Headlines

ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ – Kannada News | MDR on UPI payments, will people stop using large UPI transactions, know what survey says

ನವದೆಹಲಿ, ಆಗಸ್ಟ್ 4: ಯುಪಿಐ (UPI) ವಹಿವಾಟುಗಳ ಮೇಲೆ ಮೆರ್ಚೆಂಟ್ ಡಿಸ್ಕೌಂಟ್ ರೇಟ್ (MDR – Merchant Discount Rate) ಶುಲ್ಕವನ್ನು ಸರ್ಕಾರ ಅಥವಾ ಆರ್‌ಬಿಐ ಮತ್ತೆ ಜಾರಿಗೆ ತಂದರೆ, ಶೇ. 53 ರಷ್ಟು ಗ್ರಾಹಕರು ₹3,000 ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡುವುದನ್ನೇ ನಿಲ್ಲಿಸಲಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸ್ಥಳೀಯ ಸಮೀಕ್ಷಾ ಸಂಸ್ಥೆಯಾದ ‘ಲೋಕಲ್ ಸರ್ಕಲ್ಸ್’ (LocalCircles) ನಡೆಸಿದ ಈ ಸಮೀಕ್ಷೆಯಲ್ಲಿ ಸಾವಿರಾರು ಡಿಜಿಟಲ್ ಪಾವತಿ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಏನಿದು…

Read More

ಬೀದಿ ದೀಪ ಅಳವಡಿಸದ ಹಿನ್ನೆಲೆ ಜಿಬಿಎ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಕ್ಲಾಸ್​​ – Kannada News | Minister Krishnabyregowda Slams Officials Over LED Street Light Data at GBA Meeting

ಬೆಂಗಳೂರು, ಆಗಸ್ಟ್​​ 04: ಜಿಬಿಎ ಮುಖ್ಯ ಕಚೇರಿಯಲ್ಲಿ ಅಧಿಕಾರಿಗಳ ಜತೆ ಕೃಷ್ಣ ಭೈರೇಗೌಡ ಸಭೆ ನಡೆಸಿದ್ದು, ನಗರದಲ್ಲಿ ಬೀದಿ ದೀಪ ಅಳವಡಿಸದ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಗರಂ ಆದ ಪ್ರಸಂಗ ನಡೆದಿದೆ. ಸಭೆಗೆ ಸಿದ್ಧತೆ ಇಲ್ಲದೆ ಬಂದಿದ್ದೀರೆಂದು ಅಧಿಕಾರಿಗಳಿಗೆ ಸಚಿವರು ತರಾಟೆಗೆ ಪಡೆದಿದ್ದು, ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಿದ್ಧತೆಯೊಂದಿಗೆ ಬರಲಾಗಲ್ವಾ? ಡೇಟಾ ಇಲ್ಲದೆ ಬಂದಿದ್ದೀರಿ, ಸರ್ಕಾರಿ ಕೆಲಸ ಅಂದ್ರೆ ಕೈಬೀಸಿ ಬಂದು ಹೋಗೋದಲ್ಲ ಎಂದು ಇಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ….

Read More

ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ – Kannada News | Bengaluru Police Restructuring: 5 New Commissionerates, 6,633 Posts Proposed

ಬೆಂಗಳೂರು, ಆಗಸ್ಟ್​​ 04: ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಕುರಿತಾಗಿ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು‌ ಕಮಿಷನರೇಟ್‌ (Bengaluru Police Commissionerate) ಅನ್ನು 5 ಹೊಸ ಕಮಿಷನರೇಟ್‌ ವಲಯಗಳಾಗಿ ವಿಭಜಿಸಲು ಮತ್ತು 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ  ಬೆಂಗಳೂರು ಪೊಲೀಸ್ ಕಮಿಷನರೇಟ್‌ ಅನ್ನು ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ…

Read More

‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ – Kannada News | Satish Neenasam shared video of Ayogya 2 movie behind the camera video

ಸತೀಶ್ ನೀನಾಸಂ (Satish Neenasam) ನಟನೆಯ ‘ಅಯೋಗ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಬಹುತೇಕ ಅದೇ ತಂಡ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ರಂಜಿಸಲು ಬರುತ್ತಿದೆ. ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ….

