ತಪ್ಪಿಯೂ ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದಂತೆ – Kannada News | The habit of eating these foods with tea can have a negative impact on health

ಚಹಾ (tea) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯರಿಗಂತೂ ಬಿಸಿ ಬಿಸಿ ಚಹಾ ಹಾಟ್‌ ಫೇವರೇಟ್‌. ಅದೆಷ್ಟೋ ಜನಕ್ಕೆ ಒಂದು ಕಪ್‌ ಚಹಾ ಕುಡಿಯದೆ ದಿನವೇ ಆರಂಭವಾಗುವುದಿಲ್ಲ, ಇನ್ನೂ ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯದಿದ್ದರೇ ತಲೆಯೇ ಓಡುವುದಿಲ್ಲ. ಹೆಚ್ಚಾಗಿ ಟೀ, ಬಿಸ್ಕೆಟ್‌, ಪಕೋಡಾ ಇತ್ಯಾದಿ ತಿನಿಸುಗಳೊಂದಿಗೆ ಸವಿಯಲಾಗುತ್ತದೆ. ಇದು ಬಾಯಿ ರುಚಿ ಹೆಚ್ಚಿಸಬಹುದು. ಆದರೆ ಕೆಲವು ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಚಹಾದೊಂದಿಗೆ ಸೇವನೆ ಮಾಡಬಾರದು ಎಂಬುವುದನ್ನು ತಿಳಿಯಿರಿ.

ಚಹಾದೊಂದಿಗೆ ಈ ಆಹಾರಗಳನ್ನು ಸೇವನೆ ಮಾಡಬಾರದು:

ಬಿಸ್ಕೆಟ್‌: ಹೆಚ್ಚಿನವರು ಚಹಾದೊಂದಿಗೆ ಬಿಸ್ಕೆಟ್ ಅಥವಾ ರಸ್ಕ್‌ಗಳನ್ನು ತಿನ್ನುತ್ತಾರೆ. ಈ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಲ್ಲಿ ಸಂಸ್ಕರಿಸಿದ ಹಿಟ್ಟು, ಟ್ರಾನ್ಸ್ ಫ್ಯಾಟ್ ಮತ್ತು ಹೆಚ್ಚಿನ ಸಕ್ಕರೆ ಇದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಮತ್ತು‌ ಇದು ತೂಕ ಹೆಚ್ಚಳ, ಗ್ಯಾಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ ಸೇರಿದಂತೆ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಎಣ್ಣೆಯಲ್ಲಿ ಕರಿದ ತಿಂಡಿ: ಚಹಾದೊಂದಿಗೆ ಸಮೋಸಾ, ಪಕೋಡದಂತಹ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಲು ಬಲು ರುಚಿಯಾಗಿರಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇದು ಹೃದಯ ಮತ್ತು ಹೊಟ್ಟೆ ಎರಡಕ್ಕೂ ಹಾನಿಕಾರಕವಾಗಿದೆ. ಈ ತಿಂಡಿಗಳಲ್ಲಿರುವ  ಹೆಚ್ಚುವರಿ ಎಣ್ಣೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಸಿಹಿತಿಂಡಿಗಳು: ಕೇಕ್, ಪೇಸ್ಟ್ರಿ ಅಥವಾ ಇತರ ಸಿಹಿತಿಂಡಿಗಳನ್ನು ಚಹಾದೊಂದಿಗೆ ಸೇವಿಸುವುದು ಒಳ್ಳೆಯದಲ್ಲ.  ಇವುಗಳನ್ನು ಚಹಾದೊಂದಿಗೆ ಸೇವನೆ ಮಾಡುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಹೊಟ್ಟೆ ಭಾರ ಮತ್ತು ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಅಲ್ಲದೆ ಚಹಾದೊಂದಿಗೆ ಅತಿಯಾದ ಸಕ್ಕರೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಕ್ರಮೇಣ ಹೆಚ್ಚಾಗುತ್ತದೆ. ಇದು ಬೊಜ್ಜು, ಮಧುಮೇಹ ಮತ್ತು ಆಯಾಸಕ್ಕೆ ಕಾರಣವಾಗಬಹುದು.

