ಹಾಸನದಲ್ಲೊಂದು ಆಘಾತಕಾರಿ ಘಟನೆ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬಂದ ಆಗಂತುಕ – Kannada News | Shocking Incident In Hassan: Girl Panicked After Stranger Follows Her, Police Launch Manhunt

ಹಾಸನ, (ಜನವರಿ 20): ಹಾಸನ (Hassan) ನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಶಾಲಾ ಬಾಲಕಿ ಹಿಂಬಾಲಿಸಿ ಆಕೆಯ ಮನೆ ಬಾಗಿಲುವರೆಗೂ ಬಂದಿದ್ದು, ಆತಂಕ ಸೃಷ್ಟಿಸಿದೆ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆಂದು ತಿಳಿದು ಬಾಲಕಿ ಮನೆ ಕಡೆಗೆ ಓಡೋಡಿ ಬಂದಿದ್ದು, ಗೇಟು ಹಾಕಿಕೊಂಡು ಅಮ್ಮ ಅಮ್ಮ ಬಾಗಿಲು ತೆಗಿ ಎಂದು ಆತಂಕದಿಂದ ಕಿರಿಚಿದ್ದಾಳೆ. ಇನ್ನೊಂದೆಡೆ ಆಗಂತುಕ ಸಹ ಬಾಲಕಿಯನ್ನ ಬೆನ್ನಟ್ಟಿ ಮನೆ ಗೇಟ್ ವರೆಗೂ ಬಂದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದರೆ ಬೆಚ್ಚಿಬೀಳಿಸುವಂತಿದೆ. ಜನವರಿ 17ರ ಶನಿವಾರ ಮಧ್ಯಾಹ್ನ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಗಂತುಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಚಳಿಯಾಗಬಾರದೆಂದರೆ ಈ ಸಿಂಪಲ್‌ ಟ್ರಿಕ್‌ ಪಾಲಿಸಿ – Kannada News | Follow this simple trick to avoid getting cold while riding a two wheeler

ಬಹುತೇಕ ಹೆಚ್ಚಿನವರು ಕಾಲೇಜು, ಕೆಲಸಕ್ಕೆ ಬೈಕ್‌, ಸ್ಕೂಟಿಯಲ್ಲಿಯೇ ಹೋಗುತ್ತಾರೆ. ಹೀಗೆ ದ್ವಿಚಕ್ರ ವಾಹನದಲ್ಲಿ (two-wheeler) ಪ್ರಯಾಣಿಸುವಾಗ ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಸಿಕ್ಕಾಪಟ್ಟೆ ಚಳಿಯಾಗುತ್ತದೆ. ಬಲವಾದ, ತಂಪಾದ ಗಾಳಿಯು ನೇರವಾಗಿ ದೇಹವನ್ನು ಬಡಿದು, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಇದರಿಂದ ವಾಹನ ಚಲಾಯಿಸಲು ಕೂಡ ಕಷ್ಟಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಒಂದು ಸರಳ ಹ್ಯಾಕ್‌ ಅನುಸರಿಸುವ ಮೂಲಕ ಚಳಿಯಾಗದಂತೆ ನೋಡಿಕೊಳ್ಳಬಹುದು ಮತ್ತು ದೇಹವನ್ನು ಬೆಚ್ಚಗಿಡಬಹುದು. ಈ ಹ್ಯಾಕನ್ನು ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ದೀಪ್ತಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಬೈಕ್‌ನಲ್ಲಿ ಪ್ರಯಾಣಿಸುವಾಗ ಚಳಿಯಾಗಬಾರದೆಂದರೆ ಏನು ಮಾಡಬೇಕು?

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ನಿಮಗೆ ಚಳಿ ಆಗಬಾರದೆಂದರೆ ನೀವು ನಿಮ್ಮ ಜಾಕೆಟ್ ಅಥವಾ ಸ್ವೆಟರ್ ಒಳಗೆ ನ್ಯೂಸ್‌ ಪೇಪರ್‌ ಇಟ್ಟುಕೊಳ್ಳಬೇಕು.  ಈ ವಿಧಾನವು ವಿಚಿತ್ರವೆನಿಸಬಹುದು, ಆದರೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಪತ್ರಿಕೆಯು ಒಂದು ರೀತಿಯ ನಿರೋಧನ ಪದರವಾಗಿ ಕಾರ್ಯನಿರ್ವಹಿಸುತ್ತದೆ, ಇದು ತಣ್ಣನೆಯ ಗಾಳಿಯು ದೇಹವನ್ನು ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ದೇಹದ ಶಾಖವು ಹೊರಹೋಗುವುದನ್ನು ತಡೆಯುತ್ತದೆ.  ಇದು ತಂಪಾದ ಗಾಳಿಯು ನಿಮ್ಮ ದೇಹವನ್ನು ನೇರವಾಗಿ ಸಂಪರ್ಕಿಸುವುದನ್ನು ತಡೆಯುತ್ತದೆ, ಶೀತದಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.

ವೃತ್ತಪತ್ರಿಕೆ ದೇಹ ಸೇರದಂತೆ ಗಾಳಿಯನ್ನು ನಿರ್ಬಂಧಿಸುತ್ತದೆ ಮತ್ತು ದೇಹದ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ತುಂಬಾ ಅಗ್ಗದ, ಸುರಕ್ಷಿತ ಮತ್ತು ತ್ವರಿತ ಪರಿಹಾರವಾಗಿದೆ. ಇದಕ್ಕಾಗಿ ನೀವು ಮೊದಲು ಜಾಕೆಟ್‌ ಹಾಕಿ, ನ್ಯೂಸ್‌ ಪೇಪರ್‌ ತೆಗೆದುಕೊಂಡು ಎದೆ ಮತ್ತು ಹೊಟ್ಟೆಯ ಭಾಗ ಕವರ್‌ ಆಗುವಂತೆ ಅದನ್ನು ಜಾಕೆಟ್‌ ಒಳಗೆ ಇರಿಸಿ, ಜಾಕೆಟ್ ಝಿಪ್‌ ಹಾಕಿ. ಈ ತಂತ್ರ ದೇಹ ಬೆಚ್ಚಗಾಗಿರಲು ಸಹಾಯ ಮಾಡುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ರೀತಿಯಾಗಿ ಉಪಯೋಗಿಸಿ

ಈ ಹ್ಯಾಕ್ ಅನ್ನು ಅನುಸರಿಸುವುದರ ಜೊತೆಗೆ, ಚಳಿಗಾಲದಲ್ಲಿ ಬೈಕ್ ಸವಾರಿ ಮಾಡುವಾಗ ಯಾವಾಗಲೂ ನಿಮ್ಮ ಕಿವಿ, ಕುತ್ತಿಗೆ, ಕೈಗಳು ಮತ್ತು ಪಾದಗಳನ್ನು ಮುಚ್ಚಿಕೊಳ್ಳಿ. ಕೈಗವಸುಗಳು, ಮಫ್ಲರ್, ಟೋಪಿ ಮತ್ತು ಉತ್ತಮ ಬೂಟುಗಳನ್ನು ಧರಿಸಿ, ಏಕೆಂದರೆ ದೇಹದ ಈ ಭಾಗಗಳು  ಶೀತ ಚಳಿಗೆ ಹೆಚ್ಚು ಒಳಗಾಗುತ್ತವೆ. ತೀವ್ರ ಚಳಿಯ ಸಮಯದಲ್ಲಿ ಬೆಳಿಗ್ಗೆ ಬೇಗನೆ ಪ್ರಯಾಣಿಸುವುದನ್ನು ತಪ್ಪಿಸಿ, ಏಕೆಂದರೆ ಆ ಸಮಯದಲ್ಲಿ ಚಳಿ ಹೆಚ್ಚು. ನೀವು ಪ್ರಯಾಣಿಸಬೇಕಾದರೆ, ಬೆಚ್ಚಗಿನ ನೀರನ್ನು ಕುಡಿಯಿರಿ ಅಥವಾ ಬೆಚ್ಚಗಿನ ಪಾನೀಯವನ್ನು ಕುಡಿಯಿರಿ. ಇದು ನಿಮ್ಮ ದೇಹವನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ: ಕಾರಣ ಇಲ್ಲಿದೆ – Kannada News | Gadag Village Accountant Writes to President, Seeks Euthanasia Alleging Harassment by Officers

ದಯಾಮರಣ ಕೋರಿ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ಗದಗ, ಜನವರಿ 20: ನೌಕರರ ಮೇಲೆ ಅಧಿಕಾರಿಗಳ ಕಿರುಕುಳವು ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನೌಕರರ ಮೇಲೆ ಅನಗತ್ಯ ಒತ್ತಡ, ಮಾನಸಿಕ ಹಿಂಸೆ, ಬೆದರಿಕೆ ಹಾಗೂ ಅವಮಾನಕರ ವರ್ತನೆ ತೋರುವ ಘಟನೆಗಳು ಹೆಚ್ಚುತ್ತಿವೆ. ಈ ನಡುವೆ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯೋರ್ವ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಹಟ್ಟಿ ಅಧಿಕಾರಿಗಳ ಮೇಲೆ ವಿನಾ ಕಾರಣ ಕಿರುಕುಳ ಆರೋಪ ಮಾಡಿದ್ದು, ತನ್ನ ವೇತನವನ್ನೂ ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ. ಜೀವನೋಪಾಯ ನಿರ್ವಹಣೆ ಕಷ್ಟವಾದ ಕಾರಣ ತನಗೆ ದಯಾಮರಣ ನೀಡಿ ಎಂದು ಪತ್ರ ಮುಖೇನ ಆಗ್ರಹಿಸಿದ್ದಾರೆ. ಕಂದಾಯ ಇಲಾಖೆಯ ತಾಲೂಕಾಡಳಿತ ವ್ಯವಸ್ಥೆ ಹಾಗೂ ಮೇಲಧಿಕಾರಿಗಳು ಇಲಾಖೆ ಕೆಲಸ ಸಮರ್ಪಕವಾಗಿ ನಿರ್ವಹಿಸಿದರೂ ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರೋದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ಅನಾರೋಗ್ಯ ಪೀಡಿತ ತಾಯಿ ಇದ್ದಾರೆ, ಜೊತೆಗೆ ತಾನು ಅನಾರೋಗ್ಯ ಪೀಡಿತನಾಗಿರೋದ್ರಿಂದ ಜೀವನ ಕಷ್ಟವಾಗಿದೆ ಎಂಬುದು ಯೋಗೇಶ್​​ ಅಳಲು.

ಇದನ್ನೂ ಓದಿ: ಜಾಗಿಂಗ್ ಹೋಗುತ್ತಿದ್ದ ಮಹಿಳೆಯ ಖಾಸಗಿ ಭಾಗದ ಬಗ್ಗೆ ಅಸಭ್ಯವಾಗಿ ಮಾತನಾಡಿದ ಬಾಲಕರು

ರಾಷ್ಟ್ರಪತಿಗೆ ಬರೆದ ಪತ್ರದಲ್ಲೇನಿದೆ?

ಪೂರ್ಣ ಶ್ರಮದಿಂದ ಕೆಲಸ ಮಾಡಿದರೂ ಸರಿಯಾಗಿ ಸಂಬಳ ದೊರಕುತ್ತಿಲ್ಲ. ತನಗೆ ವೃದ್ಧ ತಾಯಿ ಇದ್ದು, ಅವರನ್ನು ಪೋಷಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಸರ್ಕಾರದ ಕೆಲಸದಲ್ಲಿದ್ದರೂ, ನನಗೆ ಸರಿಯಾಗಿ ಸಂಬಳ ದೊರಕದೆ ಬಹಳ ಕಷ್ಟ ಅನುಭವಿಸುತ್ತಿದ್ದೇನೆ. ಈ ಪರಿಸ್ಥಿತಿಯಿಂದ ಜೀವನ ಸಾಗಿಸುವುದು ಅತೀವ ಕಠಿಣವಾಗಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸಂಕಟ ಅನುಭವಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ನನಗೆ ದಯಾಮರಣ ನೀಡುವ ಮೂಲಕ ಈ ದುಃಸ್ಥಿತಿಯಿಂದ ಮುಕ್ತಿಗೊಳಿಸಬೇಕೆಂದು ಪ್ರಾರ್ಥಿಸೋದಾಗಿ ಯೋಗೇಶ್ ಪ್ರತದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೂಜಾ ಹೆಗ್ಡೆ ಕ್ಯಾರಾವ್ಯಾನ್​ಗೆ ನುಗ್ಗಿದ್ದರೇ ಪ್ರಭಾಸ್? ಸತ್ಯಾಂಶವೇನು? – Kannada News | Did Pooja Hegde says that a star entered her caravan forcefully

ಸಿನಿಮಾ ರಂಗದಲ್ಲಿ (Cinema) ಮಹಿಳೆಯರ ಮೇಲೆ ದೌರ್ಜನ್ಯ ದಶಕಗಳಿಂದಲೂ ನಡೆದುಕೊಂಡು ಬರುತ್ತಲೇ ಇದೆ. ನಟಿಯರು, ಚಿತ್ರರಂಗದಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಆದರೆ ಮೀ ಟೂ ಚಳವಳಿ ಬಂದ ಬಳಿಕ ಹಲವು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದರು. ಆದರೆ ಕೆಲವರು ಇದೇ ಚಳವಳಿಯನ್ನು ಋಣಾತ್ಮಕವಾಗಿಯೂ ಬಳಸಿಕೊಂಡು, ಸುಳ್ಳು ಆರೋಪ, ತೇಜೋ ವಧೆಗಳನ್ನು ಸಹ ಮಾಡಿದರು. ಇನ್ನು ಕೆಲವರು ಮತ್ತೊಬ್ಬರ ಮೇಲೆ ತಪ್ಪು ಅಭಿಪ್ರಾಯ ಭಿತ್ತಲು ನಟಿಯರನ್ನು ಬಳಸಿಕೊಂಡರು. ಇತ್ತೀಚೆಗೆ ಪೂಜಾ ಹೆಗ್ಡೆ ಹೇಳಿದ್ದಾರೆ ಎನ್ನಲಾದ ಇದೇ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ.

ಕಳೆದ ಕೆಲ ದಿನಗಳಿಂದ ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮಾಡುವಾಗ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ನಟರೊಬ್ಬರು ನನಗಾಗಿ ಮೀಸಲಿದ್ದ ಕ್ಯಾರಾವ್ಯಾನ್ ಒಳಕ್ಕೆ ಬಲವಂತವಾಗಿ ನುಗ್ಗಿದರು, ಆಗ ನಾನು ಅವರ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಸುದ್ದಿ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದೆ. ಹಲವರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.

ಪೂಜಾ ಹೆಗ್ಡೆ ಹೇಳಿರುವಂತೆ ಅವರ ಕ್ಯಾರಾವ್ಯಾನ್​​ಗೆ ನುಗ್ಗಿರುವವರು ಯಾರು ಎಂಬ ಚರ್ಚೆಯನ್ನೂ ಮಾಡಿದ್ದು, ಹಲವರು ಅದು ಪ್ರಭಾಸ್ ಆಗಿರಬೇಕು ಎಂದಿದ್ದಾರೆ. ಏಕೆಂದರೆ ‘ರಾಧಾ-ಶ್ಯಾಮ್’ ಸಿನಿಮಾದ ಬಳಿಕ ಏಕಾ-ಏಕಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಿಂದ ಕಾಣೆ ಆದರು. ಆ ರೀತಿ ಕಾಣೆ ಆಗಿದ್ದಕ್ಕೆ ಪ್ರಭಾಸ್​​ ಅವರೇ ಕಾರಣ ಇರಬಹುದು ಎಂಬೆಲ್ಲ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಇದನ್ನೂ ಓದಿ:ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ

ಆದರೆ ಇದು ಸುಳ್ಳಿ ಸುದ್ದಿಯಂತೆ. ಪೂಜಾ ಹೆಗ್ಡೆ ಹೀಗೊಂದು ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ. ಯಾವ ಮಾಧ್ಯಮಗಳ ಬಳಿಯೂ ಮೇಲಿನಂತೆ ಪೂಜಾ ಹೆಗ್ಡೆ ಹೇಳಿಕೊಂಡಿಲ್ಲ. ಆದರೆ ಯಾರೋ ಕೆಲವು ಕಿಡಿಗೇಡಿಗಳು ಬೇಕೆಂದೇ ಪೂಜಾ ಹೆಗ್ಡೆ ಅವರ ಫೋಟೊ ಬಳಸಿ ಹೀಗೊಂದು ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಕಲಿ ಸುದ್ದಿಯನ್ನು ನಂಬಿಕ ಕೆಲವರು ಪ್ರಭಾಸ್ ಅವರ ಬಗ್ಗೆ ಋಣಾತ್ಮಕ ಪೋಸ್ಟ್​​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಪ್ರಭಾಸ್ ಜೊತೆಗೆ ‘ರಾಧೆ-ಶ್ಯಾಮ್’ ಸಿನಿಮಾನಲ್ಲಿ ನಟಸಿದ್ದು, ಪ್ರಭಾಸ್ ಬಗ್ಗೆ ಗೌರವ ಹೊಂದಿದ್ದಾರೆ. ಪ್ರಭಾಸ್ ಬಗ್ಗೆ ಕೆಲ ಸಂದರ್ಶನಗಳಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಪೂಜಾ ಹೆಗ್ಡೆ ಇದೀಗ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳಿದ್ದು ಎರಡು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳಿನ ‘ಕಾಂಚನಾ 4’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಕೈಯಲ್ಲಿ ಒಂದೆರಡು ಹಿಂದಿ ಸಿನಿಮಾಗಳು ಸಹ ಪೂಜಾ ಹೆಗ್ಡೆಗೆ ಇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಯತೀರ್ಥ ಮೆಚ್ಚಿದ ‘ವಿಕಲ್ಪ’ ಸಿನಿಮಾ ಟ್ರೇಲರ್; ಜನವರಿ 30ಕ್ಕೆ ಚಿತ್ರ ರಿಲೀಸ್ – Kannada News | Jayatheertha released Vikalpa Kannada movie Trailer ft Pruthviraj Patil and Nagashree Hebbar

ಖ್ಯಾತ ನಿರ್ದೇಶಕ ಜಯತೀರ್ಥ ಅವರು ‘ವಿಕಲ್ಪ’ ಸಿನಿಮಾದ ಟ್ರೇಲರ್ (Vikalpa Trailer) ಬಿಡುಗಡೆ ಮಾಡಿದ್ದಾರೆ. ಪೃಥ್ವಿರಾಜ್‌ ಪಾಟೀಲ್‌ (Pruthviraj Patil) ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಗಶ್ರೀ ಹೆಬ್ಬಾರ್‌ (Nagashree Hebbar), ಸಂಧ್ಯಾ ವಿನಾಯಕ್‌, ಹರಿಣಿ ಶ್ರೀಕಾಂತ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಜಯಂತ್‌ ಡೇವಿಡ್‌, ಪೂಜಾ ಬಚ್ಚ್‌, ಡಾ. ಪ್ರಕೃತಿ, ಗಿರೀಶ್‌ ಹೆಗಡೆ, ಮಾಸ್ಟರ್‌ ಆಯುಷ್ ಸಂತೋಷ್‌ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜನವರಿ 30ರಂದು ‘ವಿಕಲ್ಪ’ ಸಿನಿಮಾ ಬಿಡುಗಡೆ ಆಗಲಿದೆ.

‘ವಿಕಲ್ಪ’ ಸಿನಿಮಾದ ಟ್ರೇಲರ್ ಗಮನ ಸೆಳೆಯುವಂತಿದೆ. ಸಿನಿಮಾದ ಥೀಮ್ ಏನು ಎಂಬುದು ಟ್ರೇಲರ್​​ನಲ್ಲಿ ಕಾಣಿಸಿದೆ. ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ (PTSD) ಎಂಬ ಮಾನಸಿಕ ಸಮಸ್ಯೆಯ ಎಳೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಇದು ಸೈಕಾಲಜಿಕಲ್‌, ಥ್ರಿಲ್ಲರ್‌ ಕಥಾಹಂದರ ಇರುವ ಸಿನಿಮಾ. ‘ಸುರೂಸ್‌ ಟಾಕೀಸ್‌’ ಬ್ಯಾನರ್ ಮೂಲಕ ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಜಯತೀರ್ಥ ಅವರು ಮಾತನಾಡಿದರು. ‘ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಖುಷಿಯ ವಿಷಯ. ಹೊಸಬರ ಮೂಲಕ ಹೊಸ ಕಲ್ಪನೆ, ಆಲೋಚನೆಗಳು ಸಿನಿಮಾವಾಗಿ ತೆರೆಮೇಲೆ ಅನಾವರಣ ಆಗುತ್ತದೆ. ಹೊಸಬರು ಯಾವಾಗಲೂ ಚಿತ್ರರಂಗಕ್ಕೆ ಜೀವಂತಿಕೆಯನ್ನು ತರುತ್ತಾರೆ. ಈ ಸಿನಿಮಾದ ಕಲಾವಿದರು, ತಂತ್ರಜ್ಞರು ಯಾರೂ ನನಗೆ ಮೊದಲಿನಿಂದ ಪರಿಚಿತರಲ್ಲ. ಆದರೆ ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾ ಮಾಡುವ ಅವರ ಪ್ರಾಮಾಣಿಕ ಪ್ರಯತ್ನ ನನಗೆ ಇಷ್ಟ ಆಗಿದ್ದರಿಂದ ಟ್ರೇಲರ್‌ ಬಿಡುಗಡೆ ಮಾಡಲು ಒಪ್ಪಿಕೊಂಡೆ. ಕಥಾಹಂದರ, ಮೇಕಿಂಗ್‌, ಟೀಸರ್‌, ಹಾಡುಗಳು ಎಲ್ಲವೂ ಭರವಸೆ ಮೂಡಿಸಿವೆ’ ಎಂದು ಜಯತೀರ್ಥ ಅವರು ಹೇಳಿದರು.

ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಮಾತನಾಡಿ, ‘ಒಬ್ಬ ವ್ಯಕ್ತಿಯ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಈ ಸಿನಿಮಾದಲ್ಲಿದೆ. ವೈಜ್ಞಾನಿಕ ಅಂಶಗಳನ್ನು ಆಧರಿಸಿ ತಜ್ಞರ ಸಲಹೆಯ ಮೇರೆಗೆ ಈ ಸಿನಿಮಾದ ಪಾತ್ರಗಳನ್ನು ಹೆಣೆದು ಸನ್ನಿವೇಶಗಳನ್ನು ಚಿತ್ರಿಸಿದ್ದೇವೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದರು.

‘ವಿಕಲ್ಪ’ ಸಿನಿಮಾದ ಟ್ರೇಲರ್:

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಾಗಶ್ರೀ ಹೆಬ್ಬಾರ್‌ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಇದು ಅವರ ಮೊದಲ ಸಿನಿಮಾ. ಇದರಲ್ಲಿ ಸಮುದ್ಯತಾ ಎಂಬ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಈ ಸಿನಿಮಾ ಮೇಲೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಹರಿಣಿ ಶ್ರೀಕಾಂತ್‌ ಅವರು ಮನಶಾಸ್ತ್ರಜ್ಞೆಯ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ

‘ಖಂಡಿತವಾಗಿಯೂ ಇಂಥ ಸಿನಿಮಾಗಳು ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇಂಥ ಹೊಸಬರ ಪ್ರಯತ್ನಗಳಿಗೆ ಎಲ್ಲರ ಬೆಂಬಲ, ಸಹಕಾರವಿರಲಿ’ ಎಂದು ಹರಿಣಿ ಶ್ರೀಕಾಂತ್‌ ಅವರು ಹೇಳಿದ್ದಾರೆ. ಬೆಂಗಳೂರು, ಕುಂದಾಪುರ, ತೀರ್ಥಹಳ್ಳಿ, ಸಾಗರ, ಶಿರಸಿ, ಯಲ್ಲಾಪುರ ಹಾಗೂ ವಿದೇಶದಲ್ಲೂ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ – Kannada News | Tumakuru: shivakumara swamiji’s 7th death anniversary: CP Radhakrishnan visiting tomorrow on siddaganga

ಸಿದ್ದಗಂಗಾ ಮಠ, ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್

ತುಮಕೂರು, ಜನವರಿ 20: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ನಾಳೆಗೆ (ಜನವರಿ 21) ಏಳು ವರ್ಷ. ಈ ಹಿನ್ನೆಲೆ ನಾಳೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​​​​ (CP Radhakrishnan) ಅವರು ಭಾಗಿಯಾಗುತ್ತಿದ್ದಾರೆ. ಆ ಮೂಲಕ ಕರ್ನಾಟಕಕ್ಕೆ ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಿದ್ಧಗಂಗಾ ಮಠದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.

ಉಪರಾಷ್ಟ್ರಪತಿ ಅವರ ವೇಳಾಪಟ್ಟಿ ಹೀಗಿದೆ

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​​​​ ಅವರು ತುಮಕೂರು ವಿವಿ ಹೆಲಿಪ್ಯಾಡ್​ನಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಾರೆ. ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹೆಲಿಪ್ಯಾಡ್​ನಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದಾರೆ.

ಪೊಲೀಸ್ ಭದ್ರತೆ ಬಗ್ಗೆ ಎಸ್​​ಪಿ ಅಶೋಕ್ ಕೆವಿ ಹೇಳಿದ್ದಿಷ್ಟು 

ಪೊಲೀಸ್ ಭದ್ರತೆ ಬಗ್ಗೆ ತುಮಕೂರು ಎಸ್​​ಪಿ ಅಶೋಕ್ ಕೆವಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 10 ರಿಂದ 12 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

1 ಸಾವಿರ ಪೊಲೀಸರ ನಿಯೋಜನೆ

ಇನ್ನು ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ‌ ಮಾಡಿಕೊಳ್ಳಲಾಗಿದೆ. ಮಠದಲ್ಲಿ ಒಂದೇ ಕಾರ್ಯಕ್ರಮ ಇರುವುದು. 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 3 ಕೆಎಸ್​​ಆರ್​ಪಿ ತುಕಡಿ, ಡಿಆರ್ ಸಿಬ್ಬಂದಿ, ಗುಪ್ತಚರ ಇಲಾಖೆಯ ಸಿಬ್ಬಂದಿ ಸೇರಿದಂತೆ 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಪ ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಸಿಪಿ ರಾಧಾಕೃಷ್ಣನ್: ಇಲ್ಲಿದೆ ಕಾರಣ?

