ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ: ರೇಸ್​​ನಲ್ಲಿ ಇರೋದು ಯಾರ್ಯಾರು? – Kannada News | Race Intensifies for Single Vacant Seat in Karnataka Cabinet: Top Women Congress Leaders in the Fray

ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿImage Credit source: Tv9 Kannada

ಬೆಂಗಳೂರು, ಆಗಸ್ಟ್​​ 04: 19 ಮಂದಿ ಸಚಿವರು ಸಿಎಂ ಡಿಕೆ ಶಿವಕುಮಾರ್​​ ಅವರ ಸಂಪುಟಕ್ಕೆ ನಿನ್ನೆ ಸೇರ್ಪಡೆಯಾಗಿದ್ದಾರೆ. ಹೈಕಮಾಂಡ್​​ ಪಟ್ಟಿಯಲ್ಲಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸೇರಿ 20 ಮಂದಿಯ ಹೆಸರಿತ್ತಾದರೂ ಕೊನೆ ಕ್ಷಣದಲ್ಲಿ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಲಾಗಿತ್ತು. ಹೀಗಾಗಿ ಖಾಲಿ ಉಳಿದಿರುವ ಒಂದು ಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್​​ ಪಾಳಯದಲ್ಲಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಈ ನಡುವೆ ಸಚಿವ ಸ್ಥಾನದಿಂದ ವಂಚಿತರಾಗಿರುವ ಗಾಯತ್ರಿ ಶಾಂತೇಗೌಡ ಪುನಃ ಯತ್ನ ನಡೆಸುತ್ತಿದ್ದು, ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರೇಸ್​​ನಲ್ಲಿ ಇರೋ ಶಾಸಕಿಯರು ಯಾರ್ಯಾರು?

ಗಾಯತ್ರಿ ಶಾಂತೇಗೌಡ ಅವರ ಜೊತೆಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಎಂಎಲ್​ಸಿ ಉಮಾಶ್ರೀ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​, ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಕೂಡ ಸಚಿವ ಸ್ಥಾನದ ರೇಸ್​​ನಲ್ಲಿರುವ ಪ್ರಮುಖರಾಗಿದ್ದಾರೆ.

ಇದನ್ನೂ ಓದಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ: ‘ಮನಸ್ಸಿಗೆ ನೋವಾಗಿದೆ’ ಎಂದ ಬಸವರಾಜ ಹೊರಟ್ಟಿ

ಸಚಿವ ಸ್ಥಾನ ಸಂಬಂಧ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಮಹಿಳಾ ಮೀಸಲಾತಿ ಪರ ಧ್ವನಿ ಎತ್ತಿದ್ದೇವೆ, ಅವಕಾಶ ಸಿಗಬೇಕು. ಸಂಪುಟದಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನಯನಾ ಮೋಟಮ್ಮ ಹೇಳಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದು ನಿಜ. ನನಗೆ ಭರವಸೆಯಿದೆ, ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತೆ. ಪಕ್ಷಕ್ಕಾಗಿ ದುಡಿದಿದ್ದೇವೆ, ಹೀಗಾಗಿ ಹೈಕಮಾಂಡ್ ಪರಿಗಣಿಸುವ ವಿಶ್ವಾಸವಿದೆ ಎಂದು ಉಮಾಶ್ರೀ ತಿಳಿಸಿದ್ದಾರೆ. ಮತ್ತೊಂದೆಡೆ ಪತಿ ಸಮೇತ ಅನ್ನಪೂರ್ಣಾ ತುಕಾರಾಂ ಸಿಎಂ ಡಿಕೆಶಿ ಅವರನ್ನು ಭೇಟಿಯಾಗಿರುವ ಕಾರಣ ಪೈಪೋಟಿ ತೀವ್ರಗೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:32 pm, Tue, 4 August 26

Source link

ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…? – Kannada News | Sun transit in leo 2026 how ravis power affects your zodiac sign

ಸೂರ್ಯ ಸಿಂಹ ರಾಶಿಯಲ್ಲಿದ್ದಾನೆ. ಬುಧ ಹಾಗೂ ಕೇತು ಸಿಂಹದಲ್ಲಿದ್ದಾರೆ, ಶುಕ್ರ ಕನ್ಯಾದಲ್ಲಿ ನೀಚ, ಮಂಗಳ ಮಿಥುನದಲ್ಲಿ, ಗುರು ಕರ್ಕಾಟಕದಲ್ಲಿ ಉಚ್ಚ, ಶನಿ ಮೀನದಲ್ಲಿ, ರಾಹು ಕುಂಭದಲ್ಲಿದ್ದಾನೆ.

​ಇಲ್ಲಿ ರವಿಯು ತನ್ನದೇ ಆದ ಸಿಂಹ ರಾಶಿಯಲ್ಲಿ ಸ್ವಕ್ಷೇತ್ರಗತನಾಗಿ ಬಲವಾಗಿದ್ದಾನೆ. ಜ್ಯೋತಿಷ್ಯದ ನಿಯಮಗಳಂತೆ ಹಾಗೂ ಗೋಚಾರ ಫಲದಂತೆ ಈ ಗ್ರಹಸ್ಥಿತಿಯಲ್ಲಿ ರವಿ ದಶೆ ಅಥವಾ ರವಿಯ ಪ್ರಭಾವವು ದ್ವಾದಶ ರಾಶಿಗಳ ಮೇಲೆ ಬೀರುವ ಶುಭ, ಅಶುಭ ಹಾಗೂ ಮಿಶ್ರ ಶುಭಾಶುಭ ಫಲಗಳ ವಿವರಣೆ ಇಲ್ಲಿದೆ.

​ಅತ್ಯಂತ ಶುಭ ಫಲ

​ಮೇಷ ರಾಶಿ :

​ರವಿಯು ಮೇಷ ರಾಶಿಗೆ ೫ನೇ ಮನೆ ಪಂಚಮ ಭಾವ – ಬುದ್ಧಿ, ಸಂತಾನ, ಭಾಗ್ಯಯ ಅಧಿಪತಿಯಾಗುತ್ತಾನೆ. ಸ್ವಕ್ಷೇತ್ರದಲ್ಲಿ ರವಿ ಬಲವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹಾಗೂ ಅಧಿಕಾರ ಪ್ರಾಪ್ತಿಯಾಗುತ್ತದೆ.

