‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ – Kannada News | Block Me If You Dare Gilli Challenge to Kavya Bigg Boss Challenge

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಗೆಳೆತನ ಮೂಡಿದೆ. ಈ ಗೆಳೆತನದಲ್ಲಿ ವೀಕ್ಷಕರಿಗೆ ಪರಿಶುದ್ಧತೆ ಕಾಣುತ್ತಿದೆ. ಕಾವ್ಯಾಗೆ ಏನೇ ಆದರೂ ಗಿಲ್ಲಿ ಅಲ್ಲಿ ನಿಲ್ಲುತ್ತಾರೆ. ತಮ್ಮ ಗೆಳತಿಯ ಪರ ಧ್ವನಿ ಎತ್ತುತ್ತಾರೆ. ಆದರೆ, ಕಾವ್ಯಾ ಎಲ್ಲಾ ಸಂದರ್ಭದಲ್ಲೂ ಗಿಲ್ಲಿ ಪರ ನಿಂತಿದ್ದಾರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಸಿಗುತ್ತದೆ. ಸ್ವತಃ ಕಾವ್ಯಾಗೆ ಹಾಗೆ ಅನಿಸಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ಗಿಲ್ಲಿ ಬಳಿ ಅವರು ಕ್ಷಮೆ ಕೇಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಕೊನೆಯ ವಾರ ಇದು. ಈ ಕಾರಣದಿಂದಲೇ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದರು. ಸೀಸನ್ ಉದ್ದಕ್ಕೂ ಯಾವುವಾದರೂ ಸ್ಪರ್ಧಿಯನ್ನು ನೋಯಿಸಿದ್ದರೆ ಅದಕ್ಕೆ ಕ್ಷಮೆ ಕೇಳಬೇಕು. ಗಿಲ್ಲಿ ನಟ ಅವರಿಗೆ ನೋವು ಮಾಡಿದಂತೆ ಕಾವ್ಯಾಗೆ ಅನಿಸಿದೆ. ಹೀಗಾಗಿ, ಅವರು ಕ್ಷಮೆ ಕೇಳಿದ್ದಾರೆ. ಈ ವೇಳೆ ಹೊರ ಹೋದ್ಮೇಲೆ ಬ್ಲಾಕ್ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದ್ದಾರೆ.

‘ಬೇಜಾರು ಮಾಡಿದ್ದೀಯಾ ಎಂದು ನೀನು ಯಾವಾಗಲೂ ಹೇಳಿಕೊಂಡೇ ಇಲ್ಲ. ಹಾಗಂತ ನಾನು ನಿನಗೆ ಬೇಜಾರು ಮಾಡೇ ಇಲ್ಲ ಅಂತ ಅಲ್ಲ. ನೀನು ಹೇಳಿಲ್ಲ ಅಷ್ಟೇ. ಅದು ನಿನ್ನ ದೊಡ್ಡತನ ಇರಬಹುದು. ಇದು ಶೋ ಎಂಬುದನ್ನು ನೋಡದೇ ಸಾಕಷ್ಟು ಬಾರಿ ನಿನ್ನ ಅಹಂಗೆ ಪೆಟ್ಟು ಕೊಟ್ಟಿದ್ದೇನೆ. ಕೆಲವೊಮ್ಮೆ ನಿನ್ನನ್ನು ಬೇರೆಯವರ ಮುಂದೆ ಬಿಟ್ಟುಕೊಟ್ಟಿದ್ದೇನೆ. ಇದಕ್ಕೆಲ್ಲ ಕಾರಣ ಇತ್ತು. ಅದು ನಿನಗೂ ಗೊತ್ತು. ಗೆಳೆತಿಯಾಗಿ ಯೋಚಿಸಿದಾಗ ನಿನಗೆ ನೋವು ಮಾಡಿದ್ದೇನೆ. ಕ್ಷಮೆ ಇರಲಿ’ ಎಂದರು ಕಾವ್ಯಾ.

ಇದನ್ನೂ ಓದಿ: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?
ಆ ಬಳಿಕ ಕಾವ್ಯಾ ಅವರು ಗಿಲ್ಲಿಗೆ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದರು. ‘ಇನ್ನು ಉಳಿದುಕೊಂಡಿರೋದು ಕೆಲವೇ ದಿನ ಮಾತ್ರ. ಇನ್ನಾದರೂ ರೇಗಿಸೋದನ್ನು ನಿಲ್ಲಿಸು. ಇಲ್ಲವಾದಲ್ಲಿ ಹೊರಗೆ ಹೋಗುತ್ತಿದ್ದಂತೆ ನಿನ್ನ ಬ್ಲಾಕ್ ಮಾಡೋದಂತೂ ಪಕ್ಕಾ’ ಎಂದು ಕಾವ್ಯಾ ಹೇಳಿದರು. ಆಗ ಗಿಲ್ಲಿ, ‘ನಾನು ಕಾಯ್ತಾ ಇದೀನಿ. ಧೈರ್ಯ ಇದ್ರೆ ಮಾಡು’ ಎಂದು ಸವಾಲು ಹಾಕಿದರು. ಸದ್ಯ ಈ ವಿಷಯ ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:15 am, Fri, 16 January 26

Source link

ಬೆಂಗಳೂರಿನ ಚಿಣ್ಣರಿಗೆ ಹೊಸ ಹಾಟ್‌ಸ್ಪಾಟ್! ಕಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್ – Kannada News | Bengaluru’s Cubbon Park Bal Bhavan Gets Rs.1.5 Cr Olympic Level Skating Park by May

ಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್

ಬೆಂಗಳೂರು, ಜನವರಿ 16: ನೈಸರ್ಗಿಕ ಸೌಂದರ್ಯದಿಂದ ಮನಸೂರೆಗೊಳ್ಳುವ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಬಾಲಭವನವು ಚಿಣ್ಣರು ಹಾಗೂ ಯುವಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭೇಟಿ ನೀಡುವ ಈ ಸ್ಥಳದಲ್ಲಿ ಈಗ ಮತ್ತೊಂದು ಪ್ರಮುಖ ಆಕರ್ಷಣೆ ಸೇರ್ಪಡೆಯಾಗಲು ಸಿದ್ಧವಾಗಿದೆ. ಬಾಲಭವನದಲ್ಲಿ ಅತಿ ಶೀಘ್ರದಲ್ಲೇ ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ.

ಒಂದೂವರೆ ಕೋಟಿ ವೆಚ್ಚದ ಪ್ರಾಜೆಕ್ಟ್

ಬಾಲಭವನ ಸೊಸೈಟಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿರುವ ಬೋಟಿಂಗ್ ಪ್ರದೇಶದ ಬಳಿ, ಬಾಲಭವನದ ಅರ್ಧ ಎಕರೆ ಜಾಗದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಿರ್ಮಾಣವಾಗುವ ಈ ಸ್ಕೇಟಿಂಗ್ ಪಾರ್ಕ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು 40 ಮಂದಿ ಸ್ಕೇಟಿಂಗ್ ಬೋರ್ಡ್ ಬಳಸುವ ಅವಕಾಶವಿರಲಿದೆ. ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ ವಿನ್ಯಾಸಗೊಳ್ಳುತ್ತಿದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಮೇ ನಂತರ ಪಾರ್ಕ್​ ಲೋಕಾರ್ಪಣೆ

ಜನವರಿಯ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದ್ದು, ಮೇ ತಿಂಗಳ ವೇಳೆಗೆ ಸ್ಕೇಟಿಂಗ್ ಪಾರ್ಕ್‌ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಬಾಲಭವನದಲ್ಲಿ ಮತ್ತೊಂದು ಕ್ರೀಡಾ ಚಟುವಟಿಕೆ ಆರಂಭವಾಗುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:45 am, Fri, 16 January 26

Source link

ಬೆಂಗಳೂರೇ ಬೇಡ, ಚಿನ್ನಸ್ವಾಮಿಯಲ್ಲಿ ಪಂದ್ಯವಾಡಲ್ಲ ಅಂತಿದೆ RCB! ಅಭಿಮಾನಿಗಳಿಗೆ ನಿರಾಸೆ, KSCAಗೆ ಶಾಕ್ – Kannada News | RCB Likely to Skip Chinnaswamy Stadium Matches, Leaving Fans and KSCA Disappointed

ಬೆಂಗಳೂರು, ಜನವರಿ 16: ಕಳೆದ ವರ್ಷ ಜೂನ್ ನಾಲ್ಕರಂದು ಆರ್​ಸಿಬಿ (RCB) ಅಭಿಮಾನಿಗಳಿಗೆ ಅತ್ಯಂತ ಕೆಟ್ಟ ಘಳಿಗೆ. ಟ್ರೋಫಿ ಗೆದ್ದ ಖುಷಿ ಅರೆ ಕ್ಷಣದಲ್ಲಿ ಮಾಯವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ, ಪೊಲೀಸರ ನಿರ್ಲಕ್ಷ್ಯ, ಸರ್ಕಾರದ ಬೇಜವಬ್ದಾರಿಗೆ 11 ಜನ ಮೃತಪಟ್ಟಿದ್ದರು. ಆ ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಹಳೆ ವೈಭವವನ್ನು ಕಾಣಲು ಸಾಧ್ಯವಾಗದೆ ಪರದಾಡುತ್ತಾ ಇದೆ. ಕೆಎಸ್​ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕೂಡ ಭರವಸೆ ಕೊಟ್ಟಿದ್ದರು. ಆದರೆ KSCAಗೆ ಆರ್​ಸಿಬಿ ಮ್ಯಾನೇಜ್​ಮೆಂಟ್ ಸಡನ್ ಶಾಕ್ ನೀಡಿದೆ.

