NZ vs WI: ಐಪಿಎಲ್ನಲ್ಲಿ ಹರಾಜಾಗದ ಆಟಗಾರ ಒಂದೇ ಪಂದ್ಯದಲ್ಲಿ 327 ರನ್ ಚಚ್ಚಿದ
ಐಪಿಎಲ್ 2026 ರ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಿತು. ಈ ಹರಾಜಿನಲ್ಲಿ ಕೆಲವು ಆಟಗಾರರಿಗೆ ಬಂಗಾರದ ಬೆಲೆ ಸಿಕ್ಕರೆ, ಇನ್ನೂ ಅನೇಕರು ಮಾರಾಟವಾಗದೆ ಉಳಿದರು. ಮಾರಾಟವಾಗದೆ ಉಳಿದವರಲ್ಲಿ ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಕೂಡ ಒಬ್ಬರು. ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದಿದ್ದ ಕಾನ್ವೇ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಲಿಲ್ಲ. ಆದರೆ ಹರಾಜು ಮುಗಿದ ಬಳಿಕ ಅಬ್ಬರಿಸಿರುವ ಕಾನ್ವೇ ಒಂದೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ…