ಏಳು ಗಂಟೆಗಳ ಬಳಿಕ ದೆಹಲಿಗೆ ವಾಪಸಾದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ
ನವದೆಹಲಿ, ಮಾರ್ಚ್ 26: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ತಾಂತ್ರಿಕ ದೋಷದ ಹಿನ್ನೆಲೆ ಏಳು ಗಂಟೆಗಳ ಬಳಿಕ ದೆಹಲಿಗೆ ಹಿಂದಿರುಗಿದೆ. A350-900 ವಿಮಾನ VT-JRF ಮಾರ್ಚ್ 15 ರಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು.ನ್ಯೂಯಾರ್ಕ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಐರಿಶ್ ಪಟ್ಟಣವಾದ ಶಾನನ್‌ಗೆ ತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿದ್ದವು. ಗುರುವಾರ ದೆಹಲಿಯಿಂದ ಲಂಡನ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ AI111, ತಾಂತ್ರಿಕ ದೋಷದ ನಂತರ ಮುನ್ನೆಚ್ಚರಿಕೆಯಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ ಎಂದು…