ಭಾರತಕ್ಕೆ ಆಗಮಿಸಿದ ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ – Kannada News | PM Modi Receives UAE President Mohamed Bin Zayed Al Nahyan At Delhi Airport with Tight Hug

ನವದೆಹಲಿ, ಜನವರಿ 19: ಇಂದು ಭಾರತಕ್ಕೆ ಭೇಟಿ ನೀಡಿದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಪ್ಪುಗೆಯ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಭಾರತೀಯ ಸಾಂಪ್ರದಾಯಿಕ ನೃತ್ಯ, ಡೋಲು ವಾದ್ಯಗಳ ಮೂಲಕ ಯುಎಇ ಅಧ್ಯಕ್ಷರನ್ನು ಸ್ವಾಗತಿಸಲಾಯಿತು.

ಯುಎಇ ಅಧ್ಯಕ್ಷರು ಕೇವಲ 2 ಗಂಟೆಗಳ ಕಾಲ ದೆಹಲಿಯಲ್ಲಿ ಇರಲಿದ್ದು, ನಂತರ ವಾಪಾಸ್ ತೆರಳಲಿದ್ದಾರೆ ಎನ್ನಲಾಗಿದೆ. ಇರಾನ್-ಯುಎಸ್ ಸಂಬಂಧಗಳು ಹದಗೆಟ್ಟಿರುವುದು, ಗಾಜಾದಲ್ಲಿ ನಡೆಯುತ್ತಿರುವ ಅಸ್ಥಿರತೆ, ಸೌದಿ ಅರೇಬಿಯಾ ಮತ್ತು ಯುಎಇ ಒಳಗೊಂಡ ಯೆಮೆನ್‌ನಲ್ಲಿ ಬಗೆಹರಿಯದ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಇಂದು ಸಂಜೆ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರು ದೆಹಲಿಯ ಪ್ರಧಾನಿ ನಿವಾಸದಲ್ಲಿ ವಿಶೇಷವಾದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯ ಸಮಯದಲ್ಲಿ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಮತ್ತು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ

ನನ್ನ ಸಹೋದರರಾದ ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭೇಟಿ ಅವರು ಭಾರತ-ಯುಎಇ ಸ್ನೇಹಕ್ಕೆ ನೀಡುವ ಮಹತ್ವವನ್ನು ತೋರಿಸುತ್ತದೆ. ನಮ್ಮ ಚರ್ಚೆಗಳಿಗಾಗಿ ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಯುಎಇ ಅಧ್ಯಕ್ಷರಾದ ನಂತರ ಅಲ್ ನಹ್ಯಾನ್ ಅವರು ಭಾರತಕ್ಕೆ ನೀಡುತ್ತಿರುವ ಮೂರನೇ ಅಧಿಕೃತ ಭೇಟಿ ಇದಾಗಿದೆ. ಒಟ್ಟಾರೆಯಾಗಿ, ಭಾರತಕ್ಕೆ ಇದು ಅವರ 5ನೇ ಭೇಟಿ. ಇರಾನ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಗಳು 5,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ನಂತರ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಅಲ್ ನಹ್ಯಾನ್ ಭಾರತಕ್ಕೆ ಇಂದು ಭೇಟಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ – Kannada News | Instead of throwing away the rice water, use it this way

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಅನ್ನ ಮಾಡಲಾಗುತ್ತದೆ. ಹೀಗೆ ಅನ್ನ ಮಾಡುವ ಸಂದರ್ಭದಲ್ಲಿ ಅಕ್ಕಿ ತೊಳೆದ ನೀರನ್ನು (Rice Water) ಅನುಪಯುಕ್ತ ಎಂದು ಚೆಲ್ಲುವವರೇ ಹೆಚ್ಚು. ಆದರೆ ನೀರಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳಿದ್ದು, ಇದು ಚರ್ಮದಿಂದ ಹಿಡಿದು ಕೂದಲಿನವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಇದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಗಿದ್ದರೆ ಅಕ್ಕಿ ತೊಳೆದ ನೀರಿನ ಉಪಯೋಗಗಳೇನು, ಅದನ್ನುಬಳಸುವುದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಅಕ್ಕಿ ತೊಳೆದ ನೀರಿನ ಉಪಯೋಗಗಳೇನು?

ಸಸ್ಯಗಳಿಗೆ ಹಾಕಬಹುದು:  ಅನೇಕ ಜನರು ಅಕ್ಕಿ ತೊಳೆದ ನೀರನ್ನು ಎಸೆದುಬಿಡುತ್ತಾರೆ. ಇದರ ಬದಲು ಇದನ್ನು ಗಿಡಗಳ ಬುಡಗಳಿಗೆ ಹಾಕಬಹುದು. ಇದು ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ಸಸ್ಯಗಳ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿವೆ.

