ನಟಿ ಪ್ರೀತಿ ಜಿಂಟಾ ಜೊತೆ ಡೇಟಿಂಗ್ ಮಾಡಿದ್ದು ನಿಜವೇ? ಉತ್ತರಿಸಿದ ಬ್ರೆಟ್ ಲೀ – Kannada News | Brett Lee clarifies old Dating rumours with actress Preity Zinta

ಬಾಲಿವುಡ್ ಮತ್ತು ಕ್ರಿಕೆಟ್ ಲೋಕದ ಹಳೆಯ ವದಂತಿಗಳಿಗೆ ಇದೀಗ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ (Brett Lee) ಪೂರ್ಣವಿರಾಮ ಇಟ್ಟಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ಜೊತೆಗಿನ ತಮ್ಮ ಲಿಂಕ್-ಅಪ್ ವದಂತಿಗಳ ಕುರಿತು ಬ್ರೆಟ್ ಲೀ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಪ್ರೇಮ ಪುಕಾರುಗಳನ್ನು ತಳ್ಳಿಹಾಕಿದ ಬ್ರೆಟ್ ಲೀ, ‘ನಾನು ಯಾವುದೇ ಬಾಲಿವುಡ್ ನಟಿಯೊಂದಿಗೂ ಡೇಟಿಂಗ್ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೀತಿ ಜಿಂಟಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ, ‘ಪ್ರೀತಿ ಜಿಂಟಾ ಮತ್ತು ನಾನು ಎಂದಿಗೂ ಉತ್ತಮ ಸ್ನೇಹಿತರು. ಅವರು ಪಂಜಾಬ್ ಕಿಂಗ್ಸ್ ತಂಡದ ಒಡತಿಯಾಗಿದ್ದರು. ಪ್ರೀತಿ ಅತ್ಯಂತ ಬುದ್ಧಿವಂತ ಮಹಿಳೆ ಹಾಗೂ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇಂತಹ ಸುಳ್ಳು ಸುದ್ದಿಗಳು ನನಗೆ ಎಂದಿಗೂ ತೊಂದರೆ ನೀಡಲಿಲ್ಲ. ಏಕೆಂದರೆ ನನಗಾಗಲಿ ಅವರಿಗಾಗಲಿ ಸತ್ಯ ಏನೆಂದು ತಿಳಿದಿತ್ತು’ ಎಂದು ಹೇಳಿದ್ದಾರೆ.

2008-2011ರ ನಡುವೆ ಹರಡಿದ್ದ ವದಂತಿಗಳು:

ಐಪಿಎಲ್ ಆರಂಭಿಕ ಆವೃತ್ತಿಗಳಲ್ಲಿ ಬ್ರೆಟ್ ಲೀ ಪಂಜಾಬ್ ಕಿಂಗ್ಸ್ (ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್) ಪರ ಆಡುತ್ತಿದ್ದಾಗ, ಪ್ರೀತಿ ಜಿಂಟಾ ಹಾಗೂ ಅವರ ನಡುವೆ ಅಫೇರ್ ಇದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಮುಂಬೈನ ಹೋಟೆಲ್ ಒಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಈ ವದಂತಿ ಮತ್ತಷ್ಟು ಹೆಚ್ಚಾಗಿತ್ತು. ಆ ಸಂದರ್ಭದಲ್ಲೇ ಪ್ರೀತಿ ಜಿಂಟಾ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿ, ಬ್ರೆಟ್ ಲೀ ಅವರು ತಮ್ಮ ಆತ್ಮೀಯ ಗೆಳೆಯ ಮಾತ್ರ ಎಂದು ಬರೆದುಕೊಂಡಿದ್ದರು.

ಬ್ರೆಟ್ ಲೀ ವೈಯಕ್ತಿಕ ಜೀವನ:

ಬ್ರೆಟ್ ಲೀ 2006ರಲ್ಲಿ ಎಲಿಜಬೆತ್ ಕೆಂಪ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ 2009ರಲ್ಲಿ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ತದನಂತರ, 2014ರಲ್ಲಿ ಲಾನಾ ಆಂಡರ್ಸನ್ ಅವರನ್ನು ಬ್ರೆಟ್ ಲೀ ಎರಡನೇ ಮದುವೆಯಾದರು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರೀತಿ ಜಿಂಟಾ ಮತ್ತು ಬ್ರೆಟ್ ಲೀ ಬಗ್ಗೆ ವದಂತಿಗಳು ಹರಡುತ್ತಿದ್ದ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕ ಹಾಗೂ ಉದ್ಯಮಿ ನೆಸ್ ವಾಡಿಯಾ ಅವರೊಂದಿಗೆ ಪ್ರೀತಿ ಜಿಂಟಾ ಅವರ ಬ್ರೇಕಪ್ ಮತ್ತು ಎಂಗೇಜ್‌ಮೆಂಟ್ ವದಂತಿಗಳು ಸಖತ್ ಸುದ್ದಿ ಮಾಡಿದ್ದವು. ಅಂತಿಮವಾಗಿ 2016ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜೀನ್ ಗುಡ್‌ಎನಫ್ ಅವರನ್ನು ಮದುವೆಯಾದ ಪ್ರೀತಿ ಜಿಂಟಾ, 2021ರಲ್ಲಿ ಬಾಡಿಗೆ ತಾಯ್ತನದ (ಸರೋಗಸಿ) ಮೂಲಕ ಅವಳಿ ಮಕ್ಕಳನ್ನು ಪಡೆದರು.

ಇದನ್ನೂ ಓದಿ: ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ

ಪ್ರೀತಿ ಜಿಂಟಾ ಮುಂಬರುವ ಸಿನಿಮಾಗಳು:

ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ನಟಿ ಪ್ರೀತಿ ಜಿಂಟಾ, ಪ್ರಸ್ತುತ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ, ಸನ್ನಿ ಡಿಯೋಲ್ ಹಾಗೂ ಶಬಾನಾ ಅಜ್ಮಿ ಅಭಿನಯದ ‘ಬಟ್ವಾರಾ 1947’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಕುನಾಲ್ ಖೇಮು ನಿರ್ದೇಶನದ ‘ವೈಬ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ – Kannada News | Air India Phuket Delhi Flight Drops 300 Feet after Turbulence 14 Injured

ನವದೆಹಲಿ, ಆಗಸ್ಟ್ 4: ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಆಗಸದಲ್ಲಿ ತೀವ್ರ ಸ್ವರೂಪದ ಗಾಳಿಗೆ ಸಿಲುಕಿ, ಕ್ಷಣಾರ್ಧದಲ್ಲಿ ಬರೋಬ್ಬರಿ 300 ಅಡಿ ಕೆಳಕ್ಕೆ ಕುಸಿದ ಪರಿಣಾಮವಾಗಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ. ವಿಮಾನವು ಇದ್ದಕ್ಕಿದ್ದಂತೆ ಸುಮಾರು 300 ಅಡಿಗಳಷ್ಟು ಆಳಕ್ಕೆ ಧುಮುಕಿದ್ದರಿಂದ ಒಳಗಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು. ಸೀಟ್ ಬೆಲ್ಟ್ ಧರಿಸದಿದ್ದ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ವಿಮಾನದ ಸಿಬ್ಬಂದಿ ವಿಮಾನದ ಸೀಲಿಂಗ್​ಗೆ ಬಡಿದು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಕೂಡ ಸೇರಿದ್ದಾರೆ.

ವಿಮಾನದಲ್ಲಿ ಉಂಟಾದ ತೀವ್ರ ಆತಂಕದ ವಾತಾವರಣದ ನಡುವೆಯೂ ಏರ್ ಇಂಡಿಯಾ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ತುರ್ತು ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದೆ. ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Plane Crash: ಪೆರುವಿನ ನಾಜ್ಕಾ ಲೈನ್ಸ್ ಬಳಿ ಪ್ರವಾಸಿ ವಿಮಾನ ಪತನ: 11 ವಿದೇಶಿಯರು ಸೇರಿ ಎಲ್ಲಾ 13 ಮಂದಿ ದಾರುಣ ಸಾವು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ವಿಮಾನದ ಒಳಗಿನ ಸೀಲಿಂಗ್ ಪ್ಯಾನೆಲ್‌ಗಳು ಜಖಂಗೊಂಡಿರುವುದು ಕಂಡುಬಂದಿದೆ. ಆರಂಭಿಕ ಮಾಹಿತಿಯ ಪ್ರಕಾರ, ಹಾರಾಟದ ಸಮಯದಲ್ಲಿ ವಿಮಾನವು ತಕ್ಷಣವೇ ಸುಮಾರು 300 ಅಡಿ ಕೆಳಕ್ಕೆ ಧುಮುಕಿದೆ ಎಂದು ಪೈಲಟ್ ತಿಳಿಸಿದ್ದಾರೆ. ಆಗಸದಲ್ಲೇ ವಿಮಾನ ಪಲ್ಟಿ ಹೊಡೆಯುತ್ತಾ ಕುಸಿದ ಕಾರಣದಿಂದ ಶೇ. 80ರಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟು 14 ಜನರಿಗೆ ಹೆಚ್ಚಿನ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆ ವಿಮಾನದಲ್ಲಿನ ಪ್ರಯಾಣಿಕರು ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.

ವಿಮಾನವು ಇನ್ನೂ ಆಗಸದಲ್ಲಿದ್ದಾಗಲೇ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು, ಹೀಗಾಗಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ವೈದ್ಯಕೀಯ ತಂಡಗಳನ್ನು ಸಿದ್ಧವಾಗಿಡಲಾಗಿತ್ತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಕೆಳಗಿಳಿದರು. ಗಾಯಗೊಂಡವರನ್ನು ತಕ್ಷಣವೇ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಈ ಘಟನೆಯ ಕುರಿತು ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, “ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI2379 ವಿಮಾನವು ಹಾರಾಟದ ಮಧ್ಯೆ ಹಠಾತ್ ಗಾಳಿಗೆ ಸಿಲುಕಿ ಕೆಲ ಕ್ಷಣಗಳ ಕಾಲ ಆಗಸದಲ್ಲೇ ಹೊಯ್ದಾಡಿತು ಎಂಬುವುದನ್ನು ದೃಢಪಡಿಸುತ್ತೇವೆ” ಎಂದು ಹೇಳಿದೆ. “ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ವಹಿಸಿ ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗಾಗಿ ವಿಮಾನ ನಿಲ್ದಾಣದ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದ್ದು, ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ – Kannada News | Why Siddaramaiah Skipped New Ministers’ Swearing In? Shivalingegowda Reveals the Real Reason

ಬೆಂಗಳೂರು, ಆಗಸ್ಟ್​​ 04: ಮಾಣವಚನ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಿ ಬಗ್ಗೆ ಹರಿದಾಡುತ್ತಿದ್ದ ಅಸಮಾಧಾನದ ವದಂತಿಗಳ ಸಂಬಂಧ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯನವರು ಸಂತೋಷವಾಗಿದ್ದು, ಅವರು ಶಿಫಾರಸ್ಸು ಮಾಡಿದ್ದ ಬಹುತೇಕ ಎಲ್ಲರಿಗೂ ಸಚಿವ ಸ್ಥಾನ ದೊರಕಿದೆ. ಯಾವುದೋ ಒಂದು ಸಣ್ಣ ಘಟನೆ ಅವರ ಮನಸ್ಸಿಗೆ ಬೇಸರ ತಂದಿರಬಹುದೇ ಹೊರತು, ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual Significance: ನೆಡದೆಯೇ ತಾನಾಗಿಯೇ ತುಳಸಿ ಗಿಡ ಬೆಳೆದರೆ ಏನರ್ಥ? ಆಧ್ಯಾತ್ಮಿಕ ರಹಸ್ಯ ಇಲ್ಲಿದೆ – Kannada News | Spontaneous Tulsi Growth at Home: Spiritual Significance and Auspicious Signs Revealed

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಹಾಗೂ ಪೂಜನೀಯ ಸ್ಥಾನವಿದೆ. ತುಳಸಿಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪವೆಂದು ಹಾಗೂ ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಎಂದು ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ತುಳಸಿಯನ್ನು ಕಟ್ಟೆಯಲ್ಲಿ ಬೀಜ ಬಿತ್ತಿ ಬೆಳೆಸಲಾಗುತ್ತದೆ. ಆದರೆ ನಿಮ್ಮ ಮನೆಯ ಅಂಗಳ ಅಥವಾ ಸುತ್ತಮುತ್ತ ಪರಿಸರದಲ್ಲಿ ನೀವು ನೆಡದೆಯೇ ತುಳಸಿ ಗಿಡವು ತಾನಾಗಿಯೇ ಬೆಳೆದರೆ, ಅದನ್ನು ಸಾಮಾನ್ಯ ಘಟನೆಯೆಂದು ನಿರ್ಲಕ್ಷಿಸಬೇಡಿ. ಇದು ಮನೆಗೆ ಸಾಕ್ಷಾತ್ ದೇವತಾ ಕೃಪೆ ಪ್ರಾಪ್ತಿಯಾಗಿರುವುದರ ದಿವ್ಯ ಸಂಕೇತವಾಗಿದೆ.

ಮನೆಗೆ ತರಲಿದೆ ಅತಿಯಾದ ಆರ್ಥಿಕ ಸಮೃದ್ಧಿ:

ನೈಸರ್ಗಿಕವಾಗಿ ತಾನಾಗಿಯೇ ಬೆಳೆಯುವ ತುಳಸಿ ಗಿಡವು ಆ ಮನೆಯಲ್ಲಿ ಶಾಂತಿ ಮತ್ತು ಆರ್ಥಿಕ ಸುಧಾರಣೆಯನ್ನು ಸೂಚಿಸುತ್ತದೆ. ತುಳಸಿ ಲಕ್ಷ್ಮಿಯ ಸಂಕೇತವಾಗಿರುವುದರಿಂದ, ನೈಸರ್ಗಿಕವಾಗಿ ಬೆಳೆದ ತುಳಸಿಯು ಮುಂಬರುವ ದಿನಗಳಲ್ಲಿ ಕುಟುಂಬದ ಬಡತನ ನಿವಾರಣೆಯಾಗಿ ಸಂಪತ್ತು ಮತ್ತು ಸಂತೋಷ ಹೆಚ್ಚಾಗುವುದನ್ನು ಧ್ವನಿಸುತ್ತದೆ. ಹಚ್ಚ ಹಸಿರಿನಿಂದ ತಾನಾಗಿಯೇ ಬೆಳೆಯುವ ಈ ಸಸ್ಯವು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ತೊಲಗಿಸಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಕುಟುಂಬದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಳ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಸ್ವಯಂಪ್ರೇರಿತವಾಗಿ ಬೆಳೆಯುವ ತುಳಸಿ ಗಿಡವು ಕುಟುಂಬದ ಸದಸ್ಯರಿಗೆ ಒಳ್ಳೆಯ ಸಮಯ ಪ್ರಾರಂಭವಾಗಿದೆ ಎಂಬುದರ ಮುನ್ಸೂಚನೆಯಾಗಿದೆ. ಮನೆಯಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಜಗಳ, ಭಿನ್ನಾಭಿಪ್ರಾಯಗಳು ಹಾಗೂ ಮನಸ್ತಾಪಗಳು ಕ್ರಮೇಣ ಕಡಿಮೆಯಾಗುತ್ತವೆ. ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಕಾರ ಮನೋಭಾವ ಹೆಚ್ಚಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ದಿನನಿತ್ಯ ತುಳಸಿ ಪೂಜೆ ಹಾಗೂ ದೀಪಾರಾಧನೆಯ ನಿಯಮ:

ಮನೆಯಲ್ಲಿ ನೈಸರ್ಗಿಕವಾಗಿ ತುಳಸಿ ಗಿಡ ಮೊಳಕೆಯೊಡೆದಾಗ ಅದನ್ನು ದೇವತೆಗಳ ಕೊಡುಗೆಯೆಂದು ಭಾವಿಸಿ ಪೂಜಿಸಬೇಕು. ದಿನವೂ ಬೆಳಿಗ್ಗೆ ಸ್ನಾನದ ನಂತರ ತುಳಸಿಗೆ ಶುದ್ಧ ನೀರನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠ. ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚಿ ಪೂಜಿಸುವುದರಿಂದ ಮನೆಯಲ್ಲಿ ನೆಮ್ಮದಿ ನೆಲಸಿ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಆಧ್ಯಾತ್ಮಿಕ ನಂಬಿಕೆಯ ಜೊತೆಗೆ ತುಳಸಿಯು ಅದ್ಭುತ ಗಿಡಮೂಲಿಕೆಯಾಗಿದ್ದು, ವಾತಾವರಣವನ್ನು ಶುದ್ಧೀಕರಿಸಲು ಸಹಕಾರಿಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೈದರಾಬಾದ್ ನಿಮ್ಸ್ ಆಸ್ಪತ್ರೆ ಐತಿಹಾಸಿಕ ಸಾಧನೆ: 3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ – Kannada News | Hyderabad’s NIMS Leads with 1000 Robotic Surgeries, Boosting Public Healthcare

ಹೈದರಾಬಾದ್ ಆ. 4, 2026: ತೆಲಂಗಾಣದ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಸಂಸ್ಥೆಯಾದ ಹೈದರಾಬಾದ್‌ನ ನಿಝಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (NIMS) ವೈದ್ಯಕೀಯ ರಂಗದಲ್ಲಿ ಮತ್ತೊಂದು ಅಪರೂಪದ ಮೈಲಿಗಲ್ಲು ನೆಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಆಸ್ಪತ್ರೆಯ ವೈದ್ಯರ ತಂಡವು 1,000 ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು (Robotic Surgeries) ಯಶಸ್ವಿಯಾಗಿ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದೆ. ನಿಮ್ಸ್ ಆಸ್ಪತ್ರೆಯಲ್ಲಿ 2023 ರ ಆಗಸ್ಟ್ ತಿಂಗಳಿನಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಲಾಗಿತ್ತು. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ನೆರವೇರಿಸುವ ಮೂಲಕ ಈ ಸಾಧನೆ ಮಾಡಲಾಗಿದೆ ಎಂದು ನಿಮ್ಸ್ ನಿರ್ದೇಶಕ ರಾಹುಲ್ ದೇವರಾಜ್ ತಿಳಿಸಿದ್ದಾರೆ. ಯುರಾಲಜಿ ವಿಭಾಗದಲ್ಲಿ 590 ಶಸ್ತ್ರಚಿಕಿತ್ಸೆಗಳು, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿನಲ್ಲಿ 248 ಶಸ್ತ್ರಚಿಕಿತ್ಸೆಗಳು, ಸರ್ಜಿಕಲ್ ಆಂಕಾಲಜಿ – ಕ್ಯಾನ್ಸರ್ ವಿಭಾಗದಲ್ಲಿ 162 ಶಸ್ತ್ರಚಿಕಿತ್ಸೆಗಳು ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಈ ಮಟ್ಟದ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಕ್ಕಾಗಿ ತೆಲಂಗಾಣ ಆರೋಗ್ಯ ಸಚಿವ ದಾಮೋದರ ರಾಜನರಸಿಂಹ ಅವರು ನಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ – Kannada News | Parliamentary committee recommends lowering minimum age to 18 years for MD and whole time directors

ಕಾರ್ಪೊರೇಟ್ ಸಭೆಯಲ್ಲಿ ಜನರ ಕರತಾಡನದ ಸಾಂದರ್ಭಿಕ ಚಿತ್ರImage Credit source: Getty Images

ನವದೆಹಲಿ, ಆಗಸ್ಟ್ 4: ಕಾರ್ಪೊರೇಟ್ ವಲಯದಲ್ಲಿ ಯುವ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡುವ ಪ್ರಯತ್ನವಾಗುತ್ತಿದೆ. ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು (Managing Directors – MD) ಮತ್ತು ಪೂರ್ಣಾವಧಿ ನಿರ್ದೇಶಕರ (Whole-Time Directors) ನೇಮಕಾತಿಗೆ ಇರುವ ಕನಿಷ್ಠ ವಯೋಮಿತಿಯನ್ನು ಪ್ರಸ್ತುತ ಇರುವ 21 ವರ್ಷಗಳಿಂದ 18 ವರ್ಷಕ್ಕೆ ಇಳಿಸುವ ಪ್ರಸ್ತಾಪ ಇದೆ. ಕಂಪನಿಗಳ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee on Finance) ಇಂಥದ್ದೊಂದು ಶಿಫಾರಸು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.

ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ್ ಇತ್ಯಾದಿ ಮುಂದುವರಿದ ದೇಶಗಳಲ್ಲಿರುವ ರೀತಿಯ ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಭಾರತದಲ್ಲೂ ತರುವ ಉದ್ದೇಶದಿಂದ ಸ್ಥಾಯಿ ಸಮಿತಿ ಈ ಸಲಹೆ ನೀಡಿದೆ. ಭಾರತದಲ್ಲಿ ಸ್ಟಾರ್ಟಪ್​ಗಳು ಬಹಳ ಹೆಚ್ಚುತ್ತಿದ್ದು, ಈ ಬಹಳಷ್ಟು ನವೋದ್ಯಮಗಳನ್ನು ಹದಿಹರೆಯದವರು ಸ್ಥಾಪಿಸುತ್ತಿದ್ದಾರೆ. ಇದಕ್ಕೆ ಅನುಗುಣವಾಗಿ ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಅಳವಡಿಸುವುದು ಅಗತ್ಯ ಎಂಬುದನ್ನು ಸಮಿತಿ ಗಮನಿಸಿದೆ.

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ಸ್ಥಾಯಿ ಸಮಿತಿ ಶಿಫಾರಸಿನ ಪ್ರಮುಖ ಅಂಶಗಳು

ಭಾರತೀಯ ಕಾನೂನಿನ ಪ್ರಕಾರ 18 ವರ್ಷ ತುಂಬಿದ ವ್ಯಕ್ತಿಯನ್ನು ವಯಸ್ಕ (Adult) ಎಂದು ಪರಿಗಣಿಸಲಾಗುತ್ತದೆ, ಆತನಿಗೆ ಮತದಾನದ ಹಕ್ಕು ಮತ್ತು ಕಾನೂನಾತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳುವ ಹಕ್ಕಿರುತ್ತದೆ. ಆದ್ದರಿಂದ ಕಂಪನಿಯ ವ್ಯಾವಸ್ಥಾಪಕ ನಿರ್ದೇಶಕ ಹಾಗೂ ಪೂರ್ಣಾವಧಿ ನಿರ್ದೇಶಕರ ಹುದ್ದೆಗೂ ಇದೇ ವಯೋಮಿತಿ ಅನ್ವಯಿಸಬೇಕು ಎಂಬುದು ಸಮಿತಿಯ ಅಭಿಪ್ರಾಯ. ಹೀಗಾಗಿ, ಪ್ರಸಕ್ತ ಇರುವ 21 ವರ್ಷದ ವಯೋಮಿತಿಯನ್ನು 18ಕ್ಕೆ ಇಳಿಸಬೇಕೆನ್ನುವುದು ಸಮಿತಿಯ ಅನಿಸಿಕೆ.

ಸ್ಟಾರ್ಟ್‌ಅಪ್‌ಗಳಿಗೆ ಶಕ್ತಿ: ಪ್ರಸ್ತುತ ದೇಶದಲ್ಲಿ ಸಾವಿರಾರು ಯುವ ಉದ್ಯಮಿಗಳು ಕಾಲೇಜು ಹಂತದಲ್ಲೇ ತಂತ್ರಜ್ಞಾನ ಮತ್ತು ನವೋದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ. ಹೊಸ ನಿಯಮದಿಂದಾಗಿ ಇಂತಹ ಯುವ ಸಂಸ್ಥಾಪಕರು ತಮ್ಮದೇ ಕಂಪನಿಗಳಲ್ಲಿ ಪೂರ್ಣಪ್ರಮಾಣದ ಕಾನೂನಾತ್ಮಕ ನಿರ್ದೇಶಕ ಹುದ್ದೆಗಳನ್ನು ನಿರ್ವಹಿಸಲು ಹಾದಿ ಸುಗಮವಾಗಲಿದೆ.

ಹಿರಿಯರಿಗೂ ವಯೋಮಿತಿ ಹೆಚ್ಚಳ: ಎಂಡಿ ಮತ್ತು ಡೈರೆಕ್ಟರ್ ಆಗಲು ಕನಿಷ್ಠ ವಯಸ್ಸನ್ನಷ್ಟೇ ಇಳಿಸಿಲ್ಲ, ಗರಿಷ್ಠ ವಯಸ್ಸಲ್ಲೂ ಬದಲಾವಣೆ ಮಾಡಲು ಸಲಹೆ ನೀಡಲಾಗಿದೆ. ಆ ಸ್ಥಾನಗಳಿಗೆ ಗರಿಷ್ಠ ವಯೋಮಿತಿಯನ್ನು 70 ವರ್ಷದಿಂದ 75 ವರ್ಷಕ್ಕೆ ಏರಿಸಲು ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ

ಹಾಲಿ ಇರುವ ನಿಯಮವೇನು?

ಪ್ರಸ್ತುತ ಇರುವ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 196 ರ ಪ್ರಕಾರ ಯಾವುದೇ ಕಂಪನಿಯು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯನ್ನು ವ್ಯವಸ್ಥಾಪಕ ನಿರ್ದೇಶಕ (MD), ಪೂರ್ಣಾವಧಿ ನಿರ್ದೇಶಕ ಅಥವಾ ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳುವಂತಿಲ್ಲ.

ಸಂಸದೀಯ ಸಮಿತಿಯ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮತ್ತು ಸಂಸತ್ತು ಅಂಗೀಕರಿಸಿದರೆ, 18 ವರ್ಷ ತುಂಬಿದ ಭಾರತೀಯ ಯುವಕರು ಅಧಿಕೃತವಾಗಿ ಕಂಪನಿಗಳ ಉನ್ನತ ನಿರ್ದೇಶಕ ಮಂಡಳಿಯನ್ನು ಮುನ್ನಡೆಸಲು ಅರ್ಹತೆ ಪಡೆಯಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಮರನಾಥಕ್ಕಿಂತಲೂ ಕಠಿಣ ಶ್ರೀಖಂಡ ಮಹಾದೇವ ಯಾತ್ರೆ; 72 ಅಡಿ ಎತ್ತರದ ನೈಸರ್ಗಿಕ ಶಿವಲಿಂಗದ ವೈಶಿಷ್ಟ್ಯ ಇಲ್ಲಿ ತಿಳಿಯಿರಿ – Kannada News | Shrikhand Mahadev Yatra 2026 Postponed: Why This Trek Is Tougher Than Amarnath Yatra

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 18,570 ಅಡಿ ಎತ್ತರದಲ್ಲಿರುವ ‘ಶ್ರೀಖಂಡ ಮಹಾದೇವ’ ಕ್ಷೇತ್ರವು ಭಾರತದ ಅತ್ಯಂತ ಕಠಿಣ ಹಾಗೂ ಅಪಾಯಕಾರಿ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಅತ್ಯಂತ ಕಠಿಣ ಭೂಪ್ರದೇಶ, ಕಿರಿದಾದ ಕಡಿದಾದ ಹಾದಿಗಳು ಮತ್ತು ಎತ್ತರಕ್ಕೆ ಹೋದಂತೆ ಕಡಿಮೆಯಾಗುವ ಆಮ್ಲಜನಕದ (ಆಕ್ಸಿಜನ್) ಮಟ್ಟವು ಈ ಯಾತ್ರೆಯನ್ನು ಅಮರನಾಥ ಯಾತ್ರೆಗಿಂತಲೂ ಹೆಚ್ಚು ಸವಾಲನ್ನಾಗಿ ಮಾಡುತ್ತದೆ. ಪ್ರತಿ ವರ್ಷ ಸಹಸ್ರಾರು ಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ಕಠಿಣ ಶಿಖರವನ್ನು ಏರುತ್ತಾರೆ.