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​ ಅವರೊಂದಿಗೆ ರಾಜ್ಯಪಾಲರು, ಕೇಂದ್ರ ಸಚಿವ ವಿ. ಸೋಮಣ್ಣ, ಡಾ. ಜಿ. ಪರಮೇಶ್ವರ್, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತುಮಕೂರು ಎಸ್​​ಪಿ ಅಶೋಕ್ ಕೆವಿ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Source link

ಗಾಜಾ ಶಾಂತಿ ಮಂಡಳಿ ಸೇರಲು ನಿರಾಕರಿಸಿದ್ದಕ್ಕೆ ಫ್ರಾನ್ಸ್​​ಗೆ ಶೇ.200ರಷ್ಟು ಸುಂಕದ ಎಚ್ಚರಿಕೆ ಕೊಟ್ಟ ಟ್ರಂಪ್ – Kannada News | Trump Threatens 200Percent Tariff on French Wine Amid Gaza Peace Rift

ವಾಷಿಂಗ್ಟನ್, ಜನವರಿ 20: ಅಮೆರಿಕ ಮತ್ತು ಫ್ರಾನ್ಸ್​ ನಡುವಿನ ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಫ್ರಾನ್ಸ್​ಗೆ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200ರಷ್ಟು ಸುಂಕ ವಿಧಿಸುವ ಕುರಿತು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಗಾಜಾ ಶಾಂತಿ ಮಂಡಳಿಗೆ ಸೇರಲು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ನಿರಾಕರಿಸಿದ್ದಕ್ಕೆ, ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಗಾಜಾದಲ್ಲಿ ಪುನರ್ನಿರ್ಮಾಣ ಮತ್ತು ಶಾಂತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಶಾಂತಿ ಮಂಡಳಿಯ ಉದ್ದೇಶವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ನಾನು ಅವರ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ಸುಂಕ ವಿಧಿಸುತ್ತೇನೆ. ಅವರಾಗಿಯೇ ಮಂಡಳಿಗೆ ಸೇರುತ್ತಾರೆ ಅವರನ್ನು ನಾನು ಬಲವಂತಪಡಿಸುವುದಿಲ್ಲ ಎಂದು ಹೇಳಿದರು. ಗಾಜಾದಲ್ಲಿ ಮಂಡಳಿಗೆ ಸೇರಲು ಅಮೆರಿಕದ ಆಹ್ವಾನವನ್ನು ಫ್ರಾನ್ಸ್ ತಿರಸ್ಕರಿಸಿದರೆ, ಸುಂಕದ ರೂಪದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಈ ಹೇಳಿಕೆಯು ಅಮೆರಿಕ ಮತ್ತು ಫ್ರಾನ್ಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು, ಏಕೆಂದರೆ ಎರಡೂ ದೇಶಗಳು ಈಗಾಗಲೇ ಗ್ರೀನ್‌ಲ್ಯಾಂಡ್ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು?

ಅದರಲ್ಲಿ ನನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಲ್ಲ, ಹಾಗಾಗಿ ಶಾಂತಿ ಜವಾಬ್ದಾರಿ ನನ್ನದಲ್ಲ, ಗ್ರೀನ್ ಲ್ಯಾಂಡ್​ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನುವ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಫ್ರಾನ್ಸ್, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪ್ಯಾರಿಸ್ ಒತ್ತಿ ಹೇಳಿದೆ.

ಗಾಜಾ ಪುನರ್ನಿರ್ಮಾಣಕ್ಕಾಗಿ ಶಾಂತಿ ಮಂಡಳಿಯನ್ನು ಘೋಷಿಸಿದರು ಮತ್ತು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳನ್ನು ಸೇರಲು ಆಹ್ವಾನಿಸಿದರು. ಈ ಆಹ್ವಾನವನ್ನು ಜಾಗತಿಕವಾಗಿ ಹೆಚ್ಚು ಉತ್ಸಾಹದಿಂದ ಸ್ವೀಕರಿಸಲಾಗಿಲ್ಲ. ಹೆಚ್ಚಿನ ದೇಶಗಳು ಮೌನವಾಗಿವೆ, ಆದರೆ ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಕೆಲವು ಭಾಗವಹಿಸಲು ನಿರಾಕರಿಸಿವೆ.

ಈ ಶಾಂತಿ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ದೇಶಗಳು 1 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು ಒಂಬತ್ತು ಸಾವಿರ ಕೋಟಿ ರೂ. ಪಾವತಿಸಬೇಕಾಗುತ್ತದೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೂವರು ಅಲಭ್ಯ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ – Kannada News | India Playing XI For 1st T20I against New Zealand

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಬುಧವಾರದಿಂದ ಶುರುವಾಗಲಿದೆ. ನಾಗ್​ಪುರದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೂರು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ಭಾರತದ ಪರ ಕೊನೆಯ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೂವರು ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಕೊನೆಯ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದ ಜಿತೇಶ್ ಶರ್ಮಾ ತಂಡದಿಂದ ಹೊರಬಿದ್ದಿದ್ದಾರೆ.  ಹೀಗಾಗಿ ನ್ಯೂಝಿಲೆಂಡ್ ವಿರುದ್ಧ ಭಾರತ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.

ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬದಲು ಈ ಬಾರಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.

ಇನ್ನು ಆಲ್​ರೌಂಡರ್​​ಗಳಾಗಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿ ಬೌಲರ್​ಗಳಾಗಿ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  • ಸೂರ್ಯಕುಮಾರ್ ಯಾದವ್
  • ಶ್ರೇಯಸ್ ಅಯ್ಯರ್
  • ಹಾರ್ದಿಕ್ ಪಾಂಡ್ಯ
  • ಅಕ್ಷರ್ ಪಟೇಲ್
  • ಶಿವಂ ದುಬೆ
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ಹರ್ಷಿತ್ ರಾಣಾ
  • ವರುಣ್ ಚಕ್ರವರ್ತಿ.

ಇದನ್ನೂ ಓದಿ: ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ – Kannada News | Traffic Rules: No Parking Penalties, Your Rights and Illegal Police Actions. Stay Informed!

ನಮ್ಮ ದೇಶದ ಕಾನೂನುಗಳ ಬಗ್ಗೆ ಎಲ್ಲರಿಗೂ ವಿಸ್ತೃತವಾಗಿ ಗೊತ್ತಿರಲ್ಲ, ಆದರೆ ಅದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಅದರಲ್ಲೂ ಈ ಟ್ರಾಫಿಕ್​​ ರೂಲ್ಸ್​​​​ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕು. ಕೆಲವು ಪೊಲೀಸರಿಗೂ ಈ ಟ್ರಾಫಿಕ್​ ರೂಲ್ಸ್​​​ (No-Parking) ಹಾಗೂ ವಾಹನ ಸಂಚಾರದ ಕಾನೂನಿನ ಬಗ್ಗೆ ತಿಳಿದಿಲ್ಲ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ತಿಳಿದುಕೊಂಡು ಸಂಚಾರ ನಿಯಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳೇನು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಈ ನೋ-ಪಾರ್ಕಿಂಗ್ ಬಗ್ಗೆಯೂ ಒಂದು ಕಾನೂನಿನ ನಿಯಮ ಇದೆ. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ಕಾನೂನಿನಲ್ಲಿ ಯಾವೆಲ್ಲ ನೀತಿ-ನಿಯಮಗಳು ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ಪ್ರತಿಯೊಬ್ಬ ವಾಹನ ಸವಾರರು ಗಮನಿಸಲೇಬೇಕು. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಪೊಲೀಸರು ತೆಗೆದುಕೊಳ್ಳಬಾರದು.

ಒಂದು ವೇಳೆ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಅಧಿಕೃತ ದಂಡದ ರಸೀದಿ (Challan) ನೀಡಬಹುದು. ಸ್ಥಳದಲ್ಲೇ ದಂಡ ಪಾವತಿಸಬಹುದು ಅಥವಾ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶವಿರುತ್ತದೆ. ವಾಹನದ ಚಕ್ರಕ್ಕೆ ಲಾಕ್ (Wheel Clamp) ಹಾಕಬಹುದು. ಆಗಲೂ ನೀವು ದಂಡ ಪಾವತಿಸಿ ಲಾಕ್​​​​ ತೆಗೆಯಬಹುದು. ಪೊಲೀಸರು ಕ್ರೇನ್ ಬಳಸಿ ವಾಹನವನ್ನು ಟೋ ಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ಯಬಹುದು. ಆಗಾ ನೀವು ಪಾರ್ಕಿಂಗ್ ದಂಡದ ಜೊತೆಗೆ ‘ಟೋಯಿಂಗ್ ಶುಲ್ಕ’ವನ್ನೂ (Towing Charges) ಪಾವತಿಸಬೇಕಾಗುತ್ತದೆ. ವಾಹನದ ವಿಂಡ್‌ಶೀಲ್ಡ್ ಮೇಲೆ ನೋಟಿಸ್ ಅಂಟಿಸಬಹುದು. ಇದನ್ನು ಬಿಟ್ಟು ನಿಮ್ಮ ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವ ಅಧಿಕಾರವಿಲ್ಲ. ಇದು ಕಾನೂನುಬಾಹಿವಾಗಿರುತ್ತದೆ. ಟೈರ್ ಗಾಳಿ ತೆಗೆಯುವುದು ಇದು ಖಾಸಗಿ ಆಸ್ತಿಗೆ ಹಾನಿ ಉಂಟುಮಾಡುವ ಕ್ರಿಯೆಯಾಗಿದ್ದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 425ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಬಹುದು.

ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವುದು ಇದು ನಿಮ್ಮ ವಾಹನಕ್ಕೆ ಮಾಡುವ ಹಾನಿ, ಒಂದು ವೇಳೆ ಗಾಳಿ ತೆಗೆದರೆ ಅದು ಅಪರಾಧ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಕೋರ್ಟ್​​ಗೂ ಹೋಗಬಹುದು. ಇದರ ಜತೆಗೆ ಚಾಲಕನ ಮೇಲೆ ಕೈ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಶಿಕ್ಷಾರ್ಹ ಅಪರಾಧ. ಬಲವಂತವಾಗಿ ವಾಹನದ ಕೀಲಿಯನ್ನು ಕಸಿದುಕೊಳ್ಳುವ ಅಧಿಕಾರ ಕೂಡ ಪೊಲೀಸರಿಗೆ ಇಲ್ಲ. ಇನ್ನು ಮೋಟಾರು ವಾಹನ ಕಾಯ್ದೆ, 1988 (Motor Vehicles Act) ಮತ್ತು ಕರ್ನಾಟಕ ಸಂಚಾರಿ ನಿಯಂತ್ರಣ ಕಾಯ್ದೆಯಡಿ ಪೊಲೀಸರುನಿಯಮ ಉಲ್ಲಂಘನೆಗಾಗಿ ದಂಡದ ರಸೀದಿ ನೀಡುವುದು. ಹಾಗೂ ವಾಹನವನ್ನು ಜಪ್ತಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Viral: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?

ಪೊಲೀಸರು ವಾಹನ ಗಾಳಿ ತೆಗೆದರೆ ನೀವು ಹೀಗೆ ಮಾಡಬಹುದು?

ಸಾಕ್ಷ್ಯ ಸಂಗ್ರಹಿಸಿ: ಘಟನೆಯ ವೀಡಿಯೊ ಅಥವಾ ಫೋಟೋ ತೆಗೆಯಿರಿ. ಆ ಅಧಿಕಾರಿಯ ಹೆಸರು ಗಮನಿಸಿ.

ದೂರು ನೀಡಿ: ಹತ್ತಿರದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಥವಾ ಎಸಿಪಿ (ACP) ಅವರಿಗೆ ಅಧಿಕೃತ ದೂರು ನೀಡಿ.

ಸೋಷಿಯಲ್ ಮೀಡಿಯಾ: ಬೆಂಗಳೂರು ಸಂಚಾರಿ ಪೊಲೀಸರ ಅಧಿಕೃತ ಎಕ್ಸ್ (X) ಖಾತೆಗೆ (@blrechelon ಅಥವಾ @jointcptraffic) ಟ್ಯಾಗ್ ಮಾಡಿ ದೂರನ್ನು ಹಂಚಿಕೊಳ್ಳಿ.

112 ಗೆ ಕರೆ ಮಾಡಿ: ಸ್ಥಳದಲ್ಲೇ ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವೋಟ್​​​ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್’; ಅಶ್ವಿನಿ ಗೌಡ ನೇರ ಮಾತು – Kannada News | Ashwini Gowda Alleges Bigg Boss 12 Vote Manipulation, Calls Gilli’s Win Undeserved

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟ ಅವರು ವಿನ್ನರ್ ಆಗಿದ್ದಾರೆ. ಗಿಲ್ಲಿನೇ ವಿನ್ನರ್ ಎಂಬುದು ಸೀಸನ್ ಆರಂಭದಲ್ಲೇ ಕೆಲವರಿಗೆ ಅನಿಸಿತ್ತು. ಅವರಿಗೆ ಸೃಷ್ಟಿಯಾದ ಅಭಿಮಾನಿ ವರ್ಗವೇ ಇದಕ್ಕೆ ಕಾರಣ. ಆದರೆ, ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಪ್ರಶ್ನೆ ಮಾಡುತ್ತಿದ್ದಾರೆ. ನಿಜವಾದ ವೋಟ್ ಸಂಖ್ಯೆ ಆಚೆ ಬಂದರೆ ವಿನ್ನರ್ ಬದಲಾಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಗಿಲ್ಲಿ ನಟನಿಗೆ ವಿನ್ನರ್ ಪಟ್ಟ ಸಿಕ್ಕಿದ್ದನ್ನು ಅಶ್ವಿನಿ ಒಪ್ಪಿಕೊಳ್ಳಲು ರೆಡಿ ಇಲ್ಲ. ಗಿಲ್ಲಿ ಬಡವ ಎಂಬ ಕಾರ್ಡ್​ ಪ್ಲೇ ಮಾಡಿ ವಿನ್ ಆದ ಎಂಬುದು ಅಶ್ವಿನಿ ಆರೋಪ. ‘ಬಡವರ ಮಕ್ಕಳಗೆಲ್ಲಬೇಕು ನಿಜ. ಆದರೆ, ಗಿಲ್ಲಿ ಬಡವನಾ? ಅರ್ಹ ವ್ಯಕ್ತಿಗೆ ವಿನ್ನರ್ ಪಟ್ಟ ಸಿಕ್ಕಿದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಈಗ ಅಶ್ವಿನಿ ಗೌಡ ಬೇರೆ ರೀತಿಯ ಆರೋಪ ಮಾಡಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅಶ್ವಿನಿ, ‘ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ನನಗೆ ಬಂದ ಮಾಹಿತಿ. ಆ ಸಂಖ್ಯೆ ಹೊರಹಾಕಿದೆ ನಾನೇ ವಿನ್ನರ್’ ಎಂದು ಅಶ್ವಿನಿ ಹೇಳಿದ್ದಾರೆ.

‘ಬಿಗ್ ಬಾಸ್’ ಕಾಮಿಡಿ ಶೋ ಅಲ್ಲ ಎಂಬುದು ಅಶ್ವಿನಿ ಅಭಿಪ್ರಾಯ. ‘ಸುದೀಪ್ ಅವರು ಈ ಬಾರಿಯಾದರೂ ಮಹಿಳೆಯರ ಕೈ ಎತ್ತುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿ: ‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ

ಗಿಲ್ಲಿ ನಟ ಅವರು ಅಶ್ವಿನಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾತಿನ ಭರದಲ್ಲಿ ಅವರು ಹಾಗೆ ಹೇಳಿರಬಹುದು’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ಅವರಿಗೆ ಅವಾರ್ಡ್ ಜೊತೆ ಸಾಕಷ್ಟು ಹಣ ಸಿಕ್ಕಿದೆ. ಅವರು ತಮ್ಮ ಹುಟ್ಟೂರಲ್ಲಿ ರ್ಯಾಲಿ ನಡೆಸಿದ್ದು ಸಾಕಷ್ಟು ಜನರು ಇದಕ್ಕೆ ಸೇರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version