ಮನೆ ಶುಚಿಗೊಳಿಸುವಿಕೆಗಾಗಿ: ಅಕ್ಕಿ ನೀರನ್ನು ತಣ್ಣಗಾಗಿಸಿ ಅದನ್ನು ಬಾಟಲಿಗೆ ಹಾಕಿ ಕನ್ನಡಿ ಮತ್ತು ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಮೊದಲು, ಈ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ ನಂತರ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಗಾಜಿನ ವಸ್ತುಗಳು ಚೆನ್ನಾಗಿ ಹೊಳೆಯುತ್ತವೆ.

ಪಾತ್ರೆಗಳನ್ನು ಸ್ವಚ್ಛಗೊಳಿಸಲು: ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಸಂಗ್ರಹಿಸಿದಂತಹ ಡಬ್ಬಗಳು ಸ್ವಚ್ಛಗೊಳಿಸಿದ ನಂತರವೂ ಅದರಲ್ಲಿ ವಾಸನೆ ಹಾಗೆಯೇ ಉಳಿದು ಬಿಡುತ್ತದೆ. ಈ ವಾಸನೆಯನ್ನು ತೊಡೆದುಹಾಕಲು ಅಕ್ಕಿ ನೀರನ್ನು ಬಳಸಬಹುದು. ಅದಕ್ಕಾಗಿ ವಾಸನೆಯಿರುವ ಪಾತ್ರೆಯೊಳಗೆ ಅಕ್ಕಿ ತೊಳೆದ ನೀರನ್ನು ಹಾಕಿ ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ. ವಾಸನೆ ಸಂಪೂರ್ಣವಾಗಿ ಹೋಗುತ್ತದೆ. ಜೊತೆಗೆ ಪಾತ್ರೆಗಳ ಜಿಡ್ಡಿನಾಂಶವನ್ನು ಸಹ ಹೋಗಲಾಡಿಸಲುತ್ತದೆ.

ಇದನ್ನೂ ಓದಿ: ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಬಟ್ಟೆ ಸ್ವಚ್ಛಗೊಳಿಸಲು: ಅಕ್ಕಿ ತೊಳೆದ ನೀರಿನಲ್ಲಿ ನೈಸರ್ಗಿಕ ಪಿಷ್ಟವಿರುತ್ತದೆ. ಇದನ್ನು ಕಾಟನ್‌ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

ಚರ್ಮಕ್ಕೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ, ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಕೂದಲಿಗೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನ್ನು ಕೂದಲಿಗೂ ಬಳಸಬಹುದು. ಇದರಿಂದ ಹೇರ್‌ ವಾಶ್‌ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ಸಿಗುತ್ತದೆ, ಸೀಳು ಕಡಿಮೆಯಾಗುತ್ತದೆ, ಶುಷ್ಕತೆಯೂ ಕಡಿಮೆಯಾಗುತ್ತದೆ. ಅಲ್ಲದೆ ಇದರ ಬಳಕೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳಿಗೆ ರಸದೌತಣ; ಒಂದೇ ದಿನ ಭಾರತ- ಪಾಕ್ ನಡುವೆ 2 ಪಂದ್ಯಗಳು! ಯಾವಾಗ ಗೊತ್ತಾ? – Kannada News | Double Thrill! India Pak T20 World Cup and Women’s Asia Cup Matches on Feb 15

ಭಾರತ ಹಾಗೂ ಪಾಕಿಸ್ತಾನ (india vs pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಹಬ್ಬದಂತಹ ಸಂಭ್ರಮ. ಹೀಗಿರುವಾಗ ಈ ಎರಡೂ ತಂಡಗಳು ಯಾವಾಗ ಕಣಕ್ಕಿಳಿಯುತ್ತವೆ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಒಂದೇ ದಿನ ಭಾರತ- ಪಾಕ್ ನಡುವೆ ಎರಡೆರಡು ಪಂದ್ಯಗಳು ಎಂದರೆ ಕೇಳಬೇಕೆ. ವಾಸ್ತವವಾಗಿ ಐಸಿಸಿ ಟಿ20 ವಿಶ್ವಕಪ್ 2026 (t20 world cup 2026) ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 15 ರಂದು ನಡೆಯಲಿದೆ. ವಿಶೇಷವೆಂದರೆ ಅದೇ ದಿನ, ಫೆಬ್ರವರಿ 15 ರಂದು, ಭಾರತ ಮತ್ತು ಪಾಕಿಸ್ತಾನ ನಡುವೆ 2 ಪಂದ್ಯಗಳು ನಡೆಯಲಿವೆ.

ವಾಸ್ತವವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜನವರಿ 19, ಸೋಮವಾರದಂದು ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಮಹಿಳಾ ಟಿ20 ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಸ್ಪರ್ಧಿಸಲಿವೆ. ಈ 8 ತಂಡಗಳನ್ನು ತಲಾ 4ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ.

ಯಾವ ತಂಡಗಳು ಯಾವ ಗುಂಪಿನಲ್ಲಿವೆ?