​ಧನು ರಾಶಿ :

​ಧನು ರಾಶಿಗೆ ರವಿಯು ೯ನೇ ಮನೆ ಭಾಗ್ಯ ಭಾವದ ಅಧಿಪತಿ. ಭಾಗ್ಯಾಧಿಪತಿ ರವಿಯು ಸ್ವಕ್ಷೇತ್ರದಲ್ಲಿದ್ದು ಬಲವಾಗಿದ್ದರೆ ತಂದೆಯಿಂದ ಬೆಂಬಲ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದೂರದ ಪ್ರಯಾಣ ಹಾಗೂ ಸಮಾಜದಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಾಗುತ್ತದೆ.

​ವೃಶ್ಚಿಕ ರಾಶಿ :

​ವೃಶ್ಚಿಕ ರಾಶಿಗೆ ರವಿಯು ೧೦ನೇ ಮನೆ ಕರ್ಮ ಭಾವದ ಅಧಿಪತಿಯಾಗುತ್ತಾನೆ. ಉದ್ಯೋಗ, ವ್ಯಾಪಾರ ಹಾಗೂ ರಾಜಕೀಯ ರಂಗದಲ್ಲಿದ್ದವರಿಗೆ ಅತ್ಯುತ್ತಮ ಪ್ರಗತಿ ಕಂಡುಬರುತ್ತದೆ. ಸರ್ಕಾರದ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ.

​ಶುಭಾಶುಭ ಫಲ

​ಸಿಂಹ ರಾಶಿ :

​ರವಿಯು ಸ್ವಗೃಹದಲ್ಲಿದ್ದರೂ, ಜೊತೆಗೆ ಕೇತು ಮತ್ತು ಅಸ್ತಂಗತ ಬುಧ ಇರುವುದರಿಂದ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ ತಲೆಯುರಿ, ಅಧಿಕ ಕೋಪ ಹಾಗೂ ಅಹಂಕಾರದಿಂದಾಗಿ ಸಂಬಂಧಗಳಲ್ಲಿ ಸಣ್ಣಪುಟ್ಟ ಬಿರುಕು ಮೂಡಬಹುದು.

​ಕರ್ಕಾಟಕ ರಾಶಿ :

​ಕರ್ಕಾಟಕಕ್ಕೆ ರವಿ ೨ನೇ ಮನೆ ಧನ, ಕುಟುಂಬಗಳ ಅಧಿಪತಿ. ಆರ್ಥಿಕವಾಗಿ ಧನಲಾಭವಿದ್ದರೂ, ಮಾತಿನಲ್ಲಿ ಕಠೋರತೆ ಬರಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪಗಳಾಗದಂತೆ ಎಚ್ಚರ ವಹಿಸಬೇಕು.

​ತುಲಾ ರಾಶಿ

​ತುಲಾ ರಾಶಿಗೆ ರವಿಯು ೧೧ನೇ ಮನೆ ಲಾಭ ಭಾವದ ಅಧಿಪತಿ. ವಿವಿಧ ಮೂಲಗಳಿಂದ ಆದಾಯ ಹರಿದುಬರುತ್ತದೆ. ಆದರೆ ಹಿರಿಯ ಸಹೋದರರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಣ್ಣ ಅಭಿಪ್ರಾಯ ಭೇದ ಬರಬಹುದು.

​ಮಿಥುನ ರಾಶಿ

​​ಮಿಥುನಕ್ಕೆ ೩ನೇ ಮನೆ ಪರಾಕ್ರಮ ಭಾವದ ಅಧಿಪತಿಯಾಗಿ ರವಿ ಬಲವಾಗಿದ್ದಾನೆ. ಧೈರ್ಯ-ಸಾಹಸಗಳು ಹೆಚ್ಚುತ್ತವೆ, ಕಾರ್ಯಸಿದ್ಧಿಯಾಗುತ್ತದೆ. ಆದರೆ ಕಿರಿಯ ಸಹೋದರರೊಂದಿಗೆ ಜಾಗರೂಕತೆ ಅಗತ್ಯ.

​ಅಶುಭ ಫಲ

​ಮಕರ ರಾಶಿ :

​ಮಕರ ರಾಶಿಗೆ ರವಿಯು ೮ನೇ ಮನೆ ಅಷ್ಟಮ ಭಾವದ ಅಧಿಪತಿ. ಆರೋಗ್ಯದಲ್ಲಿ ವ್ಯತ್ಯಾಸ, ಕಣ್ಣು ಅಥವಾ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅನಗತ್ಯ ಅಡೆತಡೆಗಳು ಎದುರಾಗಬಹುದು. ಮಾತು ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

​ಕುಂಭ ರಾಶಿ :

​​ಕುಂಭ ರಾಶಿಗೆ ರವಿಯು ೭ನೇ ಮನೆ ಕಳತ್ರ ಭಾವದ ಅಧಿಪತಿಯಾಗಿದ್ದು, ಪ್ರಸ್ತುತ ರಾಹುವಿನ ಪ್ರಭಾವವೂ ಇರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು.

ಇದನ್ನೂ ಓದಿ:  ಆಗಸ್ಟ್​​ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ!

​ಮೀನ ರಾಶಿ:

​ಮೀನ ರಾಶಿಗೆ ರವಿಯು ೬ನೇ ಮನೆ ಶತ್ರು, ಋಣ, ರೋಗಗಳ ಅಧಿಪತಿಯಾಗುತ್ತಾನೆ. ಪ್ರಸ್ತುತ ಶನಿ-ಚಂದ್ರರ ಯೋಗವಿರುವುದರಿಂದ ಶತ್ರುಗಳ ಕಾಟ, ಕೋರ್ಟ್/ಕಚೇರಿ ಅಲೆದಾಟ ಅಥವಾ ಆರೋಗ್ಯ ವೆಚ್ಚಗಳು ಹೆಚ್ಚಾಗಬಹುದು.

​ಕನ್ಯಾ ರಾಶಿ

​ಕನ್ಯಾ ರಾಶಿಗೆ ರವಿಯು ೧೨ನೇ ಮನೆ ವ್ಯಯ ಭಾವದ ಅಧಿಪತಿ. ಅನಗತ್ಯ ಖರ್ಚುಗಳು, ಅಲೆದಾಟ ಹಾಗೂ ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.

​ವೃಷಭ ರಾಶಿ

​೪ನೇ ಮನೆಯ ಸುಖ, ಮಾತೃ ಭಾವಗಳ ಅಧಿಪತಿಯಾದ ರವಿಯಿಂದ ಗೃಹ ಸುಖದಲ್ಲಿ ಕೊಂಚ ಏರುಪೇರು, ತಾಯಿಯ ಆರೋಗ್ಯದ ಕಡೆ ಗಮನ ಹರಿಸಬೇಕಾಗುತ್ತದೆ.

​ರವಿ ದಶೆಯ ಅಶುಭ ಪ್ರಭಾವ ಕಡಿಮೆಯಾಗಲು ನಿತ್ಯವೂ ಆದಿತ್ಯ ಹೃದಯ ಸ್ತೋತ್ರ ಪಠಿಸುವುದು, ಸೂರ್ಯನಿಗೆ ಅರ್ಘ್ಯ ನೀಡುವುದು ಹಾಗೂ ಕೆಂಪು ಬಣ್ಣದ ವಸ್ತುಗಳು/ಗೋಧಿಯನ್ನು ದಾನ ಮಾಡುವ ಅಭ್ಯಾಸವಿದ್ದರೆ ಒಳ್ಳೆಯದು.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್​​ರ ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ: ಕೋರ್ಟ್ ಹೇಳಿದ್ದೇನು? – Kannada News | Madras High Court refuse to stay Kochadaiyaan movie re rlease

2014ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ದೀಪಿಕಾ ಪಡುಕೋಣೆ ನಟನೆಯ ‘ಕೊಚ್ಚಾಡಿಯನ್’ (Kochadaiiyaan) ಸಿನಿಮಾ ಆಗ ದೊಡ್ಡ ಫ್ಲಾಪ್ ಆಗಿತ್ತು. ಭಾರಿ ಬಜೆಟ್ ಹಾಕಿ, ನೂತನ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದ್ದ ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿದ್ದು ಮಾತ್ರವೇ ಅಲ್ಲದೆ, ಸುದೀರ್ಘವಾದ ಕಾನೂನು ಹೋರಾಟಕ್ಕೂ ಕಾರಣವಾಯ್ತು. ಇದೀಗ ಅದೇ ಸಿನಿಮಾ ಅನ್ನು ಎಐ ಮೂಲಕ ಇನ್ನಷ್ಟು ಉತ್ತಮಗೊಳಿಸಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಇದಕ್ಕೆ ತಡೆ ನೀಡಬೇಕೆಂದು ಸಿನಿಮಾಕ್ಕೆ ಹಣ ಒದಗಿಸಿದ್ದ ಫೈನ್ಯಾನ್ಶಿಯರ್​​ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.

‘ಕೊಚಾಡಿಯನ್’ ಸಿನಿಮಾವನ್ನು ಎಐ ಬಳಸಿ ಉತ್ತಮಗೊಳಿಸಿ ಸಿನಿಮಾ ಅನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ‘ಕೊಚಾಡಿಯನ್’ ಸಿನಿಮಾದ ಹಕ್ಕು ಖರೀದಿ ಮಾಡಿರುವ ಸಂಸ್ಥೆಯೊಂದು ಎಐ ಬಳಸಿ ಸಿನಿಮಾದ ಗುಣಮಟ್ಟವನ್ನು ಉತ್ತಮಗೊಳಿಸಿದೆ. ಇದೀಗ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಸಿನಿಮಾಕ್ಕೆ ಆಗ ಹಣ ಸಾಲ ನೀಡಿದ್ದ ಫೈನ್ಯಾನ್ಶಿಯರ್​​ಗಳು ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಫೈನ್ಯಾನ್ಶಿಯರ್​​ಗಳ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಸಿನಿಮಾ ಬಿಡುಗಡೆಯನ್ನು ತಡೆಯಲು ನಿರಾಕರಿಸಿದೆ. ಆ ಮೂಲಕ ‘ಕೊಚಾಡಿಯನ್’ ಸಿನಿಮಾ ಬಿಡುಗಡೆ ಆಗುವುದು ಖಾತ್ರಿ ಆಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಕುಮರೇಶ್ ಬಾಬು, ‘ಪ್ರಸ್ತುತ ಚಿತ್ರದ ಹಕ್ಕುಗಳನ್ನು ಹೊಂದಿರುವವರು ಚಿತ್ರದ ಹಕ್ಕುದಾರರಾಗಿದ್ದರೂ ಸಹ, ವಾದಿಯು ಅವರ ವಿರುದ್ಧ ಯಾವುದೇ ಪರಿಹಾರವನ್ನು ಕೋರಿಲ್ಲ ಈ ಹಿನ್ನೆಲೆಯಲ್ಲಿ, ಈ ಹಂತದಲ್ಲಿ ಚಲನಚಿತ್ರದ ಮರುಬಿಡುಡೆಡೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ;ರಜನೀಕಾಂತ್​​ಗಾಗಿ ನಿಯಮ ಮುರಿದ ನಟ ವಿಜಯ್ ಸೇತುಪತಿ

2014ರಲ್ಲಿ ‘ಕೊಚ್ಚಾಡಿಯನ್’ ಚಿತ್ರದ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದ ‘ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಸಿನಿಮಾದ ಮರು ಬಿಡುಗಡೆ ತಡೆಯುವಂತೆ ಅರ್ಜಿ ಸಲ್ಲಿಸಿತ್ತು. 2014ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿಕೊಂಡ ಒಪ್ಪಂದಗಳ ಪ್ರಕಾರ, ಆಡ್ ಬ್ಯೂರೋ ಸಂಸ್ಥೆಯು ಚಿತ್ರದ ನಿರ್ಮಾಪಕರಾದ ‘ಮೀಡಿಯಾವನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್’ಗೆ 10 ಕೋಟಿ ರೂ.ಗಳನ್ನು ನೀಡಿದ್ದರು. ಬದಲಾಗಿ, ನಿರ್ಮಾಪಕರು ಮತ್ತು ನಿರ್ದೇಶಕ ಡಾ. ಜೆ. ಮುರಳಿ ಮನೋಹರ್ ಅವರು 20.40 ಕೋಟಿ ರೂ.ಗಳನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ, ತಮಿಳುನಾಡಿನಲ್ಲಿ ಚಿತ್ರದ ಗಳಿಕೆಯ ಮೇಲೆ ಆಡ್ ಬ್ಯೂರೋಗೆ ಹಕ್ಕುಗಳನ್ನು ನೀಡುವುದಾಗಿಯೂ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಮರುಪಾವತಿಗಾಗಿ ನೀಡಲಾಗಿದ್ದ ಚೆಕ್‌ಗಳು ನಂತರ ಬೌನ್ಸ್ ಆಗಿದ್ದವು. ಇದರಿಂದಾಗಿ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ವಿಚಾರಣೆಯಲ್ಲಿದೆ. ಇದರೊಂದಿಗೆ, ಆಡ್ ಬ್ಯೂರೋ ಸಂಸ್ಥೆಯು 2015ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹಣ ಮರುಪಾವತಿ ಕೋರಿ ಸಿವಿಲ್ ಮೊಕದ್ದಮೆ ಹೂಡಿತ್ತು.

ನಿರ್ಮಾಪಕರು ಮತ್ತು ನಿರ್ದೇಶಕರಲ್ಲದೆ, ಈ ಮೊಕದ್ದಮೆಯಲ್ಲಿ ಲತಾ ರಜನಿಕಾಂತ್, ಸೌಂದರ್ಯ ರಜನಿಕಾಂತ್ ಅಶ್ವಿನ್ ಮತ್ತು ಇರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್ ಹೆಸರನ್ನು ಕೂಡ ಸೇರಿಸಲಾಗಿದೆ. ಸಿನಿಮಾದ ವಿವಾದಗಳ ಬಗ್ಗೆ ಅರಿವಿದ್ದರೂ ಸಹ ಇರೋಸ್ ಸಂಸ್ಥೆಯು ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಆಡ್ ಬ್ಯೂರೋ ಆರೋಪಿಸಿದೆ. ‘ಕೊಚ್ಚಾಡೆಯನ್’ ಚಿತ್ರವನ್ನು ಕೃತಕ ಬುದ್ಧಿಮತ್ತೆ ಬಳಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಶೀಘ್ರದಲ್ಲೇ ಮರುಬಿಡುಡೆಯಾಗಲಿದೆ ಎಂದು ತಿಳಿದ ನಂತರ, ಆಡ್ ಬ್ಯೂರೋ ಈ ಅರ್ಜಿಯನ್ನು ಸಲ್ಲಿಸಿತ್ತು. ಹಣ ಮರುಪಾವತಿ ಮೊಕದ್ದಮೆಯ ಅಂತಿಮ ತೀರ್ಪು ಬರುವವರೆಗೆ AI-ವರ್ಧಿತ ಆವೃತ್ತಿಯ ಬಿಡುಗಡೆ, ವಿತರಣೆ, ಸ್ಟ್ರೀಮಿಂಗ್ ಅಥವಾ ಇನ್ಯಾವುದೇ ವಾಣಿಜ್ಯ ಬಳಕೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿತ್ತು. ಆದರೆ ಮದ್ರಾಸ್ ನ್ಯಾಯಾಲಯವು ಬಿಡುಗಡೆಗೆ ತಡೆ ನೀಡಿದ್ದು, ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್ – Kannada News | Salman Khan Breaks silence on Health concerns reveals 16 KG weight loss

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಕಳೆದ ಕೆಲವು ವಾರಗಳಿಂದ ತಮ್ಮ ಹಠಾತ್ ತೂಕ ಇಳಿಕೆಯಿಂದಾಗಿ ಸುದ್ದಿಯಲ್ಲಿದ್ದರು. ಸಲ್ಮಾನ್ ಅತ್ಯಂತ ತೆಳ್ಳಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಲ್ಮಾನ್ ಖಾನ್ ಅವರೇ ಈ ಕುರಿತು ಮೌನ ಮುರಿದಿದ್ದು, ತಮಗಿದ್ದ ಆರೋಗ್ಯದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

‘ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ’

ಪ್ರೈಮ್ ವೀಡಿಯೊದ ‘ಅಲಯನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ತಮ್ಮ ಸಹೋದರ ಸೊಹೈಲ್ ಖಾನ್ ಅವರನ್ನು ಪ್ರೋತ್ಸಾಹಿಸಲು ಸಲ್ಮಾನ್ ಖಾನ್ ಅವರು ಈ ಶೋಗೆ ಆಗಮಿಸಿದ್ದರು. ಈ ವೇಳೆ ಇಬ್ಬರೂ ಸಹೋದರರು ಫಿಟ್‌ನೆಸ್ ಕುರಿತು ತಮಾಷೆಯಾಗಿ ಮಾತನಾಡಿಕೊಂಡಿದ್ದಾರೆ. ಸೊಹೈಲ್ ಖಾನ್ ಅವರು ತಮ್ಮ ಸಿಕ್ಸ್ ಪ್ಯಾಕ್ ತೋರಿಸಿ, ತಾವು 12 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್ ಖಾನ್, ‘ನಾನು ಭಾರಿ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದೇನೆ, ಒಟ್ಟು 16 ಕೆಜಿ ತೂಕ ಕಡಿಮೆಯಾಗಿದೆ’ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಆರೋಗ್ಯದ ಕುರಿತ ಗಾಸಿಪ್‌ಗಳಿಗೆ ಪೂರ್ಣವಿರಾಮ:

ಮುಂಬೈನ ಎಸ್ಆರ್‌ಎ ಕಚೇರಿ ಉದ್ಘಾಟನೆ ಸೇರಿದಂತೆ ಇತ್ತೀಚಿನ ಕೆಲವು ಕಾರ್ಯಕ್ರಮಗಳಲ್ಲಿ ಸಲ್ಮಾನ್ ಖಾನ್ ಅವರು ಅತ್ಯಂತ ತೆಳ್ಳಗೆ ಕಾಣಿಸಿಕೊಂಡ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಿಂದಾಗಿ ಅವರು ಯಾವುದಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂಬ ಚರ್ಚೆಗಳು ಗಾಸಿಪ್ ಪ್ರಿಯರಲ್ಲಿ ಶುರುವಾಗಿದ್ದವು. ಆದರೆ ತಮ್ಮ ಹೊಸ ಲುಕ್ ಉದ್ದೇಶಪೂರ್ವಕವಾಗಿ ಮಾಡಿಕೊಂಡ ಫಿಟ್‌ನೆಸ್ ಬದಲಾವಣೆ ಎಂದು ತಿಳಿಸುವ ಮೂಲಕ ಸಲ್ಮಾನ್ ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ‘70 ಜನ ಒಂದೇ ಟಾಯ್ಲೆಟ್ ಬಳಸಬೇಕಿತ್ತು’: ಜೈಲು ದಿನಗಳ ಕಷ್ಟ ನೆನೆದ ಸಲ್ಮಾನ್ ಖಾನ್

ಮುಂದಿನ ಸಿನಿಮಾಗಾಗಿ ಈ ಫಿಟ್‌ನೆಸ್?

ಸಲ್ಮಾನ್ ಖಾನ್ ಈ ತೂಕ ಇಳಿಕೆಗೆ ನಿಖರ ಕಾರಣವನ್ನು ಹಂಚಿಕೊಳ್ಳದಿದ್ದರೂ, ತಮ್ಮ ಮುಂಬರುವ ಆಕ್ಷನ್ ಚಿತ್ರ ‘SVC63’ ಸಲುವಾಗಿ ಈ ಮೇಕ್ ಓವರ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಅವರು ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜೊತೆಗೆ ‘ಖತ್ರೋನ್ ಕೆ ಕಿಲಾಡಿ 15’ ಮುಕ್ತಾಯಗೊಂಡ ನಂತರ ಸಲ್ಮಾನ್ ಖಾನ್ ‘ಬಿಗ್ ಬಾಸ್’ ಹೊಸ ಸೀಸನ್‌ಗೆ ನಿರೂಪಕರಾಗಿ ಮರಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ: ‘ಮನಸ್ಸಿಗೆ ನೋವಾಗಿದೆ’ ಎಂದ ಬಸವರಾಜ ಹೊರಟ್ಟಿ – Kannada News | CM D.K. Shivakumar Ask Basavaraj Horatti to Resign as Legislative Council Chairman

ಬೆಂಗಳೂರು, ಆಗಸ್ಟ್​​ 04: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿಗೆ (Basavaraj Horatti) ಸಿಎಂ ಡಿಕೆ ಶಿವಕುಮಾರ್ (DK Shivakumar)​​ ಸೂಚನೆ ನೀಡಿದ್ದಾರೆ. ಮಧ್ಯಾಹ್ನ 2ರ ಸುಮಾರಿಗೆ ಕರೆ ಮಾಡಿದ್ದ ಸಿಎಂ ‘ಪಕ್ಷದ ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ’ ಎಂದಿದ್ದಾರೆ. ಡಿಕೆ ಶಿವಕುಮಾರ್ ಕರೆ ಬೆನ್ನಲ್ಲೇ ಸದ್ಯ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ.

ಮನಸ್ಸಿಗೆ ತುಂಬಾ ನೋವಾಗಿದೆ ಎಂದ ಬಸವರಾಜ ಹೊರಟ್ಟಿ

ಈ ಕುರಿತಾಗಿ ಟಿವಿ9 ಜೊತೆಗೆ ಮಾತನಾಡಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಇದು ಕಲುಷಿತ ರಾಜಕಾರಣ. ಮನಸ್ಸಿಗೆ ತುಂಬಾ ನೋವಾಗಿದೆ. ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಪಕ್ಷದ ಲೆಟರ್ ಹೆಡ್​ನಲ್ಲಿ ಎಂದೂ ಈ ರೀತಿ ಆಯ್ಕೆ ಆಗಿರಲಿಲ್ಲ. ಸಭಾಪತಿ, ಸಭಾಧ್ಯಕ್ಷರ ಸ್ಥಾನ ಸಾಂವಿಧಾನಿಕ ಹುದ್ದೆ. ನನಗೆ ನೋಟಿಸ್ ಕೊಡಲಿ ಉತ್ತರ ಕೊಡುತ್ತೇನೆ. ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆನೂ ಇಲ್ಲ. ಯಾವ ಕಾರಣಕ್ಕೆ ರಾಜೀನಾಮೆ ಕೇಳಿದರು ಎನ್ನುವುದು ಮುಖ್ಯ’ ಎಂದಿದ್ದಾರೆ.

ಇದನ್ನೂ ಓದಿ: ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಿಲ್ಲ ಎಂದ ಬಿ‌ಕೆ ಹರಿಪ್ರಸಾದ್

ಸಿಎಂ ಡಿಕೆ ಶಿವಕುಮಾರ್​ ಕರೆ ವಿಚಾರವಾಗಿ ಮಾತನಾಡಿದ ಅವರು, ‘ಅರ್ಧ ಗಂಟೆ ಹಿಂದೆ ಸಿಎಂ ಕರೆ ಮಾಡಿದ್ದರು. ಪಕ್ಷದಿಂದ ಆಯ್ಕೆ ಪ್ರಕ್ರಿಯೆ ಆಗಿದೆ. ತಾವು ರಾಜೀನಾಮೆ ನೀಡಿ ಅಂದರು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ನಾನು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೊತೆಗೆ ತೀರ್ಮಾನ ಮಾಡುತ್ತೇನೆ’ ಎಂದರು.

ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಎಂದ ಹೊರಟ್ಟಿ

‘ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಇರಲಿಲ್ಲ. ಸಭಾಪತಿ ಪೀಠಕ್ಕೆ ಅವಮಾನ ಮಾಡಿದಂತೆ. ನನ್ನ ಅವಧಿ ಇನ್ನೂ ಇದೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಕೊಡಲ್ಲ. ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ’ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:01 pm, Tue, 4 August 26

Source link

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಕ್ಕೆ ಮಿಜೋರಾಂನ ಆರೋಗ್ಯ ಸಚಿವೆ ಶ್ರೀಮತಿ ಲಾಲ್ರಿನ್‌ಪುಯಿ ಭೇಟಿ – Kannada News | Lalrinpuii at Presidency University: Empowering Students for Future Success

ಮಿಜೋರಾಂ ಆರೋಗ್ಯ ಸಚಿವೆ ಲಾಲ್ರಿನ್‌ಪುಯಿ ಭೇಟಿ

ಬೆಂಗಳೂರು, ಆ.4: ಹೊಸ ಶೈಕ್ಷಣಿಕ ಅವಧಿಯ ಆರಂಭದ ಅಂಗವಾಗಿ, ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಮಿಜೋರಾಂನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಶ್ರೀಮತಿ ಲಾಲ್ರಿನ್‌ಪುಯಿ ಅವರನ್ನು ಸ್ವಾಗತಿಸಿತು. ಕ್ಯಾಂಪಸ್‌ಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಸಮರ್ಪಣಾ ಭಾವ, ಪ್ರಾಮಾಣಿಕತೆ ಹಾಗೂ ಬಲವಾದ ಸಾಮಾಜಿಕ ಜವಾಬ್ದಾರಿಯೊಂದಿಗೆ ಶಿಕ್ಷಣವನ್ನು ಮುಂದುವರಿಸುವಂತೆ ಅವರಿಗೆ ಕರೆ ನೀಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ನಿಸಾರ್ ಅಹ್ಮದ್, ಉಪಾಧ್ಯಕ್ಷೆ ಡಾ. ನಫೀಸಾ ಅಹ್ಮದ್, ಕುಲಪತಿ ಡಾ. ಎಸ್.ಜೆ. ತಿರುವೆಂಕಟಂ ಮತ್ತು ಸಹ-ಕುಲಪತಿ ಡಾ. ವಿದ್ಯಾ ಶಂಕರ್ ಶೆಟ್ಟಿ ಅವರು ಸಚಿವರಿಗೆ ಸ್ವಾಗತ ಕೋರಿದರು.ವಿವಿಧ ವಿಭಾಗಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಲಾಲ್ರಿನ್‌ಪುಯಿ, ತಮ್ಮ ಶೈಕ್ಷಣಿಕ ಪಯಣದ ಹೊಸ ಹಂತವನ್ನು ಪ್ರಾರಂಭಿಸುತ್ತಿರುವ ಹೊಸ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಹಿರಿಯ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗುವಂತೆ ಮುನ್ನಡೆಯಲು ಪ್ರೋತ್ಸಾಹಿಸಿದರು. ಉನ್ನತ ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ. ಅದು ವ್ಯಕ್ತಿತ್ವವನ್ನು ರೂಪಿಸುವ, ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಯುವಜನರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಸಿದ್ಧಪಡಿಸುವ ಪರಿವರ್ತನಾಶೀಲ ಅವಧಿಯಾಗಿದೆ ಎಂದು ಅವರು ಹೇಳಿದರು.

ಮಾದಕವಸ್ತುಗಳು, ಹಿಂಸಾಚಾರ ಮತ್ತು ಇತರ ಹಾನಿಕಾರಕ ಪ್ರಭಾವಗಳಿಂದ ದೂರವಿದ್ದು, ಸಮತೋಲಿತ ಮತ್ತು ಜವಾಬ್ದಾರಿಯುತ ಜೀವನವನ್ನು ನಡೆಸುವಂತೆ ಸಚಿವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಂತ್ರಜ್ಞಾನದ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸಿದ ಅವರು, ಡಿಜಿಟಲ್ ಅರಿವಿನ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ, ತಂತ್ರಜ್ಞಾನವು ಗಮನವನ್ನು ಬೇರೆಡೆಗೆ ಸೆಳೆಯುವ ಸಾಧನವಾಗುವ ಬದಲು, ಕಲಿಕೆ ಮತ್ತು ಬೆಳವಣಿಗೆಗೆ ಪೂರಕವಾದ ಸಾಧನವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಿಜೋರಾಂ ವಿಧಾನಸಭೆಯಲ್ಲಿ ಪೂರ್ಣ ಪ್ರಮಾಣದ ಸಚಿವ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಮತ್ತು ಮಿಜೋರಾಂ ರಾಜ್ಯದಲ್ಲಿ ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಇಂಡಿಯಾ ಐಕಾನ್ ಅವಾರ್ಡ್ 2026’ ಪಡೆದವರಾದ ಶ್ರೀಮತಿ ಲಾಲ್ರಿನ್‌ಪುಯಿ, ತಮ್ಮ ಸ್ವಂತ ಜೀವನದ ಅನುಭವಗಳನ್ನು ಹಂಚಿಕೊಂಡರು. ಪರಿಶ್ರಮ, ಶಿಸ್ತು ಮತ್ತು ನಿರಂತರ ಕಠಿಣ ಪರಿಶ್ರಮದ ಮೂಲಕವೇ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ನೆನಪಿಸಿದರು.

ಇದನ್ನೂ ಓದಿ; ಕರ್ನಾಟಕದ ಜೈವಿಕ ಇಂಧನ ಮಾದರಿಗೆ ಅಮೆರಿಕ ಮೆಚ್ಚುಗೆ: ರಾಜ್ಯಕ್ಕೆ ಭೇಟಿ ನೀಡುವಂತೆ ಗವರ್ನರ್ ವೆಸ್ ಮೂರ್‌ಗೆ ಆಹ್ವಾನ

ಭಾರತವು ವಿಶ್ವದ ಅತ್ಯಂತ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಆಕಾಂಕ್ಷೆಗಳಿಗಾಗಿ ಮಾತ್ರವಲ್ಲದೆ, ಸಮಾಜದ ಪ್ರಗತಿ ಮತ್ತು ರಾಷ್ಟ್ರ ನಿರ್ಮಾಣಕ್ಕೂ ಕೊಡುಗೆ ನೀಡುವಂತೆ ಕರೆ ನೀಡಿದರು.

ತಮ್ಮ ಭೇಟಿಯ ಸಂದರ್ಭದಲ್ಲಿ ಸಚಿವರು ಕ್ಯಾಂಪಸ್ ಅನ್ನು ವೀಕ್ಷಿಸಿದರು ಮತ್ತು ವಿಶ್ವವಿದ್ಯಾಲಯದ ವೈವಿಧ್ಯಮಯ ವಿದ್ಯಾರ್ಥಿ ಸಮುದಾಯವನ್ನು, ವಿಶೇಷವಾಗಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಇಲ್ಲಿ ಕಲ್ಪಿಸಲಾದ ಎಲ್ಲರನ್ನೂ ಒಳಗೊಳ್ಳುವ ಮತ್ತು ಬೆಂಬಲ ನೀಡುವ ವಾತಾವರಣವನ್ನು ಶ್ಲಾಘಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ – Kannada News | Udhayanidhi Stalin released hours after arrest in Remark against Trisha Case

ಚೆನ್ನೈ, ಆಗಸ್ಟ್ 4: ಕಾವೇರಿ ನೀರು ಹಂಚಿಕೆ ವಿವಾದದ ಪ್ರತಿಭಟನೆಯಲ್ಲಿ ನಟಿ ತ್ರಿಶಾ (Trisha Krishnan) ಕುರಿತು ಆಡಿದ ವಿವಾದಾತ್ಮಕ ಹೇಳಿಕೆಗಾಗಿ ಬಂಧನಕ್ಕೊಳಗಾಗಿದ್ದ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin), ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿಚಾರಣೆ ನಡೆಸಿದ ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಡಿಎಂಕೆ ನಾಯಕನಿಗೆ ತಕ್ಷಣದ ರಿಲೀಫ್ ಸಿಕ್ಕಂತಾಗಿದೆ.

ಪೋಲಿಸರು ಬಂಧಿಸಿ ಕರೆದೊಯ್ಯುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಉದಯನಿಧಿ, “ನಾನು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನಾದರೂ ಹೇಳಿದ್ದೇನಾ? ಹಾಗಿದ್ದರೂ ಏಕೆ ನನ್ನನ್ನು ಬಂಧಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನ್ಯಾಯಾಲಯವೇ ಸತ್ಯವೇನೆಂದು ತೀರ್ಮಾನಿಸಲಿ” ಎಂದಿದ್ದರು.

ಇದನ್ನೂ ಓದಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಉದಯನಿಧಿ ವಿರುದ್ಧ ದಾಖಲಾದ ಪ್ರಕರಣಗಳು:

ಅಶ್ಲೀಲ ಪದಗಳ ಬಳಕೆ ಮತ್ತು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದ್ವೇಷವನ್ನು ಪ್ರಚೋದಿಸುವುದು, ಗಲಭೆ ಎಬ್ಬಿಸುವ ಉದ್ದೇಶದಿಂದ ಉದ್ರೇಕಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಒಟ್ಟು 9 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಇದರೊಂದಿಗೆ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ನಿಬಂಧನೆಗಳನ್ನೂ ಅನ್ವಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ನೀಡಿದ ನಂತರ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಉದಯನಿಧಿ ಅವರ ಬಂಧನವನ್ನು ಖಂಡಿಸಿ ಡಿಎಂಕೆ ಕಾರ್ಯಕರ್ತರು ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.

