2026 ರ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. 50 ಪಂದ್ಯಗಳನ್ನು ಒಳಗೊಂಡ ಲೀಗ್ ಹಂತದ ಉಳಿದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ್ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಉಳಿದಂತೆ ಪ್ಲೇಆಫ್ ಸುತ್ತಿನ 4 ಪಂದ್ಯಗಳ ವೇಳಾಪಟ್ಟಿಯನ್ನು ಕೊನೆಯ ವಾರದಲ್ಲಿ ಘೋಷಿಸಲಾಗುವುದು. ಆದಾಗ್ಯೂ ಈ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 84 ಕ್ಕೆ ಹೆಚ್ಚಿಸಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಿಸಿಸಿಐ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದೆ 74 ಪಂದ್ಯಗಳಿಗೆ ಸೀಮಿತಗೊಳಿಸಿದೆ.
News
BCCI announces schedule for second phase of #TATAIPL 2026
The remainder of the league stage, comprising 50 matches, will be played from April 13 to May 24, 2026, across 12 venues in India
ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಕಳೆದ 44 ವರ್ಷಗಳಿಂದ ನಟಿಸುತ್ತಿದ್ದಾರೆ. ಈ ವರೆಗೆ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1982 ರಲ್ಲಿ ಅವರು ನಟನೆ ಆರಂಭಿಸಿದರು. ಅವರ ನಟನೆಯ ಎರಡನೇ ಸಿನಿಮಾ ಹಾಗೂ ಅನುಪಮ್ ಖೇರ್ ಅವರಿಗೆ ದೊಡ್ಡ ಗುರುತು ನೀಡಿದ ಸಿನಿಮಾ ‘ಸಾರಾಂಶ್’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್. ‘ಸಾರಾಂಶ್’ ಬಳಿಕ ದೊಡ್ಡ ಸ್ಟಾರ್ ಆಗಿ ಬೆಳೆದರು. ಅನುಪಮ್ ಖೇರ್ ಅವರು ಆಗಿನಿಂದಲೂ ಮಹೇಶ್ ಭಟ್ ಅವರನ್ನು ತಮ್ಮ ಗುರು ಎಂದೇ ಭಾವಿಸುತ್ತಾರೆ, ಆರಾಧಿಸುತ್ತಾರೆ. ಅದು ಯಾವ ಮಟ್ಟಿಗಿನ ಗುರು ಭಕ್ತಿ ಎಂದರೆ ಅನುಪಮ್ ಖೇರ್, ಪ್ರತಿ ಸಿನಿಮಾ ಒಪ್ಪಿಕೊಂಡಾಗಲೂ 25 ಸಾವಿರ ರೂಪಾಯಿ ಹಣವನ್ನು ಮಹೇಶ್ ಭಟ್ ಅವರಿಗೆ ಕಳಿಸುತ್ತಾರಂತೆ.
ಇತ್ತೀಚೆಗೆ ಶೋ ಒಂದರಲ್ಲಿ ಅನುಪಮ್ ಖೇರ್ ಅವರು ಮಹೇಶ್ ಭಟ್ ಅವರೊಟ್ಟಿಗಿನ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ನಟಿಸುವ ಪ್ರತಿಯೊಂದು ಸಿನಿಮಾದ ಸಂಭಾವನೆಯಿಂದ 25,000 ರೂಪಾಯಿಗಳನ್ನು ತಮ್ಮ ಗುರು ಮಹೇಶ್ ಭಟ್ ಅವರಿಗೆ ನೀಡುತ್ತಾರಂತೆ. ‘ಇದು ನಾನು ಅವರಿಗೆ ಸಲ್ಲಿಸುವ ಗೌರವ ಮತ್ತು ಗುರುದಕ್ಷಿಣೆ. 1984ರಲ್ಲಿ ‘ಸಾರಂಶ್’ ಚಿತ್ರದ ಮೂಲಕ ನನಗೆ ಜೀವನ ನೀಡಿದವರು ಅವರು. ಅಂದಿನಿಂದ ಇಂದಿನವರೆಗೂ ನಾನು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಖೇರ್ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ಫಿಟ್ನೆಸ್ ಬಗ್ಗೆಯೂ ಮಾತನಾಡಿದ 69 ವರ್ಷದ ನಟ, ತಮಗೆ ಈಗಿನ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಅಥವಾ ಉತ್ತಮ ಮೈಕಟ್ಟು ಪ್ರದರ್ಶಿಸುವ ಆಸೆ ಇದೆ ಎಂದಿದ್ದಾರೆ. ‘ನಾನು ನನ್ನ ದೇಹವನ್ನು ಪ್ರದರ್ಶಿಸಲು ಬಯಸುತ್ತೇನೆ. ಜನರು ನನ್ನ ಫಿಟ್ನೆಸ್ ನೋಡಿ ಆಶ್ಚರ್ಯಪಡಬೇಕು ಎಂಬುದು ನನ್ನ ಇಚ್ಛೆ. ಅದಕ್ಕಾಗಿ ನಾನು ಕಠಿಣ ವ್ಯಾಯಾಮ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ಅನುಪಮ್ ಖೇರ್, 28 ವರ್ಷದ ನಟನಾಗಿದ್ದಾಗ, 65 ವರ್ಷದ ವೃದ್ಧನ ಪಾತ್ರವನ್ನು ಮಹೇಶ್ ಭಟ್ ನೀಡಿದ್ದರು. ಮೊದಲು ಈ ಪಾತ್ರಕ್ಕೆ ಸಂಜೀವ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು, ಆದರೆ ಭಟ್ ಅವರು ಖೇರ್ ಅವರ ಪ್ರತಿಭೆ ನಂಬಿ ಅವಕಾಶ ನೀಡಿದ್ದರು.
ನಿರ್ದೇಶಕ ಮಹೇಶ್ ಭಟ್ ಅವರು ಈ ಹಣವನ್ನು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ, ಅದು ನಮ್ಮ ನಡುವಿನ ನಂಬಿಕೆ ಮತ್ತು ಗೌರವದ ಸಂಕೇತ’ ಎಂದು ಖೇರ್ ಈ ಹಿಂದೆ ತಿಳಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನುಪಮ್ ಖೇರ್ ಅವರು ಯೋಗ ಮತ್ತು ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅವರಂತೆ ತಮಗೂ ಫಿಟ್ ಬಾಡಿ ಇರಬೇಕು ಎಂಬುದು ಅವರ ಇತ್ತೀಚಿನ ಸಿನಿಮಾಗಳ ತಯಾರಿಗಾಗಿ ಇಟ್ಟುಕೊಂಡಿರುವ ಗುರಿಯಾಗಿದೆಯಂತೆ.
ಅನುಪಮ್ ಖೇರ್ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಇಂಗ್ಲೀಷ್, ಚೈನೀಸ್, ಬೆಂಗಾಲಿ ಮತ್ತು ಕನ್ನಡ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಅನುಪಮ್ ಖೇರ್ ಅವರು ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ನಟಿಸಿದ್ದಾರೆ. 2012 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ‘ಪಾರಿಜಾತ’ನಲ್ಲಿಯೂ ಸಹ ನಟಿಸಿದ್ದಾರೆ.
ನವದೆಹಲಿ, ಮಾರ್ಚ್ 26: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೀಸಲಾತಿ ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲಿ ನಿಮ್ಮ ತಾಯಿಗೆ ಏಕೆ ಚಿಕಿತ್ಸೆ ಕೊಡಿಸುತ್ತಿದ್ದೀರ, ಏಮ್ಸ್ನಲ್ಲಿ ಚಿಕಿತ್ಸೆ ಕೊಡಿಸಿದ್ದರೆ ನಿಮಗೆ ಶೇ.60ರಷ್ಟು ಮೀಸಲಾತಿ ಇರುವ ವೈದ್ಯರೇ ಸಿಗುತ್ತಿದ್ದರು. ನಿಮಗೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಇಲ್ಲವೇ, ನಾವೆಲ್ಲರೂ ಸೋನಿಯಾ ಬೇಗ ಚೇತರಿಸಿಕೊಳ್ಳಲೆಂದೇ ಬಯಸುತ್ತೇವೆ, ಜಾರ್ಜ್ ಸೊರಸ್ ಅವರ ಮಾತು ಕೇಳಿ ಸಮಾಜವನ್ನು ವಿಭಜಿಸಲು ಯಾಕೆ ನೀವು ಪ್ರಯತ್ನಿಸುತ್ತಿದ್ದೀರಿ ಎಂದು ದುಬೆ ಪ್ರಶ್ನಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಗಮನ ಸೆಳೆದರು. ಕಾಶ್ಮೀರಿ ಪಂಡಿತರ ಮೇಲೆ ನಡೆದ ದಾಳಿಯ ಕುರಿತು ಈ ಸಿನಿಮಾ ಇತ್ತು. ನಂತರ ಬಂದ ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗಳು ಗಮನ ಸೆಳೆಯಲು ವಿಪಲವಾದವು. ಈಗ ವಿವೇಕ್ ಅವರು ಪೆಹಲ್ಗಾಮ್ ದಾಳಿ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಟ್ಟಿದ್ದಾರೆ. ಪೆಹಲ್ಗಾಮ್ ದಾಳಿ ಬಳಿಕ ನಡೆಯುವ ಘಟನೆಗಳನ್ನು ವಿವೇಕ್ ಕಟ್ಟಿಕೊಡಲಿದ್ದಾರೆ.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ಅಲ್ಲಿ ಉಗ್ರರು ದಾಳಿ ಮಾಡಿದರು. ವಿವಾಹಿತರಲ್ಲಿ ಪುರಷರನ್ನೇ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಯಿತು. ಒಟ್ಟೂ 26 ಜನ ಟೂರಿಸ್ಟ್ಗಳನ್ನು ಕೊಲ್ಲಲಾಯಿತು. ಈ ದಾಳಿ ಇಡೀ ಭಾರತವೇ ತತ್ತರಿಸುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಹಾಗೂ ಪಾಕಿಸ್ತಾ ಆಕ್ರಮಿತ ಭಾಗಗಳ ಮೇಲೆ ಭಾರತ ದಾಳಿ ನಡೆಸಿತು. ಈ ಘಟನೆ ಆಧರಿಸಿ ‘ಆಪರೇಷನ್ ಸಿಂಧೂರ್’ ಮಾಡಲಾಗುದು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ಕೆಲವು ಕಥೆಗಳನ್ನು ಆಯ್ಕೆ ಮಾಡಲಾಗುವುದಿಲ್ಲ, ಅವು ನಿಮ್ಮನ್ನು ಆಯ್ಕೆ ಮಾಡುತ್ತವೆ. ಆಪರೇಷನ್ ಸಿಂಧೂರ್ ಅಂತಹ ಕಥೆಗಳಲ್ಲಿ ಒಂದು. ಪ್ರಾಮಾಣಿಕತೆ, ಧೈರ್ಯ ಮತ್ತು ಜವಾಬ್ದಾರಿಯಿಂದ ಹೇಳಬೇಕಾದ ಕಥೆ. ಇದು ಕೇವಲ ಸಿನಿಮಾ ಅಲ್ಲ, ಇದು ವಿಷಯಗಳನ್ನು ಹೊರಜಗತ್ತಿಗೆ ತೋರಿಸುವ ಪ್ರಕ್ರಿಯೆ. ಒಂದು ರಾಷ್ಟ್ರದಲ್ಲಿ ಇಷ್ಟು ದೊಡ್ಡ ಘಟನೆ ನಡೆದಾಗ ಅವುಗಳನ್ನು ಸತ್ಯಗಳನ್ನು ಹೇಳಿ ದಾಖಲಿಸುವುದು ಮುಖ್ಯವಾಗುತ್ತದೆ’ ಎಂದು ನಿರ್ಮಾಪಕ ಭೂಷಣ್ ಕುಮಾರ್ ಹೇಳಿದ್ದಾರೆ.
ನಿರ್ದೇಶಕ-ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ‘ಭಾರತವು ಪೆಹಲ್ಗಾಮ್ ಭಯೋತ್ಪಾದನಾ ದಾಳಿಗೆ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನವನ್ನು ಶಿಕ್ಷಿಸಿದೆ ಮಾತ್ರವಲ್ಲದೆ, ಆಧುನಿಕ ಯುದ್ಧದಲ್ಲೂ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ’ ಎಂದು ಹೇಳಿದ್ದಾರೆ.
ಸದ್ಯ, ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಭಾರತ ನಡೆಸಿದ ಆಪರೇಷನ್ ಆಧಾರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಘೋಷಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.
ಕೋಲ್ಕತ್ತಾ, ಮಾರ್ಚ್ 26: ಕೋಲ್ಕತ್ತಾದಲ್ಲಿ ಬಿರುಗಾಳಿ ಮತ್ತು ಮಳೆಯಿಂದಾಗಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಹೆಲಿಕಾಪ್ಟರ್ ಕೂಡ ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಿಸಿದೆ. ಅರ್ಧ ಗಂಟೆ ತಡವಾಗಿ ಇಳಿದಿದೆ. ಅದಕ್ಕೂ ಮುನ್ನ 8 ಬಾರಿ ಲ್ಯಾಂಡಿಂಗ್ಗೆ ಪ್ರಯತ್ನಿಸಲಾಗಿತ್ತು.
ವರದಿಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರಿದ್ದ ಹೆಲಿಕಾಪ್ಟರ್ ಕೋಲ್ಕತ್ತಾ ವಿಮಾನ ನಿಲ್ದಾಣದ ಮೇಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುತ್ತುತ್ತಿತ್ತು, ಏಕೆಂದರೆ ಹವಾಮಾನ ವೈಪರೀತ್ಯದಿಂದಾಗಿ ಅದಕ್ಕೆ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು. ಮುಖ್ಯಮಂತ್ರಿ ತಮ್ಮ ಚುನಾವಣಾ ಪ್ರಚಾ ಮುಗಿಸಿ ಅಂಡಾಲ್‌ನಿಂದ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು.
ಅವರ ಸಣ್ಣ ಖಾಸಗಿ ವಿಮಾನವು ಮಧ್ಯಾಹ್ನ 3.39 ಕ್ಕೆ ಅಂಡಾಲ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 4 ಗಂಟೆಯ ಸುಮಾರಿಗೆ ಕೋಲ್ಕತ್ತಾಗೆ ಆಗಮಿಸಬೇಕಿತ್ತು, ಆದರೆ ಹವಾಮಾನವು ಸಮಸ್ಯೆಗಳನ್ನು ಉಂಟುಮಾಡಿತ್ತು.
ಬೆಳಗಾವಿ, ಮಾರ್ಚ್ 26: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖೋಟಾ ನೋಟು(Khota Notu)ದಂಧೆಯನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ್ದ ಗೋವಾ ಮೂಲದ ಗ್ಯಾಂಗ್ನ್ನು ಬಂಧಿಸಿದ್ದಾರೆ. ಎ1 ಮೊಹಮ್ಮದ್ ಅರ್ಬಾಜ್ (21), ಎ2 ರೂಪೇಶ್ ವಾಕೋಡೆ (26), ಎ3 ಮೊಹಮ್ಮದ್ ಹುಸೇನ್ ಭಕ್ಷಿ(23), ಶ್ರವಣಕುಮಾರ (25) ಬಂಧಿತರು. ಆರೋಪಿಗಳಿಂದ ಒಂದು ಕಾರು, 2 ಲಕ್ಷ 40 ಸಾವಿರ ರೂ ಮುಖ ಬೆಲೆಯ ಖೋಟಾ ನೋಟು ಮತ್ತು 4 ಮೊಬೈಲ್ ಜಪ್ತಿ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ
ಗೋವಾ ರಾಜ್ಯದ ಬಂಧಿತ ನಾಲ್ವರು ಆರೋಪಿಗಳು ಒಂದು ಲಕ್ಷ ರೂ ಅಸಲಿ ನೋಟಿಗೆ 2 ಲಕ್ಷ ರೂ ಖೋಟಾ ನೋಟು ನೀಡುತ್ತಿದ್ದರು. ಬೆಳಗಾವಿಯ ಖಡೇಬಜಾರ್ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಗ್ಯಾಂಗ್ ಯತ್ನಿಸಿದೆ. ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಗೋವಾ ಜೈಲಿನಿಂದಲೇ ಖೋಟಾ ನೋಟು ದಂಧೆ
ಇನ್ನು ಖೋಟಾ ನೋಟ್ ಗ್ಯಾಂಗ್ನ ಕಿಂಗ್ ಪಿನ್ ಗೋವಾ ಜೈಲಿನಲ್ಲಿದ್ದಾನೆ. ಎ1 ಆರೋಪಿ ಮೊಹಮ್ಮದ್ ಅರ್ಬಾಜ್ನ ಅಣ್ಣ ಮೊಹಮ್ಮದ್ ಸರ್ಫರಾಜ್ ಅಸಲಿ ಕಿಂಗ್ ಪಿನ್. ಜೈಲಿನಲ್ಲಿರುವ ಅಣ್ಣನೊಂದಿಗೆ ಫೋನ್ ಮಾಡಿ ಖೋಟಾ ನೋಟು ತರಿಸಿಕೊಂಡಿದ್ದ. ಜೈಲಿನಲ್ಲಿ ಕುಳಿತುಕೊಂಡೇ ಫೋನ್ ಮೂಲಕ ಸರ್ಪರಾಜ್ ಆಪರೇಟ್ ಮಾಡುತ್ತಿದ್ದ.
ಗೋವಾದಲ್ಲಿ ವ್ಯಕ್ತಿಯೊಬ್ಬನಿಗೆ 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟ್ ಸಪ್ಲೈ ಮಾಡಿದ್ದರು. ಜೈಲಿನಲ್ಲಿರುವ ಅಣ್ಣನ ಸೂಚನೆಯಂತೆ ತಮ್ಮ ಖೋಟಾ ನೋಟು ಸಪ್ಲೈ ಮಾಡಿದ್ದ. ಖೋಟಾ ನೋಟ್ ಸಪ್ಲೈ ಮಾಡಿದ್ದ ಅಪರಿಚಿತ ಆರೋಪಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಸದ್ಯ ಬೆಳಗಾವಿ ಸಿಸಿಬಿ ಪೊಲೀಸರಿಗೆ ಕೇಸ್ ರವಾನಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಬಂಧಿಸುವ ಹೊಣೆಗಾರಿಕೆ ಹೊತ್ತಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ನವದೆಹಲಿ, ಮಾರ್ಚ್ 26: ಕೇಂದ್ರ ಸರ್ಕಾರ ತನ್ನ ಹಣದುಬ್ಬರ (Retail Inflation) ನಿಲುವನ್ನು ಮುಂದುವರಿಸಿದೆ. ಮುಂದಿನ ಐದು ವರ್ಷ, ಅಂದರೆ 2023ರ ಮಾರ್ಚ್ವರೆಗೂ ರೀಟೇಲ್ ಹಣದುಬ್ಬರ ಶೇ. 4 ಅನ್ನು ಕಾಯ್ದುಕೊಳ್ಳುವಂತೆ ಆರ್ಬಿಐಗೆ ಸರ್ಕಾರ ಗುರಿ ಕೊಟ್ಟಿದೆ. ರೀಟೇಲ್ ಹಣದುಬ್ಬರ ಶೇ. 4, ಆಚೀಚೆ ಎರಡು ಪ್ರತಿಶತ ಮೀರದಂತೆ ಇರಬೇಕು ಎಂಬುದು ಸರ್ಕಾರದ ನಿರ್ದೇಶನ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರ ಶ್ರೇಣಿಯಲ್ಲೇ ಇರುವಂತೆ ನೋಡಿಕೊಳ್ಳಬೇಕೆಂದು ಆರ್ಬಿಐಗೆ ಸರ್ಕಾರ ತಿಳಿಸಿದೆ.
ಆರ್ಥಿಕತೆಯ ವೇಗವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ದಿಷ್ಟ ಹಣದುಬ್ಬರವನ್ನು ನಿರೀಕ್ಷಿಸುತ್ತದೆ. ಹಣದುಬ್ಬರ ಆಚೀಚೆ ಏರುಪೇರಾದರೆ ಆರ್ಥಿಕ ಲಯಕ್ಕೆ ಧಕ್ಕೆಯಾಗುತ್ತದೆ. 2016ರಲ್ಲಿ ಸರ್ಕಾರವು ಹಣದುಬ್ಬರವನ್ನು ಐದು ವರ್ಷಗಳ ಕಾಲ ಶೇ. 4ರಷ್ಟು ಇಡಬೇಕೆಂದು ಆರ್ಬಿಐಗೆ ನಿರ್ದೇಶನ ಕೊಟ್ಟಿತ್ತು. 2021ರಲ್ಲೂ ಅದೇ ನಿರ್ದೇಶನ ಮುಂದುವರಿಯಿತು. ಈಗ 2026ರಲ್ಲೂ ಅದನ್ನೇ ಗುರಿಯಾಗಿ ಮುಂದುವರಿಸಲಾಗಿದೆ. ಸತತ ಮೂರು ಬಾರಿ ಸರ್ಕಾರ ಶೇ. 4ರ ಹಣದುಬ್ಬರ ಗುರಿಯನ್ನು ಆರ್ಬಿಐಗೆ ಕೊಟ್ಟಿದೆ. ಈ ಹಣದುಬ್ಬರ ಗುರಿ ಕೊಡುವ ನೀತಿ ಶುರುವಾಗಿದ್ದೇ 2016ರಲ್ಲಿ.
ಕಳೆದ 10 ವರ್ಷದಲ್ಲಿ ಆರ್ಬಿಐ ಸರ್ಕಾರ ತನಗೆ ಕೊಟ್ಟ ಗುರಿಯನ್ನು ಬಹುತೇಕ ಅಚ್ಚುಕಟ್ಟಾಗಿ ನಿಭಾಯಿಸಿದೆ. ಕೋವಿಡ್ ಕಾಲಘಟ್ಟದಲ್ಲಿ ಶೇ. 7 ದಾಟಿ ಹೋಗಿದ್ದು ಬಿಟ್ಟರೆ ಹೆಚ್ಚಿನ ಕ್ವಾರ್ಟರ್ಗಳಲ್ಲಿ ಹಣದುಬ್ಬರವು ಶೇ. 2ರಿಂದ 6ರ ಶ್ರೇಣಿಯಲ್ಲಿ ಇದೆ.
ಕಳೆದ ಕೆಲ ತಿಂಗಳಿಂದ ಹಣದುಬ್ಬರ ದರವು ಶೇ. 4ರ ಒಳಗೆಯೇ ಇದೆ. ಜನವರಿಯಲ್ಲಿ ಶೇ. 2.74 ಇದ್ದ ಹಣದುಬ್ಬರ ದರ ಫೆಬ್ರುವರಿಯಲ್ಲಿ ಶೇ. 3.21ಕ್ಕೆ ಏರಿದೆ. ಹಣದುಬ್ಬರದ ಚಲನೆಯನ್ನು ನಿಯಂತ್ರಿಸುವ ರೀತಿಯಲ್ಲಿ ಆರ್ಬಿಐ ತನ್ನ ನೀತಿಗಳನ್ನು ಪರಿಷ್ಕರಿಸಲು ಯತ್ನಿಸುತ್ತದೆ.
ಹಣದುಬ್ಬರ ಅತಿಯಾಗಿದ್ದಾಗ ಆರ್ಬಿಐ ತನ್ನ ರಿಪೋ ದರ ಅಥವಾ ಬಡ್ಡಿದರವನ್ನು ಏರಿಸುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಇರುವ ಹಲವು ಮಾರ್ಗೋಪಾಯಗಳಲ್ಲಿ ರಿಪೋ ದರವೂ ಒಂದು. ಇಂಥ ಇನ್ನೂ ಕೆಲ ಅಸ್ತ್ರಗಳು ರಿಸರ್ವ್ ಬ್ಯಾಂಕ್ ಬಳಿ ಇವೆ.
2026 ರ ಐಪಿಎಲ್ (IPL 2026) ಮಾರ್ಚ್ 28 ರಿಂದ ಪ್ರಾರಂಭವಾಗಿದೆ. ಆದರೆ ಅದಕ್ಕೂ ಮೊದಲು, ಪ್ರತಿ ಬಾರಿಯ ಐಪಿಎಲ್ನಂತೆ ಈ ಬಾರಿಯೂ ಬಿಸಿಸಿಐ (BCCI), ಲೀಗ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ, ಐಪಿಎಲ್‌ನ ಕೆಲವು ನಿಯಮಗಳ ಕುರಿತು ಚರ್ಚೆ ನಡೆಸಲಾಗಿದ್ದು, ಕೆಲವು ನಾಯಕರು ಐಪಿಎಲ್‌ನ ಒಂದು ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್‌ನ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮಕ್ಕೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಈ ನಿಯಮವನ್ನು ತೆಗೆಯಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ಆದರೆ ನಾಯಕರ ಮನವಿಯ ಹೊರತಾಗಿಯೂ ಬಿಸಿಸಿಐ ಈ ನಿಯಮವನ್ನು 2027 ರವರೆಗೆ ಮುಂದುವರೆಸುವುದಾಗಿ ತಿಳಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎಂದರೇನು?
2023 ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ನಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಈ ನಿಯಮದ ಪ್ರಕಾರ, ತಂಡಗಳು ಪಂದ್ಯದ ಸಮಯದಲ್ಲಿ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹೀಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡವನ್ನು ಕೂಡಿಕೊಳ್ಳುವ ಆಟಗಾರ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಬಹುದಾಗಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ.
ನಾಯಕರ ಸಭೆಯಲ್ಲಿ ನಡೆದಿದ್ದೇನು?
ಮುಂಬೈನಲ್ಲಿ ನಡೆದ 10 ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಆದಾಗ್ಯೂ ಈ ನಿಯಮವನ್ನು 2027 ರ ನಂತರ ಮಾತ್ರ ಪರಿಶೀಲಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ. ಅಂದರೆ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದಿನ ಸೀಸನ್ನಲ್ಲೂ ಮುಂದುವರೆಯುವುದು ಖಚಿತವಾಗಿದೆ.
ಅಸಮಾಧಾನ ಹೊರಹಾಕಿದ ಅಕ್ಷರ್ ಪಟೇಲ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಈ ನಿಯಮವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಈ ನಿಯಮದಿಂದ ಆಲ್‌ರೌಂಡರ್‌ಗಳ ಪಾತ್ರ ಕಡಿಮೆಯಾಗಲಿದೆ ಎಂಬುದು ಅಕ್ಷರ್ ಪಟೇಲ್ ವಾದವಾಗಿದೆ. ಇತ್ತ ರೋಹಿತ್ ಶರ್ಮಾ ಕೂಡ ಈ ನಿಯಮದ ವಿರುದ್ಧ ಧ್ವನಿ ಎತ್ತಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಕೊರತೆ ಇರಬಹುದು ಎಂಬ ಕಾರಣಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತಾನು ಒಪ್ಪುವುದಿಲ್ಲ ಎಂದು ರೋಹಿತ್ ಶರ್ಮಾ 2024 ರಲ್ಲಿ ಹೇಳಿದ್ದರು. ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮದ ವಿರುದ್ಧ ಹೇಳಿಕೆ ನೀಡಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ತಂಡದಲ್ಲಿ ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ ಎಂದಿದ್ದರು. ಅನೇಕ ವಿದೇಶಿ ಆಟಗಾರರು ಸಹ ಈ ನಿಯಮದ ವಿರುದ್ಧ ಮಾತನಾಡಿದ್ದಾರೆ.
ಐಪಿಎಲ್ ನಾಯಕರ ಸಭೆಯಲ್ಲಿ, ನಾಯಕರೊಬ್ಬರು ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳ ನಂತರವೂ ಚೆಂಡನ್ನು ಬದಲಾಯಿಸುವ ಬೇಡಿಕೆಯನ್ನಿಟ್ಟರು. ಆದರೆ ಅದಕ್ಕೆ ಉಳಿದ ನಾಯಕರಿಂದ ಬೆಂಬಲ ಸಿಗಲಿಲ್ಲ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಪ್ರಭಾವ ಹೆಚ್ಚಾಗುವ ಕಾರಣದಿಂದಾಗಿ ಈ ನಿಯಮವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಸಹಾಯಕವಾಗುವಂತೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ತಂಡಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಐಪಿಎಲ್ ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಹೊಸ ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ದಿನದಂದು ಯಾವ ತಂಡವೂ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ. ಹಾಗೆಯೇ ಒಂದು ತಂಡ ಅಭ್ಯಾಸ ಮಾಡಿದ ವಿಕೆಟ್ನಲ್ಲಿ ಇನ್ನೊಂದು ತಂಡ ಅಭ್ಯಾಸ ಮಾಡುವಂತಿಲ್ಲ ಎಂಬುದನ್ನು ಸೂಚಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾದರು. ಇವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್ನಲ್ಲಿ ರಿಸೆಪ್ಷನ್ ಸಹ ಬಲು ಜೋರಾಗಿ ನಡೆಯಿತು. ಬಳಿಕ ಇವರ ಹನಿಮೂನ್ ಪ್ರವಾಸದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು ಆದರೆ ಯುದ್ಧ ಭೀತಿಯ ಕಾರಣ ಎಲ್ಲ ಯೋಜನೆಗಳನ್ನು ಕೈಬಿಟ್ಟರು. ಇದೀಗ ರಶ್ಮಿಕಾ ಮತ್ತು ವಿಜಯ್ ಅವರು ಥಾಯ್ಲೆಂಡ್ನಲ್ಲಿ ‘ಬಡ್ಡಿಮೂನ್’ನ ಸಣ್ಣ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಅವರು ಉಳಿದುಕೊಂಡಿದ್ದ ಏರ್ಬಿಎನ್ಬಿ ರೆಸಾರ್ಟ್‌ನ ವಿಡಿಯೋಗಳಿವೆ.
ಈ ತಾರಾ ಜೋಡಿಯು ಥೈಲ್ಯಾಂಡ್‌ನ ಶಿವಾಂಗ್ ಬೇನಲ್ಲಿನ ‘ವಿಲ್ಲಾ ಕಾನ್ ಕೂನ್’ ಎಂಬ ಅತ್ಯಂತ ದುಬಾರಿ ರೆಸಾರ್ಟ್‌ನಲ್ಲಿ ತಂಗಿದ್ದರು. ಐಶಾರಾಮಿ ರೆಸಾರ್ಟ್ ಇದಾಗಿದ್ದು, ಈ ರೆಸಾರ್ಟ್‌ನ ಒಂದು ರಾತ್ರಿಯ ಬಾಡಿಗೆ ಸುಮಾರು 2.35 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದು ಅಲ್ಲಿನ ಸೌಲಭ್ಯಗಳು ಮತ್ತು ವಿಲ್ಲಾದ ಗಾತ್ರಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಾಗಬಹುದು. ಈ ವಿಲ್ಲಾವು ಖಾಸಗಿ ಈಜುಕೊಳ, ಅರಬ್ಬಿ ಸಮುದ್ರದ ಸುಂದರ ನೋಟ, ವೈಯಕ್ತಿಕ ಬಟ್ಲರ್ ಸೇವೆ ಮತ್ತು ಅತ್ಯಾಧುನಿಕ ಸ್ಪಾ ಸೌಲಭ್ಯಗಳನ್ನು ಹೊಂದಿದೆ.
ರಶ್ಮಿಕಾ ಮತ್ತು ವಿಜಯ್ ಅವರು ರೆಸಾರ್ಟ್‌ನಲ್ಲಿ ಮಾಡಿದ ಆಕ್ಟಿವಿಟಿಗಳ ದೃಶ್ಯಗಳನ್ನು ಸಹ ಹಂಚಿಕೊಂಡಿದ್ದು, ರೆಸಾರ್ಟ್‌ನ ಜಾಹೀರಾತು ವಿಡಿಯೋ ಇದಾಗಿದೆ. ರಶ್ಮಿಕಾ ಮತ್ತು ವಿಜಯ್ ಅವರು ಮದುವೆ ಆದ ಬಳಿಕ ಇಬ್ಬರಿಗೂ ಹಲವು ಜಾಹೀರಾತು ಆಫರ್ಗಳು ಬರುತ್ತಿವೆ. ಈಗಾಗಲೇ ಮಾನ್ಯವಾರ್ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ರೆಸಾರ್ಟ್ ಜಾಹೀರಾತು, ಇನ್ನೂ ಕೆಲವು ಜಾಹೀರಾತುಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ರಂಗಬಲಿ’ ಹೆಸರಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಬಳಿಕ ‘ಗೀತ ಗೋವಿಂದಂ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಇಬ್ಬರೂ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ.
ನವದೆಹಲಿ, ಮಾರ್ಚ್ 26: ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸೈನಿಕರನ್ನು ಗೌರವಿಸಲು ಕೇಂದ್ರ ಸರ್ಕಾರ ಮಹತ್ವದ ಮತ್ತು ಹೃದಯಸ್ಪರ್ಶಿ ನಿರ್ಧಾರವನ್ನು ತೆಗೆದುಕೊಂಡಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಶೌರ್ಯ ಪ್ರಶಸ್ತಿಗಳನ್ನು ಪಡೆಯುವ ಸೈನಿಕರಿಗೆ ಭಾರತೀಯ ರೈಲ್ವೆ(Indian Railways)ಯಲ್ಲಿ ಜೀವನಪರ್ಯಂತ ಉಚಿತ ಪ್ರಯಾಣ ಅವಕಾಶವನ್ನು ನೀಡಲಾಗುವುದು . ಈ ಹೆಜ್ಜೆ ಕೇವಲ ಅನುಕೂಲಕ್ಕಾಗಿ ಅಲ್ಲ, ಬದಲಾಗಿ ರಾಷ್ಟ್ರವು ತನ್ನ ವೀರರಿಗೆ ಸಲ್ಲಿಸುವ ಗೌರವವಾಗಿದೆ.
ಈ ಪ್ರಯೋಜನವು ಪದಕ ವಿಜೇತ ಸೈನಿಕರಿಗೆ ಸೀಮಿತವಾಗಿಲ್ಲ, ಅವರ ಕುಟುಂಬಗಳಿಗೂ ಅನ್ವಯಿಸುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ .
ಶೌರ್ಯ ಪ್ರಶಸ್ತಿ ವಿಜೇತರು: ಶೌರ್ಯ ಪದಕಗಳನ್ನು ಪಡೆದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಎಲ್ಲಾ ಸೈನಿಕರು ಮತ್ತು ಅಧಿಕಾರಿಗಳು.ಸಂಗಾತಿ: ಪದಕ ವಿಜೇತರು ಹುತಾತ್ಮರಾಗಿದ್ದರೆ ಅಥವಾ ನಮ್ಮೊಂದಿಗೆ ಇಲ್ಲದಿದ್ದರೆ, ಅವರ ಪತ್ನಿ ಅಥವಾ ಪತಿ ಈ ಪ್ರಯೋಜನವನ್ನು ಪಡೆಯುತ್ತಾರೆ.(ಮರುವಿವಾಹವಾಗುವವರೆಗೆ). ಪೋಷಕರು: ಪದಕ ವಿಜೇತರು ಅವಿವಾಹಿತರಾಗಿದ್ದು, ಮರಣೋತ್ತರವಾಗಿ ಗೌರವ ಪಡೆದರೆ, ಅವರ ಪೋಷಕರು ಈ ಉಚಿತ ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ.
ರಕ್ಷಣಾ ಸಚಿವಾಲಯದ ಪ್ರಕಾರ , ಈ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ. ಇದು ಸಾವಿರಾರು ಮಿಲಿಟರಿ ಕುಟುಂಬಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ ಮತ್ತು ಈ ನಿರ್ಧಾರವು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ.
ಯುದ್ಧದಲ್ಲಿ ಅಥವಾ ಕಠಿಣ ಸಂದರ್ಭಗಳಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸುವ ಸೈನಿಕರಿಗೆ ಭಾರತದಲ್ಲಿ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಪರಮ ವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ , ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಸೇರಿವೆ. ಪರಮ ವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರಗಳನ್ನು ಯುದ್ಧದ ಸಮಯದಲ್ಲಿ ಪ್ರದರ್ಶಿಸುವ ಧೈರ್ಯಕ್ಕಾಗಿ ನೀಡಲಾಗುತ್ತದೆ.
ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರಗಳನ್ನು ಶಾಂತಿಕಾಲ ಅಥವಾ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸುವ ಧೈರ್ಯಕ್ಕಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗಳು ಕೇವಲ ಶೌರ್ಯವನ್ನು ಮಾತ್ರವಲ್ಲ, ದೇಶಭಕ್ತಿ ಮತ್ತು ತ್ಯಾಗವನ್ನು ಸಂಕೇತಿಸುತ್ತವೆ.
ಕೇವಲ ಎರಡು ದಿನಗಳ ಹಿಂದೆ, ರೈಲ್ವೆ ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತ್ತು, ಹೊಸ ಮರುಪಾವತಿ ನಿಯಮಗಳನ್ನು ಜಾರಿಗೆ ತಂದಿತ್ತು. ದೃಢಪಡಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಈಗ, ರೈಲ್ವೆ ಮತ್ತೊಂದು ನಿರ್ಧಾರವನ್ನು ಘೋಷಿಸಿದೆ, ಜೀವಿತಾವಧಿಯ ಉಚಿತ ಪ್ರಯಾಣ ಅವಕಾಶವನ್ನು ನೀಡುತ್ತದೆ.
ರೈಲ್ವೆ ದಿವ್ಯಾಂಗರು, ಮಾನಸಿಕ ಅಸ್ವಸ್ಥರು ಮತ್ತು ಸಂಪೂರ್ಣವಾಗಿ ಅಂಧ ಪ್ರಯಾಣಿಕರಿಗೆ ರೈಲು ಟಿಕೆಟ್ ರಿಯಾಯಿತಿಗಳನ್ನು ನೀಡುತ್ತದೆ.ನ್ಸರ್, ಥಲಸ್ಸೆಮಿಯಾ, ಹೃದ್ರೋಗ, ಮೂತ್ರಪಿಂಡ ಕಾಯಿಲೆ, ಹಿಮೋಫಿಲಿಯಾ, ಕ್ಷಯ, ಏಡ್ಸ್ ಮತ್ತು ಆಸ್ಟಮಿಯಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರೈಲ್ವೆ ಪ್ರಯಾಣ ದರ ರಿಯಾಯಿತಿಗಳನ್ನು ಸಹ ನೀಡುತ್ತದೆ. ರೈಲ್ವೆ ಹಿರಿಯ ನಾಗರಿಕರಿಗೆ ದರ ರಿಯಾಯಿತಿಗಳನ್ನು ಸಹ ನೀಡುತ್ತಿತ್ತು, ಆದರೆ COVID-19 ಸಾಂಕ್ರಾಮಿಕ ಸಮಯದಲ್ಲಿ ಇದನ್ನು ನಿಲ್ಲಿಸಲಾಯಿತು.