ವಿವಾದದ ಬಳಿಕ ಅರಾವಳಿ ಬೆಟ್ಟದ ಕುರಿತ ತನ್ನದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ – Kannada News | Supreme Court Stays Its own Order On Aravalli Hills amid row

ನವದೆಹಲಿ, ಡಿಸೆಂಬರ್ 29: ಅರಾವಳಿ ಬೆಟ್ಟಗಳ ಏಕರೂಪದ ವ್ಯಾಖ್ಯಾನದ ಕುರಿತು ನವೆಂಬರ್ 20ರಂದು ನೀಡಿದ ತನ್ನದೇ ತೀರ್ಪು ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತಡೆಹಿಡಿದಿದೆ. ತನ್ನದೇ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಅರಾವಳಿ ಬೆಟ್ಟಗಳು (Aravalli Hills) ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು ಪ್ರಕಟವಾಗುತ್ತಿದ್ದಂತೆ ಅನಿಯಂತ್ರಿತ ಗಣಿಗಾರಿಕೆ ಮತ್ತು ಪರಿಸರ ಹಾನಿಯ ಬಗ್ಗೆ ಕಳವಳಗಳು ಹೆಚ್ಚಾಗಿತ್ತು. ಈ ತೀರ್ಪಿನ ವಿರುದ್ಧ ತೀವ್ರ ಪ್ರತಿಭಟನೆಗಳು ಕೂಡ ನಡೆದಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎ.ಜಿ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು 4 ಅರಾವಳಿ ಬೆಟ್ಟಗಳ ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣಕ್ಕೆ ನೋಟಿಸ್ ನೀಡಿದೆ. ಜನವರಿ 21ರಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ, ಐಷಾರಾಮಿ ರೆಸಾರ್ಟ್‌ಗಳ ಮಾಹಿತಿ ಇಲ್ಲಿದೆ.

ಇಂದು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ನವೆಂಬರ್ ತಿಂಗಳ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಈಗ ಉಳಿದಿರುವ 100 ಮೀಟರ್ ಎತ್ತರದ ಮಾನದಂಡವನ್ನು ಕಟ್ಟುನಿಟ್ಟಾಗಿ ಆಧರಿಸಿ ಅರಾವಳಿ ಪ್ರದೇಶಗಳನ್ನು ಗುರುತಿಸಲು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿದ ಮ್ಯಾಪಿಂಗ್ ಮತ್ತು ಡಿಲಿಮಿನೇಷನ್ ಪ್ರಕ್ರಿಯೆಯನ್ನು ಮಧ್ಯಂತರ ತಡೆಯಾಜ್ಞೆಯು ತಡೆಹಿಡಿಯುವ ಸಾಧ್ಯತೆಯಿದೆ. ಇದು ಈ ಪ್ರದೇಶದಲ್ಲಿ ಭವಿಷ್ಯದ ಗಣಿಗಾರಿಕೆ ನಿರ್ಧಾರಗಳಿಗೆ ಅಡಿಪಾಯವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಇದನ್ನೂ ಓದಿ: ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡಿತ್ತು. ತಜ್ಞರ ವರದಿಗಳು ಹೊರಬರುವವರೆಗೆ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ನಿಷೇಧಿಸಿತ್ತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯು ಅರಾವಳಿ ಬೆಟ್ಟದ ವ್ಯಾಖ್ಯಾನದ ಕುರಿತು ನೀಡಿದ ಶಿಫಾರಸುಗಳನ್ನು ನ್ಯಾಯಾಲಯವು ಅಂಗೀಕರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:30 pm, Mon, 29 December 25

Source link

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ? – Kannada News | Bigg Boss Kannada Season 12 Nomination for 14th week in Gilli Nata captaincy

ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಈಗ ಕೆಲವೇ ಮಂದಿ ಇದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಪೈಪೋಟಿ ಜೋರಾಗಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸೋಮವಾರ (ಡಿಸೆಂಬರ್ 29) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಗಿಲ್ಲಿ ಅವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನಾಮಿನೇಷನ್ ವೇಳೆ ಪ್ರತಿ ಬಾರಿಯೂ ಕಿರಿಕ್ ಇದ್ದೇ ಇರುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕಾವ್ಯಾ ಪರವಾಗಿ ಗಿಲ್ಲಿ ನಿಂತಿದ್ದಕ್ಕೆ ಅಶ್ವಿನಿ ಗೌಡ ಅವರು ಗರಂ ಆಗಿದ್ದಾರೆ. ಈ ವಾರ ಯಾರು ಔಟ್ ಆಗುತ್ತಾರೆ? ಫಿನಾಲೆ ತನಕ ಯಾರು ಬರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಧನುಶ್, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಕಾವ್ಯಾ ಶೈವ, ಗಿಲ್ಲಿ ನಟ (Gilli Nata) ಅವರ ನಡುವೆ ಪೈಪೋಟಿ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾನವಿ-ಸೂರಜ್ ಪ್ರಕರಣ: ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು – Kannada News | Bengaluru Ganavi And sooraj death case: here Is Reasons why She Death after Came from Srilanka honeymoon trip

