ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ? ಸಂಶೋಧಕ ಅಪ್ಪಣ್ಣ ಏನು ಹೇಳುತ್ತಾರೆ ನೋಡಿ – Kannada News | Gold Treasure Found: Lakkundi Gold Treasure: Unravelling the 11th 12th Century Mystery

ಗದಗ, ಜನವರಿ 11:  ಐತಿಹಾಸಿಕ ಹಿನ್ನೆಲೆಯ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಬಗ್ಗೆ ಸಂಶೋಧಕ ಅಪ್ಪಣ್ಣ ಹಂಜೆ ಮಹತ್ವದ ಮಾಹಿತಿ ನೀಡಿದ್ದು, ಈ ಚಿನ್ನಾಭರಣಗಳು ಸುಮಾರು 11 ಅಥವಾ 12ನೇ ಶತಮಾನಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಈ ಅಭರಣಗಳ ಸ್ವರೂಪವನ್ನು ಪರಿಶೀಲಿಸಿದಾಗ, ಅವು ಅರಸು ಮನೆತನ ಅಥವಾ ಉನ್ನತ ವರ್ಗಕ್ಕೆ ಸೇರಿದವುಗಳಾಗಿರದೆ, ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ಸುರಕ್ಷತೆಗಾಗಿ ಸಂರಕ್ಷಿಸಿಟ್ಟಿದ್ದಾಗಿ ಕಂಡುಬರುತ್ತದೆ. ಲಕ್ಕುಂಡಿಯ ಹಿಂದಿನ ಸಮೃದ್ಧ ಇತಿಹಾಸ, ಅಲ್ಲಿ ಸಿಕ್ಕಿರುವ 150ಕ್ಕೂ ಹೆಚ್ಚು ಶಾಸನಗಳು, ದೇವಾಲಯಗಳು ಹಾಗೂ ಪುರಾತತ್ವ ಅವಶೇಷಗಳು ಈ ಪ್ರದೇಶದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ನಿಧಿ ಆ ಪ್ರಾಚೀನ ಕಾಲದ ಜೀವನಶೈಲಿ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ ಎಂದು ಸಂಶೋಧಕ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸೋಮನಾಥನ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು, ಆದರೆ ಸೋಮನಾಥ ಅಲ್ಲೇ ನಿಂತಿದ್ದಾನೆ: ಮೋದಿ – Kannada News | Empires Faded, Somnath Endured: Modi Invokes History in Strong Message

ಅಹಮದಾಬಾದ್, ಜನವರಿ 11: ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯ(Somnath Temple)ದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಸಂದಿವೆ.

ಇದೀಗ ಪ್ರಧಾನಿ ಮೋದಿ ಆ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಂದವರು ದಾಳಿ ಮಾಡಿ ಹೋಗಿ ಮಸಣ ಸೇರಿದರು ಆದರೆ ಸೋಮನಾಥ ಮಾತ್ರ ಅಲ್ಲೇ ಹಾಗೆಯೇ ನಿಂತಿದ್ದಾನೆ ಎಂದರು.
ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು. ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಜೀವಿಗಳಲ್ಲಿಯೂ ಶಿವನನ್ನು ನೋಡುವ ಜನರು, ಸೋಮನಾಥ ದೇವಾಲಯದ ಶೌರ್ಯದ ಗಾಥೆ 1000 ವರ್ಷಗಳನ್ನು ಪೂರೈಸಿದ್ದರೆ, ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಪೂರ್ವಜರು ತಮ್ಮ ಭಗವಾನ್ ಶಿವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥದಲ್ಲಿ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿದರು. ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ವಿಧ್ಯುಕ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶೌರ್ಯ ಯಾತ್ರೆಯು ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾದ 108 ಕುದುರೆಗಳನ್ನು ಹೊಂದಿರುವ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು.

ಮತ್ತಷ್ಟು ಓದಿ: ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ

ಇದರ ನಂತರ, ಪ್ರಧಾನಿ ಮೋದಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.

ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಅದೇ ಶಕ್ತಿಗಳು ನಮ್ಮ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಸರ್ದಾರ್ ಪಟೇಲ್ ಸೋಮನಾಥವನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದಾಗ (1951 ರಲ್ಲಿ), ಅವರನ್ನು ತಡೆಯಲು ಪ್ರಯತ್ನಗಳು ನಡೆದವು. ಇಂದೂ ಕೂಡ ನಾವು ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎರಡು ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​ – Kannada News | Meghashree Challenges Husband Manjunaths Allegations in Wilson Garden Case

ಬೆಂಗಳೂರು, ಜನವರಿ 11: ಮಂಜುನಾಥ್​​ ಮತ್ತು ಮೇಘಶ್ರೀ ದಂಪತಿ ನಡುವಿನ ಕಲಹ ತಾರಕಕ್ಕೇರಿದೆ. ಪತಿ ಸೈಕೋ ರೀತಿ ವರ್ತಿಸ್ತಾನೆ ಎಂದು ಮೇಘಶ್ರೀ ಮಾಡಿದ್ದ ಆರೋಪಗಳಿಗೆ ಮಂಜುನಾಥ್​​ ಕೌಂಟರ್​​ ಕೊಟ್ಟಿದ್ದರು. ಆಕೆಗೆ ಅನೇಕ ಮದುವೆಗಳಾಗಿವೆ. ತಾನು ಕೂಡ ಆಕೆಗೆ 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ನೀಡಿರೋದಾಗಿ ತಿಳಿಸಿದ್ದರು. ಆದ್ರೀಗ ಮಂಜುನಾಥ್​​ ಆರೋಪವನ್ನು ಮೇಘಶ್ರೀ ಅಲ್ಲಗಳೆದಿದ್ದಾರೆ. ಮಂಜುನಾಥ್​​ಗೆ ತನ್ನ ಹಿಂದಿನ ಎರಡು ವಿವಾಹ ವಿಚ್ಛೇದನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು ಎಂದಿದ್ದಾರೆ. ಅಲ್ಲದೆ, ಆತ ತನ್ನ ವಿರುದ್ದ ಸುಳ್ಳು ಆರೋಪಗಳನ್ನ ಮಾಡುವುದ ಮುಂದುವರೆಸಿದರೆ ಕ್ರಮ ತೆಗೆದುಕೊಳ್ತೀನಿ.  ಹೆಸರು ಬರೆದಿಟ್ಟು ಮುಂದೆ ಏನ್ ಮಾಡ್ಬೇಕೋ ಯೋಚ್ನೆ ಮಾಡ್ತೀನಿ ಎಂದಿದ್ದಾರೆ. ಜೊತೆಗೆ ಆತನೇ
ತನ್ನಿಂದ ಐದು ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ – Kannada News | Bengaluru godman arrested for selling monitor lizard parts online

ಬೆಂಗಳೂರು, ಜ.11: ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ (Monitor lizard )ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿಗಾಗಿ ವಶೀಕರಣ, ಪ್ರೇಮ ವಿವಾಹದ ಕಲಹಗಳಿಗೆ ಈ ಹಲ್ಲಿಯ ಜನನಾಂಗವನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಮಾಂತ್ರಿಕ ಶಕ್ತಿ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ, ಪ್ರೇಮಿಗಳ ನಡುವಿನ ಘರ್ಷಣೆಯನ್ನು ಪರಿಹರಿಸಬಹುದು ಎಂದು ಹೇಳಿ ಪ್ರತಿ ತುಂಡನ್ನು 10,000 ರೂ.ಗೆ ಮಾರಾಟ ಮಾಡಿದನೆಂದು ವರದಿಯಾಗಿದೆ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ, ಎನ್‌ಜಿಒವೊಂದು ತನಿಖೆ ಮಾಡಲು ವೈಯಕ್ತಿಕ ಸಮಸ್ಯೆ ಎಂದು ನಟಿಸಿ, ಈ ವ್ಯಕ್ತಿಯ ಬಳಿ ಹೋಗಿದ್ದಾರೆ. ಈ ವೇಳೆ ಈ ದೇವಮಾನವನ ಸತ್ಯ ಬಯಲಾಗಿದೆ. ದೇವಮಾನವ ತನ್ನ ವನ್ಯಜೀವಿ ಉತ್ಪನ್ನಗಳ ಸಂಗ್ರಹವನ್ನು ಎನ್‌ಜಿಒ ಪ್ರತಿನಿಧಿಗೆ ತೋರಿಸಿದ್ದಾನೆ. ನಂತರ ಈ ವಿಷಯವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ವರದಿ ಮಾಡಲಾಯಿತು. ನಂತರ ಅವರನ್ನು ದಾಳಿ ಮಾಡಿ, ಸ್ವಯಂ ಘೋಷಿತ ದೇವಮಾನವನ ಬಂಧನ ಮಾಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮೂರ್ತಿ (45) ಎಂದು ಗುರುತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೃದು ಹವಳ ಮತ್ತು ಇತರ ವನ್ಯಜೀವಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದ, ಅದೃಷ್ಟ ಮತ್ತು ಸಮೃದ್ಧಿಗಾಗಿ ಮೃದುವಾದ ಹವಳವನ್ನು ತಾಲಿಸ್ಮನ್ ಆಗಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅನೇಕರು ಇದರ ಮಾರಾಟದ ಹಕ್ಕನ್ನು ಪಡೆದಿದ್ದರು. ಮೂರ್ತಿ ಈ ವನ್ಯಜೀವಿ ಉತ್ಪನ್ನಗಳನ್ನು ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಸಂಪರ್ಕಗಳ ಮೂಲಕ ಪಡೆಯುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಸುಮಾರು 25,000 ಜನ ಈತನ ಭಕ್ತರಾಗಿದ್ದರು. ಅವರಲ್ಲಿ ಹಲವರು ಪ್ರೀತಿ ಅಥವಾ ವೈಯಕ್ತಿಕ ಸಮಸ್ಯೆಗಳಿಗಾಗಿ ಮೂರ್ತಿಯನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಶಾನಿಯ ಆಸೆಯಿಂದ ಬೆತ್ತಲೆಯಾದ ಬೆಂಗಳೂರಿನ ಯುವಕ: ಖಾತೆಯಿಂದ ಹೋಯಿತು ಲಕ್ಷ ಲಕ್ಷ ಹಣ!

ಮೂರ್ತಿ ಆನ್‌ಲೈನ್ ವ್ಯವಹಾರದ ಬಗ್ಗೆ ಎನ್‌ಜಿಒ ಕೇರ್‌ಗೆ ಗುಪ್ತಚರ ಮಾಹಿತಿ ಬಂದ ನಂತರ ಕಾರ್ಯಾಚರಣೆ ಆರಂಭವಾಯಿತು. ಎನ್‌ಜಿಒ ಸದಸ್ಯರೊಬ್ಬರು ಮೂರ್ತಿಯ ಕ್ಲೈಂಟ್‌ನಂತೆ ನಟಿಸಿ ನಂತರ ನಾಗಶೆಟ್ಟಿಹಳ್ಳಿಯಲ್ಲಿರುವ ಮನೆಗೆ ಭೇಟಿ ನೀಡಿ, ನಂತರ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಾರೆ. ದಾಳಿಯ ಸಮಯದಲ್ಲಿ, ಅಧಿಕಾರಿಗಳು 206 ಮಾನಿಟರ್ ಹಲ್ಲಿ ಜನನಾಂಗಗಳು, 1.5 ಕೆಜಿ ಮೃದು ಹವಳ, ಹುಲಿ ಚರ್ಮ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರ್ತಿ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ? ಯಾವ ರಾಶಿಗೆ ಶುಭ, ಯಾರಿಗೆ ಅಶುಭ? – Kannada News | First Solar Eclipse 2026: Date, Zodiac Impacts and Hindu Significance

ಹಿಂದೂ ಧರ್ಮದಲ್ಲಿ ಗ್ರಹಣಗಳಿಗೆ ಸಾಕಷ್ಟು ಆಧ್ಯಾತ್ಮಿಕ ಮಹತ್ವವಿದೆ. ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಜೊತೆಗೆ ಗ್ರಹಣವು 12 ರಾಶಿಗಳ ಪೈಕಿ ಕೆಲವು ರಾಶಿಗೆ ಶುಭವಾದರೆ, ಇನ್ನೂ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ರಾಶಿಗೆ ಶುಭ, ಯಾರಿಗೆ ಅಶುಭ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ?