72 ಅಡಿ ಎತ್ತರದ ನೈಸರ್ಗಿಕ ಶಿವಲಿಂಗದ ವೈಶಿಷ್ಟ್ಯ:

ಶ್ರೀಖಂಡ ಮಹಾದೇವನಲ್ಲಿರುವ ಬೃಹತ್ ನೈಸರ್ಗಿಕ ಶಿಲಾ ರಚನೆಯನ್ನು ಶಿವನ ಸಾಕ್ಷಾತ್ ರೂಪವೆಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ದೂರದಿಂದ ನೋಡಿದಾಗ ಈ ಬಂಡೆಯು ದೈತ್ಯಾಕಾರದ ಶಿವಲಿಂಗದ ಆಕಾರದಲ್ಲಿ ಕಂಗೊಳಿಸುತ್ತದೆ. ದಾರಿಯುದ್ದಕ್ಕೂ ಸಿಗುವ ಪವಿತ್ರ ನೈಸರ್ಗಿಕ ಬುಗ್ಗೆಗಳಿಂದ ನೀರನ್ನು ಸಂಗ್ರಹಿಸುವ ಭಕ್ತರು, ದಿನಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ ಈ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಾರೆ. ಈ ಕಠಿಣ ಪ್ರಯಾಣವನ್ನು ಪೂರ್ಣಗೊಳಿಸಿ ಶಿವನ ದರ್ಶನ ಪಡೆಯುವುದು ಅತ್ಯಂತ ಪುಣ್ಯದ ಕೆಲಸ ಎಂಬುದು ಶಿವಭಕ್ತರ ದೃಢ ನಂಬಿಕೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

2026 ರ ಶ್ರೀಖಂಡ ಮಹಾದೇವ ಯಾತ್ರೆ ಮುಂದೂಡಿಕೆ ಏಕೆ?

ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಆರಂಭವಾಗುವ ಈ ವಾರ್ಷಿಕ ಯಾತ್ರೆಗೆ 2026 ರಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಸಿದ್ಧತೆ ನಡೆಸಿದ್ದರು. ಆದರೆ, ಈ ಭಾಗದಲ್ಲಿ ನಿರಂತರ ಮಳೆ, ಹಿಮಪಾತ, ಭೂಕುಸಿತದ ಅಪಾಯ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಜಿಲ್ಲಾಡಳಿತವು ಭಕ್ತರ ಭದ್ರತೆಯನ್ನು ಮುನ್ನೆಚ್ಚರಿಕೆಯಾಗಿಟ್ಟುಕೊಂಡು 2026ರ ಶ್ರೀಖಂಡ ಮಹಾದೇವ ಯಾತ್ರೆಯನ್ನು ಮುಂದಿನ ಸೂಚನೆ ಬರುವವರೆಗೆ ಅಧಿಕೃತವಾಗಿ ಮುಂದೂಡಿದೆ.

ಶಿವಭಕ್ತರ ಕಷ್ಟಸಹಿಷ್ಣುತೆ ಹಾಗೂ ನಂಬಿಕೆಯ ಸಂಕೇತ:

ಶ್ರೀಖಂಡ ಮಹಾದೇವನ ದರ್ಶನ ಪಡೆಯುವುದು ಕೇವಲ ಭಕ್ತಿಯಷ್ಟೇ ಅಲ್ಲ, ಅದು ದೇಹ ಮತ್ತು ಮನಸ್ಸಿನ ಅಗ್ನಿಪರೀಕ್ಷೆಯಾಗಿದೆ. ಕಡಿದಾದ ಪರ್ವತ ಸಾಲುಗಳಲ್ಲಿ ದಿನಗಟ್ಟಲೆ ಸಾಗುವ ಈ ಯಾತ್ರೆಯು ಪ್ರಕೃತಿ ಮತ್ತು ಪರಮಾತ್ಮನ ಸನ್ನಿಧಾನವನ್ನು ತಲುಪುವ ಅತ್ಯಂತ ಸ್ಮರಣೀಯ ಧಾರ್ಮಿಕ ಸವಾಲಾಗಿದೆ. ಹವಾಮಾನ ಸುಸ್ಥಿತಿಗೆ ಮರಳಿದ ನಂತರ ಆಡಳಿತ ಮಂಡಳಿಯು ಯಾತ್ರೆಯ ನೂತನ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಿನಕ್ಕೆ 2 ಕಪ್ ಕಾಫಿ ಕುಡಿದರೆ ಆಯಸ್ಸು ಹೆಚ್ಚುತ್ತದೆಯೇ? ಸಂಶೋಧನೆಯಿಂದ ತಿಳಿದುಬಂದ ಅಚ್ಚರಿ ಮಾಹಿತಿ – Kannada News | Coffee Benefits for Heart Health and Long Life

ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಜನರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರಿಗೆ ಕಾಫಿ ಕುಡಿಯದೇ ದಿನವೇ ಶುರುವಾಗುವುದಿಲ್ಲ. ಆದರೆ, ಪ್ರತಿದಿನ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇದರಿಂದ ನಿಜವಾಗಿಯೂ ಆಯಸ್ಸು ಹೆಚ್ಚುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿದೆ. ಇದೀಗ Public Health Nutrition ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು ಈ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದೆ. ಅಧ್ಯಯನದ ಪ್ರಕಾರ, ಪ್ರತಿದಿನ ಮಿತ ಪ್ರಮಾಣದಲ್ಲಿ ಕಾಫಿ ಸೇವಿಸುವವರಲ್ಲಿ ದೀರ್ಘಾಯುಷ್ಯದ ಸಾಧ್ಯತೆ ಹೆಚ್ಚಿರಬಹುದು ಎಂಬುದು ಕಂಡುಬಂದಿದೆ. ಆದರೆ, ಕಾಫಿಯೇ ಆಯಸ್ಸು ಹೆಚ್ಚಿಸುತ್ತದೆ ಎಂಬುದಾಗಿ ಅರ್ಥೈಸಬಾರದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಅಧ್ಯಯನದಲ್ಲಿ ಏನು ಹೇಳಲಾಗಿದೆ? ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು? ಸೇವನೆ ಮಾಡುವಾಗ ಯಾರು ಎಚ್ಚರ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಧ್ಯಯನದಲ್ಲಿ ಏನು ಬಹಿರಂಗವಾಯಿತು?

Public Health Nutrition ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಾವಿರಾರು ಜನರ ಆರೋಗ್ಯದ ಮಾಹಿತಿಯನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಅಧ್ಯಯನದ ಪ್ರಕಾರ, ಪ್ರತಿದಿನ 1 ರಿಂದ 2 ಕಪ್ ಕಾಫಿ ಕುಡಿಯುವವರಲ್ಲಿ ಕಾಫಿ ಸೇವಿಸದವರಿಗಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆ ಕಂಡುಬಂದಿದೆ. ಜೊತೆಗೆ ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುವ ಅಪಾಯವೂ ತುಸು ಕಡಿಮೆ ಕಂಡುಬಂದಿದೆ. ಸಂಶೋಧಕರ ಅಭಿಪ್ರಾಯದಂತೆ, ಕಾಫಿಯಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯ ಮೂಲದ ನೈಸರ್ಗಿಕ ಸಂಯುಕ್ತಗಳು ದೇಹದ ಕೋಶಗಳನ್ನು ಹಾನಿಯಿಂದ ರಕ್ಷಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ನೆರವಾಗಬಹುದು.

ಆದರೆ, ಈ ಅಧ್ಯಯನವು ಸಂಬಂಧವನ್ನು (Association) ಮಾತ್ರ ತೋರಿಸುತ್ತದೆ. ಕಾಫಿ ಕುಡಿಯುವುದರಿಂದಲೇ ಆಯಸ್ಸು ಹೆಚ್ಚುತ್ತದೆ ಎಂದು ಇದು ಸಾಬೀತುಪಡಿಸುವುದಿಲ್ಲ. ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವೂ ದೀರ್ಘಾಯುಷ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು?

ಈ ಅಧ್ಯಯನದಲ್ಲಿ ಹೆಚ್ಚು ಲಾಭ ಕಂಡುಬಂದವರು ದಿನಕ್ಕೆ 1 ರಿಂದ 2 ಕಪ್ ಕಾಫಿ ಸೇವಿಸಿದವರಾಗಿದ್ದಾರೆ. ಆದರೆ, ಪ್ರತಿಯೊಬ್ಬರ ದೇಹ ವಿಭಿನ್ನವಾಗಿರುವುದರಿಂದ ಕಾಫಿಯ ಪ್ರಮಾಣವು ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ವಯಸ್ಸು, ಒಟ್ಟಾರೆ ಆರೋಗ್ಯ, ಕ್ಯಾಫೀನ್ ಸಹಿಸುವ ಸಾಮರ್ಥ್ಯ, ಇತರ ಆರೋಗ್ಯ ಸಮಸ್ಯೆಗಳು ಎಲ್ಲವೂ ಇವುಗಳ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಕಾಫಿ ಕುಡಿದ ನಂತರ ಹೃದಯ ಬಡಿತ ಹೆಚ್ಚಾಗುವುದು, ಆತಂಕ, ನಿದ್ರಾಹೀನತೆ ಅಥವಾ ಕೈ ನಡುಗುವಿಕೆ ಕಂಡುಬಂದರೆ ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಉತ್ತಮ.

ಯಾರಿಗೆ ಕಾಫಿ ಕುಡಿಯುವಾಗ ಹೆಚ್ಚು ಎಚ್ಚರಿಕೆ ಅಗತ್ಯ?

ಈ ಕೆಳಗಿನವರು ಕಾಫಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

  • ಗರ್ಭಿಣಿಯರು
  • ಅಧಿಕ ರಕ್ತದೊತ್ತಡ ಇರುವವರು
  • ಹೃದಯ ಸಂಬಂಧಿ ಕಾಯಿಲೆ ಇರುವವರು
  • ಆತಂಕ (Anxiety) ಸಮಸ್ಯೆ ಇರುವವರು
  • ನಿದ್ರಾಹೀನತೆ (Insomnia) ಇರುವವರು
  • ಕ್ಯಾಫೀನ್‌ಗೆ ಅತಿಸೂಕ್ಷ್ಮ ಪ್ರತಿಕ್ರಿಯೆ ಇರುವವರು

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ

  • ದಿನಕ್ಕೆ 3–4 ಕಪ್‌ಗಿಂತ ಹೆಚ್ಚು ಕಾಫಿ ಸೇವಿಸಬೇಡಿ
  • ರಾತ್ರಿ ಮಲಗುವ ಮುನ್ನ ಕಾಫಿ ಕುಡಿಯುವುದನ್ನು ತಪ್ಪಿಸಿ.
  • ಕಾಫಿಗೆ ಹೆಚ್ಚು ಸಕ್ಕರೆ, ಸಿರಪ್ ಅಥವಾ ವಿಪ್ಪಿಂಗ್ ಕ್ರೀಮ್ ಸೇರಿಸುವುದನ್ನು ಕಡಿಮೆ ಮಾಡಿ.
  • ಖಾಲಿ ಹೊಟ್ಟೆಯಲ್ಲಿ ಹೆಚ್ಚು ಕಾಫಿ ಕುಡಿಯುವುದರಿಂದ ಕೆಲವರಿಗೆ ಅಸಿಡಿಟಿ ಉಂಟಾಗಬಹುದು.
  • ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಆಹಾರ ಪದ್ಧತಿಯನ್ನು ಅನುಸರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತ್ತವರ ಮೇಲೆ ಹೂವುಗಳನ್ನು ಹಾಕುವುದು ಏಕೆ?: ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು? – Kannada News | Why offer flowers to the deceased spiritual meaning and funeral traditions explained

ಭಾರತೀಯ ಸಂಸ್ಕೃತಿ ಹಾಗೂ ಪ್ರಪಂಚದಾದ್ಯಂತದ ಹಲವು ಪದ್ಧತಿಗಳಲ್ಲಿ ವ್ಯಕ್ತಿ ಮೃತಪಟ್ಟಾಗ ಅವರ ಭೌತಿಕ ಶರೀರದ (ಪಾರ್ಥಿವ ಶರೀರ) ಮೇಲೆ ಹೂವುಗಳನ್ನು ಅರ್ಪಿಸುವುದು, ಹೂಮಾಲೆ ಹಾಕುವುದು ತಲೆತಲಾಂತರಗಳಿಂದ ಬಂದಿರುವ ಒಂದು ಪ್ರಮುಖ ಆಚಾರವಾಗಿದೆ. ಕೇವಲ ಹಿಂದೂ ಧರ್ಮದಲ್ಲಷ್ಟೇ ಅಲ್ಲದೆ, ಕ್ರಿಶ್ಚಿಯನ್, ಬೌದ್ಧ ಸೇರಿದಂತೆ ಹಲವು ಧರ್ಮಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ಈ ಕ್ರಮ ಯಾಕೆ ಇದೆ ಎಂಬ ಬಗ್ಗೆ ಇಂದಿಗೂ ಅನೇಕರಿಗೆ ಸರಿಯಾಗಿ ಗೊತ್ತಿಲ್ಲ. ಸತ್ತವರ ಮೇಲೆ ಹೂವುಗಳನ್ನು ಹಾಕುವುದರ ಹಿಂದೆ ಹಲವಾರು ಆಳವಾದ ಸಾಂಪ್ರದಾಯಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