ಅದ್ಧೂರಿ ಮದುವೆ ಬಳಿಕ ಸೂರಜ್ ಮತ್ತು ಗಾನವಿ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು.
10 ದಿನದ ಹನಿಮೂನ್‌ ಪ್ಲಾನ್ ಮಾಡಿಕೊಂಡಿದ್ದ ಜೋಡಿ ಐದನೇ ದಿನಕ್ಕೆ ವಾಪಸ್ ಆಗಿದ್ದರು. ಹನಿಮೂನ್‌ನಿಂದ ಬರುತ್ತಿದ್ದಂತೆಯೇ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಎರಡು ದಿನದ ನಂತರ ಸೂರಜ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಹನಿಮೂನ್ ಅರ್ಧದಲ್ಲಿಯೇ ಪ್ರವಾಸ ಮೊಟಕುಗೊಳಿಸಿ ಬಂದಿದ್ದು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಗಾನವಿ‌ ಮತ್ತು ಸೂರಜ್ ಹನಿಮೂನ್ ಅಂತ ಶ್ರೀಲಂಕಾಗೆ ತೆರಳಿದ್ದರು.ಏಕಾಂತದಲ್ಲಿ ಇದ್ದಾಗ ಹರ್ಷನ ಜೊತೆಗಿನ ಪ್ರೇಮಕಥೆಯನ್ನ ಹೇಳಿದ್ದಳು ಗಾನವಿ.ನನಗೆ ನೀನು ಇಷ್ಟ ಇಲ್ಲ,ಹರ್ಷ ನನ್ನ ಮದುವೆಯಾಗಲು ನನಗೆ ಇಷ್ಟ ಇತ್ತು.ಮನೆಯವರ ಒತ್ತಾಯಕ್ಕೆ ನಿನ್ನನ್ನು ಮದುವೆಯಾದೆ ಎಂದು ಗಾನವಿ ಹೇಳಿದ್ದಳು.ಇದ್ರಿಂದ ಶಾಕ್ ಆದ ಸೂರಜ್ ಹನಿಮೂನ್ ನಿಂದ ಅರ್ಧದಲ್ಲೆ ವಾಪಸ್ಸಾಗಿದ್ದ.ನಂತರ ಗಾನವಿ ತನ್ನ ತಾಯಿ ಮನೆಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಗಾನವಿ ಆತ್ಮಹತ್ಯೆ ನಂತರ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು.ಗಾನವಿ ಕುಟುಂಬದವರು ಸೂರಜ್ ಫ್ಯಾಮಿಲಿ ಮೇಲೆ ಆರೋಪ ಮಾಡಿ ದೊಡ್ಡ ಪ್ರತಿಭಟನೆ ಮಾಡಿದ್ದರು.ಅಲ್ಲದೇ ಸೂರಜ್ ಗಂಡಸೇ ಅಲ್ಲ, ಅವನು ನಪುಂಸಕ ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಸೂರಜ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು.

ಈ ಎಲ್ಲಾ ಬೆವಣಿಗೆಗಳಿಂದ ಮಾನಸಿಕವಾಗಿ ಹೆದರಿ ಸೂರಜ್ ಮಹರಾಷ್ಟ್ರದ ನಾಗ್ಪರದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದ.ತಾಯಿ ಜಯಂತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.ಗಾನವಿ ತನ್ನ ಲವ್ ಮ್ಯಾಟರ್ ಮುಚ್ಚಿಟ್ಟಿದ್ಲು ಅನ್ನೋದು ಈಗ ಗೊತ್ತಾಗಿದೆ.

ಗಾನವಿ ಮದುವೆಗೂ ಮುನ್ನ ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ. ಅವನನ್ನೇ ಮದುವೆಯಾಗಬೇಕೆಂದು ಗಾನವಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ. ಇದೀಗ ಈ ಹರ್ಷ ಯಾರು ಎಂಬುವುದು ತಿಳಿದು ಬಂದಿಲ್ಲ. ರಾಮಮೂರ್ತಿ ನಗರದಲ್ಲಿ ಗಾನವಿ ಪೋಷಕರು, ವಿದ್ಯಾರಣ್ಯಪುರದಲ್ಲಿ ಸೂರಜ್ ಕುಟುಂಬ ದೂರು ದಾಖಲಿಸಿದೆ.

ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್​​ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.

ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು ಸೂರಜ್ ಅನ್ನೋದು ತಿಳಿದವರ ಮಾತು.ತೋಟದಲ್ಲಿ ಕೆಲಸ ಮಾಡೋರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತೆ. ಯಾವುದೇ ಕೆಟ್ಟ ಅಭ್ಯಾಸ ಕೂಡ ಇರ್ಲಿಲ್ವಂತೆ. ನಮಗೆ ಇನ್ಯಾರು ಗತಿ ಅಂತ ತೋಟದ ಕೆಲಸಗಾರ ವೆಂಕಟಪ್ಪ ಕಣ್ಣೀತಾಕಿದ್ದಾರೆ.

Published On – 4:24 pm, Mon, 29 December 25

Source link

ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್​​ ಪಲ್ಟಿ: ದೃಶ್ಯ ನೋಡಿದ್ರೆ ಎದೆ ಝಲ್​​ ಎನ್ನುತ್ತೆ! – Kannada News | Canter Overturns After Hitting Car, Strikes Pedestrian in Nitte, Karkala

ಉಡುಪಿ, ಡಿಸೆಂಬರ್​​ 29: ಸರಣಿ ಅಪಘಾತದ ವೇಳೆ ಪಾದಚಾರಿಮೇಲೆ ಕ್ಯಾಂಟರ್​​ ಮಗುಚಿ ಬಿದ್ದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಲಾರಿ ಮತ್ತು ಕ್ಯಾಂಟರ್​​ ನಡುವೆ ಮೊದಲು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕ್ಯಾಂಟರ್​​ ಪಲ್ಟಿಯಾಗಿದೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಾರು ಕೂಡ ಜಖಂ ಆಗಿದೆ. ಕ್ಯಾಂಟರ್​​ ದಾವಣಗೆರೆಯಿಂದ ಮಂಗಳೂರಿಗೆ ಮೊಟ್ಟೆ ಸಾಗಿಸುತ್ತಿದ್ದರೆ, ಕಾರು ಬೆಳ್ಮಣ್​​ನಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ – Kannada News | Karnataka Government moves to bring new law in wake of Hubballi honor killing

ಹುಬ್ಬಳ್ಳಿ, ಡಿಸೆಂಬರ್​ 29: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ (Hubballi) ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ (honor killing) ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕಳೆದ ರಾತ್ರಿ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ಕೂಡ ಮಾಡಿದೆ.

ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ: ಸಿಎಂ ಸುಳಿವು

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ರಾಜ್ಯ ಮತ್ತು ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ತರಬೇಕು ಅಂತ ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಇದೀಗ ರಾಜ್ಯ ಸರ್ಕಾರ ಕೂಡ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮರ್ಯಾದೆ ಹತ್ಯೆ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಕೇವಲ ಕಾನೂನು ಜಾರಿಗೊಳಿಸಿದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ

ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಬರ್ಬರ ಕೊಲೆಯಾಗಿತ್ತು. ಮಗಳು ಪ್ರೀತಿಸಿ ದಲಿತ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ. ಈ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿತ್ತು. ಒದಂಡೆ ಪ್ರೀತಿಸಿ ಮದುವೆಯಾಗಿದ್ದ ಮಾನ್ಯಾಳ ಬರ್ಬರ ಹತ್ಯೆಯಾಗಿದ್ದರೆ, ಮದುವೆಯಾಗಿದ್ದ ವಿವೇಕನಾಂದ ಕುಟುಂಬದ ಮೇಲೆ ಕೂಡ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು. ಘಟನೆ ನಡೆದು ಎಂಟು ದಿನವಾದರು ಕೂಡ ಗ್ರಾಮದಲ್ಲಿ ಭಯದ ವಾತಾವರಣ ಕಡಿಮೆಯಾಗಿರಲಿಲ್ಲ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ: ಗ್ರಾಮದಲ್ಲಿ ಶಾಂತಿ ಸಭೆ

ಇನ್ನು ಆಸ್ಪತ್ರೆಯಲ್ಲಿ ಅನೇಕ ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು ಕೂಡ ವಿವೇಕಾನಂದ ಕುಟುಂಬ, ಮರಳಿ ಇನಾಂವೀರಾಪುರ ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿತ್ತು. ತಮಗೆ ಗ್ರಾಮದಲ್ಲಿ ಪ್ರಾಣಭಯವಿದೆ ಅಂತ ಆತಂಕ ವ್ಯಕ್ತಪಡಿಸಿತ್ತು. ಇನ್ನು ಘಟನೆ ನಡೆದು ಎಂಟು ದಿನವಾದರು ಕೂಡ ಜಿಲ್ಲಾಡಳಿತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸರ್ವಧರ್ಮ ಮತ್ತು ಜಾತಿಗಳ ನಡುವೆ ಸಮನ್ವಯತೆ, ಶಾಂತಿ ಕಾಪಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಕಳೆದ ರಾತ್ರಿ ಇನಾಂವೀರಾಪುರ ಗ್ರಾಮದಲ್ಲಿ ಶಾಂತಿ ಸಭೆ ಮಾಡಿದೆ.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದೆ. ಎಲ್ಲಾ ಜಾತಿ ಮತ್ತು ಧರ್ಮದವರನ್ನು ಸೇರಿಸಿ, ಶಾಂತಿ ಮತ್ತು ಸೌಹಾರ್ದ ಸಭೆಯನ್ನು ನಡೆಸಿ, ಗ್ರಾಮದಲ್ಲಿ ಎಲ್ಲರು ಕೂಡಿ ಬಾಳುವಂತೆ ಸೂಚನೆ ನೀಡಲಾಗಿದೆ.

ಇನ್ನು ಗ್ರಾಮಸ್ಥರು ಕೂಡ ಆಗಿರುವ ಘಟನೆಯನ್ನು ಮರೆತು, ಶಾಂತಿ ಮತ್ತು ಸಹಬಾಳ್ವೆತೆಯಿಂದ ಬದುಕೋದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿದ್ದ ವಿವೇಕಾನಂದ ಕುಟುಂಬವನ್ನು ಗ್ರಾಮಕ್ಕೆ ಕರೆಸಿ, ಅವರಿಗೆ ಧೈರ್ಯ ತುಂಬಿ, ಅವರ ಮನೆಗೆ ಕಳುಹಿಸಲಾಗಿದೆ. ಇನ್ನು ಮರ್ಯಾದೆ ಹತ್ಯೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಇಂದು ಕೂಡ ಅನೇಕ ದಲಿತ ಪರಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ರಾಜ್ಯದಲ್ಲಿ ಮರ್ಯಾದೆ ಹತ್ಯೆಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾನೂನು ಒಂದಡೆ ಕೆಲಸ ಮಾಡಿದರೆ, ಜನರ ಮನಸಲ್ಲಿ ಉಳಿದಿರುವ ಜಾತಿ ವ್ಯವಸ್ಥೆಯನ್ನು ತೊಲಗಿಸುವ ಕೆಲಸ ಮೊದಲು ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಅಸ್ತಿತ್ವದಲ್ಲೇ ಇಲ್ಲದ ಅಪಾರ್ಟ್​ಮೆಂಟ್ 12 ಕೋಟಿ ರೂ.ಗೆ ಮಾರಾಟ; ದೆಹಲಿಯ 200 ಕೋಟಿ ರೂ. ಆಸ್ತಿ ಹಗರಣ ಬಯಲಾಗಿದ್ದು ಹೇಗೆ? – Kannada News | Luxurious apartment which never existed sold for Rs 12 crore Delhi Police bust Rs 200 crore property scam

