಠ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ‘ಜಿಡಿಎನ್’ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿತರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಆರ್‌. ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.

‘ಬಾಲ್ಯದಿಂದಲೇ ದೇಶ ಪ್ರೇಮ ರಕ್ತಗತವಾಗಿದೆ’

ಮಾಧ್ಯಮವೊಂದರ ಸಂದರ್ಶನದಲ್ಲಿ ಆರ್. ಮಾಧವನ್ ಅವರು ಮಾತನಾಡಿದ್ದಾರೆ. ‘ಆನ್‌ಲೈನ್‌ನಲ್ಲಿ ಯಾರು ನಿಜವಾದ ಬಳಕೆದಾರರು ಮತ್ತು ಯಾರು ದುಡ್ಡು ಪಡೆದು ಕಮೆಂಟ್ ಮಾಡುವವರು ಎಂಬುದು ಸುಲಭವಾಗಿ ತಿಳಿಯುತ್ತದೆ. ಪ್ರತಿಯೊಬ್ಬರೂ ತಾವು ಬೆಳೆದು ಬಂದ ವಾತಾವರಣದ ಪ್ರತಿಫಲವಾಗಿರುತ್ತಾರೆ. ಬಾಲ್ಯದಿಂದಲೂ ನನ್ನ ದೇಶವನ್ನು ನಂಬಲು ಮತ್ತು ಪ್ರೀತಿಸಲು ನನಗೆ ಕಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕಮೆಂಟ್​ಗಳಿಗೆ ತಲೆ ಕೆಡಿಸಿಕೊಳ್ಳಲ್ಲ’

‘ನಾನು ಎಂದಿಗೂ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ವಿರುದ್ಧ ಪೋಸ್ಟ್ ಮಾಡಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಿ ಪೋಸ್ಟ್ ಮಾಡಿದ್ದೇನೆ. ಒಬ್ಬ ವ್ಯಕ್ತಿ ದೇಶದ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಆಯ್ಕೆಯಾದಾಗ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನಾನು ಕಾಮೆಂಟ್‌ಗಳನ್ನು ಓದುತ್ತೇನೆ, ಆದರೆ ಅದು ನನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರಲ್ಲ. ಯಾರಾದರೂ ಇದರ ಬಗ್ಗೆ ನನಗೆ ಅಪರಾಧಿ ಭಾವನೆ ಮೂಡಿಸಲು ಯತ್ನಿಸಿದರೆ, ಅವರ ಉದ್ದೇಶವನ್ನೇ ನಾನು ಪ್ರಶ್ನಿಸುತ್ತೇನೆ’ ಎಂದಿದ್ದಾರೆ ಆರ್. ಮಾಧವನ್.

ಇದನ್ನೂ ಓದಿ: ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್

‘ಧುರಂಧರ್’ ಪ್ರೊಪಗಾಂಡಾ ಚಿತ್ರ ಎಂದವರಿಗೆ ತಿರುಗೇಟು:

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರವು ಸರ್ಕಾರಿ ಪರ ಪ್ರೊಪಗಾಂಡಾ ಸಿನಿಮಾ ಎಂಬ ಟೀಕೆಗೆ ಗುರಿ ಆಗಿತ್ತು. ಅದಕ್ಕೂ ಮಾಧವನ್ ಉತ್ತರ ನೀಡಿದ್ದಾರೆ. ‘ಧುರಂಧರ್ ಸಿನಿಮಾದ ಕಥೆ ಪಾಕಿಸ್ತಾನದ ಹಿನ್ನೆಲೆಯಲ್ಲಿ ನಡೆಯುತ್ತದೆ. ಅಲ್ಲಿ ಏನೇ ನಡೆದರೂ ಅದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರಲ್ಲಿ ಪ್ರೊಪಗಾಂಡಾ ಎಲ್ಲಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಆರ್. ಮಾಧವನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸ್ಪೈಡರ್​ಮ್ಯಾನ್’ ನಟ ಟಾಮ್ ಹಾಲೆಂಡ್​​ಗೆ ದಕ್ಷಿಣದ ಈ ಸಿನಿಮಾ ಇಷ್ಟ – Kannada News | Spider Man fame Tom Holland says he loves RRR movie

ಸ್ಪೈಡರ್​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spiderman: Brand New Day) ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿ ಒಂದು ವಾರವಾಗುತ್ತಾ ಆಗಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಜುಲೈ 30ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಕೇವಲ ಐದು ದಿನದಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ವಾರಾಂತ್ಯಕ್ಕೆ ಕಲೆಕ್ಷನ್ 600 ಕೋಟಿ ದಾಟುವ ಸಾಧ್ಯತೆ ಇದೆ. ‘ಸ್ಪೈಡರ್​ಮ್ಯಾನ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ಟಾಮ್ ಹಾಲೆಂಡ್, ಇತ್ತೀಚೆಗಷ್ಟೆ ಅವರ ಇನ್ನೊಂದು ಸಿನಿಮಾ ‘ದಿ ಆಡಸ್ಸಿ’ಯ ಪ್ರಚಾರಕ್ಕೆ ಭಾರತಕ್ಕೆ ಬಂದಿದ್ದರು. ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟಾಮ್ ಹಾಲೆಂಡ್, ಭಾರತದ ಬಗ್ಗೆ ಹಾಗೂ ತಮ್ಮಿಷ್ಟದ ಭಾರತೀಯ ಸಿನಿಮಾ ಬಗ್​ಗೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಟಾಮ್ ಹಾಲೆಂಡ್, ‘ಭಾರತದ ಪ್ರವಾಸ ಅದ್ಭುತವಾಗಿತ್ತು. ಅದು ನನ್ನ ಜೀವನದಲ್ಲೇ ಮರೆಯಲಾಗದಂತಹ ಪಯಣ. ನಾನು ಭಾರತಕ್ಕೆ ಬರಲು ಬಯಸಿದ್ದೆ, ಮತ್ತು ಮತ್ತೊಮ್ಮೆ ಇಲ್ಲಿಗೆ ಬರಲು ಉತ್ಸುಕನಾಗಿದ್ದೇನೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತದೆ. ನಾನು ಅದ್ಭುತ ಜನರನ್ನು ಭೇಟಿಯಾದೆ, ಅತ್ಯುತ್ತಮವಾದ ಊಟವನ್ನು ಸವಿದೆ ಮತ್ತು ಅದ್ಭುತವಾದ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ನೋಡುವ ಅವಕಾಶ ಸಿಕ್ಕಿತು. ಒಟ್ಟಿನಲ್ಲಿ ನಾನು ಅತ್ಯಂತ ಸುಂದರವಾದ ಸಮಯವನ್ನು ಕಳೆದೆ’ ಎಂದರು.

ನೀವು ಯಾವುದೇ ಭಾರತೀಯ ಚಲನಚಿತ್ರವನ್ನು ನೋಡಿದ್ದೀರಾ ಎಂದು ಸಂದರ್ಶಕಿ ಕೇಳಿದಾಗ, ಟಾಮ್ ಹಾಲೆಂಡ್, ‘ನಾನು ‘RRR’ ಸಿನಿಮಾ ನೋಡಿದ್ದೇಉ ಮತ್ತು ನನಗೆ ಅದು ತುಂಬಾ ಇಷ್ಟವಾಯಿತು’ ಎಂದು ಹೇಳಿದ್ದಾರೆ. ರಾಜಮೌಳಿ ನಿರ್ದೇಶಿಸಿ, ರಾಮ್ ಚರಣ್, ಜೂ ಎನ್​​ಟಿಆರ್ ನಟಿಸಿದ್ದ ‘ಆರ್​​ಆರ್​​ಆರ್’ ಸಿನಿಮಾ ಟಾಮ್ ಹಾಲೆಂಡ್ ಅವರಿಗೆ ಬಹಳ ಇಷ್ಟವಾಯ್ತಂತೆ. ಟಾಮ್ ಹಾಲೆಂಡ್ ತಮಗೆ ‘ಆರ್​​ಆರ್​​ಆರ್’ ಸಿನಿಮಾ ಇಷ್ಟವಾಯ್ತು ಎಂದು ಹೇಳಿರುವ ವಿಡಿಯೋ ತುಣುಕನ್ನು ‘ಆರ್​​ಆರ್​​ಆರ್’ ತಂಡವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ರಣ್​​ಬೀರ್ ಕಪೂರ್

ಟಾಮ್ ಹಾಲೆಂಡ್ ಮಾತ್ರವೇ ಅಲ್ಲ ಹಲವು ಹಾಲಿವುಡ್ ತಾರೆಯರಿಗೆ ‘ಆರ್​​ಆರ್​​ಆರ್’ ಸಿನಿಮಾ ಬಲು ಅಚ್ಚುಮೆಚ್ಚು. ಹಾಲಿವುಡ್​ ಮಾತ್ರವಲ್ಲ, ವಿಶ್ವ ಸಿನಿಮಾ ರಂಗದ ಅತ್ಯುತ್ತಮ ನಿರ್ದೇಶಕರು ಎಂದು ಕರೆಯಲಾಗುವ ‘ಟೈಟಾನಿಕ್’, ‘ಅವತಾರ್’ ಖ್ಯಾತಿಯ ಜೇಮ್ಸ್ ಕ್ಯಾಮರನ್, ಹಲವು ಆಸ್ಕರ್ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಟಿವನ್ ಸ್ಪೀಲ್​​ಬರ್ಗ್ ಸೇರಿದಂತೆ ಇನ್ನೂ ಹಲವು ಖ್ಯಾತನಾಮರಿಗೆ ‘ಆರ್​​ಆರ್​​ಆರ್’ ಸಿನಿಮಾ ಇಷ್ಟವಾಗಿದೆ.

ಟಾಮ್ ಹಾಲೆಂಡ್ ಹಲವು ವರ್ಷಗಳಿಂದ ‘ಸ್ಪೈಡರ್​ ಮ್ಯಾನ್’ ಆಗಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಅವರ ನಾಲ್ಕನೇ ‘ಸ್ಪೈಡರ್ ಮ್ಯಾನ್’ ಸ್ಟಾಂಡ್ ಅಲೋನ್ ಸಿನಿಮಾ. ಆದರೆ ಇದು ಅವರ ಕಟ್ಟ ಕಡೆಯ ಸಿನಿಮಾ ಎನ್ನಲಾಗುತ್ತಿದೆ. ಮುಂದಿನ ‘ಸ್ಪೈಡರ್ ಮ್ಯಾನ್’ ಸಿನಿಮಾನಲ್ಲಿ ಹೊಸ ಪಾತ್ರಧಾರಿ ಆ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸುವುದು ಉತ್ತಮ – Kannada News | How to prevent motion sickness while traveling by car

ಈ ಲಾಂಗ್‌ ಟ್ರಿಪ್‌ ವೇಳೆ ಅಥವಾ ದೂರದೂರಿಗೆ ಕಾರ್‌, ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಅನೇಕರಿಗೆ ವಾಕರಿಗೆ (motion sickness), ತಲೆ ತಿರುಗುವುದು, ಸಸ್ತು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಕೆಲವರಿಗೆ ಹೊಟ್ಟೆಯಲ್ಲಿ ತಳಮಳ ಉಂಟಾಗಿ ವಾಂತಿ ಬಂದ ಅನುಭವವಾದರೆ ಇನ್ನೂ ಕೆಲವರು ಪ್ರಯಾಣದುದ್ದಕ್ಕೂ ವಾಂತಿ ಮಾಡುತ್ತಾರೆ. ಈ ಸಮಸ್ಯೆ ಇಡೀ ಟ್ರಿಪ್‌ನ ಖುಷಿಯನ್ನು ಹಾಳು ಮಾಡಿಬಿಡುತ್ತದೆ. ಈ ಒಂದು ಕಾರಣದಿಂದಾಗಿ ಹಲವರು ದೂರ ಪ್ರಯಾಣ ಮಾಡಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ಈ ಮೋಷನ್‌ ಸಿಕ್ನೆಸ್‌ ಅನ್ನು ತಡೆಯಲು ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಪ್ರಯಾಣಕ್ಕೂ ಮುನ್ನ ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮೋಷನ್‌ ಸಿಕ್ನೆಸ್‌ ಇಲ್ಲದೆ ಆರಾಮವಾಗಿ ಪ್ರಯಾಣಿಸಬಹುದು. ಅಲ್ಲದೆ ಈ ಕೆಲವೊಂದು ಮನೆ ಮದ್ದುಗಳು ಸಹ ವಾಂತಿ ತಡೆಯಲು ಸಹಕಾರಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ದೂರ ಪ್ರಯಾಣದ ವೇಳೆ ವಾಂತಿ ಬರದಂತೆ ತಡೆಯಲು ಈ ಟಿಪ್ಸ್‌ ಪಾಲಿಸಿ:

ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಬೇಡಿ: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಪ್ರಯಾಣಿಸಬಾರದು, ಈ ತಪ್ಪಿನಿಂದ ಪ್ರಯಾಣದ ವೇಳೆ ವಾಕರಿಕೆ ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಆದ್ದರಿಂದ ದೂರ ಪ್ರಯಾಣಕ್ಕೂ ಮುನ್ನ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ ಮತ್ತು ಭಾರವಾದ, ಹುರಿದ ಅಥವಾ ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ.

ಸರಿಯಾದ ಆಸನವನ್ನು ಆರಿಸಿ: ನಿಮಗೆ ಮೋಷನ್‌ ಸಿಕ್ನೆಸ್‌ ಇದ್ದರೆ ನೀವು ಪ್ರಯಾಣದ ಸಂದರ್ಭದಲ್ಲಿ ಯಾವಾಗಲೂ ಬಸ್ ಅಥವಾ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ.  ಇದು ನಿಮಗೆ ಮುಂದಿನ ರಸ್ತೆಯ ಸ್ಪಷ್ಟ ನೋಟವನ್ನು ನೀಡುತ್ತದೆ ಮತ್ತು ನಿಮ್ಮ ಮೆದುಳಿಗೆ ಕಾರಿನ ವೇಗವನ್ನು ಗ್ರಹಿಸಲು ಸುಲಭವಾಗುತ್ತದೆ. ಅಲ್ಲದೆ ಮುಂದಿನ ದೃಶ್ಯಾವಳಿಗಳನ್ನು ನೋಡುವುದರಿಂದ ಮೆದುಳು-ಕಣ್ಣಿನ ಸಮನ್ವಯವು ಸುಧಾರಿಸುತ್ತದೆ, ಇದು ಮೋಷನ್‌ ಸಿಕ್ನೆನ್‌ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತಾಜಾ ಗಾಳಿಯನ್ನು ಪಡೆಯಿರಿ: ಕಾರಿನ ಗ್ಲಾಸ್‌ ಅನ್ನು ಸಂಪೂರ್ಣವಾಗಿ ಮುಚ್ಚಿ, ಎಸಿ ಹಾಕಿ ಪ್ರಯಾಣಿಸಿದರೆ ವಾಂತಿ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಯಾಣ ಮಾಡುವಾಗ, ಕಾರಿನ ಗ್ಲಾಸ್‌ ಸ್ವಲ್ಪ ತೆರೆದಿಡಿ ಅಥವಾ ಸ್ವಲ್ಪ ತಾಜಾ ಗಾಳಿಯನ್ನು ಪಡೆಯಲು ಪ್ರಯತ್ನಿಸಿ. ಇದು ಆತಂಕ ಅಥವಾ ಪ್ಯಾನಿಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಪ್ರಯಾಣಿಸುವಾಗ ಮೊಬೈಲ್‌ ಫೋನ್‌ ನೋಡುವುದು, ಪುಸ್ತಕ ಓದುವುದನ್ನು ಕೂಡ ತಪ್ಪಿಸಬೇಕು.

ಇದನ್ನೂ ಓದಿ: ಮಲಗುವ ಮುನ್ನ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು

ಕಾರಿನೊಳಗೆ ಏರ್‌ ಫ್ರೆಶ್ನರ್‌ ಹಾಕಬೇಡಿ: ಕಾರಿನೊಳಗಿನ ಏರ್ ಫ್ರೆಶ್ನರ್‌ಗಳ ಬಲವಾದ ವಾಸನೆ ಸಹ ಕೆಲವರಿಗೆ ವಾಂತಿ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಏರ್‌ ಫ್ರೆಶ್ನರ್‌ ಹಾಕಲು ಬಿಡಬೇಡಿ. ಅಲ್ಲದೆ ಈ ವಾಸನೆಯಿಂದ ನಿಮಗೆ ಅನಾನುಕೂಲವಾಗಿದ್ದರೆ, ಕಾರನ್ನು ನಿಲ್ಲಿಸಿ ಮತ್ತು ತಾಜಾ ಗಾಳಿಯಲ್ಲಿ ಪಡೆಯಲು ಕಾರಿನಿಂದ ಹೊರಗಿಳಿದು ಸ್ವಲ್ಪ ತಾಜಾ ಗಾಳಿಯನ್ನು ತೆಗೆದುಕೊಳ್ಳಿ. ಇದರಿಂದ ದೇಹವು ಹಗುರವಾಗುತ್ತದೆ. ದೇಹವು ಹೆಚ್ಚು ಹಗುರವಾಗಿರುತ್ತದೆ.

ಶುಂಠಿ ಬಳಕೆ: ಮೋಷನ್‌ ಸಿಕ್ನೆಸ್‌ ಕಡಿಮೆ ಮಾಡಲು ಶುಂಠಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರಯಾಣದ ಮೊದಲು, ನೀವು ಶುಂಠಿ ಚಹಾವನ್ನು ಕುಡಿಯಬಹುದು ಅಥವಾ ಸಣ್ಣ ತುಂಡು ಶುಂಠಿಯನ್ನು ಅಗಿಯಬಹುದು. ಶುಂಠಿಯಲ್ಲಿರುವ ನೈಸರ್ಗಿಕ ಪದಾರ್ಥಗಳು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಪುದೀನ ಬಳಕೆ: ಪ್ರಯಾಣಕ್ಕೂ ಮುನ್ನ ನಿಂಬೆ ಅಥವಾ ಪುದೀನ ಚಹಾ ಕುಡಿಯುವ ಮೂಲಕವೂ ವಾಂತಿಯನ್ನು ತಡೆಯಬಹುದು. ಇದಲ್ಲದೆ ಪುದೀನ ಕ್ಯಾಂಡಿಯ ಪರಿಮಳವು ಸಹ ವಾಕರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಕಮಲಕ್ಕೆ ಒಪ್ಪಿದ್ದರೆ ಅಂದೇ ಮಂತ್ರಿಯಾಗ್ತಿದ್ದೆ: ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ – Kannada News | Disgruntled Congress MLA Subbareddy Expresses Disappointment Over Cabinet Expansion

ಬೆಂಗಳೂರು, ಆ.5: ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಡಿ ಹೊತ್ತಿದ್ದು, ಚಿಕ್ಕಬಳ್ಳಾಪುರ ಶಾಸಕ ಸುಭಾ ರೆಡ್ಡಿ ತಮ್ಮ ಬೇಸರ ಹೊರಹಾಕಿದ್ದಾರೆ. ಬಾಗೇಪಲ್ಲಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಚಿವ ಸ್ಥಾನ ಸಿಕ್ಕೇ ಇಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಸುಭಾ ರೆಡ್ಡಿ ಮಾತನಾಡಿ, ಆಪರೇಷನ್ ಕಮಲದ ವೇಳೆ ನಾನು ಅಡ್ಡದಾರಿನಲ್ಲಿ ಹೋಗಿದ್ದರೆ ಮಂತ್ರಿ ಆಗ್ತಿದ್ದೆ. ಆದರೆ ನನ್ನ ಮನಸ್ಸು ಅದಕ್ಕೆ ಒಪ್ಪಲಿಲ್ಲ. ಯಾವತ್ತಾದರೂ ಪಕ್ಷಕ್ಕೆ ನಿಷ್ಠೆ ತೋರಿದರೆ ಒಳ್ಳೇದಾಗುತ್ತೆ ಎಂದು ನಂಬಿದ್ದೆ. ಆದರೆ ನಾನು ತೋರಿಸಿದ ನಿಷ್ಠೆಯನ್ನು ಪಕ್ಷ ನನಗೆ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿದಾಗ ನನ್ನ ಸ್ನೇಹಿತ ಡಾಕ್ಟರ್ ಸುಧಾಕರ್ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆಗ ಇಬ್ಬರೂ ಜೊತೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಉಸ್ತುವಾರಿ ಆಗ್ತೀವಿ ಎಂದಿದ್ದರು. ಆದರೆ ನಾನು ಹೋಗಲಿಲ್ಲ ಎಂದಿದ್ದಾರೆ. ತಮಗೆ ಲಕ್ ಇಲ್ಲ ಎಂದ ಸುಭಾ ರೆಡ್ಡಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರು ತಾವು ಶಾಸಕನಾಗಲು ಯಾವುದೇ ಕ್ಯಾನ್ವಾಸ್ ಮಾಡಿಲ್ಲ. ಒಂದು ರೂಪಾಯಿ ಕೂಡ ಪಾರ್ಟಿ ಫಂಡ್ ನೀಡಿಲ್ಲ ಎಂದು ಹೇಳಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು? – Kannada News | Karnataka Voter List Revision: Over 16.3 Lakh Voters Untraceable; Major Deletions Expected in Bengaluru

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ Image Credit source: ceo_karnataka X Account

ಬೆಂಗಳೂರು, ಆಗಸ್ಟ್​​ 05: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಸ್ಟ್​​ 8ರ ವರೆಗೂ ನಡೆಯಲಿದ್ದು, ಈಗಾಗಲೇ 5,54,32,314 ಎನ್ಯುಮರೇಷನ್ ಫಾರ್ಮ್ ಕೊಡಲಾಗಿದೆ. ಅದರಲ್ಲಿ 4,43,04,632 ಸಾವಿರ ಅರ್ಜಿಗಳು ಡಿಜಿಟಲೈಜೇಷನ್ ಆಗಿವೆ. 16,30,012ರಷ್ಟು ಮತದಾರರು ಪತ್ತೆಯಾಗಿಲ್ಲ. ರಾಜ್ಯದಲ್ಲಿ ASDDO (ಆಬ್ಸೆಂಟ್, ಶಿಫ್ಟ್, ಡೆತ್, ಡೂಪ್ಲಿಕೇಟ್ & ಇತರರು) 1,11,04,705 ಮತದಾರರು ಪತ್ತೆಯಾಗಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. 66,64,943 ಮತದಾರರು ಶಾಶ್ವತವಾಗಿ ಸ್ಥಳಾಂತರವಾಗಿದ್ದರೆ, 16,30,872 ಮಂದಿ ಮೃತಪಟ್ಟಿದ್ದಾರೆ. 6,89,904 ಜನ ಎರಡು ಕಡೆ ವೋಟ್​​ ಹೊಂದಿದ್ದರೆ, 4,88,974 ಇತರೆ ಮತದಾರರು ಪರಿಷ್ಕರಣೆ ವೇಳೆ ಪತ್ತೆಯಾಗಿರೋದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಅತಿ ಹೆಚ್ಚು ಮತದಾರರು ಲಿಸ್ಟ್​​ನಿಂದ ಹೊರಕ್ಕೆ?

ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರು ವೋಟರ್​​ ಲಿಸ್ಟ್​​ನಿಂದ ಉಳಿಯುತ್ತಾರಾ ಎಂಬ ಪ್ರಶ್ನೆಯೀಗ ಉದ್ಭವಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.45ರಷ್ಟು ಮತದಾರರು ನಾಪತ್ತೆಯಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 47ರಷ್ಟು ಮತದಾರರ ಪತ್ತೆ ಆಗಿಲ್ಲ. ಬೆಂಗಳೂರು ಕೇಂದ್ರದಲ್ಲಿ ಶೇಕಡಾ 48ರಷ್ಟು ಮತದಾರ ಮಾಹಿತಿ ಲಭ್ಯವಾಗಿಲ್ಲವಾದರೆ, ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 51ರಷ್ಟು ಮತದಾರರು ನಾಪತ್ತೆಯಾಗಿದ್ದಾರೆ. ಈ ಅಂಕಿ-ಅಂಶಗಳು ಶಿಫ್ಟಿಂಗ್ ಆದವರು, ಮೃತಪಟ್ಟವರು ಮತ್ತು ಟ್ರೇಸ್ ಆಗದೇ ಇರುವವರನ್ನು ಒಳಗೊಂಡಿದೆ.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ; 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು!

ಜಿಬಿಎ ವ್ಯಾಪ್ತಿಯಲ್ಲಿ 10 ಲಕ್ಷ ಫಾರಂ-6 ವಿತರಣೆ ಆಗಿರೋದಾಗಿ ವಿ.ಅನ್ಬುಕುಮಾರ್ ಅವರು ತಿಳಿಸಿದ್ದು, ಮೃತರ ಬಗ್ಗೆ ಸಂಪೂರ್ಣ ವಿವರಣೆ ಪಡೆದು ಲಿಸ್ಟ್​ನಲ್ಲಿ ಹಾಕಿದ್ದೇವೆ. ಯಾರು ಫಾರಂ ರಿಟರ್ನ್ ಮಾಡಿದ್ದಾರೋ ಅವರ ಹೆಸರು ಇರಲಿದೆ. ಫಾರಂ ರಿಟರ್ನ್ ಮಾಡದವರ ಹೆಸರು ಪಟ್ಟಿಯಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲರೂ ಆದಷ್ಟು ಬೇಗ ಫಾರಂಗಳನ್ನು ರಿಟರ್ನ್ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಪ್ರದೇಶಗಳಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ

ಹಾವೇರಿ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಪ್ಪಳ, ವಿಜಯನಗರ, ಗದಗ, ಕೋಲಾರ, ಕೊಡಗು, ಧಾರವಾಡ, ಯಾದಗಿರಿ,ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ, GBA ನಾತ್೯, GBA ಸೆಂಟ್ರಲ್, GBA ದಕ್ಷಿಣದಲ್ಲಿ ಶೇಕಡ ನೂರರಷ್ಟು ಎನ್ಯುಮರೇಷನ್ ಫಾರ್ಮ್ ಹಂಚಿಕೆ ಆಗಿರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಧಾನಿ ಮೋದಿಯಿಂದ ಮಾತ್ರ ಪರೀಕ್ಷಾ ಸುಧಾರಣೆ ಸಾಧ್ಯ; ಲೋಕಸಭೆಯಲ್ಲಿ ವಿಪಕ್ಷಗಳ ಬೆವರಿಳಿಸಿದ ತೇಜಸ್ವಿ ಸೂರ್ಯ – Kannada News | Bengaluru BJP MP Tejasvi Surya spoke on the Anti Paper Leak Amendment Bill in Lok Sabha Praises PM Modi

ನವದೆಹಲಿ, ಆಗಸ್ಟ್ 5: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ ಮಂಡನೆಯಾಗಿ ರಾಷ್ಟ್ರಪತಿಗಳಿಂದಲೂ ಅಂಗೀಕಾರಗೊಂಡಿದೆ. ಈ ಸಮಯದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಲೋಕಸಭಾ ಮುಂಗಾರು ಅಧಿವೇಶನದಲ್ಲಿ ಮಾಡಿರುವ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಯ ಮಂಡನೆ ವೇಳೆ ಮಾತನಾಡಿದ್ದ ತೇಜಸ್ವಿ ಸೂರ್ಯ ವಿರೋಧ ಪಕ್ಷಗಳ ಬೆವರಿಳಿಸಿದ್ದಾರೆ. “ದೇಶದ ಯುವಕರಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆ ಮತ್ತು ಶಾಶ್ವತ ಪರಿಹಾರ ಬೇಕು. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಿದೆ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ. ಪ್ರಧಾನಿ ಮೋದಿಯಿಂದ ಮಾತ್ರ ಪರೀಕ್ಷಾ ಸುಧಾರಣೆ ಸಾಧ್ಯ. ಪ್ರಧಾನಿ ಮೋದಿ ಈ ದೇಶದ ಯುವಕರನ್ನು ನಿರಾಸೆಗೊಳಿಸುವುದಿಲ್ಲ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

“ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸಾಮಾನ್ಯ ಮತ್ತು ಬಡ ಕುಟುಂಬಗಳ ಮಕ್ಕಳಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆಯೇ ಬದುಕು ಕಟ್ಟಿಕೊಳ್ಳುವ ದೊಡ್ಡ ಅವಕಾಶವಾಗಿದೆ. ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಒಂದು ವಾರದಿಂದ ವಿರೋಧ ಪಕ್ಷಗಳು ಪೇಪರ್ ಲೀಕ್ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಆದರೆ ಸರ್ಕಾರವೇ ಕಠಿಣ ಕಾನೂನು ತಿದ್ದುಪಡಿ ವಿಧೇಯಕ ತಂದು ಚರ್ಚೆಗೆ ಅವಕಾಶ ನೀಡಿದಾಗ ಅದೇ ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ” ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಯುವಕರಿಗೆ ಶಿಕ್ಷಣವೇ ಏಕೈಕ ದಾರಿ:

“ಬಡ ಮತ್ತು ಸಾಮಾನ್ಯ ಕುಟುಂಬದಿಂದ ಬರುವ ಯುವಕರಿಗೆ ಸಮಾಜದಲ್ಲಿ ಬೆಳೆಯಲು ಹಾಗೂ ಯಶಸ್ಸು ಕಾಣಲು ಶಿಕ್ಷಣ ಒಂದೇ ಮುಖ್ಯ ದಾರಿ. ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಬೇರೆ ಬೇರೆ ಆಯ್ಕೆಗಳಿರಬಹುದು, ಆದರೆ ಸಾಮಾನ್ಯ ಕುಟುಂಬದ ಮಕ್ಕಳಿಗೆ ಪರೀಕ್ಷೆಗಳೇ ದಾರಿ. ಪರೀಕ್ಷೆ ಎಂಬುದು ಜಾತಿ, ಪೋಷಕರ ಆದಾಯ ಅಥವಾ ಹಿನ್ನೆಲೆಯನ್ನು ಕೇಳದೆ ಕೇವಲ ಶ್ರಮಕ್ಕೆ ಗೌರವ ನೀಡುವ ವ್ಯವಸ್ಥೆ. ಆದರೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅದು ಕೇವಲ ಆಡಳಿತಾತ್ಮಕ ಲೋಪವಲ್ಲ, ಯುವಜನರ ನಂಬಿಕೆಗೆ ಮಾಡುವ ವಿಶ್ವಾಸಘಾತುಕತನ. ಹೀಗಾಗಿ, ಪ್ರಧಾನಿ ಮೋದಿ ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು, ಭವಿಷ್ಯದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಮತ್ತು ವ್ಯವಸ್ಥೆಯನ್ನು ಒಮ್ಮೆ ಮತ್ತು ಶಾಶ್ವತವಾಗಿ ಸರಿಪಡಿಸಲು ಸದೃಢ ವಿಧಾನವನ್ನು ಅನುಸರಿಸುತ್ತಿದೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಇದನ್ನೂ ಓದಿ: Anti-paper Leak Bill Passed: ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ

ಕಾಂಗ್ರೆಸ್​ನವರು ಕೆಪಿಎಸ್​ಸಿ ಬಗ್ಗೆ ಗಮನಹರಿಸಿ:

“ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಬಂದು ನೀಟ್ ಹಗರಣದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆದರೆ ಕೆಪಿಎಸ್​ಸಿ ಹಗರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿರುವುದು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ?” ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಂಸತ್​ ಅಧಿವೇಶನದಲ್ಲಿ ಪ್ರಶ್ನಿಸಿದ್ದರು.

ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆಯ ವೇಳೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಕನ್ನಡದಲ್ಲೇ ಪ್ರಶ್ನಿಸಿದ ಅವರು, “10 ದಿನಗಳ ಹಿಂದೆ KPSC ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ತಮ್ಮ ಮಕ್ಕಳಿಗೆ ನಕಲಿ ದಾಖಲೆಗಳನ್ನು ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ವೆಟರ್ನರಿ ಕಾಲೇಜಿನಲ್ಲಿ ಒಂದೊಂದು ಸೀಟಿಗೆ 80 ಲಕ್ಷ ರೂ. ವಸೂಲಿ ಮಾಡಿದ ಹಗರಣವೂ ನಡೆದಿದೆ. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕು” ಎಂದು ಕನ್ನಡದಲ್ಲೇ ಒತ್ತಾಯಿಸಿದ್ದರು.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

“ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದ ತಕ್ಷಣ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ, ಅಪರಾಧಿಗಳನ್ನು ತಕ್ಷಣವೇ ಬಂಧಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಮರು ಪರೀಕ್ಷೆ ನಡೆಸಲಾಯಿತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಂಸ್ಥೆಯನ್ನು ಬಲಪಡಿಸಲು ಪ್ರಮುಖ ಸುಧಾರಣೆ ತರಲಾಗಿದೆ. ಐಐಟಿ-ಜೆಇಇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಹಿಡಿದು ಪರೀಕ್ಷಾ ಕೇಂದ್ರಗಳ ನಿರ್ವಹಣೆವರೆಗೆ ಸಂಪೂರ್ಣ ಸುಧಾರಣೆ ತರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಕಠಿಣ ಕಾನೂನು: ಕಳೆದ 70 ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ಅಪರಾಧವೆಂದು ಪರಿಗಣಿಸಿ ತಡೆಯಲು ಕಠಿಣ ಕಾನೂನು ಜಾರಿಗೆ ತಂದಿರುವುದು ಇದೇ ಮೊದಲು” ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಅವಕಾಶವಿದೆ – Kannada News | Bank Accounts: How many bank accounts can a person open

ಸಾಂದರ್ಭಿಕ ಚಿತ್ರImage Credit source: Priyanka Parashar/Mint via Getty Images

ಸಾಮಾನ್ಯವಾಗಿ ಎಲ್ಲರ ಬಳಿ ಒಂದಾದರೂ ಸೇವಿಂಗ್ ಅಕೌಂಟ್ (Saving account) ಇದ್ದೇ ಇರುತ್ತದೆ. ಆದರೆ ಕೆಲವರು ಒಂದಲ್ಲ ಎರಡು ಮೂರು ಬ್ಯಾಂಕ್ ಖಾತೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿರುತ್ತಾರೆ. ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು ಎಂಬುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಆದರೆ ವ್ಯಕ್ತಿಯೂ ತನ್ನ ಹೆಸರಿನಲ್ಲಿ ಎಷ್ಟು ಬೇಕಾದರೂ ಬ್ಯಾಂಕ್ ಖಾತೆಗಳನ್ನು ತೆರೆಯಲು ಅವಕಾಶವಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನಾದರೂ ಹೊಂದಬಹುದು. ಆರ್‌ಬಿಐ ಯಾವುದೇ ನಿರ್ಬಂಧ ಹಾಗೂ ಮಿತಿಗಳನ್ನು ಹಾಕಿಲ್ಲ. ಪ್ರತಿ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಮುಖ್ಯ. ಹೆಚ್ಚು ಖಾತೆಗಳಿದ್ದರೆ ಹಣ ನಿರ್ವಹಣೆ ಮಾಡುವುದು ಕಷ್ಟ ಹಾಗೂ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ಕಷ್ಟವಾಗಬಹುದು.

ನಿಮ್ಮ ಬಳಿಯಿರುವ ಎಲ್ಲಾ ಖಾತೆಗಳಿಗೆ ನಿಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೆಚ್ಚಿನ ಖಾತೆಗಳಿದ್ದರೆ ವಾರ್ಷಿಕ ನಿರ್ವಹಣಾ ಶುಲ್ಕ ಮತ್ತು ಎಟಿಎಂ ಶುಲ್ಕಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಹಣಕಾಸಿನ ನಿರ್ವಹಣೆ ಹಾಗೂ ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗಳನ್ನು ಹೊಂದುವುದು ಉತ್ತಮ.

ಇದನ್ನೂ ಓದಿ: ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಬಹುದು?

ಉತ್ತರ: ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನಾದರೂ ಹೊಂದಬಹುದು.

ಪ್ರಶ್ನೆ: ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ಆರ್ ಬಿಐ ಹೇಳುವುದೇನು?

ಉತ್ತರ: ಆರ್ ಬಿಐ ನಿಯಮದ ಪ್ರಕಾರ ಪ್ರತಿ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು.

ಪ್ರಶ್ನೆ: ಉಳಿತಾಯ ಖಾತೆ ಎಂದರೇನು?

ಉತ್ತರ: ಉಳಿತಾಯ ಖಾತೆ ಸುರಕ್ಷಿತವಾದ ಖಾತೆಯಾಗಿದ್ದು, ಸಣ್ಣ ಅಥವಾ ದೊಡ್ಡ ಮೊತ್ತವನ್ನು ಠೇವಣಿ ಮಾಡಬಹುದಾಗಿದೆ.

‌ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್: ಸಿಎಂ ಡಿ.ಕೆ.ಶಿವಕುಮಾರ್ ಮನವೊಲಿಕೆ ಸಕ್ಸಸ್ – Kannada News | Congress Leadership Successfully Persuades Indi MLA Yashwantharayagouda Patil to Revoke Resignation

ಬೆಂಗಳೂರು, ಆ.5: ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ನಡುವೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣ ರಾಜೀನಾಮೆ ಸಲ್ಲಿಸಿದ್ದ ಪಾಟೀಲ್ ಅವರ ಮನವೊಲಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ವರಿಷ್ಠರು ಯಶಸ್ವಿಯಾಗಿದ್ದಾರೆ. ರಾಜೀನಾಮೆ ಸಲ್ಲಿಸುವಾಗ, ಯಾವುದೇ ಒತ್ತಡಕ್ಕೆ ಮಣಿದು ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ಯಶವಂತರಾಯಗೌಡ ಪಾಟೀಲ್ ಸ್ಪಷ್ಟಪಡಿಸಿದ್ದರು. ಆದರೆ, ಸಿ.ಎಂ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಲಕ್ಷ್ಮಣ್ ಸವದಿ ಮತ್ತು ವಿನಯ್ ಕುಲಕರ್ಣಿ ಸೇರಿದಂತೆ ಹಲವು ನಾಯಕರು ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಭರವಸೆ ನೀಡುವ ಮೂಲಕ ಪಾಟೀಲ್ ಅವರನ್ನು ಸಮಾಧಾನಪಡಿಸಲಾಯಿತು. ಅಂತಿಮವಾಗಿ, ಯಶವಂತರಾಯಗೌಡ ಪಾಟೀಲ್ ತಮ್ಮ ಆಪ್ತರ ಮೂಲಕ ಸ್ಪೀಕರ್ ಕಚೇರಿಗೆ ಪತ್ರ ಕಳುಹಿಸಿ, ತಮ್ಮ ರಾಜೀನಾಮೆ ಅಂಗೀಕರಿಸದಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ, ಅವರು ಶಾಸಕರಾಗಿ ಮುಂದುವರಿಯಲಿದ್ದು, ಕಾಂಗ್ರೆಸ್ ನಾಯಕತ್ವವು ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಇತರ ಅಸಮಾಧಾನಿತ ಶಾಸಕರಾದ ಕೃಷ್ಣಪ್ಪ ಮತ್ತು ಜಯಚಂದ್ರ ಅವರನ್ನೂ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಖತ್ ತರ್ಲೆ, ಸಲ್ಮಾನ್ ಖಾನ್ ಬುಕ್ ಪ್ರಿಂಟ್ ಹಾಕಿಸಿದ ಜೆನ್ ಜಿಗಳು – Kannada News | ‘Bhai Ke Dohe’, the collection of the Salman Khan’s tweets

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಭಿನ್ನ ವ್ಯಕ್ತಿತ್ವದ, ಸಾಕಷ್ಟು ವಿವಾದಗಳನ್ನೂ ಹೊಂದಿರುವ ಆದರೆ ಅಷ್ಟೆ ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿರುವ ನಟ. ಟ್ರೋಲಿಗರಿಗಂತೂ ಬಲು ಪ್ರಿಯ ಸೆಲೆಬ್ರಿಟಿ ಸಲ್ಮಾನ್ ಖಾನ್. ಇತ್ತೀಚೆಗೆ ಜೆನ್ ಜಿಗಳ ಪ್ರತಿಭಟನೆಗೆ ಸಹ ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು, ಅಲ್ಲದೆ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸುವಂತೆ, ಸೋನಂ ವಾಂಕ್ಚುಕ್ ಉಪವಾಸ ನಿಲ್ಲಿಸುವಂತೆ ಟ್ವೀಟ್ ಸಹ ಮಾಡಿದ್ದರು. ಇತರೆ ಸೆಲೆಬ್ರಿಟಿಗಳಂತೆ ‘ಪೊಲಿಟಿಕಲಿ ಕರೆಕ್ಟ್’ ಆದ ಟ್ವೀಟ್​​ಗಳನ್ನು ಸಲ್ಮಾನ್ ಖಾನ್ ಮಾಡುವುದಿಲ್ಲ, ಅವರಿಗೆ ತೋಚಿದ್ದನ್ನು ಬರೆಯುತ್ತಾರೆ. ಇದೀಗ ಈ ಜೆನ್​ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಪ್ರಧಾನವಾಗಿರಿಸಿಕೊಂಡು ಸಖತ್ ತರ್ಲೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅದರಲ್ಲೂ ಆಗಾಗ್ಗೆ ಟ್ವೀಟ್​​ಗಳನ್ನು ಸಹ ಮಾಡುತ್ತಿರುತ್ತಾರೆ. ಅವರ ಟ್ವೀಟ್​​ಗಳು ಇತರೆ ಸೆಲೆಬ್ರಿಟಿಗಳ ಟ್ವೀಟ್​​ಗಳಿಗಿಂತಲೂ ಭಿನ್ನವಾಗಿರುತ್ತವೆ. ತಮಗೆ ತೊಚಿದ್ದನ್ನು ಟ್ವೀಟ್ ಮಾಡುತ್ತಾರೆ. ಇತ್ತೀಚೆಗಷ್ಟೆ ಸೋನಂ ವಾಂಕ್ಚುಕ್ ಅವರಿಗೆ ‘ಇಟ್ಸ್ ಡನ್ ಬ್ರೋ’ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು. ಇದೇ ರೀತಿ ಹಲವಾರು ಬಾರಿ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಿದೆ. ಇದೀಗ ಈ ಜೆನ್ ಜೀ ಗಳು ಸಲ್ಮಾನ್ ಖಾನ್ ಅವರ ಎಲ್ಲ ಟ್ವೀಟ್​​ಗಳನ್ನು ಸಂಗ್ರಹಿಸಿ ಅವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿದ್ದಾರೆ. ಪುಸ್ತಕಕಕ್ಕೆ ‘ಭಾಯಿ ಕೆ ದೋಹೆ’ ಎಂದು ಹೆಸರಿಟ್ಟಿದ್ದಾರೆ.

ಹಿಂದಿಯಲ್ಲಿ ‘ಕಬೀರ್​ ಕೆ ದೋಹೆ’ ಇನ್ನಿತರೆ ದೋಹೆಗಳು ಬಹಳ ಜನಪ್ರಿಯ ಮತ್ತು ಐತಿಹಾಸಿಕ. ಈಗ ಜೆನ್ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಸಂಗ್ರಹಿಸಿ, ಸಂಪಾದಿಸಿ, ‘ಭಾಯಿ ಕಿ ದೋಹೆ’ ಎಂದು ಪುಸ್ತಕ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕ ಇದೀಗ ‘ದಿ ರಿಯಾಲ್ ಸ್ಟೋರ್ (theriyalstore) ವೆಬ್​ ಸೈಟ್​​ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಪುಸ್ತಕವನ್ನು 999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:‘70 ಜನ ಒಂದೇ ಟಾಯ್ಲೆಟ್ ಬಳಸಬೇಕಿತ್ತು’: ಜೈಲು ದಿನಗಳ ಕಷ್ಟ ನೆನೆದ ಸಲ್ಮಾನ್ ಖಾನ್

ಪುಸ್ತಕದಲ್ಲಿ ಸಲ್ಮಾನ್ ಖಾನ್ ಅವರ ಪ್ರತಿ ಟ್ವೀಟ್​​ಗೆ ಅವರ ಅಪರೂಪದ ಕೆಲವು ಫೋಟೊಗಳನ್ನು ಸಹ ಮುದ್ರಿಸಲಾಗಿದೆ. ಕ್ರಿಯಾಶೀಲವಾಗಿ, ಬುದ್ಧಿವಂತಿಕೆಯಿಂದ ಫೋಟೊಗಳನ್ನು, ಟ್ವೀಟ್​​ಗಳನ್ನು ಪುಸ್ತಕದಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ಪುಸ್ತಕ ಖರೀದಿ ಮಾಡಲು ವೆಬ್ ಸೈಟ್ ತೆರೆದರೆ ಅಲ್ಲಿ, ಸಲ್ಮಾನ್ ಅವರ ‘ಮೇ ಕರು ತೋ ಸಾಲಾ ಕ್ಯಾರೆಕ್ಟರ್ ಡೀಲಾ ಹೇ’ ಹಾಡು ಕೇಳಿ ಬರುತ್ತದೆ. ಈ ಹಾಡು ಸಹ, ಸಲ್ಮಾನ್ ಖಾನ್ ಅವರ ವೈಯಕ್ತಿಕ ಬದುಕಿನೊಂದಿಗೆ ಸಂಬಂಧ ಹೊಂದಿದೆ. ಬೇರೆಯವರು ಮಾಡಿದರೆ ಸರಿ, ನಾನು ಮಾಡಿದರೆ ತಪ್ಪು ಎಂಬ ಪ್ರಶ್ನೆಯನ್ನು ಸಲ್ಮಾನ್ ಕೇಳುತ್ತಿರುವಂತೆ ಈ ಹಾಡಿದೆ.

ಸಲ್ಮಾನ್ ಖಾನ್ ಅವರ ಇತ್ತೀಚೆಗಿನ ‘ಇಟ್ಸ್ ಓವರ್ ಬ್ರೋ’ ಇಂದ ಹಿಡಿದು ಅವರ ಹಲವು ಐಕಾನಿಕ್ ಟ್ವೀಟ್​​ಗಳು ಈ ಪುಸ್ತಕದಲ್ಲಿವೆ. ಪುಸ್ತಕವನ್ನು ಹಲವಾರು ಮಂದಿ ಖರೀದಿ ಮಾಡುತ್ತಿದ್ದಾರೆ. ಹಲವರು ಪುಸ್ತಕದ ಜೊತೆಗೆ ತಮ್ಮ ಚಿತ್ರಗಳನ್ನು ಸಹ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಯಾರೋ ಜೆನ್-ಜಿ ಅದ್ಭುತವಾದ ಐಡಿಯಾ ಮಾಡಿ ಸಲ್ಮಾನ್ ಟ್ವೀಟ್​​ಗಳನ್ನು ಪುಸ್ತಕ ರೂಪದಲ್ಲಿ ಪಬ್ಲಿಷ್ ಮಾಡಿದ್ದಾನೆ ಜೊತೆಗೆ ಒಳ್ಳೆಯ ಹಣ ಸಹ ಗಳಿಸುತ್ತಿದ್ದಾನೆ. ಆದರೆ ಸಲ್ಮಾನ್ ಖಾನ್ ತಂಡದವರು ಇದರ ಮೇಲೆ ಯಾವುದೇ ಕೇಸು ಈ ವರೆಗೆ ಹಾಕದೇ ಇರುವುದು ಆಶ್ಚರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:09 pm, Wed, 5 August 26

Source link

Exit mobile version