ಅಭಿಮಾನಿಗಳು ಒದ್ದೆ ಆಗ್ತಿರೋದನ್ನು ನೋಡಿ ತಾವೂ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್ – Kannada News | Kiccha Sudeep Drenches in Rain for Fans at Ramanagara Karaga Event
ಕಿಚ್ಚ ಸುದೀಪ್ ಅವರಿಗೆ (Kichcha Sudeep) ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ. ರಾಮನಗರ ಕರಗ ಉತ್ಸವಕ್ಕೆ ಸುದೀಪ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಮಳೆ ಬಂದಿದೆ. ಅಭಿಮಾನಿಗಳ ಜೊತೆ ಅವರೂ ಮಳೆಯಲ್ಲಿ ನೆನೆದಿದ್ದಾರೆ. ಸುದೀಪ್ ಅವರು ಕರಗ ಉತ್ಸವದಲ್ಲಿ ಮಾತನಾಡಲು ವೇದಿಕೆ ಏರಿದರು. ಆಗ ಮಳೆ ಬರುತ್ತಾ ಇತ್ತು. ಅವರ ಸಹಾಯಕರು ಇವರಿಗೆ ಛತ್ರಿ ಹಿಡಿದಿದ್ದರು. ‘ಪರವಾಗಿಲ್ಲ ನಾವೂ ಸ್ವಲ್ಪ ಒದ್ದೆ…