ನವದೆಹಲಿ, ಡಿಸೆಂಬರ್ 29: ದೆಹಲಿಯಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಆಸ್ತಿ ಹಗರಣವೊಂದು (Property Scam) ಬೆಳಕಿಗೆ ಬಂದಿದೆ. ಗುರುಗ್ರಾಮದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿ ಅಸ್ತಿತ್ವದಲ್ಲಿಲ್ಲದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ನಕಲಿ ಬ್ಯಾಂಕ್ ಹರಾಜು ದಾಖಲೆಗಳನ್ನು ಬಳಸಿ 12 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಇದೇ ರೀತಿ ಅವರು ಹಲವು ಜನರಿಗೆ ವಂಚಿಸಿದ್ದು, ಈ ವಂಚನೆಯ ಒಟ್ಟು ಮೊತ್ತ 200 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಜೂನ್ 13ರಂದು ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಬಳಿ ಇರುವ ಗುರುಗ್ರಾಮದಲ್ಲಿ ಅತ್ಯಂತ ಪ್ರೀಮಿಯಂ ವಸತಿ ಯೋಜನೆಗಳಲ್ಲಿ ಒಂದಾದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿರುವ ಹೈ-ಎಂಡ್ ಅಪಾರ್ಟ್‌ಮೆಂಟ್‌ನ ನಕಲಿ ಹರಾಜು ಪತ್ರಗಳನ್ನು ದೂರುದಾರರಿಗೆ ತೋರಿಸಲಾಗಿದೆ. ಇದನ್ನು ನಂಬಿ ಆತ 12 ಕೋಟಿ ರೂ. ಹಣವನ್ನು ನೀಡಿದ್ದಾರೆ.

ದೂರುದಾರರು ಆ ಅಪಾರ್ಟ್​​ಮೆಂಟ್​​ನ ನಕಲಿ ದಾಖಲೆಗಳು ಮತ್ತು ಭರವಸೆಗಳನ್ನು ನಂಬಿ ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ RTGS ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ 12 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ, ಅನುಮಾನಗಳು ಹುಟ್ಟಿಕೊಂಡು ಪರಿಶೀಲನೆಗಾಗಿ ಬ್ಯಾಂಕ್ ಅನ್ನು ಸಂಪರ್ಕಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ. ಅಂತಹ ಯಾವುದೇ ಹರಾಜು ನಡೆದಿಲ್ಲ ಎಂದು ಗೊತ್ತಾಗಿದೆ. ಆ ಮಾರಾಟ ಪ್ರಮಾಣಪತ್ರಗಳು, ಕವರಿಂಗ್ ಪತ್ರಗಳು ಮತ್ತು ಹರಾಜು ರಶೀದಿಗಳು ನಕಲಿ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ದೆಹಲಿ ನಿವಾಸಿಯಾದ ಗೋಗಿಯಾ (38) ಅವರನ್ನು ನವೆಂಬರ್ 22 ರಂದು ಮುಂಬೈನಿಂದ ಉತ್ತರಾಖಂಡದ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು. ಅವರನ್ನು ರಿಷಿಕೇಶ್-ಡೆಹ್ರಾಡೂನ್ ರಸ್ತೆಯ ದೋಯಿವಾಲಾ ಬಳಿ ಬಂಧಿಸಲಾಯಿತು. ನಂತರ ಇನ್ನೂ 4 ಆರೋಪಿಗಳನ್ನು ಬಂಧಿಸಲಾಯಿತು. ಗೋಗಿಯಾ ವಿರುದ್ಧ ದೆಹಲಿ, ಪಂಜಾಬ್, ಗೋವಾ, ಮಧ್ಯಪ್ರದೇಶ ಮತ್ತು ಚಂಡೀಗಢದಲ್ಲಿ ಕನಿಷ್ಠ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  

Source link

ಶಸ್ತ್ರಾಸ್ತ್ರ ತಯಾರಿಕೆಗೆ ಭಾರತವನ್ನು ಪಾರ್ಟ್ನರ್ ಮಾಡಿಕೊಳ್ಳಲು ಯೂರೋಪ್, ಇಸ್ರೇಲ್ ಆಸಕ್ತಿ? – Kannada News | Europe, Israel interested in making India as their defence partner for weapon production

ನವದೆಹಲಿ, ಡಿಸೆಂಬರ್ 29: ಜಾಗತಿಕವಾಗಿ ಸಂಘರ್ಷಗಳು ಹೆಚ್ಚುತ್ತಿದ್ದು, ಮಿಲಿಟರಿ ತಂತ್ರ ಮತ್ತು ಹೂರಣಗಳ ಸ್ವರೂಪವೇ ಬದಲಾಗುತ್ತಿದೆ. ದೀರ್ಘಾವಧಿ ಯುದ್ಧದಲ್ಲಿ ಉಳಿಯಬೇಕಾದರೆ ಶಸ್ತ್ರಾಸ್ತ್ರಗಳು ಪ್ರಮಾಣ ಬಹಳಷ್ಟು ಬೇಕು. ಹೆಚ್ಚಿನ ದೇಶಗಳಲ್ಲಿರುವ ಶಸ್ತ್ರಾಸ್ತ್ರಗಳು ಕೆಲವೇ ದಿನಗಳ ಯುದ್ಧಕ್ಕೆ ಖಾಲಿಯಾಗುತ್ತವೆ. ಯುದ್ಧ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಬಹಳ ಅಗತ್ಯವಾಗಿರುತ್ತದೆ. ಇದು ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಜಗತ್ತು ಕಲಿತಿರುವ ಪಾಠ. ಅಂತೆಯೇ, ಯೂರೋಪ್ ಮತ್ತು ಇಸ್ರೇಲ್ ದೇಶಗಳು ತಮ್ಮ ಶಸ್ತ್ರಾಸ್ತ್ರ ಅಗತ್ಯಗಳಿಗೆ ಭಾರತದತ್ತ ಮುಖ ಮಾಡಹೊರಟಿವೆ.

ಯೂರೋಪ್ ಮತ್ತು ಇಸ್ರೇಲ್ ದೇಶಗಳು ಭಾರತವನ್ನು ತಮ್ಮ ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಭಾರತವು ಡಿಫೆನ್ಸ್ ಪಾರ್ಟ್ನರ್ ಆಗಲು ಸೂಕ್ತವಾದ ಮತ್ತು ವಿಶ್ವಾಸಾರ್ಹವಾದ ದೇಶವಾಗಿ ಯೂರೋಪ್ ಮತ್ತು ಇಸ್ರೇಲ್ ಕಣ್ಣಿಗೆ ಕಾಣುತ್ತಿದೆ. ಇದರಲ್ಲಿ ಅಚ್ಚರಿಯ ಅಂಶವೇನೂ ಇಲ್ಲ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಅಂತಿಮ ಪ್ರಸ್ತಾಪ ಸಲ್ಲಿಸಿದ ಭಾರತ; ಕೃಷಿ ತಂಟೆ ಬೇಡ, ಟ್ಯಾರಿಫ್ ನಿಲ್ಲಿಸಿ ಎಂಬುದು ಭಾರತದ ಬೇಡಿಕೆ

ಯುದ್ಧದ ವೇಳೆ ಮದ್ದುಗುಂಡುಗಳು, ಕ್ಷಿಪಣಿಗಳು, ಡ್ರೋನ್, ಏರ್ ಡಿಫೆನ್ಸ್ ಇಂಟರ್ಸೆಪ್ಟರ್ ಇತ್ಯಾದಿಗಳು ಎಷ್ಟು ಬಂದರೂ ಸಾಲದು. ಯೂರೋಪ್ ಮತ್ತು ಇಸ್ರೇಲ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ತಯಾರಿಕೆ ವ್ಯವಸ್ಥೆ ಇದೆ. ಆದರೂ ಕೂಡ ಭಾರತವನ್ನು ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು, ಮತ್ತು ಭಾರತದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಇವು ಆಸಕ್ತಿ ತೋರುತ್ತಿರುವುದಕ್ಕೆ ಸಕಾರಣಗಳಿವೆ.

ಮೊದಲಿಗೆ, ಯೂರೋಪ್​ನಲ್ಲಿ ಡಿಫೆನ್ಸ್ ಇಂಡಸ್ಟ್ರಿಗಳು ಇವೆ. ಆದರೆ, ದೀರ್ಘಕಾಲದ ಯುದ್ಧವನ್ನು ನಿರ್ವಹಿಸಲು ಬೇಕಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಕ್ಷಿಪ್ರವಾಗಿ ತಯಾರಿಸಲು ಆಗುವುದಿಲ್ಲ. ಇಸ್ರೇಲ್​ಗೆ ಇದಕ್ಕಿಂತ ದೊಡ್ಡ ಸಮಸ್ಯೆ ಇದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ತಯಾರಿಸುವ ವ್ಯವಸ್ಥೆ ಇಲ್ಲ. ಅದರ ಜೊತೆಗೆ, ಸುತ್ತಮುತ್ತ ವೈರಿ ದೇಶಗಳೇ ಇರುವುದರಿಂದ ಮತ್ತು ಇಸ್ರೇಲ್ ಪುಟ್ಟ ಪ್ರದೇಶವಾಗಿರುವುದರಿಂದ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳನ್ನು ವೈರಿಗಳು ಸುಲಭವಾಗಿ ಗುರಿಯಾಗಿಸಿ ನಾಶ ಮಾಡಬಹುದು. ಹೀಗಾಗಿ, ಬೇರೆ ಕಡೆ ಶಸ್ತ್ರಾಸ್ತ್ರಗಳ ತಯಾರಿಕೆಯ ವ್ಯವಸ್ಥೆ ಮಾಡುವುದು ಅನಿವಾರ್ಯ.

ಇದನ್ನೂ ಓದಿ: ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು…

ಭಾರತವನ್ನು ಯಾಕೆ ನಂಬುತ್ತವೆ ಈ ದೇಶಗಳು…?

ಭಾರತದಲ್ಲಿ ಬಹಳ ವ್ಯಾಪಕವಾಗಿರುವ ಉದ್ಯಮಗಳಿವೆ. ಕಾರ್ಮಿಕ ಸಮೂಹ ದೊಡ್ಡದಿದೆ. ಕೌಶಲ್ಯವಂತ ಕಾರ್ಮಿಕರು, ಅರೆಕೌಶಲದ ಕಾರ್ಮಿಕರು ಹೇರಳ ಸಂಖ್ಯೆಯಲ್ಲಿ ಸಿಗುತ್ತಾರೆ. ಇಲ್ಲಿಯ ಡಿಫೆನ್ಸ್ ಸೆಕ್ಟರ್ ಖಾಸಗಿಯವರಿಗೂ ತೆರೆದಿದೆ. ಕ್ಷಿಪಣಿ, ರಾಡಾರ್, ಯುಎವಿ, ಮದ್ದುಗುಂಡು ಇತ್ಯಾದಿಗಳನ್ನು ತಯಾರಿಸಬಲ್ಲ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ ಎನ್ನುವುದು ಯೂರೋಪ್ ಮತ್ತು ಇಸ್ರೇಲ್ ದೇಶಗಳಿಗೆ ತಿಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ನಿಮ್ಮ ಈ ವೈಯಕ್ತಿಯ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ – Kannada News | Chanakya Niti: Chanakya says you should not share these personal details with your relatives

ನಮ್ಮ ಜೀವನದ ಸಿಹಿ ಕಹಿ ಎಲ್ಲಾ ರೀತಿಯ ವಿಚಾರಗಳನ್ನು ನಮ್ಮವರ ಬಳಿ ಹಂಚಿಕೊಳ್ಳುತ್ತೇವೆ. ಅದರಲ್ಲೂ ಹೆಚ್ಚಾಗಿ ಸಂಬಂಧಿಕರು (relatives) ಮತ್ತು ಸ್ನೇಹಿತರ ಬಳಿ ಎಲ್ಲಾ ವಿಚಾರಗಳನ್ನು ಶೇರ್‌ ಮಾಡುತ್ತಿರುತ್ತೇವೆ. ಆದ್ರೆ ಇಂದಿನ ಈ ಕಾಲದಲ್ಲಿ ಯಾರು ನಂಬಿಕೆಗೆ ಅರ್ಹರು, ಯಾರು ನಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ, ನಮ್ಮ ಏಳಿಗೆಯನ್ನು ನೋಡಿ ಅಸೂಯೆ ಪಡುತ್ತಾರೆ ಎನ್ನುವುದು ಗೊತ್ತೇ ಆಗಲ್ಲ. ಅದಕ್ಕಾಗಿ ಎಷ್ಟೇ ಹತ್ತಿರದ ಸಂಬಂಧಿಗಳಾದರೂ ಸರಿ ಅವರ ಬಳಿ ನಿಮ್ಮ ಈ ಕೆಲವೊಂದಿಷ್ಟು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲೇಬಾರದು, ಇದರಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಯಾವ ಕಾರಣಕ್ಕಾಗಿ ಯಾವೆಲ್ಲಾ ವೈಯಕ್ತಿಕ ವಿಷಯಗಳನ್ನು ಸಂಬಂಧಿಕರ ಬಳಿ ಶೇರ್‌ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಈ ವೈಯಕ್ತಿಯ ವಿಚಾರಗಳನ್ನು ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ:

ನಿಮ್ಮ ಆದಾಯ: ನಿಮ್ಮ ಆದಾಯ, ಗಳಿಕೆಯ ಬಗ್ಗೆ ಸಂಬಂಧಿಕರ ಬಳಿ ಹಂಚಿಕೊಳ್ಳದಿರುವುದೇ ಉತ್ತಮ. ಏಕೆಂದರೆ ಕೆಲವರು ನಿಮ್ಮ ಆದಾಯದ ಬಗ್ಗೆ ಅಸೂಯೆ ಪಡುವ ಸಾಧ್ಯತೆ ಇರುತ್ತದೆ. ಇದರಿಂದ ಒಳ್ಳೆಯದಕ್ಕಿಂತ ನಕಾರಾತ್ಮಕ ಪರಿಣಾಮಗಳು ಬೀರುವುದೇ ಹೆಚ್ಚು. ಹಾಗಾಗಿ ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

ಕೌಟುಂಬಿಕ ಕಲಹಗಳು: ಹೆಚ್ಚಿನವರು ತಮ್ಮ ಮನೆಯೊಳಗೆ ನಡೆಯುವ ಕೌಟುಂಬಿಕ ಕಲಹಗಳು ಮತ್ತು ಜಗಳಗಳ ಬಗ್ಗೆ ಸಂಬಂಧಿಕರ ಬಳಿ ಹಂಚಿಕೊಳ್ಳುತ್ತಾರೆ. ಮನೆಯಲ್ಲಿ ನಡೆಯುವ ಕಲಹಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ಇದನ್ನು ಗಾಸಿಪ್‌ ಮಾಡುತ್ತಾರೆ. ಇದರಿಂದ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.

ಮಾನಸಿಕ ನೋವು: ನಿಮ್ಮ ಮಾನಸಿಕ ನೋವು, ನಿಮ್ಮ ದೌರ್ಜಲ್ಯ, ಹಿಂದೆ ಆದಂತಹ ಅವಮಾನಗಳ ಬಗ್ಗೆ ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಎಲ್ಲರೂ ನಿಮಗೆ ಸಹಾನುಭೂತಿ ತೋರುವುದಿಲ್ಲ, ಕೆಲವರು ಅದನ್ನು ಆಯುಧವಾಗಿಯೂ ಬಳಸಬಹುದು.

ಪ್ರೀತಿ ವಿಚಾರ:  ಸಂಬಂಧಿಕರ ಹಸ್ತಕ್ಷೇಪವು ಸಂಬಂಧದಲ್ಲಿ ಅನುಮಾನ ಮತ್ತು ಅಂತರವನ್ನು ಸೃಷ್ಟಿಸಬಹುದು. ನಿಮ್ಮ ಪ್ರೀತಿ ಸಂಬಂಧದ ವಿಚಾರದ ಬಗ್ಗೆ ಯಾರಿಗೂ ಹೇಳಬೇಡಿ ಏಕೆಂದರೆ ನಿಮ್ಮ ನಿಜವಾದ ಪ್ರೀತಿಯ ಇನ್ನೂ ಕೆಲವರು ನಿಮ್ಮ ಪ್ರೀತಿಯ ವಿಚಾರದಲ್ಲಿ ಮೂಗು ತುರಿಸಿ ಸಂಬಂಧದಲ್ಲಿ ಹುಳಿ ಹಿಂಡಬಹುದು.

ಇದನ್ನೂ ಓದಿ: ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಭವಿಷ್ಯದ ಯೋಜನೆಗಳು: ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ನೀವು ಕಠಿಣ ಪರಿಶ್ರಮದ ಜೊತೆಗೆ ಹಲವಾರು ಇತರ ವಿಷಯಗಳತ್ತ ಗಮನ ಹರಿಸಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ನೀವು ನಿಮ್ಮ ಗುರಿಗಳನ್ನು, ಭವಿಷ್ಯದ ಯೋಜನೆಗಳನ್ನು ಸಂಬಂಧಿಕರ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಅವರು  ನಿಮ್ಮ ಪ್ರಗತಿಗೆ ಅಡ್ಡಿ ಉಂಟುಮಾಡಬಹುದು.

ಕೆಟ್ಟ ಅಭ್ಯಾಸಗಳು ಮತ್ತು ನ್ಯೂನತೆಗಳು: ನಿಮ್ಮ ಕೆಟ್ಟ ಅಭ್ಯಾಸಗಳು ಮತ್ತು ನ್ಯೂನತೆಗಳ ಬಗ್ಗೆ ಮುಖ್ಯವಾಗಿ ಸಂಬಂಧಿಕರ ಬಳಿ ಹೇಳಲೇಬೇಡಿ. ನಿಮ್ಮ ಈ ವಿಚಾರಗಳ ಬಗ್ಗೆ ಇತರರೊಂದಿಗೆ ಹಂಚಿಕೊಂಡು ನಿಮ್ಮ ಬಗ್ಗೆ ನಕಾರಾತ್ಮಕತೆಯನ್ನು ಹರಡಬಹುದು. ಇದು ನಿಮಗೆ ಕಳಂಕ ಉಂಟುಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾ ಜೆರ್ಸಿ ಮೇಲೆ ಬಾಬರ್ ಆಝಂ ಆಟೋಗ್ರಾಫ್; ಕೆರಳಿದ ಫ್ಯಾನ್ಸ್ – Kannada News | Babar Azam India Jersey Autograph: Controversy Ignites Fan Fury

ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ಎಲ್ಲಾ ರೀತಿಯ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ವರ್ಷಗಳೇ ಕಳೆದಿವೆ. ಇದರ ಪರಿಣಾಮವಾಗಿ ಕ್ರಿಕೆಟ್​ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರು ದೃಷ್ಟಿಯಿಟ್ಟು ನೋಡುವುದಿರಲಿ, ಕೈಕೂಡ ಕುಲುಕುತ್ತಿಲ್ಲ. ಇದೆಲ್ಲದರ ನಡುವೆ ಪಾಕಿಸ್ತಾನದ ಆಟಗಾರನೊಬ್ಬ ಟೀಂ ಇಂಡಿಯಾ ಜೆರ್ಸಿಯ (India cricket jersey) ಮೇಲೆ ತನ್ನ ಆಟೋಗ್ರಾಫ್ ಹಾಕಿದರೆ ಪರಿಸ್ಥಿತಿ ಏನಾಗಬೇಡ?. ​ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಟೀಂ ಇಂಡಿಯಾ ಜೆರ್ಸಿಯ ಮೇಲೆ ತನ್ನ ಆಟೋಗ್ರಾಫ್ ನೀಡಿರುವುದು ಭಾರತೀಯರನ್ನು ಕೆರಳಿಸಿದೆ. ಇದರಲ್ಲಿ ಬಾಬರ್​ದ್ದು ಯಾವುದೇ ತಪ್ಪಿಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಬಾಬರ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಬಾಬರ್ ಆಝಂ ಟೀಂ ಇಂಡಿಯಾ ಜೆರ್ಸಿಗೆ ಅವಮಾನ ಮಾಡಿದ್ದಾರೆ ಎಂತಲೂ ಕೆಲವರು ಆರೋಪಿಸಿದ್ದಾರೆ.

ಟೀಂ ಇಂಡಿಯಾ ಜೆರ್ಸಿ ಮೇಲೆ ಬಾಬರ್ ಆಟೋಗ್ರಾಫ್

ವಾಸ್ತವವಾಗಿ ಪಾಕಿಸ್ತಾನದ ಕೆಲವು ಸ್ಟಾರ್ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿದ್ದಾರೆ. ಅವರಲ್ಲಿ ಪಾಕ್ ತಂಡದ ಮಾಜಿ ನಾಯಕ ಬಾಬರ್ ಕೂಡ ಒಬ್ಬರು. ಈ ಲೀಗ್​ನಲ್ಲಿ ಸಿಡ್ನಿ ಪರ ಆಡುತ್ತಿರುವ ಬಾಬರ್ ಬಳಿ ಟೀಂ ಇಂಡಿಯಾ ಅಭಿಮಾನಿಯೊಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಆ ಅಭಿಮಾನಿ ಭಾರತ ತಂಡದ ಜೆರ್ಸಿಯನ್ನು ಧರಿಸಿದ್ದು ಬಾಬರ್ ಆ ಜೆರ್ಸಿಯ ಮೇಲೆ ತನ್ನ ಆಟೋಗ್ರಾಫ್ ನೀಡಿದ್ದಾರೆ. ಮೇಲೆ ಹೇಳಿದಂತೆ ಇದರಲ್ಲಿ ಬಾಬರ್ ಅವರ ತಪ್ಪಿಲ್ಲ. ಏಕೆಂದರೆ ಅಭಿಮಾನಿ ಕೇಳಿದ ಕಡೆ ಬಾಬರ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ.

ಆದಾಗ್ಯೂ ಟೀಂ ಇಂಡಿಯಾ ಜೆರ್ಸಿಯ ಮೇಲೆ ಬಾಬರ್ ಆಝಂ ನೀಡಿದ ಆಟೋಗ್ರಾಫ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಭಾರತೀಯ ಅಭಿಮಾನಿಗಳು ಇದನ್ನು ಭಾರತೀಯ ತಂಡದ ಜೆರ್ಸಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ. ಇದಕ್ಕಾಗಿ ಬಾಬರ್ ಆಝಂ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಈಗಾಗಲೇ ಹದಗೆಟ್ಟಿವೆ. ಇದೆಲ್ಲದರ ನಡುವೆ ಜೆರ್ಸಿ ಮೇಲೆ ಬಾಬರ್ ಆಟೋಗ್ರಾಫ್ ನೀಡಿರುವುದು ಹೊಸ ವಿವಾದವನ್ನು ಹುಟ್ಟುಹಾಕಬಹುದು. ಇತ್ತ ಪಿಸಿಬಿ ಕೂಡ ಬಾಬರ್ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು.

ಫಾರ್ಮ್​ ಕಳೆದುಕೊಂಡಿರುವ ಬಾಬರ್

ಆಟೋಗ್ರಾಫ್ ವಿವಾದ ಒಂದೆಡೆಯಾದರೆ, ಇನ್ನೊಂದೆಡೆ ಬಾಬರ್ ತಮ್ಮ ಕಳಪೆ ಫಾರ್ಮ್​ನಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ ತಂಡದಲ್ಲಿ ಬಾಬರ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇತ್ತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್‌ ಪರ ಆಡುತ್ತಿರುವ ಬಾಬರ್ ಅಲ್ಲಿಯೂ ಇಲ್ಲಿಯವರೆಗೆ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 71 ರನ್‌ಗಳನ್ನು ಗಳಿಸಿದ್ದಾರೆ, ಸರಾಸರಿ 17.7. ಅವರ ಸ್ಟ್ರೈಕ್ ರೇಟ್ ಕೂಡ 110 ಆಗಿದೆ. ಅವರು ತಮ್ಮ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ಎರಡಂಕಿಯನ್ನು ತಲುಪಲು ವಿಫಲರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟ್​ ಮಾಡಿಕೊಂಡು ಪತಿ ಆತ್ಮಹತ್ಯೆ: ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು? – Kannada News | Kalaburagi: Man Dies by Suicide Using Gun Amid Marital Dispute

ಕಲಬುರಗಿ, ಡಿಸೆಂಬರ್​​ 29: ನಗರದ ಶಿವಶಕ್ತಿ ಕಾಲೋನಿಯಲ್ಲಿ ರಿವಾಲ್ವರ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ನಡೆದಿದೆ. ಖಂಡುರಾಜ್ ದವಳಜಿ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಲೈಸೆನ್ಸ್ ರಿವಾಲ್ವರ್​​​ನಿಂದಲೇ ಖಂಡುರಾಜ್ ಶೂಟ್ ಮಾಡಿಕೊಂಡಿದ್ದಾರೆ. ಪತ್ನಿ ಜೊತೆಗಿನ ಜಗಳ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಚೌಕ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

ನನ್ನ ಗಂಡ ಸೈಕೋ: ಖಂಡುರಾಜ್ ದವಳಜಿ ಪತ್ನಿ ಪ್ರಿಯಾ

ಆತ್ಮಹತ್ಯೆ ಮಾಡಿಕೊಂಡ ಖಂಡುರಾಜ್ ದವಳಜಿ ಪತ್ನಿ ಪ್ರಿಯಾ ನಡತೆ ಬಗ್ಗೆ ಅನುಮಾನ ಪಡುತ್ತಿದ್ದರಂತೆ. ಹೀಗಾಗಿ ಪತ್ನಿ ಜೊತೆ ಜಗಳವಾಡುತ್ತಿದ್ದರು. ರವಿವಾರ ಕೂಡ ಗಲಾಟೆ ಮಾಡಿದ್ದು, ನಿದ್ದೆ ಮಾತ್ರೆ ಕೊಟ್ಟು ಸಾಯಿಸುವುದಕ್ಕೆ ಅಂತಾ ಪ್ಲ್ಯಾನ್ ಮಾಡಿದ್ದರು. ನನ್ನ ಗಂಡ ಸೈಕೋ ರೀತಿ ವರ್ತಿಸುತ್ತಿದ್ದರು ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ.

ಇದನ್ನೂ ಓದಿ: ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ

ಲೈಸೆನ್ಸ್ ಇಲ್ಲದೆ ಇರುವ ಕಂಟ್ರಿ ಮೇಡ್ ಪಿಸ್ತೂಲ್​​ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಯದಿಂದ ನಾವು ಮನೆ ಬಿಟ್ಟು ಹೋಗಿದ್ದೇವು. ಬೆಳಿಗ್ಗೆ ನನ್ನ ಗಂಡ ಸಾವನ್ನಪ್ಪಿರುವುದು ಗೊತ್ತಾಗಿ ಇವಾಗ ಬಂದು ನೋಡಿದೆ ಎಂದು ಅವರು ಹೇಳಿದ್ದಾರೆ.

ಸಿಮೆಂಟ್ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ: ಸವಾರ ಸಾವು, ಚಾಲಕ ಪರಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ: ಪಾದಚಾರಿ ಸಾವು

ಬೈಕ್​ನಲ್ಲಿದ್ದ ಪವನ್ ಕುಮರ್(22) ಮತ್ತು ಅಶೋಕ್(24) ಮೃತರು. ಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ದಿಢೀರ್​ ಬ್ರೇಕ್ ಹಾಕಿದ್ದಕ್ಕೆ ಅಪಘಾತ ಸಂಭವಿಸಿದೆ ಅಂತ ಆರೋಪ ಕೇಳಿಬಂದಿದೆ. ಅಪಘಾತ ಬಳಿಕ ಲಾರಿ ಸಮೇತ ಚಾಲಕ ಪರಾರಿ ಆಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version