ಇಲಿಗಳ ಕಾಟದಿಂದ ಶಾಶ್ವತ ಪಡೆಯಲು ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರಸಿ – Kannada News | Here is an easy solution to get permanent relief from rat infestation

ಬಹುತೇಕರ ಮನೆಗಳಲ್ಲಿ ಹಲ್ಲಿ, ಸೊಳ್ಳೆ, ಇಲಿಗಳ (rats) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಈ ಇಲಿಗಳು ಅಡುಗೆ ಸಾಮಾಗ್ರಿಗಳ ಜೊತೆಗೆ ಬಟ್ಟೆ, ಮನೆಯಲ್ಲಿರುವ ಇತರೆ ವಸ್ತುಗಳನ್ನು ಸಹ ಹಚ್ಚಿ ಹಾಳು ಮಾಡಿ ಬಿಡುತ್ತವೆ. ಇವುಗಳ ಈ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಉಪಯೋಗ ಮಾಡುತ್ತಾರೆ, ಇನ್ನೂ ಕೆಲವು ಹಲವು ಬಗೆಯ ಮನೆ ಮದ್ದುಗಳನ್ನು ಸಹ ಪ್ರಯೋಗ ಮಾಡುತ್ತಾರೆ. ಆದ್ರೆ ಇವುಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದ್ರೆ, ನೆಲ ಒರೆಸುವ ನೀರಿಗೆ ಕರ್ಪೂರವನ್ನು ಸೇರಿಸಿ ಮನೆಯನ್ನು ಕ್ಲೀನ್‌ ಮಾಡಿ. ಈ ಒಂದು ಸರಳ ಪರಿಹಾರದಿಂದ ಯಾವುದೇ ಹೆಣಗಾಟವಿಲ್ಲದೆ ಸುಲಭವಾಗಿ ಇಳಿಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಇಲಿಗಳನ್ನು ಓಡಿಸಲು ಕರ್ಪೂರ ಹೇಗೆ ಸಹಾಯ ಮಾಡುತ್ತದೆ?

ಇಲಿಗಳನ್ನು ಮನೆಯಿಂದ ಓಡಿಸಲು ಕರ್ಪೂರ ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದಾಗಿದೆ. ಕರ್ಪೂರವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ, ಇದನ್ನು ಇಲಿಗಳು ಇಷ್ಟಪಡುವುದಿಲ್ಲ. ಅವು ಅದರ ಬಲವಾದ ವಾಸನೆಯನ್ನು ಸಹಿಸುವುದಿಲ್ಲ ಮತ್ತು ತಕ್ಷಣವೇ ಆ ಪ್ರದೇಶದಿಂದ ಓಡಿಹೋಗಲು ಪ್ರಯತ್ನಿಸುತ್ತವೆ. ಇದು ಇಲಿಗಳನ್ನು ಓಡಿಸಲು ನೈಸರ್ಗಿಕ ಪರಿಹಾರ ಮಾತ್ರವಲ್ಲದೆ ಸುರಕ್ಷಿತ ಪರಿಹಾರವು ಹೌದು.

ಇಲಿಗಳನ್ನು ಓಡಿಸಲು ಕರ್ಪೂರವನ್ನು ಹೇಗೆ ಬಳಸಬೇಕು?

ನೀವು ನೆಲ ಒರೆಸುವ ನೀರಿಗೆ ನೀರಿಗೆ 4-5 ತುಂಡು ಕರ್ಪೂರವನ್ನು ಸೇರಿಸಿ, ಈ ನೀರನ್ನು ಬಳಸಿ ಇಡೀ ಮನೆಯನ್ನು ಒರೆಸಿ. ಕರ್ಪೂರ ಕಡಿಮೆ ಇದ್ದರೆ ಅದಕ್ಕೆ ನೀವು ಸ್ವಲ್ಪ ಪುದೀನಾ ಎಣ್ಣೆಯನ್ನೂ ಸೇರಿಸಬಹುದು.  ಇಲಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳಾದ ಅಡುಗೆಮನೆ, ಬಾಗಿಲು, ಕಿಟಕಿಗಳ ಬಳಿ ಚೆನ್ನಾಗಿ ಸ್ವಚ್ಛಗೊಳಿಸಿ, ನೀವು ನಿಮ್ಮ ಮನೆಯನ್ನು ಕರ್ಪೂರ ಬೆರೆಸಿದ ನೀರಿನಿಂದ ಒರೆಸಿದ ತಕ್ಷಣ, ಅದರ ವಾಸನೆಯು ಇಲಿಗಳನ್ನು ಕೆರಳಿಸಲು ಪ್ರಾರಂಭಿಸುತ್ತದೆ. ಅವು ಶೀಘ್ರದಲ್ಲೇ ಅಲ್ಲಿಂದ ಓಡಿಹೋಗುತ್ತವೆ. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಇಲಿಗಳ ಕಾಟದಿಂದ ಸುಲಭವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಬಯಸಿದರೆ ನೀವು ಇಲಿಗಳು ಕಂಡುಬರುವ ಇಂತಹ ಸ್ಥಳಗಳಲ್ಲಿ ಸಣ್ಣ ತುಂಡು ಕರ್ಪೂರವನ್ನು ಇಡಬಹುದು.

ಇದನ್ನೂ ಓದಿ: ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ

ಕರ್ಪೂರದ ಇತರೆ ಪ್ರಯೋಜನಗಳೇನು?

ಕರ್ಪೂರವು ಇಲಿಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲದೆ, ಮನೆಗೆ ಸುವಾಸನೆಯನ್ನು ಕೂಡ ನೀಡುತ್ತದೆ. ಇದರ ಪರಿಮಳವು ತಾಜಾತನದ ಭಾವನೆಯನ್ನು ಸೃಷ್ಟಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಯಿಂದ ದೂರವಿಡುತ್ತದೆ. ಇದು ನೈಸರ್ಗಿಕ ಮತ್ತು ರಾಸಾಯನಿಕ-ಮುಕ್ತ ವಿಧಾನವಾಗಿದೆ. ಕರ್ಪೂರ ಇಲಿಗಳನ್ನು ಮಾತ್ರವಲ್ಲದೆ ಕೀಟಗಳ ಕಾಟದಿಂದಲೂ ಪರಿಹಾರ ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ, ಸ್ಥಳದಲ್ಲೇ ಪ್ರಾಣ ಬಿಟ್ಟ ಇಬ್ಬರು ಯುವಕರು – Kannada News | Machohalli Fatal Crash: Bolero Swift Collision Kills Two Young Men

ಬೆಂಗಳೂರು,ಜ.5: ಬೊಲೆರೋ ವಾಹನವೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಇಬ್ಬರ ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಬಳಿ ನಡೆದಿದೆ. ಗಗನ್ (27), ದರ್ಶನ್ (26) ಮೃತರು ಎಂದು ಹೇಳಲಾಗಿದೆ. ಚನ್ನರಾಯಪಟ್ಟಣದ ಮೂಲದ ಗಗನ್ ಮಾದನಾಯಕನಹಳ್ಳಿ ಖಾಸಗಿ ಬಾರ್​​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ದರ್ಶನ್ ಕೋಳಿ ಸಪ್ಲೈ ಮಾಡುವ ವಾಹನ ಡ್ರೈವರ್ ಆಗಿದ್ದ. ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಸ್ನೇಹಿತನ ರೂಂಗೆ ತೆರಳುತ್ತಿದ್ದ ವೇಳೆ, ಮಾಗಡಿ ರಸ್ತೆಯ ಮಾಚೋಹಳ್ಳಿ ಬೊಲೆರೋ ವಾಹನ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಮೃತ ದೇಹ ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಮರಣೋತ್ತರ ಪರೀಕ್ಷೆ ಕಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Video: ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಉದ್ಯಮಿ ಮುಖೇಶ್ ಅಂಬಾನಿ – Kannada News | Mukesh Ambani Duo Seeks Blessings at Salangpur’s Kashtbhanjan Hanuman Temple and makes Rs 5 Crore Contribution

ಮುಂಬೈ, ಜನವರಿ 05: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ(Mukesh Ambani) ತಮ್ಮ ಮಗ ಅನಂತ್ ಅಂಬಾನಿ ಜತೆ ಕಷ್ಟಭಂಜನ್ ದೇವ್ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ 5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ದೇಣಿಗೆಯನ್ನು ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯಗಳಿಗಾಗಿ ಬಳಸಲಾಗುತ್ತದೆ.

ಜನವರಿ 2 ರಂದು ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅನಂತ್ ಅವರು ಪ್ರಭಾಸ್ ಪಠಾಣ್‌ನಲ್ಲಿರುವ ಸೋಮನಾಥ ಮಹಾದೇವ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ್ದರು. ಅಂಬಾನಿ ಕುಟುಂಬವು ಇಲ್ಲಿ ಶಿವನಿಗೆ ಜಲಶುದ್ಧೀಕರಣ ಕಾರ್ಯಕ್ರಮವನ್ನು ನಡೆಸಿತ್ತು. ಸೋಮನಾಥಕ್ಕೆ ಭೇಟಿ ನೀಡಿದ ತಕ್ಷಣ, ಅವರು ನೇರವಾಗಿ ಸಾರಂಗಪುರ ಹನುಮಾನ್ ದೇವಸ್ಥಾನಕ್ಕೆ ಹೋದರು. ಕಷ್ಟಭಂಜನ ದೇವ್ ಅವರನ್ನು ತೊಂದರೆ ನಿವಾರಕ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂಬಾನಿ ಕುಟುಂಬವು ಆ ದೇವರ ಮೇಲೆ ಆಳವಾದ ನಂಬಿಕೆಯನ್ನು ಇಟ್ಟಿದೆ.

ಈ ದೇವಸ್ಥಾನವು ಬೋಟಾಡ್ ಜಿಲ್ಲೆಯ ಸಲಾಂಗ್​ಪರದಲ್ಲಿದೆ. ಅಲ್ಲಿ ಮುಖೇಶ್ ಅವರಿಗೆ ಹಾರ ಹಾಕಿ ಆಶೀರ್ವಾದವಾಗಿ ಹನುಮಾನ್ ದಾದಾ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ, ಮುಖೇಶ್ ಅಂಬಾನಿ ದೇವಾಲಯದ ಆವರಣದಲ್ಲಿ ಗೋಪೂಜೆಯನ್ನು ಸಹ ನೆರವೇರಿಸಿದರು.

ಮತ್ತಷ್ಟು ಓದಿ: ಭಾರತದ ಅತ್ಯಂತ ಶ್ರೀಮಂತರು ಇವರು; ರೋಷನಿಗೆ 3ನೇ ಸ್ಥಾನ; ಬೆಂಗಳೂರಿಗೂ 3ನೇ ಸ್ಥಾನ

ಮುಖೇಶ್ ಅಂಬಾನಿ ಅವರು ಸಲಾಂಗ್‌ಪುರ ಹನುಮಾನ್‌ಜಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ 5 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಈ ದೇಣಿಗೆಯು ದೇವಾಲಯದ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಯಾತ್ರಾರ್ಥಿಗಳಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ – Kannada News | Little boy cradles dog in lap like a baby

ಪುಟಾಣಿಗಳೇ (Little kids) ಹಾಗೆ, ಮನೆಯಲ್ಲಿ ಶ್ವಾನಗಳಿದ್ದರೆ ಅವುಗಳ ಜತೆಗೆ ಹೆಚ್ಚು ಸಮಯ ಕಳೆಯುತ್ತವೆ. ಈ ಮನೆಯ ಮುದ್ದಿನ ಶ್ವಾನಗಳು (dogs) ಪುಟ್ಟ ಮಕ್ಕಳಿಗೆ ಕಾವಲಾಗಿರುವುದನ್ನು ನೀವು ನೋಡಿರುತ್ತೀರಿ. ಆದರೆ ಪುಟ್ಟ ಹುಡುಗನೊಬ್ಬ ನಾಯಿಮರಿಯನ್ನು ಮಡಿಲಿನಲ್ಲಿ ಮಗುವಿನಂತೆ ಮಲಗಿಸಿ  ಮುದ್ದಿಸಿರುವ ದೃಶ್ಯ ನೆಟ್ಟಿಗರ ಕಣ್ಮನ ಸೆಳೆದಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಂಜುನಾಥ್ ಲೋಕಪುರ್ (manjunath_lokapur) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗನ ಮಡಿಲಿನಲ್ಲಿ ಶ್ವಾನದ ಮರಿಯೊಂದು ಮಲಗಿರುವುದನ್ನು ಕಾಣಬಹುದು. ಹೌದು, ಬೀದಿ ಬದಿಯಲ್ಲಿ ಕುಳಿತಿರುವ ಪುಟ್ಟ ಬಾಲಕನು ಚಳಿಯಾಗದಂತೆ ನಾಯಿಮರಿಗೆ ಟವೆಲ್ ಸುತ್ತಿದ್ದಾನೆ. ಈ ನಾಯಿಮರಿಯೂ ಪುಟ್ಟ ಹುಡುಗನ ಮಡಿಲಿನಲ್ಲಿ ಹಾಯಾಗಿ ಮಲಗಿರುವುದನ್ನು ಕಾಣಬಹುದು. ಈ ವೇಳೆ ದಾರಿಹೋಕರೊಬ್ಬರು ಈ ಪುಟ್ಟ ಹುಡುಗನ ಕೈಗೆ ಒಂದಿಷ್ಟು ಕಾಸು ಕೊಟ್ಟು ಮಾತನಾಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ತನ್ನ ಟಿಫಿನ್ ಬಾಕ್ಸ್‌ನಲ್ಲಿದ್ದ ಊಟವನ್ನು ಕೊಟ್ಟು ಬೀದಿನಾಯಿಯ ಹಸಿವು ನೀಗಿಸಿದ ಪುಟ್ಟ ಬಾಲಕಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಮುಗ್ಧ ಮನಸ್ಸುಗಳು ಎಂದು ಹೇಳಿದರೆ, ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವರತ್ತಲೇ ಕುರ್ಚಿ ತೂರಿದ ‘ಕೈ’ ಕಾರ್ಯಕರ್ತರು! – Kannada News | Protocol Row: Congress Workers Create Drama at Hitnal Rail Overpass Foundation Stone–Laying

ಶಿಲಾನ್ಯಾಸ ಕಅರ್ಯಕ್ರಮದ ವೇಳೆ ಕುರ್ಚಿ ತೂರಾಟ

ಕೊಪ್ಪಳ, ಜನವರಿ 05: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸ ಕಾರ್ಯಕ್ರಮದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್​​ ಕಾರ್ಯಕರ್ತರು ರೋಶಾವೇಷ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲದಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕುರ್ಚಿ ಎಸೆದು ರಂಪಾಟ ನಡೆಸಿದ್ದಾರೆ. ಈ ಹಿನ್ನೆಲೆ ಕೇವಲ 5 ನಿಮಿಷಗಳಕಾಲ ಸ್ಥಳದಲ್ಲಿದ್ದು, ಬಳಿಕ ವಿ. ಸೋಮಣ್ಣ ತೆರಳಿದ್ದಾರೆ.

ಸೋಮಣ್ಣ ಮೇಲೂ ಕುರ್ಚಿ ತೂರಾಟ

ಉದ್ರಿಕ್ತ ಕಾಂಗ್ರೆಸ್​​ ಕಾರ್ಯಕರ್ತರು ಕೇಂದ್ರ ಸಚಿವ ಸೋಮಣ್ಣ ಅವರತ್ತಲೂ ಕುರ್ಚಿ ತೂರಿದ್ದಾರೆ. ಶಂಕು ಸ್ಥಾಪನೆ ಮುಗಿಸಿ ಅವರು ಹೊರಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ವೇಳೆ ಅಂಗರಕ್ಷಕರು ಸೋಮಣ್ಣರತ್ತ ಬರುತ್ತಿದ್ದ ಕುರ್ಚಿಗಳನ್ನ ತಡೆದಿದ್ದಾರೆ. ಇದರಿಂದ ಸಂಭವನೀಯ ಅನಾಹುತ ತಪ್ಪಿದೆ.

ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ

ಘಟನೆ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಸೋಮಣ್ಣ, ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಆದರೂ ಕಾರ್ಯಕರ್ತರ ಮೂಲಕ ಗಲಾಟೆ ಮಾಡಿಸಿದ್ದಾರೆ. ಸುಮಾರು 27 ಕೋಟಿ. ರೂಪಾಯಿ ವೆಚ್ಚದ ಹಿಟ್ನಾಳ್, ಮುನಿರಾಬಾದ್, ಗಿಣಗೇರಾ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ – Kannada News | Mother breaks down in tears after hearing son’s promise to pay off debt

ಸಾಲ ಮಾಡಿಯಾದ್ರು ಮಕ್ಕಳಿಗೆ ಒಂದೊಳ್ಳೆ ಬದುಕು ಕಟ್ಟಿಕೊಡಲು ಹೆತ್ತವರು ಶ್ರಮಿಸುತ್ತಾರೆ. ಕಷ್ಟ ಪಟ್ಟು ಓದಿ ಒಂದೊಳ್ಳೆ ಉದ್ಯೋಗ ಪಡೆದು ಕೊಂಡು ಹೆತ್ತವರಿಗೆ (Parents) ಹೆಗಲಾದರೆ ಅದಕ್ಕಿಂತ ಖುಷಿ ಬೇರೇನಿದೆ. ಆದರೆ ಇಲ್ಲೊಬ್ಬ 17 ವರ್ಷದ ಬಾಲಕನು (young man) ತನ್ನ ತಾಯಿಗೆ ಸರ್ಪ್ರೈಸ್ ನೀಡಿದ್ದಾನೆ. ಹೌದು, ತನ್ನ ತಾಯಿಯ 10,000 ಪೌಂಡ್ (ಸುಮಾರು 12 ಲಕ್ಷ ರೂ) ಸಾಲವನ್ನು ತೀರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಒಂದಿಷ್ಟು ಹಣವನ್ನು ತಾಯಿಯ ಕೈಯಲ್ಲಿಟ್ಟು ಸಾಲ ತೀರಿಸಲು ಹೇಳಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮನ್ ದುಗ್ಗಲ್ (@aman.jkd) ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಕ್ಲಿಪ್ ಇದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನನ್ನ ಅಮ್ಮ ನನಗಾಗಿ ತನ್ನಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದಾರೆ ಹಾಗೂ ಮಾಡಿದ್ದಾರೆ. ನಾನು ಅಂತಿಮವಾಗಿ ಅವಳನ್ನು ನೋಡಿಕೊಳ್ಳಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಈ ಭಾವನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ, ಈ ರೀತಿ ಕ್ಷಣವನ್ನು ಸೃಷ್ಟಿಸಲು ತುಂಬಾ ಪ್ರಯತ್ನ ಪಟ್ಟೆ. ಒಂದು ವರ್ಷದ ಬಳಿಕ ಅದು ಸಂಭವಿಸಿತು. ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ. ದೇವರಿಗೆ, ನನ್ನ ಅಮ್ಮನಿಗೆ ಮತ್ತು ನನಗೂ ಸಹ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

17ರ ಹರೆಯದ ಬಾಲಕ ತನ್ನ ತಾಯಿಗೆ ತಾನು ಮಾಡಿದ ಕೆಲಸವನ್ನು ರಿವೀಲ್ ಮಾಡುವ ಮೊದಲು ತಾಯಿಯ ಮೇಲಿನ ತನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ತನ್ನ ಜೀವನದ ಅತ್ಯಂತ ವಿಶೇಷ ಮಹಿಳೆ ಎನ್ನುತ್ತಾ ನಾನು ಏನನ್ನೋ ಹೇಳಲು ಬಯಸುತ್ತೇನೆ ಎಂದು ಮಗನು ಹೇಳುತ್ತಾನೆ. ತಾಯಿಯೂ ನಾನೂ ನಿನ್ನನ್ನು ಪ್ರೀತಿಸುತ್ತೇನೆ ಆದರೆ ನಾನು ಯಾಕೆ ಅಳುತ್ತಿದ್ದೇನೆಂದು ನನಗೂ ತಿಳಿದಿಲ್ಲ” ಎಂದು ಹೇಳುವುದನ್ನು ನೋಡಬಹುದು. ನಂತರ ಅಮನ್ ಅಮ್ಮನ ಬಳಿ ಕಣ್ಣು ತೆರೆಯಲು ಹೇಳಿ ತನ್ನ ಕೈಯಲ್ಲಿದ್ದ ಹಣವನ್ನು ಅವಳಿಗೆ ನೀಡುತ್ತಾನೆ. ಈ ಹಣ ನಿನ್ನ ಎಲ್ಲಾ ಸಾಲಗಳಿಗೆ. ಹಾಗೂ ಇಂದಿನಿಂದ ಪ್ರತಿ ತಿಂಗಳು, ನಾನು ನಿನ್ನ ಎಲ್ಲಾ ಬಿಲ್‌ಗಳನ್ನು ಪಾವತಿಸಬಲ್ಲೆ. ನಾನು ಭರವಸೆ ನೀಡುತ್ತೇನೆ ಎಂದು ಮಗ ಹೇಳುತ್ತಿದ್ದಂತೆ ತಾಯಿ ಕಣ್ಣೀರು ಸುರಿಸುತ್ತಾ ಅವನನ್ನು ಬಿಗಿಯಾಗಿ ಅಪ್ಪಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ:ಮಗಳ ಕಾಳಜಿಯುತ ಮಾತು ಕೇಳಿ ಭಾವುಕನಾದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವಿಡಿಯೋ ಅದ್ಭುತವಾಗಿದೆ. ಈ ಕ್ಷಣವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ಕೇವಲ 7 ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ಇಂತಹದ್ದನ್ನು ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ತಾಯಿಯ ಸಾಲಕ್ಕೆ ಹೆಗಲಾಗಿರುವುದು ಖುಷಿ ತಂದಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:58 pm, Mon, 5 January 26

Source link

ಚಿಕ್ಕಮಗಳೂರು: ರೋಗಿ ಸ್ಟ್ರೆಚರ್​ನಲ್ಲಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ! ಆಮೇಲಾಗಿದ್ದು ದುರಂತ – Kannada News | Doctor Busy on Mobile While Patient Suffers on Stretcher at Chikkamagaluru Government Hospital, Patient Dies

ಚಿಕ್ಕಮಗಳೂರು, ಜನವರಿ 5: ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಭಾರೀ ನಿರ್ಲಕ್ಷ್ಯದ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ಮಂಜುನಾಥ್ ಎಂಬ ರೋಗಿಗೆ ತುರ್ತು ಚಿಕಿತ್ಸಾ ಘಟಕದಲ್ಲೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅವರು ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುನಾಥ್ ಅವರನ್ನು ಶನಿವಾರ ಸಂಜೆಯೇ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತುರ್ತು ಚಿಕಿತ್ಸಾ ಘಟಕದಲ್ಲಿ ಸ್ಟ್ರೆಚರ್ ಮೇಲೆ ಮಲಗಿದ್ದರೂ ಬೆಳಗ್ಗೆಯವರೆಗೆ ಸೂಕ್ತ ಚಿಕಿತ್ಸೆ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರೋಗಿ ಉಸಿರಾಡಲು ಪರದಾಡುತ್ತಿದ್ದಾಗ, ಅಲ್ಲಿದ್ದ ವೈದ್ಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು ಎಂಬ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆದ ನಂತರ ಆಸ್ಪತ್ರೆಯ ಸಿಬ್ಬಂದಿ ಎಚ್ಚೆತ್ತುಕೊಂಡು ಮಂಜುನಾಥ್‌ಗೆ ಚಿಕಿತ್ಸೆ ನೀಡಿದ್ದು, ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಗಾಗಲೇ ತಡವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಘಟನೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದ್ದು, ಜಿಲ್ಲಾಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲೂ ರೋಗಿಗೆ ಚಿಕಿತ್ಸೆ ನೀಡದಿರುವುದು ಅಮಾನವೀಯ ನಡೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

16 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಫೈನಲ್ ಸೋಲು..! – Kannada News | MI franchise lost a T20 final after 16 long years

ಇನ್ನು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಟ್ರೋಫಿ ಗೆದ್ದಿದ್ದು 2013 ರಲ್ಲಿ. ಆ ಬಳಿಕ 2015, 2017, 2019 ಮತ್ತು 2020 ರಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿಕೊಂಡಿದೆ.

Source link

ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ – Kannada News | Krishna Byregowda Slams BJP Over Politics in Kogilu Demolition

ಬೆಂಗಳೂರು, ಜನವರಿ 05: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವಿನ ಸಂಬಂಧ ವಿಪಕ್ಷ ಬಿಜೆಪಿ ಆರೋಪಗಳಿಗೆ ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ. ಒತ್ತುವರಿ ನಾವೇ ಮಾಡಿಸಿದ್ದಾಗಿದ್ರೆ ಯಾಕೆ ತೆರವು ಮಾಡ್ತಿದ್ವಿ? ಆರೋಪ ಮಾಡೋರು ಕಾಮನ್ ಸೆನ್ಸ್ ಇಟ್ಕೊಂಡು ಮಾತಾಡಬೇಕು ಎಂದಿದ್ದಾರೆ. ಅಲ್ಲದೆ ಅಲ್ಲಿ ಬಾಂಗ್ಲಾದೇಶದ ವಲಸಿಗರು ಇರೋದಾಗಿ ಆರೋಪ ಮಾಡ್ತಿದ್ದಾರೆ. ಅದು ನಿಜವಾದ್ರೆ ಅವರನ್ನು ಗುರುತಿಸಿವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಗೃಹ ಇಲಾಖೆ ಏನು ಮಾಡುತ್ತಿದ್ದೆ? ಬಿಜೆಪಿಯವರು ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಕೇಂದ್ರ ಸರ್ಕಾರಕ್ಕೆ ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಫೇಲ್ಯೂರ್​​ ವಿರುದ್ಧ ಬಿಜೆಪಿ ಹೋರಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ಹೋಗಲು 7 ಗಂಟೆ ಸಾಕು – Kannada News | Greenfield Expressway: Pune Bengaluru NH48 Congestion Relief Coming Soon

ಬೆಂಗಳೂರು, ಜ.5: ಬೆಂಗಳೂರಿಗರ ಬಹುದೊಡ್ಡ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎನ್ನುವ ಸಾಧ್ಯತೆ ಇದೆ. ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (Greenfield Expressway) ಅಂತಿಮ ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಸಂಪುಟವು 2026ರಲ್ಲಿ ಈ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದೆ. 2023ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಬೇಕಿತ್ತು. ಪುಣೆ-ಬೆಂಗಳೂರು NH48 ನಲ್ಲಿನ ದೀರ್ಘಕಾಲದ ದಟ್ಟಣೆ ಇದು ಬಹುದೊಡ್ಡ ಪರಿಹಾರವಾಗಲಿದೆ. ಇನ್ನು ಈ ಯೋಜನೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಭಾರೀ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಯೋಜನೆಗೆ ಕೇಂದ್ರದಿಂದ ಅಂತಿಮ ಅನುಮತಿ ಇನ್ನೂ ಸಿಕ್ಕಿಲ್ಲ. ಸಚಿವ ಸಂಪುಟದ ಅನುಮೋದನೆಯ ನಂತರವೇ ಭೂಸ್ವಾಧೀನ ಪ್ರಾರಂಭವಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ರಸ್ತೆಯ ಕಾರ್ಯಯೋಜನೆಯ ಪ್ರಕ್ರಿಯೆಗಾಗಿ ಸುಮಾರು ಎರಡು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪುಣೆ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮತ್ತು ಹೆಚ್ಚಿನ ಸಂಚಾರ ದಟ್ಟಣೆ ಇರುವ NH48ನಲ್ಲಿ ಭಾರಿ ಸಂಚಾರ ಹೊರೆ ಇರುವುದರಿಂದ ಪ್ರಸ್ತಾವಿತ ಕಾರಿಡಾರ್ ಬೇಕು ಎಂದು ಪರಿಗಣಿಸಲಾಗಿದೆ. ಹೆದ್ದಾರಿಯಲ್ಲಿ ನಿರಂತರ ನಿರ್ಮಾಣ ಕಾರ್ಯವು ಸಂಚಾರವನ್ನು ಮತ್ತಷ್ಟು ನಿಧಾನಗೊಳಿಸಿದೆ, ಪ್ರಯಾಣಿಕರು ಮತ್ತು ಸರಕು ಸಾಗಣೆದಾರರಿಗೆ ಪ್ರಯಾಣದ ಸಮಯವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

700 ಕಿ.ಮೀ ಉದ್ದದ, ಆರು ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದ ನಂತರ ಪ್ರಯಾಣದ ಸಮಯವನ್ನು ಕಡಿಮೆ ಆಗುತ್ತದೆ. ಇದರಿಂದಾಗಿ ವಾಹನ ಚಾಲಕರು ಪುಣೆ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಅನ್ನು ಕೇವಲ ಏಳು ಗಂಟೆಗಳಲ್ಲಿ ತಲುಪಬಹುದು. ಸಚಿವ ಸಂಪುಟದ ಅನುಮೋದನೆ ದೊರೆತರೆ ಯೋಜನೆ ತಕ್ಷಣದಿಂದ ಆರಂಭವಾಗುತ್ತದೆ. ಭೂಸ್ವಾಧೀನ, ರಸ್ತೆ ಜೋಡಣೆ, ಅಡಿಪಾಯ ಹಾಕುವ ಕೆಲಸಗಳು ನಡೆಯಲಿದೆ. ಕೆಲವೇ ವರ್ಷಗಳಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಇದೊಂದು ಮಹತ್ವದ ಯೋಜನೆ ಆಗಿದೆ. ಇದರಿಂದ ಪುಣೆ-ಬೆಂಗಳೂರು ಕಾರಿಡಾರ್​​ನಿಂದ ನಿವಾಸಿಗಳು ಮತ್ತು ರಸ್ತೆ ಬಳಕೆದಾರರಿಗೆ ಇದು ಹೆಚ್ಚು ಸಹಾಯವಾಗಲಿದೆ. 2026 ರಲ್ಲಿ ನಿರೀಕ್ಷೆಯಂತೆ ಅನುಮೋದನೆ ದೊರೆತರೆ, ದೀರ್ಘಕಾಲದಿಂದ ವಿಳಂಬವಾಗಿದ್ದ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಕಾರ್ಯನಿರ್ವಹಿಸಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version