ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್ – Kannada News | Karnataka Cabinet expansion Dissent: Ranadeep Singh surjewala visits MLA M Krishnappa house In Bengaluru

ಬೆಂಗಳೂರು, (ಆಗಸ್ಟ್ 05): ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​​​​ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಲವು ಶಾಸಕರು ಬೇಸರಗೊಂಡಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಂ.ಕೃಷ್ಣಪ್ಪ ಸಹ ಅಸಮಾಧಾನಗೊಂಡಿದ್ದು, ಇದೀಗ ಕೃಷ್ಣಪ್ಪನವರನ್ನು ಮನವೊಲಿಸಲು ಖುದ್ದು ಹೈಕಮಾಂಡ್ ಅಖಾಡಕ್ಕಿಳಿದಿದೆ. ಹೌದು….ಎಂ ಕೃಷ್ಣಪ್ಪ ಅವರನ್ನ ಮನವೊಲಿಸಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದಾಗಿದ್ದು, ದೆಹಲಿಯಿಂದ ನೇರವಾಗಿ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸಿರುವ ಭಾರತೀಯರಿವರು – Kannada News | Indian Batsmen Double Hundreds vs Sri Lanka: Kohli, Sehwag, Tendulkar’s Elite Club

ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಕೊಲಂಬೊಗೆ ಪ್ರಯಾಣ ಬೆಳೆಸಿದೆ. 2025-27 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗೇರಲು ಈ ಸರಣಿ ನಿರ್ಣಾಯಕವಾಗಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಆಗಸ್ಟ್ 15, 2026 ರಂದು ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ಶುಭಮನ್ ಗಿಲ್ ನೇತೃತ್ವದ ತಂಡವು ಶ್ರೀಲಂಕಾದ XI ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ(PC-PTI).

Source link

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ – Kannada News | Hero Driver’s Quick Thinking: KSRTC Pilot Saves Life During Heart Attack in Tumakuru

ತುಮಕೂರು, ಆ.5: ಚಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕನೊಬ್ಬನ ಪ್ರಾಣ ಉಳಿದಿರುವ ನಿದರ್ಶನವೊಂದು ತುಮಕೂರಿನಲ್ಲಿ ನಡೆದಿದೆ. ತುಮಕೂರಿನಿಂದ ಮಧುಗಿರಿಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಮಾರ್ಗಮಧ್ಯೆ ದಿಢೀರ್‌ ಹೃದಯಾಘಾತ (Heart Attack) ಸಂಭವಿಸಿದಾಗ, ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ನೇರವಾಗಿ ಆಸ್ಪತ್ರೆಯ ಮುಂಭಾಗಕ್ಕೇ ತಂದು ನಿಲ್ಲಿಸಿ ಜೀವ ಉಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ತುಮಕೂರಿನಿಂದ ಮಧುಗಿರಿ ಮಾರ್ಗವಾಗಿ ಸಾಗುತ್ತಿದ್ದಾಗ, ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪ್ರಯಾಣಿಕ ಹೃದಯಾಘಾತದಿಂದ ತೀವ್ರ ಅಸ್ವಸ್ಥರಾಗುತ್ತಿರುವುದನ್ನು ಗಮನಿಸಿದ ಚಾಲಕ ತಡಮಾಡದೆ ಸ್ಪಂದಿಸಿದ್ದಾರೆ. ತುಮಕೂರು-ಮಧುಗಿರಿ ರಸ್ತೆಯಲ್ಲಿರುವ ಸಾಚಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲೇ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಿ, ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಯ ನೆರವಿನಿಂದ ಪ್ರಯಾಣಿಕನನ್ನು ಒಳಗೆ ದಾಖಲಿಸಿದ್ದಾರೆ. ಚಾಲಕನ ಈ ಸಮಯೋಚಿತ ನಿರ್ಧಾರದಿಂದಾಗಿ ಪ್ರಯಾಣಿಕನಿಗೆ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದ ಚಾಲಕನ ಮಾನವೀಯತೆ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಟೆರೇಸ್‌ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು – Kannada News | How to grow dragon fruit on home terrace

ಡ್ರ್ಯಾಗನ್‌ ಹಣ್ಣಿನಲ್ಲಿ (dragon fruit) ಕ್ಯಾಲೋರಿ ಕಡಿಮೆ ಆದರೆ ಕಬ್ಬಿಣ, ಸತು, ಪ್ರೋಟೀನ್‌, ರಂಜಕ, ಮೆಗ್ನೇಸಿಯಂನಂತಹ  ಅಗತ್ಯ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಹಣ್ಣು ತೂಕ ಇಳಿಕೆಗೆ, ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಚರ್ಮದ ಆರೋಗ್ಯಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾನೇ ಸಹಕಾರಿ.  ಹೀಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್‌ ಹಣ್ಣು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಜೊತೆಗೆ ಈ ಹಣ್ಣಿನ ಬೆಲೆಯೂ ಜಾಸ್ತಿ. ಆದ್ದರಿಂದ ಈ ಹಣ್ಣನ್ನು ಮನೆಯಲ್ಲಿ ಬೆಳೆಯುವುದು ತುಂಬಾನೇ ಕಷ್ಟಕರವೆಂದು ಅನೇಕರು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ, ಈ ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ಡ್ರ್ಯಾಗನ್‌ ಫ್ರೂಟ್‌ ಅನ್ನು ಮನೆ ಟೆರೇಸ್‌ ಮೇಲೆ ಅಥವಾ ಬಾಲ್ಕನಿಯಲ್ಲಿಯೇ ಈಸಿಯಾಗಿ ಬೆಳೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮನೆಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಈ ಸಲಹೆ ಅನುಸರಿಸಿ:

ಟಬ್‌ ಅಥವಾ ಮಡಕೆಯ ಆಯ್ಕೆ: ಡ್ರ್ಯಾಗನ್ ಫ್ರೂಟ್ ಕ್ಯಾಕ್ಟಸ್‌ ಅಥವಾ ಕಳ್ಳಿ ತರಹದ ಸಸ್ಯವಾಗಿದ್ದರೂ, ಅದರ ಬೇರುಗಳು ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತವೆ ಮತ್ತು ಸಸ್ಯ ಸಾಕಷ್ಟು ಭಾರವಾಗಿರುತ್ತದೆ. ಆದ್ದರಿಂದ, ಅದಕ್ಕೆ ಸ್ವಲ್ಪ ದೊಡ್ಡದಾದ ಡ್ರ್ಯಾಗನ್ ಟಬ್, ಮಣ್ಣಿನ ಮಡಕೆ ಬೇಕಾಗುತ್ತದೆ. ಕನಿಷ್ಠ 16 ರಿಂದ 20 ಇಂಚಿನ ಟಬ್‌ ಇದ್ರೆ ಒಳ್ಳೆಯದು. ಇಲ್ಲವೇ ಅರ್ಧ ಕಟ್‌ ಮಾಡಿರುವ ಡ್ರಮ್‌ ಕೂಡ ನೀವು ಬಳಸಬಹುದು. ಮಡಕೆ ಒಳಗೆ ನೀರು ನಿಲ್ಲದಂತೆ ನೋಡಿಕೊಳ್ಳಲು ಅದರ ಅಡಿಯಲ್ಲಿ ಸಣ್ಣ ರಂಧ್ರಗಳನ್ನು ಕೊರೆಯಿರಿ.

ಸಸಿಯ ಆಯ್ಕೆ: ಬೀಜಗಳಿಂದ ಸಸಿ ಬೆಳೆಸುವ ಬದಲು ನರ್ಸರಿಗಳಿಂದ ಉತ್ತಮ ಸಸಿಗಳನ್ನು ಖರೀದಿಸುವುದು ಉತ್ತಮ. ಏಕೆಂದರೆ ಬೀಜದಿಂದ ಬೆಳೆದ ಗಿಡ ಹಣ್ಣುಗಳನ್ನು ನೀಡಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ, ಅದೇ ಕತ್ತರಿಸಿದ ಸಸಿಗಳು ವರ್ಷದೊಳಗೆ ಫಸಲು ನೀಡುತ್ತವೆ.  ನೀವು  ಕೆಂಪು ಅಥವಾ ಗುಲಾಬಿ ಬಣ್ಣದ ಪ್ರಭೇದದ ಡ್ರ್ಯಾಗನ್‌ ಸಸಿಗಳನ್ನು ಖರೀದಿಸಿ. ನೀವು ನೆಡುವ ಡ್ರ್ಯಾಗನ್‌ ಸಸಿ 12 ರಿಂದ 18 ಇಂಚು ಎತ್ತರ ಇದ್ದರೆ ತುಂಬಾ ಒಳ್ಳೆಯದು.

ಮಣ್ಣಿನ ಆಯ್ಕೆ: ಡ್ರಾಗನ್ ಗಿಡಗಳನ್ನು ಬೆಳೆಯಲು  ಮರಳು ಮಿಶ್ರಿತ ಮಣ್ಣು ಸೂಕ್ತ, ಏಕೆಂದರೆ ಅದರಲ್ಲಿ ನೀರು ನಿಲ್ಲುವುದಿಲ್ಲ. ನೀರು ಅತಿಯಾದರೆ ಸಸ್ಯದ ಬೇರುಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಮಣ್ಣು ಮತ್ತು ಗೊಬ್ಬರದ ಆಯ್ಕೆ ಹೇಗಿರಬೇಕೆಂದರೆ ತೋಟದ ಮಣ್ಣು 40%, ಸಾವಯವ ಗೊಬ್ಬರ ಅಥವಾ ಹಸುವಿನ ಗೊಬ್ಬರ ಅಥವಾ ಎರೆಹುಳು ಗೊಬ್ಬರ: 40%, ಬಿಳಿ ಮರಳು 10%, 10% ಕೊಕೊಪೀಟ್‌ ಮತ್ತು ಬೋನ್‌ ಮೀಲ್. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಟಬ್‌ಗೆ ಹಾಕಿ ಗಿಡಗಳನ್ನು ನೆಡಿ. ಮತ್ತು ಬುಡಕ್ಕೆ ಸ್ವಲ್ಪ ನೀರು ಹಾಕಿ. ಈ ಗಿಡ ಬಳ್ಳಿಯಂತೆ ಬೆಳೆಯುವುದರಿಂದ, ಗಿಡ ನೆಟ್ಟ ಬಳಿಕ ಅದರ ಪಕ್ಕದಲ್ಲಿ ಮರದ ಕೋಲು ಅಥವಾ ಕಬ್ಬಿಣದ ಕಂಬವನ್ನು ಆಧಾರವಾಗಿ ಇಡಬೇಕು.

ಇದನ್ನೂ ಓದಿ: ಸಕಾರಾತ್ಮಕತೆಯನ್ನು ಹರಡುವ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು

ಸಾಕಷ್ಟು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಗಿಡವನ್ನಿಡಿ: ಡ್ರ್ಯಾಗನ್‌ ಫ್ರೂಟ್‌ ಗಿಡ ಬಹಳಷ್ಟು ಸೂರ್ಯನ ಬೆಳಕನ್ನು ಇಷ್ಟಪಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೇರ, ಬಲವಾದ ಸೂರ್ಯನ ಬೆಳಕನ್ನು ಪಡೆಯುವ ಡ್ರ್ಯಾಗನ್‌ ಫ್ರೂಟ್‌ ಗಿಡ ನೆಟ್ಟ ಟಬ್‌ ಇಡುವುದು ಉತ್ತಮ. ಹೆಚ್ಚು ಸೂರ್ಯನ ಬೆಳಕನ್ನು ಪಡೆದಷ್ಟೂ, ಹಣ್ಣಿನ ಸಿಹಿ ಮತ್ತು ಗಾತ್ರವು ಉತ್ತಮವಾಗಿರುತ್ತದೆ.

ಈ ವಿಷಯಗಳನ್ನು ನೆನಪಿಸಿ:

  • ಈ ಗಿಡಕ್ಕೆ ಅತಿಯಾಗಿ ನೀರು ಹಾಕಬಾರದು. ಕುಂಡದಲ್ಲಿರುವ ಮಣ್ಣು ಒಣಗಿದಾಗ ಅಥವಾ ವಾರಕ್ಕೆ ಎರಡು ಬಾರಿ ನೀರು ಹಾಕಿದರೆ ಸಾಕು.
  • ಗಿಡದ ಮುಖ್ಯ ಕೊಂಬೆಯು ಗಿಡಕ್ಕೆ ಆಧಾರವಾಗಿರುವ ಕಂಬವನ್ನು ತಲುಪಿದ ನಂತರ ಸುತ್ತಲೂ ಹೊಸ ಕೊಂಬೆಗಳು ಬೆಳೆಯುವಂತೆ ತುದಿಯನ್ನು ಕತ್ತರಿಸಿ. ಇದರಿಂದ ಹೆಚ್ಚಿನ ಹಣ್ಣುಗಳನ್ನು ಪಡೆಯಬಹುದು.
  • ವರ್ಷಕ್ಕೆ ಕನಿಷ್ಠ ಮೂರು ಬಾರಿ ಮಣ್ಣನ್ನು ಸ್ವಲ್ಪ ಅಗೆದು ಹಸುವಿನ ಸಗಣಿ, ಬೋನ್‌ ಮೀಲ್‌ ಮತ್ತು ಒಂದು ಚಮಚ ಪೊಟ್ಯಾಶ್ ಗೊಬ್ಬರವನ್ನುಗಿಡದ ಬುಡಕ್ಕೆ ಸೇರಿಸಿ. ಸಸ್ಯವು ಸಾಮಾನ್ಯವಾಗಿ ನೆಟ್ಟ 12 ರಿಂದ 18 ತಿಂಗಳೊಳಗೆ ಹೂಬಿಡಲು ಪ್ರಾರಂಭಿಸುತ್ತದೆ. ಹೂವು ಬಿಟ್ಟ ಕೇವಲ 30 ರಿಂದ 35 ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಲಿಲ್ಲ’: ಕಂಬ್ಯಾಕ್ ಬಗ್ಗೆ ಪ್ರೀತಿ ಜಿಂಟಾ ಮಾತು – Kannada News | Preity Zinta speaks about Hindi Movie Comeback with Batwara 1947 Film

2000ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ಯಶಸ್ವಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಒಬ್ಬರಾಗಿದ್ದ ಪ್ರೀತಿ ಜಿಂಟಾ (Preity Zinta) ಅವರು ಮದುವೆ ಮತ್ತು ಮಕ್ಕಳು ಆದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದರು. 2008ರ ನಂತರ ಅಪರೂಪಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, 2018ರ ಬಳಿಕ ತಮ್ಮ ಪೂರ್ಣ ಸಮಯವನ್ನು ಕುಟುಂಬ ಮತ್ತು ಮಕ್ಕಳ ಪಾಲನೆಗಾಗಿಯೇ ಮೀಸಲಿಟ್ಟಿದ್ದರು. ಇದೀಗ ಬರೋಬ್ಬರಿ 8 ವರ್ಷಗಳ ಸುದೀರ್ಘ ವಿರಾಮದ ನಂತರ ರಾಜ್​ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ (Batwara 1947) ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರವು ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

‘ಬಟ್ವಾರಾ 1947’ ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ ಜಿಂಟಾ ಅವರು ತಮ್ಮ ಈ ಕಂಬ್ಯಾಕ್ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ದಿನಗಳ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ದೀರ್ಘ ವಿರಾಮದ ನಂತರ ಮತ್ತೆ ಕ್ಯಾಮೆರಾ ಎದುರಿಸುವಾಗ ಹೇಗನ್ನಿಸಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರಂಭದಲ್ಲಿ ತಮಗೆ ತುಂಬಾ ಭಯ ಮತ್ತು ಆತಂಕವಿತ್ತು ಎಂದು ಒಪ್ಪಿಕೊಂಡರು.

‘ಮೊದಲ ದಿನವೇ ನಿರ್ದೇಶಕ ರಾಜ್​ಕುಮಾರ್ ಸಂತೋಷಿ ಅವರು ಈ ಸಿನಿಮಾದ ಅತ್ಯಂತ ಕಷ್ಟಕರವಾದ ದೃಶ್ಯವನ್ನು ಶೂಟ್ ಮಾಡುವ ಮೂಲಕ ನನಗೆ ಹಿಂಸೆ ನೀಡಿದರು. ಆ ದೃಶ್ಯ ನಟಿಸುವಾಗ ನಾನು ಆತಂಕದಿಂದ ನಡುಗುತ್ತಿದ್ದೆ. ಆಗ ನನ್ನ ಜೊತೆಗಿದ್ದ ಸನ್ನಿ ಡಿಯೋಲ್ ಅವರು ಧೈರ್ಯ ತುಂಬಿದರು. ಸನ್ನಿ ಅತ್ಯಂತ ಪ್ರೀತಿಯ ಮತ್ತು ವಿಶಾಲ ಮನಸ್ಸಿನ ವ್ಯಕ್ತಿ. ಅವರು ನನ್ನನ್ನು ಸಮಾಧಾನಪಡಿಸಿದರು. ಮೊದಲ ದಿನದ ಆ ಕಷ್ಟದ ಸೀನ್ ಮುಗಿದ ನಂತರ ಎಲ್ಲವೂ ಸುಲಭವಾಯಿತು’ ಎಂದು ಶೂಟಿಂಗ್ ನೆನಪನ್ನು ಪ್ರೀತಿ ಜಿಂಟಾ ಹಂಚಿಕೊಂಡರು.

‘ಸಿನಿಮಾಗಿಂತ ಮಕ್ಕಳೇ ನನ್ನ ದೊಡ್ಡ ಸಾಧನೆ’

2018ರಲ್ಲಿ ಸನ್ನಿ ಡಿಯೋಲ್ ಜೊತೆ ನಟಿಸಿದ್ದ ‘ಭಯ್ಯಾಜಿ ಸೂಪರ್‌ಹಿಟ್’ ಸಿನಿಮಾದ ನಂತರ ಪ್ರೀತಿ ಜಿಂಟಾ ನಟಿಸಿರಲಿಲ್ಲ. ಆದರೆ ಈ ಅವಧಿಯಲ್ಲಿ ತಾವು ಸಿನಿಮಾವನ್ನು ಮಿಸ್ ಮಾಡಿಕೊಳ್ಳಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಲೇ ಇಲ್ಲ. ಕುಟುಂಬದ ಜೊತೆ ಸಮಯ ಕಳೆಯುವುದು, ಮಕ್ಕಳನ್ನು ಬೆಳೆಸುವುದು ಮತ್ತು ವೈಯಕ್ತಿಕ ಜೀವನದ ಕಡೆ ಗಮನಹರಿಸುವುದು ನನಗೆ ಹೊಸ ಅನುಭವ ನೀಡಿತು. ನನ್ನ ವೃತ್ತಿಜೀವನದಲ್ಲಿ ನಾನು ಎಷ್ಟೇ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದರೂ, ನನಗೆ ಮಕ್ಕಳು ಹುಟ್ಟಿದ್ದೇ ನನ್ನ ಜೀವನದ ಅತಿ ದೊಡ್ಡ ಸಾಧನೆ’ ಎಂದು ಪ್ರೀತಿ ಹೆಮ್ಮೆಯಿಂದ ಹೇಳಿದರು.

ಇದನ್ನೂ ಓದಿ: ನಟಿ ಪ್ರೀತಿ ಜಿಂಟಾ ಜೊತೆ ಡೇಟಿಂಗ್ ಮಾಡಿದ್ದು ನಿಜವೇ? ಉತ್ತರಿಸಿದ ಬ್ರೆಟ್ ಲೀ

ಪಾತ್ರಕ್ಕೆ ಜೀವ ತುಂಬಲು ನೆರವಾಯಿತು:

‘ಬಟ್ವಾರಾ 1947’ ಸಿನಿಮಾದಲ್ಲಿ ಪ್ರೀತಿ ಜಿಂಟಾ ಅವರು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ-ಪಾಕ್ ವಿಭಜನೆಯ ನಂತರ ಲಾಹೋರ್‌ನಲ್ಲಿರುವ ತಮ್ಮ ಮನೆಯಲ್ಲಿ ಆಶ್ರಯ ಪಡೆಯುವ ಹಿಂದೂ ಮಹಿಳೆಗೆ ಆಕೆಯ ಪತಿ ಆಶ್ರಯ ನೀಡುವ ಕಥಾಹಂದರ ಚಿತ್ರದಲ್ಲಿದೆ. ಈ ಪಾತ್ರದ ಬಗ್ಗೆ ಮಾತನಾಡಿದ ಪ್ರೀತಿ ಜಿಂಟಾ, ‘ನಾನು ತಾಯಿಯಾಗಿರುವುದು ಈ ಪಾತ್ರದ ಭಾವನೆಯನ್ನು ಅರ್ಥಮಾಡಿಕೊಳ್ಳಲು ನೆರವಾಯಿತು. 2026ರದಲ್ಲೂ ನನ್ನ ಮೊದಲ ಆದ್ಯತೆ ನನ್ನ ಕುಟುಂಬವೇ ಆಗಿದೆ. ಹಾಗಿರುವಾಗ 1947ರ ದೇಶ ವಿಭಜನೆಯಂತಹ ಕಠಿಣ ಸಮಯದಲ್ಲಿ ಜನರ ಆಲೋಚನೆ ಮತ್ತು ಕುಟುಂಬದ ಮೇಲಿನ ಕಾಳಜಿ ಹೇಗಿರುತ್ತಿತ್ತು ಎಂಬುದನ್ನು ನಾನು ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಾಯಿತು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಟಿಟಿಯಿಂದ ಡಿಲೀಟ್ ಆಗಲಿವೆ ಸ್ಟಾರ್ ನಟಿಯರ ಎರಡು ಸಿನಿಮಾಗಳು – Kannada News | Oh Baby and Game Over movies to be deleted from Netflix soon

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಿನಿಮಾ (Cinema) ಒಂದು ವಾರಕ್ಕೆ ಎತ್ತಂಗಡಿ ಆಗುತ್ತವೆ, ತುಂಬಾ ಚೆನ್ನಾಗಿದ್ದರೆ ಮೂರು ಹೆಚ್ಚೆಂದರೆ ನಾಲ್ಕು ವಾರ ಓಡಬಹುದು. ಆದರೆ ಒಟಿಟಿಗೆ ಬರುವ ಸಿನಿಮಾಗಳು ವರ್ಷಗಳ ಕಾಲವಾದರೂ ಅಲ್ಲೇ ಇರುತ್ತವೆ. ಎಷ್ಟೋ ವರ್ಷ ಹಳೆಯ ಸಿನಿಮಾಗಳು ಒಟಿಟಿಯಲ್ಲಿ ಈಗ ನೋಡಲು ಲಭ್ಯ. ಇಂದು ಬಿಡುಗಡೆ ಆಗುವ ಸಿನಿಮಾಗಳನ್ನು ಎಷ್ಟೋ ವರ್ಷಗಳ ಬಳಿಕವೂ ನೋಡಬಹುದು. ಆದರೆ ಆಗಾಗ್ಗೆ ಕೆಲವು ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿರುತ್ತವೆ. ಇದೀಗ ಎರಡು ದಕ್ಷಿಣ ಭಾರತೀಯ ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿವೆ.

ಸಾಮಾನ್ಯವಾಗಿ ಒಟಿಟಿ ಸಂಸ್ಥೆಗಳು 5 ರಿಂದ 7 ವರ್ಷಗಳ ಕಾಲಮಿತಿಯೊಂದಿಗೆ ಪ್ರೊಡಕ್ಷನ್ ಹೌಸ್‌ಗಳಿಂದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಪರವಾನಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಆ ಒಪ್ಪಂದದ ಅವಧಿ ಮುಗಿದ ನಂತರ ಒಪ್ಪಂದವನ್ನು ಮರುನವೀಕರಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಈ ಚಲನಚಿತ್ರಗಳು ಆಯಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಿಂದ ಡಿಲೀಟ್ ಆಗುತ್ತವೆ. ಇದು ಸಾಮಾನ್ಯ ಪ್ರಕ್ರಿಯೆ ಆಗಿರುತ್ತದೆ. ಎಲ್ಲ ಒಟಿಟಿ ಫ್ಲ್ಯಾಟ್​​ಫಾರ್ಮ್​​ಗಳಲ್ಲಿ ಇದೇ ಮಾದರಿ ನಡೆಯುತ್ತದೆ. ಇದೀಗ ಒಟಿಟಿಯಿಂದ ಇಬ್ಬರು ಸ್ಟಾರ್ ನಟಿಯರ ತಲಾ ಒಂದೊಂದು ಸಿನಿಮಾ ಡಿಲೀಟ್ ಆಗುತ್ತಿದೆ.

2019ರಲ್ಲಿ ಕೇವಲ ಒಂದು ತಿಂಗಳ ಅಂತರದಲ್ಲಿ ಥಿಯೇಟರ್‌ಗಳಿಗೆ ಬಂದ ಈ ಎರಡೂ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು. ಸ್ಟಾರ್ ನಟರು ಇಲ್ಲದಿದ್ದರೂ ಕೇವಲ ಕಂಟೆಂಟ್ ಮೂಲಕವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದವು. ನಂತರ ಒಟಿಟಿಯಲ್ಲೂ ಭಾರಿ ವೀಕ್ಷಕರ ಸಂಖ್ಯೆಯನ್ನು (Viewership) ಪಡೆದುಕೊಂಡಿದ್ದವು. ಆದರೆ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಒಪ್ಪಂದ ಮುಕ್ತಾಯಗೊಂಡಿರುವುದರಿಂದ ಈಗ ಈ ಸಿನಿಮಾಗಳು ಒಟಿಟಿಯಿಂದ ಮಾಯವಾಗಲಿವೆ.

ಇದನ್ನೂ ಓದಿ:‘ಸ್ಪೈಡರ್​ಮ್ಯಾನ್’ ನಟ ಟಾಮ್ ಹಾಲೆಂಡ್​​ಗೆ ದಕ್ಷಿಣದ ಈ ಸಿನಿಮಾ ಇಷ್ಟ

ಇದರಲ್ಲಿ ಮೊದಲನೆಯದಾಗಿ ತಾಪ್ಸಿ ಪನ್ನು ಅಭಿನಯದ ಸೈಕಲಾಜಿಕಲ್ ಥ್ರಿల్లರ್ ಸಿನಿಮಾ ‘ಗೇಮ್ ಓವರ್’ ಆಗಸ್ಟ್ 12, 2026 ರಂದು ನೆಟ್‌ಫ್ಲಿಕ್ಸ್‌ನಿಂದ ಹೊರಬೀಳಲಿದೆ. ಆ ಬಳಿಕ ಸೆಪ್ಟೆಂಬರ್ 2, 2026 ರ ಹೊತ್ತಿಗೆ ಸಮಂತಾ ಅವರ ಸೂಪರ್‌ಹಿಟ್ ಸಿನಿಮಾ ‘ಓಹ್ ಬೇಬಿ’ ನೆಟ್‌ಫ್ಲಿಕ್ಸ್ ಲೈಬ್ರರಿಯಿಂದ ಕಣ್ಮರೆಯಾಗಲಿದೆ. ಕೇವಲ ತೆಲುಗು, ತಮಿಳು ಒರಿಜಿನಲ್ ಆವೃತ್ತಿಗಳು ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಲಭ್ಯವಿರುವ ಡಬ್ಬಿಂಗ್ ಆವೃತ್ತಿಗಳು ಕೂಡ ಒಟಿಟಿಯಿಂದ ಸಂಪೂರ್ಣವಾಗಿ ಡಿಲೀಟ್ ಆಗಲಿವೆ.

‘ಗೇಮ್ ಓವರ್’ ಸಿನಿಮಾವನ್ನು ಅಶ್ವಿನ್ ಶರವಣನ್ ನಿರ್ದೇಶನ ಮಾಡಿದ್ದಾರೆ. ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನಿಂದ (PTSD) ಬಳಲುತ್ತಾ ವೀಲ್‌ಚೇರ್‌ಗೆ ಸೀಮಿತವಾಗಿರುವ ಯುವತಿಯಾಗಿ ತಾಪ್ಸಿ ನಟಿಸಿದ್ದರು. ಸಿನಿಮಾ, ವಿಮರ್ಶಕರ ಮನ ಗೆದ್ದಿತ್ತು. ಇನ್ನು ‘ಓಹ್ ಬೇಬಿ’ ಸಮಂತಾ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. 70 ವರ್ಷದ ವೃದ್ಧೆಯೊಬ್ಬಳು 24 ವರ್ಷದ ಯುವತಿಯಾಗುವ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಸಮಂತಾ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ದೊಡ್ಡ ಹಿಟ್ ಆಗಿತ್ತು. ಅವರೊಂದಿಗೆ ನಟ ನಾಗಶೌರ್ಯ, ತೇಜ್ ಸಜ್ಜಾ, ಹಿರಿಯ ನಟಿ ಲಕ್ಷ್ಮಿ, ರಾಜೇಂದ್ರ ಪ್ರಸಾದ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆದ ಸಮಂತಾರ ‘ಮಾ ಇಂಟಿ ಬಂಗಾರಂ’ ಅನ್ನು ಸಹ ನಂದಿನಿ ರೆಡ್ಡಿಯೇ ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮ್ಯಾನ್ಮಾರ್‌ನೊಂದಿಗೆ ಭಾರತದ ಭೂಪ್ರದೇಶ ವಿನಿಮಯದ ಚರ್ಚೆ; ವಿದೇಶಾಂಗ ಸಚಿವಾಲಯ ಮಾಹಿತಿ – Kannada News | India to exchange territory with Myanmar what MEA said

ನವದೆಹಲಿ, ಆಗಸ್ಟ್ 5: ಮಣಿಪುರದ ಗಡಿ ಭಾಗದಲ್ಲಿ ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ಗಡಿ ರೇಖೆಯನ್ನು ಇತ್ಯರ್ಥಪಡಿಸಲು ಭಾರತ ಮತ್ತು ಮ್ಯಾನ್ಮಾರ್ ಭೂಪ್ರದೇಶ ವಿನಿಮಯದ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ ಎನ್ನಲಾಗಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), “ಗಡಿಯಲ್ಲಿ ಇನ್ನೂ ಇತ್ಯರ್ಥವಾಗದ ಕೆಲವು ಪ್ರದೇಶಗಳಿವೆ. ಆ ವಲಯಗಳ ಕುರಿತು ಚರ್ಚೆಗಳು ಪ್ರಸ್ತುತ ನಡೆಯುತ್ತಿವೆ” ಎಂದು ಖಚಿತಪಡಿಸಿದ್ದಾರೆ.

ಮಣಿಪುರದ ಗಡಿಯಲ್ಲಿ ಮ್ಯಾನ್ಮಾರ್‌ನೊಂದಿಗೆ ಭೂಮಿ ವಿನಿಮಯ ಮಾಡಿಕೊಳ್ಳಲು ಭಾರತ ಯೋಚಿಸುತ್ತಿದೆಯೇ? ಎಂಬ ಪ್ರಶ್ನೆಗೆ ರಣಧೀರ್ ಜೈಸ್ವಾಲ್ ನೇರವಾಗಿ ಹೌದು ಎಂದು ದೃಢಪಡಿಸದಿದ್ದರೂ, ಗಡಿಯ ಇತ್ಯರ್ಥವಾಗದ ಭಾಗಗಳನ್ನು ಬಗೆಹರಿಸಲು ದ್ವಿಪಕ್ಷೀಯ ಚರ್ಚೆಗಳು ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಅಮೆರಿಕ ಮೂಲದ ದಿ ಡಿಪ್ಲೋಮ್ಯಾಟ್ ನಿಯತಕಾಲಿಕೆಯು ನವದೆಹಲಿ ಇಂತಹ ಪ್ರಸ್ತಾವನೆಯನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ವರದಿ ಮಾಡಿದ ಬೆನ್ನಲ್ಲೇ ಜೈಸ್ವಾಲ್ ಅವರಿಂದ ಈ ಹೇಳಿಕೆ ಬಂದಿದೆ.

ಇದನ್ನೂ ಓದಿ: ಮ್ಯಾನ್ಮಾರ್‌ನಿಂದ ಥೈಲ್ಯಾಂಡ್‌ಗೆ ಬಂದಿಳಿದ ಬಳಿಕ ಬಂಧಿತರಾಗಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆತರಲು ಪ್ರಯತ್ನ

ಭಾರತ ಮತ್ತು ಮ್ಯಾನ್ಮಾರ್ ಗಡಿ ಬಿಕ್ಕಟ್ಟು:

ಭಾರತ ಮತ್ತು ಮ್ಯಾನ್ಮಾರ್ ನಡುವೆ ಒಟ್ಟು 1,643 ಕಿಲೋಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯಿದೆ. ಇದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಗಡಿಯ ಹೆಚ್ಚಿನ ಭಾಗವು ದಟ್ಟವಾದ ಕಾಡು ಮತ್ತು ಪರ್ವತಗಳಿಂದ ಕೂಡಿದ್ದು, ಗಡಿಯ ಎರಡೂ ಬದಿಗಳಲ್ಲಿ ಒಂದೇ ಜನಾಂಗೀಯ ಸಮುದಾಯಗಳು ವಾಸಿಸುತ್ತಿವೆ. ಭಾರತದ ಗೃಹ ಸಚಿವಾಲಯದ ಪ್ರಕಾರ, ಸುಮಾರು 1,472 ಕಿಮೀ ಗಡಿಯನ್ನು ಗಡಿ ಕಂಬಗಳ ಮೂಲಕ ಗುರುತಿಸಲಾಗಿದೆ. ಆದರೆ, ಸುಮಾರು 171 ಕಿಮೀ ಭಾಗವು ಇನ್ನೂ ಇತ್ಯರ್ಥವಾಗದೆ ಉಳಿದಿದೆ. ಇವು ಮುಖ್ಯವಾಗಿ ಅರುಣಾಚಲ ಪ್ರದೇಶದ ಲೋಹಿತ್ ವಲಯ ಮತ್ತು ಮಣಿಪುರದ ಕಬಾವ್ ಕಣಿವೆಯಲ್ಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಟೆಸ್ಟ್ ಸರಣಿಗೆ ಸ್ಟಾರ್ ಪ್ಲೇಯರ್ ಎಂಟ್ರಿ

Source link

ರೈತರ ಜಮೀನು ಕಬಳಿಸಲು ಅಧಿಕಾರಿಗಳಿಂದಲೇ ಸಂಚು?: ಪಹಣಿ ಪತ್ರದಲ್ಲಿ ರಾತ್ರೋ ರಾತ್ರಿ ಇಳಿಕೆ ಕಂಡ ಜಾಗದ ವಿಸ್ತೀರ್ಣ! – Kannada News | Land Record Scam Alleged in Mundgod: 25 Farmers Find Land Area Reduced Overnight in RTC; Petition Uttara Kannada DC

ದಾಂಡೇಲಿ, ಆಗಸ್ಟ್​​ 05: ಇಷ್ಟು ವರ್ಷಗಳ ಕಾಲ ಕುಟುಂಬಕ್ಕೆ ಆಧಾರವಾಗಿದ್ದ ಜಮೀನಿನ ಪಹಣಿ ಪತ್ರದಲ್ಲಿ ರಾತ್ರೋರಾತ್ರಿ ವಿಸ್ತೀರ್ಣ ಕಡಿಮೆ ಆಗಿ ನಮೂದಾಗಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಕೇಳಿಬಂದಿದೆ. ಕಳೆದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ದಾಖಲೆ ಕಂಡು ಅನ್ನದಾತರಿಗೆ ತೀವ್ರ ಆಘಾತವಾಗಿದ್ದು, ಕಾಲುವೆ ಪಕ್ಕದ ಜಮೀನು ಅತಿಕ್ರಮಣ ಮಾಡಲು ನೀರಾವರಿ ಇಲಾಖೆಯ ಅಧಿಕಾರಿಗಳೇ ಈ ರೀತಿ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.

ಜಮೀನಿನ ಮಾಲೀಕತ್ವದ ಬಗ್ಗೆ ಆತಂಕ

ಸ್ಥಳೀಯರು ಹೇಳುವ ಪ್ರಕಾರ, ಒಂದೇ ರಾತ್ರಿಯಲ್ಲಿ ಕಾಲುವೆ ಪಕ್ಕ ಜಮೀನು ಹೊಂದಿರುವ ಸುಮಾರು 25ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ಈ ರೀತಿ ಆಗಿದೆ. ರೈತರ ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆ ಮಾಡಿ, ಇಲಾಖೆಯ ಹೆಸರನ್ನು ದಾಖಲಿಸಲಾಗಿದೆ. ಸಾಲದ್ದಕ್ಕೆ ನೀರಾವರಿ ಕಾಲುವೆ ಪಕ್ಕದ ಜಮೀನು ಸಣ್ಣ ನೀರಾವರಿ ಇಲಾಖೆಗೆ ಸೇರಿದೆ ಎಂದು ನೋಟಿಸ್ ಕೂಡ ನೀಡಲಾಗಿದ್ದು, ಇದರಿಂದಾಗಿ ತಮ್ಮದೇ ಜಮೀನಿನ ಮಾಲೀಕತ್ವದ ಬಗ್ಗೆ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಅಧಿಕಾರಿಗಳ ಕೈವಾಡ ಇದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!

ಉಗ್ರ ಹೋರಾಟದ ಎಚ್ಚರಿಕೆ

ವಿಚಿತ್ರ ಅಂದರೆ ಇಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಪರಿಹಾರವನ್ನೂ ನೀಡಲಾಗಿಲ್ಲ. ಆದರೆ ರೈತರ ಹೆಸರಿನಲ್ಲಿದ್ದ ಜಮೀನು ಮಾತ್ರ ಪಹಣಿಯಲ್ಲಿ ಮಾಯವಾಗಿದೆ. ಹೀಗಾಗಿ ಇದೇ ಜಮೀನಿನ ದಾಖಲೆ ಆಧಾರದಲ್ಲಿ ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದ ರೈತರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ಕಡಿಮೆಯಾಗಿರುವ ಕಾರಣ ಸಾಲ ಮರುಪಾವತಿಗೆ ಬ್ಯಾಂಕ್‌ಗಳು ಒತ್ತಡ ಹೇರುವ ಭೀತಿಯೂ ಎದುರಾಗಿದೆ. ಅಧಿಕಾರಿಗಳ ಈ ಕ್ರಮದಿಂದ ಕಂಗಾಲಾದ ರೈತರು ಜಿಲ್ಲಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪಹಣಿಯಲ್ಲಿನ ತಪ್ಪು ದಾಖಲೆಯನ್ನು ಕೂಡಲೇ ಸರಿಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ತದ್ವಿರುದ್ದ’ ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್ ಬಿಚ್ಚುಮಾತು: ವಿಡಿಯೋ – Kannada News | Actor Suchendra Prasad talks about Tadvirudha movie

ಖ್ಯಾತ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರು ‘ತದ್ವಿರುದ್ಧ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸುಚೇಂದ್ರ ಪ್ರಸಾದ್, ವಿಕ್ರಮ್ ರಾಮಯ್ಯ, ಸುಮನ್‌ ರಂಗನಾಥ್‌, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಪಾತ್ರದ ವಿಶೇಷತೆಯ ಬಗ್ಗೆ, ತಾವೇಕೆ ಗಾಲಿ ಕುರ್ಚಿಯಲ್ಲಿ ಕೂತು ನಟಿಸಿದ್ದು ಇನ್ನೂ ಕೆಲವು ವಿಷಯಗಳನ್ನು ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version