ಇದನ್ನೂ ಓದಿ: ‘ತ್ರಿಶಾ ಹೆಸರನ್ನೇ ಹೇಳಿಲ್ಲ’; ಉದಯನಿಧಿ ಬಂಧನದ ಬಳಿಕ ಟಿವಿಕೆ ಸರ್ಕಾರದ ವಿರುದ್ಧ ತಿರುಗಿಬಿದ್ದ ಡಿಎಂಕೆ

ಏನಿದು ಘಟನೆ?:

ಸೋಮವಾರ ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಸಭೆಯಲ್ಲಿದ್ದ ಯಾರೋ ಒಬ್ಬರು “ತ್ರಿಶಾ, ತ್ರಿಶಾ” ಎಂದು ಘೋಷಣೆ ಕೂಗಿದರು. ಆಗ ತಮ್ಮ ಭಾಷಣವನ್ನು ನಿಲ್ಲಿಸಿ ಕುಹಕವಾಡಿದ ಉದಯನಿಧಿ, “ಎಲ್ಲಿಗೆ ನೀರು ಹರಿಯಬೇಕೋ ಅಲ್ಲಿಗೆ ಹರಿಯಬೇಕು, ನಾನು ಕಾವೇರಿ ಕುರಿತು ಹೇಳಿದ್ದು” ಎಂದು ನಟಿ ತ್ರಿಶಾ ಕುರಿತು ಪರೋಕ್ಷವಾಗಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು. ಈ ಮಾತುಗಳು ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾದವು.

ಹೈಕೋರ್ಟ್‌ ವಿಚಾರಣೆ:

ನೀಲಂಕರೈನಲ್ಲಿರುವ ಉದಯನಿಧಿ ಅವರ ನಿವಾಸಕ್ಕೆ ಪೊಲೀಸರು ತಲುಪಿದ ತಕ್ಷಣವೇ ಅವರ ಕಾನೂನು ತಂಡವು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಉದಯನಿಧಿ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಉದಯನಿಧಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಯಾವುದೇ ಉದ್ದೇಶ ಪೊಲೀಸರಿಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಪೋಲಿಸರಿಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆಯುವ ಇಚ್ಛೆಯಿಲ್ಲ, ಕೇವಲ ವಿಚಾರಣೆ ನಡೆಸುವುದು ಮಾತ್ರವೇ ಉದ್ದೇಶವಾಗಿದೆ” ಎಂದು ವಿಜಯ್ ನೇತೃತ್ವದ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಈ ವಾದವನ್ನು ಸ್ವೀಕರಿಸಿದ ಹೈಕೋರ್ಟ್, ವಿಚಾರಣೆ ನಡೆಸಿದ ತಕ್ಷಣವೇ ಅವರನ್ನು ಅದೇ ದಿನ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:47 pm, Tue, 4 August 26

Source link

ಭಾರೀ ಮಳೆ ಹಿನ್ನೆಲೆ ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್: ಚಾರಣಿಗರಿಗೆ ನಿರಾಸೆ – Kannada News | Kudremukh Trekking Suspended Temporarily; Forest Department Promises Full Refund

ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್

ಚಿಕ್ಕಮಗಳೂರು, ಆಗಸ್ಟ್​​ 04: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖ, ಬೆಳ್ತಂಗಡಿ ಹಾಗೂ ಕೆರೆಕಟ್ಟೆ ವಲಯಗಳ ವ್ಯಾಪ್ತಿಯಲ್ಲಿರುವ ಟ್ರೆಕ್ಕಿಂಗ್ ಮಾರ್ಗಗಳನ್ನು ಸುರಕ್ಷತಾ ಕಾರಣಗಳಿಂದ ಮುಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ಜಾರು ಹಾದಿಗಳು, ಉಕ್ಕಿ ಹರಿಯುತ್ತಿರುವ ಹೊಳೆಗಳು ಹಾಗೂ ಮರ ಮತ್ತು ಕೊಂಬೆಗಳು ಬೀಳುವ ಅಪಾಯ ಹೆಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಕಳಸ ಸಮೀಪದ ಸೇತುವೆಯೊಂದರ ಮೇಲೆ ನೀರಿನ ಮಟ್ಟ ತಾತ್ಕಾಲಿಕವಾಗಿ ಏರಿಕೆಯಾಗಿದ್ದರೂ ನಂತರ ಇಳಿಕೆಯಾಗಿದೆ. ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಮಳೆಯ ಪ್ರಮಾಣ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯನ್ನು ಅವಲೋಕಿಸಿ, ಟ್ರೆಕ್ಕಿಂಗ್ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಅನಾಹುತ ವರದಿಯಾಗಿಲ್ಲ. ಆದರೆ ಹಲವು ಕಡೆ ಮರಗಳು ಉರುಳಿರುವ ಘಟನೆಗಳು ದಾಖಲಾಗಿವೆ. ಇದೇ ವೇಳೆ, ಕೊಡಚಾದ್ರಿ ಸಫಾರಿ ಸೇವೆ ಎಂದಿನಂತೆ ಮುಂದುವರಿದಿದೆ. ಮಳೆಯ ತೀವ್ರತೆ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯ ಬಗ್ಗೆ ವಲಯ ಮಟ್ಟದ ಅಧಿಕಾರಿಗಳ ವರದಿ ಆಧರಿಸಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳು ಮತ್ತು ಅರಣ್ಯ ಶಿಬಿರಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಉರುಳಿದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮಳೆಗಾಲದಲ್ಲಿ ಇಂತಹ ಮುನ್ನೆಚ್ಚರಿಕಾ ಕ್ರಮಗಳು ಸಾಮಾನ್ಯವಾಗಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಟ್ರೆಕ್ಕಿಂಗ್ ಮಾರ್ಗಗಳನ್ನು ಮತ್ತೆ ತೆರೆಯಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರವಾಸಿಗರಿಗೆ ರದ್ದುಗೊಂಡ ಟ್ರೆಕ್ಕಿಂಗ್‌ಗೆ ಹಣ ಮರುಪಾವತಿ (ರಿಫಂಡ್) ಮಾಡಲಾಗುವುದು. ಜೊತೆಗೆ, ನೋಂದಾಯಿತ ಟ್ರೆಕ್ಕರ್‌ಗಳಿಗೆ ಈ ಕುರಿತು ಮಾಹಿತಿ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ – Kannada News | Belagavi: Malaprabha River Swells After Heavy Rain, Akka Gangambika Aikya Sthala Submerged

ಬೆಳಗಾವಿ, ಆಗಸ್ಟ್​ 04: ಜಿಲ್ಲೆಯ ಖಾನಾಪುರ ಮತ್ತು ಕಣಕುಂಬಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಿತ್ತೂರು ತಾಲೂಕಿನ ಇಟಗಿ ಗ್ರಾಮದ ಬಳಿ ಹರಿಯುವ ಮಲಪ್ರಭಾ ನದಿಗೆ ಸದ್ಯ 7000 ಕ್ಯೂಸೆಕ್ ನೀರು ಹರಿದುಬರುತ್ತಿದೆ. ನದಿಯ ತಟದಲ್ಲಿರುವ ಅಕ್ಕ ಗಂಗಾಂಬಿಕಾ ಐಕ್ಯ ಸ್ಥಳವು ಸಂಪೂರ್ಣವಾಗಿ ಮಲಪ್ರಭಾ ನದಿಯಿಂದ ಸುತ್ತುವರೆದಿದೆ. ಒಂದು ತಿಂಗಳ ಹಿಂದೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ನದಿಗೆ ಇದೀಗ ಜೀವಕಳೆ ಬಂದಿದೆ. ನದಿ ಪಾತ್ರದಲ್ಲಿರುವ ಕೆಳ ಹಂತದ ಸೇತುವೆಗಳು ಸಹ ಮುಳುಗುವ ಹಂತಕ್ಕೆ ತಲುಪಿವೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಗೆಳೆಯರನ್ನು ಸಿನಿಮಾ ನಿರ್ಮಾಪರನ್ನಾಗಿಸಿದ ಅಲ್ಲು ಅರ್ಜುನ್ – Kannada News | Allu Arjun made his close friends his movie producers

ಇತ್ತೀಚೆಗಷ್ಟೆ ಸ್ನೇಹಿತರ ದಿನ ಮುಗಿದಿದೆ. ಸ್ನೇಹಿತರ ದಿನದಂದು ಸಾಮಾನ್ಯ ಆಚರಣೆಯೆಂದರೆ ಹಳೆಯ ಸ್ನೇಹಿತರೆಲ್ಲ ಸೇರಿ ಎಣ್ಣೆ ಹೊಡೆಯುತ್ತಾರೆ, ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಪರಸ್ಪರ ಶುಭ ಸಂದೇಶಗಳನ್ನು ಕಳಿಸಿಕೊಳ್ಳುತ್ತಾರೆ. ಆದರೆ ಸ್ಟಾರ್ ನಟ ಅಲ್ಲು ಅರ್ಜುನ್, ಸ್ನೇಹಿತರ ದಿನದಂದು ತಮ್ಮ ಗೆಳೆಯರಿಂದ ಅದ್ಭುತವಾದ ಅವಕಾಶವೊಂದನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಯಾರೂ ನೀಡದ ಅಪರೂಪದ ಉಡುಗೊರೆಯೊಂದನ್ನು ತಮ್ಮ ಆಪ್ತ ಸ್ನೇಹಿತರಿಗೆ ಅಲ್ಲು ಅರ್ಜುನ್ (Allu Arjun) ನೀಡಿದ್ದಾರೆ.

ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಭಾರತದ ದೊಡ್ಡ-ದೊಡ್ಡ ನಿರ್ಮಾಪಕರು ಅವರ ಸಿನಿಮಾಕ್ಕೆ ಬಂಡವಾಳ ಹೂಡಲು ಹಣದ ಥೈಲಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್, ತಮ್ಮ ಗೆಳೆಯರಿಗೆ ತಮ್ಮ ಸಿನಿಮಾದ ನಿರ್ಮಾಪಕರಾಗುವ ಅವಕಾಶ ನೀಡಿದ್ದಾರೆ. ಆ ಮೂಲಕ ಅವರನ್ನು ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟಿಸಿ, ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿರುವ ‘AA23’ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರ ನಾಲ್ಕು ಗೆಳೆಯರು ಸಹ ನಿರ್ಮಾಪಕರಾಗಿದ್ದಾರೆ. ಸ್ನೇಹಿತರ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ‘ಪುಷ್ಪ’ ನಟ ತಮ್ಮ ಅತ್ಯಂತ ಆಪ್ತರಾದ ನಾಲ್ವರು ಸ್ನೇಹಿತರನ್ನು ಈ ಚಿತ್ರಕ್ಕೆ ಸಹ-ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

‘AA23’ ಚಿತ್ರಕ್ಕೆ ಅಲ್ಲು ಅರ್ಜುನ್ ಅವರ ಆಪ್ತ ಗೆಳೆಯರಾದ ಬನ್ನಿ ವಾಸು, ಸಂದೀಪ್ ರಾಮಿನೇನಿ, ನಟರಾಜ್ ಮತ್ತು ಸ್ವಾತಿ ಅವರನ್ನು ಸಹ-ನಿರ್ಮಾಪಕರಾಗಿ ಅಲ್ಲು ಅರ್ಜುನ್ ಸೇರಿಸಿಕೊಂಡಿದ್ದಾರೆ. ತಮ್ಮ ಕಷ್ಟ-ಸುಖದ ಹಾದಿಯಲ್ಲಿ ಜೊತೆಯಾಗಿ ನಿಂತವರನ್ನು ನಟ ಎಂದಿಗೂ ಮರೆಯುವುದಿಲ್ಲ ಎಂದು ಅಭಿಮಾನಿಗಳು ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಕ್ಕೆ ಅಲ್ಲು ಅರ್ಜುನ್ ಗೆಳೆಯರ ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಸಹ ನಿರ್ಮಾಪಕರಾಗಿ ಜೊತೆಗಿರಲಿದ್ದಾರೆ.

ಇದನ್ನೂ ಓದಿ:ತಮ್ಮ ಫ್ಯಾನ್ಸ್​​ಗೆ ಬಂಪರ್ ಗಿಫ್ಟ್ ಕೊಟ್ಟ ನಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಮತ್ತು ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರುಗಳು ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಪ್ರಸ್ತುತ ತಮಿಳಿನ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಲೋಕೇಶ್ ಕನಗರಾಜ್ ಅವರ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ರೆಟ್ರೋ ಶೈಲಿಯ ಕತೆ ಹೊಂದಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅಲ್ಲು ಅರ್ಜುನ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಈಗ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸುಕುಮಾರ್ ನಿರ್ದೇಶನ ‘ಪುಷ್ಪ 3’ ಸಿನಿಮಾನಲ್ಲೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version