ಚಹಾ ಕುಡಿದ ತಕ್ಷಣ ಹಣ್ಣು ತಿನ್ನುವುದು: ಅನೇಕ ಜನರು ಇದನ್ನು ಆರೋಗ್ಯಕರವೆಂದು ಪರಿಗಣಿಸುತ್ತಾರೆ ಆದರೆ ಈ ಅಭ್ಯಾಸವು ಹಾನಿಕಾರಕವಾಗಿದೆ. ಚಹಾದಲ್ಲಿರುವ ಟ್ಯಾನಿನ್ ದೇಹ ಹಣ್ಣಿನಿಂದ ಕಬ್ಬಿಣ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದಾಗಿ ದೇಹವು ಸಂಪೂರ್ಣ ಪೋಷಣೆಯನ್ನು ಪಡೆಯುವುದಿಲ್ಲ. ಚಹಾ ಕುಡಿಯುವ ಅರ್ಧ ಗಂಟೆ ಮೊದಲು ಅಥವಾ ನಂತರ ಹಣ್ಣು ತಿನ್ನಿರಿ.

ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಅಹಾರಗಳನ್ನು ಸೇವನೆ ಮಾಡಿ

ಚಾಕೊಲೇಟ್: ಚಾಕೊಲೇಟ್ ಮತ್ತು ಚಹಾ ಎರಡರಲ್ಲೂ ಕೆಫೀನ್ ಇರುತ್ತದೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ, ಚಡಪಡಿಕೆ ಉಂಟಾಗುತ್ತದೆ ಮತ್ತು ನಿದ್ರೆಯ ಸಮಸ್ಯೆ ಉಂಟಾಗುತ್ತದೆ. ಚಹಾದೊಂದಿಗೆ ಚಾಕೊಲೇಟ್ ತಿನ್ನುವುದರಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗಬಹುದು.

ಚಹಾದೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳುವುದು: ಕೆಲವರು ಚಹಾದೊಂದಿಗೆ ಔಷಧಿಗಳನ್ನು ನುಂಗುತ್ತಾರೆ, ಇದು ದೊಡ್ಡ ತಪ್ಪು. ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಾಗಿ ಔಷಧಿಗಳನ್ನು ಯಾವಾಗಲೂ ನೀರಿನೊಂದಿಗೆ ತೆಗೆದುಕೊಳ್ಳಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ – Kannada News | Woman Killed for Refusing Marriage in Yellapur, Uttara Kannada; Accused Rafeek on the Run

ಕಾರವಾರ, ಜನವರಿ 3: ಮದುವೆಗೆ ಒಪ್ಪದ ಮಹಿಳೆಯನ್ನು ಯುವಕನೊಬ್ಬ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ನಡೆದಿದೆ. ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಹತ್ಯೆಯಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ರಫೀಕ್ ಎಂಬ ಯುವಕ ರಂಜಿತಾಳನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಸುಮಾರು ಹತ್ತು ವರ್ಷಗಳ ಹಿಂದೆ ರಂಜಿತಾಳಿಗೆ ವಿಚ್ಛೇದನವಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.

ವಿವಾಹ ವಿಚ್ಛೇದನದ ಬಳಿ ಮೂಡಿತ್ತು ಪ್ರೀತಿ

ವಿಚ್ಛೇದನದ ಕೆಲ ತಿಂಗಳ ಬಳಿಕ ರಫೀಕ್ ಮತ್ತು ರಂಜಿತಾಳ ನಡುವೆ ಗೆಳೆತನ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇತ್ತು. ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ, ಇತ್ತೀಚಿನ ಕೆಲ ತಿಂಗಳಿಂದ ರಫೀಕ್ ಮದುವೆಯಾಗುವಂತೆ ರಂಜಿತಾಳ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕೆ ರಂಜಿತಾ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿ, ‘ನಾನು ಈಗಾಗಲೇ ಮದುವೆಯ ಅನುಭವಿಸಿದ್ದು ಸಾಕು. ನನಗೆ ಮತ್ತೆ ಮದುವೆ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ’ ಎಂದು ಹೇಳಿದ್ದಳು.

ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿ

ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ರಫೀಕ್ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ‘ಮದುವೆಯಾಗುತ್ತೀಯೋ ಇಲ್ಲವೋ’ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ರಂಜಿತಾ ಕೋಪದಿಂದ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಕೋಪಗೊಂಡ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!

ಗಂಭೀರವಾಗಿ ಗಾಯಗೊಂಡ ರಂಜಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ರಫೀಕ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗವಿ ಮಠದ ಅಜ್ಜನ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್! – Kannada News | Gavi Matha Rathotsava: Rs.10 Lakh Mysore Pak Mahadasoha Prepared in Koppal

ಕೊಪ್ಪಳ, ಜನವರಿ 03: ಕೊಪ್ಪಳದ ಗವಿಮಠ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ರಥೋತ್ಸವದ ಮಹಾದಾಸೋಹಕ್ಕಾಗಿ 40-50 ಬಾಣಸಿಗರಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್ ಸಿದ್ಧವಾಗುತ್ತಿದೆ. 60 ಕ್ವಿಂಟಾಲ್ ಸಕ್ಕರೆ ಮತ್ತು 40 ಕ್ವಿಂಟಾಲ್ ಹಿಟ್ಟು ಬಳಸಿ ತಯಾರಾಗುತ್ತಿರುವ ಈ ಮೈಸೂರ್ ಪಾಕ್‌ನ್ನು ತಯಾರಿಸುವಲ್ಲಿ MDM ಕಾಲೇಜ್ ವಿದ್ಯಾರ್ಥಿಗಳೂ ಕೈಜೋಡಿಸಿದ್ದು, ಜನವರಿ 5ರಂದು ನಡೆಯುವ ರಥೋತ್ಸವದಂದು ಭಕ್ತರಿಗೆ ವಿಶೇಷ ಪ್ರಸಾದವಾಗಿ ವಿತರಿಸಲಾಗುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬಳ್ಳಾರಿ ಗಲಭೆ: ಜನಾರ್ದನರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ – Kannada News | HD Deve Gowda given courage to Janardhan Reddy, Sriramulu Amidst Ballari Violence

ಬೆಂಗಳೂರು, ಜನವರಿ 03: ಬಳ್ಳಾರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಮತ್ತು ಆತಂಕದ ವಾತಾವರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರು ಶಾಸಕ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲುಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಿನ್ನೆ ಸಂಜೆ ದೇವೇಗೌಡರು ಇಬ್ಬರು ನಾಯಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಇಬ್ಬರು ಔಟ್, ಮೂವರು ಇನ್..! – Kannada News | IND vs NZ ODI Series: India Squad Revealed, Gill Leads, Pant and Siraj Return

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಶುಭ್​ಮನ್ ಗಿಲ್ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದ ತಿಲಕ್ ವರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಹಾಗೆಯೇ ಗಾಯದಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ರಿಷಭ್ ಪಂತ್​ಗೂ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಆಲ್​ರೌಂಡರ್ ನಿತೀಶ್ ರೆಡ್ಡಿ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.

Source link

ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ – Kannada News | Bigg Boss Kannada 12: Housemates complaint on Gilli Nata

ಬಿಗ್​​ಬಾಸ್ (Bigg Boss) ಮನೆಯ ಎಂಟರ್ಟೈನರ್ ಎನಿಸಿಕೊಂಡಿರುವ ಗಿಲ್ಲಿ ಅಷ್ಟೆ ಬೇಜವಾಬ್ದಾರಿ, ಸೋಮಾರಿಯೂ ಹೌದು. ಕಳೆದ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದರು. ಟಾಸ್ಕ್​​ಗಳಲ್ಲಿ ಉಸ್ತುವಾರಿ ಸಹ ವಹಿಸಿದ್ದರು. ಇದೀಗ ಸುದೀಪ್ ಅವರು ವೀಕೆಂಡ್ ಎಪಿಸೋಡ್​​ಗೆ ಮರಳಿದ್ದು, ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ಮನೆ ಸದಸ್ಯರ ಅಭಿಪ್ರಾಯ ಪಡೆದಿದ್ದಾರೆ. ಮನೆಯ ಬಹುತೇಕ ಎಲ್ಲ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಬಗ್ಗೆ ದೂರುಗಳನ್ನು ಹೇಳಿದ್ದಾರೆ. ಗಿಲ್ಲಿ ಬೇಜವಾಬ್ದಾರಿ ಎಂದೂ, ಅಹಂ ತೋರಿಸಿದ್ದಾರೆ ಎಂದು, ಪಕ್ಷಪಾತ ಮಾಡಿದ್ದಾರೆ ಎಂದು ಹೀಗೆ ಒಬ್ಬರ ಬಳಿಕ ಒಬ್ಬರು ದೂರುಗಳನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSB Interview Guide: ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು SSB ಸಂದರ್ಶನ ಏಕೆ ಅತ್ಯಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | SSB Interview Guide: Conquer Indian Army Officer Selection and NDA/CDS Success

ಲಕ್ಷಾಂತರ ಯುವಜನರು ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗುವ ಕನಸು ಕಾಣುತ್ತಾರೆ, ಆದರೆ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದೇ ಕಷ್ಟಪಡುತ್ತಿರುತ್ತಾರೆ. ನಿಜವಾದ ಪರೀಕ್ಷೆ ಸೇವಾ ಆಯ್ಕೆ ಮಂಡಳಿ (SSB) ಸಂದರ್ಶನವಾಗಿದ್ದು, ಇದನ್ನು ದೇಶದ ಅತ್ಯಂತ ಕಷ್ಟಕರವಾದ ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸಂದರ್ಶನವು ಅಭ್ಯರ್ಥಿಯ ವ್ಯಕ್ತಿತ್ವ, ನಾಯಕತ್ವದ ಸಾಮರ್ಥ್ಯಗಳು, ಮಾನಸಿಕ ಸಮತೋಲನ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಿರ್ಣಯಿಸುತ್ತದೆ. NDA ಮತ್ತು CDS ನಂತಹ ಪರೀಕ್ಷೆಗಳ ನಂತರ SSB ಸಂದರ್ಶನದಲ್ಲಿ ಯಶಸ್ಸು ಕಡ್ಡಾಯವಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ IMA, INA, OTA ಅಥವಾ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶವನ್ನು ನೀಡಲಾಗುತ್ತದೆ.

ಭಾರತೀಯ ಸೇನೆಯಲ್ಲಿ SSB ಸಂದರ್ಶನ ಏಕೆ ಮುಖ್ಯ?

ಭಾರತೀಯ ಸೇನೆಯಲ್ಲಿ ಅಧಿಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು SSB ಸಂದರ್ಶನವು ಅತ್ಯಂತ ನಿರ್ಣಾಯಕ ಹಂತವಾಗಿದೆ. ಇದರಲ್ಲಿ ಉತ್ತೀರ್ಣರಾಗದೆ ಯಾವುದೇ ಅಭ್ಯರ್ಥಿ ಸೇನಾ ಅಧಿಕಾರಿಯಾಗಲು ಸಾಧ್ಯವಿಲ್ಲ. ಈ ಸಂದರ್ಶನವು ಐದು ದಿನಗಳ ಕಾಲ ನಡೆಯಲಿದ್ದು, ಅಭ್ಯರ್ಥಿಯ ಚಿಂತನೆ, ನಡವಳಿಕೆ, ತಂಡದ ಕೆಲಸ ಮತ್ತು ನಾಯಕತ್ವದ ಗುಣಗಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡುತ್ತದೆ. ಇದಕ್ಕಾಗಿಯೇ ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಹೊರಹಾಕಲಾಗುತ್ತದೆ.

SSB ಸಂದರ್ಶನ ಹೇಗೆ ಪ್ರಾರಂಭವಾಗುತ್ತದೆ?

ಎಸ್‌ಎಸ್‌ಬಿಗೆ ಆಗಮಿಸುವ ಅಭ್ಯರ್ಥಿಗಳನ್ನು ಮಂಡಳಿಯ ಅಧಿಕಾರಿಗಳು ನಿಲ್ದಾಣದಲ್ಲಿ ಸ್ವೀಕರಿಸಿ ಆಯ್ಕೆ ಕೇಂದ್ರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ, ಮುಂದಿನ ಐದು ದಿನಗಳ ಬಗ್ಗೆ ಆರಂಭಿಕ ವಿಳಾಸದ ಮೂಲಕ ಅವರಿಗೆ ತಿಳಿಸಲಾಗುತ್ತದೆ ಮತ್ತು ದಾಖಲೆ ಪರಿಶೀಲನೆ ನಡೆಯುತ್ತದೆ. ಸೇನಾ ಎಸ್‌ಎಸ್‌ಬಿಗೆ ವರದಿ ಮಾಡುವ ದಿನವನ್ನು ಮೊದಲ ದಿನವೆಂದು ಪರಿಗಣಿಸಲಾಗುವುದಿಲ್ಲ, ಆದರೆ ವಾಯುಪಡೆಯ ಎಸ್‌ಎಸ್‌ಬಿಗೆ ಪರೀಕ್ಷೆಯು ಅದೇ ದಿನ ಪ್ರಾರಂಭವಾಗುತ್ತದೆ.

ದಿನ 1: ಸ್ಕ್ರೀನಿಂಗ್ ಪರೀಕ್ಷೆ:

ಮೊದಲ ದಿನ ಅಧಿಕಾರಿಗಳ ಗುಪ್ತಚರ ರೇಟಿಂಗ್ (OIR) ಪರೀಕ್ಷೆ ಮತ್ತು ಚಿತ್ರ ಗ್ರಹಿಕೆ ಮತ್ತು ಚರ್ಚಾ ಪರೀಕ್ಷೆಯನ್ನು ಒಳಗೊಂಡಿರುತ್ತದೆ. OIR ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ 40 ಪ್ರಶ್ನೆಗಳನ್ನು ಹೊಂದಿರುತ್ತದೆ. PPDT ಯಲ್ಲಿ, ಅಭ್ಯರ್ಥಿಗಳಿಗೆ ಒಂದು ಚಿತ್ರವನ್ನು ತೋರಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಒಂದು ಕಥೆಯನ್ನು ಬರೆಯಲು ಮತ್ತು ಅದನ್ನು ಗುಂಪಿನಲ್ಲಿ ಚರ್ಚಿಸಲು ಕೇಳಲಾಗುತ್ತದೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ದಿನ 2: ಮಾನಸಿಕ ಪರೀಕ್ಷೆ:

ಎರಡನೇ ದಿನವು TAT, ಪದ ಸಂಘ ಪರೀಕ್ಷೆ, ಪರಿಸ್ಥಿತಿ ಪ್ರತಿಕ್ರಿಯೆ ಪರೀಕ್ಷೆ ಮತ್ತು ಸ್ವಯಂ-ವಿವರಣೆಯನ್ನು ಒಳಗೊಂಡಿದೆ. ಈ ಪರೀಕ್ಷೆಗಳು ಅಭ್ಯರ್ಥಿಯ ಮಾನಸಿಕ ಸ್ಥಿತಿ, ಚಿಂತನೆ ಮತ್ತು ನೈಸರ್ಗಿಕ ಪ್ರತಿಕ್ರಿಯೆಗಳನ್ನು ನಿರ್ಣಯಿಸುತ್ತವೆ.

ದಿನ 3 ಮತ್ತು 4: ಗುಂಪು ಪರೀಕ್ಷೆ ಮತ್ತು ಸಂದರ್ಶನ:

ಈ ದಿನಗಳಲ್ಲಿ ಗುಂಪು ಚರ್ಚೆಗಳು, ಗುಂಪು ಕಾರ್ಯಗಳು, ಅಡಚಣೆ ಓಟಗಳು, ಉಪನ್ಯಾಸಗಳು ಮತ್ತು ವೈಯಕ್ತಿಕ ಸಂದರ್ಶನಗಳು ಸೇರಿವೆ. ನಾಯಕತ್ವ ಕೌಶಲ್ಯ ಮತ್ತು ತಂಡದ ಕೆಲಸಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ.

ದಿನ 5: ಅಂತಿಮ ಆಯ್ಕೆ:

ಅಂತಿಮ ದಿನದಂದು, ಎಲ್ಲಾ ಮಂಡಳಿಯ ಸದಸ್ಯರು ಅಭ್ಯರ್ಥಿಯ ಕಾರ್ಯಕ್ಷಮತೆಯ ಬಗ್ಗೆ ಚರ್ಚಿಸುತ್ತಾರೆ. ಅಂತಿಮ ಆಯ್ಕೆ ಶಿಫಾರಸುಗಳನ್ನು ಮಾಡಲಾಗುತ್ತದೆ. ಈ ದಿನವೇ ಅಭ್ಯರ್ಥಿಯು ಅಧಿಕಾರಿಯಾಗಲು ಮುಂದುವರಿಯುತ್ತಾರೋ ಇಲ್ಲವೋ ಎಂಬುದನ್ನು SSB ನಿರ್ಧರಿಸುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Sat, 3 January 26

Source link

ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು, ಭಯಾನಕ ವಿಡಿಯೋ ವೈರಲ್ – Kannada News | Marakada Car Accident: Tire Blast Leads to Crash, Occupants Saved on CCTV

ಮಂಗಳೂರು, ಜ.3: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿಯೊಡೆದಿದೆ.ಕಾರು ಸಿನಿಮೀಯ ರೀತಿಯಲ್ಲಿ‌ ನುಗ್ಗಿ ಬಂದಿದೆ. ಘಟನೆಯ ಭಯಾನಕ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರು ನಗರ ಹೊರವಲಯದ ಮರಕಡ ಎಂಬಲ್ಲಿ ಈ ಘಟನೆ ನಡೆದಿದೆ.ಕಾರಿನಲ್ಲಿದ್ದವರು ಪವಾಡ ಸಾದೃಶ್ಯವಾಗಿ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಸ್ಥಳೀಯರು ಬಂದು ಕಾರಿನಲ್ಲಿದ್ದವರನ್ನು ಕಾಪಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಕ್ಕೆ ಒಟಿಟಿಗೆ ಬಂದಿವೆ ಹೊಸ ಸಿನಿಮಾಗಳು: ಪಟ್ಟಿ ಇಲ್ಲಿದೆ

Source link

IND vs BAN: ಬಾಂಗ್ಲಾದೇಶ ಪ್ರವಾಸವನ್ನು ಮತ್ತೆ ಮುಂದೂಡಿದ ಬಿಸಿಸಿಐ – Kannada News | Team India Bangladesh Tour Postponed: BCCI Cites Security Concerns

ಬಿಸಿಸಿಐ ಈ ಪ್ರವಾಸವನ್ನು ಮುಂದೂಡಿದರೆ, ಅದು ಬಿಸಿಬಿಗೆ ಸಾಕಷ್ಟು ನಷ್ಟವನ್ನುಂಟುಮಾಡಬಹುದು. ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿರುವ ಬಾಂಗ್ಲಾ ಮಂಡಳಿಯು, ಭಾರತ ಪ್ರವಾಸದಿಂದ ಆದಾಯ ಗಳಿಸುವ ನಿರೀಕ್ಷಿಸುತ್ತಿತ್ತು. ಆದರೆ ಈ ಪ್ರವಾಸವನ್ನು ರದ್ದುಗೊಳಿಸುವುದರಿಂದ ಬಾಂಗ್ಲಾದೇಶ ಮಂಡಳಿಗೆ ಪ್ರಾಯೋಜಕತ್ವ ಮತ್ತು ಪ್ರಸಾರ ಒಪ್ಪಂದಗಳಿಂದ ಲಕ್ಷಾಂತರ ರೂಪಾಯಿಗಳ ನಷ್ಟವಾಗಬಹುದು. ಇದಲ್ಲದೆ, ಈ ಸರಣಿಯು ಭವಿಷ್ಯದಲ್ಲೂ ನಡೆಯದಿದ್ದರೆ, ಮಂಡಳಿಯ ಆದಾಯದ ಮೇಲೆ ಪರಿಣಾಮ ಬೀರುವುದು ಖಚಿತ.

Source link

Exit mobile version