‘ದೇಹವೇ ದೇವಾಲಯ’: ಶರೀರಕ್ಕೆ ನೀಡುವ ಕೊನೆಯ ಗೌರವ

ಹಿಂದೂ ಸನಾತನ ಧರ್ಮದಲ್ಲಿ ಜೀವಿಯ ದೇಹವನ್ನು ‘ದೇವಾಲಯ’ ಎಂದೂ, ಜೀವವನ್ನು ‘ಆತ್ಮ’ (ದೇವರ ಸ್ವರೂಪ) ಎಂದೂ ಭಾವಿಸಲಾಗುತ್ತದೆ. ಆತ್ಮವು ದೇಹವನ್ನು ತೊರೆದರೂ, ಇಷ್ಟು ದಿನ ಆತ್ಮಕ್ಕೆ ಆಶ್ರಯ ನೀಡಿದ್ದ ಆ ಶರೀರಕ್ಕೆ ಶ್ರದ್ಧಾಂಜಲಿ ಹಾಗೂ ಗೌರವ ಸಲ್ಲಿಸುವ ಸಂಕೇತವಾಗಿ ಪವಿತ್ರ ಹೂವುಗಳನ್ನು ಅರ್ಪಿಸಲಾಗುತ್ತದೆ.

ಆತ್ಮಕ್ಕೆ ಶಾಂತಿ ಮತ್ತು ಮುಕ್ತಿ ಸಿಗಲೆಂಬ ಪ್ರಾರ್ಥನೆ

ಹೂವುಗಳು ಪ್ರಕೃತಿಯ ಅತ್ಯಂತ ಪವಿತ್ರ ಮತ್ತು ಶುದ್ಧವಾದ ಸೃಷ್ಟಿ. ಪಾರ್ಥಿವ ಶರೀರಕ್ಕೆ ಹೂವುಗಳನ್ನು ಅರ್ಪಿಸುವ ಮೂಲಕ, “ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ, ಶರೀರವನ್ನು ತೊರೆದ ಆತ್ಮವು ನೊಗ-ಬಂಧನಗಳಿಂದ ಮುಕ್ತವಾಗಿ ದೈವತ್ವವನ್ನು ತಲುಪಲಿ” ಎಂದು ದೇವ ರಲ್ಲಿ ಪ್ರಾರ್ಥಿಸಲಾಗುತ್ತದೆ.

ಮರಣದ ನಂತರದ ದುರ್ಗಂಧ ತಡೆಯುವ ಪ್ರಾಕೃತಿಯ ತಂತ್ರ

ಹಳೆಯ ಕಾಲದಲ್ಲಿ ಇಂದಿನಂತೆ ಶವಗಾರಗಳು (Mortuary) ಅಥವಾ ‘ಫ್ರೀಜರ್ ಬಾಕ್ಸ್’ಗಳು ಇರಲಿಲ್ಲ. ವ್ಯಕ್ತಿ ಮೃತಪಟ್ಟ ನಂತರ ದೇಹದಿಂದ ದುರ್ಗಂಧ ಬರಲು ಪ್ರಾರಂಭವಾಗುತ್ತಿತ್ತು. ಸುಗಂಧಿತ ಹೂವುಗಳಾದ ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಹಾಗೂ ಸುಗಂಧರಾಜನಂತಹ ಹೂವುಗಳನ್ನು ಶವದ ಮೇಲೆ ಹಾಕುವುದರಿಂದ, ಹೂವುಗಳ ಪ್ರಾಕೃತಿ ಸೌರಭವು ದುರ್ಗಂಧವನ್ನು ಕಮ್ಮಿ ಮಾಡುತ್ತಿತ್ತು. ಅಲ್ಲದೆ ಹೂವುಗಳಲ್ಲಿರುವ ನೈಸರ್ಗಿಕ ತೇವಾಂಶವು ವಾತಾವರಣವನ್ನು ತಂಪಾಗಿಡಲು ನೆರವಾಗುತ್ತಿತ್ತು.

ಇದನ್ನೂ ಓದಿ: ನಾಯಿಗಳು ಚಪ್ಪಲಿ, ಶೂಗಳನ್ನು ಅಗಿಯೋದೇಕೆ? ಇದರ ಹಿಂದಿನ ಕಾರಣವೇನು?

ಪ್ರಕೃತಿ ನಿಯಮದ ಸಂಕೇತ

ಹೂವುಗಳು ಅರಳಿ, ಸೌಂದರ್ಯ ಚೆಲ್ಲಿ, ಕೊನೆಗೆ ಬಾಡಿ ಮಣ್ಣಿಗೆ ಸೇರುತ್ತವೆ. ಮಾನವನ ಜೀವನವೂ ಹಾಗೆಯೇ – ಜನನ, ಜೀವನ ಮತ್ತು ಮರಣ. ಶವದ ಮೇಲೆ ಹೂವುಗಳನ್ನು ಹಾಕುವುದು ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ, “ಮಾನವ ದೇಹವೂ ಒಂದು ದಿನ ಈ ಹೂವಿನಂತೆ ಮಣ್ಣಾಗಲಿದೆ” ಎಂಬ ಜೀವನದ ನಶ್ವರತೆಯನ್ನು ಮತ್ತು ಅಂತಿಮ ಸತ್ಯವನ್ನು ಜಗತ್ತಿಗೆ ನೆನಪಿಸುತ್ತದೆ.

