Bengaluru Air Quality: ಬೆಂಗಳೂರು ಸೇರಿದಂತೆ ಮೈಸೂರಿನಲ್ಲೂ ವಾಯು ಗುಣಮಟ್ಟ ಉತ್ತಮ – Kannada News | Karnataka AQI Today: Bengaluru Air Quality Index Improves to Good Category

ಬೆಂಗಳೂರು ಸೇರಿದಂತೆ ಮೈಸೂರಿನಲ್ಲೂ ವಾಯು ಗುಣಮಟ್ಟ ಉತ್ತಮ

ಬೆಂಗಳೂರು, ಆಗಸ್ಟ್ 04: ಇಂದು ರಾಜ್ಯಾದ್ಯಂತ ಶ್ರಾವಣ ಮಾಸದ ಮುಂಗಾರು ಮಳೆಯ ಪರಿಣಾಮವಾಗಿ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ (AQI) ಅತ್ಯಂತ ಆಶಾದಾಯಕವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಸಾರ್ವಜನಿಕರು ಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ‘ಉತ್ತಮ’ ಗಾಳಿ

ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚಿ (AQI) 44ರಷ್ಟಿದ್ದು, ‘ಉತ್ತಮ’ (Good) ವಿಭಾಗದಲ್ಲಿದೆ. ನಗರದ ಮುಖ್ಯ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಪ್ರಮಾಣಗಳು ನಿಯಂತ್ರಣದಲ್ಲಿದ್ದು, ಕ್ರಮವಾಗಿ 19 µg/m³ ಮತ್ತು 46 µg/m³ ದಾಖಲಾಗಿವೆ.

ಬಿಟಿಎಂ ಲೇಔಟ್, ಜಯನಗರ ಹಾಗೂ ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಮುಂಜಾನೆಯ ವೇಳೆ ಹಿತಕರ ವಾತಾವರಣ ಕಂಡುಬಂದಿದ್ದು, ವಾಕಿಂಗ್ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತ ಪರಿಸರ ನಿರ್ಮಾಣವಾಗಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

ಕರ್ನಾಟಕದ ಇತರ ಪ್ರಮುಖ ಜಿಲ್ಲೆಗಳಲ್ಲಿಯೂ ವಾಯು ಮಾಲಿನ್ಯದ ಪ್ರಮಾಣ ಕ್ಷೀಣಿಸಿದ್ದು, ಜನರು ನಿರಾಳವಾಗಿದ್ದಾರೆ.

  • ಬೆಂಗಳೂರು- 44 (Good)
  • ಮೈಸೂರು- 16 (Good)
  • ಬೆಳಗಾವಿ- 15 (Good)
  • ಹುಬ್ಬಳ್ಳಿ-ಧಾರವಾಡ- 23 (Good)
  • ಮಂಗಳೂರು- 30 (Good)

ಸಾಂಸ್ಕೃತಿಕ ನಗರಿ ಮೈಸೂರು (AQI 16) ಹಾಗೂ ಬೆಳಗಾವಿ (AQI 15) ನಗರಗಳು ರಾಜ್ಯದಲ್ಲೇ ಅತ್ಯಂತ ಶುದ್ಧ ಗಾಳಿಯಿರುವ ನಗರಗಳಾಗಿ ಹೊರಹೊಮ್ಮಿವೆ. ಕರಾವಳಿ ಭಾಗವಾದ ಮಂಗಳೂರಿನಲ್ಲೂ AQI 30 ರಷ್ಟಿದ್ದು, ಮಾಲಿನ್ಯದ ಭೀತಿ ಇಲ್ಲವಾಗಿದೆ.

ಸತತವಾಗಿ ಬೀಳುತ್ತಿರುವ ಮಳೆ ಹಾಗೂ ಗಾಳಿಯ ವೇಗ ಹೆಚ್ಚಿರುವುದರಿಂದ ಧೂಳಿನ ಕಣಗಳು ಮತ್ತು ವಾಹನಗಳ ಹೊಗೆಯ ಪರಿಣಾಮ ಕಡಿಮೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಇಂದಿನ ವಾತಾವರಣವು ಹಿರಿಯ ನಾಗರಿಕರು ಮತ್ತು ಉಸಿರಾಟದ ತೊಂದರೆ ಇರುವವರಿಗೂ ಸಹ ಸುರಕ್ಷಿತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿ – ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲೆಗಳಿಗೆ ರಜೆ – Kannada News | Karnataka Rain Alert: Heavy Rain Forecast, Schools Shut in Dakshina Kannada and Udupi

ಬೆಂಗಳೂರು, ಆಗಸ್ಟ್ 4: ಒಟ್ಟಾರೆಯಾಗಿ ಕರ್ನಾಟಕದಲ್ಲಿ ನೈರುತ್ಯ ಮುಂಗಾರು (Monsoon Rain) ಸಾಮಾನ್ಯವಾಗಿದ್ದರೂ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಆಗಸ್ಟ್ 4 ಮತ್ತು 5ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ (Weather Forecast) ನೀಡಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳೂರು ಉಪವಿಭಾಗದಲ್ಲಿ ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ಇಂದು ರಜೆ ಘೋಷಿಸಲಾಗಿದೆ. ಮಂಗಳೂರು, ಉಳ್ಳಾಲ, ಮೂಡುಬಿದಿರೆ, ಬಂಟ್ವಾಳ ಹಾಗೂ ಮುಲ್ಕಿ ತಾಲೂಕುಗಳಲ್ಲಿ ಹೈಸ್ಕೂಲ್‌ವರೆಗೆ ರಜೆ ನೀಡಲಾಗಿದೆ.

ಪುತ್ತೂರು ಉಪವಿಭಾಗದ ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಿಸಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಈ ಕುರಿತು ಆದೇಶ ಹೊರಡಿಸಿದ್ದಾರೆ.

ಯಾವೆಲ್ಲ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ?

ಕರಾವಳಿ ಕರ್ನಾಟಕದ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಬಹುತೇಕ ಕಡೆ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಬೆಂಗಳೂರು ನಗರ-ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.

ಆಗಸ್ಟ್ 5ರಂದು ಮಳೆ ಮುಂದುವರಿಕೆ

ಆಗಸ್ಟ್ 5ರಂದು ಕೂಡ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಬಹುತೇಕ ಕಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಎಲ್ಲೆಲ್ಲಿ ಭಾರೀ ಮಳೆಯಾಗಿದೆ, ಎಷ್ಟು?

ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಕರಾವಳಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ 15 ಸೆಂ.ಮೀ. ಅತಿ ಭಾರಿ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ 12 ಸೆಂ.ಮೀ. ಮಳೆಯಾಗಿದೆ.

ಇದನ್ನೂ ಓದಿ: 

ಬೆಳಗಾವಿ ಜಿಲ್ಲೆಯ ಲೋಂಡಾದಲ್ಲಿ 11 ಸೆಂ.ಮೀ., ಬೆಳ್ತಂಗಡಿಯಲ್ಲಿ 10 ಸೆಂ.ಮೀ., ಉಡುಪಿಯ ಕೊಲ್ಲೂರಿನಲ್ಲಿ 9 ಸೆಂ.ಮೀ., ಕೊಡಗಿನ ಭಾಗಮಂಡಲದಲ್ಲಿ 8 ಸೆಂ.ಮೀ., ಧರ್ಮಸ್ಥಳದಲ್ಲಿ 8 ಸೆಂ.ಮೀ., ಶಿವಮೊಗ್ಗದ ತಾಳಗುಪ್ಪದಲ್ಲಿ 8 ಸೆಂ.ಮೀ. ಹಾಗೂ ಆಗುಂಬೆಯಲ್ಲಿ 7 ಸೆಂ.ಮೀ. ಮಳೆ ದಾಖಲಾಗಿದೆ. ಉತ್ತರ ಕನ್ನಡದ ಜಗಲಬೆಟ್, ದಕ್ಷಿಣ ಕನ್ನಡದ ಮೂಡುಬಿದಿರೆ ಹಾಗೂ ಸುಳ್ಯದಲ್ಲೂ ತಲಾ 7 ಸೆಂ.ಮೀ. ಮಳೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Today is the Vardhanthi of Goddess Mysuru Chamundeshwari: Here is the daily horoscope for the 12 zodiac signs

ಇಂದು ಆಗಸ್ಟ್ 4, 2026ರ ಮಂಗಳವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಷಷ್ಠಿ ತಿಥಿ ಹಾಗೂ ರೇವತಿ ನಕ್ಷತ್ರದ ಈ ದಿನವು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಪಡೆಯಲು ವಿಶೇಷವಾಗಿದೆ. ಇಂದು ಬಾಲಗಂಗಾಧರ ತಿಲಕರ ಜಯಂತಿ ಹಾಗೂ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವದ ಶುಭ ದಿನವೂ ಹೌದು. ಇಂದಿನ ರಾಹುಕಾಲ ಮಧ್ಯಾಹ್ನ 3:34 ರಿಂದ ಸಂಜೆ 5:09 ರವರೆಗೆ ಇರಲಿದ್ದು, ಮಧ್ಯಾಹ್ನ 12:25 ರಿಂದ 1:58 ರವರೆಗೆ ಸರ್ವಸಿದ್ಧಿ ಹಾಗೂ ಸಂಕಲ್ಪದ ಶುಭಕಾಲವಾಗಿದೆ. ‘ಟಿವಿ9 ಡಿಜಿಟಲ್’ ವಾಹಿನಿಯ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ.

Source link

Horoscope Today 04 August: ಇಂದು ಈ ರಾಶಿಯವರ ಉದ್ಯಮವು ಹಣಕಾಸಿನ‌ ಕೊರತೆಯನ್ನು ಕಾಣಬಹುದು – Kannada News | August 4, 2026 Daily Horoscope: Navigate Finance, Career and Health wisely! Check your sign’s fate

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಮಂಗಳವಾರದಂದು ಪರೋಕ್ಷವಾಗಿ ಸಹಾಯ, ಶತ್ರುಗಳಿಂದ‌ಸೋಲು, ಅನಾರೋಗ್ಯದ ಬರುವ ಭೀತಿ, ಆಪ್ತರ ಜೊತೆ ಹೊಸ ಉದ್ಯೋಗ, ಬದ್ಧತೆಯ ಮರೆವು, ವಿದೇಶದಿಂದ ಆಹ್ವಾನ, ತಪ್ಪಿಗೆ ದಂಡ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಗಂಡ, ಕರಣ : ಭದ್ರ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:35 – 17:10, ಯಮಗಂಡ ಕಾಲ 09:16 – 10:51, ಗುಳಿಕ ಕಾಲ 12:26 – 14:00

ಮೇಷ ರಾಶಿ :

ಇಷ್ಟು ದಿನ ನಿಮ್ಮದೂ ಎಂದ ಕೊಂಡ ವಸ್ತುವು ಇನ್ನೊಬ್ಬರ ಸ್ವತ್ತಾಗುವ ಸಾಧ್ಯತೆ ಇದೆ. ನೀವು ಮಾಡಬೇಕೆಂದುಕೊಂಡ ಕೆಲಸವು ವಿಪರೀತ ಪರಿಣಾಮವನ್ನು ಬೀರೀತು. ಎಲ್ಲದಕ್ಕೂ ಅಪಾರ್ಥ ಮಾಡಿಕೊಳ್ಳುತ್ತಾ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಸಾಲಬಾಧೆಯು ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ದುರಾಸೆಯಿಂದ ಕೊಡಬೇಕಾದ ಹಣವನ್ನು ಪೂರ್ತಿಯಾಗಿ ಕೊಡಲಾರಿರಿ. ವ್ಯಸನಕ್ಕೆ ತುತ್ತಾಗಿ ಆರೋಗ್ಯವನ್ನು ಕಳೆದುಕೊಳ್ಳುವಿರಿ.

ವೃಷಭ ರಾಶಿ :

ಆತುರದ ತೀರ್ಮಾನ ಹಾಗೂ ಒತ್ತಡಕ್ಕೆ ಸಿಲುಕದೇ ಜಾಗರೂಕರಾಗುರಿ. ಇಂದು ನಿಮ್ಮ ಸಾಲವು ಮರಳಿಬರಹುದು. ಸ್ನೇಹಿತರು ತಮ್ಮ ಜೊತೆ ಕರೆದುಕೊಂಡು ಹೋಗಬಹುದು. ಹಣವು ವ್ಯರ್ಥವಾಗುವದು ನಿಮ್ಮದಾಗಿರುತ್ತದೆ. ನಿಮ್ಮ ವಿರುದ್ಧ ಸಲ್ಲದ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲವನ್ನೂ ನೀವು ಸಮರ್ಥಿಸಿಕೊಳ್ಳುವಿರಿ. ನೂತನ ಗೃಹದ ಖರೀದಿಯಲ್ಲಿ ಆಸಕ್ತಿ ಇರುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ.

ಮಿಥುನ ರಾಶಿ :

ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ನಿಮ್ಮವರೇ ಆದರೂ ಅವರ ಜೊತೆ ಹೆಚ್ಚಿನ ವ್ಯವಹಾರವು ಬೇಡಿ. ಹಣದ ವಿಚಾರವು ಯಾರನ್ನೂ ಬಿಡದು. ಮಕ್ಕಳ ಜೊತೆ ವೈಮನಸ್ಯ ಬರಬಹುದು. ಒಳ್ಳೆಯ ವ್ಯಕ್ತಿಗಳ ಜೊತೆ ಕೆಲವು ಸಮಯ ಕಳೆದುಹೋಗುವುದು. ಔಷಧದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು.

ಕರ್ಕಾಟಕ ರಾಶಿ :

ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ಯಾರ ಬಗ್ಗೆಯೂ ಗೊತ್ತಿಲ್ಲದೇ ಮಾತನಾಡುವುದು ಬೇಡ. ನಿಮಗೆ ಅನುರೂಪದ ಸಂಬಂಧ ಹುಡುಕಲು ತಂದೆಯ ಓಡಾಟ ನಿಮಗೆ ಬೇಸರ ತರಿಸುವುದು. ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸಲು ಕಷ್ಟವಾದರೂ ಅನಿವಾರ್ಯವಾಗಿ ಬಿಡಬೇಕಾದೀತು.‌ ಸಾಮಾಜಿಕ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಸಿಂಹ ರಾಶಿ :

ನಿಮ್ಮ ಗುರಿಗಳು ಸ್ಪಷ್ಟವಾಗಿ ಇದ್ದರೂ ಇನ್ನೊಬ್ಬರ ಪ್ರೋತ್ಸಾಹವನ್ನು ನೀವು ಬಯಸುವಿರಿ. ಪ್ರಯಾಣವು‌ ಇಂದು ನಿಮಗೆ ಇಷ್ಟವಾಗದೇ ಹೋಗುವುದು. ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿದೆ. ನಕಾರಾತ್ಮಕ ಆಲೋಚನೆಗಳು ಸಂಗಾತಿಯ ಕಡೆಯಿಂದ ನಿಮಗೆ ಬರಬಹುದು. ನೀವು ಇಂದು ಹೆಚ್ಚು ಕೆಲಸವನ್ನೂ ಕಡಿಮೆ ಮಾತುಗಳನ್ನೂ ಆಡುವುದು ಮುಖ್ಯ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು.

ಕನ್ಯಾ ರಾಶಿ :

ನೀವು ಇನ್ನೊಬ್ಬರಿಗೆ ಬಗ್ಗೆ ಮಾತನಾಡುವಾಗ ಪೂರ್ವಾಪರ ಆಲೋಚನೆ ಬೇಕು. ಜೀವನದ ಗುರಿಯು ಇನ್ನಷ್ಟು ದೂರವಾಗುವುದು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಹೊರ ಹಾಕಿಯಾರು. ಸಂಗಾತಿಯ ನೋವಿಗೆ ಸ್ಪಂದಿಸಿವುದು ಕಷ್ಟವಾದೀತು. ವ್ಯಾಪಾರವು ಇಂದು ಚೆನ್ನಾಗಿ ಆಗಲಿದೆ. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡಿಕೊಳ್ಳುವುದು ಉತ್ತಮ. ವಿದೇಶದಲ್ಲಿ ಉನ್ನತ ಅಭ್ಯಾಸಕ್ಕೆ ಅವಕಾಶ ಸಿಗುವುದು.

ತುಲಾ ರಾಶಿ :

ಅಪರಿಚಿತ ವಿಷಯಕ್ಕೆ ಮೌನವಾಗಿ ಇರುವಿರಿ. ನಿಮಗೆ ಆಗಬೇಕಾದ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಆಗದೇ ಕೋಪ ಬರುವುದು. ಸ್ನೇಹಿತರು ಸರಿಯಾಗಿ ಪ್ರತಿಕ್ರಯಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಬೇಸರಗೊಳ್ಳುವಿರಿ. ಆರ್ಥಿಕ ವಿಚಾರಕ್ಕೆ ಅಪವಾದವು ಬರುವ ಸಾಧ್ಯತೆ ಇದೆ. ಆಪ್ತರಿಗೆ ಏನನ್ನಾದರೂ ಕೊಡುವಿರಿ. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ.

ವೃಶ್ಚಿಕ ರಾಶಿ :

ಅನ್ಯ ಕಾರ್ಯಗಳಿಂದ ನಿಮ್ಮ ಸಮಯವು ವ್ಯರ್ಥವಾಗಿ ನಿಮ್ಮ ಕೆಲಸಕ್ಕೆ ಸಮಯದ ಅಭಾವವಾದೀತು. ನಿಮ್ಮ ತಪ್ಪಿಗೆ ತಂಡವು ದಂಡ ತೆರಬೇಕಾದೀತು. ಕಲಾವಿದರಿಗೆ ಅದರಲ್ಲಿಯೂ ನಟರಿಗೆ ಹೆಚ್ಚಿನ ಆದ್ಯತೆ ಸಿಗುವುದು. ಇಂದು ನೀವು ಮಾತು ಕಡಿಮೆ ಮಾಡಿದಷ್ಟೂ ನಿಮಗೆ ಅನುಕೂಲವಿದೆ. ಅವಿವಾಹಿತರು ವಿವಾಹಕ್ಕೆ ಮಾಂಗಲ್ಯ ಭಾಗ್ಯ ಬರಲಿದೆ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ.

ಧನು ರಾಶಿ :

ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಎಲ್ಲರ ಜೊತೆ ಬೆರೆಯುವ ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋದೀತು. ನಿಮಗೆ ಬೇಕಾದುದನ್ನು ಮನೆಯಲ್ಲಿ ಮಾಡಿಕೊಂಡು ತಿನ್ನುವಿರಿ. ಕಷ್ಟವೋ ಸುಖವೋ ಹೊತ್ತ ಜವಾಬ್ದಾರಿಗೆ ನ್ಯಾಯವನ್ನು ಕೊಡಬೇಕು. ನಿಮ್ಮ ಕೆಲಸವನ್ನು ನೀವೇ ಮಾಡಲು ಇಷ್ಟಪಡುವಿರಿ. ನೇರವಾದ ಮಾತು ಕೆಲವರಿಗೆ ಅಸಹ್ಯವಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು.

ಮಕರ ರಾಶಿ :

ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ನಿಮ್ಮ ಪ್ರಯಾಣವನ್ನು ನಿಲ್ಲಿಸುವುದು ಬೇಡ. ಸ್ನೇಹಿತರಿಂದ ನೀವು ದೂರವಿರುವ ಯೋಚನೆ ಮಾಡುವಿರಿ. ವಿವಾಹ ಸಮಾರಂಭಕ್ಕೆ ಹೋಗಿಬರುವಿರಿ. ನಿಮಗೆ ಬೆಂಬಲವನ್ನು ಕುಟುಂಬದವರು ಕೊಡುವರು. ಅಕಸ್ಮಾತ್ ಬಂದ ಕೆಲವು ಘಟನೆಗೆ ಪ್ರತಿಕ್ರಿಯೆ ಕಷ್ಟವಾಗಬಹುದು. ಯಾರೋ‌ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

ಕುಂಭ ರಾಶಿ :

ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಏನು ಮಾಡಬೇಕು ಎಂಬ ಭ್ರಾಂತಿಯೂ ಕಾಡುವುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅನಾರೋಗ್ಯದ ಕಾರಣಕ್ಕೆ ಉತ್ಸಾಹ ಭಂಗವಾಗಲಿದೆ. ಜೀವನೋಪಾಯಕ್ಕೆ ಯಾವುದಾದರೊಂದು ವೃತ್ತಿಯನ್ನು ಆಶ್ರಯಿಸುವುದು ಉತ್ತಮ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು.

ಮೀನ ರಾಶಿ :

ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಸಹನೆಯನ್ನೇ ನಿಮ್ಮ ಉತ್ತಮ ಆಯುಧವಾಗಿ ಮಾಡಿಕೊಳ್ಳಿ. ಎಲ್ಲವನ್ನೂ ಎದುರಿಸಲು ಸಾಧ್ಯವಾಗುವುದು. ವಿಶೇಷ ಸಮಾರಂಭಕ್ಕೆ ಆಹ್ವಾನ ಬರಬಹುದು. ನಿಮಗೆ ಗೊತ್ತಿಲ್ಲದೇ ಮೋಜಿನಲ್ಲಿ ಸೇರಿ ಹಣವನ್ನು ನಷ್ಟ ಮಾಡಿಕೊಳ್ಳುವಿರಿ. ಬೇಕಾದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ. ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ‌ ಕಾಲವನ್ನು ಕಳೆಯುವಿರಿ.

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:09 am, Tue, 4 August 26

Source link

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ – Kannada News | Chikkamagaluru Heavy Rain: Fields and Farmlands Inundated as Tunga and Bhadra Rivers Swell

ಚಿಕ್ಕಮಗಳೂರು, ಆಗಸ್ಟ್​​ 03: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ (Rain) ಅಬ್ಬರ ಮುಂದುವರೆದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತುಂಗಾ-ಭದ್ರಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.‌ ಶೃಂಗೇರಿಯ ಗಾಂಧಿ ಮೈದಾನ ಇಡೀ ಜಲಾವೃತವಾಗಿತ್ತು. ಭದ್ರೆಯ ಅಬ್ಬರಕ್ಕೆ ಹೊಲ-ಗದ್ದೆ ತೋಟಗಳು ಜಲಾವೃತವಾಗಿವೆ. ನಾಲ್ಕು ದಿನದ ಹಿಂದೆ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರು ಸುರಿಯುತ್ತಿರುವ ಮಳೆ ಕಂಡು ಆತಂಕಕ್ಕೀಡಾಗಿದ್ದಾರೆ.

ನದೀತೀರದ ತೋಟಗಳು ಜಲಾವೃತ: ಲಕ್ಷಾಂತರ ರೂ ಹಾನಿ

ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಕ್ಕೆ ತುಂಗಾ ಮತ್ತಯ ಭದ್ರ ನದಿಗಳ ಜಲಾನಯನ ಪ್ರದೇಶದ ಹೊಲ-ಗದ್ದೆ, ತೋಟಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು ದಿನದ ಹಿಂದೆ ಮಳೆಗಾಗಿ ಮುಗಿಲು ನೋಡುತ್ತಿದ್ದ ಮಳೆನಾಡಿದರು ಇಂದು ಭವಿಷ್ಯದ ಬದುಕಿನ ಬಗ್ಗೆ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ಸಂಸೆ ಸಮೀಪದ ಹೊಸಮಠ ಗ್ರಾಮದ ಅಶೋಕ್, ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದಿದ್ದ ತೋಟದ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಭದ್ರೆಯ ಅಬ್ಬರಕ್ಕೆ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ತೋಟದಲ್ಲಿದ್ದ ಮಿಶ್ರಬೆಳೆ ಕಾಫಿ, ಅಡಿಕೆ, ಮೆಣಸು, ಬಾಳೆ ಬಹುತೇಕ ನೆಲ ಕಚ್ಚಿದೆ. ಭದ್ರಾ ನದಿಯ ಅಬ್ಬರಕ್ಕೆ ಮಳೆ ನೀರು ಅಶೋಕ್ ಅವರ ಮನೆಗೂ ನುಗ್ಗಿದ್ದು, ಗೃಹ ಉಪಯೋಗಿ ವಸ್ತುಗಳು ನಾಶವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ‌

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!

ಇನ್ನು ತುಂಗಾ ನದಿಯ ರಭಸಕ್ಕೆ ಶೃಂಗೇರಿ ಮಠದ ಭಕ್ತರು ಕೂಡ ಕಂಗಾಲಾಗಿದ್ದಾರೆ.‌ ಮೂರೇ ಮೂರು ದಿನದ ಮಳೆಗೆ ಶೃಂಗೇರಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ದೇಗುಲದ ಪಾರ್ಕಿಂಗ್ ಮಾರ್ಗದ ರಸ್ತೆ ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಶಾರದಾಂಬೆ ದೇಗುಲದ ನೆಲ ಮಾಳಿಗೆ, ಊಟದ ಹಾಲ್​ಗೂ ಮಳೆ ನೀರು ನುಗ್ಗಿದ್ದು, ಭಕ್ತರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.

ಸಂಪರ್ಕ ಕಡಿತ: ವಿದ್ಯುತ್ ವ್ಯತ್ಯಯ

ಶೃಂಗೇರಿ ಪಟ್ಟಣದ ಕುರುಬಕೇರಿಯ ಮುಖ್ಯ ರಸ್ತೆಯೂ ಜಲಾವೃತವಾಗಿದೆ. ಪ್ರವಾಸಿಗರು, ಸ್ಥಳೀಯರು ನದಿ ತೀರಕ್ಕೆ ಹೋಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಿರಿಮನೆ ಜಲಪಾತದ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಬಂದ್ ಆಗಿತ್ತು. ಮಳೆ ಮಧ್ಯೆಯೂ ಸ್ಥಳೀಯರು ಮರ ತೆರವು ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಹಾಗೂ ಕೊಗ್ರೆ ಭಾಗದಲ್ಲಿ ಸೇತುವೆಗಳೇ ಜಲಾವೃತಗೊಂಡು ಹಳ್ಳಿಗರ ಪರದಾಡುವಂತಾಗಿದೆ. ಈ ಮಧ್ಯೆ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಕಾಡಂಚಿನ ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!

ಒಟ್ಟಾರೆ, ಮಲೆನಾಡಲ್ಲಿ ಮಳೆ ಅಬ್ಬರ ಪ್ರವಾಹದ ಭೀತಿ ತಂದೊಡ್ಡಿದ್ದರೂ ಕೂಡ, ಕಾಫಿನಾಡಲ್ಲಿ ಈ ವೇಳೆಗೆ ಪ್ರತಿವರ್ಷ ಸುರಿಯುವ ವಾಡಿಕೆ ಮಳೆ ಸುರಿದಿಲ್ಲ. ಇದು ಭವಿಷ್ಯದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಅಡಿಕೆ ಹಾಗೂ ಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಬೆಳೆಗಾರರದ್ದು. ಆದರೆ, ಮುಂದಿನ ದಿನಗಳಲ್ಲಿ ಮಳೆ ಹೀಗೇ ಇರುತ್ತೋ ಅಥವಾ ಕಡಿಮೆಯಾಗಿ ಮತ್ತೆ ಬೆಳೆಗಾರರ ಭವಿಷ್ಯದ ಮೇಲೆ ಬರೆ ಎಳೆಯುತ್ತೋ ಕಾದು ನೋಡಬೇಕು. ಆದರೆ, ಮಲೆನಾಡಿಗರು ಮಾತ್ರ ಉಯ್ಯೋ… ಉಯ್ಯೋ… ಮಳೆರಾಯ ಅಂತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು – Kannada News | Kangana Ranaut Defends Cannes Party Video and Says Wants to Become a Sanghi

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರ ಹಳೆಯ ಪಾರ್ಟಿ ವಿಡಿಯೋ (Kangana Ranaut Party Video) ವೈರಲ್ ಆಗಿದೆ. ಅದನ್ನು ನೋಡಿದ ಜನರು ಟ್ರೋಲ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಕಂಗನಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಮೊದಲು ಸಾಧಾರಣ ಹಿಂದೂ ಆಗಿದ್ದೆ. ಆದರೆ ಈಗ ಜಾಗೃತ ಹಿಂದೂವಾಗಿದ್ದೇನೆ. ಅಲ್ಲದೇ, ನಾನು ಸಂಘಿ (Sanghi) ಆಗಲು  ಬಯಸುತ್ತೇನೆ’ ಎಂದು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಂಗನಾ ರಣಾವತ್ (Kangana Ranaut) ಅವರು ಖಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಇದು ಲೇಟೆಸ್ಟ್ ಸೇರ್ಪಡೆ.

2018ರ ಕಾನ್ ಚಲನಚಿತ್ರೋತ್ಸವದ ಆಫ್ಟರ್-ಪಾರ್ಟಿಯಲ್ಲಿ ಕಂಗನಾ ರಣಾವತ್ ಅವರು ಮೈಮರೆತು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿತ್ತು. ಈ ವಿಡಿಯೋ ಇಟ್ಟುಕೊಂಡು ಹಲವರು ಕಂಗನಾ ಅವರ ರಾಜಕೀಯ ಹಾಗೂ ಧಾರ್ಮಿಕ ಸಿದ್ಧಾಂತ ಬದಲಾವಣೆಯನ್ನು ಪ್ರಶ್ನಿಸಿ ಟ್ರೋಲ್ ಮಾಡಿದ್ದರು.

ವಿಡಿಯೋದಲ್ಲಿ ಕಂಗನಾ ಹೇಳಿದ್ದೇನು?

ಈ ಕುರಿತು ವಿಡಿಯೋ ಹಂಚಿಕೊಂಡು ಸುದೀರ್ಘವಾಗಿ ಮಾತನಾಡಿರುವ ಕಂಗನಾ, ‘ನೀನು ಯಾವಾಗ ಸಂಘಿಯಾದೆ ಎಂದು ಜನರು ನನ್ನನ್ನು ಟೀಕಿಸುತ್ತಿದ್ದಾರೆ. ಹೌದು, ನನಗೆ ಸಂಘಿ ಆಗಬೇಕಿದೆ. ಬಿಜೆಪಿ ಮತ್ತು ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪಿಕೊಂಡು, ಒಬ್ಬ ಜಾಗೃತ ಹಿಂದೂ ಆಗಲು ನಾನು ಬಯಸುತ್ತೇನೆ. ಬದಲಾಗಲು ನನಗೆ ಏಕೆ ಅವಕಾಶವಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

‘ಈ ಹಿಂದೆ ನಾನು ಅದೆಲ್ಲವನ್ನೂ ಮಾಡಿದ್ದೇನೆ’

ಮುಂದುವರಿದು ಮಾತನಾಡಿದ ಕಂಗನಾ ಅವರು, ‘ಸಾಮಾಜಿಕವಾಗಿ ಹಿಂದೂ ಹೆಣ್ಣುಮಕ್ಕಳ ವಿಷಯ ಬಂದಾಗ ಸಮಾಜದಲ್ಲಿ ಇಬ್ಬಂದಿತನ ಎದ್ದು ಕಾಣುತ್ತದೆ. ನೀವು ಈ ಹಿಂದೆ ಪಾರ್ಟಿ ಮಾಡುತ್ತಿದ್ದಿರಿ ಎಂದು ಜನರು ನನ್ನ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾರೆ. ಹೌದು, ನಾನು ಹಿಂದೆ ಅದೆಲ್ಲವನ್ನೂ ಮಾಡಿದ್ದೇನೆ. ಆದರೆ ಇಂದು ಧಾರ್ಮಿಕ ಮತ್ತು ಶಿಸ್ತುಬದ್ಧ ಜೀವನ ನಡೆಸಲು ಬಯಸುತ್ತಿದ್ದೇನೆ. ಆ ದಾರಿಯನ್ನು ನನಗೇಕೆ ಮುಚ್ಚಲಾಗುತ್ತಿದೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ

ಸರಣಿ ಕಂಟ್ರವರ್ಸಿಗಳಲ್ಲಿ ಕಂಗನಾ:

ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ಅವರ ಹೆಸರು ಪ್ರಸ್ತಾಪಿಸದೆ ‘ಜೇಬುಗಳ್ಳರಂತೆ ಡ್ರೆಸ್ ಮಾಡಿಕೊಳ್ಳುತ್ತಾಳೆ’ ಎಂದು ಮಾರ್ಮಿಕವಾಗಿ ಪೋಸ್ಟ್ ಹಾಕಿದ್ದ ಕಂಗನಾ, ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಅಲ್ಲದೆ, ಪ್ರತಿಭಟನಾನಿರತ ಯುವಜನತೆಯ ನಡೆ-ನುಡಿಯನ್ನು ಟೀಕಿಸಿ ‘ಜನರೇಷನ್ ಗಟ್ಟರ್’ ಎಂದು ಕರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಂಗನಾ ಅವರು ತಮ್ಮ ಹಳೆಯ ಪಾರ್ಟಿ ವಿಡಿಯೋಗೆ ಈ ರೀತಿ ಸ್ಪಷ್ಟನೆ ನೀಡಿರುವುದು ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಮತ್ತೆ ಹೊಸ ಸಂಚಲನ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ – Kannada News | Aluva Manappuram Siva Temple completely submerged in Periyar River Flood Water

ಎರ್ನಾಕುಲಂ, ಆಗಸ್ಟ್ 3: ಕೇರಳದಲ್ಲಿ ಭಾರೀ ಪ್ರವಾಹ (Kerala Flood) ಉಂಟಾಗಿದೆ. ಕೇರಳದಲ್ಲಿ ಮುಂದುವರಿದಿರುವ ಭಾರಿ ಮುಂಗಾರು ಮಳೆಯಿಂದಾಗಿ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ಎರ್ನಾಕುಲಂ ಜಿಲ್ಲೆಯ ಪ್ರಸಿದ್ಧ ಆಲುವಾ ಮಣಪ್ಪುರಂ ಶ್ರೀ ಮಹಾದೇವ ದೇವಾಲಯವು (ಆಲುವಾ ಶಿವ ದೇವಾಲಯ) ಸಂಪೂರ್ಣ ಜಲಾವೃತಗೊಂಡಿದೆ. ಪೆರಿಯಾರ್ ನದಿಯ ಪ್ರವಾಹದ ನೀರು ದೇವಾಲಯದ ಆವರಣ ಮತ್ತು ನದಿಯ ದಂಡೆಗೆ ನುಗ್ಗಿದ್ದು, ದೇವಾಲಯದ ಶಿವಲಿಂಗ ಮತ್ತು ಗರ್ಭಗುಡಿಯ ಭಾಗಗಳು ನೀರಿನಲ್ಲಿ ಮುಳುಗಿವೆ. ಪೆರಿಯಾರ್ ನದಿಯ ದಂಡೆಯಲ್ಲಿರುವ ಜನರಿಗೆ ಮತ್ತು ಭಕ್ತಾದಿಗಳಿಗೆ ನದಿ ತೀರಕ್ಕೆ ತೆರಳದಂತೆ ಮತ್ತು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಭಾರತ ಪ್ರವಾಸಕ್ಕೆ 16 ಸದಸ್ಯರ ಯುವ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | Indian origin Neel Patel added in Australia U19 squad for India tour

ಬರುವ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ 19 ವರ್ಷದೊಳಗಿನವರ (India vs Australia U19) ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ನಾಲ್ಕು ದಿನಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗಳಿಗಾಗಿ ಆಸ್ಟ್ರೇಲಿಯಾ ಯುವ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇದೀಗ ಈ ಪ್ರವಾಸಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ 16 ಸದಸ್ಯರ ಆಸ್ಟ್ರೇಲಿಯಾ U19 ಪುರುಷರ ತಂಡವನ್ನು ಪ್ರಕಟಿಸಿದೆ. ಮುಂಬರುವ U19 ವಿಶ್ವಕಪ್‌ಗೆ ತಯಾರಿಯ ದೃಷ್ಟಿಯಿಂದ ಈ ಸರಣಿಯು ಎರಡೂ ತಂಡಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ವಿಶ್ವಕಪ್ ನಂತರ, ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. 16 ಆಟಗಾರರಲ್ಲಿ 14 ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದಾಗ್ಯೂ, U19 ವಿಶ್ವಕಪ್‌ನಲ್ಲಿ ಆಡಿದ ಅನುಭವಿ ವೇಗದ ಬೌಲರ್‌ಗಳಾದ ವಿಲ್ ಬೈರೋಮ್ ಮತ್ತು ಕೇಸಿ ಬಾರ್ಟನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಮನಾರ್ಹವಾಗಿ, ಭಾರತೀಯ ಮೂಲದ ಯುವ ಕ್ರಿಕೆಟಿಗ ನೀಲ್ ಪಟೇಲ್ ಅವರನ್ನು ಸಹ ಆಸ್ಟ್ರೇಲಿಯಾ ತಂಡದಲ್ಲಿ ಆಯ್ಕೆ ಮಾಡಲಾಗಿದೆ.

ನೀಲ್ ಪಟೇಲ್ ಯಾರು?

ನೀಲ್ ಪಟೇಲ್ ಭಾರತೀಯ ಮೂಲದ ಆಸ್ಟ್ರೇಲಿಯಾದ ಉದಯೋನ್ಮುಖ ಬ್ಯಾಟ್ಸ್‌ಮನ್, ಗುಜರಾತ್ ಮೂಲದವರಾಗಿರುವ ನೀಲ್ ಪಟೇಲ್ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ. ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಪಟೇಲ್, 16 ನೇ ವಯಸ್ಸಿನಲ್ಲಿ ಸಿಡ್ನಿ ಪ್ರೀಮಿಯರ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಅದ್ಭುತ ಪ್ರದರ್ಶನದ ನಂತರ, ಪಟೇಲ್ ಅವರನ್ನು ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾದ ಅಂಡರ್-19 ಪುರುಷರ ಪ್ರತಿಭಾ ಶಿಬಿರಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ಅವರನ್ನು ಅಂಡರ್-19 ಪುರುಷರ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ U19 ತಂಡ: ಕೇಸಿ ಬಾರ್ಟನ್, ಹೇಡನ್ ಬಾರ್ಬುಲೋವಿ, ಎಲಿ ಬ್ರೈನ್, ವಿಲ್ ಬೈರೋಮ್, ಬ್ಲೇಕ್ ಕ್ಯಾಟಲ್, ಜ್ಯಾಕ್ ಜೋಸ್ನೆಕ್, ಸ್ಪೆನ್ಸರ್ ಗ್ರೀನ್, ಕಾನರ್ ಗ್ರೆಗೊರಿ, ಚಾರ್ಲಿ ಹೆಂಡರ್ಸನ್, ಜೆಡ್ ಹೋಲಿಕ್, ಮ್ಯಾಥ್ಯೂ ಲೌಗ್, ನೀಲ್ ಪಟೇಲ್, ಜಾಕೋಬ್ ಪೀಟ್ಜ್, ಪ್ಯಾಟ್ರಿಕ್ ಸುಲ್ಲಿವನ್, ಥಿಯೋ ಸಿಂಗೋಸ್, ಥಾಮಸ್ ವಾಸಿಯೊ.

2027 ರ ಏಕದಿನ ವಿಶ್ವಕಪ್​ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ

ಸಂಪೂರ್ಣ ಸರಣಿ ವೇಳಾಪಟ್ಟಿ

  • 18 ಸೆಪ್ಟೆಂಬರ್ 2026: ಮೊದಲ ಏಕದಿನ ಪಂದ್ಯ (ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್)
  • ಸೆಪ್ಟೆಂಬರ್ 21, 2026: 2ನೇ ಏಕದಿನ ಪಂದ್ಯ (ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್)
  • ಸೆಪ್ಟೆಂಬರ್ 23, 2026: 3ನೇ ಏಕದಿನ ಪಂದ್ಯ (ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್)
  • ಸೆಪ್ಟೆಂಬರ್ 27 ರಿಂದ ಮೊದಲ 4 ದಿನಗಳ ಟೆಸ್ಟ್ ಪಂದ್ಯ (ನಿರಂಜನ್ ಶಾ ಕ್ರೀಡಾಂಗಣ, ರಾಜ್‌ಕೋಟ್)
  • ಅಕ್ಟೋಬರ್ 5 ರಿಂದ ಎರಡನೇ 4 ದಿನಗಳ ಟೆಸ್ಟ್ ಪಂದ್ಯ (ನರೇಂದ್ರ ಮೋದಿ ಕ್ರೀಡಾಂಗಣ ‘ಬಿ’ ಮೈದಾನ, ಅಹಮದಾಬಾದ್)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 pm, Mon, 3 August 26

Source link

‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್ – Kannada News | Deal Or Total Surrender Donald Trump Slams Iran’s Duplicity In Denying Talks

ವಾಷಿಂಗ್ಟನ್, ಆಗಸ್ಟ್ 3: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಇರಾನ್ (Iran War) ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾತುಕತೆಯ ವಿಷಯದಲ್ಲಿ ಇರಾನ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನಾವು ಅನುಮತಿ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ನಮ್ಮ ಬಳಿ ಖಾಸಗಿಯಾಗಿ ಇರಾನ್ ನಾಯಕರು ಮಾತುಕತೆಗಾಗಿ ಮನವಿ ಮಾಡುತ್ತಿದ್ದಾರೆ, ಆದರೆ ಸಾರ್ವಜನಿಕವಾಗಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟ್ರಂಪ್ (Donald Trump) ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಇರಾನ್ ಒಪ್ಪಿಕೊಳ್ಳಲಿ ಅಥವಾ ಬಿಡಲಿ, ಅವರು ದಶಕಗಳಿಂದ ಸೃಷ್ಟಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಮಾತುಕತೆ ನಡೆಸುತ್ತಿರುವುದು ಸತ್ಯ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಜಾಗತಿಕ ನೌಕಾ ಸಾರಿಗೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯ ನಿಯಂತ್ರಣದ ಕುರಿತು ಇರಾನ್ ಮಾಡುತ್ತಿರುವ ಪ್ರತಿಪಾದನೆಯನ್ನೂ ಕೂಡ ಟ್ರಂಪ್ ತಳ್ಳಿಹಾಕಿದ್ದಾರೆ. “ಹಾರ್ಮುಜ್ ಜಲಸಂಧಿಯನ್ನು ತಾವೇ ಶಕ್ತಿಯುತವಾಗಿ ನಿರ್ವಹಿಸುವುದಾಗಿ ಅವರು ಎಂದಿನಂತೆ ಸುದ್ದಿ ಹರಡುತ್ತಿದ್ದಾರೆ. ಆದರೆ ಈಗಾಗಲೇ ಅಮೆರಿಕ ನೌಕಾಪಡೆ ಅದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಹಾರ್ಮುಜ್ ಜಲಸಂಧಿಯ ಮೂಲಕ ಸರಕುಗಳ ಸಂಚಾರವು ಸಂಪೂರ್ಣವಾಗಿ ಅಮೆರಿಕದ ನಿರ್ಧಾರದ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದಿರುವ ಟ್ರಂಪ್, “ನಾವು ಬಯಸದ ಹೊರತು ಇರಾನ್‌ಗೆ ಏನೂ ಮಾಡಲು ಸಾಧ್ಯವಿಲ್ಲ. ಒಪ್ಪಂದಕ್ಕೆ ಬರದಿದ್ದರೆ ಅಥವಾ ಸಂಪೂರ್ಣ ಶರಣಾಗದಿದ್ದರೆ ಏನೂ ಸಿಗುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇರಾನ್ ವಿರುದ್ಧ ನಡೆಸಲು ಉದ್ದೇಶಿಸಿದ್ದ ಬೃಹತ್ ಮಿಲಿಟರಿ ದಾಳಿಯನ್ನು ಹಿಂಪಡೆಯುವುದಾಗಿ ಪ್ರಕಟಿಸಿದ ಮರುದಿನವೇ ಟ್ರಂಪ್ ಈ ಆಕ್ರೋಶದ ಹೇಳಿಕೆಗಳನ್ನು ನೀಡಿದ್ದಾರೆ. ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಯಂತಹ ಗಲ್ಫ್ ಮಿತ್ರ ರಾಷ್ಟ್ರಗಳ ವಿನಂತಿಯ ಮೇರೆಗೆ ಎರಡನೇ ಮಹಾಯುದ್ಧದ ನಂತರದ ಅತಿ ದೊಡ್ಡ ದಾಳಿ ಎಂದು ತಾವು ಬಣ್ಣಿಸಿದ್ದ ಯೋಜನೆಯನ್ನು ತಡೆಹಿಡಿದಿರುವುದಾಗಿ ಟ್ರಂಪ್ ಭಾನುವಾರ ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗಾಯತ್ರಿ ಶಾಂತೇಗೌಡಗೆ ಮಂತ್ರಿಗಿರಿ ಕೈತಪ್ಪಿದ್ದೇಕೆ? ಡಿಕೆ ಶಿವಕುಮಾರ್​​​ ಸ್ಫೋಟಕ ಹೇಳಿಕೆ

ಬೆಂಗಳೂರು, ಆ.3: ನೂತನ ಸಚಿವರ ಪಟ್ಟಿ ಅಂತಿಮಗೊಳಿಸುವ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಘೋಷಿಸಿದ್ದಾರೆ. ಸದ್ಯಕ್ಕೆ ಹರಿದಾಡುತ್ತಿರುವ ಯಾವುದೇ ಪಟ್ಟಿಗಳು ಅನಧಿಕೃತವಾಗಿದ್ದು, ರಾಜ್ಯಪಾಲರಿಗೆ ಸಲ್ಲಿಸುವ ಸಹಿ ಮಾಡಿದ ಪಟ್ಟಿಯೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಪಕ್ಷದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದಿರುವ ಡಿಕೆ ಶಿವಕುಮಾರ್, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಇಪ್ಪತ್ತು ದಿನಗಳಿಂದ ನಾಲ್ಕು ಕ್ಯಾಬಿನೆಟ್ ಪಟ್ಟಿಗಳನ್ನು ತೋರಿಸಿರುವುದನ್ನು ಉಲ್ಲೇಖಿಸಿದ ಅವರು, ಯಾವುದೇ ಸಮಯದಲ್ಲಿ ಹೆಸರುಗಳನ್ನು ಬದಲಾಯಿಸುವ ಅವಕಾಶವಿದೆ ಎಂದರು. ಮಹಿಳಾ ಪ್ರಾತಿನಿಧ್ಯದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, “ಹೆಣ್ಣುಮಕ್ಕಳಿಲ್ಲದೆ ನಮ್ಮ ಪಕ್ಷವೇ ಇಲ್ಲ. ನಾವು ಅವರಿಗೆ ಶಕ್ತಿ ನೀಡುತ್ತೇವೆ” ಎಂದು ಭರವಸೆ ನೀಡಿದರು. ಅಲ್ಲದೆ, ನೂತನ ಸಚಿವರು ಕಚೇರಿ ಅಥವಾ ಮನೆಯಲ್ಲಿ ಕಾಲ ಕಳೆಯದೆ, ಪ್ರಮಾಣವಚನ ಸ್ವೀಕರಿಸಿದ ನಂತರ ತಕ್ಷಣವೇ ತಮ್ಮ ಕ್ಷೇತ್ರ ಮತ್ತು ಜಿಲ್ಲೆಗಳಿಗೆ ತೆರಳಬೇಕು ಎಂದು ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version