2031ರವರೆಗೂ ಹಣದುಬ್ಬರ ಶೇ. 4ರಲ್ಲಿ ಇರುವಂತೆ ಮಾಡಿ: ಆರ್ಬಿಐಗೆ ಟಾರ್ಗೆಟ್ ಕೊಟ್ಟ ಸರ್ಕಾರ
ನವದೆಹಲಿ, ಮಾರ್ಚ್ 26: ಕೇಂದ್ರ ಸರ್ಕಾರ ತನ್ನ ಹಣದುಬ್ಬರ (Retail Inflation) ನಿಲುವನ್ನು ಮುಂದುವರಿಸಿದೆ. ಮುಂದಿನ ಐದು ವರ್ಷ, ಅಂದರೆ 2023ರ ಮಾರ್ಚ್ವರೆಗೂ ರೀಟೇಲ್ ಹಣದುಬ್ಬರ ಶೇ. 4 ಅನ್ನು ಕಾಯ್ದುಕೊಳ್ಳುವಂತೆ ಆರ್ಬಿಐಗೆ ಸರ್ಕಾರ ಗುರಿ ಕೊಟ್ಟಿದೆ. ರೀಟೇಲ್ ಹಣದುಬ್ಬರ ಶೇ. 4, ಆಚೀಚೆ ಎರಡು ಪ್ರತಿಶತ ಮೀರದಂತೆ ಇರಬೇಕು ಎಂಬುದು ಸರ್ಕಾರದ ನಿರ್ದೇಶನ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರ ಶ್ರೇಣಿಯಲ್ಲೇ ಇರುವಂತೆ ನೋಡಿಕೊಳ್ಳಬೇಕೆಂದು ಆರ್ಬಿಐಗೆ ಸರ್ಕಾರ ತಿಳಿಸಿದೆ. ಆರ್ಥಿಕತೆಯ ವೇಗವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ…