ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡು ಸಿಎಂ ಆಗಿದ್ದಾರೆ. ತಮಿಳುನಾಡು ಸಿಎಂ ಆದ ಬಳಿಕ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಜಯ್ ಅವರ ಮಗ ಜೇಸನ್ ಈ ಹಿಂದೆ ವಿಜಯ್ ಅವರ ಜೊತೆಗೆ ಕೆಲವು ಸಿನಿಮಾಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಸ್ವತಂತ್ರ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ತಮ್ಮ ಮೊದಲ ಸಿನಿಮಾನಲ್ಲಿ ನಟನೆ ಸಹ ಮಾಡಿದ್ದಾರೆ ವಿಜಯ್ ಪುತ್ರ. ಅಂದಹಾಗೆ ವಿಜಯ್ ಪುತ್ರ ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ.
ವಿಜಯ್ ಪುತ್ರ ಜೇಸನ್, ‘ಸಿಗ್ಮ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ, ಅಮೆರಿಕದಲ್ಲಿ ಸಿನಿಮಾ ಪಟ್ಟುಗಳನ್ನು ಕಲಿತು ಬಂದಿರುವ ಜೇಸನ್, ಬಹಳ ಸ್ಟೈಲಿಷ್ ಆಗಿ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಂದೀಪ್ ಕೃಷ್ಣ ನಾಯಕ. ಕೆಲವೇ ದಿನಗಳಲ್ಲಿ ‘ಸಿಗ್ಮ’ ಸಿನಿಮಾದ ಬಿಡುಗಡೆ ಆಗಲಿದೆ. ಜೇಸನ್ ಅವರು ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ನೀಡಿರುವ ಸಂದರ್ಶನದಲ್ಲಿ ತಮಗೆ ಇಷ್ಟವಾದ ಕನ್ನಡ ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ:ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು?
ವಿಜಯ್ ಪುತ್ರ, ಜೇಸನ್ ಅವರಿಗೆ ಕನ್ನಡದ ‘ಕೆಜಿಎಫ್’ ಸಿನಿಮಾ ಬಲು ಇಷ್ಟವಂತೆ. ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿರುವ ಜೇಸನ್, ‘ಕೆಜಿಎಫ್, ನನಗೆ ಬಹಳ ಇಷ್ಟವಾದ ಕಮರ್ಶಿಯಲ್ ಸಿನಿಮಾ. ಅದು ಒಂದು ರೀತಿ ಹಿಸ್ಟಾರಿಕ್ ಸೆಟಪ್ ಇರು ಫಿಕ್ಷನಲ್ ಕತೆ. ಆದರೆ ಅದನ್ನು ಎಷ್ಟು ಚೆನ್ನಾಗಿ ಜನರಿಗೆ ಕನ್ವಿನ್ಸ್ ಆಗುವಂತೆ ಜೊತೆಗೆ ಮಾಸ್ ಆಗಿ ಇರುವಂತೆ ನಿರೂಪಣೆ ಮಾಡಿದ್ದಾರೆ. ಅಲ್ಲದೆ, ಒಟ್ಟು ಆ ಸಿನಿಮಾ ಟೋನ್ ಸಹ ನನಗೆ ಬಹಳ ಇಷ್ಟ. ಸಿನಿಮಾದ ನಿರ್ದೇಶಕರು ಆ ಜಾನರ್ಗೆ, ಆ ಕತೆಗೆ ತನ್ನನ್ನು ತಾವು ಸಮರ್ಪಿಸಿಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಜೇಸನ್ ಹೇಳಿದ್ದಾರೆ.
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಕಮರ್ಶಿಯಲ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಸಿನಿಮಾ. ಆಧುನಿಕ ಪ್ಯಾನ್ ಇಂಡಿಯಾ ಕಮರ್ಶಿಯಲ್ ಸಿನಿಮಾ ಎಂದರೆ ಹೀಗಿರಬೇಕು ಎಂದು ತೋರಿಸಿದ ಸಿನಿಮಾ ‘ಕೆಜಿಎಫ್’. ಜೇಸನ್ ವಿಜಯ್ ಮಾತ್ರವೇ ಅಲ್ಲ, ಹಲವಾರು ಯುವ ನಿರ್ದೇಶಕರು, ಸಿನಿಮಾ ನಟರಿಗೆ ‘ಕೆಜಿಎಫ್’ ಮೆಚ್ಚಿನ ಸಿನಿಮಾ. ‘ಕೆಜಿಎಫ್’ ಅನ್ನು ಮಾದರಿಯಾಗಿ ಇರಿಸಿಕೊಂಡು ಸಿನಿಮಾ ಮಾಡಿದವರ, ಮಾಡುತ್ತಿರುವರು ಸಾಕಷ್ಟು ಮಂದಿ ಇದ್ದಾರೆ.
ಜೇಸನ್ ವಿಜಯ್ ‘ಸಿಗ್ಮಾ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಸಿನಿಮಾನಲ್ಲಿ ಸಂದೀಪ್ ಕೃಷ್ಣ ನಾಯಕ, ಫಾರಿಯಾ ಅದ್ಬುಲ್ಲಾ ನಾಯಕಿ. ಜೊತೆಗೆ ಸಂಪತ್ ರಾಜ್, ರಾಜ್ ಸುಂದರಂ, ಶಿವ ಪಂಡಿತ್ ಇನ್ನೂ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
