ಮಳೆಗಾಲದಲ್ಲಿ ಕೀಲು ನೋವು, ಬಿಗಿತ ಹೆಚ್ಚಾಗಲು ಕಾರಣವೇನು? ತಡೆಗಟ್ಟುವ ಸರಳ ಮಾರ್ಗಗಳು ಇಲ್ಲಿವೆ – Kannada News | Rainy Season Joint Pain: Causes, Risk Factors and Ways to Find Relief
ಮಳೆಗಾಲ ಆರಂಭವಾದ ಕೂಡಲೇ ಮೊಣಕಾಲು ನೋವು, ಸೊಂಟ ನೋವು, ಭುಜ ನೋವು, ಕೀಲುಗಳಲ್ಲಿ ಬಿಗಿತ (Joint Stiffness) ಹೆಚ್ಚಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದು ಕೇವಲ ವಯಸ್ಸಾದವರ ಸಮಸ್ಯೆಯಲ್ಲ, ಈಗಾಗಲೇ ಆಸ್ಟಿಯೋಆರ್ಥ್ರೈಟಿಸ್ (Osteoarthritis), ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis) ಅಥವಾ ಹಳೆಯ ಗಾಯಗಳಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಲವರು ಇದನ್ನು ಕೇವಲ “ಮಳೆಗಾಲದ ಪರಿಣಾಮ” ಎಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಇಂದು ರಾಷ್ಟ್ರೀಯ ಮೂಳೆ ಮತ್ತು ಕೀಲುಗಳ…