ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್ ಈಗ ಶೃಂಗೇರಿಗೆ ಹೊಸ ಶಾಸಕ: MLA ಪ್ರಮಾಣಪತ್ರ ಪಡೆದ ಬಿಜೆಪಿಗ – Kannada News | D.N. Jeevaraj Emerges Winner in Sringeri After Recount; Official Certificate Issued
MLA ಪ್ರಮಾಣಪತ್ರ ಪಡೆದ ಜೀವರಾಜ್Image Credit source: Tv9 Kannada ಚಿಕ್ಕಮಗಳೂರು, ಮೇ 04: ಭಾರಿ ಕುತೂಹಲ ಮೂಡಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಡಿ.ಎನ್. ಜೀವರಾಜ್ ಚುನಾವಣಾ ಅಧಿಕಾರಿಗಳಿಂದ ಅಂತಿಮವಾಗಿ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಆ ಮೂಲಕ ಮರುಎಣಿಕೆಯಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ನ ಟಿ.ಡಿ. ರಾಜೇಗೌಡಗೆ ಸೋಲಾಗಿದೆ. ಅಂಚೆ ಮತಗಳ ಮರು ಎಣಿಕೆ ವೇಳೆ 52 ಮತಗಳಿಂದ ಜೀವರಾಜ್ ಗೆಲುವು ಸಾಧಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಪೈಕಿ…