ದೆಹಲಿ, ಏಪ್ರಿಲ್ 03: ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯ ಎಂದರೆ ಉದ್ಯೋಗಿಗಳಿಗೆ ಟಾರ್ಗೆಟ್ ಮುಗಿಸುವ ಒತ್ತಡವಿರುತ್ತದೆ. ಆದರೆ ದೆಹಲಿಯ ಈ ಏಜೆನ್ಸಿ ಬಾಸ್ ಮಾತ್ರ ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಮತ್ತು ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ಅದ್ಭುತ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸವನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ. “ಕಳೆದ ಹಣಕಾಸು ವರ್ಷ ನಮಗೆ ಅದ್ಭುತವಾಗಿತ್ತು. ನಮ್ಮ ತಂಡದ ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಎಲ್ಲರಿಗೂ 4 ದಿನಗಳ ಗೋವಾ ಪ್ರವಾಸವನ್ನು ಆಯೋಜಿಸಲಾಗಿದೆ. ಅಲ್ಲಿ ಎಲ್ಲರೂ ರಿಲ್ಯಾಕ್ಸ್ ಆಗಿ, ಮನಸ್ಸನ್ನು ರಿಸೆಟ್ ಮಾಡಿಕೊಂಡು ಮತ್ತೆ ಹೊಸ ಹುರುಪಿನಿಂದ ಕೆಲಸ ಮುಂದುವರಿಸೋಣ” ಎಂದು ಏಜೆನ್ಸಿ ಮುಖ್ಯಸ್ಥರು ಘೋಷಿಸಿದ್ದಾರೆ. ಕಂಪನಿಯ ಈ ನಿರ್ಧಾರಕ್ಕೆ ಉದ್ಯೋಗಿಗಳು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. “ಇಂತಹ ಬಾಸ್ ಎಲ್ಲರಿಗೂ ಸಿಗಲಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಐಪಿಎಲ್ 2026 (IPL 2026) ರ ಏಳನೇ ಪಂದ್ಯವು ಏಪ್ರಿಲ್ 3 ರ ಶುಕ್ರವಾರದಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (CSK vs PBKS) ನಡುವೆ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಲಿದೆ. ಕಳೆದ ಆವೃತ್ತಿಯಲ್ಲಿ ಈ ಎರಡೂ ತಂಡಗಳ ನಡುವೆ ನಡೆದ 2 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದುಕೊಂಡಿದೆ. ಹೀಗಾಗಿ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ಸಿಎಸ್ಕೆ ಸಿದ್ಧವಾಗಿದೆ. ಆದಾಗ್ಯೂ ಈ ಆವೃತ್ತಿಯಲ್ಲಿ ಸಿಎಸ್ಕೆ ತಂಡಕ್ಕೆ ಗೆಲುವಿನ ಆರಂಭ ಸಿಕ್ಕಿಲ್ಲ ಎಂಬುದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ. ಇತ್ತ ಪಂಜಾಬ್ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಲು ಸಿಎಸ್ಕೆ ಸಾಕಷ್ಟು ಬೆವರು ಹರಿಸಬೇಕಾಗಿದೆ.
ಚಿದಂಬರಂ ಪಿಚ್ ವರದಿ
ಐಪಿಎಲ್ 2026 ರ 7 ನೇ ಪಂದ್ಯವು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಇಲ್ಲಿ ಮೇಲುಗೈ. ಈ ಕ್ರೀಡಾಂಗಣದಲ್ಲಿ ಆಡಿದ ಕಳೆದ 5 ಟಿ20 ಪಂದ್ಯಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ತಂಡವು ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಹೆಡ್-ಟು-ಹೆಡ್ ದಾಖಲೆ
ಉಭಯ ತಂಡಗಳ ನಡುವೆ ಇದುವರೆಗೆ 32 ಪಂದ್ಯಗಳು ನಡೆದಿವೆ. ಈ ಮುಖಾಮುಖಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿವೆ. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ಕೂಡ 16 ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಮುನ್ನಡೆ ಸಾಧಿಸಲಿದೆ.
ಸಂಭಾವ್ಯ ಪ್ಲೇಯಿಂಗ್ 11
ಸಿಎಸ್ಕೆ ತಂಡದಲ್ಲಿ 2 ಬದಲಾವಣೆ?
ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಸಿಎಸ್ಕೆ ಇಂದಿನ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಗಾಯದಿಂದಾಗಿ ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಈ ಪಂದ್ಯದಲ್ಲಿ ಆಡಬಹುದು. ಹಾಗೆಯೇ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಆಯುಷ್ ಮ್ಹಾತ್ರೆ ಬದಲಿಗೆ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಆಡಿಸಬಹುದು.
ನವದೆಹಲಿ, ಏಪ್ರಿಲ್ 03: ಭಾರತ ಸರ್ಕಾರವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಭಾರತವು ಅಮೆರಿಕದ ಆದೇಶ ಪಾಲಿಸುವ ದೇಶವಲ್ಲ ಎಂದಿರುವ ವಿಶ್ವಸಂಸ್ಥೆಯ ಮಾಜಿ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿದ್ದಾರೆ. ಭಾರತವು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅವಿಧೇಯತೆ ತೋರಿದ ನಿದರ್ಶನಗಳ ದೀರ್ಘ ಪಟ್ಟಿಯೇ ಇದೆ ಎಂದು ಅವರು ಹೇಳಿದರು.
ಭಾರತ ಅಮೆರಿಕವನ್ನು ಅನುಸರಿಸುತ್ತಿದೆ ಎನ್ನುವ ಆರೋಪಗಳು ಕೂಡ ಆಧಾರ ರಹಿತ, ಡೊನಾಲ್ಡ್ ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದಾರೆ, ಪಾಕಿಸ್ತಾನ ಸೇರಿಕೊಂಡಿದೆ, ಭಾರತ ಸೇರಿಕೊಂಡಿಲ್ಲ ಯಾಕೆಂದರೆ ಅದು ನಿಜವಾದ ಅಂತಾರಾಷ್ಟ್ರೀಯ ಸಂಘಟನೆಯಲ್ಲ ಎಂದು ನಮಗೆ ತಿಳಿದಿದೆ ಎಂದರು.ಭಾರತದಲ್ಲಿನ ವಿರೋಧ ಪಕ್ಷವು ಆಗಾಗ ಸರ್ಕಾರವನ್ನು ಟೀಕಿಸಿದೆ ಮತ್ತು ಅದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಹಲವಾರು ಸಂದರ್ಭಗಳಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು.ಭಾರತವು ತಮ್ಮ ಮೂಲಕ ಇರಾನ್ ಜೊತೆ ಮಾತುಕತೆ ನಡೆಸಬೇಕೆಂದು ಅಮೆರಿಕ ಬಯಸಿತ್ತು, ನಾವು ಮಾಡಲಿಲ್ಲ, ಉಕ್ರೇನ್ ಸಮಯದಲ್ಲಿ ಭಾರತವು ಅಮೆರಿಕದ ಪರವಾಗಿ ಮತ ಚಲಾಯಿಸಬೇಕೆಂದು ಅಮೆರಿಕ ಬಯಸಿತ್ತು . ನಾವು ಮಾಡಲಿಲ್ಲ. ಭಾರತವು ಅಮೆರಿಕದ ಆದೇಶಗಳನ್ನು ಪಾಲಿಸುವ ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ, ಏ.3: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಗ್ರಾಹಕಿಯ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ. ಅಯೋಧ್ಯೆಯ ಜನನಿಬಿಡ ಪ್ರದೇಶದಲ್ಲಿರುವ ಆಭರಣದ ಅಂಗಡಿಯೊಂದಕ್ಕೆ ಬಂದ ಮಹಿಳೆ, ಆಭರಣಗಳನ್ನು ಖರೀದಿಸುವ ನೆಪದಲ್ಲಿ ಒಳಬಂದಿದ್ದಾಳೆ. ಅಂಗಡಿಯವರು ಆಭರಣಗಳನ್ನು ತೋರಿಸುತ್ತಿದ್ದಾಗ ಸಮಯ ಸಾಧಿಸಿದ ಆಕೆ, ಸುಮಾರು 26 ಗ್ರಾಂ ತೂಕದ ಚಿನ್ನದ ಸರ ಮತ್ತು ನೆಕ್ಲೇಸ್ ಅನ್ನು ತನ್ನೊಂದಿಗೆ ತಂದಿದ್ದ ಬಟ್ಟೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಕಳುವಾದ ಈ ಆಭರಣಗಳ ಮೌಲ್ಯ ಸುಮಾರು 3,80,000 ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅಂಗಡಿಯಿಂದ ಹೊರಬಂದ ತಕ್ಷಣವೇ ಹತ್ತಿರದಲ್ಲೇ ಬೈಕ್‌ನೊಂದಿಗೆ ಕಾಯುತ್ತಿದ್ದ ತನ್ನ ಸಹಚರನ ಜೊತೆಗೂಡಿ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕೃತ್ಯದ ದೃಶ್ಯಗಳು ಸೆರೆಯಾಗಿವೆ.
ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘ತನಾಜಿ: ದಿ ಅನ್ಸಂಗ್ ವಾರಿಯರ್’ ಮೂಲಕ ನಟ ಅಜಯ್ ದೇವಗನ್ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು. ಆ ಸಿನಿಮಾಗೆ ನಿರ್ದೇಶಕ ಓಂ ರಾವುತ್ (Om Raut) ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಈಗ ಓಂ ರಾವುತ್ ಮತ್ತು ಅಜಯ್ ದೇವಗನ್ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿತ್ತು. ಆದರೆ, ಈ ವರದಿಗಳ ಬಗ್ಗೆ ಈಗ ಅಜಯ್ ದೇವಗನ್ (Ajay Devgn) ಅವರ ಕಡೆಯಿಂದ ಅಧಿಕೃತ ಸ್ಪಷ್ಟನೆ ಬಂದಿದೆ.
ಕೇಳಿಬಂದ ವದಂತಿಗಳಿಗೆ ಅಜಯ್ ದೇವಗನ್ ಪರ ವಕ್ತಾರರು ತೆರೆ ಎಳೆದಿದ್ದಾರೆ. ಅಜಯ್ ದೇವಗನ್ ಮತ್ತು ಓಂ ರಾವುತ್ ಮತ್ತೊಂದು ಐತಿಹಾಸಿಕ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ ಎಂಬ ವರದಿಗಳನ್ನು ನಟನ ತಂಡ ಸಂಪೂರ್ಣವಾಗಿ ನಿರಾಕರಿಸಿದೆ. ಈ ಬಗ್ಗೆ ‘ಅಜಯ್ ದೇವಗನ್ ಫಿಲ್ಮ್ಸ್’ ವಕ್ತಾರರು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಅಜಯ್ ದೇವಗನ್ ಮತ್ತು ಓಂ ರಾವುತ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಚರ್ಚೆಗಳು ಅಥವಾ ಸಹಯೋಗಗಳು ನಡೆಯುತ್ತಿಲ್ಲ. ಈ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ. ಅಜಯ್ ಮತ್ತು ಓಂ ರಾವುತ್ ಇಬ್ಬರೂ ಪ್ರಸ್ತುತ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ‘ದೃಶ್ಯಂ 3’ ಮೇಲೆ ಅಜಯ್ ದೇವಗನ್ ಅವರು ಗಮನ ಹರಿಸಿದ್ದಾರೆ. ಅಜಯ್ ದೇವಗನ್ ಕಳೆದ ವರ್ಷ ‘ದೇ ದೇ ಪ್ಯಾರ್ ದೇ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.
ಮುಂಬೈ, ಏಪ್ರಿಲ್ 3: ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿದ್ದು ಜಾಗತಿಕ ತೈಲ ಬಿಕ್ಕಟ್ಟು ಸ್ಥಿತಿ ಉದ್ಭವವಾಗಿದೆ. ಇದು ಹೆಚ್ಚು ಕಾಲ ಹೀಗೇ ಮುಂದುವರಿದರೆ ಜಾಗತಿಕ ಆರ್ಥಿಕ ಹಿಂಜರಿತ ಶುರುವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಭಾರತದ ಆರ್ಥಿಕತೆಯೂ ಈ ಪರಿಣಾಮದಿಂದ ಹೊರತಾಗಿರುವುದಿಲ್ಲ. ಕೇರ್ ಎಡ್ಜ್ ರೇಟಿಂಗ್ಸ್ (CareEdge Ratings) ವರದಿ ಪ್ರಕಾರ ದೀರ್ಘಾವಧಿ ತೈಲ ಬಿಕ್ಕಟ್ಟಿನಿಂದ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಮಂದಗೊಳ್ಳಬಹುದು ಮತ್ತು ಹಣದುಬ್ಬರ ಹೆಚ್ಚಬಹುದು.
ಕಚ್ಛಾ ತೈಲ ಬೆಲೆ 2026-27ರ ವರ್ಷದಲ್ಲಿ ಒಂದು ಬ್ಯಾರಲ್ಗೆ ಸರಾಸರಿ 100 ಡಾಲರ್ ಬೆಲೆ ಇದ್ದರೆ ಭಾರತದ ಆರ್ಥಿಕ ಬೆಳವಣಿಗೆ ಶೇ. 6.5 ಮಾತ್ರವೇ ಇರಬಹುದು ಎಂದು ಈ ಏಜೆನ್ಸಿ ಹೇಳುತ್ತದೆ. ಕಳೆದ ನಾಲ್ಕೈದು ಕ್ವಾರ್ಟರ್ಗಳಿಂದ ಭಾರತದ ಜಿಡಿಪಿ ಗಮನಾರ್ಹ ವೇಗದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ 2026-27ರ ವರ್ಷದಲ್ಲೂ ಜಿಡಿಪಿ ದರ ಶೇ. 7 ಅನ್ನು ಸುಲಭವಾಗಿ ದಾಟುವ ನಿರೀಕ್ಷೆ ಇತ್ತು. ಆದರೆ, ಈಗ ಇರಾನ್ ಯುದ್ಧವು ಭಾರತದ ಬೆಳವಣಿಗೆಯ ಕಥೆಗೆ ಹಿನ್ನಡೆ ತಂದಿದೆ.
ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 60-70 ಡಾಲರ್ ಇದ್ದಾಗ ಭಾರತದ ಜಿಡಿಪಿ ಬೆಳವಣಿಗೆ 2026-27ರಲ್ಲಿ ಶೇ. 7.2ರಷ್ಟಾಗಬಹುದು ಎನ್ನುವ ಅಂದಾಜು ಇತ್ತು. ತೈಲ ಬೆಲೆ 90 ಡಾಲರ್ ಇದ್ದರೆ ಜಿಡಿಪಿ ದರ ಶೇ. 6.7ಕ್ಕೆ ಇಳಿಯಬಹುದು. 100 ಡಾಲರ್ ಬೆಲೆ ಇದ್ದಾಗ ಶೇ. 6.5, ಮತ್ತು 110 ಡಾಲರ್ ಬೆಲೆ ಇದ್ದಾಗ ಶೇ. 6.1 ಬೆಳವಣಿಗೆ ಮಾತ್ರವೇ ದಾಖಲಾಗಬಹುದು. ಒಂದು ವೇಳೆ, ಸರಾಸರಿ ತೈಲ ಬೆಲೆ 120 ಡಾಲರ್ ಇದ್ದು ಬಿಟ್ಟರೆ ಭಾರತದ ಆರ್ಥಿಕತೆ ಶೇ. 6 ಅಥವಾ ಅದಕ್ಕಿಂತಲೂ ಕಡಿಮೆ ಆದರೂ ಆದೀತು.
ಹಣದುಬ್ಬರವೂ ಸತತ ಏರಿಕೆ ನಿರೀಕ್ಷೆ
ತೈಲ ಬೆಲೆ ಹೆಚ್ಚಿದಂತೆ ಪೆಟ್ರೋಲ್, ಡೀಸಲ್, ಎಲ್ಪಿಜಿ ಇತ್ಯಾದಿ ಪೆಟ್ರೋಲಿಯಂ ಮತ್ತು ಗ್ಯಾಸ್ ಉತ್ಪನ್ನಗಳ ಬೆಲೆಯೂ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಬೇರೆ ಹಲವು ಸರಕುಗಳ ಬೆಲೆಗಳೂ ಏರಿಕೆ ಆಗುತ್ತವೆ. ಇದರಿಂದ ಹಣದುಬ್ಬರ ಹೆಚ್ಚುತ್ತದೆ.
ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 60-70 ಡಾಲರ್ ಇದ್ದಾಗ ಭಾರತದ 2026-27ರ ಹಣದುಬ್ಬರ ಶೇ. 4.3 ಇರುವ ಅಂದಾಜಿತ್ತು. ತೈಲ ಬೆಲೆ 100 ಡಾಲರ್ ಇದ್ದರೆ ಹಣದುಬ್ಬರ ಶೇ. 5 ದಾಟುವ ಸಾಧ್ಯತೆ ಇದೆ. ಹಾಗೆಯೇ, ತೈಲ ಬೆಲೆ 120 ಡಾಲರ್ನಷ್ಟು ಇದ್ದರೆ ಹಣದುಬ್ಬರ ಶೇ. 6.5ರ ಆಸುಪಾಸು ಇರಬಹುದು ಎಂದು ಹೇಳಲಾಗುತ್ತಿದೆ.
ಹುಬ್ಬಳ್ಳಿ, (ಏಪ್ರಿಲ್ 03): ಛೋಟಾ ಬಾಂಬೆ ಎಂದೇ ಹೆಸರುವಾಸಿಯಾರುವ ಹುಬ್ಬಳ್ಳಿಯಲ್ಲಿ (Hubbli) ಮತ್ತೊಂದು ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್, ಹಿಂದೂ ಯುವತಿಯನ್ನು ಪರಿಚಯಿಸಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾನೆಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಈ ಸಂಬಂಧ ಹಿಂದು ಕಾರ್ಯಕರ್ತರು ಸಮೀರ್ ನನ್ನು ಹಿಡಿದು ಹಳೇ ಹುಬ್ಬಳ್ಳಿ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ನಗರದ ವಿಕಾಸ ನಗರದ ಯುವತಿಯನ್ನು ಸಮೀರ್ ಜಿಮ್ ನಲ್ಲಿ ಪರಿಚಯಿಸಿಕೊಂಡಿದ್ದು, ಬಳಿಕ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.
ಕುವೈತ್, ಏಪ್ರಿಲ್ 3: ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಧ್ವಂಸಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರವಾದ ಮಿನಾ ಅಲ್-ಅಹ್ಮದಿ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಡ್ರೋನ್ ದಾಳಿಯ ನಂತರ ಕುವೈತ್‌ನ ರಾಷ್ಟ್ರೀಯ ತೈಲ ಕಂಪನಿ ಮಿನಾ ಅಲ್-ಅಹ್ಮದಿ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ (KPC) ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದ್ದು, ಇದರ ಪರಿಣಾಮವಾಗಿ ಹಲವಾರು ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್‌ನ ಅಧಿಕೃತ ಸುದ್ದಿ ಸಂಸ್ಥೆ KUNA ವರದಿ ಮಾಡಿದೆ. ಸದ್ಯಕ್ಕೆ ಯಾವುದೇ ಗಾಯಗಳು ವರದಿಯಾಗಿಲ್ಲ. ಕಾರ್ಮಿಕರ ಸುರಕ್ಷತೆ ಮತ್ತು ಸೌಲಭ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹೂಜ ಇತ್ತೀಚೆಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ. ಹೀಗಿರುವಾಗಲೇ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಸೋನಂ ಕಪೂರ್ ಅವರು ಮಾರ್ಚ್ 29ರಂದು ಗಂಡುಮಗುವಿಗೆ ಜನ್ಮನೀಡಿದರು. ಈಗ ಮಗುವಿನ ಜೊತೆ ಇರುವ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಮಗುವನ್ನು ಬಿಗಿದಪ್ಪಿದ್ದಾರೆ.
