ರಾಜ್ಕೋಟ್, ಏಪ್ರಿಲ್ 03: ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ರಾಜ್ಕೋಟ್ ಜಿಲ್ಲೆಯ ಕೊಟ್ಡಾ ಸಂಗನಿ ಬಳಿಯ ವೆರಾವಲ್ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿ ಸ್ಕೂಟಿಯಲ್ಲಿ ಬಂದು ನಿಲ್ಲುತ್ತಿದ್ದಂತೆ ಎದುರಿನಿಂದ ಬಂದ ಗೂಳಿ ಏಕಾಏಕಿ ದಾಳಿ ನಡೆದಿದೆ. ಗಾಡಿಯಿಂದ ನೆಲದ ಮೇಲೆ ಆತನನ್ನು ಬೀಳಿಸಿ ತುಳಿದಿದೆ. ಆಗ ಅಲ್ಲೇ ಹತ್ತಿರದಲ್ಲಿದ್ದ ಮತ್ತೊಂದು ಗೂಳಿ ಆತನನ್ನು ಉಳಿಸಲು ಸಹಾಯ ಮಾಡಿದೆ. ಹತ್ತಿರ ಇದ್ದವರು ಹೇಗೋ ಮಾಡಿ ಆತನನ್ನು ಗೂಳಿಯಿಂದ ಕಾಪಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅವರ ಸ್ಥಿತಿ ಗಂಭೀರವಾಗಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಮಾರ್ಚ್ 19ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.ಪ್ರೇಕ್ಷಕರು ಮೂರು ತಿಂಗಳಿನಿಂದ ಈ ರಣವೀರ್ ಸಿಂಗ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 5ರಂದು ಬಿಡುಗಡೆಯಾಯಿತು. ‘ಧುರಂಧರ್ 2’ ಘೋಷಣೆಯಾದಾಗ, ಇತರ ಎಲ್ಲಾ ನಿರ್ಮಾಪಕರು ಹಿಂದೆ ಸರಿಯಲು ನಿರ್ಧರಿಸಿದರು. ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಅನೇಕ ದೊಡ್ಡ ಚಿತ್ರಗಳು ಮೇ ಅಥವಾ ಜೂನ್‌ಗೆ ಮುಂದೂಡಲ್ಪಟ್ಟಿವೆ.
ಅಕ್ಷಯ್ ಕುಮಾರ್ ಅವರ ‘ಭೂತ್ ಬಾಂಗ್ಲಾ’ ಚಿತ್ರ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಏಪ್ರಿಲ್‌ಗೆ ಮುಂದೂಡಲಾಗಿತ್ತು. ಇತರ ಚಿತ್ರಗಳ ಜೊತೆ ಘರ್ಷಣೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ಇದರ ಉದ್ದೇಶ. ಈ ಚಿತ್ರ ಏಪ್ರಿಲ್ 16ರಂದು ಬಿಡುಗಡೆ ಆಗಲಿದೆ.
ಸಲ್ಮಾನ್ ಖಾನ್ ಅವರ ‘ಮಾತೃಭೂಮಿ’ ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗಬೇಕಿತ್ತು. ಈಗ ಸಿನಿಮಾ ಮೇ 15ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರ ಹಿಂದಿನ ಇನ್ನೊಂದು ಕಾರಣವೆಂದರೆ, ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ಪ್ರಶಾಂತ್ ಅವರ ಮರಣದಿಂದಾಗಿ, ಕೆಲವು ಚಿತ್ರೀಕರಣಗಳು ಅಪೂರ್ಣವಾಗಿ ಉಳಿದಿವೆ. ಆದ್ದರಿಂದ, ಅದರ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ.
‘ಭೂತ್ ಬಾಂಗ್ಲಾ’ ಮತ್ತು ‘ಮಾತೃಭೂಮಿ’ ಜೊತೆಗೆ, ದಕ್ಷಿಣದ ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅಭಿನಯದ ‘ಪೇಟ್ರಿಯಾಟ್’ ಚಿತ್ರ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು. ಈ ಚಿತ್ರದ ದಿನಾಂಕವನ್ನೂ ಮುಂದೂಡಲಾಗಿದೆ. ಈಗ ಚಿತ್ರವು ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ಮಮ್ಮುಟ್ಟಿ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಇದರ ಜೊತೆಗೆ, ‘ದೃಶ್ಯಂ 3’ ಮತ್ತು ‘ಪೆದ್ದಿ’ ನಂತಹ ಚಿತ್ರಗಳ ಬಿಡುಗಡೆ ದಿನಾಂಕವನ್ನು ಸಹ ಮುಂದೂಡಲಾಗಿದೆ.
‘ಕೆಜಿಎಫ್’ ಖ್ಯಾತಿಯ ಯಶ್ ನಟಿಸಿರುವ ‘ಟಾಕ್ಸಿಕ್’ ಮಾರ್ಚ್ 19 ರಂದು ‘ಧುರಂದರ್ 2’ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಎರಡೂ ಚಿತ್ರಗಳ ನಡುವೆ ದೊಡ್ಡ ಬಾಕ್ಸ್ ಆಫೀಸ್ ಘರ್ಷಣೆ ನಡೆಯಲಿದೆ ಎಂಬ ಊಹಾಪೋಹವಿತ್ತು. ಆದರೆ ಇರಾನ್-ಇಸ್ರೇಲ್ ಯುದ್ಧದಿಂದಾಗಿ ‘ಟಾಕ್ಸಿಕ್’ ಬಿಡುಗಡೆಯನ್ನು ಅಂತಿಮವಾಗಿ ಮುಂದೂಡಲಾಯಿತು. ಈಗ, ಚಿತ್ರವು ಜೂನ್ 4, 2026 ರಂದು ಬಿಡುಗಡೆಯಾಗಲಿದೆ.
ಅಮೃತಧಾರೆ (Amruthadhaare) ಧಾರವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಅಲೋಚನೆ ಆಗಿತ್ತು ಮತ್ತು ಆ ಆಲೋಚನೆ ತಪ್ಪಾಯಿತು. ಇದು ಅವನಿಗೆ ತಿರುಮಂತ್ರವಾಗಿದೆ ಎಂದರೂ ತಪ್ಪಾಗಲಾರದು. ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಂಡು ಸಾಗಲು ರೆಡಿ ಆಗಿದೆ. ಆ ಬಗ್ಗೆ ಇಲ್ಲಿ ನೋಡೋಣ.
ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಆಲೋಚನೆ ಆಗಿತ್ತು. ಇದಕ್ಕಾಗಿ ಸುನೀಲ್ ಎಂಬ ವ್ಯಕ್ತಿಯನ್ನು ಮುಂದಕ್ಕೆ ಬಿಡಲಾಯಿತು. ಆತ ಮೋಸ ಮಾಡುವ ಆಲೋಚನೆಯಲ್ಲಿ ಬಂದಿದ್ದ. ಆದರೆ, ಮಲ್ಲಿ ಮೇಲೆ ನಿಜವಾದ ಪ್ರೀತಿ ಆಯಿತು. ಹೀಗಾಗಿ, ಜಯದೇವ್ಗೆ ಮೋಸ ಮಾಡುವ ನಿರ್ಧಾರಕ್ಕೆ ಬಂದನು.
ಮದುವೆ ಮನೆಯಿಂದ ಅರ್ಧಕ್ಕೆ ಓಡಿ ಬರುವಂತೆ ಜಯದೇವ್ ಹೇಳಿದ್ದ. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಸುನೀಲ್. ಆದರೆ, ಹಾಗಾಗಲಿಲ್ಲ. ಆತ ಮದುವೆ ಆಗುವ ನಿರ್ಧಾರಕ್ಕೆ ಬಂದ. ಆಗಲೂ ಆತ ಸಬೂಬು ನೀಡಿದನು. ನಾನು ಮದುವೆ ಆಗುತ್ತೇನೆ ಮತ್ತು ಆ ಬಳಿಕ ಅವಳನ್ನು ಬಿಟ್ಟು ಹೋಗುತ್ತೇನೆ ಎಂದು ಆತ ಹೇಳಿದ್ದ. ಅಂತೆಯೇ ಮದುವೆ ಆದ. ಆ ಬಳಿಕ ಮಲ್ಲಿ ಜೊತೆ ಜಯದೇವ್ ಮನೆಗೆ ಬಂದ. ಇದರಿಂದ ಖುಷಿಯಾದ ಜಯದೇವ್ ಆಕೆಗೆ ಬಾಯಿಗೆ ಬಂದಂತೆ ಬೈದ. ಇದೆಲ್ಲ ನಂದೇ ಪ್ಲ್ಯಾನ್ ಎಂದು ಹೆಮ್ಮೆಯಿಂದ ಬೀಗಿದ.