ಕಾಲ್ತುಳಿತ ಪ್ರಕರಣದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಪ್ರಮುಖ ಆರೋಪಿ ಸ್ಥಾನದಲ್ಲಿದೆ‌. ಅಲ್ಲದೆ ಉಪಾಧ್ಯಕ್ಷ ರಾಜೇಶ್ ಮೆನನ್​​ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ ಆರ್​ಸಿಬಿ ಮ್ಯಾನೇಜ್ಮೆಂಟ್ ಮೇಲೆ ಈ ಘಟನೆ ಕಪ್ಪು ಚುಕ್ಕೆ ತಂದಿಟ್ಟಿತ್ತು. ಈ ಹಿನ್ನಲೆ ರಾಜೇಶ್ ಮೆನನ್ ಚಿನ್ನಸ್ವಾಮಿ ಸಹವಾಸ ಬೇಡ ಅಂದಿದ್ದಾರೆ. ನಾವು ರಾಯಪುರ್ ಅಥವಾ ನವೀ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ಹೋಮ್ ಗ್ರೌಂಡ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಆರ್​ಸಿಬಿ ಪಂದ್ಯ ಚಿನ್ನಸ್ವಾಮಿಯಿಂದ ದೂರವಾದ್ರೆ ಕೆಎಸ್​ಸಿಎಗೆ ಇದು ದೊಡ್ಡ ನಷ್ಟ.

ಚಿನ್ನಸ್ವಾಮಿ ಸ್ಟೇಡಿಯಂ ಕಾಮಗಾರಿಗಳ ಪರಿಶೀಲಿಸಿದ ಪೊಲೀಸ್ ಆಯುಕ್ತ

ಪೊಲೀಸ್ ಕಮಿಷನರ್ ಒಳಗೊಂಡು ಗುರುವಾರ ಸಭೆ ಕೂಡ ಮಾಡಲಾಗಿದೆ‌. ಪೊಲೀಸ್ ಇಲಾಖೆ ಈಗಾಗಲೆ 17 ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು KSCAಗೆ ಸೂಚನೆ ಕೊಟ್ಟಿತ್ತು. ಅದರ ಕಾಮಗಾರಿಯನ್ನು ಈಗಾಗಲೆ KSCA ಶುರುಮಾಡಿಕೊಂಡಿದೆ‌. ಗುರುವಾರದ ಸಭೆಯ ನಂತರ, ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕಮಿಷನರ್ ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಜಿಬಿಎ, ಅಗ್ನಿಶಾಮಕ, BWSSB, ಬೆಸ್ಕಾಂ ಅಧಿಕಾರಿಗಳು ಬಾಗಿಯಾಗಿದ್ದರು. ಹೇಗಾದ್ರೂ ಮಾಡಿ ಸಮಸ್ಯೆ ಬಗೆಹರಿಸಿಕೊಂಡು ಆರ್​ಸಿಬಿ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಆಡಿಸಲು KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು

ಒಟ್ಟಾರೆ ಈ ವರ್ಷ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಪಂದ್ಯವಾಡುವುದು ಬಹುತೇಕ ಅನುಮಾನ. ವ್ಯವಸ್ಥೆ ಸರಿ ಇಲ್ಲ, ಏನಾದರೂ ಆದರೆ ನಾವೇ ಹೊಣೆಯಾಗುತ್ತೇವೆ ಎಂಬ ಭಯ ಆರ್​ಸಿಬಿ ಮ್ಯಾನೇಜ್ಮೆಂಟ್ ಹಿಂದಿದೆ. ಈ ನಡುವೆ KSCA ಮಾತ್ರ ಎಲ್ಲಾ ಸಮಸ್ಯೆ ಕ್ಲಿಯರ್ ಮಾಡಿ ಆರ್​ಸಿಬಿ ಮ್ಯಾನೇಜ್ಮೆಂಟ್ ಮನವೊಲಿಸುವ ಕೆಲಸ ಮಾಡುತ್ತಾ ಇದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ-ಅಶ್ವಿನಿ ಮಧ್ಯೆ ರೂಪೇಶ್ ರಾಜಣ್ಣ ಹೆಸರು ಚರ್ಚೆ ಏಕೆ? – Kannada News | Bigg Boss Kannada 12: Why Roopesh Rajanna name is getting viral

