ChatGPT ಬಳಸಿ ಪ್ರಾಂಕ್ ಮಾಡೋ ಮುನ್ನ ಎಚ್ಚರ! ಎಐ ಬಳಸಿ ನಕಲಿ ಫ್ಲೈಟ್ ಸೃಷ್ಟಿದಿದ ವ್ಯಕ್ತಿ ಮೇಲೆ ಎಫ್​ಐಆರ್ – Kannada News | Fake Flight Ticket Created Using ChatGPT: Police Book Forgery Case in Hyderabad

ಹೈದರಾಬಾದ್, ಆಗಸ್ಟ್ 04: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ಚಾಟ್‌ಜಿಪಿಟಿ (ChatGPT) ತಮಾಷೆಗೆ ಅಥವಾ ದುರ್ಬಳಕೆಗೆ ಬಳಸಿಕೊಂಡರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಚಾಟ್‌ಜಿಪಿಟಿ ಬಳಸಿ ನಕಲಿ ವಿಮಾನ ಟಿಕೆಟ್ (Fake Flight Ticket) ಸೃಷ್ಟಿಸಿದ ಆರೋಪದ ಮೇಲೆ ಶಂಶಾಬಾದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?

ಅಸ್ಲಂ ಎಂಬ ವ್ಯಕ್ತಿ ಹೈದರಾಬಾದ್‌ನ ಶಂಶಾಬಾದ್ (ರಾಜೀವ್ ಗಾಂಧಿ ಇಂಟರ್ನ್ಯಾಷನಲ್) ವಿಮಾನ ನಿಲ್ದಾಣದಿಂದ ಗೋವಾಕ್ಕೆ ಪ್ರಯಾಣಿಸಲು ಆಗಮಿಸಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಟಿಕೆಟ್ ಪರಿಶೀಲಿಸುವಾಗ ದಾಖಲೆಯಲ್ಲಿದ್ದ ಕೆಲ ವ್ಯತ್ಯಾಸಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ತಪಾಸಣೆ ನಡೆಸಿದಾಗ ಅದು ನಕಲಿ ಟಿಕೆಟ್ ಎಂಬುದು ಸ್ಪಷ್ಟವಾಗಿದೆ.

ವಿಚಾರಣೆ ವೇಳೆ ಅಸ್ಲಂ, ಈ ಟಿಕೆಟ್‌ ಅನ್ನು ತಮ್ಮ ಸ್ನೇಹಿತ ಚಾಟ್‌ಜಿಪಿಟಿ (ChatGPT) ಮೂಲಕ ಕ್ರಿಯೇಟ್ ಮಾಡಿ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ದೂರಿನನ್ವಯ ಶಂಶಾಬಾದ್ ಪೊಲೀಸರು ದಾಖಲೆ ನಕಲು (Forgery) ಮತ್ತು ವಂಚನೆ ಕಾಯ್ದೆಯಡಿ ನಕಲಿ ಟಿಕೆಟ್ ತಯಾರಿಸಿದ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

AI ಬಳಸುವಾಗ ಎಚ್ಚರ

ಚಾಟ್‌ಜಿಪಿಟಿ ಅಥವಾ ಇತರೆ AI ಟೂಲ್‌ಗಳನ್ನು ಬಳಸಿ ನಕಲಿ ಟಿಕೆಟ್‌ಗಳು, ಗುರುತಿನ ಚೀಟಿಗಳು ಅಥವಾ ಯಾವುದೇ ಅಧಿಕೃತ ದಾಖಲೆಗಳನ್ನು ಸೃಷ್ಟಿಸುವುದು ಅಥವಾ ಬಳಸುವುದು ಭಾರತೀಯ ದಂಡ ಸಂಹಿತೆ (IPC/BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ತಮಾಷೆ ಅಥವಾ ‘ಪ್ರಾಂಕ್’ ಹೆಸರಿನಲ್ಲಿ ಇಂತಹ ಕೃತ್ಯ ಎಸಗಿದರೂ ಜೈಲು ಶಿಕ್ಷೆ ಮತ್ತು ದಂಡ ಎದುರಿಸಬೇಕಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸಿಎಂ ಪುತ್ರನಿಗೆ ಕನ್ನಡದ ಈ ಸಿನಿಮಾ ಬಲು ಇಷ್ಟವಂತೆ – Kannada News | Jason Vijay likes KGF movie said it is my favourite movie

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡು ಸಿಎಂ ಆಗಿದ್ದಾರೆ. ತಮಿಳುನಾಡು ಸಿಎಂ ಆದ ಬಳಿಕ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಜಯ್ ಅವರ ಮಗ ಜೇಸನ್ ಈ ಹಿಂದೆ ವಿಜಯ್ ಅವರ ಜೊತೆಗೆ ಕೆಲವು ಸಿನಿಮಾಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸ್ವತಂತ್ರ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ತಮ್ಮ ಮೊದಲ ಸಿನಿಮಾನಲ್ಲಿ ನಟನೆ ಸಹ ಮಾಡಿದ್ದಾರೆ ವಿಜಯ್ ಪುತ್ರ. ಅಂದಹಾಗೆ ವಿಜಯ್ ಪುತ್ರ ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ.

ವಿಜಯ್ ಪುತ್ರ ಜೇಸನ್, ‘ಸಿಗ್ಮ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ, ಅಮೆರಿಕದಲ್ಲಿ ಸಿನಿಮಾ ಪಟ್ಟುಗಳನ್ನು ಕಲಿತು ಬಂದಿರುವ ಜೇಸನ್, ಬಹಳ ಸ್ಟೈಲಿಷ್ ಆಗಿ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಂದೀಪ್ ಕೃಷ್ಣ ನಾಯಕ. ಕೆಲವೇ ದಿನಗಳಲ್ಲಿ ‘ಸಿಗ್ಮ’ ಸಿನಿಮಾದ ಬಿಡುಗಡೆ ಆಗಲಿದೆ. ಜೇಸನ್ ಅವರು ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ನೀಡಿರುವ ಸಂದರ್ಶನದಲ್ಲಿ ತಮಗೆ ಇಷ್ಟವಾದ ಕನ್ನಡ ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು?

ವಿಜಯ್ ಪುತ್ರ, ಜೇಸನ್ ಅವರಿಗೆ ಕನ್ನಡದ ‘ಕೆಜಿಎಫ್’ ಸಿನಿಮಾ ಬಲು ಇಷ್ಟವಂತೆ. ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿರುವ ಜೇಸನ್, ‘ಕೆಜಿಎಫ್, ನನಗೆ ಬಹಳ ಇಷ್ಟವಾದ ಕಮರ್ಶಿಯಲ್ ಸಿನಿಮಾ. ಅದು ಒಂದು ರೀತಿ ಹಿಸ್ಟಾರಿಕ್ ಸೆಟಪ್ ಇರು ಫಿಕ್ಷನಲ್ ಕತೆ. ಆದರೆ ಅದನ್ನು ಎಷ್ಟು ಚೆನ್ನಾಗಿ ಜನರಿಗೆ ಕನ್ವಿನ್ಸ್ ಆಗುವಂತೆ ಜೊತೆಗೆ ಮಾಸ್ ಆಗಿ ಇರುವಂತೆ ನಿರೂಪಣೆ ಮಾಡಿದ್ದಾರೆ. ಅಲ್ಲದೆ, ಒಟ್ಟು ಆ ಸಿನಿಮಾ ಟೋನ್ ಸಹ ನನಗೆ ಬಹಳ ಇಷ್ಟ. ಸಿನಿಮಾದ ನಿರ್ದೇಶಕರು ಆ ಜಾನರ್​​ಗೆ, ಆ ಕತೆಗೆ ತನ್ನನ್ನು ತಾವು ಸಮರ್ಪಿಸಿಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಜೇಸನ್ ಹೇಳಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಕಮರ್ಶಿಯಲ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಸಿನಿಮಾ. ಆಧುನಿಕ ಪ್ಯಾನ್ ಇಂಡಿಯಾ ಕಮರ್ಶಿಯಲ್ ಸಿನಿಮಾ ಎಂದರೆ ಹೀಗಿರಬೇಕು ಎಂದು ತೋರಿಸಿದ ಸಿನಿಮಾ ‘ಕೆಜಿಎಫ್’. ಜೇಸನ್ ವಿಜಯ್ ಮಾತ್ರವೇ ಅಲ್ಲ, ಹಲವಾರು ಯುವ ನಿರ್ದೇಶಕರು, ಸಿನಿಮಾ ನಟರಿಗೆ ‘ಕೆಜಿಎಫ್’ ಮೆಚ್ಚಿನ ಸಿನಿಮಾ. ‘ಕೆಜಿಎಫ್’ ಅನ್ನು ಮಾದರಿಯಾಗಿ ಇರಿಸಿಕೊಂಡು ಸಿನಿಮಾ ಮಾಡಿದವರ, ಮಾಡುತ್ತಿರುವರು ಸಾಕಷ್ಟು ಮಂದಿ ಇದ್ದಾರೆ.