Read More

ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಧ್ಯಪ್ರದೇಶದ ಮಕ್ಕಳು; ವೈರಲ್ ವಿಡಿಯೋಗೆ ಭಾರೀ ಆಕ್ರೋಶ – Kannada News | Madhya Pradesh children risking lives to reach school in Rain Video goes Viral

ನವದೆಹಲಿ, ಆಗಸ್ಟ್ 4: ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಶಾಲೆಗೆ ಹೋಗಲು ಬೆಟ್ವಾ ನದಿಯ ಡ್ಯಾಂನ ಸಣ್ಣ ತಡೆಗೋಡೆ ಮೇಲೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ನದಿ ದಾಟುತ್ತಿರುವ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಕ್ಕಳು ಜಾಗರೂಕತೆಯಿಂದ ನದಿ ದಾಟುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಘಟನೆಯು ವಿದಿಶಾ ಜಿಲ್ಲೆಯ ಪಾಲೋಹ್ ಗ್ರಾಮದಲ್ಲಿ ನಡೆದಿದ್ದು, ಕರುವಾ ಗ್ರಾಮದ ಪಾಲೋಹ್‌ನಲ್ಲಿರುವ ಶಾಲೆಗೆ ತಲುಪಲು…

Read More

ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ: ರೇಸ್​​ನಲ್ಲಿ ಇರೋದು ಯಾರ್ಯಾರು? – Kannada News | Race Intensifies for Single Vacant Seat in Karnataka Cabinet: Top Women Congress Leaders in the Fray

ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿImage Credit source: Tv9 Kannada ಬೆಂಗಳೂರು, ಆಗಸ್ಟ್​​ 04: 19 ಮಂದಿ ಸಚಿವರು ಸಿಎಂ ಡಿಕೆ ಶಿವಕುಮಾರ್​​ ಅವರ ಸಂಪುಟಕ್ಕೆ ನಿನ್ನೆ ಸೇರ್ಪಡೆಯಾಗಿದ್ದಾರೆ. ಹೈಕಮಾಂಡ್​​ ಪಟ್ಟಿಯಲ್ಲಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸೇರಿ 20 ಮಂದಿಯ ಹೆಸರಿತ್ತಾದರೂ ಕೊನೆ ಕ್ಷಣದಲ್ಲಿ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಲಾಗಿತ್ತು. ಹೀಗಾಗಿ ಖಾಲಿ ಉಳಿದಿರುವ ಒಂದು ಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್​​ ಪಾಳಯದಲ್ಲಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಈ ನಡುವೆ…

Read More

ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…? – Kannada News | Sun transit in leo 2026 how ravis power affects your zodiac sign

ಸೂರ್ಯ ಸಿಂಹ ರಾಶಿಯಲ್ಲಿದ್ದಾನೆ. ಬುಧ ಹಾಗೂ ಕೇತು ಸಿಂಹದಲ್ಲಿದ್ದಾರೆ, ಶುಕ್ರ ಕನ್ಯಾದಲ್ಲಿ ನೀಚ, ಮಂಗಳ ಮಿಥುನದಲ್ಲಿ, ಗುರು ಕರ್ಕಾಟಕದಲ್ಲಿ ಉಚ್ಚ, ಶನಿ ಮೀನದಲ್ಲಿ, ರಾಹು ಕುಂಭದಲ್ಲಿದ್ದಾನೆ. ​ಇಲ್ಲಿ ರವಿಯು ತನ್ನದೇ ಆದ ಸಿಂಹ ರಾಶಿಯಲ್ಲಿ ಸ್ವಕ್ಷೇತ್ರಗತನಾಗಿ ಬಲವಾಗಿದ್ದಾನೆ. ಜ್ಯೋತಿಷ್ಯದ ನಿಯಮಗಳಂತೆ ಹಾಗೂ ಗೋಚಾರ ಫಲದಂತೆ ಈ ಗ್ರಹಸ್ಥಿತಿಯಲ್ಲಿ ರವಿ ದಶೆ ಅಥವಾ ರವಿಯ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಬೀರುವ ಶುಭ, ಅಶುಭ ಹಾಗೂ ಮಿಶ್ರ ಶುಭಾಶುಭ ಫಲಗಳ ವಿವರಣೆ ಇಲ್ಲಿದೆ. ​ಅತ್ಯಂತ ಶುಭ ಫಲ ​ಮೇಷ…

Read More

ರಜನೀಕಾಂತ್​​ರ ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ: ಕೋರ್ಟ್ ಹೇಳಿದ್ದೇನು? – Kannada News | Madras High Court refuse to stay Kochadaiyaan movie re rlease

2014ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ದೀಪಿಕಾ ಪಡುಕೋಣೆ ನಟನೆಯ ‘ಕೊಚ್ಚಾಡಿಯನ್’ (Kochadaiiyaan) ಸಿನಿಮಾ ಆಗ ದೊಡ್ಡ ಫ್ಲಾಪ್ ಆಗಿತ್ತು. ಭಾರಿ ಬಜೆಟ್ ಹಾಕಿ, ನೂತನ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದ್ದ ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿದ್ದು ಮಾತ್ರವೇ ಅಲ್ಲದೆ, ಸುದೀರ್ಘವಾದ ಕಾನೂನು ಹೋರಾಟಕ್ಕೂ ಕಾರಣವಾಯ್ತು. ಇದೀಗ ಅದೇ ಸಿನಿಮಾ ಅನ್ನು ಎಐ ಮೂಲಕ ಇನ್ನಷ್ಟು ಉತ್ತಮಗೊಳಿಸಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಇದಕ್ಕೆ ತಡೆ ನೀಡಬೇಕೆಂದು ಸಿನಿಮಾಕ್ಕೆ ಹಣ ಒದಗಿಸಿದ್ದ ಫೈನ್ಯಾನ್ಶಿಯರ್​​ಗಳು ನ್ಯಾಯಾಲಯದ ಮೊರೆ…

Read More

ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್ – Kannada News | Salman Khan Breaks silence on Health concerns reveals 16 KG weight loss

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಕಳೆದ ಕೆಲವು ವಾರಗಳಿಂದ ತಮ್ಮ ಹಠಾತ್ ತೂಕ ಇಳಿಕೆಯಿಂದಾಗಿ ಸುದ್ದಿಯಲ್ಲಿದ್ದರು. ಸಲ್ಮಾನ್ ಅತ್ಯಂತ ತೆಳ್ಳಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಲ್ಮಾನ್ ಖಾನ್ ಅವರೇ ಈ ಕುರಿತು ಮೌನ ಮುರಿದಿದ್ದು, ತಮಗಿದ್ದ ಆರೋಗ್ಯದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ’ ಪ್ರೈಮ್ ವೀಡಿಯೊದ ‘ಅಲಯನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ತಮ್ಮ ಸಹೋದರ ಸೊಹೈಲ್ ಖಾನ್…

Read More

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ: ‘ಮನಸ್ಸಿಗೆ ನೋವಾಗಿದೆ’ ಎಂದ ಬಸವರಾಜ ಹೊರಟ್ಟಿ – Kannada News | CM D.K. Shivakumar Ask Basavaraj Horatti to Resign as Legislative Council Chairman

ಬೆಂಗಳೂರು, ಆಗಸ್ಟ್​​ 04: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿಗೆ (Basavaraj Horatti) ಸಿಎಂ ಡಿಕೆ ಶಿವಕುಮಾರ್ (DK Shivakumar)​​ ಸೂಚನೆ ನೀಡಿದ್ದಾರೆ. ಮಧ್ಯಾಹ್ನ 2ರ ಸುಮಾರಿಗೆ ಕರೆ ಮಾಡಿದ್ದ ಸಿಎಂ ‘ಪಕ್ಷದ ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ’ ಎಂದಿದ್ದಾರೆ. ಡಿಕೆ ಶಿವಕುಮಾರ್ ಕರೆ ಬೆನ್ನಲ್ಲೇ ಸದ್ಯ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ. ಮನಸ್ಸಿಗೆ ತುಂಬಾ ನೋವಾಗಿದೆ ಎಂದ ಬಸವರಾಜ ಹೊರಟ್ಟಿ ಈ ಕುರಿತಾಗಿ ಟಿವಿ9 ಜೊತೆಗೆ ಮಾತನಾಡಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಇದು…

Read More