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ಇನ್ನೆರಡು ದಿನಗಳಲ್ಲಿ ಯಾರು ವಿನ್ನರ್ ಎಂಬುದು ಗೊತ್ತಾಗಲಿದೆ. ಸದ್ಯಕ್ಕೆ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಬಹಳ ಗಟ್ಟಿಯಾದ ಸ್ಪರ್ಧೆ ಇದೆ. ಈ ಇಬ್ಬರಲ್ಲಿ ಒಬ್ಬರು ಗೆಲ್ಲುವುದು ಖಾಯಂ ಎನ್ನಲಾಗುತ್ತಿದೆ. ಇಬ್ಬರಿಗೂ ಹೊರಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಶ್ವಿನಿ ಗೌಡ ನಟಿ ಆಗಿರುವ ಜೊತೆಗೆ ರಕ್ಷಣಾ ವೇದಿಕೆ ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದು ಪ್ರಮುಖ ನಾಯಕಿ ಸಹ ಆಗಿದ್ದಾರೆ. ಇಬ್ಬರ ಪರವಾಗಿ ಅವರವರ ಅಭಿಮಾನಿಗಳು ವೋಟಿಗಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಈ ಇಬ್ಬರ ನಡುವೆ ರೂಪೇಶ್ ರಾಜಣ್ಣ ಹೆಸರು ಏಕೋ ಹೆಚ್ಚು ಚರ್ಚೆಗೆ ಬರುತ್ತಿದೆ. ಕಾರಣವೇಣು?

ಅಶ್ವಿನಿ ಗೌಡ ಅವರ ಪರವಾಗಿ ರಾಜ್ಯದಾದ್ಯಂತ ಇರುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ ಚಲಾಯಿಸುತ್ತಾರೆ ಎನ್ನಲಾಗುತ್ತಿದೆ. ಇದರಿಂದ ಗಿಲ್ಲಿಗೆ ಹಿನ್ನಡೆ ಆಗಬಹುದು, ಗಿಲ್ಲಿ ವಿನ್ ಆಗದೇ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕೆಲವೆಡೆ ರಕ್ಷಣಾ ವೇದಿಕೆ ಸದಸ್ಯರು ಖುದ್ದು ಗಿಲ್ಲಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿ, ಗಿಲ್ಲಿ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ.

ಅಶ್ವಿನಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ಇದ್ದರೂ ಸಹ ಗಿಲ್ಲಿಯೇ ಗೆಲ್ಲುತ್ತಾರೆ ಎಂದು ಹೇಳಲು ಉದಾಹರಣೆಯಾಗಿ ರೂಪೇಶ್ ರಾಜಣ್ಣ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ರೂಪೇಶ್ ರಾಜಣ್ಣ ಸಹ ಕನ್ನಡಪರ ಹೋರಾಟಗಾರರಾಗಿದ್ದರು. ಅವರೂ ಸಹ ಬಿಗ್​​ಬಾಸ್ ಮನೆಗೆ ಹೋಗಿದ್ದರು. ಆದರೆ ಅವರು ಗೆಲ್ಲಲಿಲ್ಲ, ಒಂದೊಮ್ಮೆ ಕನ್ನಡ ಪರ ಹೋರಾಟಗಾರರಿಗೆ ರಕ್​ಷಣಾ ವೇದಿಕೆಯ ಬೆಂಬಲ ಸಿಗುತ್ತದೆ ಎಂದಾಗಿದ್ದಿದ್ದರೆ ರೂಪೇಶ್ ರಾಜಣ್ಣ ಗೆಲ್ಲಬೇಕಿತ್ತಲ್ಲ, ಈಗಲೂ ಹಾಗೆಯೇ ಆಗಲಿದೆ, ಅಶ್ವಿನಿ ಅವರು ಹೋರಾಟಗಾರ್ತಿ ಆಗಿರಬಹುದು ಆದರೆ ಇಲ್ಲಿ ನಿಜವಾದ ಪ್ರತಿಭೆಯೇ ಗೆಲ್ಲುತ್ತದೆ ಎಂದು ಹಲವರು ವಾದಿಸುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಇನ್ನು ಇತ್ತೀಚೆಗೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಆಗಿದ್ದರು. ಈ ಭೇಟಿಯನ್ನು ಸಹ ನಾರಾಯಣಗೌಡರು ಅಶ್ವಿನಿಯನ್ನು ಗೆಲ್ಲಿಸಲೆಂದು ಸುದೀಪ್ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು ಆದರೆ ನಾರಾಯಣಗೌಡರು ತಮ್ಮ ಮಗನ ಮದುವೆ ಆಮಂತ್ರಣ ನೀಡಲೆಂದು ಸುದೀಪ್ ಮನೆಗೆ ಹೋಗಿದ್ದರು ಎಂಬುದು ಬಳಿಕ ತಿಳಿದುಬಂತು.

ಒಟ್ಟಾರೆ ಬಿಗ್​​ಬಾಸ್​​ ರೇಸಿನಲ್ಲಿ ಗಿಲ್ಲಿ ಮತ್ತು ಅಶ್ವಿನಿ ನಡುವೆ ಬಹಳ ಕಠಿಣವಾದ ಸ್ಪರ್ಧೆ ಇದೆ. ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಭಾನುವಾರ ಗೊತ್ತಾಗಲಿದೆ. ಈಗಿರುವ ಟ್ರೆಂಡ್ ಪ್ರಕಾರ ಗಿಲ್ಲಿ ನಟ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಅಂದಹಾಗೆ ಸ್ವತಃ ರೂಪೇಶ್ ರಾಜಣ್ಣ ಅವರೇ ಗಿಲ್ಲಿಯ ಫ್ಯಾನ್ ಫಾಲೋವಿಂಗ್ ನೋಡಿ ಮೆಚ್ಚಿ ಪೋಸ್ಟ್ ಹಾಕಿದ್ದಾರೆ. ಈ ಬಾರಿ ಗಿಲ್ಲಿ ಗೆಲ್ಲಬಹುದೆಂಬ ಆಶಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾದಪ್ಪನ ಭಕ್ತರಿಗೂ ಚಿರತೆ ಕಾಟ: ರಸ್ತೆಯ ಬದಿಯೇ‌ ಸೇತುವೆ ಮೇಲೆ ಕುಳಿತ ಚಿರತೆ! ಪಾದಯಾತ್ರೆ ಬರುವ ಭಕ್ತರೇ ಎಚ್ಚರ – Kannada News | Leopard Scare for Male Mahadeshwara Devotees: Big Cat Spotted Sitting on Bridge Along Pilgrimage Route

ಚಾಮರಾಜನಗರ, ಜನವರಿ 16: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಆಗಮಿಸುವ ಮಾದಪ್ಪನ ಭಕ್ತರಲ್ಲಿ ಚಿರತೆ ಭೀತಿ ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ. ರಸ್ತೆಯ ಬದಿಯಲ್ಲೇ ಇರುವ ಸೇತುವೆ ಮೇಲೆ ಚಿರತೆ ಗಂಟೆಗಟ್ಟಲೆ ಕುಳಿತಿದೆ ಎನ್ನಲಾಗಿದೆ. ಚಿರತೆ ರಸ್ತೆ ಬದಿ ಇರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಕಾಣಿಸಿರುವುದರಿಂದಾಗಿ ಇದೀಗ ಪಾದಯಾತ್ರೆ ಮೂಲಕ ಸಾಗುತ್ತಿದ್ದ ಭಕ್ತರು ಭಯಭೀತರಾಗಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲೇ ಆಗಮಿಸುವುದರಿಂದ ಎಚ್ಚರ ವಹಿಸಲೇಬೇಕಾದ ಸನ್ನಿವೇಶ ಎದುರಾಗಿದೆ.

ತಾಳಬೆಟ್ಟ ಮಾರ್ಗವು ಭಕ್ತರ ಪಾದಯಾತ್ರೆಗೆ ಪ್ರಮುಖ ದಾರಿಯಾಗಿದ್ದು, ಚಿರತೆ ಕಾಣಿಸಿಕೊಂಡ ಬಳಿಕ ಭಕ್ತರು ಭಯದಲ್ಲಿ ಸಾಗುವಂತಾಗಿದೆ. ವಿಶೇಷವಾಗಿ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಅಪಾಯ ಹೆಚ್ಚಿರುವುದರಿಂದ, ಮಕ್ಕಳು, ವೃದ್ಧರು ಹಾಗೂ ಮಹಿಳಾ ಭಕ್ತರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಭಕ್ತರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಅಲ್ಲದೆ, ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಗೆ ಮನವಿ ಸಲ್ಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿಲ್ಲ ಸುಧಾರಣೆ! – Kannada News | Bangalore Air Pollution Crisis: Bengaluru’s Air quality is poor, need precautions

ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿಲ್ಲ ಸುಧಾರಣೆ!

ಬೆಂಗಳೂರು, ಜನವರಿ 16: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ ಎಂದೆನಿಸಿದರೂ ಇಂದಿನ ಸೂಚ್ಯಂಕ ನೋಡಿದರೆ ಮತ್ತೊಮ್ಮೆ ನಗರದ ಗಾಳಿಯ ಗುಣಮಟ್ಟ ಹದಗೆಟ್ಟಂತಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ 170 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್​, ವೈಟ್​ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.

ಇಂದು ಬೆಂಗಳೂರಿನ PM2.5 82 ಮತ್ತು PM10 108 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು-167
  • ಮೈಸೂರು – 89
  • ಬೆಳಗಾವಿ – 128
  • ಕಲಬುರ್ಗಿ-68
  • ಶಿವಮೊಗ್ಗ – 138
  • ಬಳ್ಳಾರಿ – 168
  • ಹುಬ್ಬಳ್ಳಿ- 93
  • ಉಡುಪಿ –162
  • ವಿಜಯಪುರ –69

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸುಪ್ರೀಂಕೋರ್ಟ್​​ನಲ್ಲಿ ‘ಜನ ನಾಯಗನ್’ಗೆ ಹಿನ್ನಡೆ, ಚೆಂಡು ಮತ್ತೆ ಹೈಕೋರ್ಟ್ ಅಂಗಳಕ್ಕೆ – Kannada News | Jana Nayagan vs CBFC: Supreme Court says matter should resolve in High court

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ಸದ್ಯಕ್ಕೆ ದೊರಕುವ ಹಾಗೆ ಕಾಣುತ್ತಿಲ್ಲ. ವಿಜಯ್ ಸಿನಿಮಾ ಜನವರಿ 09 ರಂದು ಬಿಡುಡಗೆ ಆಗಬೇಕಿತ್ತು ಆದರೆ ಸಿಬಿಎಫ್​​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಿಲ್ಲ. ಇದರಿಂದ ಸಿಟ್ಟಾದ ನಿರ್ಮಾಣ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್, ಮೊದಲಿಗೆ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿತಾದರೂ ಕೇವಲ ಕೆಲವೇ ಗಂಟೆಗಳಲ್ಲಿ ತಮ್ಮದೇ ಆದೇಶಕ್ಕೆ ತಡೆ ನೀಡಿತು. ಬಳಿಕ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಆದರೆ ಅಲ್ಲಿಯೂ ಸಹ ಸಿನಿಮಾಕ್ಕೆ ಬೇಕಾದ ನ್ಯಾಯ ಧಕ್ಕಿಲ್ಲ.

ಶೀಘ್ರವೇ ಪ್ರಮಾಣ ಪತ್ರ ಕೊಡಿಸುವಂತೆ ನಿರ್ಮಾಪಕರು ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಕರಣವನ್ನು ಮದ್ರಾಸ್ ಹೈಕೋರ್ಟ್​​ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದೆ. ಅಲ್ಲದೆ, ಈ ಅರ್ಜಿಯ ವಿಚಾರಣೆಯ ಅವಶ್ಯಕತೆ ಅಥವಾ ಆಸಕ್ತಿ ಇಲ್ಲ ಎಂದು ಸುಪ್ರೀಂಕೋರ್ಟ್, ಅರ್ಜಿದಾರರಿಗೆ ಹೇಳಿದೆ. ಆ ಮೂಲಕ ಪ್ರಕರಣ ಮತ್ತೆ ಮದ್ರಾಸ್ ಹೈಕೋರ್ಟ್​​ಗೆ ಬಂದು ತಲುಪಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೊದಲು ಪ್ರಮಾಣ ಪತ್ರ ನೀಡುವಂತೆ ಆದೇಶಿಸಿ ಬಳಿಕ ಕೆಲವೇ ಗಂಟೆಗಳಲ್ಲಿ ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಇದರಿಂದಾಗಿ ಚಿತ್ರತಂಡಕ್ಕೆ ಹೈಕೋರ್ಟ್​​ ಆದೇಶದ ಮೇಲೆ ಅಸಮಾಧಾನ ಮೂಡಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ ಸುಪ್ರೀಂಕೋರ್ಟ್ ಸಹ ಮತ್ತೆ ಹೈಕೋರ್ಟ್​​ಗೆ ಹೋಗಲು ತಿಳಿಸಿರುವುದು ಚಿತ್ರತಂಡಕ್ಕೆ ಇಕ್ಕಟ್ಟಾಗಿ ಪರಿಣಮಿಸಿದೆ.