ಮತ್ತೊಂದು ಫೋಟೋದಲ್ಲಿ ಅವರು ಆಹಾರ ಸೇವನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅವರ ಕೈಗೆ ಬ್ಯಾಂಡೇಜ್ ಮಾದರಿಯ ವಸ್ತುವನ್ನು ಹಾಕಲಾಗಿದೆ. ಅವರು ಆಹಾರ ಸೇವನೆ ಮಾಡುತ್ತಿದ್ದಾರೆ.
ಸೋನಂ ಕಪೂರ್ ಅವರ ಮಗು ಜನಿಸಿದ್ದು ಎಚ್ಎನ್ ರಿಲೈನ್ಸ್ ಆಸ್ಪತ್ರೆಯಲ್ಲಿ. ಇದನ್ನು ನಿರ್ಮಾಣ ಮಾಡಿದ್ದು ಅಂಬಾನಿ ಕುಟುಂಬದವರು. ಹೀಗಾಗಿ, ನೀತಾ ಅಂಬಾನಿಗೆ ಸೋನಂ ಕಪೂರ್ ಧನ್ಯವಾದ ಹೇಳಿದ್ದಾರೆ.
ಸೋನಂ ಕಪೂರ್ ಅವರು 2018ರಲ್ಲಿ ಆನಂದ್ ಜೊತೆ ಸೋನಂ ಕಪೂರ್ ಮದುವೆ ಆದರು. ಆನಂದ್ ಅವರು ಲಂಡನ್ನಲ್ಲಿ ದೊಡ್ಡ ಬಿಸ್ನೆಸ್ಮೆನ್. ಈ ದಂಪತಿಗೆ 2022ರಲ್ಲಿ ಗಂಡು ಮಗು ಜನಿಸಿತು. ಮಗನಿಗೆ ವಾಯು ಎಂದು ಹೆಸರು ಇಟ್ಟಿದ್ದಾರೆ.
ಶಿವಮೊಗ್ಗ, ಏಪ್ರಿಲ್ 03: ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ವೇತಾ(30) ಮೃತಳಾಗಿದ್ದು, ಮಾ.29ರಂದು ಹೊಡಬಟ್ಟೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಪೋಷಕರು ಮಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೀಗ ಮೃತಪಟ್ಟಿದ್ದಾರೆ.
ಪ್ರಕರಣ ಸಂಬಂಧ ನಾಲ್ವರ ಬಂಧನ
ಸ್ಟಾಫ್ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್, ದಿವ್ಯಾ ಬಂಧಿತ ಆರೋಪಿಗಳಾಗಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರ ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ.
ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ನಮ್ಮ ಮಗಳು ಸಾಯುವಂತಹ ಹೇಡಿಯಲ್ಲ. ಮನೆಯ ಜಾಗದ ವಿಚಾರಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದರು. ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಮೇಲಿನ ಪ್ರೀತಿಗೆ ಹೀಗೆ ಮಾಡಿದ್ದಾರೆ. ಆಕೆಯ ಜೊತೆ ಜಗಳವಾಡಿ ಮನೆಬಿಟ್ಟು ಹೋಗುವಂತೆ ಚಿತ್ರಹಿಂಸೆ ನೀಡಿದ್ದರು. ಈಗ ಅವರೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಗಳ ಶವದ ಮುಂದೆ ಆಕ್ರಂದನ ವ್ಯಕ್ತಪಡಿಸಿರುವ ಪೋಷಕರು ಗರ್ಭಿಣಿ ಮಗಳ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ.