NWKRTC ಕೈ ಸುಡುತ್ತಿರುವ ಚಿಗರಿ ಬಸ್​​ಗಳು: ಸಂಸ್ಥೆಗೆ ಪ್ರತಿ ತಿಂಗಳು ಎರಡೂವರೆ ಕೋಟಿ ನಷ್ಟ! – Kannada News | Financial Crisis: NWKRTC Suffers 2.5 Crore Monthly Loss Operating Hubballi Dharwad Chigari BRTS Buses

ಹುಬ್ಬಳ್ಳಿ, ಆಗಸ್ಟ್​​ 04: ದಕ್ಷಿಣ ಭಾರತದಲ್ಲಿಯೇ ಮೊದಲ ಯೋಜನೆ ಅನ್ನೋ ಖ್ಯಾತಿಯನ್ನು ಪಡೆದಿರುವ ಬಿಆರ್​​ಟಿಎಸ್​​ ಅಡಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್​​ಗಳಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣದಿಂದ ಧಾರವಾಡ ಹೊಸ ಬಸ್ ನಿಲ್ದಾಣದ ವರಗೆ ಸಂಪರ್ಕ ಕಲ್ಲಿಸುವ ಈ ಬಸ್​​ಗೆ ಬರೋಬ್ಬರಿ 22.5 ಕಿ.ಮೀ. ಪ್ರತ್ಯೇಕ ರಸ್ತೆ ಕೂಡ ಕಲ್ಪಿಸಲಾಗಿದೆ. ಆದರೆ ಇದೇ BRTS ಚಿಗರಿ ಬಸ್​​ಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು ಎರಡೂವರೆ ಕೋಟಿ ಲಾಸ್ ಆಗುತ್ತಿದೆಯಂತೆ. ಆದಾಯ ಮತ್ತು ಖರ್ಚಿಗೂ ಹೆಚ್ಚಿನ ವ್ಯತ್ಯಾಸವಾಗುತ್ತಿರುವದರಿಂದ ಸಂಸ್ಥೆಗೆ ಪ್ರತಿ ತಿಂಗಳು ಹೆಚ್ಚುವರಿ ಹೊರೆ ಬೀಳುತ್ತಿದೆ ಎನ್ನಲಾಗಿದೆ.

ಒಂದು ಕಿಲೋ ಮೀಟರ್​​ಗೆ 80 ರೂಪಾಯಿ ಖರ್ಚಾದ್ರೆ, ಆದಾಯ ಸರಿಸುಮಾರು ಐವತ್ತು ರೂಪಾಯಿ ಬರ್ತಿದೆಯಂತೆ. ಅಂದ್ರೆ ಕಿಲೋ ಮೀಟರ್​​ಗೆ ಸರಿಸುಮಾರು 30 ರೂಪಾಯಿ ಲಾಸ್ ಆಗುತ್ತಿದೆ. ಹೀಗಾಗಿ ನಷ್ಟವಾಗುತ್ತಿರುವ ಹಣವನ್ನು ನಗರಾಭಿವೃದ್ದಿ ಇಲಾಖೆ ಭರಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅನೇಕ ಬಾರಿ ಮನವಿ ಮಾಡಿಕೊಂಡಿದೆಯಂತೆ. 2018ರಿಂದ ಇಲ್ಲಿಯವರಗೆ ನಗರಾಭಿವೃದ್ಧಿಇಲಾಖೆ NWKRTCಗೆ 150 ಕೋಟಿಗೂ ಹೆಚ್ಚಿನ ಹಿಂಬಾಕಿ ಹಣ ಬಾಕಿ ನೀಡಬೇಕಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಯಾದರೂ, ಈವರೆಗೂ ಯಾವುದೇ ಕ್ರಮ ಆಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ‌ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?

2018ರಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಅಂದಿನಿಂದ ಪ್ರತಿನಿತ್ಯ ನೂರು ಚಿಗರಿ ಹೆಸರಿನ ಎಸಿ ಬಸ್​​ಗಳು ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ಮಾಡುತ್ತಿವೆ. ಇನ್ನು ರಸ್ತೆ ಸೇರಿದಂತೆ ಕೆಲ ನಿರ್ವಹಣೆಯನ್ನು BRTS ಮಾಡಿದ್ರೆ, ಬಸ್​​ಗಳನ್ನು ಓಡಿಸೋದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ. ಲಾಸ್​​ ಜೊತೆಗೆಗೆ ಬಸ್​​ನಲ್ಲಿ ಇತ್ತೀಚೆಗೆ ತಾಂತ್ರಿಕ ಸಮಸ್ಯೆಗಳೂ ಹೆಚ್ಚಿದ್ದು, ಎಲ್ಲೆಂದರಲ್ಲಿ ಕೆಟ್ಟುನಿಲ್ಲುತ್ತಿವೆ. ಅಪಘಾತಗಳೂ ಹೆಚ್ಚಿರುವ ಕಾರಣ ಜನ ಸಾಮಾನ್ಯರಿಂದಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಾಗತಿಕ ಅನಿಶ್ಚಿತತೆಯ ಸ್ಥಿತಿ ಮುಂದುವರಿಕೆಯಲ್ಲಿ ಆರ್​ಬಿಐ ಎಂಪಿಸಿ ಸಭೆ ಬಡ್ಡಿ ದರ ಪರಿಷ್ಕರಿಸುತ್ತಾ? – Kannada News | RBI MPC meeting, policy decision announcement, repo rate, gdp, inflation estimates and other details

ನವದೆಹಲಿ, ಆಗಸ್ಟ್ 4: ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಆರು ಸದಸ್ಯರ ಹಣಕಾಸು ನೀತಿ ಸಮಿತಿಯ (MPC) ಮೂರು ದಿನಗಳ ಪ್ರಮುಖ ಸಭೆ ನಡೆದಿದ್ದು, ನಾಳೆ ಅಂದರೆ ಆಗಸ್ಟ್ 5, ಬುಧವಾರದಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಆರ್ಥಿಕ ನೀತಿ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಜಾಗತಿಕ ಅನಿಶ್ಚಿತತೆ ಮುಂದುವರಿಯುತ್ತಿರುವುದು, ಹಣದುಬ್ಬರ ಏರುಗತಿಯಲ್ಲಿರುವುದು ಇತ್ಯಾದಿ ಪರಿಸ್ಥಿತಿ ಹಿನ್ನೆಲೆಯಲ್ಲಿ, ಗೃಹ ಸಾಲದ ಗ್ರಾಹಕರು, ಹೂಡಿಕೆದಾರರು ಹಾಗೂ ಮಾರುಕಟ್ಟೆ ತಜ್ಞರಲ್ಲಿ ಎಂಪಿಸಿ ಸಭೆ ನಿರ್ಧಾರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ರೆಪೋ ದರ ಬದಲಾಗಲಿದೆಯೇ?

ಬಹುತೇಕ ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಬಾರಿಯ ಸಭೆಯಲ್ಲೂ ಆರ್‌ಬಿಐ ಬ್ಯಾಂಕಿಂಗ್ ವ್ಯವಸ್ಥೆಯ ಮೂಲ ರೆಪೋ ದರವನ್ನು (Repo Rate) ಪ್ರಸ್ತುತ ಇರುವ ಶೇಕಡಾ 5.25 ರಲ್ಲೇ ಯಥಾವತ್ತಾಗಿ ಮುಂದುವರಿಸುವ (Status Quo) ಗರಿಷ್ಠ ಸಾಧ್ಯತೆಯಿದೆ.

ಒಂದು ವೇಳೆ ಆರ್‌ಬಿಐ ದರಗಳನ್ನು ಬದಲಾಯಿಸದೇ ಉಳಿಸಿಕೊಂಡರೆ, ಇದು ಸತತ ನಾಲ್ಕನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕಾಯ್ದುಕೊಂಡಂತಾಗುತ್ತದೆ.

ಇದನ್ನೂ ಓದಿ: ತೆರಿಗೆ ತಿದ್ದುಪಡಿ ಮಸೂದೆ ಮಂಡನೆ: ತೆರಿಗೆ, ವಿದೇಶಿ ಹೂಡಿಕೆ, ಯುಪಿಐ ಪಾವತಿ ಇತ್ಯಾದಿ ನಿಯಮಗಳ ಪರಿಷ್ಕರಣೆಗೆ ಪ್ರಸ್ತಾಪ

ಆರ್‌ಬಿಐ ನಿರ್ಧಾರಕ್ಕೆ ಪ್ರಭಾವ ಬೀರುವ ಪ್ರಮುಖ ಅಂಶಗಳು

  • ಚಿಲ್ಲರೆ ಹಣದುಬ್ಬರ: ಇತ್ತೀಚಿನ ವರದಿಗಳ ಪ್ರಕಾರ ಚಿಲ್ಲರೆ ಹಣದುಬ್ಬರವು (Retail Inflation) ಶೇ. 4.38 ಕ್ಕೆ ಏರಿಕೆಯಾಗಿದ್ದು, ಆರ್‌ಬಿಐನ ಶೇ. 4 ರ ಮಧ್ಯಮಾವಧಿಯ ಗುರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ.
  • ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಭೌಗೋಳಿಕ ಉದ್ವಿಗ್ನತೆ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಹೆಚ್ಚಾಗಿದ್ದು, ಆಮದು ಆಧಾರಿತ ಹಣದುಬ್ಬರ ಎದುರಾಗುವ ಭೀತಿಯಿದೆ.
  • ಮುಂಗಾರು ಮಳೆ: ದೇಶಾದ್ಯಂತ ಮುಂಗಾರು ಮಳೆಯ ಪ್ರಗತಿ ಹಾಗೂ ಕೃಷಿ ಉತ್ಪಾದನೆಯ ಮೇಲೆ ಆರ್‌ಬಿಐ ಕಣ್ಣಿಟ್ಟಿದ್ದು, ಆಹಾರ ಪದಾರ್ಥಗಳ ಬೆಲೆ ಸ್ಥಿರತೆ ಪರಿಶೀಲಿಸುತ್ತಿದೆ.
  • ಜಾಗತಿಕ ಸೆಂಟ್ರಲ್ ಬ್ಯಾಂಕ್‌ಗಳ ನಿಲುವು: ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿನ ಬಡ್ಡಿದರಗಳ ಚಲನೆಯನ್ನು ಆರ್‌ಬಿಐ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇದನ್ನೂ ಓದಿ: ವಿದೇಶಗಳಿಗೆ ಪರಾರಿಯಾಗಿದ್ದ 274 ಆರ್ಥಿಕ ಅಪರಾಧಿಗಳು ಭಾರತಕ್ಕೆ ಹಸ್ತಾಂತರ: 2019-26ರಲ್ಲಾದ ಸಾಧನೆ ಇದು

ಸಾಮಾನ್ಯ ಗ್ರಾಹಕರು ಮತ್ತು ಸಾಲಗಾರರ ಮೇಲಾಗುವ ಪರಿಣಾಮಗಳು

  • ಗೃಹ ಸಾಲ ಮತ್ತು ಬ್ಯಾಂಕ್ ಇಎಂಐ: ಆರ್‌ಬಿಐ ರೆಪೋ ದರವನ್ನು ಶೇ. 5.25 ರಲ್ಲೇ ಕಾಯ್ದುಕೊಂಡರೆ, ಚಾಲ್ತಿಯಲ್ಲಿರುವ ಗೃಹ ಸಾಲ ಮತ್ತು ವಾಹನ ಸಾಲಗಳ ಇಎಂಐ (Loan EMI) ಗಳಲ್ಲಿ ತಕ್ಷಣಕ್ಕೆ ಯಾವುದೇ ಏರಿಕೆ ಅಥವಾ ಇಳಿಕೆ ಇರುವುದಿಲ್ಲ.
  • ಸ್ಥಿರ ಠೇವಣಿಗಳು: ಬ್ಯಾಂಕ್ ಎಫ್‌ಡಿ (FD) ಬಡ್ಡಿದರಗಳು ಸದ್ಯಕ್ಕೆ ಸ್ಥಿರವಾಗಿರಲಿದ್ದು, ಹೂಡಿಕೆದಾರರಿಗೆ ಖಚಿತ ಆದಾಯ ಮುಂದುವರಿಯಲಿದೆ.

ತಜ್ಞರ ಪ್ರಕಾರ, ಭಾರತದ ಆರ್ಥಿಕ ಪ್ರಗತಿ (GDP Growth) ಶೇ. 6.6 ರಿಂದ 6.8 ರಷ್ಟರಲ್ಲೇ ಗಟ್ಟಿಯಾಗಿ ಸಾಗುತ್ತಿರುವುದರಿಂದ, ಆರ್‌ಬಿಐ ಬಡ್ಡಿದರ ಇಳಿಕೆ ಅಥವಾ ಏರಿಕೆಗೆ ಆತುರ ಪಡದೆ ‘ತಟಸ್ಥ’ (Neutral) ನಿಲುವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಸ್​ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು ದರ್ಪ: ಬಿಎಂಟಿಸಿ ಕಂಡಕ್ಟರ್ ಸಸ್ಪೆಂಡ್! – Kannada News | Nelamangala: BMTC Conductor Suspended for Kicking Beggar Trying to Board Bus

ಬಸ್​​ ಕಂಡಕ್ಟರ್ ಸಸ್ಪೆಂಡ್Image Credit source: tv9 kannada

ನೆಲಮಂಗಲ, ಆಗಸ್ಟ್​​ 04: ಬಸ್ ಹತ್ತಲು ಬಂದಿದ್ದ ಭಿಕ್ಷುಕ ನನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದ ಕಂಡಕ್ಟರ್​​ ಕೃಷ್ಣಮೂರ್ತಿಯನ್ನು ಅಮಾನತು (Suspension) ಮಾಡಿ ಬಿಎಂಟಿಸಿ (BMTC) ಮಂಗಳವಾರ ಆದೇಶ ಹೊರಡಿಸಿದೆ. ಈ ಘಟನೆ ಕುರಿತಾಗಿ ಟಿವಿ9 ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಬಿಎಂಟಿಸಿ ಆಡಳಿತ ಮಂಡಳಿಯು ತಕ್ಷಣವೇ ಈ ಕಠಿಣ ಕ್ರಮಕೈಗೊಂಡಿದೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಕುರಿತಾಗಿ ಬಿಎಂಟಿಸಿ ಸಂಸ್ಥೆಯು ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶಿವನ್‌ಪುರ ಡಿಪೋಗೆ ಸೇರಿದ ವಾಹನ ಸಂಖ್ಯೆ (KA-57 F-1104) ಬಸ್​ನಲ್ಲಿ ಕೃಷ್ಣಮೂರ್ತಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ವರ್ತನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪ್ರಕರಣದ ಕುರಿತು ತಕ್ಷಣವೇ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದ್ದು, ಸತ್ಯಾಂಶವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಸಂಬಂಧಿತ ನಿರ್ವಾಹಕರನ್ನು ಇಂದಿನಿಂದ ಜಾರಿಗೆ ಬರುವಂತೆ ವಿಚಾರಣಾಪೂರ್ವ ಅಮಾನತ್ತಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ‌ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?

ಘಟನೆಯ ನಿಖರವಾದ ವಾಸ್ತವಾಂಶವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಂಬಂಧಿತ ನಿರ್ವಾಹಕ, ಪ್ರಯಾಣಿಕ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬಸ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಂಬಂಧಿತ ಸಾಕ್ಷಾಧಾರಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ನಡೆದಿದ್ದೇನು?

ನೆಲಮಂಗಲ ತಾಲೂಕಿನ ಹರಿಶಿನಕುಂಟೆ ಬಳಿ ಈ ಘಟನೆ ನಡೆದಿದೆ. ವೈರಲ್​ ವಿಡಿಯೋ ಪ್ರಕಾರ, ಬಿಎಂಟಿಸಿ ಕಂಡಕ್ಟರ್ ಬಿಕ್ಷುಕನೋರ್ವನಿಗೆ ಕಾಲಿನಿಂದ ಒದ್ದಿದ್ದಾರೆ. ಮೇಲ್ನೋಟಕ್ಕೆ ಬಿಕ್ಷುಕ ಬಸ್ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಕಂಡಕ್ಟರ್ ಜೊತೆ ಮಾತಿಗೆ ಮಾತು ಬೆಳೆದಿದ್ದು, ಬಳಿಕ ಕಂಡಕ್ಟರ್ ಕಾಲಿನಿಂದ ಒದ್ದಿದ್ದಾನೆ. ನಂತರ ಆತನನ್ನ ತಳ್ಳಿ ಕೆಳಗೆ ಬೀಳಿಸಿ ದರ್ಪ ಮೆರೆದಿದ್ದಾರೆ.

ಯಾರೇ ಆದರೂ ಕಾಲಿನಿಂದ ಒದೆಯುವುದು ತಪ್ಪು ಎಂದ ಸ್ಥಳಿಯರು

ಇನ್ನು ಈ ಬಗ್ಗೆ ಸ್ಥಳಿಯರಾದ ನಂಜುಂಡಯ್ಯ ಎನ್ನುವವರು ಮಾತನಾಡಿದ್ದು, ‘ಆತ ಕೆಳಗೆ ಬೀಳುವುದನ್ನ ಮಾತ್ರ ನೋಡಿದೆ. ಏಕೆ, ಏನು ಅಂತ ಗೊತ್ತಾಗಲಿಲ್ಲ. ನಮ್ಮ ಬಳಿ ಬಂದು ಏನು ಹೇಲಿಕೊಳ್ಳಲಿಲ್ಲ, ಹೇಳಿದ್ದರೆ ಏನಾದರೂ ಸಹಾಯ ಮಾಡಬಹುದಿತ್ತು. ಮೊದಲು ನಾನು ಹುಡುಗಿ ಅಂದುಕೊಂಡಿದ್ದೆ, ವಿಡಿಯೋ ನೋಡಿದಾಗ ಬಿಕ್ಷುಕನ ರೀತಿ ಇರುವುದು ಗೊತ್ತಾಯಿತು. ಯಾರೇ ಆದರೂ ಕಾಲಿನಿಂದ ಒದೆಯುವುದು ತಪ್ಪು. ತಪ್ಪು ಮಾಡಿದ್ದರೆ ಪೊಲೀಸರು ಇದ್ದರು, ಯಾರಿಗಾದರೂ ಹೇಳಬಹುದಿತ್ತು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:23 pm, Tue, 4 August 26

Source link

‘ಸುನೇತ್ರಾ ಪವಾರ್​​ ಮೂಕ ಗೊಂಬೆ’; ಕಾಂಗ್ರೆಸ್​ ಇಂದಿರಾ ಗಾಂಧಿಯನ್ನು ನೆನಪಿಸಿದ ಎನ್​ಸಿಪಿ – Kannada News | Congress Gungi Gudiya remark on Sunetra Pawar sparks political row in Maharashtra NCP reminds Indira Gandhi

ಮುಂಬೈ, ಆಗಸ್ಟ್ 4: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ (Sunetra Pawar) ಅವರ ಸಾರ್ವಜನಿಕ ಭೇಟಿಗಳು ಹಾಗೂ ನಡವಳಿಕೆಯನ್ನು ವಿಮರ್ಶಿಸುವ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ಅವರನ್ನು “ಗೂಂಗಿ ಗುಡಿಯಾ” (ಮೂಕ ಬೊಂಬೆ) ಎಂದು ಟೀಕಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ. ಈ ಹೇಳಿಕೆಗೆ ಎನ್​ಸಿಪಿ ಅಜಿತ್ ಪವಾರ್ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ, ಕಾಂಗ್ರೆಸ್ ಮಹಿಳೆಯರಿಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಸುನೇತ್ರಾ ಪವಾರ್ ಅವರ ಇತ್ತೀಚಿನ ಪತ್ರಿಕಾಗೋಷ್ಠಿಯನ್ನು ಲೇವಡಿ ಮಾಡಿದ್ದ ಕಾಂಗ್ರೆಸ್ ‘ಸುನೇತ್ರಾ ಅವರೇ ಇನ್ನೆಷ್ಟು ದಿನ ಮೂಕ ಗೊಂಬೆಯ ತರಹ ಇರುತ್ತೀರಿ?’ ಎಂದು ಕೆಣಕಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ವಿಷಯಗಳ ಕುರಿತು ಸುನೇತ್ರಾ ಪವಾರ್ ವಹಿಸುತ್ತಿರುವ ಮೌನವನ್ನು ಕಾಂಗ್ರೆಸ್ ಟೀಕಿಸಿತ್ತು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರು ಈ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ- ಶರದ್ ಪವಾರ್ ಭೇಟಿ; ಎನ್‌ಡಿಎ ಸೇರಲು ಒಪ್ಪಿತಾ ಎನ್‌ಸಿಪಿ?

ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಎನ್‌ಸಿಪಿ ನಾಯಕರು, ಒಂದು ಕಾಲದಲ್ಲಿ ಕಾಂಗ್ರೆಸ್ ಉತ್ತಮ ರಾಜಕೀಯ ಸಂಸ್ಕೃತಿ ಮತ್ತು ಸಾರ್ವಜನಿಕ ಸಂವಹನದಲ್ಲಿ ಘನತೆಯನ್ನು ಕಾಯ್ದುಕೊಂಡಿತ್ತು, ಆದರೆ, ಈಗ ತನ್ನ ಸಿದ್ಧಾಂತ ಮತ್ತು ಮೌಲ್ಯಗಳಿಂದ ದೂರ ಸರಿದಿದೆ ಎಂದು ಕಿಡಿಕಾರಿದ್ದಾರೆ. ಮಹಿಳಾ ನಾಯಕಿಯೊಬ್ಬರ ವಿರುದ್ಧ ಇಂತಹ ಭಾಷೆಯನ್ನು ಬಳಸುವ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಅಗೌರವ ತೋರಿದೆ. ಈ ಪದಬಳಕೆಯು ಕಾಂಗ್ರೆಸ್‌ನ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಎನ್​ಸಿಪಿ ಆರೋಪಿಸಿದೆ. ಎನ್‌ಸಿಪಿಯ ಎರಡು ಬಣಗಳ ವಿಲೀನದ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿರುವ ಸಮಯದಲ್ಲಿಯೇ ಈ ವಿವಾದ ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್​​ಗೆ ಇಂದಿರಾ ಗಾಂಧಿಯನ್ನು ನೆನಪಿಸಿದ ಎನ್​ಸಿಪಿ:

ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಕುರಿತು ಮಹಾರಾಷ್ಟ್ರದ ಕಾಂಗ್ರೆಸ್ ಮಾಡಿದ “ಗೂಂಗಿ ಗುಡಿಯಾ” (ಮೂಕ ಬೊಂಬೆ) ಟೀಕೆಯನ್ನು ವಿರೋಧಿಸಿ ರಾಷ್ಟ್ರವಾದಿ ಕಾಂಗ್ರೆಸ್ (NCP) ನಾಯಕರು ಮುಂಬೈನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗೆ ದಿಢೀರ್ ನುಗ್ಗಿ ಪ್ರತಿಭಟನೆ ನಡೆಸಿದರು. ಎನ್‌ಸಿಪಿ ನಾಯಕರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರಿಂದ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದರು.

ಇದನ್ನೂ ಓದಿ: ರಾಜೀನಾಮೆ ಬೆದರಿಕೆ ಹಾಕಿದವರು ಯಾರು? ಸಿಎಂಗೇ ನೇರ ಕರೆ ಮಾಡಿ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್

ಈ ಹಿಂದೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಬಳಸಲಾಗುತ್ತಿದ್ದ ಅದೇ ನಿಂದನಾತ್ಮಕ ಪದವನ್ನು ಈಗ ಕಾಂಗ್ರೆಸ್ ಬೆಂಬಲಿಸುತ್ತಿದೆಯೇ? ಎಂದು ಎನ್‌ಸಿಪಿ ನಾಯಕರು ಆಕ್ರೋಶದ ಪ್ರಶ್ನೆ ಎತ್ತಿದ್ದಾರೆ. ಮಹಾರಾಷ್ಟ್ರದ ಮೊದಲ ಮಹಿಳಾ ಉಪ ಮುಖ್ಯಮಂತ್ರಿಯ ವಿರುದ್ಧ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ನಾಚಿಕೆಪಡಬೇಕು. ಇದು ರಾಜ್ಯದ ಇಡೀ ಮಹಿಳಾ ಕುಲಕ್ಕೆ ಮಾಡಿದ ಅಪಮಾನ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಿಡಿಕಾರಿದ್ದಾರೆ.

ಎನ್​ಸಿಪಿ ನಾಯಕ ಹಾಗೂ ಸುನೇತ್ರಾ ಪವಾರ್ ಅವರ ಸೋದರಳಿಯ ರೋಹಿತ್ ಪವಾರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ದಿವಂಗತ ಇಂದಿರಾ ಗಾಂಧಿಯವರನ್ನು ಅವರ ವಿರೋಧಿಗಳು ‘ಗೂಂಗಿ ಗುಡಿಯಾ’ ಎಂದು ಕರೆಯುತ್ತಿದ್ದರು. ಆದರೆ ಅವರು ತಮ್ಮ ದಕ್ಷ ಕೆಲಸದ ಮೂಲಕ ಆ ಮಾತನ್ನು ಸುಳ್ಳು ಎಂದು ಸಾಬೀತುಪಡಿಸಿದರು. ಸುನೇತ್ರಾ ಅವರು ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

White Clothes Cleaning Tips: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್‌ ವಾಶ್‌ ಮಾಡುವಾಗ ಈ ಟಿಪ್ಸ್‌ ಪಾಲಿಸಿ – Kannada News | You must follow these tips when washing white clothes

ಬಿಳಿ ಬಟ್ಟೆಗಳು (white clothes) ಚೆನ್ನಾಗಿ ಕಾಣುವುದೇನೋ ನಿಜ, ಆದರೆ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟ. ಹೌದು ಸರಿಯಾಗಿ ನಿರ್ವಹಣೆ ವಹಿಸದಿದ್ದರೆ ಬಿಳಿ ಬಣ್ಣದ ಬಟ್ಟೆಗಳು ಸ್ವಲ್ಪ ದಿನದ ಬಳಿಕ ತನ್ನ ಹೊಳಪನ್ನು ಕಳೆದುಕೊಂಡು, ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗಿರುವಾಗ ಬಿಳಿ ಬಟ್ಟೆಗಳು ಯಾವಾಗಲೂ ಹೊಸದಾಗಿ ಕಾಣುವಂತೆ ಮಾಡಲು ಅವುಗಳನ್ನು ಸರಿಯಾಗಿ ತೊಳೆಯುವುದು ಅತ್ಯಗತ್ಯ. ಇದಕ್ಕಾಗಿ ಕೆಲವರು ಬ್ಲೀಚ್‌ ಬಳಸುತ್ತಾರೆ. ಈ ಬ್ಲೀಚ್‌ ಕಳೆಗಳನ್ನು ತೆಗೆದುಹಾಕಿದರೂ ಬಟ್ಟೆಯನ್ನು ಒರಟುಗೊಳಿಸುತ್ತದೆ. ಆದ್ದರಿಂದ ಬಟ್ಟೆ ಒಗೆಯುವ ಸಂದರ್ಭದಲ್ಲಿ ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುವುದನ್ನು ತಡೆಯಬಹುದು.

ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುವುದು ಹೇಗೆ?

ಉಪ್ಪು: ಬಿಳಿ ಬಟ್ಟೆಗಳನ್ನು ಒಗೆಯುವ ಮುನ್ನ 1 ರಿಂದ 2 ಟೀ ಚಮಚ ಉಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಬಿಳಿ ಬಟ್ಟೆಗಳನ್ನು ಈ ನೀರಿನಲ್ಲಿ 30 ರಿಂದ 40 ನಿಮಿಷಗಳ ಕಾಲ ನೆನೆಸಿ, ನಂತರ ಡಿಟರ್ಜೆಂಟ್‌ನಿಂದ ಬಿಳಿ ಬಟ್ಟೆಯನ್ನು ತೊಳೆಯಿರಿ. ಈ ವಿಧಾನವು ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

ವಿನೆಗರ್: ಬಟ್ಟೆ ಒಗೆಯುವಾಗ ನೀರಿನಲ್ಲಿ 1/2 ಟೀ ಚಮಚ ವಿನೆಗರ್ ಬೆರೆಸಿ. ಇದರಿಂದ ಬಟ್ಟೆಗಳ ಬಿಳಿ ಬಣ್ಣ ಮಾಸುವುದಿಲ್ಲ ಜೊತೆಗೆ ಇದು ಬೆವರಿನ ವಾಸನೆ, ಕಲೆಗಳನ್ನು ಸಹ ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗಲೂ ನೀವು ವಿನೆಗರ್ ಸೇರಿಸಬಹುದು.

ಹೈಡ್ರೋಜನ್ ಪೆರಾಕ್ಸೈಡ್: ಬಿಳಿ ಬಟ್ಟೆಗಳ ಹೊಳಪು ಮಾಸದಂತೆ ತಡೆಯಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಇದು ಕಲೆಗಳನ್ನು ತೆಗೆದುಹಾಕುವುದಲ್ಲದೆ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಇದನ್ನು ಮಾಡಲು, ಅರ್ಧ ಟೀಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಚೆನ್ನಾಗಿ ಬೆರೆಸಿ, ನಂತರ ಅದರಲ್ಲಿ ಬಿಳಿ ಬಟ್ಟೆಗಳನ್ನು ನೆನೆಸಿ ತೊಳೆಯಿರಿ.

ಇದನ್ನೂ ಓದಿ: ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಸರಳ ಮಾರ್ಗಗಳನ್ನು ಅನುಸರಿಸಿ

ನಿಂಬೆ ರಸ: ಬಿಳಿ ಬಟ್ಟೆಗಳ ಹೊಳಪನ್ನು ವರ್ಷಗಳ ಕಾಲ ಕಾಪಾಡಿಕೊಳ್ಳಲು ನಿಂಬೆರಸ ಕೂಡ ಬಹಳ ಪ್ರಯೋಜನಕಾರಿ ಪದಾರ್ಥವಾಗಿದೆ.  2 ರಿಂದ 3 ಚಮಚ ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ, ಈ ನೀರಿನಲ್ಲಿ ಬಟ್ಟೆಗಳನ್ನು 1-2 ಗಂಟೆಗಳ ಕಾಲ ನೆನೆಸಿಡಿ. ನಂತರ ಅವುಗಳನ್ನು ಡಿಟರ್ಜೆಂಟ್‌ನಿಂದ ತೊಳೆಯಿರಿ. ಇದು ವಾಸನೆಯನ್ನು ತೆಗೆದುಹಾಕುವುದು ಮಾತ್ರವಲ್ಲ ಬಟ್ಟೆ ಹಳದಿಗಟ್ಟುವುದನ್ನು ತಡೆಯುತ್ತದೆ.

ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಬಟ್ಟೆಗಳ ವಾಸನೆಯನ್ನು ಹೋಗಲಾಡಿಸುವುದಲ್ಲದೆ, ಬಿಳಿ ಬಟ್ಟೆಗಳ ಬಣ್ಣ ದೀರ್ಘಕಾಲದವರೆಗೆ ಮಾಸದಂತೆ ತಡೆಯುತ್ತದೆ. ಒಂದು ಬಕೆಟ್‌ ನೀರಿನಲ್ಲಿ 1-2 ಟೀ ಚಮಚ ಅಡಿಗೆ ಸೋಡಾವನ್ನು ಬೆರೆಸಿ. ಬಿಳಿ ಬಟ್ಟೆಯನ್ನು  ಅದರಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಸೋಪಿನಿಂದ ತೊಳೆಯಿರಿ. ಇದರಿಂದ ಕಲೆಗಳು ಮಾಯವಾಗುತ್ತದೆ, ಹೊಳಪು ಕೂಡ ಕಳೆದುಹೋಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓಂ ಕಾಳಿನ ನೀರಿನ ಪ್ರಯೋಜನಗಳೇನು? ಯಾರು ಕುಡಿಯಬಾರದು? ವೈದ್ಯರು ತಿಳಿಸಿರುವ ಮಾಹಿತಿ – Kannada News | Ajwain Water: Health Benefits, How to Make It and Who Should Not Drink It

ಇತ್ತೀಚಿನ ದಿನಗಳಲ್ಲಿ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಆಸಿಡಿಟಿ ಸಮಸ್ಯೆಗಳು ಅನೇಕ ಮಂದಿಯನ್ನು ಕಾಡುತ್ತಿವೆ. ಅನಿಯಮಿತ ಆಹಾರ ಪದ್ಧತಿ, ಹೊರಗಿನ ಆಹಾರ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಒತ್ತಡದ ಜೀವನಶೈಲಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮನೆಮದ್ದಿನತ್ತ ಮುಖ ಮಾಡುತ್ತಾರೆ. ಅವುಗಳಲ್ಲಿ ಓಂ ಕಾಳು (Carom Seeds) ಅಥವಾ ಅಜ್ವೈನ್‌ (Ajwain) ನೀರು ಹೆಚ್ಚು ಜನಪ್ರಿಯವಾಗಿದೆ. ಆಯುರ್ವೇದದಲ್ಲಿ ಓಂ ಜೀರ್ಣಕ್ರಿಯೆಗೆ ಸಹಾಯಕವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಂ ನೀರು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಎಲ್ಲರೂ ಕುಡಿಯುವುದು ಸೂಕ್ತವಲ್ಲ. ಇದರ ಲಾಭಗಳು, ಸರಿಯಾದ ಬಳಕೆ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಓಂ ಕಾಳಿನ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗೆ ನೆರವು

ಓಂ ಕಾಳಿನಲ್ಲಿರುವ ಥೈಮಾಲ್ (Thymol) ಎಂಬ ಸಂಯುಕ್ತವು ಜೀರ್ಣರಸ ಮತ್ತು ಜೀರ್ಣಕ ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಆಹಾರ ಜೀರ್ಣವಾಗಲು ನೆರವಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಆಸಿಡಿಟಿ ಸಮಸ್ಯೆ ಕಡಿಮೆಯಾಗಬಹುದು.

ತೂಕ ನಿಯಂತ್ರಣಕ್ಕೆ ಸಹಕಾರಿ

ಬೆಳಿಗ್ಗೆ ಉಗುರುಬೆಚ್ಚಗಿನ ಓಂ ನೀರು ಕುಡಿಯುವುದರಿಂದ ದೇಹದ ಮೆಟಾಬಾಲಿಸಂ ಉತ್ತಮವಾಗಲು ಸಹಾಯವಾಗಬಹುದು. ಆದರೆ ಕೇವಲ ಓಂ ನೀರು ಕುಡಿದರೆ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ.

ಶ್ವಾಸಕೋಶದ ಆರೋಗ್ಯಕ್ಕೆ ನೆರವು

ಓಂ ಕಾಳಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿವೆ. ಗಂಟಲು ನೋವು, ಕೆಮ್ಮು ಮುಂತಾದ ಸಂದರ್ಭಗಳಲ್ಲಿ ಇದು ಕೆಲವು ಮಟ್ಟಿಗೆ ಆರಾಮ ನೀಡಬಹುದು.

ಋತುಚಕ್ರದ ನೋವು ಕಡಿಮೆ ಮಾಡಲು ಸಹಕಾರಿ

ಕೆಲವು ಮಹಿಳೆಯರಲ್ಲಿ ಮಾಸಿಕ ಧರ್ಮದ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಉಗುರು ಬೆಚ್ಚಗಿನ ಓಂ ನೀರು ಸಹಾಯಕವಾಗಬಹುದು.

ಹೊಟ್ಟೆ ಭಾರವಾದ ಅನುಭವ ಕಡಿಮೆ ಮಾಡಬಹುದು

ಭಾರವಾದ ಊಟದ ನಂತರ ಹೊಟ್ಟೆ ತುಂಬಿದ ಅನುಭವ ಅಥವಾ ಜೀರ್ಣಕ್ರಿಯೆ ನಿಧಾನವಾಗಿರುವ ಸಂದರ್ಭಗಳಲ್ಲಿ ಓಂ ನೀರು ಕೆಲವರಿಗೆ ಆರಾಮ ನೀಡಬಹುದು.

ಓಂ ಕಾಳಿನ ನೀರನ್ನು ತಯಾರಿಸುವ ಸರಿಯಾದ ವಿಧಾನ:

ಒಂದು ಗ್ಲಾಸ್ ನೀರಿಗೆ ಒಂದು ಚಮಚ ಓಮ ಹಾಕಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಅದನ್ನು ಕುದಿಸಿ, ಶೋಧಿಸಿ ಉಗುರುಬೆಚ್ಚಗಿರುವಾಗ ಕುಡಿಯಿರಿ. ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಬಹುದು.

ಯಾರು ಓಂ ಕಾಳಿನ ನೀರು ಕುಡಿಯುವಾಗ ಎಚ್ಚರಿಕೆ ವಹಿಸಬೇಕು?

  • ಹೊಟ್ಟೆಯಲ್ಲಿ ಅಲ್ಸರ್ ಇರುವವರು
  • ತೀವ್ರ ಆಸಿಡ್ ರಿಫ್ಲಕ್ಸ್ (GERD) ಇರುವವರು
  • ಗರ್ಭಿಣಿಯರು (ವೈದ್ಯರ ಸಲಹೆಯ ನಂತರ ಮಾತ್ರ)
  • ದೇಹದಲ್ಲಿ ಹೆಚ್ಚು ಉಷ್ಣತೆ ಇರುವವರು
  • ನಿಯಮಿತವಾಗಿ ಔಷಧ ಸೇವಿಸುವವರು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಹಣ ಫಿಕ್ಸೆಡ್ ಡೆಪಾಸಿಟ್ ಇಡಬಹುದು? – Kannada News | Fixed Deposit: What is the amount an individual can place in a fixed deposit?

ಕೆಲವರು ತಮ್ಮ ದುಡಿಮೆ ಇಂತಿಷ್ಟು ಭಾಗವನ್ನು ಭವಿಷ್ಯಕ್ಕಾಗಿ ಎತ್ತಿಡುತ್ತಾರೆ. ಕೆಲವರು ಉಳಿತಾಯ ಖಾತೆಗೆ ಜಮಾ ಮಾಡಿದರೆ, ಇನ್ನು ಕೆಲವರು ಚಾಲ್ತಿ ಖಾತೆ, ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿ ಹೀಗೆ ವಿವಿಧ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ರೂಪಾಯಿ ಫಿಕ್ಸೆಡ್ ಡೆಪಾಸಿಟ್ (fixed deposit) ಇಡಬಹುದೆಂದು ಯೋಚಿಸಿದ್ದೀರಾ. ಬ್ಯಾಂಕ್ ಈ ಫಿಕ್ಸೆಡ್ ಡೆಪಾಸಿಟ್ ಇಷ್ಟೇ ಇಡಬೇಕು ಅಥವಾ ಗರಿಷ್ಠ ಮಿತಿಯನ್ನು ಹಾಕಿಲ್ಲ. ಆದರೆ ನೀವೇನಾದ್ರೂ ಸ್ಥಿರ ಠೇವಣಿ ಇಡಬೇಕು ಎಂದುಕೊಂಡಿದ್ರೆ ಈ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ಫಿಕ್ಸೆಡ್ ಡೆಪಾಸಿಟ್ ಇಡುವ ಮುನ್ನ ಈ ವಿಷ್ಯ ತಿಳಿದಿರಲಿ

  • ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಿರ ಠೇವಣಿಯಾಗಿ ಇಡಬಹುದಾದ ಹಣಕ್ಕೆ ಯಾವುದೇ ಗರಿಷ್ಠ ಮಿತಿಯನ್ನು ವಿಧಿಸಿಲ್ಲ.
  • ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಲು ಅವಕಾಶವಿದೆ.
  • ಠೇವಣಿದಾರ ದೊಡ್ಡ ಮೊತ್ತದ ಹಣಕ್ಕೆ ಮೂಲ ದಾಖಲೆಯನ್ನು ಬ್ಯಾಂಕ್‌ಗೆ ನೀಡುವುದು ಕಡ್ಡಾಯವಾಗಿದೆ.
  • ಬಡ್ಡಿ ಮೊತ್ತವು ವರ್ಷಕ್ಕೆ 40,000 ರೂ (ಹಿರಿಯರಿಗೆ 50,000 ರೂ) ದಾಟಿದರೆ ತೆರಿಗೆ ಕಡಿತವಾಗುತ್ತದೆ.
  • ನಿಮ್ಮ ಆದಾಯ ತೆರಿಗೆ ಮಿತಿಯಲ್ಲಿದ್ದರೆ ಫಾರ್ಮ್ 15ಜಿ ಹಾಗೂ 15ಹೆಚ್ ನೀಡಿ ಟಿಡಿಎಸ್ ತಪ್ಪಿಸಲು ಸಾಧ್ಯ.
  • ಡಿಐಸಿಜಿಸಿ ನಿಯಮದ ಪ್ರಕಾರ ಬ್ಯಾಂಕಿನಲ್ಲಿ ಅಸಲು ಹಾಗೂ ಬಡ್ಡಿ ಸೇರಿ ಗರಿಷ್ಠ  5 ಲಕ್ಷ ರೂವರೆಗೆ ಮಾತ್ರ ವಿಮಾ ರಕ್ಷಣೆ ಪಡೆಯಲು ಸಾಧ್ಯ.

ಇದನ್ನೂ ಓದಿ: ನಾಮಿನಿ ಇಲ್ಲದೇ ಹೋದ್ರೆ ಮೃತ ವ್ಯಕ್ತಿಯ ಹೆಸರಿನಲ್ಲಿಟ್ಟ ಎಫ್‌ಡಿ ಹಣವು ಯಾರ ಕೈ ಸೇರುತ್ತದೆ?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸ್ಥಿರ ಠೇವಣಿ ಇಡುವುದು ಸುರಕ್ಷಿತವೇ?

ಉತ್ತರ: ಸ್ಥಿರ ಠೇವಣಿ ಸುರಕ್ಷಿತ ಹೂಡಿಕೆಯಲ್ಲಿ ಒಂದು. ಹೂಡಿಕೆ ಮಾಡಿದ ಹಣದೊಂದಿಗೆ ಬಡ್ಡಿ ಸಿಗುತ್ತದೆ.

ಪ್ರಶ್ನೆ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡಬಹುದು?

ಉತ್ತರ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಲು ಯಾವುದೇ ಗರಿಷ್ಠ ಮಿತಿಯಿಲ್ಲ.

ಪ್ರಶ್ನೆ: ಬಡ್ಡಿ ಮೊತ್ತವು ವರ್ಷಕ್ಕೆ ಎಷ್ಟು ರೂಪಾಯಿ ದಾಟಿದರೆ ತೆರಿಗೆ ಕಡಿತವಾಗುತ್ತದೆ?

ಉತ್ತರ: ಬಡ್ಡಿ ಮೊತ್ತವು ವರ್ಷಕ್ಕೆ 40,000 ರೂ (ಹಿರಿಯರಿಗೆ 50,000 ರೂ) ದಾಟಿದರೆ ತೆರಿಗೆ ಕಡಿತವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:45 pm, Tue, 4 August 26

Source link

ತೆರಿಗೆ ತಿದ್ದುಪಡಿ ಮಸೂದೆ ಮಂಡನೆ: ತೆರಿಗೆ, ವಿದೇಶಿ ಹೂಡಿಕೆ, ಯುಪಿಐ ಪಾವತಿ ಇತ್ಯಾದಿ ನಿಯಮಗಳ ಪರಿಷ್ಕರಣೆಗೆ ಪ್ರಸ್ತಾಪ – Kannada News | Govt tables taxation amendment bill 2026, know the proposed changes in rules

ನವದೆಹಲಿ, ಆಗಸ್ಟ್ 4: ದೇಶದಲ್ಲಿ ಜಾಗತಿಕ ಹೂಡಿಕೆಗಳನ್ನು ಹೆಚ್ಚಿಸಲು, ವಿದೇಶಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ನೀಡಲು ಹಾಗೂ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ತೆರಿಗೆ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026’ (Taxation and Other Laws Amendment Bill, 2026) ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಈ ಮಸೂದೆಯು ಆದಾಯ ತೆರಿಗೆ ಕಾಯ್ದೆ, ಹಣಕಾಸು ಕಾಯ್ದೆ 2026 ಹಾಗೂ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007’ (Payment and Settlement Systems Act, 2007) ಕ್ಕೆ ಪ್ರಮುಖ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ವಿಧೇಯಕದ ಪ್ರಮುಖ ಅಂಶಗಳು ಇಲ್ಲಿ ಕೆಳಕಂಡಂತಿವೆ:

ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ

ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶವು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ದೊಡ್ಡ ಉತ್ತೇಜನ (Electronics Manufacturing Incentives)ನೀಡುತ್ತದೆ. ಭಾರತದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಗುತ್ತಿಗೆ ಸಂಸ್ಥೆಗಳಿಗೆ (Contract Manufacturers) ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ಪೂರೈಸುವ ವಿದೇಶಿ ಕಂಪನಿಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯ ಅವಧಿಯನ್ನು 2030-31 ರಿಂದ 2040-41 ರವರೆಗೆ (ಇನ್ನೂ 10 ವರ್ಷಗಳ ಕಾಲ) ವಿಸ್ತರಿಸಲಾಗಿದೆ.

ಇದನ್ನೂ ಓದಿ: ವಿದೇಶಗಳಿಗೆ ಪರಾರಿಯಾಗಿದ್ದ 274 ಆರ್ಥಿಕ ಅಪರಾಧಿಗಳು ಭಾರತಕ್ಕೆ ಹಸ್ತಾಂತರ: 2019-26ರಲ್ಲಾದ ಸಾಧನೆ ಇದು

‘ನಿಗದಿತ ಎಲೆಕ್ಟ್ರಾನಿಕ್ ಸರಕುಗಳ’ (Specified Electronic Goods) ವ್ಯಾಪ್ತಿಗೆ ಈಗ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸರ್ವರ್, ವೇರೆಬಲ್ಸ್ ಹಾಗೂ ಅವುಗಳ ಸಬ್-ಅಸೆಂಬ್ಲಿ ಬಿಡಿಭಾಗಗಳನ್ನು ಸೇರ್ಪಡೆಗೊಳಿಸಿ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ವಿದೇಶಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ

ಸರ್ಕಾರಿ ಸೆಕ್ಯುರಿಟಿಗಳಲ್ಲಿ (G-Secs) ಹೂಡಿಕೆ ಮಾಡುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಮತ್ತು ‘ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್’ (BIS) ಗಳಿಸುವ ಬಡ್ಡಿ ಆದಾಯ ಹಾಗೂ ಬಂಡವಾಳ ಲಾಭದ (Capital Gains) ಮೇಲಿನ ತೆರಿಗೆಯನ್ನು ವಿನಾಯಿತಿ ನೀಡುವ ಜೂನ್ 2026 ರ ಸುಗ್ರೀವಾಜ್ಞೆಯನ್ನು ಈ ಮಸೂದೆ ಅಧಿಕೃತವಾಗಿ ಕಾಯ್ದೆಯನ್ನಾಗಿ ಮಾಡಲಿದೆ.

ಡಿಜಿಟಲ್ ಹಾಗೂ ಯುಪಿಐ ಪಾವತಿ ನಿಯಮ ಪರಿಷ್ಕರಣೆ

‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007’ ಕ್ಕೆ ತಿದ್ದುಪಡಿ ತರಲಾಗಿದ್ದು, ಬ್ಯಾಂಕ್‌ಗಳು ಅಥವಾ ಪಾವತಿ ಸೇವಾ ಪೂರೈಕೆದಾರರು (Payment Service Providers) ಯಾವ ಎಲೆಕ್ಟ್ರಾನಿಕ್/ಡಿಜಿಟಲ್ ಪಾವತಿಗಳ ಮೇಲೆ ಸೇವಾ ಶುಲ್ಕ ಅಥವಾ ಎಂಡಿಆರ್ (MDR) ವಿಧಿಸುವಂತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ತಿಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

ಆಫ್‌ಶೋರ್ ಫಂಡ್‌ಗಳು ಮತ್ತು ಡೇಟಾ ಸೆಂಟರ್‌ಗಳಿಗೆ ನಿಯಮಗಳ ಸರಳೀಕರಣ

ಆಫ್‌ಶೋರ್ ಫಂಡ್‌ಗಳು: ಭಾರತದಿಂದ ನಿರ್ವಹಿಸಲ್ಪಡುವ ವಿದೇಶಿ ಹೂಡಿಕೆ ನಿಧಿಗಳಿಗೆ (Offshore Funds) ಇದ್ದ 13 ಕಠಿಣ ಷರತ್ತುಗಳ ಪೈಕಿ 8 ಷರತ್ತುಗಳನ್ನು ತೆರವುಗೊಳಿಸಿ, ನಿಧಿ ನಿರ್ವಹಣೆ (Fund Management) ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ.

ಡೇಟಾ ಸೆಂಟರ್‌ಗಳು: ವಿದೇಶಿ ಕಂಪನಿಗಳು ಭಾರತೀಯ ಡೇಟಾ ಸೆಂಟರ್‌ಗಳ ಸೇವೆಗಳನ್ನು ಬಳಸಿಕೊಳ್ಳುವುದಕ್ಕೆ ನೀಡಲಾಗಿದ್ದ ತೆರಿಗೆ ಸರಳೀಕರಣ ಚೌಕಟ್ಟನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ವಜ್ರದ ವ್ಯಾಪಾರ: ವಿಶೇಷ ವಲಯಗಳಲ್ಲಿ ಕಚ್ಚಾ ವಜ್ರಗಳನ್ನು ಮಾರಾಟ ಮಾಡುವ ವಿದೇಶಿ ಗಣಿಗಾರಿಕೆ ಕಂಪನಿಗಳಿಗೆ ನೀಡಲಾದ ತೆರಿಗೆ ವಿನಾಯಿತಿಯನ್ನು 2041 ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗುತ್ತಿರುವ ಏರಿಳಿತಗಳು ಹಾಗೂ ಭೌಗೋಳಿಕ ರಾಜಕೀಯ ಸವಾಲುಗಳ ನಡುವೆ, ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ವಾತಾವರಣವನ್ನು ಸುಸ್ಥಿರವಾಗಿಡಲು ಹಾಗೂ ಸುಲಭ ವಹಿವಾಟು (Ease of Doing Business) ಉತ್ತೇಜಿಸಲು ಈ ತೆರಿಗೆ ತಿದ್ದುಪಡಿ ಮಸೂದೆ ಅತ್ಯಂತ ಪ್ರಮುಖವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿವುಡ್‌ ಸಿನಿಮಾಗಳಿಗೆ ಶಾರುಖ್‌ ಖಾನ್‌ ಪೈಪೋಟಿ: ಬದಲಾಗಲ್ಲ ‘ಕಿಂಗ್‌’ ರಿಲೀಸ್‌ ದಿನಾಂಕ – Kannada News | Shah Rukh Khan King Movie Release Date Box Office clash with Hollywood Movies in 2026 December

ಬಾಲಿವುಡ್‌ ನಟ ಶಾರುಖ್‌ ಖಾನ್‌ (Shah Rukh Khan) ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಸಿನಿಮಾ ತೆರೆಗೆ ಬರದ ಕಾರಣ, ಶಾರುಖ್‌ ಅವರ ಮುಂಬರುವ ‘ಕಿಂಗ್‌’ (King) ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಬಿಡುಗಡೆ 2027ಕ್ಕೆ ಮುಂದೂಡಲ್ಪಡಬಹುದು ಎಂಬ ವದಂತಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ, ಈ ವದಂತಿಗಳಿಗೆ ತೆರೆಬಿದ್ದಿದ್ದು, ಮೊದಲಿನ ಪ್ಲ್ಯಾನ್​ನಂತೆಯೇ 2026ರ ಡಿಸೆಂಬರ್ 24ರಂದು ‘ಕಿಂಗ್‌’ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಹಾಲಿವುಡ್‌ನ ದೈತ್ಯ ಸಿನಿಮಾಗಳೊಂದಿಗೆ ಬಿಗ್‌ ಕ್ಲ್ಯಾಶ್‌

ಈ ವರ್ಷದ ಡಿಸೆಂಬರ್‌ ತಿಂಗಳು ಚಿತ್ರರಂಗದಲ್ಲಿ ಅತಿ ದೊಡ್ಡ ಬಾಕ್ಸ್‌ ಆಫೀಸ್‌ ಕದನಕ್ಕೆ ಸಾಕ್ಷಿಯಾಗಲಿದೆ. ಶಾರುಖ್‌ ಅವರ ‘ಕಿಂಗ್‌’ ಬಿಡುಗಡೆಯಾಗುವ ಒಂದೇ ವಾರದ ಅಂತರದಲ್ಲಿ ಹಾಲಿವುಡ್‌ನ ಮೂರು ಪ್ರಮುಖ ಬಿಗ್‌ ಬಜೆಟ್‌ ಸಿನಿಮಾಗಳು ತೆರೆಕಾಣುತ್ತಿವೆ. ಡಿಸೆಂಬರ್ 18ರಂದು ತೆರೆಕಾಣಲಿರುವ ‘ಅವೆಂಜರ್ಸ್‌: ಡೂಮ್ಸ್‌ಡೇ’ ಸಿನಿಮಾ ಭಾರತದಲ್ಲಿ ಬೃಹತ್‌ ಮಟ್ಟದ ಗಳಿಕೆ ಮಾಡುವ ನಿರೀಕ್ಷೆಯಿದೆ.