ಈ ಪಂದ್ಯಾವಳಿಯನ್ನು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಆಯೋಜಿಸಲಾಗುತ್ತಿದೆ. ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳನ್ನು ಎ ಗುಂಪಿನಲ್ಲಿ ಸೇರಿಸಲಾಗಿದೆ. ಅಲ್ಲದೆ, ಯುಎಇ ಮತ್ತು ನೇಪಾಳ ತಂಡಗಳನ್ನು ಈ ಗುಂಪಿನಲ್ಲಿ ಸೇರಿಸಲಾಗಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಎ ತಂಡಗಳು ಸೇರಿವೆ. ಇದರೊಂದಿಗೆ, ಈ ಗುಂಪಿನಲ್ಲಿ ಮಲೇಷ್ಯಾ ಮತ್ತು ಆತಿಥೇಯ ಥೈಲ್ಯಾಂಡ್ ತಂಡಗಳು ಸಹ ಸೇರಿವೆ.

ಫೆಬ್ರವರಿ 13 ರಂದು ಪ್ರಾರಂಭ

ಫೆಬ್ರವರಿ 13 ರಿಂದ 18 ರವರೆಗೆ ಈ ಪಂದ್ಯಾವಳಿಯು ರೋಮಾಂಚಕ ಗುಂಪು ಹಂತವನ್ನು ನೋಡಲಿದೆ. ಪ್ರತಿ ತಂಡವು ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಆಡಲಿದೆ. ಅದರ ನಂತರ, ಎರಡೂ ಗುಂಪುಗಳಿಂದ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ, ಅಂದರೆ ಒಟ್ಟು 4 ತಂಡಗಳು ಸೆಮಿಫೈನಲ್‌ಗೆ ಎಂಟ್ರಿಕೊಡಲಿವೆ.

ಗುಂಪು ಹಂತದಲ್ಲಿ ಪ್ರತಿದಿನ ಎರಡು ಪಂದ್ಯಗಳು ನಡೆಯಲಿವೆ. ಅದರಂತೆ, ಗುಂಪು ಹಂತದಲ್ಲಿ ದಿನದ ಮೊದಲ ಪಂದ್ಯ ಸ್ಥಳೀಯ ಸಮಯ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದೆ. ಗುಂಪು ಹಂತದಲ್ಲಿ ಎರಡನೇ ಪಂದ್ಯ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಲಿದೆ. ಸೆಮಿಫೈನಲ್‌ ಪಂದ್ಯಗಳು ಕೂಡ ಅದೇ ಸಮಯದಲ್ಲಿ ಆರಂಭವಾಗಲಿವೆ.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ಅದಾದ ನಂತರ, ಎರಡೂ ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 20 ರಂದು ನಡೆಯಲಿವೆ. ಮೊದಲ ಪಂದ್ಯ A1 ಮತ್ತು B2 ತಂಡಗಳ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ B1 ಮತ್ತು A2 ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಫೆಬ್ರವರಿ 22 ರ ಭಾನುವಾರ ನಡೆಯಲಿದೆ.

ಭಾರತ ಎ ಮಹಿಳಾ ತಂಡದ ವೇಳಾಪಟ್ಟಿ

  • ಫೆಬ್ರವರಿ 13, ಶುಕ್ರವಾರ, ಭಾರತ ಎ vs ಯುಎಇ ಎ
  • ಫೆಬ್ರವರಿ 15, ಭಾನುವಾರ, ಭಾರತ ಎ vs ಪಾಕಿಸ್ತಾನ ಎ
  • ಫೆಬ್ರವರಿ 17, ಮಂಗಳವಾರ, ಭಾರತ ಎ vs ನೇಪಾಳ ಎ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು – Kannada News | Kolar: Black Magic Priest Brutally Murdered After Amavasya Puja in Malur

ಕೋಲಾರ, ಜನವರಿ 19: ಅವರು ಊರಿನಲ್ಲಿ ಕಾಳಿ ದೇವಿಯ ದೇವಾಲಯ ನಿರ್ಮಾಣ ಮಾಡಿಕೊಂಡು ಆರಾಧನೆ ಮಾಡಿಕೊಂಡಿದ್ದರು. ದೇವಾಲಯಕ್ಕೆ ಬರುವ ಜನರಿಗೆ ದೆವ್ವ, ಗಾಳಿ ಬಿಡಿಸುವ ಕೆಲಸವೂ ಮಾಡುತ್ತಿದ್ದರು. ಹೀಗೆ ಮಾಟ-ಮಂತ್ರ ಮಾಡಿಕೊಂಡಿದ್ದ ಪೂಜಾರಿ (priest) ನಿನ್ನೆ ಪುಷ್ಯ ಅಮಾವಾಸ್ಯೆ ಹಿನ್ನೆಲೆ ಪೂಜೆ ಮುಗಿಸಿಕೊಂಡು ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆ (murder) ಮಾಡಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಬಳಿ ಘಟನೆ ನಡೆದಿದೆ. ಆಂಜಿ ಅಲಿಯಾಸ್​ ಆಂಜಿನಪ್ಪ(45) ಕೊಲೆಯಾದ ಪೂಜಾರಿ. ಘಟಣಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದದ್ದೇನು?

ನಿನ್ನೆ ಮಾಲೂರು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಮಾಲೂರು ಪಟ್ಟಣದ ಹೋಂಡಾ ಸ್ಟೇಡಿಯಂನಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಾಲೂರು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾವಿರಾರು ಜನರು ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರ ಗಮನವೆಲ್ಲಾ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೇಲಿತ್ತು. ಹೀಗಿರುವಾಗಲೇ ಇನ್ನೇನು ಕಾರ್ಯಕ್ರಮ ಅಂತಿಮ ಹಂತ ತಲುಪುವುದರಲ್ಲಿತ್ತು, ಅಷ್ಟರಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿಯೊಂದು ಮಾಲೂರು ಪೊಲೀಸರಿಗೆ ಬಂದಿದೆ.

ಇದನ್ನೂ ಓದಿ: ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್​, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಅಲ್ಲಿ ಬೈಕ್​​ನಲ್ಲಿ ಬರ್ತಿದ್ದ ಹುಲ್ಕೂರು ಗ್ರಾಮದ ಕಾಳಿ ದೇವಾಲಯದ ಪೂಜಾರಿ ಮಾಲೂರು ಪಟ್ಟಣ ನಿವಾಸಿ ಆಂಜಿ ಅಲಿಯಾಸ್​​​ ಆಂಜಿನಪ್ಪರನ್ನ ದುಷ್ಕರ್ಮಿಗಳು ಅಡ್ಡಗಟ್ಟಿ ಮುಖಕ್ಕೆ ಖಾರದಪುಡಿ ಎರಚಿ ಲಾಂಗಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವುದು ಕಂಡುಬಂದಿತ್ತು.

ಆಂಜಿನಪ್ಪ ದೇವಾಲಯದ ಪೂಜಾರಿ ಜೊತೆಗೆ ಮಾಲೂರಿನಲ್ಲಿ ಬೂಸಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದಿದ್ದ ಶ್ವಾನದಳ, ಸೋಕೋ ಟೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ನಿನ್ನೆ ಪುಷ್ಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹುಲ್ಕೂರು ಬಳಿಯ ದೇವಾಲಯದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಹೀಗೆ ಬರ್ಬರವಾಗಿ ಹತ್ಯೆಯಾಗಿರುವುದು ತಿಳಿಸಿದೆ.

ಎರಡನೇ ಮದುವೆ

ಇನ್ನು ಆಂಜಿನಪ್ಪ ಅವರಿಗೆ ಕಳೆದ ಮೂವತ್ತು ವರ್ಷಗಳ ಹಿಂದೆ ಚಿಂತಾಮಣಿ ಮೂಲದ ವಿಜಿಯಮ್ಮ ಎಂಬುವವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮದುವೆಯಾಗಿದೆ. ಇತ್ತೀಚೆಗೆ ಅಂದರೆ ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರು ವೈಟ್​ ಫೀಲ್ಡ್​ ನಿವಾಸಿ ಸಂಗೀತ ಎಂಬುವವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು.

ಆಂಜಿನಪ್ಪ ಕಳೆದ 5 ವರ್ಷಗಳ ಹಿಂದೆ ತಮ್ಮೂರು ಹುಲ್ಕೂರಿನಲ್ಲಿ ಕಾಳಿ ದೇವಾಲಯ ನಿರ್ಮಾಣ ಮಾಡಿಕೊಂಡು ಬರುವ ಭಕ್ತರಿಗೆ ಪೂಜೆ ಮಾಡಿಕೊಂಡು, ಬ್ಲಾಕ್ ಮ್ಯಾಜಿಕ್​, ಮಾಟ-ಮಂತ್ರ ಮಾಡಿಕೊಂಡು ಒಂದಷ್ಟು ಹಣ ಸಂಪಾದನೆ ಮಾಡಿಕೊಂಡಿದ್ದರು. ಜೊತೆಗೆ ಸ್ಥಳೀಯವಾಗಿ ಒಂದಷ್ಟು ಜನರಿಗೆ ಸಹಾಯ ಮಾಡಿಕೊಂಡಿದ್ದ ಆಂಜಿನಪ್ಪ ಮೇಲೆ ಗ್ರಾಮದ ಜನರಿಗೆ ಹಾಗೂ ಅಲ್ಲಿಗೆ ಬರುತ್ತಿದ್ದ ಭಕ್ತರಿಗೂ ಒಳ್ಳೆಯ ಅಭಿಪ್ರಾಯವಿತ್ತು. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನರು ಹಲವು ಸಮಸ್ಯೆಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಕೆಲವರಿಗೆ ದೆವ್ವ ಹಿಡಿದಿದ್ದರೆ, ನನಗೆ ಯಾರೋ ಕೆಡಕು ಮಾಡಿದ್ದಾರೆ ಎಂದೆಲ್ಲಾ ಹೇಳಿಕೊಂಡು ಬರುತ್ತಿದ್ದರು. ಅಂತವರಿಗೆ ಆಂಜಿನಪ್ಪ ಪರಿಹಾರ ನೀಡುತ್ತಿದ್ದರು.

ಇದನ್ನೂ ಓದಿ: ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?