ಜೇಸನ್ ವಿಜಯ್ ‘ಸಿಗ್ಮಾ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಸಿನಿಮಾನಲ್ಲಿ ಸಂದೀಪ್ ಕೃಷ್ಣ ನಾಯಕ, ಫಾರಿಯಾ ಅದ್ಬುಲ್ಲಾ ನಾಯಕಿ. ಜೊತೆಗೆ ಸಂಪತ್ ರಾಜ್, ರಾಜ್ ಸುಂದರಂ, ಶಿವ ಪಂಡಿತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜೀನಾಮೆ ಬೆದರಿಕೆ ಹಾಕಿದವರು ಯಾರು? ಸಿಎಂಗೇ ನೇರ ಕಡೆ ಮಾಡಿ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್ – Kannada News | Who threatened to resign? The Congress High Command has sought information by the CM DK Shivakumar

ಬೆಂಗಳೂರು, ಆಗಸ್ಟ್ 4: ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಕೈತಪ್ಪಿದ ಕೆಲವು ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕರೆ ಮಾಡಿ, ರಾಜೀನಾಮೆ ಬೆದರಿಕೆ ಹಾಕುವವರ ವಿವರ ಕೇಳಿದೆ. ಅಲ್ಲದೆ, ರಾಜೀನಾಮೆ ನೀಡಿದರೆ ಅದನ್ನು ತಕ್ಷಣವೇ ಅಂಗೀಕರಿಸುವಂತೆ ಸೂಚಿಸಿದೆ.

ಇದರ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್‌ ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿ, ರಾಜೀನಾಮೆ ನೀಡಿದರೆ ಕೂಡಲೇ ಅದನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿ ಹುದ್ದೆಗಳನ್ನು ನೀಡಲಾಗುವುದು. ಆದರೂ ರಾಜೀನಾಮೆಗೆ ಮುಂದಾದರೆ, ಹೈಕಮಾಂಡ್ ಸೂಚನೆಯಂತೆ ಅದನ್ನು ಸ್ವೀಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿತಾಸಕ್ತಿ ಎಲ್ಲಕ್ಕಿಂತ ಮುಖ್ಯ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಲನ್: ದಿ ಬಾಯ್​’ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ – Kannada News | Balan: The Boy Malayalam Movie Review and ZEE5 OTT Release

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ನಿರ್ದೇಶಕ ಚಿದಂಬರಂ ಇದೀಗ ‘ಬಾಲನ್: ದಿ ಬಾಯ್’ ಹೆಸರಿನ ಮತ್ತೊಂದು ಅದ್ಭುತ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಜುಲೈ 31 ರಿಂದ ‘ಜೀ5’ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತಾಯಿ ಮತ್ತು ಮಗನ ನಡುವಿನ ಭಾವುಕ ಕಥೆ ಸದ್ಯ ಒಟಿಟಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ಕಥೆಯು ಜೈಲಿನಿಂದ ಪ್ರಾರಂಭವಾಗುತ್ತದೆ. ಅಲ್ಲಿ ಕೈದಿಯಾಗಿರುವ ನಾಯಕಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವಿಗೆ ಬಾಲನ್ ಎಂದು ಹೆಸರಿಡಲಾಗುತ್ತದೆ. ಜೈಲಿನಿಂದ ಹೊರಬಂದ ಮೇಲೆ ಮಗನಿಗೆ ಒಳ್ಳೆಯ ಭವಿಷ್ಯ ಕೊಡಲು ತಾಯಿ ಹೆಣಗಾಡುತ್ತಾಳೆ. ತನ್ನ ಕತ್ತಲೆಯ ಗತಕಾಲ ಮಗನಿಗೆ ತಿಳಿಯಬಾರದು ಎಂದು ಆಕೆ ಪದೇ ಪದೇ ಹೆಸರು ಹಾಗೂ ಜಾಗಗಳನ್ನು ಬದಲಾಯಿಸುತ್ತಾ ಸಾಗುತ್ತಾಳೆ.

ಕಾಡಿನಂಚಿನ ಒಂಟಿ ಮನೆಯಲ್ಲಿ ಆಶ್ರಯ ಸಿಕ್ಕರೂ ಆಕೆಯ ಹಿಂದಿನ ಕಹಿ ಘಟನೆಗಳು ಮತ್ತೆ ಬೆನ್ನಟ್ಟುತ್ತವೆ. ಈ ಎಲ್ಲಾ ಸಂಕಷ್ಟಗಳ ನಡುವೆ ತಾಯಿ ತನ್ನ ಮಗನನ್ನು ಹೇಗೆ ರಕ್ಷಿಸುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಕಥಾವಸ್ತು.

ಇದನ್ನೂ ಓದಿ: ‘ಈ ವರ್ಷದ ಫೇವರಿಟ್ ಸಿನಿಮಾ’; ಒಟಿಟಿಯಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ನೋಡಿ ಹೊಗಳಿದ ಸ್ಟಾರ್ ನಟ

ನಟಿ ಫರ್ಜಾನಾ ಪಾಲತಿಂಗಲ್ ಅಭಿನಯದಲ್ಲೇ ತಾಯಿಯ ನೋವನ್ನು ಜೀವಿಸಿದ್ದಾರೆ. ಬಾಲನ್ ಪಾತ್ರದ ಆಧಿಶೇಷನ್ ಕೆ.ಆರ್ ತಮ್ಮ ಮುಗ್ಧತೆಯಿಂದ ಗಮನ ಸೆಳೆಯುತ್ತಾರೆ. ನಟ ಟೊವಿನೋ ಥಾಮಸ್ ಅವರ ಅತಿಥಿ ಪಾತ್ರ ಚಿತ್ರಕ್ಕೆ ದೊಡ್ಡ ಬಲ ತಂದಿದೆ. ಸುಶಿನ್ ಶ್ಯಾಮ್ ಅವರ ಹಿನ್ನೆಲೆ ಸಂಗೀತ ಮತ್ತು ಶೈಜು ಖಾಲಿದ್ ಅವರ ಕ್ಯಾಮೆರಾ ಕೆಲಸ ಈ ಸಿನಿಮಾವನ್ನು ಮತ್ತಷ್ಟು ಸುಂದರವಾಗಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Cabinet Expansion: ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ – Kannada News | K.N. Rajanna Criticises Karnataka Cabinet Over Lack of Womens Representation, Recalls Historical Leadership Changes

ಬೆಂಗಳೂರು, ಆಗಸ್ಟ್ 04: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆಗಳ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇತಿಹಾಸ ಗಮನಿಸಿದರೆ, ಐದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಿದಾಗಲೆಲ್ಲಾ ಮುಂದಿನ ಚುನಾವಣೆಯಲ್ಲಿ ಆ ಪಕ್ಷ ನೆಲಕಚ್ಚಿದೆ.

ಹಿಂದೆ ವೀರೇಂದ್ರ ಪಾಟೀಲ್, ಬಂಗಾರಪ್ಪ ಹಾಗೂ ಬಿಜೆಪಿಯ ಯಡಿಯೂರಪ್ಪ ಅವರ ಬದಲಾವಣೆ ವೇಳೆ ಇದು ಸಾಬೀತಾಗಿದೆ ಎಂದು ನೆನಪಿಸಿದರು. ಇದೇ ವೇಳೆ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಿಳೆಯರಿಗೆ ಅವಕಾಶ ನೀಡದೇ ಸಂಪುಟ ರಚಿಸುವುದು ಸರಿಯಾದ ಕಾಂಪೋಸಿಷನ್ ಅಲ್ಲ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DHFWS Recruitment 2026: ವಿಜಯಪುರದಲ್ಲಿ 26 ನರ್ಸಿಂಗ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – Kannada News | DHFWS Vijayapura Recruitment 2026: Apply Offline for 26 Nursing Officer and Other Posts by August 7

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ

ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು (DHFWS) 2026ನೇ ಸಾಲಿನ ನೂತನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 26 ನರ್ಸಿಂಗ್ ಆಫೀಸರ್, ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಹಾಗೂ ಫಾರ್ಮಸಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯಪುರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 26 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿ.ಎಸ್ಸಿ ನರ್ಸಿಂಗ್ ಮುಗಿಸಿದ ಅಭ್ಯರ್ಥಿಗಳಿಗೆ 04 ನರ್ಸಿಂಗ್ ಆಫೀಸರ್ ಹುದ್ದೆಗಳು, ಡಿಪ್ಲೊಮಾ ನರ್ಸಿಂಗ್ ಮುಗಿಸಿದವರಿಗೆ 12 ನರ್ಸಿಂಗ್ ಆಫೀಸರ್ ಹುದ್ದೆಗಳು ಕಾಯ್ದಿರಿಸಲ್ಪಟ್ಟಿವೆ. ಇದರೊಂದಿಗೆ ಡಿಎಂಎಲ್‌ಟಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 07 ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಹುದ್ದೆಗಳು ಹಾಗೂ ಡಿ.ಫಾರ್ಮ ಮುಗಿಸಿದ ಅಭ್ಯರ್ಥಿಗಳಿಗೆ 03 ಫಾರ್ಮಸಿ ಆಫೀಸರ್ ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿ.ಎಸ್ಸಿ ನರ್ಸಿಂಗ್, ಡಿಪ್ಲೊಮಾ ಇನ್ ನರ್ಸಿಂಗ್ (ಜಿಎನ್‌ಎಂ), ಡಿಎಂಎಲ್‌ಟಿಸಿ ಅಥವಾ ಡಿ.ಫಾರ್ಮ ಉತ್ತೀರ್ಣರಾಗಿರಬೇಕು. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನ:

ಆಸಕ್ತ ಅಭ್ಯರ್ಥಿಗಳು ಮೊದಲು ವಿಜಯಪುರ ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ವಯಸ್ಸಿನ ಪುರಾವೆ, ಗುರುತಿನ ಚೀಟಿ, ಅನುಭವದ ಪತ್ರ ಹಾಗೂ ಇತ್ತೀಚಿನ ಭಾವಚಿತ್ರಗಳ ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ಲಗತ್ತಿಸಬೇಕು. ಈ ಎಲ್ಲಾ ದಾಖಲೆಗಳನ್ನು “ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ವಿಜಯಪುರ ಜಿಲ್ಲೆ” ಈ ವಿಳಾಸಕ್ಕೆ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.

ನೆನಪಿಡಬೇಕಾದ ಪ್ರಮುಖ ದಿನಾಂಕಗಳು:

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ಜುಲೈ 28 ರಿಂದಲೇ ಪ್ರಾರಂಭವಾಗಿದೆ. ಭರ್ತಿ ಮಾಡಿದ ಅರ್ಜಿಗಳು ಕಚೇರಿಗೆ ತಲುಪಲು ಆಗಸ್ಟ್ 07 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಒಳಿತು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸುವುದರ ಹಿಂದಿದೆ ಈ ಕಾರಣ – Kannada News | Why are mirrors installed in front of the bed in hotel rooms?

ಸಾಮಾನ್ಯವಾಗಿ ಟ್ರಾವೆಲ್, ಟ್ರಿಪ್ ಎಂದು ಹೊರಗಡೆ ಹೋಟೆಲ್ ರೂಮ್ (Hotel Room) ಅಥವಾ ಲಾಡ್ಜ್ ಬುಕ್ ಮಾಡುವುದು ಸಹಜ. ವಿಶ್ರಾಂತಿ ಪಡೆಯಲೆಂದು ಹೋಟೆಲ್ ರೂಮ್‌ಗೆ ಹೋಗಿ ಬೆಡ್ ಮೇಲೆ ಕುಳಿತುಕೊಂಡಾಗ ಕಣ್ಣ ಮುಂದೆ ಕಾಣುವುದೇ ಈ ಫಳ ಫಳ ಹೊಳೆಯುವ ಕನ್ನಡಿ. ಬೆಡ್ ಮುಂದೆಯೆ ಯಾಕೆ ಕನ್ನಡಿ ಅಳವಡಿಸಲಾಗಿರುತ್ತದೆ ಎಂಬ ಬಗ್ಗೆ ಯಾರು ಕೂಡ ಯೋಚನೆ ಮಾಡಲ್ಲ. ಹೋಟೆಲ್ ರೂಮ್‌ನಲ್ಲಿ ಮಿರರ್‌ಗಳನ್ನು ಅಳವಡಿಸುವುದರ ಹಿಂದೆ ಕೆಲ ಕಾರಣಗಳಿವೆ. ಈ ಮಿರರ್‌ಗಳು ಬೆಳಕನ್ನು ರೂಮ್ ಒಳಗೆ ಬರುವಂತೆ ಮಾಡುತ್ತದೆ.  ಹೋಟೆಲ್‌ ರೂಮ್‌ಗಳು ಕಡಿಮೆ ಸ್ಥಳವಕಾಶ ಹೊಂದಿದ್ರು, ದೊಡ್ಡದಾಗಿ ಕಾಣುವಂತೆ ಮಾಡಲು ಇದು ಸಹಕಾರಿಯಾಗಿದೆ.

ಬೆಡ್ ಮುಂದೆ ಕನ್ನಡಿ ಅಳವಡಿಸುವುದು ಏಕೆ?

ಬೆಡ್ ಮುಂದೆ ಕನ್ನಡಿ ಅಳವಡಿಸುವುದರಿಂದ ಸಣ್ಣ ಕೋಣೆಯನ್ನು ದೊಡ್ಡದಾಗಿ ಹಾಗೂ ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಹೋಟೆಲ್ ರೂಮ್‌ಗಳಲ್ಲಿ ಗೋಡೆಗಳು ಕಡಿಮೆ ಇರುವುದರಿಂದ ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್‌ನ್ನು ಹಾಸಿಗೆಯ ಎದುರುಗಡೆ ಇರಿಸುವುದು ಅನಿವಾರ್ಯ. ಅದಲ್ಲದೇ, ಈ ಕೊಠಡಿಯ ಕಿಟಕಿಯಿಂದ ಬರುವ ಸಹಜ ಬೆಳಕನ್ನು ಕನ್ನಡಿ ಪ್ರತಿಫಲಿಸಸುತ್ತದೆ. ಹೆಚ್ಚುವರಿ ಲೈಟ್ಸ್ ಬಳಸದೆಯೇ ಕೋಣೆ ತುಂಬಾ ಪ್ರಕಾಶಮಾನವಾಗಿ ಆಕರ್ಷಕವಾಗಿ ಕಾಣುತ್ತದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ

ಸುರಕ್ಷತೆ ದೃಷ್ಟಿಯಿಂದ ಈ ಕೆಲಸ ತಪ್ಪದೇ ಮಾಡಿ

ನೀವು ಹೋಟೆಲ್ ಗೆ ತಂಗಲು ಹೋದಾಗ ಕನ್ನಡಿಯನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕನ್ನಡಿಗಳು ಸಾಮಾನ್ಯವಾದದ್ದೇ ಅಥವಾ ಟು-ವೇ ಮಿರರ್ ಗಳೇ ಎಂದು ಪರೀಕ್ಷಿಸಿಕೊಳ್ಳಿ. ನೀವು ಈ ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇಟ್ಟಾಗ, ಬೆರಳಿಗೆ ಹಾಗೂ ಪ್ರತಿಬಿಂಬಕ್ಕೆ ಮಧ್ಯೆ ಸಣ್ಣ ಅಂತರ ಕಂಡುಬಂದರೆ ಯಾವುದೇ ಸಮಸ್ಯೆಯಿಲ್ಲ, ಸುರಕ್ಷಿತವಾಗಿದೆ ಎಂದರ್ಥ. ನಿಮ್ಮ ಬೆರಳಿನ ತುದಿ ಯಾವುದೇ ಅಂತರವಿಲ್ಲದೇ ಪ್ರತಿಬಿಂಬವನ್ನು ಮುಟ್ಟಿದರೆ, ನೀವು ತಕ್ಷಣವೇ ಎಚ್ಚೆತ್ತುಕೊಳ್ಳುವುದು ಅವಶ್ಯಕ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೌತಮ್ ಗಂಭೀರ್ ವಿರುದ್ಧ ತಿರುಗಿ ನಿಂತ ಟೀಮ್ ಇಂಡಿಯಾ ಆಟಗಾರರು! – Kannada News | Seniors Revolt Against Gautam Gambhir’s Rigid Coaching Style

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ! ಸರಣಿ ಸೋಲುಗಳಿಂದ ಕಂಗೆಟ್ಟಿರುವ ಬೆನ್ನಲ್ಲೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಠಿಣ ಆಡಳಿತ ಮತ್ತು ಕೋಚಿಂಗ್ ಶೈಲಿಯ ವಿರುದ್ಧ ಹಿರಿಯ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್​ಗೆ ಕೌನ್ಸಿಲ್​ಗೆ ದೂರು ನೀಡಿರುವ ವಿಚಾರ ಬಹಿರಂಗವಾಗಿದೆ.

ಗಂಭೀರ್ ಅವರ ನಡೆಗೆ ತೀವ್ರ ಬೇಸತ್ತಿರುವ ತಂಡದ  ಸೀನಿಯರ್ ಆಟಗಾರರು, ಈ ಕುರಿತು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹಾಗೂ ಮಾಜಿ ಕ್ರಿಕೆಟಿಗರ ಬಳಿ ರಹಸ್ಯವಾಗಿ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಈ ಆಂತರಿಕ ಭಿನ್ನಾಭಿಪ್ರಾಯಗಳು ಈಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ.

ಅಸಮಾಧಾನಕ್ಕೆ ಕಾರಣಗಳೇನು?

ಕೋಚಿಂಗ್ ಶೈಲಿ ಮತ್ತು ಕಠಿಣ ಧೋರಣೆ: ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾಲದಲ್ಲಿದ್ದ ಮುಕ್ತ ಮತ್ತು ಸ್ನೇಹಪರ ವಾತಾವರಣಕ್ಕೆ ಹೋಲಿಸಿದರೆ, ಗಂಭೀರ್ ಅವರ ಕಠಿಣ ಧೋರಣೆ ಮತ್ತು ಕಮ್ಯುನಿಕೇಶನ್ ಶೈಲಿ ಹಿರಿಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ವೈಫಲ್ಯಕ್ಕೆ ಹೊಣೆಗಾರಿಕೆಯ ಕೊರತೆ: ಸರಣಿ ಸೋಲುಗಳ ಸಂದರ್ಭದಲ್ಲಿ ಇಡೀ ಕೋಚಿಂಗ್ ವ್ಯವಸ್ಥೆಯ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು, ಕೇವಲ ಪ್ರತ್ಯೇಕ ಆಟಗಾರರ ವೈಫಲ್ಯ ಅಥವಾ ಸೆಂಟರ್ ಆಫ್ ಎಕ್ಸಲೆನ್ಸ್ ಕಡೆಗೆ ಬೆರಳು ತೋರಿಸುವ ಪ್ರವೃತ್ತಿ ಆಟಗಾರರಲ್ಲಿ ಅತೃಪ್ತಿ ಮೂಡಿಸಿದೆ.

ಸರಣಿ ಹಿನ್ನಡೆಗಳು: ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ವೈಟ್‌ವಾಶ್ ಸೋಲುಗಳು, ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗಾವಾಸ್ಕರ್ ಟ್ರೋಫಿ ಕೈತಪ್ಪಿದ್ದು, ಹಾಗೂ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಗಂಭೀರ್ ಅವರ ಕಾರ್ಯತಂತ್ರದ ಪ್ರತಿಫಲ. ಇದಾಗ್ಯೂ ಈ ತಪ್ಪುಗಳನ್ನು ಆಟಗಾರರ ಮೇಲೆ ಹೊರಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಸ್ಥಳೀಯ ಕ್ರಿಕೆಟ್ ಆಡುವಂತೆ ಒತ್ತಡ: ಆಸ್ಟ್ರೇಲಿಯಾ ಪ್ರವಾಸದ ಸೋಲಿನ ನಂತರ, ಹಿರಿಯ ಆಟಗಾರರು ತಮ್ಮ ರೆಡ್-ಬಾಲ್ ಸ್ಥಾನವನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ದೇಶೀಯ ಕ್ರಿಕೆಟ್ ಆಡಬೇಕೆಂದು ಗಂಭೀರ್ ಬಹಿರಂಗವಾಗಿ ಹೇಳಿಕೆ ನೀಡಿದ್ದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಇದಾಗ್ಯೂ ಟೀಮ್ ಇಂಡಿಯಾದ ಟೆಸ್ಟ್ ಪ್ರದರ್ಶನದಲ್ಲಿ ಯಾವುದೇ ಮಹತ್ವ ಬದಲಾವಣೆಯಾಗಿಲ್ಲ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಸಿಸಿಐ ಮುಂದಿನ ಕ್ರಮಗಳೇನು?

ಪ್ರಸ್ತುತ ಗಂಭೀರ್ ಅವರ ಕೋಚಿಂಗ್ ಹಾದಿಯ ಬಗ್ಗೆ ಬಿಸಿಸಿಐ ತೀವ್ರ ಅಸಮಾಧಾನ ಹೊಂದಿದ್ದು, ಶೀಘ್ರದಲ್ಲೇ ಪರಾಮರ್ಶನಾ ಸಭೆ ನಡೆಸಲಿದೆ. ಈ ಸಭೆಯಲ್ಲಿ ಗಂಭೀರ್ ಆಯ್ಕೆ ಮಾಡಿಕೊಂಡಿದ್ದ ಕೆಲವು ಸಪೋರ್ಟ್ ಸ್ಟಾಫ್‌ಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಶ್ರೀಲಂಕಾ ಸರಣಿ ಕೊನೆಯ ಅವಕಾಶ?

ಆಗಸ್ಟ್ 15 ರಿಂದ ಗಾಲೆಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಗೌತಮ್ ಗಂಭೀರ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಇಲ್ಲೂ ತಂಡ ಹಿನ್ನಡೆ ಅನುಭವಿಸಿದರೆ ಬಿಸಿಸಿಐ ದೊಡ್ಡ ಮಟ್ಟದ ಕಠಿಣ ನಿರ್ಧಾರ ಕೈಗೊಳ್ಳುವುದು ಖಚಿತ. ಅಂದರೆ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯಿದೆ.

Source link

Gold Rates 04 Aug: ಚಿನ್ನದ ಬೆಲೆ ಅಲ್ಪ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 4th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 4: ಚಿನ್ನದ ಬೆಲೆ ಇವತ್ತು ಮಂಗಳವಾರ ಅಲ್ಪ ಇಳಿಕೆ ಕಂಡಿದೆ. ಹಳದಿ ಲೋಹದ ಬೆಲೆ (Gold Price) ಗ್ರಾಮ್​ಗೆ 20-22 ರೂಗಳಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಕೆಲವೆಡೆ ಅಲ್ಪ ಏರಿಕೆಯಾದರೆ, ಇನ್ನೂ ಕೆಲವೆಡೆ ತುಸು ತಗ್ಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 4ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,400 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,200 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,800 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,400 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,200 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,200 ರೂ
  • ಚೆನ್ನೈ: 13,200 ರೂ
  • ಮುಂಬೈ: 13,200 ರೂ
  • ದೆಹಲಿ: 13,215 ರೂ
  • ಕೋಲ್ಕತಾ: 13,200 ರೂ
  • ಕೇರಳ: 13,200 ರೂ
  • ಅಹ್ಮದಾಬಾದ್: 13,205 ರೂ
  • ಜೈಪುರ್: 13,215 ರೂ
  • ಲಕ್ನೋ: 13,215 ರೂ
  • ಭುವನೇಶ್ವರ್: 13,200 ರೂ

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 547 ರಿಂಗಿಟ್ (12,733 ರುಪಾಯಿ)
  • ದುಬೈ: 485.50 ಡಿರಾಮ್ (12,602 ರುಪಾಯಿ)
  • ಅಮೆರಿಕ: 133 ಡಾಲರ್ (12,679 ರುಪಾಯಿ)
  • ಸಿಂಗಾಪುರ: 177.60 ಸಿಂಗಾಪುರ್ ಡಾಲರ್ (13,210 ರುಪಾಯಿ)
  • ಕತಾರ್: 487.50 ಕತಾರಿ ರಿಯಾಲ್ (12,766 ರೂ)
  • ಸೌದಿ ಅರೇಬಿಯಾ: 501 ಸೌದಿ ರಿಯಾಲ್ (12,733 ರುಪಾಯಿ)
  • ಓಮನ್: 51.85 ಒಮಾನಿ ರಿಯಾಲ್ (12,856 ರುಪಾಯಿ)
  • ಕುವೇತ್: 41.10 ಕುವೇತಿ ದಿನಾರ್ (12,692 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 235 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 235 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ಟರು ಕಾರಣ! – Kannada News | Why Did Siddaramaiah Skip New Ministers’ Oath Ceremony? Yathindra Gives Clarification

ಬೀದರ್, ಆಗಸ್ಟ್ 4: ನೂತನ ಸಚಿವ ಸಂಪುಟ ರಚನೆಯಾದ ಬಳಿಕ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಭವನಕ್ಕೆ ಆಗಮಿಸದಿರುವ ಬಗ್ಗೆ ಅವರ ಪುತ್ರ ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ. ಬೀದರ್​​ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಡಪಡಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಸಿದ್ದರಾಮಯ್ಯನವರಿಗೆ ಲೋಕಭವನಕ್ಕೆ ತೆರಳಲು ಆಗಿಲ್ಲ. ಸಚಿವರೇ ಅವರ ಮನೆಗೆ ಬಂದು ಶುಭಾಶಯ ಕೋರಿದ್ದಾರೆ. ಸಿದ್ದರಾಮಯ್ಯನವರು ಕೂಡ ಎಲ್ಲರಿಗೂ ಶುಭ ಹಾರೈಸಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.

ಕೆಲವು ಶಾಸಕರು ಸಚಿವ ಸ್ಥಾನದ ಪಟ್ಟಿಯಲ್ಲಿ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ, ಬ್ಯಾಡಗಿ ಶಾಸಕರ ಉದಾಹರಣೆ ನೀಡಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದರು. ಸಂಪುಟ ರಚನೆಯ ಸಂದರ್ಭದಲ್ಲಿ ಹಿರಿಯರು ಮತ್ತು ಕಿರಿಯರನ್ನು ಸೇರಿಸಿ ಸಂಪುಟ ರೂಪಿಸಲಾಗುತ್ತದೆ. ಹಾಗಾದಾಗ ಕೆಲವರನ್ನು ಕೈಬಿಡುವುದು ಸಹಜ ಪ್ರಕ್ರಿಯೆ. ಈ ಸಣ್ಣ ಪುಟ್ಟ ಅಸಮಾಧಾನಗಳು ಸಹಜವಾಗಿದ್ದು, ಕಾಲಕ್ರಮೇಣ ಎಲ್ಲವೂ ಸರಿಯಾಗಲಿದೆ ಎಂದು ಯತೀಂದ್ರ ತಿಳಿಸಿದ್ದಾರೆ. ಯಾವ ಹಿರಿಯರನ್ನೂ ಕಡೆಗಣಿಸಿಲ್ಲ. ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಸದ್ಯಕ್ಕೆ ಸ್ಥಾನ ಖಾಲಿ ಇಡಲಾಗಿದೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಂಡು ಎಲ್ಲವನ್ನೂ ಸರಿಪಡಿಸುತ್ತದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version