ಡಿಸೆಂಬರ್ 18ರಂದೇ ಬಿಡುಗಡೆಯಾಗಲಿರುವ ‘ಡ್ಯೂನ್‌: ಪಾರ್ಟ್ 3’ ಸಿನಿಮಾ ಐಮ್ಯಾಕ್ಸ್‌ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ಅಲ್ಲದೇ, ಇದೇ ಸಮಯದಲ್ಲಿ ಬಿಡುಗಡೆ ಆಗಲಿರುವ ‘ಜುಮಾಂಜಿ: ಓಪನ್‌ ವರ್ಲ್ಡ್‌’ ಸಿನಿಮಾ ಕೂಡ ಭಾರತದಲ್ಲಿ ಅಪಾರ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಈ ಸಿನಿಮಾದಲ್ಲಿ ಡ್ವೇನ್‌ ಜಾನ್ಸನ್‌ ಅವರು ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳ ಜೊತೆಯಲ್ಲಿ ‘ಕಿಂಗ್’ ಪೈಪೋಟಿ ನೀಡಲಿದೆ.

‘ಕಿಂಗ್’ ಸಿನಿಮಾಗೆ ಸವಾಲು ಮತ್ತು ನಿರೀಕ್ಷೆ:

ಭಾರತೀಯ ಮಾರುಕಟ್ಟೆಯಲ್ಲಿ ಶಾರುಖ್‌ ಖಾನ್‌ ಅವರ ‘ಕಿಂಗ್‌’ ಚಿತ್ರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಈ ಚಿತ್ರಕ್ಕೆ ಮೊದಲ ಆದ್ಯತೆ ಸಿಗಲಿದೆ ಎಂದು ಚಿತ್ರರಂಗದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ವಿದೇಶಿ ಮಾರುಕಟ್ಟೆಯಲ್ಲಿ ಹಾಲಿವುಡ್ ಸಿನಿಮಾಗಳು ಪೈಪೋಟಿ ನೀಡಲಿರುವುದರಿಂದ ‘ಕಿಂಗ್‌’ ಚಿತ್ರಕ್ಕೆ ಚಿತ್ರಮಂದಿರಗಳು ಮತ್ತು ಸ್ಕ್ರೀನ್‌ಗಳ ಸಂಖ್ಯೆಯಲ್ಲಿ ತುಸು ಸವಾಲು ಎದುರಾಗಬಹುದು.

ಇದನ್ನೂ ಓದಿ: ಶಾರುಖ್​ ಖಾನ್​ಗೆ ಪೆಟ್ಟಾಗಿದ್ದು ಸುಳ್ಳಾ? ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ಹೋಗಿದ್ದು ಯಾಕೆ?

ಆದಾಗ್ಯೂ, ಶಾರುಖ್‌ ಖಾನ್‌ ಅವರಿಗೆ ವಿದೇಶಗಳಲ್ಲೂ ದೊಡ್ಡ ಅಭಿಮಾನಿ ಬಳಗವಿದ್ದು, ‘ಕಿಂಗ್‌’ ಚಿತ್ರವನ್ನು ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಜಾಗತಿಕವಾಗಿ ವಿತರಣೆ ಮಾಡುತ್ತಿದೆ. ಸಂಸ್ಥೆಯ ದೀರ್ಘಕಾಲದ ಅನುಭವ ಮತ್ತು ಜಾಗತಿಕ ನೆಟ್‌ವರ್ಕ್‌ನಿಂದಾಗಿ ಈ ಚಿತ್ರಕ್ಕೆ ಗರಿಷ್ಠ ಸಂಖ್ಯೆಯ ಸ್ಕ್ರೀನ್‌ಗಳು ದೊರೆಯಲಿವೆ ಎಂದು ವಿಶ್ಲೇಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Rain: ಬೆಂಗಳೂರಲ್ಲಿ ಧಾರಾಕಾರ ಮಳೆಗೆ ವಾಹನ ಸವಾರರು ಹೈರಾಣ, 7 ಜಿಲ್ಲೆಗಳಲ್ಲಿ ನಾಳೆ ಭಾರಿ ವರ್ಷಧಾರೆಯ ಮುನ್ಸೂಚನೆ – Kannada News | Bengaluru Rain: Sudden Downpour Snarls Traffic in City; IMD Issues Heavy Rain Alert for 7 Karnataka Districts

ಬೆಂಗಳೂರು, ಆಗಸ್ಟ್​​ 04: ಸಿಲಿಕಾನ್ ಸಿಟಿ ಬೆಂಗಳೂರಿಗೆ (Bengaluru) ಮಳೆರಾಯ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದು, ಕೆ. ಆರ್. ಮಾರ್ಕೆಟ್, ಟೌನ್ ಹಾಲ್, ಕೆ. ಆರ್. ಸರ್ಕಲ್, ವಿಧಾನಸೌಧ, ಎಂ.ಜಿ. ರೋಡ್, ಶಾಂತಿನಗರ ಸುತ್ತಮುತ್ತ ಭಾರಿ ಮಳೆಯಾಗಿದೆ. ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಆದ ಪರಿಣಾಮ ವಾಹನ ಸವಾರರು ತೀವ್ರ ಪರದಾಡಿದ್ದು, ಟ್ರಾಫಿಕ್​​ನಲ್ಲಿ ಸಿಲುಕಿ ಆಂಬುಲೆನ್ಸ್ ಕೂಡ ಸಿಲುಕಿಕೊಂಡ ಪ್ರಸಂಗ ನಡೆದಿದೆ.

7 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ನಾಲೆ ಧಾರಾಕಾರ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಸಾಧಾರ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೆಆರ್‌ಎಸ್, ಆಲಮಟ್ಟಿಗೆ ಬೃಹತ್‌ ಒಳಹರಿವು! ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಉಡುಪಿಯಲ್ಲಿ ದಾಖಲೆಯ ಮಳೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿಯಲ್ಲಿ ನಿನ್ನೆ ದಾಖಲೆಯ ಅಂದರೆ ಬರೋಬ್ಬರಿಬ 189 ಮಿ.ಮೀ. ಮಳೆಯಾಗಿದೆ. ಬೆಳಗಾವಿಯ ಖಾನಾಪುರದ ಪಾರ್ವಾಡ್​​ನಲ್ಲಿ 174 ಮಿ.ಮೀ, ತೀರ್ಥಹಳ್ಳಿಯ ಆಗುಂಬೆಯಲ್ಲಿ 170 ಮಿ.ಮೀ, ಮಂಗಳೂರಿನ ಶಿರ್ಥಡಿಯಲ್ಲಿ 133.5 ಮಿ.ಮೀ ಮತ್ತು ಉತ್ತರ ಕನ್ನಡದ ಸಿದ್ದಾಪುರದ ದೊಡ್ಮನೆಯಲ್ಲಿ 124.5 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Source link

Exit mobile version