ಹೀಗೆ ಸಾಕಷ್ಟು ಜನರಿಗೆ ಇವರಿಂದ ಅನುಕೂಲವೂ ಆಗಿದೆ, ಅನಾನುಕೂಲವೂ ಆಗಿರಬಹುದು. ಜೊತೆಗೆ ಗ್ರಾಮದಲ್ಲಿ ದೇವಾಲಯದ ನಿರ್ಮಾಣದ ವೇಳೆ ಗ್ರಾಮದ ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೋ ವಿಚಾರವಾಗಿ ಗ್ರಾಮದ ಕೆಲವರೊಂದಿಗೆ ಮನಸ್ತಾಪವಾಗಿತ್ತು ಎನ್ನಲಾಗುತ್ತಿದೆ. ಸದ್ಯ ದುಷ್ಕರ್ಮಿಗಳು ಪೂಜಾರಿಯನ್ನು ನಿನ್ನೆ ಬರ್ಬರವಾಗಿ ಕೊಲೆ ಮಾಡಿದ್ದು, ಹತ್ಯೆಗೆ ಕಾರಣ ಏನು ಅನ್ನೋದು ತಿಳಿಯಬೇಕಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

ಒಟ್ಟಾರೆ ಪೂಜೆ ಪುನಸ್ಕಾರ, ಆರಾಧನೆ, ಮಾಟ, ಮಂತ್ರ ಮಾಡಿಕೊಂಡಿದ್ದ ವ್ಯಕ್ತಿಯನ್ನು ಏಕಾಏಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಕೊಲೆಗೆ ಕುಟುಂಬದಲ್ಲಿ ಏನಾದ್ರು ಸಮಸ್ಯೆ ಇತ್ತಾ, ಹಣಕಾಸಿನ ವ್ಯವಹಾರ, ಸ್ಮಶಾನದ ವಿಚಾರವೇ ಸಾವಿಗೆ ಕಾರಣವಾಯ್ತಾ? ಹೀಗೆ ಹತ್ತು ಹಲವು ಆಯಾಮಗಳಲ್ಲಿ ಮಾಲೂರು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯಿಂದಲೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಳಪೆ ಕಾಮಗಾರಿ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್​​, ಹಲ್ಲೆ: ನಕಲಿ ಪತ್ರಕರ್ತರು ಅಂದರ್​ – Kannada News | Three Arrested in Chamarajanagar for Posing as Journalists, Extorting and Assaulting a Man Over Road Work

ಚಾಮರಾಜನಗರ, ಜನವರಿ 19: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಪತ್ರಕರ್ತ ಎಂಬ ಹಣೆ ಪಟ್ಟಿ ಹೊತ್ತು ರಸ್ತೆ ಕಾಮಗಾರಿ ಸಂಬಂಧ ಮೇಸ್ತ್ರಿ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಘಟನೆ ಯಳಂದೂರು ತಾಲೂಕಿನ ವೈ ಕೆ ಮೊಳೆ ಬಳಿ ನಡೆದಿದೆ. ಹಣ ಕೊಡಲು ಒಪ್ಪದ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು?

ಯಳಂದೂರಿನಿಂದ ಬಿ.ಆರ್. ಹಿಲ್ಸ್ ನಡುವೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಪತ್ರಕರ್ತರು ಎಂದು ಹೇಳಿಕೊಂಡಿದ್ದ ಮೂವರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಚೆಲುವರಾಜ್ ಎಂಬ ಮೇಸ್ತ್ರಿ ಬಳಿ ಪುನೀತ್, ಶೇಖರ್ ಹಾಗೂ ಪುರುಷೋತ್ತಮ್ ಎಂಬವರು ಹಣಕ್ಕಾಗಿ ಡಿಮ್ಯಾಂಡ್​​ ಕೂಡ ಮಾಡಿದ್ದರು. ಇದಕ್ಕೆ ಒಪ್ಪದ ಆತನ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿ ಎಸ್ಕೇಪ್​​ ಆಗಿದ್ದರು.

ಇದನ್ನೂ ಓದಿ: ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್​, ಮಚ್ಚುಗಳು; ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ

ಆವಾಜ್​​ ಹಾಕಿದ್ದ ಆರೋಪಿಗಳು

ಜನರಿಗೆ ಅಷ್ಟಾಗಿ ಚಿರಪರಿಚಿತವಲ್ಲದ ಯೂಟ್ಯೂಬ್​​ ಚಾನೆಲ್​​ ಹೆಸರು ಹೇಳಿ ಪತ್ರಕರ್ತರು ಎಂದು ಪರಿಚಯಿಸಿಕೊಂಡಿದ್ದ ಆರೋಪಿಗಳು, ಇಲ್ಲಿ ಕಾಮಗಾರಿ ನಡೆಯ ಬೇಕಿದ್ರೆ ನಮ್ಗೆ 2.5 ಲಕ್ಷ ರೂಪಾಯಿ ಹಣ ನೀಡಲೇ ಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಈ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ಮೇಸ್ತ್ರಿ ಚೆಲುವರಾಜ್​ಗೆ ಅವಾಜ್ ಹಾಕಿದ್ದರು. ಈ ವೇಳೆ ಆತ ತನಗೂ ಇದಕ್ಕೂ ಸಂಬಂಧವಿಲ್ಲ. ನೀವು ಗುತ್ತಿಗೆದಾರ ಹಾಗೂ ಎಂಜಿನಿಯರ್ ಸಂಪರ್ಕಿಸಿ ಎಂದು ಹೇಳಿದ ಕಾರಣ ರೊಚ್ಚಿಗೆದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಯಳಂದೂರು ಠಾಣಾ ಪೊಲೀಸರು ಮೂರು ಮಂದಿ ನಕಲಿ ಪತ್ರಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕಿಸ್ತಾನದ ಭಯೋತ್ಪಾದನೆಗೆ ಬೆಂಬಲಿಸಬೇಡಿ; ಪೋಲೆಂಡ್ ಉಪ ಪ್ರಧಾನಿ ಜೊತೆ ಎಸ್. ಜೈಶಂಕರ್ ಚರ್ಚೆ – Kannada News | Minister S Jaishankar told Polish Foreign Minister Dont fuel terrorism in our neighbourhood

ನವದೆಹಲಿ, ಜನವರಿ 19: ಪೋಲೆಂಡ್ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar), ಪೋಲೆಂಡ್ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಯಾವುದೇ ನೇರ ಅಥವಾ ಪರೋಕ್ಷ ಬೆಂಬಲವನ್ನು ನೀಡದಂತೆ ಮನವಿ ಮಾಡಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೋಲೆಂಡ್ ಸಚಿವ ರಾಡೋಸ್ಲಾ ಸಿಕೋರ್ಸ್ಕಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಸಮಸ್ಯೆಯ ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಜೈಶಂಕರ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.

ಸಿಕೋರ್ಸ್ಕಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ತಮ್ಮ ಆರಂಭಿಕ ಹೇಳಿಕೆಯಲ್ಲಿ, ಪೋಲಿಷ್ ಉಪ ಪ್ರಧಾನ ಮಂತ್ರಿಗೆ ಗಡಿಯಾಚೆಗಿನ ಭಯೋತ್ಪಾದನೆಯ ದೀರ್ಘಕಾಲದ ಬೆದರಿಕೆಯ ಬಗ್ಗೆ ತಿಳಿದಿದೆ ಎಂದು ನಮಗೂ ಗೊತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್

“ಉಪ ಪ್ರಧಾನ ಮಂತ್ರಿಗಳೇ, ನೀವು ನಮ್ಮ ಪ್ರದೇಶಕ್ಕೆ ಹೊಸಬರಲ್ಲ. ಗಡಿಯಾಚೆಗಿನ ಭಯೋತ್ಪಾದನೆಯ ದೀರ್ಘಕಾಲದ ಸವಾಲಿನ ಬಗ್ಗೆ ನಿಮಗೂ ತಿಳಿದಿದೆ. ಈ ಸಭೆಯಲ್ಲಿ ನಿಮ್ಮ ಇತ್ತೀಚಿನ ಪ್ರವಾಸಗಳ ಕುರಿತು ಚರ್ಚಿಸಲು ನಾನು ಬಯಸುತ್ತೇನೆ. ಪೋಲೆಂಡ್ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸಬೇಕು ಮತ್ತು ನಮ್ಮ ನೆರೆಹೊರೆಯ ದೇಶಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಉತ್ತೇಜಿಸಲು ಸಹಾಯ ಮಾಡಬಾರದು” ಎಂದು ಜೈಶಂಕರ್ ಹೇಳಿದ್ದಾರೆ.

ಜೈಶಂಕರ್ ಅವರ ಈ ಹೇಳಿಕೆಗಳ ನಂತರ, ಸಿಕೋರ್ಸ್ಕಿ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. “ಇತ್ತೀಚೆಗೆ ಚಲಿಸುವ ರೈಲಿನ ಕೆಳಗೆ ಸ್ಫೋಟಕವಿಟ್ಟು ಪೋಲಿಷ್ ರೈಲ್ವೆ ಮಾರ್ಗವನ್ನು ಸ್ಫೋಟಿಸಲಾಗಿತ್ತು. ಪೋಲೆಂಡ್​​ನಲ್ಲೂ ಭಯೋತ್ಪಾದನೆ ದೊಡ್ಡ ಸವಾಲಾಗಿದೆ ಎಂದು ಪೋಲಿಷ್ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಬಗ್ಗೆ ಸಮರ್ಥನೆಗೆ ಅವಕಾಶವೇ ಇಲ್ಲ; SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ

ತಮ್ಮ ಮಾತುಕತೆಯ ಸಮಯದಲ್ಲಿ, ಇಬ್ಬರೂ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ ಸುಂಕಗಳ ಬಗ್ಗೆಯೂ ಚರ್ಚೆ ನಡೆಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಕಚ್ಚಾ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತವನ್ನು ಟೀಕಿಸಿದ್ದಾರೆ ಮತ್ತು ಶೇ. 50ರಷ್ಟು ಸುಂಕಗಳನ್ನು ವಿಧಿಸಿದ್ದಾರೆ. ಆರಂಭದಲ್ಲಿ, ಅವರು ಶೇ. 25ರಷ್ಟು ಸುಂಕಗಳನ್ನು ವಿಧಿಸಿದ್ದರು, ಆದರೆ, ಬಳಿಕ ರಷ್ಯಾದೊಂದಿಗಿನ ವ್ಯಾಪಾರದ ಕಾರಣಕ್ಕೆ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕಗಳನ್ನು ವಿಧಿಸಿದರು. ಈ ಕ್ರಮಕ್ಕಾಗಿ ಭಾರತ ಪದೇ ಪದೇ ಅಮೆರಿಕವನ್ನು ಟೀಕಿಸಿದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ.

ಈ ಬಗ್ಗೆ ಮಾತನಾಡಿದ ಸಿಕೋರ್ಸ್ಕಿ, ಸುಂಕಗಳ ಮೂಲಕ ದೇಶವನ್ನು ಟಾರ್ಗೆಟ್ ಮಾಡುವ ಅನ್ಯಾಯಕ್ಕೆ ನಾನು ಕೂಡ ವಿರೋಧಿಸುತ್ತೇನೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕಿವೀಸ್ ವಿರುದ್ಧ ಹೀನಾಯ ಸೋಲು; ಏಕದಿನ ತಂಡದಿಂದ ಮೂವರಿಗೆ ಗೇಟ್​ಪಾಸ್ – Kannada News | Team India’s ODI Defeat to New Zealand: Jadeja, Krishna, Reddy’s Future Uncertain

ರವೀಂದ್ರ ಜಡೇಜಾ: ಈ ಪಟ್ಟಿಯಲ್ಲಿ ಮೊದಲ ಹೆಸರು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರದು. ಏಕದಿನ ಪಂದ್ಯಗಳಲ್ಲಿ, ಜಡೇಜಾ ತಮ್ಮ ಬೌಲಿಂಗ್ ಅಥವಾ ಬ್ಯಾಟಿಂಗ್‌ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಜಡೇಜಾ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್ ಕೂಡ ರನ್ ಗಳಿಸುವಲ್ಲಿ ವಿಫಲವಾಯಿತು. ಕಳೆದ ವರ್ಷ, ಜಡೇಜಾ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ 106 ರನ್ ಗಳಿಸಿದ್ದರು. ಇದರ ಜೊತೆಗೆ ಕೇವಲ 10 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

Source link

ಭಯ ಜಾಸ್ತಿ ಆಗಿದೆ: ಜನರ ಪ್ರೀತಿ ನೋಡಿ ಬೆಚ್ಚಿದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata mesmerized by fans love

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಗಿಲ್ಲಿ ನಟ ಅವರು ಹುಟ್ಟೂರಿಗೆ ಮರಳಿದ್ದಾರೆ. ಅವರ ಸ್ವಾಗತಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಅದರಿಂದಾಗಿ ರಸ್ತೆಗಳು ಜಾಮ್ ಆಗಿವೆ. ಅಷ್ಟರಮಟ್ಟಿಗೆ ಕ್ರೇಜ್ ಹೆಚ್ಚಿದೆ. ಈ ವೇಳೆ ಕಿಕ್ಕಿರಿದು ಸೇರಿದ ಜನರ ನಡುವೆ ಟಿವಿ9 ಜೊತೆ ಗಿಲ್ಲಿ ನಟ (Gilli Nata) ಅವರು ಮಾತನಾಡಿದ್ದಾರೆ. ಹುಟ್ಟೂರಿನಲ್ಲಿ ತಮಗೆ ಸಿಗುತ್ತಿರುವ ಪ್ರೀತಿಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದು. ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೆ. ಸರ್ಕಾರಿ ಬಸ್​ನಲ್ಲಿ ಪಾಸ್ ತೋರಿಸಿ ಓಡಾಡುತ್ತಿದ್ದೆ. ನಾನು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಈಗ ಇದೇ ರಸ್ತೆಯಲ್ಲಿ ಕಪ್ ಹಿಡಿದುಕೊಂಡು, ಕಾರಿನಲ್ಲಿ ಬರುತ್ತೇನೆ ಅಂತ ಊಹಿಸಿರಲಿಲ್ಲ. ನಮ್ಮೂರಿಗೆ ನಾವು ವಾಪಸ್ ಬಂದಾಗ ಸಿಕ್ಕಾಪಟ್ಟೆ ಖುಷಿ ಆಗುತ್ತದೆ’ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

