ರೈತರಿಗೂ ತಟ್ಟಿದ್ದ ಯುದ್ಧದ ಬಿಸಿ: ಗಗನಕ್ಕೇರಿದ್ದ ತರಕಾರಿ ದರದಲ್ಲಿ ಭಾರೀ ಕುಸಿತ
ಚಿಕ್ಕಬಳ್ಳಾಪುರ, ಏಪ್ರಿಲ್ 03: ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹೋಟೆಲ್‍ಗಳು ಬಂದ್ ಆಗಿವೆ. ಇತ್ತ ಚಿಕ್ಕಬಳ್ಳಾಪುರದಲ್ಲೂ ಗ್ಯಾಸ್ ಅಭಾವ ಮುಂದುವರೆದಿದೆ. ಹೋಟೆಲ್‍ಗಳು ಬಂದ್ ಆಗುತ್ತಿವೆ. ಹೀಗಾಗಿ ಸದ್ಯ ನಗರದಲ್ಲಿ ತರಕಾರಿಗೆ (vegetable) ಬೆಲೆ ಇಲ್ಲದಂತಾಗಿದ್ದು, ರಾಶಿ-ರಾಶಿ ತರಕಾರಿ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿವೆ. ಚಿಕ್ಕಬಳ್ಳಾಪುರದಲ್ಲಿ ತರಕಾರಿಗಿಲ್ಲ ಬೆಲೆ ಚಿಕ್ಕಬಳ್ಳಾಪುರ ಹೂವು, ಹಣ್ಣು, ತರಕಾರಿಗೆ ಖ್ಯಾತಿ ಪಡೆದಿದೆ. ಅಲ್ಲಿ ಬೆಳೆಯುವ ತರಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಿಗೆ ದಿನನಿತ್ಯ ರಫ್ತಾಗುತ್ತದೆ. ಆದರೆ…