2026ರ ಮೊದಲ ಸೂರ್ಯ ಗ್ರಹಣವು ಫೆಬ್ರವರಿ 17ರಂದು ಮಂಗಳವಾರ ಬಂದಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, ಈ ಗ್ರಹಣದ ಸೂತಕ ಅವಧಿಯು ಇರುವುದಿಲ್ಲ.

ಮೇಷ ರಾಶಿ:

ಫೆಬ್ರವರಿ 17 ರಂದು, ಮಾಘ ಬಹುಳ ಅಮಾವಾಸ್ಯೆಯ ದಿನದಂದು, ಕುಂಭ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ, ಮೇಷ ರಾಶಿಯ ಜನರು ಮತ್ತು ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಬೇಕು. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆದ್ದರಿಂದ ಗಾಯತ್ರಿ ಮಂತ್ರವನ್ನು ಪಠಿಸಿ.

ಸಿಂಹ ರಾಶಿ:

ವರ್ಷದ ಮೊದಲ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಅಶುಭ. ಈ ರಾಶಿಯ ಅಧಿಪತಿ ಸೂರ್ಯ ದೇವರು. ಆದ್ದರಿಂದ, ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಾಯಕತ್ವ ಕಳೆದುಕೊಳ್ಳಬಹುದು. ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೀನ ರಾಶಿ:

ಮೀನ ರಾಶಿಯವರಿಗೆ ಮೊದಲ ಸೂರ್ಯಗ್ರಹಣ ಅಶುಭ. ಭೂ ವಿವಾದ ಉಂಟಾಗಬಹುದು. ಬಜೆಟ್ ಮೇಲೆ ಪರಿಣಾಮ ಬೀರಬಹುದು. ನೀವು ಉಳಿತಾಯ ಮಾಡಬೇಕು, ಇಲ್ಲದಿದ್ದರೆ ಸಾಲ ಮಾಡಬೇಕಾಗಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ವರ್ಷದ ಮೊದಲ ಸೂರ್ಯಗ್ರಹಣ ಹಲವು ವಿಧಗಳಲ್ಲಿ ಅಶುಭ. ಉದ್ಯೋಗದಲ್ಲಿ ಬದಲಾವಣೆಗಳ ಸೂಚನೆಗಳಿವೆ, ಅಧಿಕಾರಿಗಳೊಂದಿಗೆ ವಾದಗಳು ಉಂಟಾಗಬಹುದು. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.

ವರ್ಷದ ಮೊದಲ ಸೂರ್ಯಗ್ರಹಣ ಈ ರಾಶಿಗೆ ಶುಭ:

ಮಿಥುನ ರಾಶಿ ಮತ್ತು ಮಕರ ರಾಶಿಯವರಿಗೆ ಈ ಸೂರ್ಯಗ್ರಹಣವು ಹಲವು ವಿಧಗಳಲ್ಲಿ ಶುಭಕರವಾಗಿರುತ್ತದೆ. ಪ್ರಯಾಣಕ್ಕೆ ಅವಕಾಶಗಳಿವೆ, ಆದರೆ ಜಾಗರೂಕರಾಗಿರಿ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಈ ಸಮಯ ವ್ಯವಹಾರಕ್ಕೆ ಅನುಕೂಲಕರವಾಗಿರುತ್ತದೆ. ಮಕರ ರಾಶಿಯವರಿಗೆ ಸೂರ್ಯಗ್ರಹಣವು ಹಲವು ವಿಧಗಳಲ್ಲಿ ಶುಭವಾಗಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರು ಆರ್ಥಿಕ ಲಾಭವನ್ನು ಕಾಣುತ್ತಾರೆ. ಖರ್ಚುಗಳು ಹೆಚ್ಚಾಗಿದ್ದರೂ ಹಣದ ಹರಿವಿಗೆ ಕೊರತೆಯಾಗದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:29 pm, Sun, 11 January 26

Source link

ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ; ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ! – Kannada News | Whitefield Girl was Physically assaulted before Murder, Accused Has Prior POCSO Cases

ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ ಯುಸೂಫ್ ಮೀರ್

ಬೆಂಗಳೂರು, ಜನವರಿ 11: ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಆರು ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿತ್ತು. ತಾಯಿಯ ಮೇಲಿನ ದ್ವೇಷಕ್ಕೆ ಮಗುವನ್ನು ಕೊಂದ ಪಾಪಿ ಚರಂಡಿಗೆ ಬಿಸಾಕಿದ್ದ. ಈ ಕೊಲೆ ಪ್ರಕರಣದ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಕೊಲೆಗೂ ಮುನ್ನ ಪುಟ್ಟ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಆರೋಪಿಯು ಈ ಹಿಂದೆಯೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನೆಂಬುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.

ಶವವನ್ನು ರಸ್ತೆ ಬದಿಯ ಚರಂಡಿಗೆ ಎಸೆದಿದ್ದ

ಬಾಲಕಿಯ ಕೊಲೆ ಪ್ರಕರಣದಲ್ಲಿ ಯುಸೂಫ್ ಮೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪಿಯು ಮಗುವನ್ನು ಕಿಡ್ನಾಪ್ ಮಾಡಿದ್ದ. 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದ ಪಾಪಿ, ನಂತರ ಪ್ಲಾಸ್ಟಿಕ್ ವೈರ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ.  ಕೊಲೆ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರಸ್ತೆ ಬದಿಯ ಚರಂಡಿಗೆ ಎಸೆದಿದ್ದಾನೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ.

ಬಾಲಕಿ ನಾಪತ್ತೆಯಾದ ಒಂದು ದಿನದ ಬಳಿಕ ಪೋಷಕರು ದೂರು ನೀಡಿದ್ದು, ದೂರು ದಾಖಲಾದ ಹನ್ನೆರಡು ಗಂಟೆಗಳೊಳಗೆ ರಸ್ತೆ ಬದಿಯ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಆರಂಭದಲ್ಲಿ ಕೊಲೆ ಮಾತ್ರ ನಡೆದಿರುವ ಅನುಮಾನ ಇತ್ತು. ಆದರೆ ತನಿಖೆಯಲ್ಲಿ ಅತ್ಯಾಚಾರ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವಿನ ಕತ್ತು ಹಿಸುಕಿ ಕೊಲೆ!

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪಿ

ಪೊಲೀಸ್ ತನಿಖೆಯಲ್ಲಿ ಯುಸೂಫ್ ಮೀರ್ ವಿರುದ್ಧ ಈಗಾಗಲೇ ಎರಡು ಗಂಭೀರ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಂದು ಪೋಕ್ಸೋ ಹಾಗೂ ಮತ್ತೊಂದು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಿ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಯುಸೂಫ್ ಮಕ್ಕಳ ಮೇಲೆ ಲೈಂಗಿಕ ದೌರ್ಜ್ಯನ್ಯ ನಡೆಸುವ ಮನಸ್ಥಿತಿಯ ವ್ಯಕ್ತಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗೆ ಥಳಿಸಿದವರ ಮೇಲೂ ಕೇಸ್​ – Kannada News | Hubballi Physical Assault on Woman: Two Arrested

ಹುಬ್ಬಳ್ಳಿ, ಜನವರಿ 11: ಮಹಿಳೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಗ್ಯಾಂಗ್​​ ರೇಪ್​ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಗೆ ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದೆ. ಕಾಮುಕರು ಕೃತ್ಯದ ವಿಡಿಯೋ ಕೂಡ ಮಾಡಿಕೊಂಡು ಅದನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ. ಇನ್ನು ಸಂತ್ರಸ್ತೆಗೆ ಅಗತ್ಯ  ಚಿಕಿತ್ಸೆಯನ್ನು ನೀಡಲಾಗ್ತಿದೆ.

ಜ.9ರಂದು ನಡೆದಿರುವ ಘಟನೆ


ಘಟನೆ ಬಗ್ಗೆ ಪೊಲೀಸ್​ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಜ.9ರಂದು ಅಂಬೇಡ್ಕರ್ ಮೈದಾನದಿಂದ ಇಬ್ಬರು ಯುವಕರು ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದಿದ್ದರು. ಮದ್ಯ ಕುಡಿಸಿ ಅನುಚಿತವಾಗಿ ವರ್ತಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಒಂದು ದಿನದ ನಂತರ ಮಹಿಳೆ ಠಾಣೆಗೆ ಬಂದು ಅತ್ಯಾಚಾರ ಮಾಡಿ ವಿಡಿಯೋ ಮಾಡಿ ಹರಿಬಿಟ್ಟ ಬಗ್ಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಆರೋಪಿಗಳಾದ ಶಿವಾನಂದ, ಗಣೇಶ್​ಗೆ ಸ್ಥಳೀಯರು ಥಳಿಸಿದ್ದಾರೆ. ಕಟ್ಟಿಹಾಕಿ ತಲೆ ಬೋಳಿಸಿದ್ದಾರೆ. ಹಲ್ಲೆ ಸಂಬಂಧ ನಾಲ್ವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ; ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ

ಆರೋಪಿಗೆ ಥಳಿಸಿದವರ ಮೇಲೆ ಕೇಸ್​​ಗೆ ಖಂಡನೆ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದ ನಾಲ್ವರ ವಿರುದ್ಧ ದೂರು ದಾಖಲಾಗಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿಯ ನಾಲ್ವರ ವಿರುದ್ಧ ಪ್ರಕರಣ ಖಂಡಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ ಸ್ಥಳೀಯರು ಕಿಡಿ ಕಾರಿದ್ದಾರೆ. ಆರೋಪಿಗಳನ್ನು ಹಿಡಿದು ಕೊಟ್ಟವರ ವಿರುದ್ಧ ಕೇಸ್​ ಹಾಕಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:39 pm, Sun, 11 January 26

Source link

ಎರಡೇ ದಿನಕ್ಕೆ ತೀವ್ರವಾಗಿ ಕುಸಿದ ‘ದಿ ರಾಜಾ ಸಾಬ್’ ಸಿನಿಮಾ ಕಲೆಕ್ಷನ್ – Kannada News | Prabhas starrer The Raja Saab movie collections drops on day 2

ಪ್ರಭಾಸ್ ಅಭಿಮಾನಿಗಳು ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ. ಬಾಕ್ಸ್ ಆಫೀಸ್​​ನಲ್ಲಿ ಕೇವಲ 2ನೇ ದಿನಕ್ಕೆ ಕಲೆಕ್ಷನ್ ಕುಸಿತ ಕಂಡಿರುವುದು ಈ ಮಾತಿಗೆ ಸಾಕ್ಷಿ. ಇದು ಹಾರರ್ ಸಿನಿಮಾ. ಇದೇ ಮೊದಲ ಬಾರಿಗೆ ಪ್ರಭಾಸ್ (Prabhas) ಅವರು ಹಾರರ್ ಸಿನಿಮಾ ಮಾಡಿದ್ದಾರೆ. ಆ ಕಾರಣದಿಂದಲೂ ಹೈಪ್ ಇತ್ತು. ಆದರೆ ಪ್ರೇಕ್ಷಕರಿಗೆ ಈ ಸಿನಿಮಾ ಅಷ್ಟೇನೂ ಇಷ್ಟ ಆಗಿಲ್ಲ. ಆದ್ದರಿಂದ 2ನೇ ದಿನವೇ ಕಲೆಕ್ಷನ್ (The Raja Saab Box Office Collection) ಕುಸಿದಿದೆ. ಮುಂದಿನ ದಿನಗಳಲ್ಲಿ ‘ದಿ ರಾಜಾ ಸಾಬ್’ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಇನ್ನಷ್ಟು ಕಡಿಮೆ ಆಗಲಿದೆ.

ಪ್ರಭಾಸ್ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ದೊಡ್ಡದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್ ಆಗಿದ್ದಾರೆ. ಹಾಗಾಗಿ ಮೊದಲ ದಿನ ಅವರ ಎಲ್ಲ ಸಿನಿಮಾಗಳು ಒಳ್ಳೆಯ ಓಪನಿಂಗ್ ಪಡೆಯುತ್ತವೆ. ‘ದಿ ರಾಜಾ ಸಾಬ್’ ಸಿನಿಮಾದ ವಿಚಾರದಲ್ಲೂ ಹಾಗೆಯೇ ಆಯಿತು. ಪ್ರೀಮಿಯರ್ ಶೋ ಮತ್ತು ಮೊದಲ ದಿನದ ಶೋಗಳು ಹೌಸ್​ಫುಲ್ ಆದವು. 2ನೇ ದಿನ ಹವಾ ತಗ್ಗಿತು.

‘ದಿ ರಾಜಾ ಸಾಬ್’ ಸಿನಿಮಾಗೆ ಪ್ರೀಮಿಯರ್ ಶೋನಿಂದ 9.15 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೊದಲ ದಿನ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರಿಂದ 53.75 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಆದರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ದಿನ ಜನರು ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಯಿತು. 2ನೇ ದಿನ ಆಗಿದ್ದು 27.73 ಕೋಟಿ ರೂಪಾಯಿ ಪಾತ್ರ.

ಅಂದರೆ, ಮೊದಲ ದಿನದಿಂದ 2ನೇ ದಿನಕ್ಕೆ ಅಂದಾಜು ಶೇಕಡ 50ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ಕೂಡ ಪ್ರೀಮಿಯರ್ ಶೋ ಹಾಗೂ 2 ದಿನಗಳ ಕಲೆಕ್ಷನ್ ಸೇರಿ ಒಟ್ಟು 90.63 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಮಾಡಿದೆ. ಅಂದಾಜು 400 ಕೋಟಿ ರೂಪಾಯಿ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಅದಕ್ಕೆ ಹೋಲಿಸಿದರೆ ಈಗ ಆಗುತ್ತಿರುವ ಕಲೆಕ್ಷನ್ ಸಮಾಧಾನಕರವಾಗಿಲ್ಲ.

ಇದನ್ನೂ ಓದಿ: ಚಿತ್ರಮಂದಿರಕ್ಕೆ ಬೆಂಕಿ ಇಟ್ಟ ಪ್ರಭಾಸ್ ಫ್ಯಾನ್ಸ್; ‘ದಿ ರಾಜಾ ಸಾಬ್’ ನೋಡುವಾಗ ಘಟನೆ

ಜನವರಿ 12ರಂದು ಮೆಗಾ ಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆಗಲಿದೆ. ಆಗ ‘ದಿ ರಾಜಾ ಸಾಬ್’ ಸಿನಿಮಾಗೆ ಸಹಜವಾಗಿಯೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ. ಅದರಿಂದಾಗಿ ಈ ಚಿತ್ರದ ಕಲೆಕ್ಷನ್ ಇನ್ನಷ್ಟು ಕುಸಿತ ಕಾಣಲಿದೆ. ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಸಂಜಯ್ ದತ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಡನ ಕೊಲೆಗೆ ಸಾಕ್ಷಿಯಾಗಿದ್ದ ಮಹಿಳೆಯ ಉಸಿರನ್ನೇ ನಿಲ್ಲಿಸಿದ ಪಾಪಿಗಳು – Kannada News | A Witness Silenced, Delhi Woman Shot Dead Two Years After Husband’s Killing

ನವದೆಹಲಿ, ಜನವರಿ 11: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಯಲ್ಲೇ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಹತ್ಯೆ(Murder)) ಮಾಡಲಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ದೆಹಲಿಯ ಶಾಲಿಮಾರ್​ ಬಾಗ್​ನಲ್ಲಿ 44ವರ್ಷದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2023ರಲ್ಲಿ ಆ ಮಹಿಳೆಯ ಪತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅದಕ್ಕೆ ಆ ಮಹಿಳೆಯೇ ಸಾಕ್ಷಿಯಾಗಿದ್ದರು, ಇದೀಗ ಸಾಕ್ಷ್ಯ ನಾಶ ಮಾಡಲು ಆರೋಪಿಗಳು ಆಕೆಯನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೃತರನ್ನು ಶಾಲಿಮಾರ್ ಬಾಗ್ ನಿವಾಸಿ ರಚನಾ ಯಾದವ್, ಪೊಲೀಸರ ಪ್ರಕಾರ, ಅವರ ತಲೆಗೆ ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ರಚನಾ ಮೂಲತಃ ವಾಯುವ್ಯ ದೆಹಲಿಯ ಭಲ್ಸ್ವಾದವರು. 2023ರಲ್ಲಿ ರಚನಾ ಪತಿ ವಿಜೇಂದ್ರ ಯಾದವ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು, ಆ ಕೊಲೆ ಪ್ರಕರಣವು ಪ್ರಸ್ತುತ ವಿಚಾರಣೆಯಲ್ಲಿದೆ. ವಿಜೇಂದ್ರ ಯಾದವ್ ಅವರನ್ನು ಹಳೆಯ ಯಾವುದೋ ದ್ವೇಷದ ಕಾರಣ ಕೊಲೆ ಮಾಡಲಾಗಿತ್ತು.

ಭರತ್ ಯಾದವ್ ಮತ್ತು ಇತರ ಐವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಐದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಭರತ್ ಯಾದವ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು: ಸಿದ್ದರಾಮಯ್ಯ ಅಧಿಕೃತ ಘೋಷಣೆ

ರಚನಾ ಅವರ ಪತಿಯ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು ಮತ್ತು ಅವರ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ಗೆ ಪ್ರಮುಖವೆಂದು ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದುರ್ಬಲಗೊಳಿಸುವ ಮತ್ತು ಇತರ ಸಾಕ್ಷಿಗಳನ್ನು ಬೆದರಿಸುವ ಗುರಿಯನ್ನು ಆರೋಪಿಗಳು ಹೊಂದಿರಬಹುದು ಎಂದು ಹೇಳಲಾಗಿದೆ.

ರಚನಾ ಯಾದವ್ ಕೊಲೆ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅದರಲ್ಲಿ ಗುಂಡು ಹಾರಿಸಿದ ಆರೋಪಿಗಳು ಸ್ಪಷ್ಟವಾಗಿ ಕಾಣುತ್ತಿದ್ದಾರೆ. ಹಲ್ಲೆಕೋರನ ಸಹಚರನು ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿರುವ ಸ್ಪೋರ್ಟ್ಸ್ ಬೈಕ್‌ನಲ್ಲಿ ಕಾಯುತ್ತಿದ್ದರು, ಇದು ವೇಗವಾಗಿ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಿಮಾರ್ ಬಾಗ್ ಪೊಲೀಸ್ ಠಾಣೆಗೆ ಬೆಳಗ್ಗೆ 10.59 ರ ಸುಮಾರಿಗೆ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪಿಸಿಆರ್ ಕರೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ರಚನಾ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಬರುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ತನ್ನ ತಂದೆಯ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿ ದೃಢವಾಗಿ ನಿಂತಿದ್ದರಿಂದ ತನ್ನ ತಾಯಿಯನ್ನು ಕೊಂದಿದ್ದಾರೆ ಎಂದು ಮಗಳು ಕನಿಕಾ ಹೇಳಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ – Kannada News | Why 108 Horses, The Symbolism Behind Modi’s Somnath Shaurya Yatra

ಅಹಮದಾಬಾದ್, ಜನವರಿ 11: ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಶೌರ್ಯ ಯಾತ್ರೆಯನ್ನು ನಡೆಸಿದ್ದಾರೆ. ಶೌರ್ಯ ಯಾತ್ರೆಯು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು. ಪ್ರಧಾನಿ ಮೋದಿ ಮತ್ತೆ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ನಡೆಯಲಿರುವ ಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version