‘ಜನರ ಪ್ರೀತಿ ಜಾಸ್ತಿ ಆಗುತ್ತಿದೆ. ಅದರಿಂದ ಜವಾಬ್ದಾರಿ ಮತ್ತು ಭಯ ಕೂಡ ಹೆಚ್ಚಾಗುತ್ತಿದೆ. ಖುಷಿಗಿಂತಲೂ ಭಯ ಜಾಸ್ತಿ ಆಗಿದೆ. ಎಲ್ಲಾದರೂ ಎಡವಿಬಿಟ್ಟರೆ ಏನು ಮಾಡೋದು? ಇಷ್ಟು ಜನರ ಪ್ರೀತಿ ಸಂಪಾದಿಸಿದ ಮೇಲೆ ಆ ಭಯ ಯಾವಾಗಲೂ ಇರುತ್ತದೆ’ ಎಂದಿದ್ದಾರೆ ಗಿಲ್ಲಿ ನಟ. ಅವರು ಹೋದ ಕಡೆಗಳಲ್ಲೆಲ್ಲ ಜನರು ಕಿಕ್ಕಿರಿದು ಸೇರುತ್ತಿದ್ದಾರೆ.

ಅಂಬರೀಷ್ ಅವರ ಹುಟ್ಟೂರಾದ ದೊಡ್ಡಅರಸಿನ ಕೆರೆ ಗೇಟ್ ಬಳಿ ಗಿಲ್ಲಿ ಬಂದಾಗ ಅಂಬರೀಷ್ ಫ್ಯಾನ್ಸ್ ಮೆಚ್ಚಿಕೊಂಡು ಮಾತನಾಡಿದರು. ಆ ಬಗ್ಗೆ ಗಿಲ್ಲಿ ನಟ ಪ್ರತಿಕ್ರಿಯೆ ನೀಡಿದ್ದಾರೆ. ‘ಅಂಬರೀಷಣ್ಣನವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರಿಗೆ ನಮ್ಮನ್ನು ಹೋಲಿಸಿಕೊಳ್ಳಲು ಆಗಲ್ಲ. ಅವರ ಊರಿನ ಪಕ್ಕ ನಮ್ಮ ಊರು ಇರುವುದು ನಮ್ಮ ಅದೃಷ್ಟ’ ಎಂದಿದ್ದಾರೆ ಗಿಲ್ಲಿ ನಟ.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಮದ್ದೂರು ಫ್ಯಾನ್ಸ್

ಗಿಲ್ಲಿ ನಟ ಅವರು ಈ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಜಗ್ಗೇಶ್ ಈ ಮೊದಲೇ ಊಹಿಸಿದ್ದರು. ಒಂದು ವರ್ಷ ಕಳೆಯುವುದರಲ್ಲಿ 4 ಜನ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾನೆ ಎಂದು ಅವರು ಭವಿಷ್ಯ ನುಡಿದಿದ್ದರು. ಆ ಮಾತು ನಿಜವಾಗಿದೆ. ಈಗ ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಅವರು ತೆರಳಿದ್ದಾರೆ. ‘ಜಗ್ಗೇಶ್ ಅವರ ಆಶೀರ್ವಾದದಿಂದ ಈ ರೀತಿ ಆಗಿದೆ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ – Kannada News | Karnataka DGP Ramachandra rao Reacts about His obscene Viral video

ಬೆಂಗಳೂರು (ಜನವರಿ 19): ಐಜಿಪಿ ರಾಮಚಂದ್ರ ರಾವ್  (DGP Ramachandra rao) ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಸದ್ಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಇನ್ನು ತಮ್ಮ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಮಚಂದ್ರ ಅವರು ಗೃಹ ಸಚಿವ ಪರಮೇಶ್ವರ್ ಭೇಟಿಗೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಭೇಟಿಗೆ ನಿರಾಕರಿಸಿದ್ದು ಸಪ್ಪೆ ಮುಖದಲ್ಲಿ ರಾಮಚಂದ್ರ ವಾಪಸ್ ಆಗಿದ್ದಾರೆ. ಇನ್ನು ಇದೇ ಡಿಜಿಪಿ ರಾಮಚಂದ್ರ ವೇಳೆ ಮಾಧ್ಯಮಗಳಿಗೆ ಪ್ರತಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ’ ಎಂದು ಅವರು ಕಿಡಿಕಾರಿದ್ದಾರೆ

ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ AI ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ.ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್​​ಗೆ ಸಂಕಷ್ಟ!

Source link

ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ – Kannada News | Lakkundi Excavation: Ancient Relic Found at Gadag Kote Veerabhadreshwara Temple Site

ಗದಗ, ಜನವರಿ 19: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 4ನೇ ‌ದಿನದ ಉತ್ಖನನ ಕಾರ್ಯ ವೇಳೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಪುರಾತನ ಶಿಲೆ ಪತ್ತೆ ಆಗಿದೆ. ಐತಿಹಾಸಿಕ ದೇವಸ್ಥಾನ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ (ಕಂಬದ ಮೇಲ್ಭಾಗದಲ್ಲಿರುವ ಒಂದು ಭಾಗ) ಅವಶೇಷ ಪತ್ತೆ ಆಗಿದೆ. ಸದ್ಯ ಪತ್ತೆಯಾಗಿರುವ ವಿಶೇಷ ಅವಶೇಷಗಳು ಮತ್ತಷ್ಟು ಕುತೂಹಲ‌ ಮೂಡಿಸಿವೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version