ದುಃಖಿತ ಕುಟುಂಬಕ್ಕೆ ಸಾಂತ್ವನ ಮತ್ತು ಸಕಾರಾತ್ಮಕ ಶಕ್ತಿ

ಮರಣ ಸಂಭವಿಸಿದ ಮನೆಯಲ್ಲಿ ಶೋಕ ಮತ್ತು ನಕಾರಾತ್ಮಕ ವಾತಾವರಣ ಆವರಿಸಿರುತ್ತದೆ. ಹೂವುಗಳ ಸೌಂದರ್ಯ ಮತ್ತು ಸುವಾಸನೆಯು ಅಲ್ಲಿಗೆ ಆಗಮಿಸುವ ಬಂಧು-ಮಿತ್ರರ ಮನಸ್ಸಿಗೆ ಕೊಂಚ ಸಮಾಧಾನ ಹಾಗೂ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ – Kannada News | IPL 2013 Clash: Umpire Recalls Kohli Gambhir Fight

ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ಹಳೇ ದಾಖಲೆಗಳು ಧೂಳೀಪಟವಾಗುತ್ತವೆ. ಆದರೆ, ಕೆಲವು ಆನ್-ಫೀಲ್ಡ್ ಘಟನೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಅಂತಹದ್ದೇ ಒಂದು ಹೈ-ವೋಲ್ಟೇಜ್ ಘಟನೆಯೇ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮುಖಾಮುಖಿ. 2013ರ ಆ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರು ದಿಲ್ಲಿ ಸಿಂಹಗಳು ಪರಸ್ಪರ ಅಬ್ಬರಿಸಿದ ಆ ಕ್ಷಣ, ಕ್ರಿಕೆಟ್ ಲೋಕದಲ್ಲಿ ಎಂದಿಗೂ ಮರೆಯಲಾಗದ ಇತಿಹಾಸ. ಈ ಐತಿಹಾಸಿಕ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಇತ್ತೀಚೆಗೆ ಜಿಯೋಸ್ಟಾರ್ (JioStar) ವಾಹಿನಿಯ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಅಂದಿನ ಘಟನೆಯ ಹಿಂದಿನ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಜಗಳ ಆಗಿಯೇ ಆಗುತ್ತದೆ ಎಂದು ಗೊತ್ತಿತ್ತು!

ಈ ಬಗ್ಗೆ ಮಾತನಾಡಿದ ಅನಿಲ್ ಚೌಧರಿ,

ಆ ಪಂದ್ಯದಲ್ಲಿ ಜಗಳ ಆಗೇ ಆಗುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ಉತ್ತರ ಭಾರತದ (ವಿಶೇಷವಾಗಿ ದೆಹಲಿ ಮೂಲದ) ಆಟಗಾರರು ಮೈದಾನದಲ್ಲಿ ಅತಿ ಹೆಚ್ಚು ಆಕ್ರಮಣಶೀಲತೆಯಿಂದ ಆಡುತ್ತಾರೆ. ಹೀಗಾಗಿ ಈ ಇಬ್ಬರಿಂದ ಆಕ್ರಮಣಕಾರಿ ವರ್ತನೆ ಮೂಡಿ ಬರುತ್ತದೆ ಎಂದು ನಾನು ಊಹಿಸಿದ್ದೆ. ಅದರಂತೆ ಇಬ್ಬರೂ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ಅನಿಲ್ ಚೌಧರಿ ಹೇಳಿದ್ದಾರೆ.

ಆಕ್ರಮಣಕಾರಿ ಆಟ ಬೇಕು, ಮಿತಿ ಇರಬೇಕು!

ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಸ್ವಭಾವದ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಮೈದಾನದಲ್ಲಿ ಆಟಗಾರರಿಗೆ ಅತಿಯಾದ ನಿರ್ಬಂಧಗಳನ್ನು ಹೇರಿದರೆ, ಅವರ ಅತ್ಯುತ್ತಮ ಪ್ರದರ್ಶನ ಹೊರಬರುವುದಿಲ್ಲ. ಆಟಗಾರರಲ್ಲಿ ಇಂತಹ ಜಿದ್ದಾಜಿದ್ದಿನ ಕಿಚ್ಚು ಇರಬೇಕು, ಆಗಲೇ ಪಂದ್ಯಗಳು ರೋಚಕವಾಗಿರುತ್ತವೆ. ಆದರೆ ಪ್ರತಿಯೊಂದಕ್ಕೂ ಒಂದು ಮಿತಿ ಇರಬೇಕು ಮತ್ತು ಆ ಮಿತಿಯನ್ನು ಯಾರೂ ದಾಟಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮನಸ್ಸಿನಲ್ಲಿ ದ್ವೇಷವಿಲ್ಲ!

ವಿರಾಟ್ ಕೊಹ್ಲಿ ಜೂನಿಯರ್ ಕ್ರಿಕೆಟ್ ಆಡುತ್ತಿದ್ದ ದಿನಗಳಿಂದಲೂ ನಾನು ಅವರನ್ನು ನೋಡುತ್ತಿದ್ದೇನೆ. ಅವರು ಮೈದಾನದಲ್ಲಿ ಭಾವನಾತ್ಮಕವಾಗಿ ಬೇಗನೆ ಪ್ರತಿಕ್ರಿಯಿಸುತ್ತಾರೆಯೇ ಹೊರತು, ಅವರ ಮನಸ್ಸಿನಲ್ಲಿ ಯಾರ ಮೇಲೂ ವೈಯಕ್ತಿಕ ದ್ವೇಷ ಅಥವಾ ಕೆಟ್ಟ ಆಲೋಚನೆ ಇರುವುದಿಲ್ಲ. ಅಂಪೈರ್‌ಗಳ ತೀರ್ಪು ಸರಿಯಾಗಿದ್ದಾಗ ಕೊಹ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ದೊಡ್ಡ ಗುಣ ಹೊಂದಿದ್ದಾರೆ ಎಂದು ಇದೇ ವೇಳೆ ಅನಿಲ್ ಚೌಧರಿ ಸ್ಮರಿಸಿದ್ದಾರೆ.

2013ರಲ್ಲಿ ಏನಾಗಿತ್ತು?

ಏಪ್ರಿಲ್ 11, 2013 ರಂದು ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ಕೆಕೆಆರ್ ನಾಯಕ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದರು. ಇಬ್ಬರೂ ಆಟಗಾರರು ಮುಖಾಮುಖಿ ಜಗಳಕ್ಕೆ ನಿಂತಾಗ, ಕೆಕೆಆರ್ ಆಟಗಾರ ರಜತ್ ಭಾಟಿಯಾ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಈ ಘಟನೆಯನ್ನೇ ಇದೀಗ ಅಂದು ಅಂಪೈರ್​ ಆಗಿದ್ದ ಅನಿಲ್ ಚೌಧರಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಇನ್ನು 2013 ಮತ್ತು 2023ರ ಐಪಿಎಲ್ ಆವೃತ್ತಿಗಳಲ್ಲಿ ಕಡು ವೈರಿಗಳಂತೆ ಮುಖಾಮುಖಿಯಾಗಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ಪ್ರಸ್ತುತ ಭಾರತ ತಂಡದಲ್ಲಿ ಕ್ರಮವಾಗಿ ಹಿರಿಯ ಆಟಗಾರ ಮತ್ತು ಮುಖ್ಯ ತರಬೇತುದಾರನಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಅಂಪೈರ್ ಅನಿಲ್ ಚೌಧರಿ ಹೇಳಿರುವಂತೆ, ಅವರಿಬ್ಬರ ನಡುವಿನ ಹಳೆಯ ಕಹಿ ನೆನಪುಗಳು ಈಗ ಸಂಪೂರ್ಣವಾಗಿ ಮರೆಯಾಗಿದ್ದು, ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಇಬ್ಬರೂ ಒಟ್ಟಾಗಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.

Source link

Exit mobile version