ದಾವಣಗೆರೆ, ಮಾ,26: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣಕ್ಕೆ ಬಿಜೆಪಿ ಮುಖಂಡರು ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂಬ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೇವಸ್ಥಾನ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ದೇವಿಗೆ ವಿಶೇಷ ಹಾಲಿನ ಅಭಿಷೇಕ ಮಾಡುವ ಮೂಲಕ ‘ಶುದ್ಧೀಕರಣ’ ನಡೆಸಿದ್ದಾರೆ. ಮಾರ್ಚ್ 24ರಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಪಾದಗಟ್ಟೆ ಮುಂದಿನ ಅಂಗಳಕ್ಕೆ ಚಪ್ಪಲಿ ಧರಿಸಿಯೇ ಪ್ರವೇಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ದೇವಸ್ಥಾನ ಅಪವಿತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಇಂದು 101 ಲೀಟರ್ ಹಾಲು, 25 ಲೀಟರ್ ಮೊಸರು, ತುಪ್ಪ ಹಾಗೂ ಜೇನುತುಪ್ಪದಿಂದ ದುರ್ಗಾಂಬಿಕಾ ದೇವಿಗೆ ಮಹಾಭಿಷೇಕ ಮಾಡಿದರು. ಅಲ್ಲದೆ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ದೇವಸ್ಥಾನ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಬಿ.ಜಿ. ಅಜಯಕುಮಾರ್, “ಅಭಿಮಾನಿಗಳು ನಾಯಕರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಸಂಭ್ರಮದಲ್ಲಿ ನೇರವಾಗಿ ಪ್ರಾಂಗಣಕ್ಕೆ ಪ್ರವೇಶಿಸಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ನಾವು ಗರ್ಭಗುಡಿಗೆ ಚಪ್ಪಲಿ ಒಯ್ದಿಲ್ಲ. ಅವಸರದಲ್ಲಿ ನಡೆದ ತಪ್ಪನ್ನು ರಾಜಕೀಯ ಮಾಡುವುದು ಬೇಡ” ಎಂದು ಮನವಿ ಮಾಡಿದ್ದಾರೆ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ಸಿಬಿ (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ಗೆ ಮಾರಾಟ ಮಾಡಿದೆ. 16,706 ಕೋಟಿ ರೂಪಾಯಿಗೆ ಈ ಡೀಲ್ ಪೂರ್ಣಗೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಸೇರಿ ಕೆಲವು ಕಂಪನಿಗಳು ಆದಿತ್ಯಾ ಬಿರ್ಲಾಗೆ ಬೆಂಬಲ ನೀಡಿವೆ. ಈ ಮಧ್ಯೆ ಆರ್ಸಿಬಿ ಹೆಸರು ಬದಲಾವಣೆ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ವದಂತಿ ಬಗ್ಗೆ ಅನನ್ಯಾ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯಗಳಿಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಮಲ್ಯ ಬೆಂಗಳೂರಿನವರು. ಹೀಗಾಗಿ, ತಂಡದಲ್ಲಿ ಬೆಂಗಳೂರು ಬರುವಂತ ನೋಡಿಕೊಂಡರು. ಎಲ್ಲವನ್ನೂ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟರು. ಈ ಹೆಸರು ಈಗ ಅಭಿಮಾನಿಗಳ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹೀಗಾಗಿ, ಹೆಸರು ಬದಲಿಸಿದಂತೆ ಕೋರಿಕೊಳ್ಳಲಾಗುತ್ತಿತ್ತು. ಇದಕ್ಕೆ ಅನನ್ಯಾ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ಆರ್ಸಿಬಿ ಹೆಸರು ಇಂಗ್ಲಿಷ್ ಅಲ್ಲಿ ‘Royal Challengers Bangalore’ ಎಂದಿತ್ತು. ನಂತರ Bangalore ಅನ್ನು Bengaluru ಎಂದು ಬದಲಿಸಲಾಯಿತು. ಈ ಮೂಲಕ ಕನ್ನಡಿಗರ ಭಾವನೆಗೆ ಬೆಲೆ ಕೊಡಲಾಗಿತ್ತು. ಈಗ ಹೊಸ ಮಾಲೀಕರು ತಂಡ ಬದಲಿಸುತ್ತಾರೆ ಎಂದು ಹೇಳಲಾಗುತ್ತಾ ಬರಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಅನನ್ಯಾ ಸ್ಪಷ್ಟನೆ. ‘ಆರ್ಸಿಬಿ ಹೆಸರು ಬದಲಾಗುವುದಿಲ್ಲ’ ಎಂದು ಇನ್ಸ್ಟಾ ಸ್ಟೇಟಸ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಅನ್ನು ಅನನ್ಯಾ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಹೈದರಾಬಾದ್ ತಂಡ ಮಾಲೀಕರಾದ ಕಾವ್ಯಾ ಮಾರನ್ ಅವರು ಸಾಕಷ್ಟು ಮಿಂಚುತ್ತಿದ್ದಾರೆ. ಅವರಿಗೆ ಕಾಂಪಿಟೇಷನ್ ಕೊಡೋಕೆ ಅನನ್ಯಾ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೀಗಾಗಿ, ಆರ್ಸಿಬಿ ಪಂದ್ಯಗಳಲ್ಲಿ ಇವರು ಹೈಲೈಟ್ ಆಗಬಹುದು.