ಇದನ್ನೂ ಓದಿ:‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ

ಈ ಹಿಂದೆ ಪ್ರಮಾಣ ಪತ್ರ ಆದೇಶಕ್ಕೆ ತಡೆ ನೀಡಿದ್ದ ಮದ್ರಾಸ್ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 23ರಂದು ಮಾಡುವುದಾಗಿ ಹೇಳಿತ್ತು. ಈಗ ಸುಪ್ರೀಂಕೋರ್ಟ್​​ಗೆ ಹೋಗಿ ಬಂದರೂ ಸಹ ಪ್ರಕರಣದ ಮುಂದಿನ ವಿಚಾರಣೆ 23 ರಂದೇ ನಡೆಯಲಿದ್ದು, ಅಂದು ಸಹ ಪ್ರಕರಣದ ವಿಷಯವಾಗಿ ಆದೇಶ ಹೊರಬೀಳುವುದು ಅನುಮಾನವೇ ಆಗಿದೆ.

ಇನ್ನು ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆ ಆಗಲಿದೆ. ಒಂದೊಮ್ಮೆ ಚುನಾವಣೆ ಘೋಷಣೆ ಆದರೆ ಸ್ವತಃ ಈ ಬಾರಿ ಚುನಾವಣಾ ಸ್ಪರ್ಧಿ ಆಗಿರುವ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗದೇ ಇರಬಹುದು. ಸಿನಿಮಾ ಬಿಡುಗಡೆ ಆಗಬಾರದೆಂದೇ ಕೆಲವರು ಪಿತೂರಿ ಮಾಡಿ ಹೀಗೆ ಮಾಡುತ್ತಿದ್ದಾರೆ ಎಂಬ ಅನುಮಾನಗಳು ಸಹ ವಿಜಯ್ ಅಭಿಮಾನಿಗಳಿಗೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:10 am, Fri, 16 January 26

Source link

Video: ಪೂಂಚ್​ನಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ವಾರದಲ್ಲಿ ಮೂರನೇ ಘಟನೆ – Kannada News | Third Drone Sighting Raises Concern in Jammu and Kashmir’s Poonch Region

ಶ್ರೀನಗರ,ಜನವರಿ 16: ಜಮ್ಮು ಮತ್ತು ಕಾಶ್ಮೀರದ ಪೂಂಚ್​ನಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ವಾರದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ನಂತರವೂ ಇಂಥಾ ಘಟನೆಗಳು ಮುಂದುವರೆದಿವೆ. ಮೊದಲು ಡ್ರೋನ್​ಗಳು ಪತ್ತೆಯಾದಾಗ ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMOಗಳು) ಉನ್ನತ ಮಟ್ಟದ ಮಾತುಕತೆ ನಡೆಸಿದ್ದರು.ಭಾರತವು ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಮುಂಬರುವ ಗಣರಾಜ್ಯೋತ್ಸವದ ಆಚರಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸಶಸ್ತ್ರ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಹೆಚ್ಚಿನ ಕಟ್ಟೆಚ್ಚರವಹಿಸಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಡೊನಾಲ್ಡ್​ ಟ್ರಂಪ್​ಗೆ ಸಿಕ್ಕೇ ಬಿಡ್ತು ನೊಬೆಲ್ ಶಾಂತಿ ಪುರಸ್ಕಾರ – Kannada News | Donald Trump’s Symbolic Nobel Peace Prize: Machado’s Political Move for Venezuela

ವಾಷಿಂಗ್ಟನ್, ಜನವರಿ 16: ಕೊನೆಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​ಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಬಿಟ್ಟಿದೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗೌರವ ಸೂಚಕವಾಗಿ ಪ್ರದಾನ ಮಾಡಿದ್ದಾರೆ.

ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ಅಧ್ಯಕ್ಷ ಟ್ರಂಪ್‌ಗೆ ಪುರಸ್ಕಾರ ಪ್ರಧಾನ ಮಾಡಿರುವುದಾಗಿ ಹೇಳಿದರು. ಟ್ರಂಪ್ ಅದನ್ನು ಸ್ವೀಕರಿಸಿದ್ದಾರೆಯೇ ಎಂದು ಅವರು ಹೇಳಲಿಲ್ಲ. ಈ ವಿಷಯದ ಕುರಿತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಮಚಾದೊ ನಿರಾಕರಿಸಿದರು. ವೆನೆಜುವೆಲಾದ ಸ್ವಾತಂತ್ರ್ಯಕ್ಕೆ ಅವರ ವಿಶೇಷ ಕೊಡುಗೆಗಾಗಿ ಪುರಸ್ಕಾರವನ್ನು ಅವರಿಗೆ ಅರ್ಪಿಸಿದ್ದೇನೆ ಎಂದಷ್ಟೇ ಹೇಳಿದ್ದಾರೆ.

ಮಚಾದೊ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಶ್ವೇತಭವನದಲ್ಲಿ ಬಿಟ್ಟು ಹೋಗಿದ್ದಾರೆ. ಮೂಲಗಳು ಹೇಳುವಂತೆ ಪದಕವು ಪ್ರಸ್ತುತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿ ಇದೆ ಮತ್ತು ಟ್ರಂಪ್ ಅದನ್ನು ಇಟ್ಟುಕೊಂಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇದೇ ನೊಬೆಲ್ ಪ್ರಶಸ್ತಿಯು ಒಮ್ಮೆ ಮಚಾದೊ ಮತ್ತು ಟ್ರಂಪ್ ನಡುವಿನ ಸಂಬಂಧದಲ್ಲಿ ಪ್ರಮುಖ ಉದ್ವಿಗ್ನತೆಗೆ ಕಾರಣವಾಗಿತ್ತು.

2025ರಲ್ಲಿ ಮಚಾದೊಗೆ ಈ ಗೌರವ ನೀಡಲಾಗಿತ್ತು. ಟ್ರಂಪ್ ಈ ಪ್ರಶಸ್ತಿಯನ್ನು ಬಹಳ ಹಿಂದಿನಿಂದಲೂ ಬಯಸಿದ್ದರು ಮತ್ತು ಮಚಾದೊ ಅವರ ಸ್ವೀಕಾರವು ಅವರನ್ನು ವೈಯಕ್ತಿಕವಾಗಿ ನೋಯಿಸಿದೆ ಎಂದು ಶ್ವೇತಭವನಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿದ್ದವು. ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ, ಟ್ರಂಪ್  ಮಚಾದೊ ಅವರಿಂದ ದೂರವಾಗಿದ್ದರು.

ಮತ್ತಷ್ಟು ಓದಿ: 8 ಯುದ್ಧ ನಿಲ್ಲಿಸಿದರೂ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಕೈ ತಪ್ಪಿದ್ದೇಕೆ?; ಇಲ್ಲಿವೆ 4 ಕಾರಣ

ಆದ್ದರಿಂದ, ನೊಬೆಲ್ ಪದಕ ಪ್ರದಾನವನ್ನು ಕೇವಲ ಗೌರವವಾಗಿ ನೋಡಲಾಗುವುದಿಲ್ಲ, ಆದರೆ ಟ್ರಂಪ್ ಅವರನ್ನು ಸಮಾಧಾನಪಡಿಸಲು ಮತ್ತು ಅಮೆರಿಕದ ಬೆಂಬಲವನ್ನು ಬಲಪಡಿಸಲು ಉದ್ದೇಶಪೂರ್ವಕ ರಾಜಕೀಯ ನಡೆ ಎಂದು ನೋಡಲಾಗುತ್ತಿದೆ.

ನಾರ್ವೇಜಿಯನ್ ನೊಬೆಲ್ ಸಂಸ್ಥೆಯು ಪ್ರಶಸ್ತಿಯ ಹಣವನ್ನು ವಿಜೇತರು ಬಯಸುವವರೊಂದಿಗೆ ಮಾತ್ರ ಹಂಚಿಕೊಳ್ಳಬಹುದು ಆದರೆ ಬಹುಮಾನವನ್ನು ಬೇರೆಯವರೊಂದಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಂಚಿಕೊಳ್ಳುವುದಾಗಿ ಕೆಲವು ದಿನಗಳ ಹಿಂದೆ ವಾಗ್ದಾನ ಮಾಡಿದ್ದರು.

ನೊಬೆಲ್ ಶಾಂತಿ ಪುರಸ್ಕಾರ ಪಡೆಯುವುದು ಟ್ರಂಪ್​ರ ಹೆಬ್ಬಯಕೆ
ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಪ್ರಶಸ್ತಿಯನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ನೊಬೆಲ್ ಸಮಿತಿ ಹೇಳಿಕೊಂಡಿದೆ. ಶ್ವೇತಭವನದಲ್ಲಿ ನಡೆದ ಸಭೆಯ ನಂತರ ಯುಎಸ್ ಕ್ಯಾಪಿಟಲ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದೇನೆ ಎಂದು ಹೇಳಿದರು.

ಟ್ರಂಪ್ ಹೇಳಿದ್ದೇನು?
ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗಲು ತಮಗೆ ಸಿಕ್ಕ ದೊಡ್ಡ ಗೌರವ ಎಂದು ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಉತ್ತಮ ಕೆಲಸಕ್ಕಾಗಿ ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದಾರೆ ಎಂದು ಟ್ರಂಪ್ ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ – Kannada News | Bengaluru temperature: Dry Weather Persists allover the state including Bengaluru

ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ

ಬೆಂಗಳೂರು, ಜನವರಿ 16: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಒಣ ಹವೆಯ ವಾತಾವರಣವಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿ

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version