ಅಭಿಷೇಕ್ ಓವರ್‌ನಲ್ಲಿ ಅವರು ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು, ಆ ಓವರ್‌ನಲ್ಲಿ ಮೂವತ್ತು ರನ್ ಬಂದವು. ಈ ಮೂಲಕ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸರ್ಫರಾಜ್, ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ಅಭಿಷೇಕ್ ಓವರ್‌ನಲ್ಲಿ ಅವರು ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು, ಆ ಓವರ್‌ನಲ್ಲಿ ಮೂವತ್ತು ರನ್ ಬಂದವು. ಈ ಮೂಲಕ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸರ್ಫರಾಜ್, ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ಇಂದಿನ ವೇಗದ ಮತ್ತು ಬ್ಯುಸಿ ಲೈಫು ಮತ್ತು ಕೆಲಸದ ಒತ್ತಡವು ಜನರನ್ನು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಕೆಲಸದ ಒತ್ತಡವು ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಜನರು ಆಲೋಪತಿಯಂತಹ ವಿವಿಧ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಪತಂಜಲಿಯ ಯೋವನಾಮೃತ ವಟೀ ಅನ್ನು ಈ ಚಿಕಿತ್ಸೆಗೆ ಉತ್ತಮ ಔಷಧ ಎನಿಸಿದೆ. ಪತಂಜಲಿ ಆಯುರ್ವೇದದ ದಿವ್ಯ ಯೌವನಾಮೃತ ವಟೀ (Patanjali Divya Yovnamrit Vati) ಒಂದು ಆಯುರ್ವೇದ ಸೂತ್ರದಲ್ಲಿ ತಯಾರಿಸಿರುವ ಸಂಯೋಜನೆಯಾಗಿದೆ. ಈ ಔಷಧಿಯು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುತ್ತದೆ ಎಂದು ಪತಂಜಲಿ ಹೇಳಿಕೊಂಡಿದೆ.
ಪತಂಜಲಿಯ ಪ್ರಕಾರ, ಈ ಔಷಧಿಯನ್ನು ನಿರ್ದಿಷ್ಟವಾಗಿ ದೌರ್ಬಲ್ಯ, ವಯಸ್ಸಾಗುವಿಕೆ, ಮಾನಸಿಕ ಆಯಾಸ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಈ ಔಷಧಿಯನ್ನು ಆಯುರ್ವೇದ ಗಿಡಮೂಲಿಕೆಗಳಾದ ಜಾಯಿಕಾಯಿ, ಕೇಸರಿ, ಶತಾವರಿ, ಮುಸ್ಲಿ, ಸ್ವರ್ಣಭಸ್ಮ, ಕೌಂಚ ಬೀಜಗಳು ಮತ್ತು ಅಕರ್ಕಾರಗಳಿಂದ ರೂಪಿಸಲಾಗಿದೆ. ಈ ಗಿಡಮೂಲಿಕೆಗಳು ದೇಹವನ್ನು ಬಲಪಡಿಸುತ್ತವೆ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತವೆ.
ಪತಂಜಲಿ ದಿವ್ಯ ಯೌವನಾಮೃತ ವಟೀ ಔಷಧವು ವಯಸ್ಸಾದವರಿಗೆ ಮತ್ತು ನಿಶಕ್ತರಿಗೆ ವಿಶೇಷವಾಗಿ ಬಲವರ್ಧನೆ ಮಾಡುತ್ತದೆ. ಈ ಔಷಧವು ಆಯುರ್ವೇದದ ಸೂತ್ರದ ಪ್ರಕಾರ ಸಿದ್ಧವಾಗಿದೆಯಾದರೂ, ಅದರ ಸೇವನೆಯಿಂದ ಆಗುವ ಪರಿಣಾಮದ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂಬುದನ್ನು ನೀವು ಗಮನಿಸಬೇಕು. ಈ ಔಷಧವು ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ
ಬೆಳಿಗ್ಗೆ ಮತ್ತು ಸಂಜೆ ಊಟದ ನಂತರ ಅಥವಾ ಹಾಲಿನೊಂದಿಗೆ ಇದರ 12 ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ನಿಗದಿತ ಡೋಸೇಜ್ ಅನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲು ಮರೆಯದಿರಿ. ಸ್ವಯಂ-ಔಷಧಿ ನಿರ್ಧಾರ ಮಾಡದೇ ವೈದ್ಯರು ಅಥವಾ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ನಿಮಗೆ ಈಗಾಗಲೇ ಬೇರೆ ಯಾವುದೇ ಮೆಡಿಕಲ್ ಕಂಡಿಷನ್ ಇದ್ದರೆ, ಅಥವಾ ಅಲರ್ಜಿ ಇದ್ದರೆ ತಜ್ಞರ ಸಲಹೆ ಪಡೆದೇ ಔಷಧ ಸೇವಿಸಬೇಕು. ನೀವು ಬೇರೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಡಿ. ಅದರ ಜೊತೆಗೆ ಯೌವನಾಮೃತ ವಟೀಯನ್ನೂ ಸೇವಿಸುವುದರಲ್ಲಿ ಹಾನಿ ಇರುವುದಿಲ್ಲ. ಆದರೂ ಒಮ್ಮೆ ತಜ್ಞರ ಸಲಹೆ ಪಡೆದುಕೊಂಡು ಮುಂದುವರಿಯಿರಿ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಜನವರಿ 08): ಕಾಂಗ್ರೆಸ್ (Congress) ಅವಧಿಯಲ್ಲಿ ʼಮನರೇಗಾದಲ್ಲಿ (mgnrega) 11 ಲಕ್ಷ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ಆಗಿದೆ. ಇಂಥ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ʼವಿಬಿಜಿ ರಾಮ್ ಜಿ ಕಾಯ್ದೆʼ ಜಾರಿ ತಂದಿದೆ. ಆದರೆ, ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (pralhad joshi) ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಗುರುವಾರ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ʼವಿಬಿಜಿ ರಾಮ್ ಜಿ ಕಾಯ್ದೆʼಯಲ್ಲಿ ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ ಎಂದು ಚಾಟಿ ಬೀಸಿದರು.
ಮನರೇಗಾದಲ್ಲಿ ಕಾಂಗ್ರೆಸ್ ಅವಧಿಯಲ್ಲಿ 11 ಲಕ್ಷ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ವಿರೋಧಿಸಿಲ್ಲ. 2013ರಲ್ಲಿ ಸಿಎಜಿ ಪ್ರಕಾರ ದೇಶದಲ್ಲಿ 4.33 ಲಕ್ಷ ನಕಲಿ ಜಾಬ್ ಕಾರ್ಡ್ ಗಳಿದ್ದವು. ಮೊದಲು ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈಗ ಈ ಎಲ್ಲಾ ಅಕ್ರಮ, ಲೋಪಗಳಿಗೂ ತೆರೆ ಎಳೆಯಲೆಂದೇ ʼವಿಬಿಜಿ ರಾಮ್ ಜಿ ಕಾಯ್ದೆʼ ತಂದಿದ್ದೇವೆ ಎಂದು ಜೋಶಿ ಸ್ಪಷ್ಟಪಡಿಸಿದರು.
ʼವಿಬಿಜಿ ರಾಮ್ ಜಿ ಕಾಯ್ದೆʼಯಲ್ಲಿ ಕೂಲಿಕಾರರಿಗೆ 60 ದಿನಗಳ ಕಾಲ ಬಿಡುವು ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗರು ಕೃಷಿ ಮೇಲೆ ದುಷ್ಪರಿಣಾಮ ಎನ್ನುತ್ತಿದ್ದಾರೆ, ಹಾಗಾದರೆ ಇವರ ಕಾಲದಲ್ಲೇನು 365 ದಿನ ಕೆಲಸ ಕೊಡುತ್ತಿದ್ದರಾ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ಕಾಲದಲ್ಲಿ ಮನರೇಗಾದಲ್ಲಿ ಡಿಜಿಟಲ್ ಪೇಮೆಂಟ್ ಅನ್ನೇ ಮಾಡುತ್ತಿರಲಿಲ್ಲ. ಇದೀಗ ತನ್ನ ಮಧ್ಯವರ್ತಿಗಳಿಗೆ ಅನುಕೂಲವಾಗಬೇಕೆಂಬ ನಿಲುವಿನಲ್ಲಿ ʼವಿಬಿಜಿ ರಾಮ್ ಜಿ ಕಾಯ್ದೆʼ ವಿರೋಧಿಸಿ ಹೋರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಮನರೇಗಾದಲ್ಲಿ ರಾಜ್ಯಕ್ಕೆ ಹತ್ತು ವರ್ಷದಲ್ಲಿ 8 ಲಕ್ಷ 53 ಸಾವಿರ ಕೋಟಿ ಕೊಟ್ಟಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದಲ್ಲಿ ಮನರೇಗಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. 80 ವರ್ಷದ ವ್ಯಕ್ತಿಯನ್ನೂ ಕೂಲಿಯನ್ನಾಗಿ ಮಾಡಿ ಹಣ ಪಡೆಯಲಾಗಿದೆ. ಇದೀಗ ರಾಹುಲ್ ಗಾಂಧಿಯಂತಹ ಅಪ್ರಬುದ್ಧ ರಾಜಕಾರಣಿಯನ್ನು ಖುಷಿಪಡಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ʼವಿಬಿಜಿ ರಾಮ್ ಜಿʼಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಸಮಸ್ಯೆಯಾಗುತ್ತಿದೆ. ಗರಿ ಗರಿ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನು ಮುಂದೆ ದುಡ್ಡು ಸಿಗುವುದಿಲ್ಲ ಎಂದು ಟಾಂಗ್ ಕೊಟ್ಟರು.
ʼವಿಬಿಜಿ ರಾಮ್ ಜಿʼ ಕಾಯ್ದೆಯಲ್ಲಿ ಇನ್ನು 14 ದಿನದಲ್ಲೇ ಕೂಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಮಾನಿಟರಿಂಗ್ ಜವಾಬ್ದಾರಿಯನ್ನು ಪಂಚಾಯತ್‌ಗೂ ಕೊಡಲಾಗಿದೆ. ಪ್ರತಿ ವಾರ ಕೆಲಸದ ವಿವರ ಬಹಿರಂಗಪಡಿಸಬೇಕು. ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಪಾರದರ್ಶಕತೆ ತರಲಾಗಿದೆ ಎಂದು ಜೋಶಿ ಸಮರ್ಥಿಸಿಕೊಂಡರು.
ಯುಪಿಎ ಅವಧಿಯಲ್ಲಿ ನರೇಗಾದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸಲಿಲ್ಲವೆಂದು ಕಾಂಗ್ರೆಸ್ ನ ಒಬ್ಬರಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಚಿವರು, ಇವರ ಅವಧಿಯಲ್ಲಿ ನರೇಗಾ ಸಿಬ್ಬಂದಿಗೆ ವೇತನವೇ ಸಿಗುತ್ತಿರಲಿಲ್ಲ. ಇನ್ನು ಯುಪಿಎ ಕಾಲದಲ್ಲಿ ರಕ್ಷಣಾ ವ್ಯವಸ್ಥೆಗೂ ಏನೂ ಮಾಡಲಿಲ್ಲ. ಆಗಿನ ರಕ್ಷಣಾ ಸಚಿವ ಆ್ಯಂಟನಿ ಅವರು ಹೈಕಮಾಂಡ್‌ಗೆ ಹೆದರಿ ಯಾವುದಕ್ಕೂ ಸಹಿ ಮಾಡುತ್ತಲೇ ಇರಲಿಲ್ಲ ಎಂದು ಕುಟುಕಿದರು.
ಅಧಿವೇಶನ ವೇಳೆ ವಿದೇಶಕ್ಕೆ ಹೋಗಿದ್ದ ರಾಹುಲ್ ಗಾಂಧಿ ಅವರೊಬ್ಬ ಗಂಭೀರ ರಾಜಕಾರಣಿಯೇ? ʼವಿಬಿಜಿ ರಾಮ್ ಜಿ ಕಾಯ್ದೆʼ ಯೋಜನೆ ಚರ್ಚೆ ವೇಳೆ ಸದನದಲ್ಲಿ ಇರಲೇ ಇಲ್ಲ. ಹೊಸ ಬದಲಾವಣೆ ಅನ್ವಯ ತಪ್ಪು ಕಂಡಲ್ಲಿ ನ್ಯಾಯಾಲಯಕ್ಕೆ ಹೋಗಬಹುದು. ಅಧಿಕಾರಿಗಳಿಗೆ ಶಿಕ್ಷೆ ಕೂಡ ಆಗತ್ತದೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಜೋಶಿ, ಮೊದಲೆಲ್ಲಾ ಸರ್ಕಾರ 100 ಹಾಕಿದರೆ 15 ಮಾತ್ರ ಜನರಿಗೆ ತಲುಪುತ್ತಿತ್ತು ಎಂಬುದನ್ನು ರಾಜೀವ್ ಗಾಂಧಿಯೇ ಹೇಳುತ್ತಿದ್ದರು. ಹಾಗಾದರೆ ಕಾಂಗ್ರೆಸ್‌ಗೆ ವ್ಯವಸ್ಥೆ ಹಾಗೇ ಇರಬೇಕಿತ್ತಾ? ಎಂದು ಹರಿಹಾಯ್ದರು.
ಹುಬ್ಬಳ್ಳಿಯ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಎಸ್ಐಆರ್ ಭಯವಿದೆ. ಹಾಗಾಗಿಯೇ ಎಸ್ಐಆರ್ ಮಾಡಿ ಎಂದರೆ ಎಫ್ಐಆರ್ ಮಾಡುತ್ತಾರೆ. ಸಿಎಂ ಮತ್ತು ಗೃಹ ಸಚಿವರು ಪೊಲೀಸರ ಪರ ಮಾತಾಡಿದ್ದಾರೆ. ತನಿಖೆ ಮಾಡುತ್ತೇವೆ ಎನ್ನಬಹುದಿತ್ತಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ಈ ತರಹದ ದಾದಾಗಿರಿ ಇಲ್ಲಿ ನಡೆಯಲ್ಲ ಎಂದ ಜೋಶಿ, ಕಾರ್ಪೊರೇಟರ್ ದೂರನ್ನು ತೆಗೆದುಕೊಂಡ ಪೊಲೀಸರು ಸುಜಾತಾ ಅವರ ದೂರನ್ನೇಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.
ಬಿಎಲ್‌ಒ ಮ್ಯಾಪಿಂಗ್ ಮಾಡಲು ಬಿಎಲ್‌ಎಗಳನ್ನು ಕರೆದುಕೊಂಡು ಹೋಗಲು ಅವಕಾಶವಿದೆ. ಆ ದಿನ ಕಾಂಗ್ರೆಸ್ನ ಬಿಎಲ್ಎ 2 ಇರಲಿಲ್ಲ. ಕಾಂಗ್ರೆಸ್ಸಿನವರು ಹೋಗಿ ಸುಜಾತಾ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಕಾರ್ಪೊರೇಟರ್ ಕಡೆಯವರ ದೂರಿನ ಮೇರೆಗೆ ಪೊಲೀಸರು ಸುಜಾತಾ ಅವರನ್ನು ಬಂಧಿಸುತ್ತಾರೆ. ಆಕೆ ತಾವೇ ಬಟ್ಟೆ ಬಿಚ್ಚಿಕೊಂಡರು ಎಂದಿದ್ದಾರೆ ಪೊಲೀಸರು. ಹಾಗಾದರೆ ಪೊಲೀಸರೇಕೆ ಸುಮ್ಮನಿದ್ದರು? ಆಕೆ ಉರುಳು ಹಾಕಿಕೊಳ್ಳಲು ಹೋಗಿದ್ರೂ ನೋಡಿಕೊಂಡು ಸುಮ್ಮನಿರುತ್ತಿದ್ದರಾ? ಎಂದು ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.
Published On – 6:44 pm, Thu, 8 January 26
ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ನಾವು ಮಾಡುವ ಕೆಲವೊಂದು ತಪ್ಪುಗಳಿಂದ (mistakes) ನಮ್ಮ ಗೌರವವೇ ಹಾಳಾಗುತ್ತದೆ, ಅಲ್ಲದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಾವು ಮಾಡುವ ಯಾವ ತಪ್ಪುಗಳು ಹಾಗೂ ನಮ್ಮ ಅಭ್ಯಾಸಗಳಿಂದ ಸಮಾಜದಲ್ಲಿ ಮುಜುಗರಕ್ಕೀಡಬೇಕಾಗುತ್ತದೆ, ನಾಲ್ಕು ಜನ ನಮ್ಮನ್ನು ನೋಡಿ ನಗಬಾರದೆಂದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಹೆಚ್ಚು ಮಾತನಾಡುವುದು ಮತ್ತು ಬಡಾಯಿ ಕೊಚ್ಚಿಕೊಳ್ಳುವುದು: ಚಾಣಕ್ಯರ ಪ್ರಕಾರ, ತಮ್ಮ ಸಾಮರ್ಥ್ಯಗಳನ್ನು ಮೀರಿ ಹೆಮ್ಮೆಪಡುವ ಅಥವಾ ಪ್ರತಿಯೊಂದು ವಿಷಯಕ್ಕೂ ಬಡಾಯಿ ಕೊಚ್ಚಿಕೊಳ್ಳುವ ಜನರು ಇತರರ ನಗೆಪಾಟಲಿಗೆ ಗುರಿಯಾಗುತ್ತಾರೆ. ಯಾವಾಗಲೂ ಇತರರ ಗಮನ ಸೆಳೆಯಲು ಪ್ರಯತ್ನಿಸುವ ಜನರು ಅಂತಹ ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ ಸಮಾಜದಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು, ಅಗತ್ಯವಿರುವಷ್ಟು ಮಾತ್ರ ಮಾತನಾಡಿ ಮತ್ತು ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ.
ಯೋಚಿಸದೆ ವಾದ ಮಾಡುವುದು: ಪ್ರತಿಯೊಂದು ಸಣ್ಣ ವಿಷಯಕ್ಕೂ ಇತರರೊಂದಿಗೆ ವಾದ ಮಾಡುವುದು ಮತ್ತು ಯೋಚಿಸದೆ ಮಾತನಾಡುವುದು ಸರಿಯಲ್ಲ, ನೀವು ಅಂತಹ ವ್ಯಕ್ತಿತ್ವವನ್ನು ಹೊಂದಿದ್ದರೆ, ನೀವು ಇತರರ ದೃಷ್ಟಿಯಲ್ಲಿ ದುರ್ಬಲರಾಗಿ ಕಾಣುತ್ತೀರಿ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹಾಗಾಗಿ ನೀವು ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ನಿಮ್ಮನ್ನು ಇತರರು ಗೇಲಿ ಮಾಡುತ್ತಾರೆ, ಕೀಳಾಗಿ ಕಾಣುತ್ತಾರೆ ಮುಖ್ಯವಾಗಿ ನೀವು ಇತರರ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.
ಇತರರಿಗೆ ವೈಯಕ್ತಿಕ ರಹಸ್ಯವನ್ನು ಹೇಳುವುದು: ವೈಯಕ್ತಿಕ ರಹಸ್ಯಗಳನ್ನು ಇತರರಿಗೆ ಹೇಳುವುದು ಮತ್ತು ಭವಿಷ್ಯದ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಜನರು ತೊಂದರೆಗೆ ಸಿಲುಕುತ್ತಾರೆ. ಕೆಲವರು ಈ ದೌರ್ಬಲ್ಯಗಳನ್ನು ಅಸ್ತ್ರವಾಗಿ ಬಳಸುತ್ತಾರೆ ಮತ್ತು ಆ ದೌರ್ಬಲ್ಯಗಳನ್ನು ಇನ್ನೊಬ್ಬರ ಬಳಿ ಹೇಳಿ ನಗುತ್ತಾರೆ. ಹಾಗಾಗಿ ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನೀವು ಯಾರೊಂದಿಗೂ ಹಂಚಿಕೊಳ್ಳಬಾರದು.
ಇದನ್ನೂ ಓದಿ: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಿ
ಜಾಸ್ತಿ ಖರ್ಚು ಮಾಡುವವರು: ಆದಾಯಕ್ಕಿಂತ ಖರ್ಚಿಗೆ ಆದ್ಯತೆ ನೀಡುವ ವ್ಯಕ್ತಿ ಸಮಾಜದಲ್ಲಿ ನಗೆಪಾಟಲಿಗೆ ಈಡಾಗುತ್ತಾನೆ. ಇತರರ ಮುಂದೆ ಶೋಕಿ ಜೀವನ ನಡೆಸಲು ಹೋಗಿ ಸಾಲ ಮಾಡಿ, ನಂತರ ಆ ಸಾಲವನ್ನು ತೀರಿಸಲು ಸಾಧ್ಯವಾಗದೆ ಜೀವನದಲ್ಲಿ ಸೋಲುವ ವ್ಯಕ್ತಿಯನ್ನು ಯಾರು ಗೌರವಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಮೂರ್ಖರೊಂದಿಗಿನ ಸ್ನೇಹ, ವಾದ: ಮೂರ್ಖರ ಸ್ನೇಹ ಅಥವಾ ಮೂರ್ಖರೊಂದಿಗೆ ಗಂಟೆಗಟ್ಟಲೆ ವಾದ ಮಾಡುವುದರಿಂದ ಸಮಯ ವ್ಯರ್ಥವಾಗುವುದಲ್ಲದೆ, ನಿಮ್ಮ ಸ್ಥಾನಮಾನವೂ ಕಡಿಮೆಯಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮೂರ್ಖರೊಂದಿಗೆ ಸ್ನೇಹ ಮಾಡುವುದರಿಂದ ನೋಡುವ ಜನರೂ ನಿಮ್ಮನ್ನು ಮೂರ್ಖರಂತೆ ನೋಡುತ್ತಾರೆ. ಹಾಗಾಗಿ ನೋಡಿ, ಯೋಚಿಸಿ ಉತ್ತಮರ ಸಹವಾಸ ಮಾಡಿ, ಇದರಿಂದ ನಿಮ್ಮ ಸ್ಥಾನಮಾನ ಕೂಡ ಹೆಚ್ಚಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
KMFನಲ್ಲಿ ಉದ್ಯೋಗದ ಹೆಸರಲ್ಲಿ ವಂಚನೆ
ಬೆಂಗಳೂರು, ಜನವರಿ 08: ಕರ್ನಾಟಕ ಹಾಲು ಒಕ್ಕೂಟದಲ್ಲಿ (Karnataka Milk Federation) ಕೆಲಸದ ಆಸೆ ತೋರಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು 10ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದ್ದು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಕೆಎಎಸ್ ಅಧಿಕಾರಿಯೆಂದು ನಂಬಿಸಿ ಪರಿಚಯಿಸಿಕೊಂಡು ಆರೋಪಿಗಳು ವಂಚನೆ ನಡೆಸಿದ್ದಾರೆ.
ತಾನು ಕೆಎಎಸ್ ಅಧಿಕಾರಿಯೆಂದು ಆರೋಪಿ ರಾಧಾಕೃಷ್ಣನ್ ದೂರುದಾರರಿಗೆ ಪರಿಚಯಿಸಿಕೊಂಡಿದ್ದ. ಪೇಪರ್ನಲ್ಲಿ ಕೆಎಂಎಫ್ನವರು ನೀಡಿದ ಜಾಹೀರಾತು ತೋರಿಸಿ ಇದನ್ನು ನಾವೇ ಕೊಟ್ಟಿರೋದು. 10 ಲಕ್ಷ ಕೊಟ್ಟರೆ ಈ ಕೆಲಸ ನಿಮ್ಮವರಿಗೆ ಮಾಡಿಸ್ತೀನಿ ಎಂದು ಭರವಸೆ ನೀಡಿದ್ದ. ತಾನು ಕರ್ನಾಟಕ ಹಾಲು ಒಕ್ಕೂಟದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದೇನೆ. ಹೀಗಾಗಿ ಹಣ ಕೊಟ್ಟರೆ ಕೆಲಸ ಪಕ್ಕಾ ಎಂದು ನಂಬಿಕೆ ಹುಟ್ಟಿಸಿದ್ದ. ಈತನ ಮಾತು ನಂಬಿ ಕುಂಟುಂಬದವರು, ಸ್ನೇಹಿತರಿಂದ ದೂರುದಾರ ಹಣ ಹಾಕಿಸಿದ್ದ. ಕೆಲಸದ ಲೀಸ್ಟ್ನಲ್ಲಿ ನಿಮ್ಮ ಹೆಸರಿದೆ ಎಂದು ನಂಬಿಕೆ ಬರುವಂತೆ ಮಾಡಿದ್ದ ಆರೋಪಿ, ನಂತರ ಮೇಲಿನ ಅಧಿಕಾರಿಗಳು ಇನ್ನೂ 15 ಲಕ್ಷ ಹಣ ಕೇಳ್ತಿದ್ದಾರೆ. ಎಲ್ಲಾ ರೆಡಿ ಆಗಿದೆ ಹೆಚ್ಚಿನ ಹಣ ಕೊಟ್ಟರೆ ಕೆಲಸ ಪಕ್ಕಾ ಆಗುತ್ತೆ ಎಂದಿದ್ದ ಎನ್ನಲಾಗಿದೆ.
ಇದನ್ನೂ ಓದಿ: ನಂದಿನಿ ಬೂತ್ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಗೆ ಬ್ರೇಕ್; ಕೆಎಂಎಫ್ ಹೊಸ ರೂಲ್ಸ್
ದೂರುದಾರರು ಸದ್ಯ ಸಂಪರ್ಕಕ್ಕೆ ಪ್ರಯತ್ನಿಸಿದಾಗ ಆರೋಪಿ ಕೈಗೇ ಸಿಗುತ್ತಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ದೂರುದಾರ ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಪ್ರತಿಕ್ರಿಯಿಸಿದ್ದು, ಪ್ರಕರಣ ಸಂಬಂಧ ರಾಧಾಕೃಷ್ಣನ್, ನಾಗರಾಜ್ ವಿರುದ್ಧ ದೂರು ದಾಖಲಾಗಿದೆ. ಲಕ್ಷ ಲಕ್ಷ ಹಣ ಪಡೆದು ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಆರೋಪಿಗಳನ್ನ ಬಂಧಿಸಿದ ನಂತರ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರ ಆಹಾರ ಪದ್ಧತಿ ಕೊಂಚ ಬದಲಾಗುತ್ತದೆ. ಸಿಹಿತಿಂಡಿ ಅಥವಾ ವಿವಿಧ ಭಕ್ಷ್ಯಗಳಿಗೆ ಮನಸ್ಸು ವಾಲುತ್ತದೆ. ಅದರಲ್ಲಿಯೂ ಸ್ವೀಟ್ ಸೇರಿದಂತೆ ಕರಿದ ತಿನಿಸುಗಳ ಸವಿಯುವ ಒಲವು ಹೆಚ್ಚಾಗುತ್ತದೆ. ಇದು ಮಧುಮೇಹೀಗಳಿಗೂ (Diabetes) ಹೊರತಾಗಿಲ್ಲ. ಸಿಹಿ ತಿನ್ನಬೇಕು ಎಂಬ ಹಂಬಲ ಎಲ್ಲರಿಗಿಂತ ಅವರಿಗೆ ಹೆಚ್ಚಾಗುತ್ತದೆ. ಆದರೆ ಅವುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ, ಆಹಾರ ಕ್ರಮದಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕಾಗುತ್ತದೆ. ಇದರಿಂದ ಸಿಹಿ ತಿನ್ನುವ ಬಯಕೆ ಕಡಿಮೆಯಾಗುತ್ತವೆ ಮತ್ತು ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತವೆ. ಹಾಗಾದರೆ ಸ್ವೀಟ್ ತಿನ್ನಬೇಕು ಎನಿಸಿದಾಗ ಏನು ಮಾಡಬೇಕು, ಈ ರೀತಿ ಬಯಕೆಯನ್ನು ತಡೆಯುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಳಿಗಾಲದಲ್ಲಿ, ದೇಹವು ಕಾರ್ಬೋಹೈಡ್ರೇಟ್- ಭರಿತ ಆಹಾರಗಳನ್ನು ಬಯಸುತ್ತದೆ. ಪರಿಣಾಮವಾಗಿ, ಜನ ಸಿಹಿತಿಂಡಿಗಳಿಗಾಗಿ ಹಂಬಲಿಸುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ, ಸಿಹಿ ಆಹಾರಗಳು ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆ ಮತ್ತು ಮೂತ್ರಪಿಂಡದ ಹಾನಿಯ ಜೊತೆಗೆ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ, ಚಳಿಗಾಲದಲ್ಲಿ, ಮಧುಮೇಹ ರೋಗಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ತಮ್ಮ ಆಹಾರಕ್ರಮದ ಬಗ್ಗೆ ಹೆಚ್ಚುವರಿ ಗಮನ ಹರಿಸಬೇಕಾಗುತ್ತದೆ.
ನಿಮಗೆ ಮಧುಮೇಹವಿದ್ದು ಸಿಹಿ ತಿನ್ನುವ ಹಂಬಲವಿದ್ದರೆ, ನಿಮ್ಮ ವೈದ್ಯರ ಸಲಹೆಯೊಂದಿಗೆ ನೀವು ಸ್ವಲ್ಪ ಬೆಲ್ಲವನ್ನು ಸೇವಿಸಬಹುದು. ಇದಲ್ಲದೆ, ಸೇಬು, ಪೇರಳೆ ಮತ್ತು ಕಡಿಮೆ ಗ್ಲೈಸೆಮಿಕ್ ಹಣ್ಣುಗಳನ್ನು ಸೇವಿಸಬಹುದು. ಜೊತೆಗೆ ದಿನಕ್ಕೆ ಒಂದು ಖರ್ಜೂರವನ್ನು ಸಹ ಸೇವನೆ ಮಾಡಬಹುದು. ಇಂತಹ ಆಹಾರಗಳ ಜೊತೆಗೆ, ಪ್ರೋಟೀನ್ ಅಂಶವಿರುವ ಆಹಾರಗಳನ್ನು ಸೇವನೆ ಮಾಡಲು ಮರೆಯದಿರಿ. ಬೇಳೆ, ಕಡಲೆ ಮತ್ತು ಸಲಾಡ್‌ಗಳನ್ನು ಹೆಚ್ಚೆಚ್ಚು ಸೇವಿಸಿ. ಪ್ರತಿ ಮೂರು ಗಂಟೆಗಳಿಗೊಮ್ಮೆ ಲಘುವಾಗಿ ಏನನ್ನಾದರೂ ಸೇವನೆ ಮಾಡಿ. ಒಂದೇ ಸಲ ರಾಶಿ ರಾಶಿ ಸೇವನೆ ಮಾಡಬೇಡಿ. ಹೊಟ್ಟೆಯಲ್ಲಿ ಸ್ವಲ್ಪ ಜಾಗವನ್ನು ಖಾಲಿಯಾಗಿ ಇರಿಸಿಕೊಳ್ಳಿ. ದಿನವಿಡೀ ಕನಿಷ್ಠ ಏಳು ಗ್ಲಾಸ್ ನೀರು ಕುಡಿಯಿರಿ.
ಇದನ್ನೂ ಓದಿ: ಪಾದಗಳು ತಣ್ಣಗಾಗುವುದಕ್ಕೆ ಮಧುಮೇಹ ಕಾರಣವೇ? ಇಲ್ಲಿದೆ ಸ್ಪಷ್ಟ ಮಾಹಿತಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, ಜನವರಿ 08: ನಗರದಲ್ಲಿ ಬಿಜೆಪಿ ಕಾರ್ಯಕರ್ತೆ ಬಟ್ಟೆ ಬಿಚ್ಚಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಸುವರ್ಣಾ ಕಲಕುಂಟ್ಲಾ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಹುಬ್ಬಳ್ಳಿ ಹೊರವಲಯದಲ್ಲಿ ಪೊಲೀಸರು ವಶಕ್ಕೆ ಪಡೆಯಲು ಮುಂದಾದ ವೇಳೆ ಕುಸಿದು ಬಿದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಕಿಮ್ಸ್ಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಇನ್ನು ಪ್ರಕರಣ ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ವಾಷಿಂಗ್ಟನ್, ಜನವರಿ 8: ಅಮೆರಿಕ ಅಧ್ಯಕ್ಷರು ರಷ್ಯಾವನ್ನು ಹತ್ತಿಕ್ಕಲು ಹೊಸ ಪ್ರಬಲ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಸರ್ವಪಕ್ಷಗಳ ಸಮ್ಮತಿಯ ಗ್ರಹಾಂ ಬ್ಲೂಮೆಂಥಲ್ ಸ್ಯಾಂಕ್ಷನ್ಸ್ ಬಿಲ್ಗೆ (Graham Blumenthal sanctions bill) ಅನುಮೋದನೆ ಪಡೆಯಲು ನಿಂತಿದ್ದಾರೆ. ರಷ್ಯಾವನ್ನು ಪೂರ್ಣವಾಗಿ ನಿಷೇಧಿಸಲು ಅನುವು ಮಾಡಿಕೊಡುವ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ಭಾರತ ಮತ್ತಿತರ ಕೆಲ ದೇಶಗಳು ಅಮೆರಿಕವನ್ನು ಪೂರ್ಣವಾಗಿ ಎದಿರುಹಾಕಿಕೊಳ್ಳಬೇಕಾಗುತ್ತದೆ.
ರಿಪಬ್ಲಿಕನ್ ಸಂಸದರಾದ ಲಿಂಡ್ಸೇ ಗ್ರಹಾಂ ರೂಪಿಸಿರುವ ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಕೆಲ ವಿಶೇಷಾಧಿಕಾರ ಒದಗಿಸುತ್ತದೆ. ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಗೊತ್ತಿದ್ದೂ ಖರೀದಿಸುವ ದೇಶಗಳ ಮೇಲೆ ಶೇ. 500ರಷ್ಟು ಸುಂಕ ಹಾಕಲು ಟ್ರಂಪ್ಗೆ ಅವಕಾಶ ಸಿಗುತ್ತದೆ. ರಷ್ಯಾವನ್ನು ಆರ್ಥಿಕವಾಗಿ ಕುಸಿಯುವಂತೆ ಮಾಡಬಲ್ಲಂತಹ ನಿಷೇಧಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ.
ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್ಗಳೊಂದಿಗೆ ಪ್ರಧಾನಿ ಮೋದಿ ಸಭೆ
ಲಿಂಡ್ಸೆ ಗ್ರಹಾಂ ಅವರು ಈ ಮಸೂದೆ ರೂಪಿಸಲು ತಿಂಗಳು ಕಾಲ ಸಮಯ ವ್ಯಯಿಸಿದ್ದಾರೆ. ನಿನ್ನೆ ಬುಧವಾರ ಗ್ರಹಾಂ ಅವರು ವೈಟ್ಹೌಸ್ನಲ್ಲಿ ಟ್ರಂಪ್ರನ್ನು ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಈ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಮುಂದಿನ ವಾರ ಸಂಸತ್ತಿನಲ್ಲಿ (ಸೆನೇಟ್) ಇದರ ಮಂಡನೆಯಾಗಿ ವೋಟಿಂಗ್ ಕೂಡ ಆಗಬಹುದು. ಮೂಲಗಳ ಪ್ರಕಾರ ಈ ಮಸೂದೆಗೆ ರಿಪಬ್ಲಿಕನ್ ಜೊತೆಗೆ ಡೆಮಾಕ್ರಾಟಿಕ್ ಪಕ್ಷದವರೂ ಬೆಂಬಲ ಕೊಡುವ ಸಾಧ್ಯತೆ ಇದೆ.
ಒಂದು ಕಾಲದಲ್ಲಿ ಟ್ರಂಪ್ ಅವರ ಕಡು ವಿರೋಧಿಯಾಗಿದ್ದ ಲಿಂಡ್ಸೇ ಗ್ರಹಾಂ ಅವರು ಈಗ ನಿಷ್ಠಾವಂತ ಸಂಸದರೆನಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದನ್ನು ಇವರು ಬಲವಾಗಿ ಆಕ್ಷೇಪಿಸುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?
‘ಒಂದೆಡೆ ಉಕ್ರೇನ್ ಶಾಂತಿಗಾಗಿ ರಾಜಿ ಮಾಡಿಕೊಳ್ಳುತ್ತಲೇ ಇದೆ. ಇನ್ನೊಂದೆಡೆ ಪುಟಿನ್ ಬರೀ ಮಾತನಾಡುತ್ತಿದ್ದು ಅಮಾಯಕರನ್ನು ಕೊಲ್ಲುತ್ತಲೇ ಇದ್ದಾರೆ. ಈ ಮಸೂದೆಯು ಸಕಾಲಿಕವಾಗಿದೆ’ ಎಂದು ಲಿಂಡ್ಸೆ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.
ಈ ಮಸೂದೆಯನ್ನು ಗ್ರಹಾಂ ಜೊತೆಗೆ ಡೆಮಾಕ್ರಟಿಕ್ ಸಂಸದ ರಿಚರ್ಡ್ ಬ್ಲೂಮೆಂಥಾಲ್ ಅವರೂ ಸೇರಿ ರಚಿಸಿದ್ದಾರೆ. ಅಂತೆಯೇ ಇದು ದ್ವಿಪಕ್ಷೀಯ ಮಸೂದೆ ಎಂದೆನಿಸಿದೆ. ರಷ್ಯಾದ ಮೇಲೆ ಪೂರ್ಣ ನಿಷೇಧ ಹೇರುವ ಜೊತೆಗೆ, ಆ ದೇಶದೊಂದಿಗೆ ವ್ಯವಹಾರ ಹೊಂದಿರುವ ಇತರ ದೇಶಗಳ ಮೇಲೂ ಟ್ಯಾರಿಫ್ ಇತ್ಯಾದಿ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ಈ ಮಸೂದೆ ಅವಕಾಶ ಕೊಡುತ್ತದೆ. ರಷ್ಯಾಗೆ ಹಣದ ಹರಿವಿಗೆ ತಡೆ ಹಾಕುವುದು ಇದರ ಪ್ರಮುಖ ಉದ್ದೇಶ. ಭಾರತ, ಚೀನಾ, ಬ್ರೆಜಿಲ್, ಉತ್ತರ ಕೊರಿಯಾ ಮೊದಲಾದ ದೇಶಗಳು ರಷ್ಯಾದ ತೈಲವನ್ನು ಖರೀದಿಸುತ್ತಿವೆ. ಅಮೆರಿಕದ ನಿಷೇಧ ಕ್ರಮ ಜಾರಿಯಾದರೆ ಹೆಚ್ಚಿನ ಪರಿಣಾಮ ಆಗುವುದು ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳಿಗೆಯೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಪ್ರಸ್ತುತ 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಆಡುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆಗರೆಯುತ್ತಿದ್ದಾರೆ. ತವರು ತಂಡ ಬರೋಡಾ ಪರ ಆಡುತ್ತಿರುವ ಪಾಂಡ್ಯ ಇತ್ತೀಚೆಗಷ್ಟೇ ತಮ್ಮ ಲಿಸ್ಟ್ ಎ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸಿದ್ದರು. ಇದೀಗ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಪಾಂಡ್ಯ, ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಪಾಂಡ್ಯರ ಈ ಇನ್ನಿಂಗ್ಸ್ನ ಮತ್ತೊಂದು ಹೈಲೇಟ್ಸ್ ಅಂದರೆ, ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಕೂಡ ಈ ಪಂದ್ಯವನ್ನು ನೋಡಲು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 31 ಎಸೆತಗಳಲ್ಲಿ 75 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೃಹತ್ ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳು ಸೇರಿದ್ದವು. 240 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಾಂಡ್ಯ ಅವರ ಅರ್ಧಶತಕಕ್ಕೆ ಮಹಿಕಾ ಶರ್ಮಾ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಆಡುತ್ತಿರುವ ಎರಡನೇ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ಅವರು 92 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 11 ಸಿಕ್ಸರ್ ಸೇರಿದಂತೆ 133 ರನ್ ಬಾರಿಸಿದ್ದರು. ಅಂದರೆ ಹಾರ್ದಿಕ್ ಪಾಂಡ್ಯ ಕೇವಲ ಎರಡು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ 20 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾಕ್ಕೆ ಇದು ಶುಭ ಸೂಚನೆಯಾಗಿದೆ. ಅದಕ್ಕೂ ಮೊದಲು, ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಆಡಲಿದ್ದಾರೆ.
IND vs NZ: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್; ಸೂಕ್ತ ಕಾರಣ ನೀಡಿದ ಬಿಸಿಸಿಐ
ಚಂಡೀಗಢ ವಿರುದ್ಧದ ಈ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಜೊತೆಗೆ, ಪ್ರಿಯಾಂಶು ಮೋಲಿಯಾ ಕೂಡ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅವರು 106 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 113 ರನ್ ಗಳಿಸಿದರು. ಜಿತೇಶ್ ಶರ್ಮಾ ಕೂಡ ಕೇವಲ 33 ಎಸೆತಗಳಲ್ಲಿ 73 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 391 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಚಂಡೀಗಢ 40 ಓವರ್‌ಗಳಲ್ಲಿ 242 ರನ್ ಕಲೆಹಾಕಿ ಆಲೌಟ್ ಆಯಿತು. ಅಂತಿಮವಾಗಿ ಬರೋಡಾ ಪಂದ್ಯವನ್ನು 149 ರನ್‌ಗಳಿಂದ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:01 pm, Thu, 8 January 26
ನಟ ಯಶ್ (Yash) ನಟನೆಯ ಸೂಪರ್ ಹಿಟ್ ಸಿನಿಮಾಗಳಾದ ‘ರಾಜಾಹುಲಿ’ ಮತ್ತು ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾಗಳನ್ನು ನಿರ್ಮಿಸಿರುವ ಕೆ ಮಂಜು ಅವರು ಯಶ್ ಅವರ ಆಪ್ತರಲ್ಲಿ ಒಬ್ಬರು ಸಹ. ಇಂದು (ಜನವರಿ 08) ಯಶ್ ಹುಟ್ಟುಹಬ್ಬ ಆಗಿದ್ದು, ಇದೇ ಸಂದರ್ಭದಲ್ಲಿ ‘ಟಾಕ್ಸಿಕ್’ ಸಿನಿಮಾ ಟೀಸರ್ ಸಹ ಬಿಡುಗಡೆ ಆಗಿದೆ. ಇದರ ಬಗ್ಗೆ ನಿರ್ಮಾಪಕ ಕೆ ಮಂಜು ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಟೀಸರ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೊತೆಗೆ ಯಶ್ ಅವರ ರೇಂಜ್ ಇಂದಿನ ದಿನ ಹೇಗಿದೆ ಎಂದು ಸಹ ವಿವರಿಸಿದ್ದಾರೆ. ಯಶ್ ಅವರು ವಿದೇಶಗಳಲ್ಲಿ ಹೊಂದಿರುವ ಅಭಿಮಾನಿಗಳ ಬಗ್ಗೆ ಸಹ ಕೆ ಮಂಜು ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