ಟೆಹ್ರಾನ್, ಮಾರ್ಚ್ 26: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಮಧ್ಯೆ ಇರಾನ್ ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇಂಧನ ಹಡಗುಗಳ ಸಾಗಾಟಕ್ಕೆ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯೊಳಗೆ (Strait of Hormuz) ಪ್ರವೇಶಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ. ವಿಶ್ವದ ತೈಲದ ಐದನೇ ಒಂದು ಭಾಗದಷ್ಟು ಹಡಗುಗಳ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿರುವ ಪರ್ಷಿಯನ್ ಕೊಲ್ಲಿಯ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಕಳೆದ ತಿಂಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಇರಾನ್ ಬಂದ್ ಮಾಡಿತ್ತು.
ಇದೀಗ ಭಾರತ ಸೇರಿದಂತೆ ಇರಾನ್ನ 5 ಸ್ನೇಹಿತ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಇರಾನಿನ ರಾಜ್ಯ ಟಿವಿಯೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ಹಲವು ಹಡಗುಗಳ ಮಾಲೀಕರು ಅಥವಾ ಈ ಹಡಗುಗಳನ್ನು ಹೊಂದಿರುವ ದೇಶಗಳು ನಮ್ಮನ್ನು ಸಂಪರ್ಕಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ಪಡೆದಿದ್ದವು. ಅವರಿಗೆ ನಾವು ಸುರಕ್ಷಿತ ಮಾರ್ಗವನ್ನು ಒದಗಿಸಿದ್ದೇವೆ. ನಾವು ಸ್ನೇಹಪರ ರಾಷ್ಟ್ರಗಳೆಂದು ಪರಿಗಣಿಸುವ ಕೆಲವು ದೇಶಗಳಿಗೆ ಈ ಜಲಮಾರ್ಗವನ್ನು ಬಳಸಲು ಅನುಮತಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಎರಡು ಹಡಗುಗಳು ಕೆಲವು ರಾತ್ರಿಗಳ ಹಿಂದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದವು. ಇನ್ನೂ ಕೆಲವು ದೇಶಗಳು ಕೂಡ ನಮ್ಮೊಂದಿಗೆ ಮಾತನಾಡಿ, ನಮ್ಮೊಂದಿಗೆ ಸಮನ್ವಯ ಸಾಧಿಸಿವೆ. ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳಿಗೆ ಈ ಜಲಮಾರ್ಗ ಬಳಸಲು ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ, ಶತ್ರು ದೇಶಗಳಿಗೆ ಹಾರ್ಮುಜ್ ಜಲಸಂಧಿಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬಿಕ್ಕಟ್ಟಿನಲ್ಲಿ ಪಾತ್ರವಹಿಸುವ ಅಮೆರಿಕ, ಇಸ್ರೇಲ್ ಮತ್ತು ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗಮನಿಸಬೇಕಾದ ವಿಷಯವೆಂದರೆ ಈ ವಾರದ ಆರಂಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಹೋಗುವ ಕಂಟೇನರ್ ಹಡಗನ್ನು ಹಾರ್ಮುಜ್ ಜಲಸಂಧಿಯನ್ನು ದಾಟದಂತೆ ತಡೆದಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಿಂದ ಕರಾಚಿ ಕಡೆಗೆ ಪ್ರಯಾಣಿಸುತ್ತಿದ್ದ SELEN ಎಂಬ ಹಡಗು ಸಾಗಾಟಕ್ಕೆ ಅನುಮತಿ ಪಡೆಯದ ಕಾರಣದಿಂದ ಹಾರ್ಮುಜ್ ಜಲಮಾರ್ಗದ ಪ್ರವೇಶದ್ವಾರದಲ್ಲಿ ವಾಪಾಸ್ ತೆರಳಬೇಕಾಯಿತು.
ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?:
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈತ್, ಇರಾಕ್, ಬಹ್ರೇನ್ ಮತ್ತು ಇರಾನ್‌ನಂತಹ ದೇಶಗಳಿಂದ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ರಫ್ತಿಗೆ ಅನುಕೂಲ ಮಾಡಿಕೊಡುತ್ತದೆ. ಈ ಮಾರ್ಗದ ಮೂಲಕ ಸಂಚರಿಸುವ ಪ್ರಮುಖ ಗ್ರಾಹಕರಲ್ಲಿ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿವೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು 40 ಪ್ರತಿಶತ ಮತ್ತು ಅದರ ಎಲ್‌ಎನ್‌ಜಿಯ ಶೇ. 54ಕ್ಕಿಂತ ಹೆಚ್ಚು ಈ ಜಲಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 26: ಚಿನ್ನದ ಬೆಲೆ ಸತತ ಎರಡನೇ ಬಾರಿ ಹೆಚ್ಚಿದೆ. ನಿನ್ನೆ ಭರ್ಜರಿಯಾಗಿ ಏರಿದ್ದ ಬಂಗಾರದ ದರ (Gold Rates) ಇವತ್ತು ಗುರುವಾರ ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವೆಡೆ ಮಾತ್ರ ಬೆಲೆ ತುಸು ತಗ್ಗಿದೆ. ಇನ್ನು, ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,34,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,46,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,34,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 26ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,017 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಕೊಪ್ಪಳ, ಮಾರ್ಚ್ 26: ತುಂಗಭದ್ರಾ ಜಲಾಶಯದ (Tungabhadra Dam) ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆ ಬಳಿಕ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಗಳ ರೈತರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಗೇಟ್‌ಗಳ ಬದಲಾವಣೆಯ ಜೊತೆಗೆ ಇದೀಗ ಅವುಗಳನ್ನು ಕಾರ್ಯನಿರ್ವಹಿಸಲು ಅಗತ್ಯವಾದ ಚೈನ್‌ಗಳನ್ನೂ ಬದಲಾಯಿಸಲು ನಿರ್ಧರಿಸಲಾಗಿದೆ. 2024ರ ಆಗಸ್ಟ್ 10ರಂದು ರಾತ್ರಿ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋಗಿದ್ದು, ಇದಕ್ಕೆ ಮೂಲ ಕಾರಣ ಗೇಟ್‌ಗಳ ಅವಧಿ ಮೀರಿದ್ದರೂ ಅವುಗಳನ್ನು ಬದಲಾಯಿಸದಿರುವುದು ಹಾಗೂ ಚೈನ್ ಡಿಲಿಂಕ್ ಆಗಿರುವುದು ಎಂದು ತಜ್ಞರು ತಿಳಿಸಿದ್ದರು. ಈ ಘಟನೆ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣ ಗೇಟ್‌ಗಳ ಬದಲಾವಣೆಗೆ ಮುಂದಾಯಿತು.
ಸುಮಾರು 42 ಕೋಟಿ ರೂ. ವೆಚ್ಚದಲ್ಲಿ 33 ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಆರಂಭವಾದರೂ, ಆರಂಭದಲ್ಲಿ ಚೈನ್‌ಗಳನ್ನು ಬದಲಾಯಿಸದೇ ಹಳೆಯ ಚೈನ್‌ಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.
ತುಂಗಭದ್ರಾ ಡ್ಯಾಂ ಎಲ್ಲ ಗೇಟ್‌ಗಳಿಗೆ ಹೊಸ ಚೈನ್
ಇದೀಗ ಎಲ್ಲಾ 33 ಗೇಟ್‌ಗಳಿಗೆ ಹೊಸ ಚೈನ್‌ಗಳನ್ನು ಅಳವಡಿಸಲು ಸುಮಾರು 5.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಗೇಟ್‌ಗಳ ಜೊತೆಗೆ ಚೈನ್‌ಗಳನ್ನೂ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೀಗ ಕಾಮಗಾರಿ ವೇಗ ಪಡೆದುಕೊಂಡಿದ್ದು, ಈಗಾಗಲೇ 18 ಗೇಟ್‌ಗಳ ಡಿಮೆಟಲಿಂಗ್ ಕಾರ್ಯ ಪೂರ್ಣಗೊಂಡಿದೆ. ಐದು ಹೊಸ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಗೇಟ್‌ಗಳ ಕಾರ್ಯವೂ ನಿರಂತರವಾಗಿ ಸಾಗುತ್ತಿದೆ. ಗುತ್ತಿಗೆ ಪಡೆದ ಕಂಪನಿಗೆ ಮೇ ಅಂತ್ಯದೊಳಗೆ ಎಲ್ಲ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಗಡುವು ನೀಡಿದೆ.
ಸಚಿವ ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದೂ ತಿಳಿಸಿದ್ದಾರೆ.
ಇನ್ನೊಂದೆಡೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಗೇಟ್ ಬದಲಾವಣೆ ವಿಳಂಬವಾದರೆ ಮುಂದಿನ ವರ್ಷವೂ ಬೇಸಿಗೆ ಬೆಳೆಗಾಗಿ ನೀರಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿ, ರೈತರ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಒಟ್ಟಾರೆ, ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಈಗ ನಿರ್ಣಾಯಕ ಹಂತ ತಲುಪಿದ್ದು, ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಸಾವಿರಾರು ರೈತರು ನಿರಾಳರಾಗಲಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 26: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. ಹಬ್ಬದ ಆಚರಣೆಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಹೂವುಗಳನ್ನು ಖರೀದಿಸಲು ಆಗಮಿಸುತ್ತಿದ್ದು, ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನಸಂದಣಿ ಉಂಟಾಗಿದೆ. ಶ್ರೀರಾಮ ನವಮಿ ಪ್ರಯುಕ್ತ ಕೆ.ಆರ್. ಮಾರುಕಟ್ಟೆ ಸಂಪೂರ್ಣ ಜನಜಂಗುಳಿಯಿಂದ ಕೂಡಿದ್ದು, ಹೂವಿನ ವ್ಯಾಪಾರ ಭರಾಟೆ ಜೋರಾಗಿದೆ. ನಗರದ ಜನರು ಹಬ್ಬಕ್ಕೆ ಬೇಕಾದ ಹೂವುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಈ ವರ್ಷ ಶ್ರೀರಾಮ ನವಮಿಗಾಗಿ ಹೂವಿನ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ವಿಪರೀತ ಜನಸಂದಣಿಗೆ ಕಾರಣವಾಗಿದೆ.
ಮೈಸೂರು, ಮಾ.26: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಮೈಸೂರಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರಧಾನ್ ಅವರು ಬೆಳಗಿನ ಉಪಹಾರ ಸೇವಿಸಿದರು. ಕೆಎಸ್‌ಒಯುನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಈ ಭೇಟಿ ಆಯೋಜಿಸಲಾಗಿತ್ತು. ಸುತ್ತೂರು ಮಠವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಮಠದ ಶೈಕ್ಷಣಿಕ ಸಂಸ್ಥೆಗಳು ಭಾರತದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮೈಸೂರಿನಲ್ಲಿ ಒಂದು ವೈದ್ಯಕೀಯ ಕಾಲೇಜು, ಒಂದು ದಂತ ವೈದ್ಯಕೀಯ ಕಾಲೇಜು ಮತ್ತು ಎರಡು ಔಷಧ ವಿಜ್ಞಾನ ಕಾಲೇಜುಗಳು ಸೇರಿವೆ. ಇದಲ್ಲದೆ, ನೋಯ್ಡಾ ಮತ್ತು ಜಮ್ಮುವಿನಲ್ಲಿಯೂ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಜಮ್ಮುವಿನಲ್ಲಿ ಔಷಧ ವಿಜ್ಞಾನ ಕಾಲೇಜು ಆರಂಭಿಸಲು ಮನೋಜ್ ಸಿನ್ಹಾ ಅವರು ಸುತ್ತೂರು ಶ್ರೀಗಳೊಂದಿಗೆ ಚರ್ಚಿಸಿದ್ದರು. ಜಮ್ಮು ಕೇಂದ್ರಾಡಳಿತ ಪ್ರದೇಶವಾದ ನಂತರ ಅಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಕುರಿತು ಪ್ರೇರಣೆ ನೀಡಿದ್ದರು. ಜಮ್ಮುವಿನಲ್ಲಿ ಪ್ರಾರಂಭವಾದ ಔಷಧ ವಿಜ್ಞಾನ ಕಾಲೇಜು ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದ ಔಷಧ ವಿಜ್ಞಾನ ಕಾರ್ಯಕ್ರಮಗಳು ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟಿನಲ್ಲಿ (ಎನ್‌ಐಆರ್‌ಎಫ್) ನಿರಂತರವಾಗಿ ಉನ್ನತ ಸ್ಥಾನಗಳನ್ನು ಗಳಿಸಿವೆ. ಸಾಮಾನ್ಯವಾಗಿ ಅಗ್ರ ಐದು ಸ್ಥಾನಗಳಲ್ಲಿ ಒಂದಾದ ನಾಲ್ಕನೇ ಅಥವಾ ಐದನೇ ಸ್ಥಾನವನ್ನು ಪಡೆದಿವೆ. ಮಠವು ತಾಯ್ನುಡಿಗಳ ಅಭಿವೃದ್ಧಿಗೂ ಆದ್ಯತೆ ನೀಡಿದೆ. ಭಾರತದಾದ್ಯಂತ 200ಕ್ಕೂ ಹೆಚ್ಚು ಸ್ಥಳೀಯ ತಾಯ್ನುಡಿಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಕಾರ್ಯೋನ್ಮುಖವಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಸುತ್ತೂರು ಶ್ರೀಗಳು ಯೋಗಿ ಜಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕುರಿತು ಯೋಚಿಸಲಾಯಿತು. ಅದಕ್ಕೆ ಅನುಸಾರವಾಗಿ ಅರ್ಜಿ ಸಲ್ಲಿಸಿ, ಕಳೆದ ವರ್ಷ ಖಾಸಗಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದುಕೊಳ್ಳಲಾಯಿತು. ಇದಕ್ಕಾಗಿ ಹೆಚ್ಚುವರಿಯಾಗಿ 25 ಎಕರೆ ಭೂಮಿಯನ್ನು ವಿದ್ಯಾಪೀಠದ ವಿಸ್ತರಣೆಗಾಗಿ ಹಂಚಿಕೆ ಮಾಡಲಾಗಿದೆ. ಈ ವಿಸ್ತರಣೆಯು ಮುಕ್ತ ಕೋರ್ಸ್‌ಗಳು, ಉದ್ಯೋಗಾವಕಾಶ ಮತ್ತು ಸಹಭಾಗಿತ್ವದಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗಲಿದೆ. ಕೇಂದ್ರ ಸಚಿವರ ಭೇಟಿಯು ಮಠದ ಈ ವೈವಿಧ್ಯಮಯ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳಿಗೆ ಇನ್ನಷ್ಟು ಗಮನ ಸೆಳೆಯಿತು.
‘ಧುರಂಧರ್ 2’ (Dhurandhar 2) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾದ ಸಾಮಾಜಿಕ ಜಾಲತಾಣದಲ್ಲಿ ಸಹ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿನಿಮಾದ ಪರವಾಗಿ ಕೆಲವರು ಮತ್ತು ಸಿನಿಮಾನಲ್ಲಿ ತೋರಿಸಲಾಗಿರುವ ರಾಜಕೀಯದ ಇನ್ನು ಕೆಲವರು ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ರಣ್ವೀರ್ ಸಿಂಗ್ ಅವರ ಚಿತ್ರವೊಂದು ವೈರಲ್ ಆಗಿತ್ತು, ಸಿಖ್ ವೇಷದಲ್ಲಿರುವ ರಣ್ವೀರ್ ಸಿಂಗ್ ಸಿಗರೇಟು ಸೇದುತ್ತಿರುವ ಫೋಟೊ ಅದಾಗಿತ್ತು. ಇದರ ವಿರುದ್ಧ ಸಿಖ್ ಧರ್ಮೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ನಿರ್ದೇಶದ ಆದಿತ್ಯ ಧರ್ ಸ್ಪಷ್ಟನೆ ನೀಡಿದ್ದಾರೆ.
ರಣ್ವೀರ್ ಸಿಂಗ್, ಸಿಖ್ ಪೇಟ ಧರಿಸಿ ಧೂಮಪಾನ ಮಾಡುತ್ತಿರುವಂತೆ ಸೃಷ್ಟಿಸಲಾದ ಚಿತ್ರವು ಸಂಪೂರ್ಣವಾಗಿ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಆದಿತ್ಯ ಧರ್ ಹೇಳಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಸಿನಿಮಾದ ದೃಶ್ಯಗಳನ್ನು, ಚಿತ್ರಗಳನ್ನು ತಿರುಚಲಾಗುತ್ತಿದೆ ಎಂದು ಆದಿತ್ಯ ಧರ್ ಹೇಳಿದ್ದಾರೆ. ತಮಗೆ ಸಿಖ್ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ತಮಗೆ ಅಪಾರ ಗೌರವವಿದ್ದು, ಚಿತ್ರದಲ್ಲಿ ಯಾವುದೇ ಪಾತ್ರವನ್ನು ಅತೀ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಚಿತ್ರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇದು ದುರುದ್ದೇಶದಿಂದ ಕೂಡಿದ ಕೃತ್ಯವಾಗಿದೆ. ಪ್ರೇಕ್ಷಕರು ಕೇವಲ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಮತ್ತು ಇಂತಹ ಸುಳ್ಳು ಸುದ್ದಿಗಳ ವಿರುದ್ಧ ಜಾಗೃತರಾಗಿರಬೇಕು ಎಂದು ಅವರು ವಿನಂತಿಸಿದ್ದಾರೆ. ಈಗ ಹರಿದಾಡುತ್ತಿರುವ ಫೋಟೊ, ಸಿನಿಮಾದ ಭಾಗವಲ್ಲ ಅಥವಾ ಸಿನಿಮಾದ ಪ್ರಚಾರದ ಭಾಗವೂ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ ಮತ್ತು ಇದನ್ನು ಕಾನೂನುಬದ್ಧವಾಗಿ ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಆದಿತ್ಯ ಧರ್ ಹೇಳಿದ್ದಾರೆ.
‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಗಳಿಸಿದ್ದು, ಅದರ ಬೆನ್ನಲ್ಲೆ ಸಿನಿಮಾಕ್ಕೆ ಕೆಲ ವಿರೋಧಿಗಳು ಸಹ ಹುಟ್ಟುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಹಲವು ರೀತಿಯ ಟ್ರೋಲ್ ವಿಡಿಯೋಗಳೂ, ಟ್ರೋಲ್ ಇಮೇಜುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಕೆಲವರು ಸಿನಿಮಾದ ಚಿತ್ರಗಳನ್ನು ರಸ್ತೆ ಸುರಕ್ಷತೆ ಇನ್ನಿತರೆ ಜಾಗೃತಿ ಕಾರ್ಯಕ್ರಮಗಳಿಗೂ ಸಹ ಬಳಸುತ್ತಿದ್ದಾರೆ.
ಕೊಪ್ಪಳ, ಮಾರ್ಚ್ 26:ಮದುವೆ ಎಂಬುದು ಎರಡು ಕುಟುಂಬಗಳ ನಡುವೆ ಹೊಸ ಸಂಬಂಧ ಬೆಸೆಯುವ ಸೇತುವೆ. ಬಲಗಾಲಿಟ್ಟು ಪತಿ ಮನೆಗೆ ಬರುವವಳು ತಮ್ಮ ಮನೆಯನ್ನು ಬೆಳಗಿಸುತ್ತಾಳೆ. ವಂಶೋದ್ಧಾರಕ್ಕೆ ಆಕೆ ಕಾರಣವಾಗುತ್ತಾಳೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಇತ್ತೀಚಿಗೆ ಇವುಗಳಿಗೆ ವಿರುದ್ಧ ಎಂಬಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಮದುವೆಯಾಗಿ ಕೆಲ ದಿನಗಳ ಒಳಗೆಯೇ ನಾನಾ ಕಾರಣಕ್ಕೆ ದಾಂಪತ್ಯ ಸಂಬಂಧ ಹಳಸಿ ಅದೆಷ್ಟೋ ಕುಟುಂಬಗಳು ಸರ್ವನಾಶ ಆದ ಉದಾಹರಣೆಯನ್ನೂ ಕೇಳಿದ್ದೇವೆ. ಇಂತಹುದ್ದೇ ಮನಕಲಕುವ ಘಟನೆಯೊಂದೀಗ ಕರ್ನಾಟಕದ ಕೊಪ್ಪಳದಲ್ಲಿ ನಡೆದಿದೆ.
ಮೂಲತಃ ಕೊಪ್ಪಳದ ಗೌರಿ ಅಂಗಳ ನಿವಾಸಿ ನಾಗರಾಜ್ ಎಂಬವರ ವಿವಾಹ ರಾಯಚೂರ ಜಲ್ಲೆಯ ಸಿಂದನೂರಿನ ಸಂಜನಾ ಎಂಬಾಕೆಯ ಜೊತೆ ಫೆಬ್ರವರಿ 8ರಂದು ನಡೆದಿತ್ತು. ಎರಡೂ ಕುಟುಂಬಳ ಪರಸ್ಪರ ಒಪ್ಪಿಗೆಯ ಮೇಲೆಯೇ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಮದುವೆಕಾರ್ಯ ನೆರವೇರಿತ್ತು. ಆ ಬಳಿಕ ದಂಪತಿ ನಾಗರಾಜ್ ಅವರ ಮನೆಯ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಈ ನಡುವೆ ಮಾರ್ಚ್ 21ರ ರಾತ್ರಿ ರಾತ್ರಿ 8.30ರ ಸುಮಾರಿಗೆ ಸಂಜನಾ ತನಗೆ ಆರೋಗ್ಯ ಸರಿ ಇಲ್ಲದ ಕಾರಣ ಔಷಧ ತರುವಂತೆ ಪತಿ ನಾಗರಾಜ್ಗೆ ತಿಳಿಸಿದ್ದಾಳೆ. ಹೀಗಾಗಿ ಮಾತ್ರೆ ತರಲೆಂದು ತೆರಳಿದ್ದ ನಾಗರಾಜ್ 15 ನಿಮಿಷಗಳ ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದರೆ ಆ ವೇಳೆ ಹೆಂಡತಿ ಸಂಜನಾ ಮನೆಯಲ್ಲಿ ಇಲ್ಲದಿರೋದು ಗಮನಕ್ಕೆ ಬಂದಿದೆ. ಹೀಗಾಗಿ ಕೆಳ ಮಹಡಿಯಲ್ಲಿರುವ ಸಹೋದರನ ಮನೆಗೆ ತೆರಳಿ ನಾಗರಾಜ್ ಪತ್ನಿ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆಕೆ ಇಲ್ಲಿಗೆ ಬಂದಿಲ್ಲ ಎಂಬ ಉತ್ತರ ದೊರೆತಿದೆ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆಕೆಯ ಬಗ್ಗೆ ಮಾಹಿತಿ ಸಿಗದ ಕಾರಣ ಪತಿ ನಾಗರಾಜ್ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ನಡುವೆ ಮನಕಲಕುವ ಘಟನೆಯೊಂದು ನಡೆದಿದೆ. ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಜನಾ ವಿಚಾರವಾಗಿ ಅವರು ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗಿದೆ. ಇನ್ನು ನಾಪತ್ತೆಯಾಗಿರುವ ನವ ವಿವಾಹಿತೆ ತವರು ಮನೆಗೂ ತೆರಳಿಲ್ಲ ಎನ್ನಲಾಗಿದ್ದು, ಆಕೆಯ ಸಹೋದರ ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಸಂಜನಾ ಕೈಯಲ್ಲಿ ರವಿ ಎಂಬ ಟ್ಯಾಟೂ ಇರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಟಾಲಿವುಡ್ ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಅವರ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುತ್ತಾರೆ. ಅವರು ಪ್ರತಿ ಸಂಕ್ರಾಂತಿಗೆ ಒಂದು ಚಿತ್ರದೊಂದಿಗೆ ಬರುತ್ತಾರೆ ಮತ್ತು ಬ್ಲಾಕ್ಬಸ್ಟರ್ ಹಿಟ್ಗಳನ್ನು ಪಡೆಯುತ್ತಾರೆ. ಅನಿಲ್ ಇಲ್ಲಿಯವರೆಗೆ ಮಾಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಮಧ್ಯಮ ಶ್ರೇಣಿಯ ನಾಯಕರಿಂದ ಪ್ರಾರಂಭಿಸಿ, ಅನಿಲ್ ರವಿಪುಡಿ ಸ್ಟಾರ್ ನಾಯಕರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ. ಬ್ಲಾಕ್ಬಸ್ಟರ್ಗಳನ್ನು ಪಡೆದಿದ್ದಾರೆ. ಕಳೆದ ಸಂಕ್ರಾಂತಿಗೆ ಅನಿಲ್ ರವಿಪುಡಿ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರದೊಂದಿಗೆ ಬ್ಲಾಕ್ಬಸ್ಟರ್ ಹಿಟ್ ಪಡೆದರು. ಈ ಸಂಕ್ರಾಂತಿಗೆ ‘ಮನ ಶಂಕರ ವರಪ್ರಸಾದ ಗಾರು’ ಚಿತ್ರದೊಂದಿಗೆ ಅನಿಲ್ ಮತ್ತೊಂದು ಬ್ಲಾಕ್ಬಸ್ಟರ್ ಪಡೆದರು. ಈಗ ಅನಿಲ್ ಮತ್ತೊಮ್ಮೆ ವೆಂಕಟೇಶ್ ಜೊತೆ ಒಂದು ಚಿತ್ರ ಮಾಡಲಿದ್ದಾರೆ. ಈ ಬಾರಿ ಅನಿಲ್ ಪೂರ್ಣ ಪ್ರಮಾಣದ ಮಲ್ಟಿ-ಸ್ಟಾರರ್ ಚಿತ್ರದೊಂದಿಗೆ ಬರಲಿದ್ದಾರೆ. ಕಲ್ಯಾಣ್ ರಾಮ್ ಈ ಚಿತ್ರದಲ್ಲಿ ವೆಂಕಟೇಶ್ ಜೊತೆ ನಟಿಸಲಿದ್ದಾರೆ.
ಅನಿಲ್ ಮತ್ತೊಮ್ಮೆ ಕಲ್ಯಾಣ್ ರಾಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಏತನ್ಮಧ್ಯೆ, ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ನಟಿಸುವಂತೆ ಕೇಳಲಾಗಿದೆ. ಕೀರ್ತಿ ಸುರೇಶ್ ಬಹುತೇಕ ಫಿಕ್ಸ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವೆಂಕಟೇಶ್ ಜೊತೆ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಈಗ ಕಲ್ಯಾಣ್ ರಾಮ್ ಜೊತೆ ಯುವ ನಾಯಕಿಯನ್ನು ಅನಿಲ್ ರವಿಪುಡಿ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಶೆಟ್ಟಿಗೆ ಅವಕಾಶ ನೀಡಿದ್ದು ಅನಿಲ್ ರವಿಪುಡಿ.
ಆ ನಾಯಕಿ ಬೇರೆ ಯಾರೂ ಅಲ್ಲ, ಯುವ ನಟಿ ಕೃತಿ ಶೆಟ್ಟಿ. ಉಪ್ಪೇನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ, ಆ ನಂತರ ಸರಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೃತಿ ಶೆಟ್ಟಿಗೆ ಹಿಟ್‌ಗಳಿಗಿಂತ ಫ್ಲಾಪ್‌ಗಳೇ ಹೆಚ್ಚು. ಸರಣಿ ಸಿನಿಮಾಗಳನ್ನು ಮಾಡಿದರೂ, ಅವರಿಗೆ ಸಿಕ್ಕಿದ್ದು ಕೇವಲ ಮೂರು ಹಿಟ್‌ಗಳು.
ಆ ನಂತರ ಅವರು ಮಾಡಿದ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ. ಈಗ ಈ ನಟಿ ಅನಿಲ್ ಅವರ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟನೆ ಬರಲಿದೆ. ಇದು ನಿಜವಾಗಿದ್ದರೆ, ಅನಿಲ್ ಕೃತಿ ಶೆಟ್ಟಿಗೆ ಯಶಸ್ಸು ನೀಡಲಿದ್ದಾರೆ ಎಂಬುದು ಪ್ರೇಕ್ಷಕರಿಗೆ ಖಚಿತ. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.