ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ
ನವದೆಹಲಿ, ಏಪ್ರಿಲ್ 8: ತಾನು ನೀಡಿರುವ ಸಾಲವನ್ನು ವಾಪಸ್ ಮಾಡುವಂತೆ ಪಾಕಿಸ್ತಾನಕ್ಕೆ ಯುಎಇ ಕೇಳಿದೆ. ಸಾಲಗಳನ್ನು ಪಡೆದು ವಾಪಸ್ ಮಾಡದೇ ಹಾಗೇ ಉಳಿಸಿಕೊಂಡು ಹೋಗಿ ಅಭ್ಯಾಸಗೊಂಡಿರುವ ಪಾಕಿಸ್ತಾನಕ್ಕೆ (Pakistan) ಈಗ ಒತ್ತಡ ಶುರುವಾಗತೊಡಗಿದೆ. ಯುಎಇ ದೇಶಕ್ಕೆ ಭಿಕ್ಷೆ ಹಾಕುತ್ತಿದ್ದೇವೆ ಎಂಬಂತೆ ಪಾಕಿಸ್ತಾನದ ಕೆಲ ರಾಜಕಾರಣಿಗಳು ಕಿಚಾಯಿಸತೊಡಗಿದ್ದಾರೆ. ಸಾಲದ ಒತ್ತಡವು ಪಾಕಿಸ್ತಾನೀಯರ ಈ ವರ್ತನೆಗೆ ಕಾರಣವಾಗಿರಬಹುದು. ಪಾಕಿಸ್ತಾನಕ್ಕೆ ಯುಎಇ ನೀಡಿದ ಸಾಲದಲ್ಲಿ ಒಂದು ಭಾಗವನ್ನು ವಾಪಸ್ ಮಾಡುವಂತೆ ಕೇಳಲಾಗಿದೆ. ಮೂರು ಕಂತುಗಳಲ್ಲಿ ಪಾಕಿಸ್ತಾನ ಕಟ್ಟಬೇಕು. ಏಪ್ರಿಲ್ 11ರಂದು 450…