ನವದೆಹಲಿ, ಜನವರಿ 15: ಪ್ರಧಾನಿ ನರೇಂದ್ರ ಮೋದಿ ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ನೀಡಿ ಅವುಗಳ ಜತೆ ಸ್ವಲ್ಪ ಸಮಯ ಕಳೆದಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಒಂದು ಸೂಚಕವಾಗಿ ಗೋಸೇವೆಯನ್ನು ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಜನವರಿ 14 ರಂದು ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಗೋ ಸೇವೆ ಮಾಡಿದ್ದರು.
ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲವನ್ನು ಹಂಚುವುದು, ತಿನ್ನುವುದು ಮತ್ತು ಮಕ್ಕಳಿಗೆ ಆರತಿ ಮಾಡುವುದು ಪ್ರಮುಖ ಪದ್ಧತಿಗಳು. ಮನೆಯ ಮುಂದೆ ವಿಧವಿಧವಾದ ರಂಗೋಲಿಗಳನ್ನು ಹಾಕಿ ಮನೆಯನ್ನು ಶುಚಿಗೊಳಿಸಲಾಗುತ್ತದೆ. ಸಂಕ್ರಾಂತಿಯ ಹಿಂದಿನ ದಿನ, ಅಂದರೆ ಜನವರಿ 14 ರಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಬಳಕೆಗೆ ಬಾರದ ವಸ್ತುಗಳನ್ನು ಸುಟ್ಟುಹಾಕಲಾಗುತ್ತದೆ. ಹಳ್ಳಿಗಳಲ್ಲಿ ಕಿಚ್ಚು ಹಾಯಿಸುವುದು ಪದ್ಧತಿಯಿದ್ದು, ಹಸುಗಳನ್ನು ಬೆಂಕಿಯ ಮೇಲೆ ಹಾಯಿಸುತ್ತಾರೆ. ಈ ಆಚರಣೆಗಳಿಗೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿವೆ. ಮಕ್ಕಳ ತಲೆಯ ಮೇಲೆ ಎಳ್ಳು-ಬೆಲ್ಲ, ಹಣ, ಎಳಚಿಕಾಯಿಗಳು ಮತ್ತು ಹಣ್ಣುಗಳನ್ನು ಹಾಕಿ ಆಶೀರ್ವದಿಸುವ ಪದ್ಧತಿಯೂ ಇದೆ. ಈ ಹಬ್ಬವನ್ನು ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.
ಜನವರಿ 15 ರಂದು ಆಚರಣೆಗೆ ಕಾರಣ:
ಜನವರಿ 14, 2026 ರ ಬುಧವಾರ ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಉತ್ತರಾಷಾಢ ನಕ್ಷತ್ರದ ಎರಡನೇ ಪಾದದಲ್ಲಿ ಸೂರ್ಯ ಭಗವಾನರು ಮಕರ ರಾಶಿಗೆ ಸಂಚಾರ ಪ್ರಾರಂಭಿಸುತ್ತಾರೆ. ಸೂರ್ಯೋದಯದ ಸಮಯದಲ್ಲಿ ಈ ಪ್ರಕ್ರಿಯೆ ನಡೆಯದ ಕಾರಣ, ಮಾರನೇ ದಿನ, ಅಂದರೆ ಜನವರಿ 15 ರಂದು ಸಂಕ್ರಾಂತಿ ಆಚರಣೆ ಬಹಳ ಸೂಕ್ತವಾಗಿದೆ.
ಸೂರ್ಯ ಸಿದ್ಧಾಂತದ ಪ್ರಕಾರ, ಸೂರ್ಯ ಭಗವಾನರು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರಯಾಣ ಬೆಳೆಸುತ್ತಾರೆ. ಮಕರದಿಂದ ಕರ್ಕಾಟಕದವರೆಗಿನ ಅವಧಿಯನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. 2026 ರ ಜನವರಿ 15, ಗುರುವಾರದಂದು ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ ಇರುತ್ತದೆ. ಈ ದಿನದಂದು ಆಚರಣೆ ಮಾಡುವುದು ಸೂಕ್ತ ಎಂದು ಪಂಚಾಂಗಗಳು ಹೇಳುತ್ತವೆ.
ಈ ಬಾರಿ ಸಂಕ್ರಾಂತಿಯ ಕುಮಾರಿ ಹೆಸರು ಮಂದಾಕಿನಿ. ಆಕೆ ಚಂದನ ಲೇಪಿತಳಾಗಿ, ಹಸಿರು ವಸ್ತ್ರ ಧರಿಸಿ, ಬೆಳ್ಳಿಯ ಆಭರಣ, ಮುತ್ತುಗಳಿಂದ ಅಲಂಕೃತಳಾಗಿ, ಬಕುಲ ಪುಷ್ಪ ಹಿಡಿದು, ತಾಮ್ರದ ಪಾತ್ರೆಯಲ್ಲಿ ಭಿಕ್ಷೆ ಬೇಡುತ್ತಾ, ಖಡ್ಗ ಹಿಡಿದು, ಹಂದಿಯ ವಾಹನದ ಮೇಲೆ (ಉಪವಾಹನ ಎತ್ತು) ಪ್ರಯಾಣಿಸುತ್ತಾಳೆ. ಹಂದಿ ಮತ್ತು ಎತ್ತು ಸಾತ್ವಿಕತೆಯನ್ನು ಸೂಚಿಸುತ್ತವೆ. ನೈರುತ್ಯ ದಿಕ್ಕಿನಿಂದ ಉತ್ತರಕ್ಕೆ ಪ್ರಯಾಣ ಬೆಳೆಸುವ ಸಂಕ್ರಾಂತಿ ಪುರುಷ ದೇಶದಲ್ಲಿ ಹಲವು ಬದಲಾವಣೆಗಳನ್ನು ತರಬಹುದು.
ಸಂಕ್ರಾಂತಿ ಸುಗ್ಗಿಯ ಕಾಲವಾಗಿದ್ದು, ಎಳ್ಳು-ಬೆಲ್ಲದ ಮೂಲಕ ಸಂಬಂಧಗಳನ್ನು ಬೆಸೆಯುವ, ಸಿಹಿ ತಿಂಡಿಗಳನ್ನು ಸವಿಯುವ ಮತ್ತು ಜಡತ್ವವನ್ನು ಹೋಗಲಾಡಿಸುವ ಕಾಲವಾಗಿದೆ. ಈ ವಿಶೇಷ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಜನವರಿ 15, 2026 ರಂದೇ ಸಂಕ್ರಾಂತಿಯನ್ನು ಆಚರಿಸುವುದು ಸೂಕ್ತ ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ನಿನ್ನೆಯಷ್ಟೆ (ಜನವರಿ 14) ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಧ್ರುವಂತ್ ಎಲಿಮಿನೇಟ್ ಆಗಿದ್ದಾರೆ. ಸದ್ಯಕ್ಕೆ ಅಶ್ವಿನಿ, ಕಾವ್ಯಾ, ರಘು, ಧನುಶ್, ಗಿಲ್ಲಿ ಮತ್ತು ರಕ್ಷಿತಾ ಮಾತ್ರ ಮನೆಯಲ್ಲಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಬಿಗ್ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.
ಛೇ ಇದೇನಿದು ಹುಚ್ಚಾಟ, ರೀಲ್ಸ್ ಹುಚ್ಚಿಗಾಗಿ ಮಹಿಳೆ ತನ್ನ ಮಕ್ಕಳನ್ನೇ ಕಳೆದುಕೊಳ್ಳಬಹುದಿತ್ತು, ಲೈಕ್ಸ್, ಕಮೆಂಟ್ಗಾಗಿ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸಾಹಸ ಮಾಡುವುದು ಎಷ್ಟು ಸರಿ. ರೀಲ್ಸ್ಗಾಗಿ ಮಹಿಳೆ ಬಾವಿಯ ಮೇಲೆ ಮಕ್ಕಳನ್ನು ನಿಲ್ಲಿಸಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೀರೆ ಉಟ್ಟ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಯ ಅಂಚಿನಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಭೋಜ್‌ಪುರಿ ಹಾಡು ಪ್ಲೇ ಆಗುತ್ತಿದ್ದಂತೆ, ಅವರು ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳ ಕೈಗಳನ್ನು ಬಿಡದಿರುವುದು ಆ ಮಕ್ಕಳ ಅದೃಷ್ಟವೇ ಸರಿ.
ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಆತ್ಮಹತ್ಯೆಗೆ ಯತ್ನಿಸಿದ ಯುವತಿ
ರಾಮನಗರ, ಜನವರಿ 15: ರಾಮನಗರದಲ್ಲಿ (Ramanagara) ಪ್ರೇಮ ವೈಫಲ್ಯದಿಂದ ಮನನೊಂದು ಯುವತಿಯೊಬ್ಬಳು ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆ ಸಮೀಪವೇ ಈ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಗಮನಿಸಿದ ಪೊಲೀಸರು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿಯಾಗಿದ್ದಾರೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಕನಕಪುರ ತಾಲ್ಲೂಕಿನ ತೆರಿಗೆದೊಡ್ಡಿ ಗ್ರಾಮದ ಅರುಣ್ ನಾಯ್ಕ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು.
ಪ್ರೀತಿಯ ಹೆಸರಿನಲ್ಲಿ ಅರುಣ್ ನಾಯ್ಕ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದೀಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ರಾಜಿ ಸಂಧಾನಕ್ಕೂ ಪ್ರಯತ್ನ ನಡೆದಿದ್ದರೂ, ಪ್ರೇಮಿ ಸ್ಪಂದಿಸದ ಹಿನ್ನೆಲೆಯಲ್ಲಿ ಯುವತಿ ತೀವ್ರವಾಗಿ ಮನನೊಂದಿದ್ದಾರೆ ಎನ್ನಲಾಗಿದೆ.
ಇದೇ ಕಾರಣದಿಂದ ಬೆಂಗಳೂರಿನಿಂದ ರಾಮನಗರಕ್ಕೆ ಬಂದ ಯುವತಿ ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಪೊಲೀಸರು ತಕ್ಷಣ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಕುಡಿಯುವ ನೀರು ಕೇಳುವ ನೆಪದಲ್ಲಿ ಸರಗಳ್ಳತನ, ಮೂವರು ಆರೋಪಿಗಳ ಬಂಧನ
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕೇಳುವ ನೆಪದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 59 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಎರಡು ಸರಗಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದು ತನಿಖೆಯಿಂದ ಬೆಳಕಿಗೆ ಬಂದಿವೆ. ಮನೆಗಳಿಗೆ ನೀರು ಕೇಳುವ ನೆಪದಲ್ಲಿ ಪ್ರವೇಶಿಸಿ, ಅವಕಾಶ ಕಂಡು ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲೂ ರಿಟೈರ್ಡ್ ಔಟ್ ಸದ್ದು ಮಾಡಿದೆ. ಈ ಬಾರಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮರಳಿದ್ದು ಹರ್ಲೀನ್ ಡಿಯೋಲ್. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 36 ಎಸೆತಗಳನ್ನು ಎದುರಿಸಿದ ಹರ್ಲೀನ್ 7 ಫೋರ್ಗಳೊಂದಿಗೆ 47 ರನ್ ಕಲೆಹಾಕಿದ್ದರು.
ಆದರೆ ಅರ್ಧಶತಕದ ಹೊಸ್ತಿಲಲ್ಲಿದ್ದ ಹರ್ಲೀನ್ ಡಿಯೋಲ್ ಅವರನ್ನು ಯಪಿ ವಾರಿಯರ್ಸ್ ತಂಡದ ಕೋಚ್ ಅಭಿಷೇಕ್ ನಾಯರ್ ವಾಪಸ್ ಕರೆದಿದ್ದಾರೆ. 17ನೇ ಓವರ್ ಮುಕ್ತಾಯದ ಬೆನ್ನಲ್ಲೇ ಹರ್ಲೀನ್ ಅವರನ್ನು ಬ್ಯಾಟಿಂಗ್ ನಿಲ್ಲಿಸಿ ಹಿಂತಿರುಗುವಂತೆ ಸೂಚಿಸಿದರು.
ಈ ವೇಳೆ ಗೊಂದಲಕ್ಕೊಳಗಾದ ಹರ್ಲೀನ್ ಡಿಯೋಲ್ ನಾನಾ ಎಂದು ಕೋಚ್ ಅನ್ನು ಪ್ರಶ್ನಿಸಿದರು. ಹೌದು, ನೀನೇ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲೇ ಹರ್ಲೀನ್ ಡಿಯೋಲ್ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಬಂದಿದ್ದಾರೆ.
ಹರ್ಲೀನ್ ಡಿಯೋಲ್ ವಾಪಸ್ ಬಂದ ಬಳಿಕ ಕೊನೆಯ 3 ಓವರ್ಗಳಲ್ಲಿ ಯುಪಿ ವಾರಿಯರ್ಸ್ ತಂಡ ಕಲೆಹಾಕಿದ್ದು ಕೇವಲ 13 ರನ್ಗಳು ಮಾತ್ರ. ಹೀಗಾಗಿಯೇ ಇದೀಗ ಕೋಚ್ ಅಭಿಷೇಕ್ ನಾಯರ್ ಅವರ ನಡೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 154 ರನ್ಗಳು ಮಾತ್ರ. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿದೆ.
ಚೈತ್ರಾ ಕುಂದಾಪುರ ಅವರು ಸಂಕ್ರಾಂತಿ ಸಂದರ್ಭದಲ್ಲಿ ಹೊಸ ಸುದ್ದಿ ನೀಡಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದಾರೆ. ಇದರ ಮೂಲಕ ಪಾಡ್ಕಾಸ್ಟ್ ನಡೆಸಲಿದ್ದಾರೆ ಎಂಬುದು ವಿಶೇಷ. ಚೈತ್ರಾಗೆ ಈಗಾಗಲೇ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅದನ್ನು ಅವರು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಆಧ್ಯಾತ್ಮ ಸೇರಿದಂತೆ ಹಲವು ವಿಷಯಗಳ ಕುರಿತು ಈ ಪಾಡ್ಕಾಸ್ಟ್ನಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿವಿಧ ಕ್ಷೇತ್ರದವರನ್ನು ಇದರಲ್ಲಿ ಕರೆಸಿ ಮಾತುಕತೆ ನಡೆಸಲು ಅವರು ನಿರ್ಧರಿಸಿದ್ದಾರೆ.
ರಾಯಚೂರು, ಜನವರಿ 15: ರಾಯಚೂರಿನ (Raichur) ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ (49) (Siddaramananda Swamiji) ಅವರು ಹೃದಯಾಘಾತದಿಂದ ಬ್ರಹ್ಮೈಕ್ಯರಾಗಿದ್ದಾರೆ. ಮಂಗಳವಾರ ಮುಂಜಾನೆ ಸುಮಾರು 3.40ರ ವೇಳೆಗೆ ಸ್ವಾಮೀಜಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಲಿಂಗಸೂಗೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಅವರು ನಿಧನರಾದರು.
ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿಯಿರುವ ಕಾಗಿನೆಲೆ ಕನಕ ಗುರುಪೀಠದ ಮೂಲಕ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಿದ್ದರಾಮನಂದ ಸ್ವಾಮೀಜಿ ಸಕ್ರಿಯರಾಗಿದ್ದರು. ಜನವರಿ 12, 13 ಮತ್ತು 14ರಂದು ನಡೆದ ಹಾಲುಮತ ಉತ್ಸವ ಕಾರ್ಯಕ್ರಮಗಳನ್ನು ಅವರು ಸ್ವತಃ ನಡೆಸಿಕೊಟ್ಟಿದ್ದರು.
ಕಳೆದ 2023 ಮತ್ತು 2024ರಲ್ಲಿ ಇದೇ ಮಠದ ಉತ್ಸವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರೊಂದಿಗೆ ಗುರುಪೀಠದ ಆತ್ಮೀಯ ಸಂಪರ್ಕ ಇತ್ತು.
ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಭಾರತೀಯ ಪಿಚ್ನಲ್ಲಿ ಐತಿಹಾಸಿಕ ಸಾಧನೆಯನ್ನು ಸಹ ಮಾಡಿದೆ. ಅಂದರೆ ಇದು ನ್ಯೂಝಿಲೆಂಡ್ ತಂಡದ್ದು ಅಂತಿಂಥ ಗೆಲುವಲ್ಲ.
ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮೈಕೆಲ್ ಬ್ರೇಸ್ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (112) ಅಜೇಯ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.
285 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ನ್ಯೂಝಿಲೆಂಡ್ ಪರ ಡೇರಿಲ್ ಮಿಚೆಲ್ ಅಜೇಯ 131 ರನ್ ಬಾರಿಸಿದರೆ, ವಿಲ್ ಯಂಗ್ 87 ರನ್ಗಳಿಸಿದರು. ಈ ಮೂಲಕ ಕಿವೀಸ್ ಪಡೆ 47.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 286 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಎಂದರೆ ಇದು ಭಾರತದಲ್ಲಿ ನ್ಯೂಝಿಲೆಂಡ್ ತಂಡದ ಗರಿಷ್ಠ ರನ್ ಚೇಸ್ ಆಗಿದೆ. ಅಂದರೆ ಇದಕ್ಕೂ ಮುನ್ನ ಕಿವೀಸ್ ಪಡೆ ಭಾರತೀಯ ಪಿಚ್ನಲ್ಲಿ ಬೆನ್ನತ್ತಿ ಗೆದ್ದ ಗರಿಷ್ಠ ಸ್ಕೋರ್ 283. 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 283 ರನ್ಗಳನ್ನು ಚೇಸ್ ಮಾಡಿರುವುದೇ ಶ್ರೇಷ್ಠ ಸಾಧನೆಯಾಗಿತ್ತು.
ಇದೀಗ ಭಾರತದಲ್ಲಿ ಬಲಿಷ್ಠ ಭಾರತ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಬರೋಬ್ಬರಿ 285 ರನ್ಗಳನ್ನು ಚೇಸ್ ಮಾಡುವ ಮೂಲಕ. ಈ ಚೇಸಿಂಗ್ನೊಂದಿಗೆ ಭಾರತೀಯ ಪಿಚ್ನಲ್ಲಿ ನ್ಯೂಝಿಲೆಂಡ್ ತಂಡವು ತನ್ನ ದಾಖಲೆಯನ್ನು ಪುನರ್ಸ್ಥಾಪಿಸಿದೆ.
ರಾಜೀವ್ ಗೌಡ (ಎಡಚಿತ್ರ) ಹಾಗೂ ಅವರ ವಿರುದ್ಧ ದೂರು ನೀಡುತ್ತಿರುವುದು
ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡಗೆ (Rajeev Gowda) ಈಗ ಎರಡೆರಡು ಸಂಕಷ್ಟ ಎದುರಾಗಿದೆ. ರಾಜೀವ್ ಗೌಡ ವಿರುದ್ಧ ಪೌರಾಯುಕ್ತ ಅಮೃತ ಗೌಡ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ಇದೀಗ ಜೆಡಿಎಸ್ ಮುಖಂಡರು ಕೂಡ ದೂರು ನೀಡಿದ್ದಾರೆ. ಸ್ಥಳೀಯ ಜೆಡಿಎಸ್ ಶಾಸಕ ಬಿಎಂ ರವಿಕುಮಾರ್ ವಿರುದ್ಧವೂ ರಾಜೀವ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಜೆಡಿಎಸ್ ವತಿಯಿಂದ ದೂರು ನೀಡಲಾಗಿದೆ. ಇವುಗಳನ್ನು ಆಧರಿಸಿ ಸದ್ಯ 2 ಎಫ್‌ಐಆರ್‌ಗಳು ದಾಖಲಾಗಿವೆ.
ತಲೆಮರೆಸಿಕೊಂಡಿರುವ ರಾಜೀವ್ ಗೌಡ
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷರರೂ ಆಗಿರುವ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಆರೋಪಿ ರಾಜೀವ್ ಗೌಡ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಫೋನ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ರಾಜೀವ್ ಗೌಡರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ವಿಪಕ್ಷಗಳು, ಪುರಸಭೆ ನೌಕರರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ತೀವ್ರ ಆಗ್ರಹ ವ್ಯಕ್ತವಾಗಿತ್ತು.
ಜನಪ್ರತಿನಿಧಿ ಅಲ್ಲದಿದ್ದರೂ ಆಡಳಿತ ನಡೆಸಲು ಯತ್ನ ಆರೋಪ
ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ದರ್ಬಾರ್ ನಡೆಸಲು ರಾಜೀವ್ ಗೌಡ ಯತ್ನಿಸುತ್ತಿದ್ದಾರೆ. ಯಾರೇ ಅಧಿಕಾರಿಗಳು ಬಂದರೂ ತಮ್ಮ ಸಮ್ಮತಿ ಪಡೆಯುವಂತೆ ಒತ್ತಡ ಹೇರುತ್ತಿದ್ದರು. ವಿವಿಧ ಇಲಾಖೆಗಳಲ್ಲಿ ತಮ್ಮದೇ ಮಾತು ನಡೆಯಬೇಕು ಎಂದು ಒತ್ತಡ ಹೇಳುತ್ತಿದ್ದರು ಎಂಬ ಆರೋಪಗಳು ಕೂಡ ಈಗ ಕೇಳಿ ಬಂದಿವೆ.
ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದ್ದರಿಂದ ಸಿಟ್ಟಾಗಿದ್ದ ರಾಜೀವ್ ಗೌಡ ಪೌರಾಯುಕ್ತೆ ಅಮೃತ ಗೌಡಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲವಾಗಿ ನಿಂದಿಸಿದ್ದಾರು. ಈ ವಿಚಾರವಾಗಿ ಅಮೃತ ಗೌಡ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ, ಪೊಲೀಸರಿಗೂ ದೂರು ನೀಡಿದ್ದರು. ಈ ವಿಚಾರ ನಂತರ ತೀವ್ರ ಸ್ವರೂಪ ಪಡೆದುಕೊಂಡಿತ್ತು.