ಆದರೆ ಕೊನೆಗೆ ಮೋಸ ಹೋಗಿದ್ದು ತಾನೇ ಎಂಬುದು ಆತನಿಗೆ ಗೊತ್ತಾಗಿದೆ. ನಿಜವಾಗಿ ನಡೆದಿದ್ದು ಏನು ಎಂಬುದನ್ನು ವಿವರಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆತ ಶಾಕ್ ಆಗಿದ್ದಾನೆ. ಇದೇ ವೇಳೆ ಮಲ್ಲಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಆಕೆ ಸಿವಿಲ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆ. ಅಂದರೆ ಇನ್ನು ಆಕೆ ಸರ್ಕಾರಿ ನೌಕರಿಯಲ್ಲಿ ಇರುವವಳು. ಇಷ್ಟು ದಿನ ಆಕೆಯ ಮೇಲೆ ಸ್ಕೆಚ್ ಹಾಕಿದಾಗ ಆಕೆ ಸಾಮಾನ್ಯ ವ್ಯಕ್ತಿ ಆಗಿದ್ದಳು. ಆದರೆ, ಈಗ ಆಕೆ ಸರ್ಕಾರಿ ನೌಕರಳಾದ್ದರಿಂದ ಆಕೆಯನ್ನು ಮುಟ್ಟಲು ಬಂದರೆ ಜಯದೇವ್ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇದರಿಂದ ಆತನ ಬಾಳಲ್ಲಿ ಕತ್ತಲು ಬರಲಿದೆ.
ಗದಗ, ಏಪ್ರಿಲ್ 3: ಜಿಲ್ಲೆಯಲ್ಲಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದ್ದು, ಸರಣಿ ಕಳ್ಳತನದ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ನಗರದ ಪುಟ್ಟರಾಜ್ ನಗರ ಮತ್ತು ಕೇಶವ್ ಪಾರ್ಕ್ ಪ್ರದೇಶದಲ್ಲಿ ನಡುರಾತ್ರಿ ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ಐವರು ಮುಸುಕುಧಾರಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಎಂಬುವವರು ಜನ್ಮದಿನದ ಕಾರ್ಯಕ್ರಮಕ್ಕೆ ತಂದೆಯ ಮನೆಗೆ ಹೋಗಿದ್ದ ವೇಳೆ, ಕಳ್ಳರು ಮನೆಯ ಬೀಗ ಮುರಿದು ಸುಮಾರು 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾತ್ರಿ 8 ಗಂಟೆಯಾಗುತ್ತಿದ್ದಂತೆ ಜನ ಹೊರಬರಲು ಹೆದರುತ್ತಿದ್ದು, ಕೂಡಲೇ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿಲ್ಲಿ ಬೇಡಿ ನೀರನ್ನು ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಬಿಸಿಲಲ್ಲಿ ಓಡಿ ಚಿಪ್ಸ್ ಹಾಗೂ ನೀರನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದಿರುವುದನ್ನು ಕಾಣಬಹುದು, ಮತ್ತೊಂದು ಕಡೆಯಿಂದ ಬಾಲಕ ಕೈಯಲ್ಲಿ ಬಾಟಲಿ ಹಿಡಿದು ಓಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಅದನ್ನು ನೋಡಿ ವಿಡಿಯೋ ಮಾಡುತ್ತಿದ್ದ ಜನ ಯಾರೂ ಆತನ ಸಹಾಯಕ್ಕೆ ಬರಲಿಲ್ಲ.
ಟೆಹ್ರಾನ್, ಏಪ್ರಿಲ್ 3: ಇಸ್ರೇಲ್-ಅಮೆರಿಕವು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್ನ ಅಲ್ಬೋರ್ಜ್ ಪ್ರಾಂತ್ಯದಲ್ಲಿ ಅಮೆಡರಿಕ-ಇಸ್ರೇಲಿ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಿಂದ ಗಣನೀಯ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾತನಾಡಿದ್ದರು.
ಇರಾನ್ ಮೇಲಿನ ದಾಳಿ ಮುಂದುವರೆಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಹಾರ್ಮುಜ್ ಜಲಸಂಧಿಯಿಂದ ತಮಗೇನು ಉಪಯೋಗವಿಲ್ಲ, ನಮ್ಮ ಹಡಗುಗಳೇನು ಅಲ್ಲಿಂದ ಬರುವುದಿಲ್ಲ, ನಮ್ಮಲ್ಲೇ ಬೇಕಾದಷ್ಟು ತೈಲ ಇದೆ, ನೀವೇ ಬೇಕಿದ್ದರೆ ನಮ್ಮಿಂದ ತೈಲ ಖರೀದಿಸಿ ಎಂದು ಬೇರೆ ದೇಶಗಳಿಗೆ ಸಲಹೆ ನೀಡಿದ್ದರು. ಇದಾದ ಬಳಿಕ ಅಮೆರಿಕ-ಇಸ್ರೇಲ್ ಜಂಟಿಯಾಗಿ ತಮ್ಮ ದಾಳಿಯನ್ನು ಮುಂದುವರೆಸಿವೆ.
ಅಂಜಿಕ್ಯ ರಹಾನೆ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ಈ ಐಪಿಎಲ್ ಸೀಸನ್ ಅಲ್ಲಿ ಸತತ ಎರಡನೇ ಸೋಲು ಕಂಡಿದೆ. ಇದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಎರಡು ಸೋಲು ತಂಡದವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಹಾನೆ ಅವರಿಂದ ನಿರೀಕ್ಷಿತ ಮಟ್ಟದ ಆಟ ಬಂದಿಲ್ಲ. ಅವರು 10 ಬಾಲ್ಗಳಿಗೆ 8 ರನ್ ಹೊಡೆಯಲಷ್ಟೇ ಶಕ್ಯರಾದರು. ಈ ಕಾರಣಕ್ಕೆ ಅವರನ್ನು ಟೀಕೆ ಮಾಡಲಾಗುತ್ತಿದೆ. ಆದರೆ, ಈ ಟೀಕೆಯನ್ನು ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ.
‘2023ರಿಂದ ಇಲ್ಲಿಯವರೆಗೆ ನಾನು ಅತ್ಯುತ್ತಮ ಸ್ಟ್ರೈಕ್ ರೇಟ್ ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಮಾತನಾಡುತ್ತಿರುವವರು ಬಹುಶಃ ನನ್ನ ಆಟವನ್ನು ನೋಡುತ್ತಿಲ್ಲ. ನನ್ನ ವಿರುದ್ಧ ಅವರಿಗೆ ನಿರ್ದಿಷ್ಟ ಅಜೆಂಡಾ ಇದೆ. ನಾನು ಆಡುವುದನ್ನು ಅವರು ಇಷ್ಟಪಡುವುದಿಲ್ಲ. ನಾನು ಆಡುವುದನ್ನು ನೋಡಲು ಅವರಿಗೆ ಆಗುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು ರಹಾನೆ.
‘ನನಗೆ ಸಿಕ್ಕಿರುವ ಯಶಸ್ಸಿನ ಪ್ರಮಾಣ ನೋಡಿ ಕೆಲವರಿಗೆ ನನ್ನ ಮೇಲೆ ಅಸೂಯೆ ಮೂಡಿರಬಹುದು. ನನಗೆ ಹೆಚ್ಚು ಚಿಂತೆ ಇಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ನಿಮಗೆಲ್ಲಾ ಗೊತ್ತು. ಒಂದೇ ಒಂದು ಕೆಟ್ಟ ಇನ್ನಿಂಗ್ಸ್.. ಕೆಟ್ಟ ಇನ್ನಿಂಗ್ಸ್ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಆಡಬೇಕು ಎಂಬುದು ನನಗೂ ಇತ್ತು. ಆದರೆ, ಕೆಲವೊಮ್ಮೆ ಬ್ಯಾಟ್ಸ್‌ಮನ್ ಆಗಿ ನಿಮಗೆ ಆ ಲಯ ಸಿಗುವುದಿಲ್ಲ. ಮಾತನಾಡುತ್ತಿರುವ ಜನರಿಗೆ, ಒಂದೋ ಅವರಿಗೆ ಆಟ ಅರ್ಥವಾಗುವುದಿಲ್ಲ ಅಥವಾ ಅವರು ನಾನು ಬೇರೆ ರೀತಿಯ ಇನ್ನಿಂಗ್ಸ್ ಆಡಬೇಕೆಂದು ಬಯಸುತ್ತಾರೆ’ ಎಂದು ಕೋಪಗೊಂಡರು.
‘ಅಜಿಂಕ್ಯ ರಹಾನೆ ತನ್ನನ್ನು ಹಾಗೂ ತನ್ನ ಆಟವನ್ನು ಈ ಮಟ್ಟಕ್ಕೆ ಸಾಬೀತುಪಡಿಸುತ್ತಾರೆಂದು ಅವರು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಅವರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿ ಇದೆ. ಅದು ನಕಾರಾತ್ಮಕವಾಗಿರಲಿ ಅಥವಾ ಸಕಾರಾತ್ಮಕವಾಗಿರಲಿ. ಅವರು ಮಾತನಾಡಲಿ’ ಎಂದು ತಮ್ಮ ಮಾತುಗಳಲ್ಲೇ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಹೈದರಾಬಾದ್ ನೀಡಿದ 227 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಕೆಕೆಆರ್ ಕೇವಲ 161 ರನ್ಗಳನ್ನು ಗಳಿಸಲಷ್ಟೇ ಶಕ್ಯವಾಯಿತು. 120 ರನ್ಗಳಿಗೆ ತಂಡ 3 ವಿಕೆಟ್ ನಷ್ಟ ಅನುಭವಿಸಿತ್ತು. ಬಳಿಕ 41 ರನ್ ಗಳಿಸುವಷ್ಟರಲ್ಲಿ ಆಲ್ಔಟ್ ಆಯಿತು.
ಬೆಂಗಳೂರು, ಏಪ್ರಿಲ್ 03: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ (Weather Forecast) ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ವಿಜಯಪುರ, ಬಾಗಲಕೋಟೆ, ಕಲ್ಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.
ಹಮೀರ್ಪುರ, ಏಪ್ರಿಲ್ 03: ಪತ್ನಿ(Wife) ಜತೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು, ಕೆನ್ನೆ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಈ ದಾಳಿಯಲ್ಲಿ ಮೂಗಿನ ಮಾಂಸವೆಲ್ಲಾ ಕಿತ್ತು ಬಂದಿದೆ, ಕೆನ್ನೆಗಳ ಮೇಲೂ ಕೂಡ ಆಳವಾದ ಗಾಯಗಳಾಗಿವೆ.
ಆರಂಭದಲ್ಲಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ಮುಖದ ಮೇಲೆ ಹತ್ತು ಗಾಯಗಳನ್ನು ಹೊಲಿಗೆ ಹಾಕಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಪನಾ, ಫೂಲ್ ಅವರನ್ನು ಮದುವೆಯಾಗಿ ಹಲವು ವರ್ಷಗಳಾಗಿವೆ.
ಆಕೆಯ ಸಹೋದರನ ಪ್ರಕಾರ, ದಂಪತಿ ಆಗಾಗ ಜಗಳವಾಡುತ್ತಿದ್ದರು ಮತ್ತು ಘಟನೆಯ ರಾತ್ರಿ, ಅಂತಹ ಒಂದು ವಿವಾದವು ಕ್ರೂರ ಹಲ್ಲೆಗೆ ಕಾರಣವಾಯಿತು. ಆಕೆಯ ಮೂಗಿಗೆ ಆಗಿರುವ ಗಾಯದ ಪ್ರಮಾಣವನ್ನು ಪರಿಗಣಿಸಿ, ವೈದ್ಯರು ಆಕೆಯ ಮುಖ ಮೊದಲಿನಂತಾಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಪ್ರಸ್ತುತ ಪರಾರಿಯಾಗಿದ್ದು, ಆತನನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗಳ ನಿಖರ ಅನುಕ್ರಮ ಮತ್ತು ಕೌಟುಂಬಿಕ ಹಿಂಸಾಚಾರದ ಯಾವುದೇ ಹಿಂದಿನ ಇತಿಹಾಸವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ, ವೈದ್ಯರು ಆಕೆಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಬಹುನಿರೀಕ್ಷಿತ ‘ರಾಮಾಯಣ’ ಟೀಸರ್ (Ramayana Teaser) ಹನುಮ ಜಯಂತಿ ಪ್ರಯುಕ್ತ ಏಪ್ರಿಲ್ 2ರಂದು ರಿಲೀಸ್ ಆಯಿತು. ಸಿನಿಮಾದ ಬಜೆಟ್ 2 ಸಾವಿರ ಕೋಟಿ ರೂಪಾಯಿ, 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ಹೇಳಲಾಗಿದೆ. ಈ ಕಾರಣದಿಂದಲೇ ಸಿನಮಾದ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜನರು ಸಿನಿಮಾದಿಂದ ದೊಡ್ಡದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಟೀಸರ್ ನೋಡಿದ ಬಳಿಕ ಸಾಕಷ್ಟು ಟೀಕೆ ಎದುರಾಗಿದೆ. ಟೀಸರ್ನಲ್ಲಿರುವ ಎರಡು ದೊಡ್ಡ ತಪ್ಪನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ.
ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಎಂದಾಗ ಅದಕ್ಕೆ ಅಷ್ಟೇ ಸಿದ್ಧತೆ ಬೇಕಾಗುತ್ತದೆ. ನಿರ್ದೇಶಕರು ಸಾಕಷ್ಟು ಮುಂದಾಲೋಚನೆ ಹೊಂದಿರಬೇಕಾಗುತ್ತದೆ. ಸಣ್ಣ ಸಣ್ಣ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅಲ್ಲಿಯೂ ಜನರು ತಪ್ಪು ಕಂಡು ಹಿಡಿಯುತ್ತಾರೆ. ಆದಿತ್ಯ ಧಾರ್ ಅವರ ‘ಧುರಂಧರ್ 2’ ಚಿತ್ರವನ್ನು ಜನರು ಹೊಗಳಿದ್ದರು. ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್ ಎಂದು ಬೆನ್ನು ತಟ್ಟಿದ್ದರು. ಆದರೆ, ಸಿನಿಮಾದಲ್ಲಿರುವ ತಪ್ಪುಗಳನ್ನು ಕೆಲವರು ಎತ್ತಿ ತೋರಿಸಿದ್ದರು. ಈಗ ‘ರಾಮಾಯಣ’ ಟೀಸರ್ ಅಲ್ಲೇ ಕೆಲವು ತಪ್ಪು ಕಂಡು ಹಿಡಿದಿದ್ದು, ಇದಕ್ಕೆ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ. ಇದನ್ನೂ ಓದಿ: ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು
ರಾಮ ಜನರ ಮಧ್ಯೆ ನಡೆದುಕೊಂಡು ಬರುವ ದೃಶ್ಯವಿದೆ. ಆಗ ಬಾಲಕನೋರ್ವ ನಮಸ್ಕರಿಸುತ್ತಾನೆ. ರಾಮ ಸ್ವಲ್ಪ ಮುಂದೆ ಹೋದರೆ ಇದೇ ಬಾಲಕ ರಾಮನಿಗೆ ಹೂವನ್ನು ಹಾಕುತ್ತಾ ಇರುತ್ತಾನೆ. ಇದು ದೊಡ್ಡ ತಪ್ಪುಗಳಲ್ಲಿ ಒಂದು. ಇದನ್ನು ಎಐ ಅಲ್ಲಿ ಮಾಡಿರಬಹುದು ಅಥವಾ ಆ ಬಾಲಕನ್ನನ್ನೇ ಮತ್ತೆ ಬಳಸಿಕೊಂಡಿರಬಹುದು ಎಂದು ಊಹಿಸಲಾಗಿದೆ.
They are claiming that Ramayana is being made on a budget of ₹4000 crore, but from the first look, it feels heavily AI-driven.
DNEG is a VFX company, not a direction studio. What truly makes a film successful is direction. Nitesh Tiwari’s biggest success is Dangal (Dangal is… https://t.co/9PEQSQ8kXspic.twitter.com/CLu51szx5t
ಇನ್ನು, ಮತ್ತೂ ಒಂದು ತಪ್ಪನ್ನು ಎತ್ತಿ ತೋರಿಸಲಾಗಿದೆ. ರಾಮ ಯುದ್ಧಕ್ಕೆ ಸಿದ್ಧನಾಗಿ ನಿಂತಿರುತ್ತಾನೆ. ಎದುರಿನವರ ಮೇಲೆ ಬಾಣ ಹೂಡಲು ರೆಡಿ ಆಗಿರುತ್ತಾನೆ. ಆದರೆ, ಆತನ ಸೈನಿಕರು ಮಾತ್ರ ಇನ್ಯಾವುದೋ ಕಡೆ ನೋಡುತ್ತಾ ನಿಂತಿದ್ದಾರೆ. ಇದು ಎಐನಿಂದ ಮಾಡಿದ ಫೋಟೋ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿ ಕಾಣಿಸಿದೆ.